Subscribe to Updates
Get the latest creative news from FooBar about art, design and business.
Author: roovari
ಸುರತ್ಕಲ್ : ಬಂಟರ ಸಂಘ (ರಿ.) ಸುರತ್ಕಲ್ ಇದರ ಆಶ್ರಯದಲ್ಲಿ “ಯಕ್ಷಸಿರಿ” ಯಕ್ಷಗಾನ ತರಬೇತಿ ಕೇಂದ್ರದ ಪ್ರಥಮ ವಾರ್ಷಿಕೋತ್ಸವವು ದಿನಾಂಕ 11-11-2023ರ ಶನಿವಾರ ಸಂಜೆ 5 ಗಂಟೆಗೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಪಟ್ಲ ಶ್ರೀ ಸತೀಶ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಲೋಕಯ್ಯ ಶೆಟ್ಟಿ ಮುಂಚೂರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಮಾತಾ ಡೆವಲಪರ್ಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಬಿ.ಇ, ಯಕ್ಷಮಿತ್ರರು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಗದೀಪ್ ಶೆಟ್ಟಿ, ಪೆರ್ಮುದೆ ದಿವ್ಯರೂಪ ಕನ್ ಸ್ಟ್ರಕ್ಷನ್ ನ ಆಡಳಿತ ನಿರ್ದೇಶಕ ಶ್ರೀ ಯಾದವ ಕೋಟ್ಯಾನ್, ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀಮತಿ ಶಕುಂತಳಾ ರಮಾನಂದ ಭಟ್, ಉದ್ಯಮಿ ಶ್ರೀ ಹರೀಶ್ ಶೆಟ್ಟಿ ಪೆರ್ಮುದೆ, ಶ್ರೀ ಪುಂಡಲೀಕ ಹೊಸಬೆಟ್ಟು, ಶ್ರೀಮತಿ ಸಹನಾ ರಾಜೇಶ್ ರೈ ಮೊದಲಾದವರು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಯಕ್ಷಗುರು ಶ್ರೀ ರಾಕೇಶ್…
ಮಂಗಳೂರು : ಕಾರ್ವಾಲ್ ಮನೆತನ ಮತ್ತು ಮಾಂಡ್ ಸೊಭಾಣ್ ಜಂಟಿಯಾಗಿ ನೀಡುವ 19ನೇ ‘ಕಲಾಕಾರ್ ಪುರಸ್ಕಾರ’ ಹಸ್ತಾಂತರ ದಿನಾಂಕ 05-11-2023ರಂದು ಕಲಾಂಗಣದಲ್ಲಿ ನೆರವೇರಿತು. ಸಂಗೀತಗಾರ ಆಪೊಲಿನಾರಿಸ್ ಡಿ’ಸೋಜ ಇವರಿಗೆ ಶಾಲು, ಫಲಪುಷ್ಪ, ಸ್ಮರಣಿಕೆ, ಸನ್ಮಾನ ಪತ್ರ ಮತ್ತು ನಗದು ರೂ.50,000/- ನೀಡಿ ಗೌರವಿಸಲಾಯಿತು. ಸನ್ಮಾನ ನೆರವೇರಿಸಿದ ಸಂತ ಎಲೋಶಿಯಸ್ ಸಂಸ್ಥೆಗಳ ರೆಕ್ಟರ್ ವಂ. ಮೆಲ್ವಿನ್ ಪಿಂಟೊ ಮಾತನಾಡಿ “ಅಧ್ಯಾತ್ಮಿಕ ಅನುಭೂತಿಯಿಂದ ಮಾತ್ರ ಭಕ್ತಿಗೀತೆಗಳನ್ನು ರಚಿಸಬಹುದು. ತಮ್ಮ ಭಕ್ತಿಗೀತೆಗಳ ಮುಖಾಂತರ ನಮ್ಮ ಬಾಲ್ಯವನ್ನು ಸ್ಮರಣೀಯಗೊಳಿಸಿದ ಆಪೊಲಿನಾರಿಸ್ ಇವರನ್ನು ಸನ್ಮಾನಿಸಲು ಅತೀವ ಹರ್ಷವಾಗುತ್ತಿದೆ. ಕಲಾವಿದರನ್ನು ಗೌರವಿಸುವುದು ಸಮಾಜದ ಆದ್ಯ ಕರ್ತವ್ಯ. ಇದರಿಂದ ಅವರಿಗೆ ಪ್ರೋತ್ಸಾಹ ದೊರೆತು ಆ ಮುಖಾಂತರ ಅವರು ಕಲೆಗೆ, ಸಮಾಜಕ್ಕೆ ಹೆಚ್ಚಿನ ದೇಣಿಗೆ ನೀಡುತ್ತಾರೆ ಮತ್ತು ಇತರರಿಗೆ ಪ್ರೇರಣೆ ನೀಡುತ್ತಾರೆ” ಎಂದು ಅಭಿನಂದಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಆಪೊಲಿನಾರಿಸ್ ಇವರು “ತನ್ನ ಕುಟಂಬದಲ್ಲಿ ಸಂಗೀತ ಪ್ರಕೃತಿದತ್ತವಾಗಿ ಬಂದಿದ್ದು, ಹಿರಿಯರು, ಒಡಹುಟ್ಟಿದವರು ಸಂಗೀತ ಕ್ಷೇತ್ರದಲ್ಲಿ ದುಡಿದವರು. ಆ ಪ್ರೋತ್ಸಾಹ, ಪ್ರೇರಣೆಯಿಂದ ನಾನೂ ಸಾಧನೆಗಳನ್ನು…
ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಘಟಕ ಮತ್ತು ಚಾಣಕ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಹೆಬ್ರಿ ಇದರ ಜಂಟಿ ಸಹಯೋಗದೊಂದಿಗೆ ನವೆಂಬರ್ ತಿಂಗಳ ‘ಸಡಗರ 2023’ ಕಾರ್ಯಕ್ರಮದ ಅಂಗವಾಗಿ ‘ಗಾನಯಾನ’ ಕನ್ನಡ ಗೀತಗಾಯನವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುದ್ರಾಡಿ ಇಲ್ಲಿ ದಿನಾಂಕ 07-11-2023ರಂದು ಜರುಗಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿ ಇವರು “ಕನ್ನಡ ಗೀತ ಗಾಯನದ ಮೂಲಕ ವಿದ್ಯಾರ್ಥಿಗಳಲ್ಲಿ ಸದಭಿರುಚಿಯನ್ನು ಮೂಡಿಸಿ ಕನ್ನಡ ಕಂಪು ಮನೆಮನೆಗಳಲ್ಲಿ ಪಸರಿಸಲಿ” ಎಂದು ಹೇಳಿದರು. “ಚಾಣಕ್ಯ ಸಂಸ್ಥೆ ಹಮ್ಮಿಕೊಂಡ ಗೀತಗಾಯನ ಕಾರ್ಯಕ್ರಮ ಪ್ರತಿ ಹಳ್ಳಿಹಳ್ಳಿಗೂ ತಲುಪಲಿ. ವಿದ್ಯಾರ್ಥಿಗಳ ಬಾಯಲ್ಲಿ ಗೀತೆ ಸದಾ ನಲಿದಾಡಲಿ” ಎಂದು ಲಯನ್ಸ್ ಅಧ್ಯಕ್ಷರಾದ ರಘುರಾಮ ಶೆಟ್ಟಿ ಹೇಳಿದರು. ಮುಖ್ಯ ಅತಿಥಿಗಳಾಗಿ ಲಯನ್ಸ್ ಹೆಬ್ರಿ ಸಿಟಿ ಅಧ್ಯಕ್ಷರಾದ ಶ್ರೀ ರಘುರಾಮ ಶೆಟ್ಟಿ, ಸರಕಾರಿ ನೌಕರರ ಸಂಘ ಹೆಬ್ರಿ ತಾಲೂಕು ಇದರ ಅಧ್ಯಕ್ಷರಾದ ಹರೀಶ…
ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2022ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಹಿರಿಯ ಸಾಹಿತಿ, ಚಿಂತಕಿ, 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತೆ ಕೆ. ಷರೀಫಾರವರ ‘ನೀರೊಳಗಣ ಕಿಚ್ಚು’ ಕಥಾಸಂಕಲನ ಆಯ್ಕೆಯಾಗಿದೆ. ಕೃಷಿ ಮಾರುಕಟ್ಟೆ ಇಲಾಖೆಯಲ್ಲಿ ಮಾರುಕಟ್ಟೆ ಅಧಿಕಾರಿಯಾಗಿ 2017ರಲ್ಲಿ ನಿವೃತ್ತಿಹೊಂದಿರುವ ಕೆ. ಷರೀಫಾ ಮುಸ್ಲಿಮ್ ಸಮುದಾಯದಿಂದ ಕನ್ನಡಕ್ಕೆ ಬಂದ (1975) ಮೊದಲ ಕವಿಯತ್ರಿ. ಕರ್ನಾಟಕ ಉರ್ದು ಸಾಹಿತ್ಯ ಅಕಾಡೆಮಿ, ಹಂಪಿ ಕನ್ನಡ ವಿವಿಯ ಸಿಂಡಿಕೇಟ್, ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಳಾ ಸಮಿತಿ (ಬೆಳಗಾಂ), ರಾಷ್ಟ್ರಕವಿ ಆಯ್ಕೆ ಸಮಿತಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಆಯ್ಕೆ ಸಮಿತಿಗಳ ಸದಸ್ಯೆಯಾಗಿ, ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕಿಯಾಗಿ, ದೇವರಾಜ ಅರಸು ಶತಮಾನೋತ್ಸವ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ ಸೇವೆ ಸಲ್ಲಿಸಿರುವ ಕೆ. ಷರೀಫಾ ಹಲವು ಪ್ರಮುಖ ಸಂಘ-ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ‘ಮಹಿಳೆ ಮತ್ತು…
ಸೋಮವಾರಪೇಟೆ : ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ತಾಲ್ಲೂಕು ಘಟಕವು ಕರ್ನಾಟಕ ರಾಜ್ಯೋತ್ಸವ ಮತ್ತು ಸುವರ್ಣ ಸಂಭ್ರಮದ ಅಂಗವಾಗಿ ವಿದ್ಯಾರ್ಥಿಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ. ಸ್ಪರ್ಧೆಗಳು ದಿನಾಂಕ 22-11-2023ರಂದು ಸೋಮವಾರಪೇಟೆಯ ಮಹಿಳಾ ಸಮಾಜದ ಕಾರ್ಯಾಲಯದಲ್ಲಿ ನಡೆಯಲಿದೆ. ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಆರು ಸ್ಪರ್ಧೆಗಳು ಬೆಳಿಗ್ಗೆ ಘಂಟೆ 10.00 ರಿಂದ ಸಂಜೆ 5.00ರ ವರೆಗೆ ನಡೆಯಲಿದೆ. ಸೋಮವಾರಪೇಟೆ ತಾಲೂಕಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ರಸ ಪ್ರಶ್ನೆ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, ಡ್ರಾಯಿಂಗ್ ಸ್ಪರ್ಧೆಗೆ ಶೀಟ್ ಮಾತ್ರ ನೀಡಲಾಗುತ್ತದೆ. ಯು.ಕೆ.ಜಿ.ಯಿಂದ 10 ನೇ ತರಗತಿವರೆಗೆ, ಛದ್ಮವೇಷ ಸ್ಪರ್ಧೆ, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಕಾರ್ಡ್ನಲ್ಲಿ ಕಥೆ ಬರೆಯುವ ಸ್ಪರ್ಧೆ, ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಹಾಗೂ ಸಾರ್ವಜನಿಕರಿಗೆ ಕನ್ನಡ ಸಮೂಹ ಗೀತೆ ಮತ್ತು ನೃತ್ಯ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ದಿನಾಂಕ 30-11-2023 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳು ಮತ್ತು…
ಮಂಗಳೂರು : ಕನ್ನಡ ಕಟ್ಟೆಯ ವಿಂಶತಿ ಆಚರಣೆಯ ಉದ್ಘಾಟನಾ ಸಮಾರಂಭವು ದಿನಾಂಕ 05-11-2023ರಂದು ಮಂಗಳೂರಿನ ಕದ್ರಿಯ ಹೊಟೇಲ್ ಡಿಂಕಿ ಡೈನ್ ಇದರ ಸಭಾಂಗಣದಲ್ಲಿ ನಡೆಯಿತು. “ನಾಡು, ನುಡಿ, ನೆಲ, ಪರಿಸರ, ಪ್ರಕೃತಿ ಪರ ಚಿಂತನೆ ಹೋರಾಟಗಳಿಗೆ ಹಾಗೂ ಅನುಷ್ಠಾನಕ್ಕೆ ನೇರ ನಿಷ್ಠುರ ಗಟ್ಟಿ ಧ್ವನಿಯ ಕನ್ನಡ ಕಟ್ಟೆಯಂತಹ ಸಂಘಟನೆಗಳು ಇನ್ನಷ್ಟು ಬೇಕು” ಎಂದು ಡಾ. ಹರಿಕೃಷ್ಣ ಪುನರೂರು ಹಾಗೂ ಪ್ರದೀಪ್ ಕುಮಾರ್ ಕಲ್ಕೂರ ಅಭಿಪ್ರಾಯಪಟ್ಟರು. ವಿಂಶತಿ ಆಚರಣೆಯ ಪ್ರಯುಕ್ತ ಶಾಲಾ ಮಕ್ಕಳಿಗೆ ಏರ್ಪಡಿಸಿದ ಕಾರ್ಡಿನಲ್ಲಿ ಕಥೆ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ಹೋರಾಟಗಾರರನ್ನು ಮತ್ತು ಸಂತೋಷ್ ಕುಮಾರ್ ಶೆಟ್ಟಿ ಜಪ್ತಿ ಅವರನ್ನು ಸಮ್ಮಾನಿಸಲಾಯಿತು. ತುಳುನಾಡ ರಕ್ಷಣಾ ವೇದಿಕೆಯ ಜಪ್ಪು ಯೋಗೀಶ್ ಶೆಟ್ಟಿ ಅವರು ಹೋರಾಟದ ದಿನಗಳನ್ನು ನೆನಪಿಸಿಕೊಂಡರು. ಕುಂದಾಪುರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಮತ್ತು ಡಾ. ವಿಜಯ್ ಕುಮಾರ್ ಶುಭ ಹಾರೈಸಿದರು. ಕನ್ನಡ ಕಟ್ಟೆಯ ವಿಂಶತಿ ಕಾರ್ಯಕ್ರಮದ ಮುಂದಿನ ಭಾಗವಾಗಿ…
ಮುಂಬಯಿ : ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ 51ನೇ ನವರಾತ್ರಿ ಉತ್ಸವದ ನಿಮಿತ್ತ ಜರಗಿದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ವಿನಾಯಕ ಯಕ್ಷಕಲಾ ಫೌಂಡೇಷನ್ ಕೆರೆಕಾಡು ಮುಲ್ಕಿ (ರಿ.) ಇದರ 9ನೇ ವರ್ಷದ ಮುಂಬಯಿ ಪ್ರವಾಸದ ಯಕ್ಷಗಾನ ಸಪ್ತ ಸಂಭ್ರಮವು ದಿನಾಂಕ 26-10-2023ರಂದು ನಡೆಯಿತು. ಈ ಸಮಾರಂಭವನ್ನು ಉದ್ಘಾಟನೆ ಮಾಡಿದ ಮುಂಬಯಿಯ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಇವರು “ಯಕ್ಷಗಾನವು ಕಲಾ ಸಂಪತ್ತಾಗಿದ್ದು, ಇದನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಅಭ್ಯಸಿಸಬೇಕು. ಇಂತಹ ತುಳುನಾಡಿನ ಹೆಮ್ಮೆಯ ಕಲೆ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಪಡೆಯುತ್ತಿದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ಯಕ್ಷಗಾನದ ಪ್ರಾಯೋಜಕರಾದ ಫೆಡರೇಶನ್ ಆಫ್ ಹೋಟೆಲ್ ಆ್ಯಂಡ್ ರೆಸ್ಟೋರೆಂಟ್ ಮಹಾರಾಷ್ಟ್ರ ಇದರ ಮಾಜಿ ಅಧ್ಯಕ್ಷ ಜಗನ್ನಾಥ ಶೆಟ್ಟಿ, ದೇವಾಲಯದಲ್ಲಿ ವಿಶೇಷವಾಗಿ ಸೇವೆಯನ್ನು ಸಲ್ಲಿಸುತ್ತಿರುವ ಸೇವಕರ್ತರಾದ ನವೀನ್ ಸುವರ್ಣ ಹಾಗೂ ರವಿ ನಾಯಕ್ ಮತ್ತು ಕೆರೆಕಾಡು ಶ್ರೀ ವಿನಾಯಕ ಫೌಂಡೇಶನ್ ಇದರ ಕಲಾವಿದ ಅಭಿಜಿತ್ ಕರೆಕಾಡು ಇವರುಗಳನ್ನು…
ಕಾರ್ಕಳ : ಕೆನರಾ ಬ್ಯಾಂಕ್ ಪ್ರಾಯೋಜಿತ ಸಿ.ಇ.ಕಾಮತ್ ಕುಶಲಕರ್ಮಿಗಳ ತರಬೇತಿ ಸಂಸ್ಥೆಯಲ್ಲಿ ಕಲ್ಲು ಮರ ಹಾಗೂ ಲೋಹಶಿಕ್ಷಣ ವಿಭಾಗಗಳಲ್ಲಿ 18ತಿಂಗಳ ಅವಧಿಯ ಉಚಿತ ತರಬೇತಿ ತರಗತಿಯು ದಿನಾಂಕ 11.12.2023 ರಂದು ಪ್ರಾರಂಭವಾಗಲಿದೆ. ಈ ತರಗತಿಗೆ ಸೇರಲಿಚ್ಛಿಸುವ ಆಸಕ್ತ ಯುವಕರು ದಿನಾಂಕ 06.11.2023ರಿಂದ 11-11-2023ರ ವರೆಗೆ ಸಂಸ್ಥೆಯ ಆವರಣದಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಬೆಳಿಗ್ಗೆ 10.30 ರಿಂದ ಸಂಜೆ 4.00 ಗಂಟೆಯ ಒಳಗೆ ಹಾಜರಾಗಬೇಕು. ಸಂದರ್ಶನಕ್ಕೆ ಬರುವಾಗ ಅಭ್ಯರ್ಥಿಯು ತಂದೆ ಅಥವಾ ತಾಯಿಯ ಜೊತೆಗೆ ಬರಬೇಕು ಹಾಗೂ ಈ ಕೆಳಗೆ ನಮೂದಿಸಿದ ದಾಖಲೆ ಪ್ರತಿಗಳನ್ನು ತರಬೇಕು. 1. ಅಭ್ಯರ್ಥಿಯ ಆಧಾರ್ ಕಾರ್ಡ್ 2. ಪೋಷಕರ ಆಧಾರ್ ಕಾರ್ಡ್ 3. ರೇಷನ್ ಕಾರ್ಡ್ 4. SSLC Marks ಕಾರ್ಡ್ 5. ವರ್ಗಾವಣೆ ಪ್ರಮಾಣ ಪತ್ರ (ಟಿ.ಸಿ.) 6. ಇಬ್ಬರು ಗಣ್ಯ ವ್ಯಕ್ತಿಗಳಿಂದ ನಡತೆ ಪ್ರಮಾಣ ಪತ್ರ 7. ಪಾಸ್ ಪೋರ್ಟ್ size ಫೋಟೋ 5 8. ಉತ್ತಮ ಆರೋಗ್ಯದ ವೈದ್ಯಕೀಯ ದ್ರಢೀಕರಣ ಪತ್ರ 9.…
ಬೆಂಗಳೂರು : ಪ್ರತಿಷ್ಠಿತ ರೇವಾ ವಿಶ್ವವಿದ್ಯಾನಿಲಯದ ಲಲಿತ ಕಲೆಗಳ ಅಧ್ಯಯನ ಕೇಂದ್ರವು ಕರಾವಳಿಯ ಯುವ ನೃತ್ಯ ಕಲಾವಿದರಾದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಇವರ ‘ನಟ್ಟುವಾಂಗಂ ಕಾರ್ಯಾಗಾರ’ವನ್ನು ದಿನಾಂಕ 03-11-2023ರಂದು ಹಮ್ಮಿಕೊಂಡಿತು. ಮೂರು ದಿನಗಳ ಈ ಕಾರ್ಯಾಗಾರದ ಸದುಪಯೋಗವನ್ನು ಸ್ನಾತಕೋತ್ತರ ಪದವಿ, ಪದವಿ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳು ಪಡೆದುಕೊಂಡರು. ಪ್ರದರ್ಶನ ಕಲೆಗಳ ವಿಭಾಗದಲ್ಲಿ ಅಧ್ಯಯನ ನಡೆಸುತ್ತಿರುವ ದೇಶದ ಬೇರೆ ಬೇರೆ ಭಾಗದ ಸುಮಾರು 58 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮುಂಬೈ : ಶ್ರೀ ಡಾ. ಸುಗುಣೇ0ದ್ರ ತೀರ್ಥ ಶ್ರೀಪಾದರ ಶುಭಾಶೀರ್ವಾದಗಳೊಂದಿಗೆ ಮುಂಬಯಿಯ ವಿದ್ಯಾವಿಹಾರ್ ಶ್ರೀ ಗಾಂದೇವಿ ಅಂಬಿಕಾ ಶ್ರೀ ಅದಿನಾಥೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ದಿನಾಂಕ 20-10-2023ರಂದು ನಡೆದ ನವರಾತ್ರಿ ವಿಶೇಷದಲ್ಲಿ ‘ನಾಟ್ಯಾಯನ’ ಮತ್ತು ಕೋಟಿ ಗೀತಾ ಲೇಖನ ಯಜ್ಞ ನೋಂದಣಿ ಅಭಿಯಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಪೆರಣ0ಕಿಲ ಹರಿದಾಸ್ ಭಟ್ “ಭಗವದ್ಗೀತೆ, ಸಂಗೀತ, ನೃತ್ಯ, ನಾಟಕ, ಸಂಸ್ಕೃತಿ, ಶಿಕ್ಷಣಗಳ ವಿಶಿಷ್ಟ ಸಮ್ಮೇಳನದ ‘ನಾಟ್ಯಾಯನ’ ಕಾರ್ಯಕ್ರಮ ನೀಡುತ್ತಿರುವ ಮೂಡುಬಿದಿರೆಯ ಅಯನಾ ವಿ. ರಮಣ್, ಅನನ್ಯ- ಅದ್ಭುತ ಕಲಾವಿದೆ. ದಕ್ಷಿಣಾಯನ-ಉತ್ತರಾಯಣಗಳ ಸೂರ್ಯ ಚಲನೆಯ ಹೆಸರನ್ನು ಹೊಂದಿರುವ ಆಕೆ, ಅಷ್ಟೇ ಪ್ರಖರ – ಪ್ರಚಂಡ ಪ್ರತಿಭೆ. ಅಸಾಧಾರಣ ಸ್ಮರಣ ಶಕ್ತಿ, ಪರಿಣಾಮಕಾರಿ ಅಭಿನಯದ ಅದ್ಭುತ ಸಾಧನೆ ಮಾಡಿದ ಈ ಕಲಾವಿದೆ, ಭಗವದ್ಗೀತೆ – ವೇದಸೂಕ್ತಗಳ ಪ್ರಸ್ತುತಿಯಿರುವ ನೃತ್ಯ – ನೃತ್ತ ಭರತನಾಟ್ಯದ ಮೂಲಕ ಪ್ರತ್ಯೇಕವಾಗಿ ನಿಲ್ಲುತ್ತಾರೆ” ಎಂದು ವಿಶ್ಲೇಷಿಸಿದ ಅವರು, ರಾಷ್ಟ್ರಮಟ್ಟದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ…