Author: roovari

ಮಂಗಳೂರು : ರೋಟರಿ ಕ್ಲಬ್ ಸುರತ್ಕಲ್ ಆಶ್ರಯದಲ್ಲಿ ಸುರತ್ಕಲ್ಲಿನ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮೈಂಡ್ ಮ್ಯಾಜಿಕ್ – ಜ್ಞಾಪಕ ಶಕ್ತಿ ವರ್ಧನಾ ವಿಶಿಷ್ಟ ಕಾರ್ಯಾಗಾರವು ದಿನಾಂಕ 29-06-2024ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಮಾತನಾಡಿ “ಅಂತರಂಗಿಕ ಶಕ್ತಿಯ ವರ್ಧನೆಗೆ ಏಕಾಗ್ರತೆ ಅಗತ್ಯವಿದ್ದು ದೃಢ ಪ್ರಯತ್ನದಿಂದ ಯಶಸ್ಸನ್ನು ಪಡೆಯಲು ಸಾಧ್ಯ. ಪ್ರಜ್ಞೆ, ಗ್ರಹಿಕೆ, ಯೋಚನೆ, ವಿವೇಚನೆ, ನೆನಪುಗಳು, ಗ್ರಹಣ ಶಕ್ತಿಗಳ ಸಮೂಹವಾಗಿರುವ ಮನಸ್ಸಿನ ಶಕ್ತಿಯ ವರ್ಧನೆಯನ್ನು ಮಾಡಿಕೊಳ್ಳಬೇಕು. “ ಎಂದರು. ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಮಹಾಲಿಂಗೇಶ್ವರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ವೈ. ರಮಾನಂದ ರಾವ್ ಮಾತನಾಡಿ “ವಿದ್ಯಾರ್ಥಿಗಳ ಭೌದ್ಧಿಕ ಬೆಳವಣಿಗೆಗಳಿಗೆ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ.” ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸುರತ್ಕಲ್ ರೋಟರಿ ಕ್ಲಬ್ ಇದರ ಅಧ್ಯಕ್ಷರಾದ ಸಂದೀಪ್ ರಾವ್ ಇಡ್ಯಾ ಮಾತನಾಡಿ “ಏಕಾಗ್ರತೆಯ ಕಲೆಯನ್ನು ರೂಢಿಸಿಕೊಂಡಾಗ ಪ್ರತಿಭಾವಂತರಾಗಲು ಸಾಧ್ಯ.” ಎಂದರು.ಶಾಲಾ ಸಂಚಾಲಕ ಹಾಗೂ ಕಾರ್ಯಾಗಾರದ ಪ್ರಾಯೋಜಕ…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂತ ಶಿಶುನಾಳ ಶರೀಫರ ಜನ್ಮದಿನಾಚಾರಣೆ ಕಾರ್ಯಕ್ರಮವನ್ನು ದಿನಾಂಕ 03-07-2024ರಂದು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು “ಬದುಕಿನ ಹಿರಿಮೆಯನ್ನು ಅರಿತು, ಸಮಾಜದಲ್ಲಿನ ತಾರತಮ್ಯಗಳ ನಿವಾರಣೆಗೆ ಶ್ರಮಿಸಿ ಜಾತಿ ಮತಗಳ ಗಡಿದಾಟಿ ಸಂತಶ್ರೇಷ್ಟ ಎನ್ನಿಸಿಕೊಂಡವರು ಸಂತ ಶಿಶುನಾಳ ಶರೀಫರು. ಕಳಸದ ಗುರು ಗೋವಿಂದ ಭಟ್ಟರಿಂದ ಉಪದೇಶವನ್ನು ಪಡೆದುಕೊಂಡು ಎರಡೂ ಧರ್ಮದವರ ವಿರೋಧವನ್ನು ಎದುರಿಸಿ ಜಾತಿ, ಮತಗಳಿಗಿಂತ ‘ಮಾನವ ಧರ್ಮವೇ ಶ್ರೇಷ್ಠ’ ಎಂದು ಬೋಧಿಸಿದವರು. ‘ಬೋಧ ಒಂದೇ, ಬ್ರಹ್ಮನಾದ ಒಂದೇ, ಸಾಧನೆ ಮಾಡುವ ಹಾದಿ ಒಂದೇ, ಆದಿ ಪದ ಒಂದೇ – ಶಿಶುನಾಳಧೀಶನ ಭಾಷೆ ಒಂದೇ’ ಎಂದು, `ಅನೇಕತೆಯಲ್ಲಿ ಏಕತೆ’ಯನ್ನು ಸಾರಿದರು. ಸಹೋದರತ್ವವನ್ನು ಎತ್ತಿ ಹಿಡಿದು ಮತೀಯ ಸೌಹಾರ್ದವನ್ನು ತೋರಿಸಿದ ದಾರ್ಶನಿಕರು ಕಳಸದ ಗುರುಗೋವಿಂದ ಭಟ್ಟರು ಹಾಗೂ ಶಿಶುನಾಳ ಶರೀಫರು. ಹಿಂದೂ ಹಾಗೂ ಇಸ್ಲಾಂ ಧರ್ಮಗಳ ಸಮಾನತೆ, ಸಮನ್ವಯ ಹಾಗೂ ಸಮತೆಯನ್ನು, ಸಮಭಾವ, ಸಮಚಿತ್ತ ಹಾಗೂ ಸಮದೃಷ್ಟಿಯಿಂದ ನೋಡಿದಂಥ…

Read More

ಮಂಗಳೂರು : ಮಂಗಳೂರಿನ ಪುರಭವನದಲ್ಲಿ ‘ಯಕ್ಷನಂದನ’ ಪಿ.ವಿ. ಐತಾಳರ ಆಂಗ್ಲ ಭಾಷಾ ಯಕ್ಷಗಾನ ತಂಡದ 43ನೇ ವರ್ಷಾಚರಣೆಯು ದಿನಾಂಕ 02-07-2024ರಂದು ಜರಗಿತು. ಈ ಕಾರ್ಯಕ್ರಮದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ “ಆಂಗ್ಲ ಭಾಷೆಯಲ್ಲಿ 43 ವರ್ಷಗಳಿಂದ ನಿರಂತರವಾಗಿ ಯಕ್ಷಗಾನ ಆಯೋಜಿಸಲು ಯಕ್ಷನಂದನ ಸಂಸ್ಥೆಯಿಂದ ಮಾತ್ರ ಸಾಧ್ಯ. ಪಿ.ವಿ. ಐತಾಳರ ಕನಸಾಗಿರುವ ಈ ಯಕ್ಷಗಾನ ಪ್ರದರ್ಶನ ಮುಂದಿನ ದಿನಗಳಲ್ಲಿ ನಿರಂತರವಾಗಿ ನಡೆಯಲಿ. ಯಕ್ಷನಂದನ ಭವಿಷ್ಯದಲ್ಲಿಯೂ ‘ನಂದನ’ವಾಗಿಯೇ ಇರಲಿ” ಎಂದು ಹೇಳಿದರು. ಎನ್.ಐ.ಟಿ.ಕೆ. ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ಎ. ಚಿತ್ತರಂಜನ್ ಹೆಗ್ಡೆ ಇವರು “ಸಂಗೀತ, ಸಾಹಿತ್ಯ, ನೃತ್ಯ, ಯಕ್ಷಗಾನಗಳೆಲ್ಲವೂ ನಮ್ಮ ಜೀವನಕ್ಕೆ ಆನಂದವನ್ನು ನೀಡುವಂತಹುದು. ಯಕ್ಷಗಾನದಂತಹಾ ಕಲೆಗಳು ನಮ್ಮಲ್ಲಿನ ಲವಲವಿಕೆಯನ್ನು ಉಜ್ವಲಗೊಳಿಸಿ, ಬದುಕಿಗೆ ಅರ್ಥ ತುಂಬುತ್ತವೆ. ಮಂಕುತಿಮ್ಮನ ಕಗ್ಗದಲ್ಲಿ ಉಲ್ಲೇಖಿಸಿರುವಂತೆ ಸಂಗೀತ ನೃತ್ಯಾದಿ ಪ್ರಕಾರಗಳು ಮಾನವನ ಬದುಕಿನ ಸಂಗಾತಿಗಳು. ಶಾಸಕರಾಗಿ, ನ್ಯಾಯವಾದಿಗಳಾಗಿ ಮೆರೆದ ಐತಾಳರು ಆಂಗ್ಲ ಭಾಷಾ ಯಕ್ಷಗಾನದ ಪ್ರಮುಖ…

Read More

ಪುತ್ತೂರು : ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು, ಗುರುಕುಲ ಕಲಾ ಪ್ರತಿಷ್ಠಾನ ಮಂಗಳೂರು ಸಹಯೋಗದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಸಹಕಾರದೊಂದಿಗೆ, ಪುತ್ತೂರಿನ ಐ.ಆರ್.ಸಿ.ಎಂ.ಡಿ. ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ, ಮುಂಗಾರು ಕವಿಗೋಷ್ಠಿ (ಕವಿತೆಗಳ ಪುಷ್ಪವೃಷ್ಠಿ) ದಿನಾಂಕ 17-07-2024ರಂದು ಐ.ಆರ್.ಸಿ.ಎಂ.ಡಿ. ಶಿಕ್ಷಣ ಸಂಸ್ಥೆಯ ಹೋಟೆಲ್ ಸ್ವಾಗತ್ ಒಂದನೇ ಮಹಡಿಯಲ್ಲಿ ನಡೆಯಲಿದೆ. ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಜಿಲ್ಲೆಯ ಸಾಹಿತಿಗಳಿಗೆ ಅವಕಾಶವಿದ್ದು, ಕವಿಗೋಷ್ಠಿ ಸಂಚಾಲಕಿ ಪ್ರಿಯಾ ಸುಳ್ಯ ಇವರ ವಾಟ್ಸಪ್ಪ್ ಸಂಖ್ಯೆ 9731470936 ಸಂಪರ್ಕಿಸಬಹುದು. ಕವಿಗೋಷ್ಠಿಯಲ್ಲಿ ಭಾಗವಹಿಸುವವರು ತಮ್ಮ ಸೂಕ್ಷ್ಮ ಪರಿಚಯದೊಂದಿಗೆ ಹೆಸರು ನೋಂದಾಯಿಸಬೇಕು. ಕವಿತೆಯ ವಿಷಯ ಕನ್ನಡ ನಾಡು, ನುಡಿ, ಸಂಸ್ಕೃತಿ, ಪ್ರಕೃತಿ ಕುರಿತಾಗಿರಬೇಕು. ಯಾವುದೇ ಜಾತಿ, ಧರ್ಮ, ದೇವರು ಮತ್ತು ರಾಜಕೀಯ ನಿಂದನೆಗೆ ಅವಕಾಶವಿಲ್ಲ. ನೋಂದಣಿಗೆ 10-07-2024 ಕೊನೆಯ ದಿನವಾಗಿದೆ ಎಂದು ಕಾರ್ಯಕ್ರಮ ಸಂಯೋಜಕ ನಾರಾಯಣ ಕುಂಬ್ರ ತಿಳಿಸಿದ್ದಾರೆ.

Read More

ಅಜೆಕಾರು : ಹಿರ್ಗಾನದ ಕ್ರಿಯೇಟಿವ್ ಕಾಲೇಜಿನ ಸಪ್ತಗಿರಿ ಕ್ಯಾಂಪಸ್ ಸಭಾಂಗಣದಲ್ಲಿ ದಿನಾಂಕ 01-07-2024ರಂದು ಪುಸ್ತಕ ಮನೆ ಪ್ರಕಾಶನದ ವತಿಯಿಂದ ನಾಡಿನ ಹೆಸರಾಂತ ಸಾಹಿತಿಗಳ 15 ಪುಸ್ತಕಗಳನ್ನು ಖ್ಯಾತ ಬರಹಗಾರ ಜೋಗಿ ನಾಮಾಂಕಿತ ಗಿರೀಶ್ ರಾವ್ ಹತ್ವಾರ್ ಇವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಲಾಯಿತು. ಈ ಸಂದರ್ಭದಲ್ಲಿ ನರೇಂದ್ರ ಪೈರವರ ಆಯ್ದ ವಿಮರ್ಶೆಗಳನ್ನು ಒಳಗೊಂಡ ‘ಸಾವಿರದೊಂದು ಪುಸ್ತಕ’, ಯಶೋದಾ ಮೋಹನ್ ಇವರ ‘ಇಳಿ ಹಗಲಿನ ತೇವಗಳು’ ಎಂಬ ಕಥಾಸಂಕಲನ, ಸುಧಾ ನಾಗೇಶ್ರಒವರ ‘ಹೊಂಬೆಳಕು’ ಎಂಬ ಚಿಂತನ ಬರಹಗಳು, ವಾಣಿ ರಾಜ್ ರವರ ಕಥಾಸಂಕಲನ ‘ಸವಿನೆನಪುಗಳ ಹಂದರ’, ಡಾ. ಸುಬ್ರಹ್ಮಣ್ಯ ಸಿ. ಕುಂದೂರುರವರ ಮಲೆನಾಡಿನ ಕಥನವಾದ ‘ಜೀವನಯಾನ’, ರಾಜೇಂದ್ರ ಭಟ್ ಇವರ ‘ರಾಜಪಥ’ ಎಂಬ ಲೇಖನಗಳ ಪುಸ್ತಕ, ಕೊಂಡಳ್ಳಿ ಪ್ರಭಾಕರ ಶೆಟ್ಟಿಯವರ ‘ಸಾರ್ಥಕ ಜೀವನಕ್ಕೆ ಕಗ್ಗೋಪದೇಶ’ ಎಂಬ ಲೇಖನಗಳು, ದಿಗಂತ್ ಬಿಂಬೈಲ್ ಇವರ ‘ಕೊಂದ್ ಪಾಪ ತಿಂದ್ ಪರಿಹಾರ’ ಎಂಬ ಕಥಾ ಪ್ರಸಂಗಗಳು, ಡಾ. ರಾಜಶೇಖರ್ ಹಳೆ ಮನೆಯವರ ಕಾದಂಬರಿ ‘ಒಡಲುಗೊಂಡವರು’, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ…

Read More

ಧಾರವಾಡ : ಭಾರತೀಯ ಸಂಗೀತ್ ವಿದ್ಯಾಲಯ ಮತ್ತು ದಾಸ ಟ್ರಸ್ಟ್ ಪ್ರಸ್ತುತ ಪಡಿಸುವ ಶ್ರೀ ಅನಂತ ಹರಿಹರ ಇವರಿಗೆ ಶೃದ್ಧಾಂಜಲಿ ಪ್ರಯುಕ್ತ ‘ಅನಂತ ನಮನ’ ಕಾರ್ಯಕ್ರಮವನ್ನು ದಿನಾಂಕ 07-07-2024ರಂದು ಸಂಜೆ 5-30 ಗಂಟೆಗೆ ಧಾರವಾಡದ ಕೆ.ಸಿ.ಡಿ. ಕ್ಯಾಂಪಸ್, ಡಾ.ಅಣ್ಣಾಜಿ ರಾವ್ ಶೀರೂರ್ ರಂಗ ಮಂದಿರ, ‘ಸೃಜನ’ದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಇವರ ಹಾಡುಗಾರಿಕೆಗೆ ಶ್ರೀಧರ್ ಮಾಂಡ್ರೆ ತಬಲಾ ಮತ್ತು ಗುರುಪ್ರಸಾದ್ ಹೆಗ್ಡೆ ಇವರು ಹಾರ್ಮೋನಿಯಂ ಸಾಥ್ ನೀಡಲಿರುವರು. ಛೋಟೆ ರಹಿಮತ್ ಖಾನ್, ರಫೀಕ್ ಖಾನ್, ಶಫೀಕ್ ಖಾನ್, ರೈಸ್ ಖಾನ್, ಹಫೀಜ್ ಖಾನ್ ಮತ್ತು ಮೊಹಸಿನ್ ಖಾನ್ ಇವರ ಷಷ್ಠ ಸಿತಾರ್ ವಾದನಕ್ಕೆ ರಾಜೇಂದ್ರ ನಾಕೊಡ್ ಇವರು ತಬಲಾದಲ್ಲಿ ಸಹಕರಿಸಲಿದ್ದಾರೆ.

Read More

ದಾವಣಗೆರೆ : ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮೈಸೂರಿನ ಸಂಸ್ಕೃತಿ ಪ್ರಕಾಶನದ ಸಹಯೋಗದಲ್ಲಿ ಲೇಖಕಿ ಛಾಯಾ ಶ್ರೀಧರ್ ಇವರ ‘ದರ್ಪಣ’ ಕವನ ಸಂಕಲನದ ಲೋಕಾರ್ಪಣಾ ಸಮಾರಂಭವು ದಿನಾಂಕ 27-06-2024ರ ಗುರುವಾರದಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಹಿರಿಯ ಕವಯಿತ್ರಿ ಶಶಿಕಲಾ ವಸ್ತ್ರದ್ “ಸಮಾಜದ ತಲ್ಲಣಗಳಿಗೆ ದನಿಯಾಗುವ ಮೂಲಕ ಜಾಗತಿಕ ಸಮಸ್ಯೆಗಳಿಗೆ ಕಾವ್ಯ ದಿಟ್ಟ ಉತ್ತರ ನೀಡಬೇಕು. ಕವಿಯಾದವನು ಸರ್ಕಾರದ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಬೇಕು. ಸಮಾಜದಲ್ಲಿನ ಶೋಷಿತರು, ದಮನಿತರು, ರೈತರು, ಕಾರ್ಮಿಕರ ಪರ ಹಾಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಪ್ರಶ್ನೆ ಮಾಡುವ ದಾರ್ಷ್ಟ್ಯ ಹಾಗೂ ಸಾತ್ವಿಕ ರೋಷ ಬೆಳೆಸಿಕೊಳ್ಳಬೇಕು. ಕವಿಗಳಿಗೆ ಪರಕಾಯ ಪ್ರವೇಶ ಮಾಡುವ ಗುಣವಿರುತ್ತದೆ. ಸಮಾಜದಲ್ಲಿ ಜನರ ನೋವುಗಳಿಗೆ ಸ್ಪಂದಿಸುವ ಮೂಲಕ ಪ್ರೀತಿ, ಸಹನೆ ಮತ್ತು ಅಂತಃಕರಣ ಹೊಂದಿದಾಗ ಸಂವಹನ ಶಕ್ತಿ ಬರುತ್ತದೆ. ಪರಕಾಯ ಪ್ರವೇಶ ಮಾಡುವ ಗುಣವುಳ್ಳವರು ಮಾತ್ರ ಪ್ರಬುದ್ಧ ಕವಿಗಳಾಗಲು ಸಾಧ್ಯ. ಕಾವ್ಯಕ್ಕೆ ಎಂದೂ…

Read More

ಕುಂದಾಪುರ : ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ‘ಶ್ವೇತಯಾನ-39’ನೆಯ ಕಾರ್ಯಕ್ರಮವು ದಿನಾಂಕ 30-06-2024 ರಂದು ಕಲಾಕ್ಷೇತ್ರದಲ್ಲಿರುವ ಪ್ರಕಾಶಾಂಗಣ ಸ್ಟುಡಿಯೋದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಉಡುಪಿ ಜಿಲ್ಲಾ ಬಿ. ಜೆ. ಪಿ. ಅಧ್ಯಕ್ಷರಾದ ಬಿ. ಕಿಶೋರ್ ಕುಮಾರ್ “ಕುಂದಾಪುರ ಹೃದಯ ಭಾಗದಲ್ಲಿ ಡಿಪ್ಲೊಮೇಟ್ ಹೋಟೇಲ್ ಹತ್ತಿರ ಸಾಹಿತ್ಯ ಚಟುವಟಿಕೆಗಾಗಿ ‘ಪ್ರಕಾಶಾಂಗಣ’ ಎನ್ನುವ ಹೆಸರಿನಲ್ಲಿ ತೆರೆದುಕೊಂಡ ಸ್ಟುಡಿಯೋ, ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಹಾಗೂ ಯಶಸ್ವೀ ಕಲಾವೃಂದದ ಗಾನ ವೈಭವದೊಂದಿಗೆ ಸಂಪನ್ನಗೊಂಡಿದೆ. ಮತ್ತೆ ಮತ್ತೆ ಕೇಳಬೇಕು, ನೋಡಬೇಕು ಎಂದೆನಿಸುವ ಯಕ್ಷಗಾನದ ಪೌರಾಣಿಕ ಆಧಾರಿತ ಪದ್ಯಗಳ ಗಾನ ವೈಭವ ಮಸ್ತಕದಲ್ಲಿ ಉಳಿಯುವಂತಹದ್ದು. ಸಂಸ್ಥೆಯ 25 ವರ್ಷಗಳ ತಪಸ್ಸು ಫಲ ನೀಡುವ ಕಾಲ ಕೂಡಿಬಂದಿದೆ. ಒಂದಷ್ಟು ವಿದ್ಯಾರ್ಥಿಗಳಿಗೆ ಕಲಿಸುತ್ತಾ ಬೆಳೆದ ಸಂಸ್ಥೆ ಸಾಕಷ್ಟು ಕಲಾವಿದರನ್ನು ಹೊಂದಿ ಸಮಾಜಕ್ಕೆ ಬೆಳಕಾಗಿದೆ.” ಎಂದು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಹಿರಿಯ ಭಾಗವತರಾದ ರಾಘವೇಂದ್ರ ಮಯ್ಯ ಮಾತನಾಡಿ “ಕಲೆಯು ಕಲಾಭಿಮಾನಿಗಳ ಸಹಕಾರದಿಂದ ಕರಾವಳಿಯ ತಡಿಯಲ್ಲಿ ಭದ್ರವಾಗಿ ಬೇರೂರಿದೆ. ಕಲೆಯು…

Read More

ಕಾಸರಗೋಡು : ಕಾಸರಗೋಡಿನ ಯುವ ರಂಗನಟಿ ಸುಶ್ಮಿತಾ ಇವರು ಶಿವಮೊಗ್ಗ ಜಿಲ್ಲೆಯ ಸಾಗರದ ‘ನೀನಾಸಂ’ ರಂಗಶಿಕ್ಷಣ ತರಬೇತಿಗೆ ಆಯ್ಕೆಯಾಗಿದ್ದಾರೆ. ಪ್ರತಿಷ್ಠಿತ ನೀನಾಸಂಗೆ ಆಯ್ಕೆ ಆಗಬೇಕೆಂಬುದು ಪ್ರತಿಯೊಬ್ಬ ರಂಗಭೂಮಿ ಕಲಾವಿದನ ಕನಸಾಗಿರುತ್ತದೆ. ಆ ನಿಟ್ಟಿನಲ್ಲಿ ಅಷ್ಟೇ ಶ್ರದ್ದೆ ಮತ್ತು ಪರಿಶ್ರಮದ ಅಗತ್ಯತೆ ಇದ್ದು, ಈಗಾಗಲೇ ಸಾವಿರಾರು ಕಲಾವಿದರು ಇಲ್ಲಿ ತರಬೇತಿ ಪಡೆದು ಉತ್ತಮ ಕಲಾವಿದರಾಗಿ ಹೊರಹೊಮ್ಮಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 2020ರಲ್ಲಿ ‘ಸಾಹೇಬ್ರು ‘ಸಾಹೇಬ್ರು ಬಂದವೇ’ ನಾಟಕವನ್ನು ರಾಜ್ಯದ ಖ್ಯಾತ ರಂಗಭೂಮಿ ನಿರ್ದೆಶಕರಾದ ಡಾ. ಜೀವನ್ ರಾಂ ಸುಳ್ಯ ಇವರ ನಿರ್ದೇಶನದಲ್ಲಿ ಸಿದ್ಧಪಡಿಸಲಾಗಿತ್ತು. ರಾಜ್ಯಾದ್ಯಂತ ಸುಮಾರು 20 ಪ್ರದರ್ಶನಗಳನ್ನು ನೀಡಿದ ಈ ನಾಟಕ ರಂಗಭೂಮಿ ಪ್ರೇಕ್ಷಕರ ಮನ ಗೆದ್ದಿತ್ತು. ಇದರಲ್ಲಿ ಅಭಿನಯಿಸಿದ ಎಲ್ಲರೂ ರಂಗಭೂಮಿಗೆ ಹೊಸದಾಗಿ ಪರಿಚಯಗೊಂಡ ಕಲಾವಿದರೇ ಆಗಿದ್ದರು. ಇದರಲ್ಲಿ ಕಲ್ಮಕಾರಿನ ಪ್ರತಿಭೆ ಮಮತಾ ಕಳೆದ ಬಾರಿಯ ನೀನಾಸಂ ತರಬೇತಿಗೆ ಆಯ್ಕೆಯಾಗಿದ್ದು, ಇದೇ ‘ಸಾಹೇಬ್ರು ಬಂದವೇ’ ನಾಟಕದಲ್ಲಿ ಮೋನಿಕಾ ಪಾತ್ರ ಮಾಡುತ್ತಿದ್ದ ಕೇರಳ ರಾಜ್ಯದ ಕಾಸರಗೋಡಿನ…

Read More

ಕಾಸರಗೋಡು : ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸುವ ಈ ವರ್ಷದ ಯಕ್ಷಗಾನ ತರಗತಿಯ ಉದ್ಘಾಟನಾ ಸಮಾರಂಭವು ದಿನಾಂಕ 06-07-2024ರಂದು ಸಂಜೆ ಘಂಟೆ 5-00ಕ್ಕೆ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ನಡೆಯಲಿದೆ. ಪ್ರತೀ ಶನಿವಾರ ಸಂಜೆ ಘಂಟೆ 5-00 ರಿಂದ ಹಿಮ್ಮೇಳ ತರಗತಿ ಮತ್ತು ಘಂಟೆ 6-00 ರಿಂದ ನಾಟ್ಯ ತರಗತಿಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ 9496297055 ಅಥವಾ 8089882831 ಸಂಖ್ಯೆಯನ್ನು ಸಂಪರ್ಕಿಸಬಹುದು.

Read More