Subscribe to Updates
Get the latest creative news from FooBar about art, design and business.
Author: roovari
ಕಾಸರಗೋಡು : ಗಡಿನಾಡು ಕಾಸರಗೋಡಿನ ಸಿರಿಬಾಗಿಲಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ನಡೆದ ನಾಲ್ಕು ದಿನಗಳ ಸಾಂಸ್ಕೃತಿಕ ಉತ್ಸವ ‘ಸಿರಿಬಾಗಿಲು ಯಕ್ಷವೈಭವ’ವು ದಿನಾಂಕ 20 ಜುಲೈ 2024ರಂದು ಸಂಪನ್ನಗೊಂಡಿತು. ಸಮಾರೋಪ ಸಮಾರಂಭದಲ್ಲಿ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಮತ್ತು ಉಪ್ಪಳ ಕೊಂಡೆಯೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ಯಶಸ್ವಿಯಾಗಿ ನಡೆಯಿತು. “ಸಿರಿಬಾಗಿಲಿನಲ್ಲಿ ನಡೆದ ‘ಸಿರಿಬಾಗಿಲು ಯಕ್ಷವೈಭವ’ ಯಕ್ಷಲೋಕವೇ ಅಚ್ಚರಿಗೊಳ್ಳುವಂತೆ 25 ತಂಡಗಳು ಭಾಗವಹಿಸಿದ್ದು, ಕಾಸರಗೋಡಿನ ಚರಿತ್ರೆಯಲ್ಲಿ ಪ್ರಥಮ. ಈ ಹಿಂದೆ ಹಲವು ಕಡೆಗಳಲ್ಲಿ ಸೀಮಿತ ತಂಡಗಳ ಯಕ್ಷಗಾನ ಸ್ಪರ್ಧೆ ನಡೆದಿರುತ್ತದೆ. ಆದರೆ ಇದು ಸ್ಪರ್ಧೆಯಲ್ಲ. ಅಲ್ಲದೆ ಹವ್ಯಾಸಿ ವಲಯದ ಕಲಾವಿದರು, ಯಕ್ಷಗಾನ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿದ ಪ್ರತಿಷ್ಠಾನದ ಯೋಜನೆ, ನಿಜವಾಗಿ ಮೆಚ್ಚುವಂಥದ್ದು, ಈ ಪ್ರತಿಷ್ಠಾನ ಇನ್ನೂ ಮುಂದೆ ಇಂತಹ ಚಟುವಟಿಕೆ ನಡೆಸಿ ಯಕ್ಷಗಾನ ಬೆಳೆದು ಲೋಕ ಪ್ರಸಿದ್ಧಿ ಪಡೆದು ಮುಂದಿನ ಪೀಳಿಗೆಗೆ ಹಸ್ತಾಂತರವಾಗಲಿ” ಎಂದು ಎಡನೀರು…
ಕೊಪ್ಪಳ :ಶಕ್ತಿ ಶಾರದೆಯ ಮೇಳ ಭಾಗ್ಯನಗರ ಸಂಸ್ಥೆಯು ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯ, ಸಾಂಸ್ಕೃತಿಕ, ಕಲಾ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ (ರಿ.) ಕೊಪ್ಪಳ ಇವರ ಸಹಯೋಗದಲ್ಲಿ ಆಯೋಜಿಸಿದ ಡಾ. ಸತ್ಯಾನಂದ ಪಾತ್ರೋಟ ಇವರ ಆತ್ಮಕಥನ ‘ಜಾಲಿ ಮರದಲ್ಲೊಂದು ಜಾಜಿ ಮಲ್ಲಿಗೆ’ ಕೃತಿಯ ಲೋಕಾರ್ಪಣಾ ಸಮಾರಂಭವು 28 ಜುಲೈ 2024ರಂದು ಕೊಪ್ಪಳದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆಯಿತು. ಡಿ. ಎಂ. ಬಡಿಗೇರ ಇವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕವಿಗಳಾದ ಶ್ರೀಮತಿ ಮಾಲಾ ಬಡಿಗೇರ ಕೃತಿ ಲೋಕಾರ್ಪಣೆ ಗೊಳಿಸಿದರು. ಹುಬ್ಬಳ್ಳಿ ಸರಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ವೈ. ಎಂ. ಭಜಂತ್ರಿ ಕೃತಿ ಕುರಿತು ಮಾತನಾಡಿದರು. ಕವಿ ನುಡಿಯನ್ನು ಡಾ. ಸತ್ಯಾನಂದ ಪಾತ್ರೋಟ ನಡೆಸಿಕೊಟ್ಟರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿಗಳಾದ ಎ. ಎಂ. ಮದರಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಡಾ. ಪಾತ್ರೋಟ್ ಅವರಿಗೆ ಅವರ ಸ್ನೇಹಿತರು ಹಾಗೂ ಅಭಿಮಾನಿಗಳು ವಿಶೇಷ ಪ್ರೀತಿ-ವಿಶ್ವಾಸದಿಂದ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಅಂಚೆ…
ಸುಳ್ಯ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕ ಮತ್ತು ಕ.ಸಾ.ಪ. ಸುಳ್ಯ ಹೋಬಳಿ ಘಟಕ ಇದರ ಆಶ್ರಯದಲ್ಲಿ ಮುಂಗಾರು ಕವಿಗೋಷ್ಠಿ 2024 ‘ವರ್ಷ ವೈಭವ’ವನ್ನು ದಿನಾಂಕ 3 ಆಗಸ್ಟ್ 2024ರಂದು ಅಪರಾಹ್ನ 2-00 ಗಂಟೆಗೆ ಸುಳ್ಯ ಅಂಬೆಟಡ್ಕದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕ.ಸಾ.ಪ. ಸುಳ್ಯ ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲು ಇವರ ಅಧ್ಯಕ್ಷತೆಯಲ್ಲಿ ಸಾಹಿತಿಗಳಾದ ಶ್ರೀ ಕುಮಾರಸ್ವಾಮಿ ತೆಕ್ಕುಂಜ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಸುಳ್ಯದ ಎನ್.ಎಂ.ಸಿ. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಸಂಜೀವ ಕುದ್ಪಾಜೆ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.
ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಇದರ ‘ಸಿನ್ಸ್ 1999 ಶ್ವೇತಯಾನ-47’ ಕಾರ್ಯಕ್ರಮದ ಅಂಗವಾಗಿ ಗುರುಪರಂಪರಾ ಸಂಗೀತ ಸಭಾ ಕುಂದಾಪುರ ಇದರ 8ನೇ ವರ್ಷದ ‘ಗುರುಪೂರ್ಣಿಮಾ ಸಂಗೀತೋಪಾಸನಾ’ ಕಾರ್ಯಕ್ರಮ 28 ಜುಲೈ2024 ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಗುರು ದಂಪತಿಗಳಾದ ಸತೀಶ್ ಭಟ್ ಮಾಳಕೊಪ್ಪ ಹಾಗೂ ಪ್ರತಿಮಾ ಭಟ್ ಇವರನ್ನು ಗೌರವಿಸಿದ ಯಕ್ಷಗಾನದ ಪ್ರಸಿದ್ಧ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ ಮಾತನ್ನಾಡಿ “ನಮ್ಮ ದೇಶದ ಮಣ್ಣಿನ ವಿಶಿಷ್ಟ ಪರಂಪರೆ ಎಂದರೆ ಗುರುವನ್ನು ಗೌರವಿಸುವ ಶಿಷ್ಟ ಪರಂಪರೆ. ಗುರುವಿನಿಂದ ಉಪಕೃತರಾದಾಗ ಅವರಿಗೆ ಕೃತಜ್ಞತಾ ಪೂರ್ವಕವಾಗಿ ಗೌರವವನ್ನು ಸಲ್ಲಿಸಲೇ ಬೇಕು. ಇದು ಸನಾತನ ಸಂಸ್ಕೃತಿ. ಭೂಮಿ ಪೂಜೆಯೋ, ದೇವರ ಪೂಜೆಯೋ, ಗುರುಪೂಜೆಯೋ, ಗೋಪೂಜೆಯೋ, ಆಯುಧ ಪೂಜೆಯೋ ಹೀಗೆ ಹಲವಾರು ವಿಧದ ಪೂಜೆ ಯಾಕೆಂದರೆ ಅದು ಕೃತಜ್ಞತಾ ಆಂತರಂಗಿಕ ಭಾವ. ಪ್ರಪಂಚದಲ್ಲಿ ಮೊದಲು ಹುಟ್ಟಿದ್ದೇ ಓಂಕಾರನಾದ. ಪ್ರಪಂಚದ ಸರ್ವವೂ ನಾದಕ್ಕೆ ಸೋಲುತ್ತದೆ. ಮಾತೃ ಸ್ಥಾನದಲ್ಲಿ ಸಂಗೀತ ನಿಲ್ಲುತ್ತದೆ. ಸಂಗೀತವೇ ಪ್ರಪಂಚದಲ್ಲಿ ಮೊದಲು ಹುಟ್ಟಿದ್ದು. ಸಂಗೀತ,…
ಚೊಕ್ಕಾಡಿ : ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ.) ಮಂಗಳೂರು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕ ಮತ್ತು ಜೇಸಿಐ ಬೆಳ್ಳಾರೆ ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀ ರಾಮಕೃಷ್ಣ ಭಟ್ ಚೊಕ್ಕಾಡಿ 60 ಅಭಿನಂದನ ಸಮಾರಂಭ ಮತ್ತು ‘ಅಕ್ಷರ ತೇರಿನ ಸಾರಥಿ’ ಅಭಿನಂದನ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 04 ಆಗಸ್ಟ್ 2024ರಂದು ಅಪರಾಹ್ನ 2-30 ಗಂಟೆಗೆ ಚೊಕ್ಕಾಡಿ ಶ್ರೀ ರಾಮ ದೇವಾಲಯದ ‘ದೇಸೀ ಭವನ’ದಲ್ಲಿ ಹಮ್ಮಿಕೊಳ್ಳಲಾಗಿದೆ. ಅಭಿನಂದನ ಸಮಿತಿಯ ಅಧ್ಯಕ್ಷರಾದ ಶ್ರೀ ಆನೆಕಾರ ಗಣಪಯ್ಯ ಇವರ ಅಧ್ಯಕ್ಷತೆಯಲ್ಲಿ ಖ್ಯಾತ ಸಾಹಿತಿಗಳಾದ ಶ್ರೀ ಸುಬ್ರಾಯ ಚೊಕ್ಕಾಡಿಯವರು ಅಭಿನಂದನ ಗ್ರಂಥ ಬಿಡುಗಡೆ ಮಾಡಲಿರುವರು. ಲೇಖಕರಾದ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಇವರು ಅಭಿನಂದನಾ ಭಾಷಣ ಮಾಡಲಿದ್ದು, ಕ.ಸಾ.ಪ. ಸುಳ್ಯ ಇದರ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲು ಮತ್ತು ಜೇಸಿಐ ಬೆಳ್ಳಾರೆ ಇದರ ಅಧ್ಯಕ್ಷರಾದ ಶ್ರೀ ಜಗದೀಶ್ ರೈ ಪೆರುವಾಜೆ ಇವರು ಉಪಸ್ಥಿತರಿರುವರು.
ಮೈಸೂರು : ಕುವೆಂಪುನಗರದ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ‘ಧ್ವನಿ ಫೌಂಡೇಶನ್’ ಆಯೋಜಿಸಿದ್ದ ಸರೋದ್ ವಾದಕ ದಿ. ರಾಜೀವ ತಾರಾನಾಥ ಹಾಗೂ ರಂಗಕರ್ಮಿ ದಿ. ನ. ರತ್ನ ಗೌರವ ಸ್ಮರಣೆ ಕಾರ್ಯಕ್ರಮವನ್ನು ದಿನಾಂಕ 24 ಜುಲೈ 2024ರಂದು ಗಾಯಕಿ ಎಚ್.ಆರ್. ಲೀಲಾವತಿ ಉದ್ಘಾಟಿಸಿದರು. ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ “ಪಂಡಿತ್ ರಾಜೀವ್ ತಾರಾನಾಥ, ನ.ರತ್ನ ನಾಡಿನ ಪ್ರತಿಭಾವಂತರು, ಕನ್ನಡ ಬೌದ್ಧಿಕ ಲೋಕಕ್ಕೆ ಇಬ್ಬರು ಮಹನೀಯರ ಕೊಡುಗೆ ಅನನ್ಯ. ಕನ್ನಡ ಇತಿಹಾಸದಲ್ಲಿ ಉಳಿಯುವ ಶಾಶ್ವತ ಮೌಲ್ಯಗಳಾಗಿದ್ದಾರೆ. ವಾಚಿಕಾಭಿನಯದಲ್ಲಿ ಮೈಸೂರಿನ ಕಲಾವಿದರನ್ನು ಮೀರಿಸಲು ಕರ್ನಾಟಕದ ಇತರೆಡೆಯ ಕಲಾವಿದರಿಗೆ ಆಗುವುದಿಲ್ಲ. ಅದು ನ. ರತ್ನ ಅವರು ಮೈಸೂರು ಭಾಗದವರಿಗೆ ನೀಡಿದ ಬಳುವಳಿ. ಬೆಂಗಳೂರಿನ ನಾಟಕಗಳು ಕ್ರಿಯಾ ಪ್ರಧಾನವಾಗಿದ್ದರೆ, ಮೈಸೂರು ರಂಗತಂಡಗಳು ಆಡುವ ನಾಟಕಗಳು ವಾಚಿಕ ಪ್ರಧಾನವಾಗಿವೆ. ವಾಚಿಕ ಪ್ರಧಾನ ನಾಟಕವನ್ನು ಕನ್ನಡಕ್ಕೆ ಕೊಟ್ಟವರು ನ. ರತ್ನ ಅವರ ‘ಸಮತೆಂತೋ’ (ಸರಸ್ವತಿಪುರಂ ಮಧ್ಯದ ತೆಂಗಿನ ತೋಪು) ರಂಗತಂಡವಾಗಿದೆ.…
ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇದರ 135ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ‘ಸಿರಿಗನ್ನಡಂ ಗೆಲ್ಗೆ ರಾ. ಹ. ದೇಶಪಾಂಡೆ’ ಪ್ರಶಸ್ತಿ ಎಂದೇ ಪ್ರಸಿದ್ಧವಾಗಿರುವ ‘ಸಿರಿಗನ್ನಡಂ ಗೆಲ್ಗೆ ರಾಮಚಂದ್ರ ಹಣಮಂತ ರಾವ ದೇಶಪಾಂಡೆ ಪ್ರಶಸ್ತಿ’ ಪ್ರದಾನ ಸಮಾರಂಭವು 27 ಜುಲೈ2024ರಂದು ಧಾರವಾಡದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನಡೆಯಿತು. ಪ್ರಸಕ್ತ ಸಾಲಿನ ಪ್ರಶಸ್ತಿ ಸ್ವೀಕರಿಸಿದ ಡಾ. ನಾ. ಮೊಗಸಾಲೆ ಮಾತನಾಡಿ “ಕರ್ನಾಟಕ ವಿದ್ಯಾವರ್ಧಕ ಸಂಘ ರಾಜ್ಯದ ಎಲ್ಲಾ ಸಂಸ್ಥೆಗಳಿಗೆ ತವರು ಮನೆ. ಸಂಘ ಸ್ಥಾಪನೆ ಮಾಡಿದ ರಾ. ಹ. ದೇಶಪಾಂಡೆಯವರ ಕಾರ್ಯ ಮಾದರಿಯಾಗಿದೆ. ಡಾ. ಪಾಟೀಲ ಪುಟ್ಟಪ್ಪ ಹಾಗೂ ಹಾ. ಮಾ. ನಾಯಕ ಮಾತನಾಡಿದರೆ ಸರಕಾರ ಎಚ್ಚೆತ್ತುಕೊಳ್ಳುತ್ತಿತ್ತು. ಕನ್ನಡ ಶಾಲೆಗಳನ್ನು ಉಳಿಸುವ ಕೆಲಸವನ್ನು ಸರಕಾರಗಳು ಮಾಡಬೇಕು. ಕಾಸರಗೋಡಿನ ಜನತೆಯ ಬಗ್ಗೆ ಪಾಟೀಲ ಪುಟ್ಟಪ್ಪನವರಿಗೆ ವಿಶೇಷ ಕಾಳಜಿ ಇತ್ತು. ಕರಾವಳಿ ಭಾಗದಲ್ಲಿ ಕನ್ನಡ ರಕ್ಷಣೆ ಮಾಡುವ ಕೆಲಸವನ್ನು ನನ್ನ ಉಸಿರು ಇರುವ ತನಕ ಮಾಡುತ್ತೇನೆ. ಕನ್ನಡ ನಾಡು- ನುಡಿ ರಕ್ಷಣೆಗೆ…
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು 20 ವರ್ಷ ಪೂರೈಸಿದ ‘ಪಿಂಗಾರ’ ಸಹಯೋಗದಲ್ಲಿ ‘ಚಾರೊಳಿ’ 1000ದ ಸಂಭ್ರಮ ಕಾರ್ಯಕ್ರಮವು 27ಹಾಗೂ 28ಜುಲೈ 2024ರಂದು ಮಂಗಳೂರಿನ ಬಜ್ಜೋಡಿಯ ಸಂದೇಶ ಸಭಾಂಗಣದಲ್ಲಿ ನಡೆಯಿತು. ಪಿಂಗಾರ 20 ವರ್ಷಗಳ ವಿಶೇಷ ಸಂಚಿಕೆಯನ್ನು ಅನಾವರಣಗೊಳಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದ ಎಂ. ಎಲ್. ಸಿ. ಐವನ್ ಡಿ’ಸೋಜ ಇವರು ಪಿಂಗಾರ ಪತ್ರಿಕೆಯ ಪ್ರಧಾನ ಸಂಪಾದಕ ರೇಮಂಡ್ ಡಿ’ಕುನ್ಹಾ ಅವರೊಂದಿಗೆ ತಮ್ಮ ಅಚ್ಚುಮೆಚ್ಚಿನ ನೆನಪುಗಳನ್ನು ಹಂಚಿಕೊಂಡರು ಮತ್ತು ಮುಂದಿನ ಪೀಳಿಗೆಗೆ ಪರಂಪರೆಯನ್ನು ರವಾನಿಸುವ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಭಯಚಂದ್ರ ಜೈನ್ “ನೈತಿಕ ವರದಿಗಾರಿಕೆ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆಗೆ ‘ಪಿಂಗಾರ’ ಪತ್ರಿಕೆಯ ಬದ್ಧತೆ ಶ್ಲಾಘಿನೀಯ. ಕಳೆದ ಎರಡು ದಶಕಗಳಲ್ಲಿ ‘ಪಿಂಗಾರ’ ಪತ್ರಿಕೆಯು ನಿರಂತರವಾಗಿ ಉತ್ತಮ ಗುಣಮಟ್ಟದ ಪತ್ರಿಕೋದ್ಯಮವನ್ನು ನೀಡಿದ್ದಾರೆ. ಧನಾತ್ಮಕ ಸುದ್ದಿಗಳು ಮತ್ತು ಕಥೆಗಳನ್ನು ಪ್ರೇರೇಪಿಸುವ ಮತ್ತು ಉನ್ನತಿಗೇರಿಸುವ ವಿಷಯಗಳನ್ನು ಕೇಂದ್ರೀಕರಿಸಿದ್ದಾರೆ.” ಎಂದರು. ಆಚರಣೆಯ ಅಂಗವಾಗಿ ‘ಪಿಂಗಾರ’ ವತಿಯಿಂದ ಶ್ರೀ ಅನ್ನಪೂರ್ಣೇಶ್ವರಿ ಅಂಧರ ಕಲಾ…
ಕಾಸರಗೋಡು : ಪುತ್ತೂರು ಮುರದ ಸತ್ಯಶಾಂತ ಪ್ರತಿಷ್ಠಾನದ ಆಶ್ರಯದಲ್ಲಿ ನೀಡಲಾಗುವ ‘ತಲೆಂಗಳ ಶಂಭಟ್ಟ ಪಾರ್ವತಿ ಭಾಗವತ ಪ್ರಶಸ್ತಿ’ ಪ್ರದಾನ ಸಮಾರಂಭವು 29 ಜುಲೈ2024ರ ಸೋಮವಾರದಂದು ಕಾಸರಗೋಡಿನ ಎಡನೀರು ಮಠದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದ ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ “ನಾಡಿನ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸಬೇಕು. ಇದರಿಂದ ಹೊಸ ಕಲಾವಿದರಿಗೆ ಹಿರಿಯ ಕಲಾವಿದರ ಪರಿಚಯ ಮತ್ತು ಅವರ ಆದರ್ಶಗಳನ್ನು ಅರಿಯಲು ಅವಕಾಶವಾಗುತ್ತದೆ.” ಎಂದು ಹೇಳಿದರು. ರಾಜೇಂದ್ರ ಕಲ್ಲೂರಾಯರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟ್ರಮಣ ಭಟ್ಟ ಇವರಿಗೆ ‘ಶಂಭಟ್ಟ ಪಾರ್ವತಿ ಭಾಗವತ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರ ಕುರಿತು ಪನೆಯಾಲ ರಾಮಚಂದ್ರ ಭಟ್ ಮಾತನಾಡಿದರು. ಉದಯಶಂಕರ ಭಟ್ ಸನ್ಮಾನ ಪತ್ರ ವಾಚಿಸಿದರು. ಯಕ್ಷಗಾನ ಕಲಾವಿದರಾದ ಭಾಸ್ಕರ ಭಾರ್ಯ, ಪಿ. ಜಿ. ಜಗನ್ನಿವಾಸ ರಾವ್, ಜ್ಯೋತಿಷಿ ಕೃಷ್ಣಮೂರ್ತಿ ಪುದುಕೋಳಿ, ಡಾ. ವಿಷ್ಣುಪ್ರಸಾದ್ ಬರೆಕರೆ, ಸತ್ಯಾತ್ಮ ಕುಂಟಿನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.…
ಬೆಂಗಳೂರು : ಕರ್ನಾಟಕ ಪ್ರಹಸನ ಪಿತಾಮಹ ಹಾಗೂ ಹಿರಿಯ ಸಾಹಿತಿಗಳಾದ ತಂಜಾವೂರು ಪರಮಶಿವ ಕೈಲಾಸಂ ಇವರ 140ನೆಯ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 29 ಜುಲೈ 2024ರಂದು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ““ಕನ್ನಡಕ್ಕೊಬ್ಬರೇ ಕೈಲಾಸಂ” ಎಂಬುದು ಜನಜನಿತ. ಒಮ್ಮೆ ಕೈಲಾಸಂ ಅವರ ಆತ್ಮೀಯರು ಹಾಗೂ ಅಭಿಮಾನಿಯಾಗಿದ್ದ ಅ. ನ. ಕೃ. ಅವರು ತಮ್ಮದೊಂದು ಲೇಖನದಲ್ಲಿ ಕೈಲಾಸಂರನ್ನು ಕುರಿತು “ಅವರು ಜಗತ್ತಿನ ನಾಟಕ ಸಾಹಿತ್ಯದಲ್ಲಿ ಶ್ರೇಷ್ಠ ವಿಡಂಬನಕಾರರ ಪೈಕಿ ಆರನೆಯ ಸ್ಥಾನದಲ್ಲಿದ್ದಾರೆ.” ಎಂದು ಹೇಳಿ, ಇದಕ್ಕೆ ಉದಾಹರಣೆಯಾಗಿ ಅವರು ಕೈಲಾಸಂ ಅವರ ‘ಟೊಳ್ಳುಗಟ್ಟಿ’, ‘ತಾಳೀ ಕಟ್ಟೋಕ್ಕೂಲೀನೇ?’, ‘ಬಂಡ್ವಾಳ್ವಿಲ್ಲದ ಬಡಾಯಿ’, ‘ಹೋಂರೂಲು’ ನಾಟಕಗಳ ಹಲವಾರು ಸನ್ನಿವೇಶಗಳನ್ನು ಉದ್ದರಿಸುತ್ತಿದ್ದರು. ಕೈಲಾಸಂ ಅವರು ಹುಟ್ಟಿದ್ದು 1884ರ ಜುಲೈ 29ರಂದು. ಭೂಗರ್ಭ ಶಾಸ್ತ್ರದ ಉನ್ನತ ಪದವಿಗಾಗಿ ಲಂಡನ್ನಿನ ರಾಯಲ್ ಕಾಲೇಜಿಗೆ ಸೇರಿ ಅಲ್ಲಿ ಪ್ರಶಸ್ತಿ…