Author: roovari

ಉಡುಪಿ : ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯಲ್ಲಿ ರಂಗಭೂಮಿ (ರಿ.) ಉಡುಪಿ ಇವರು ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಸಹಯೋಗದಲ್ಲಿ ನೀಡಲಿರುವ ‘ಪುಸ್ತಕ ಪ್ರಶಸ್ತಿ’ಗೆ ಸ್ವತಂತ್ರ ನಾಟಕ ಕೃತಿಗಳನ್ನು ಆಹ್ವಾನಿಸಲಾಗಿದೆ. ಆದರ್ಶ ಆಧ್ಯಾಪಕ, ಕವಿ, ಲೇಖಕ, ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ, ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯಲ್ಲಿ ರಂಗಭೂಮಿ (ರಿ.) ಉಡುಪಿಯು, ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಸಹಯೋಗದಲ್ಲಿ ನಾಟಕರಂಗಕ್ಕೆ ಪ್ರಸ್ತುತವಾದ ಪುಸ್ತಕ ಪ್ರಶಸ್ತಿಯೊಂದನ್ನು ಕಳೆದ (2023) ವರ್ಷದಿಂದ ಆರಂಭಿಸಿತ್ತು. ಈ ಪ್ರಶಸ್ತಿಯು ರಂಗಭೂಮಿಗೆ ಪ್ರಸ್ತುತವಾದ, ಪರಿಶೀಲನ ಅವಧಿಯಲ್ಲಿ ಪ್ರಕಟವಾದ ನಾಟಕೇತರ ಸಾಹಿತ್ಯಕೃತಿ ಅಥವಾ ಅತ್ಯುತ್ತಮ ನಾಟಕ ಕೃತಿಯನ್ನು ಪರ್ಯಾಯ ವರ್ಷಗಳಲ್ಲಿ ಸ್ಪರ್ಧೆಯ ಮೂಲಕ ಗುರುತಿಸಿ ಪುರಸ್ಕರಿಸುವ ಮೂಲಕ ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯನ್ನು ನಿರಂತರವಾಗಿ ನಡೆಸುವ ಯೋಜನೆಯಾಗಿದೆ. ‘ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದ ಉಡುಪಿ ರಂಗಭೂಮಿ ಪುರಸ್ಕಾರ’ ಎಂದು ಕರೆಯಲ್ಪಡುವ ಈ ‘ಪುಸ್ತಕ ಪ್ರಶಸ್ತಿ’ಯು ರಂಗಭೂಮಿ (ರಿ.) ಉಡುಪಿಯು ಆಯೋಜಿಸುವ ಸಾರ್ವಜನಿಕ ಸಮಾರಂಭದಲ್ಲಿ ಪ್ರದಾನಗೊಳ್ಳಲಿದ್ದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಹದಿನೈದು…

Read More

ಜಗನ್ನಾಥ ಗಾಣಿಗ ಸಿಪಾಯಿ ಮನೆ ಇವರು ರತ್ನ ಗಾಣಿಗ ಹಾಗೂ ಅಂತ ಗಾಣಿಗ ಇವರ ಸುಪುತ್ರರಾಗಿ 12-02-1979ರಂದು ಜನಿಸಿದರು. ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸದ ನಂತರ ನಮ್ಮ ಭೂಮಿ ಎಂಬ ಎನ್.ಜಿ.ಒ. ಸಂಸ್ಥೆ ಇವರ ಕಾರ್ಯಕ್ಷೇತ್ರ. ಈ ಸಂಸ್ಥೆಯೇ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ಪ್ರಸಂಗಕರ್ತರಾಗಿ, ಭಾಗವತರಾಗಿ, ಯಕ್ಷ ಗುರುಗಳಾಗಿ ಅನೇಕ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುವ ಶ್ರೀಯುತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರ ಯಕ್ಷಗಾನ ಗುರುಗಳು. ರಂಗಕ್ಕೆ ಹೋಗುವ ಮೊದಲು ಪಾತ್ರದ ಬಗ್ಗೆ, ಪ್ರಸಂಗದ ಬಗ್ಗೆ ಅಧ್ಯಯನ ಮಾಡಿಕೊಂಡು, ಹಿರಿಯ, ಅನುಭವಿ ಕಲಾವಿದರಲ್ಲಿ ಮಾರ್ಗದರ್ಶನ ಪಡೆದು, ಸಾಂದರ್ಭಿಕವಾಗಿ, ಸಕಾಲಿಕವಾಗಿ, ಸ್ವಂತ ನಿಲುವನ್ನು ಸೇರಿಸಿಕೊಂಡು ರಂಗವನ್ನು ಪ್ರವೇಶಿಸುವ ಇವರ ಪೂರ್ವ ಭಾವಿ ತಯಾರಿ ಶ್ಲಾಘನೀಯ. ಕಂಸ ವಧೆ, ಶ್ರೀ ದೇವಿ ಮಹಾತ್ಮೆ, ರತ್ನಾವತಿ ಕಲ್ಯಾಣ, ಸುಂದೋಪಸುಂದ ಕಾಳಗ, ಶ್ವೇತ ಕುಮಾರ ಚರಿತ್ರೆ, ಜಾಂಬವತಿ ಕಲ್ಯಾಣ ಇವರ ನೆಚ್ಚಿನ ಪ್ರಸಂಗಗಳಾದರೆ ಕಂಸ, ಜಾಂಬವ, ದುರ್ಜಯ, ಭಧ್ರಸೇನ, ಮಧು, ಕೈಟಭ, ಚಂಡ, ಮುಂಡ, ಅರ್ಜುನ ಇವು ನೆಚ್ಚಿನ…

Read More

ಮಂಗಳೂರು : ಉರ್ವದಲ್ಲಿರುವ ನಾಟ್ಯಾರಾಧನಾ ಕಲಾ ಕೇಂದ್ರ (ರಿ.) ಇದರ ತ್ರಿಂಶೋತ್ಸವ ಸಂಭ್ರಮದ ಅಂಗವಾಗಿ ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ನಾಟ್ಯಾರಾಧನಾ ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿ ಇದರ ಸಹಯೋಗದೊಂದಿಗೆ ಅರ್ಪಿಸುವ ಸರಣಿ ನೃತ್ಯ ಕಾರ್ಯಕ್ರಮ ‘ನೃತ್ಯಾಮೃತ -10’ದಲ್ಲಿ ‘ಭಾವ ನವನವೀನ’ ದಿನಾಂಕ 19-10-2024ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ. ಅಡಿಟೋರಿಯಂನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಬೋಳೂರು ದ್ರಾವಿಡ ಸಮಾಜೋದ್ಧಾರಕ ಸಂಘದ ಅಧ್ಯಕ್ಷರಾದ ಶ್ರೀ ಬಿ. ಸುಮಂತ ಕುಮಾರ್ ಇವರು ಉದ್ಘಾಟಿಸಲಿದ್ದು, ಮಾಜಿ ಶಾಸಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. 5-50 ಗಂಟೆಗೆ ನಡೆಯಲಿರುವ ಮೇಳ ಪ್ರಾಪ್ತಿಗೆ ನಟುವಾಂಗ ಮತ್ತು ನೃತ್ಯ ನಿರ್ದೇಶನ ಗುರು ಸುಮಂಗಲಾ ರತ್ನಾಕರ್ ರಾವ್ ಹಾಗೂ ಹಾಡುಗಾರಿಕೆ ವಿದ್ವಾನ್ ರೋಹಿತ್ ಭಟ್ ಉಪ್ಪೂರ್. ಇವರಿಗೆ ಬೆಂಗಳೂರಿನ ವಿದ್ವಾನ್ ಕಾರ್ತಿಕ್ ವೈಧಾತ್ರಿ ಮೃದಂಗ ಮತ್ತು ವಿದ್ವಾನ್ ರಾಕೇಶ್ ದತ್ತ್ ಕೊಳಲಿನಲ್ಲಿ ಸಹಕರಿಸಲಿರುವರು. ಬಳಿಕ ವಿದುಷಿ ಸುಮಂಗಲಾ ರತ್ನಾಕರ್ ರಾವ್, ವಿದುಷಿ ಅನು…

Read More

ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕರ್ನಾಟಕ ಸಂಭ್ರಮ-50ರ ಅಭಿಯಾನದ ಅಂಗವಾಗಿ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳಲ್ಲಿ ವಿಭಾಗವಾರು ‘ಯುವಕವಿ ಗೋಷ್ಠಿ’ಗಳನ್ನು ಆಯೋಜಿಸಲಾಗಿದ್ದು, ಆಸಕ್ತ 20ರಿಂದ 40ವರ್ಷ ವಯಸ್ಸಿನ ಯುವ ಕವಿಗಳಿಂದ ಕವಿತೆಗಳ ಆಹ್ವಾನಿಸಲಾಗಿದೆ. ರಾಜ್ಯದ ಎಲ್ಲಾ ಭಾಗದ ಆಸಕ್ತ ಕವಿಗಳು ಕನಿಷ್ಠ 3 ಕವಿತೆಗಳನ್ನು ಕಳುಹಿಸಿಕೊಡಬಹುದು. ಕವಿತೆಗಳನ್ನು ಕಳುಹಿಸಲು 30 ಅಕ್ಟೋಬರ್ 2024 ಕೊನೆಯ ದಿನ. ಆಸಕ್ತ ಕವಿಗಳು ಕವಿತೆಗಳನ್ನು ಸಲ್ಲಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಜಾಲತಾಣದಿಂದ ಮಾಹಿತಿ ಪಡೆದುಕೊಳ್ಳುವಂತೆ ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾ‌ರ್ ತಿಳಿಸಿದ್ದಾರೆ.

Read More

ಬೆಂಗಳೂರು : ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿಯ ವಿದ್ಯಾರ್ಥಿನಿ ಮಧುರಾ ಪ್ರಶಾಂತ್ ಇವರ ‘ನೃತ್ಯಾರ್ಣವ’ ಕಲಾ ಶಾಲೆಯ ಉದ್ಘಾಟನಾ ಸಮಾರಂಭವು ದಿನಾಂಕ 07 ಅಕ್ಟೋಬರ್ 2024ರಂದು ಬೆಂಗಳೂರು ಸಂಜಯ ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಲಾ ಅಕಾಡಮಿಯ ಸಂಸ್ಥಾಪಕಿ ಹಾಗೂ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್‌ ಮಾತನಾಡಿ “ರಾಜ್ಯದ ರಾಜಧಾನಿಯಲ್ಲಿ ನಮ್ಮ ಕಲಾ ತಂಡದ ವಿದ್ಯಾರ್ಥಿನಿ ಹಾಗೂ  ನನ್ನ ಶಿಷ್ಯೆ ಮಧುರಾ ಪ್ರಶಾಂತ್ ಭರತನಾಟ್ಯ ಶಾಸ್ತ್ರೀಯ ನೃತ್ಯದ ತರಗತಿಯನ್ನು ಆರಂಭಿಸಿರುವುದು ಸಂತಸದ ವಿಚಾರ. ಕಲೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ತರಗತಿ ಬಹಳ ಉತ್ತಮವಾಗಿ ಮೂಡಿ ಬರಲಿ.” ಎಂದು ಶುಭ ಹಾರೈಸಿದರು. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಬಿ. ಜಿ. ಅನಂತ ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಕೆ. ಬಿ. ಕಾಂತರಾಜ್ ಅತಿಥಿಯಾಗಿ ಭಾಗವಹಿಸಿದ್ದರು. ನೃತ್ಯಾರ್ಣವ ಕಲಾ ಶಾಲೆಯ ನೃತ್ಯ ಶಿಕ್ಷಕಿ ಮಧುರಾ ಪ್ರಶಾಂತ್ ಸ್ವಾಗತಿಸಿ, ವಿದುಷಿ ಶ್ರೇಯಾ ಭಟ್ ಕಾರ್ಯಕ್ರಮ ನಿರ್ವಹಿಸಿ, ಪ್ರಶಾಂತ್…

Read More

ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸಂಜೆ ಸಾಹಿತ್ಯ ಗ್ರಾಮದಲ್ಲಿ ದಿನಾಂಕ 10 ಅಕ್ಟೋಬರ್ 2024ರಂದು ‘ದಸರಾ ಕಥೆ-ಕಾವ್ಯ ಸಂಭ್ರಮ’ ಕಾರ್ಯಕ್ರಮ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಇವರು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮವನ್ನು ಕಥೆಗಾರ ಸದಾಶಿವ ಸೊರಟೂರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕುವೆಂಪು ವಿ.ವಿ. ಸಿಂಡಿಕೇಟ್ ಸದಸ್ಯರಾಗಿ ನೇಮಕವಾಗಿರುವ ಶ್ರೀ ಕೆ.ಪಿ. ಶ್ರೀಪಾಲ್ ಇವರನ್ನು ಅಭಿನಂದಿಸಲಾಯಿತು. ರೈತ ನಾಯಕರಾದ ಕೆ.ಟಿ. ಗಂಗಾಧರ, ಮಹಾದೇವಿ, ಡಿ. ಗಣೇಶ್, ಎಂ. ನವೀನ್ ಕುಮಾರ್, ಎಂ.ಎಂ. ಸ್ವಾಮಿ, ಕೃಷ್ಣಮೂರ್ತಿ ಹಿಳ್ಳೋಡಿ, ಧರ್ಮೋಜಿರಾವ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Read More

ಬೆಂಗಳೂರು : ಸಪ್ತಕ ಬೆಂಗಳೂರು ಅರ್ಪಿಸುವ ‘ವಾದನ ಸನ್ಮಾನ ಗಾಯನ’ ಕಾರ್ಯಕ್ರಮವನ್ನು ದಿನಾಂಕ 20 ಅಕ್ಟೋಬರ್ 2024ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂ ಕೆನರಾ ಯೂನಿಯನ್ ಇಲ್ಲಿ ಆಯೋಜಿಸಲಾಗಿದೆ. ಪುಣೆಯ ಪಂಡಿತ್ ಶೈಲೇಶ್ ಭಾಗವತ್ ಇವರಿಂದ ಶೆಹನಾಯಿ ವಾದನ ಮತ್ತು ಶ್ರೀಮತಿ ಸನಿಯ ಪತಂಕರ್ ಇವರಿಂದ ಹಾಡುಗಾರಿಕೆ ನಡೆಯಲಿದ್ದು, ಬೆಂಗಳೂರಿನ ಶ್ರೀ ವಿಕಾಸ್ ನರೆಗಲ್ ತಬಲಾ ಹಾಗೂ ಶಿರಸಿಯ ಶ್ರೀ ಭರತ್ ಹೆಗಡೆಯವರು ಹಾರ್ಮೋನಿಯಂನಲ್ಲಿ ಸಹಕರಿಸಲಿರುವರು. ಇದೇ ಸಂದರ್ಭದಲ್ಲಿ ಶ್ರೀ ಸುಬ್ಬರಾಜು ಉರ್ಸ್ ಇವರನ್ನು ಸನ್ಮಾನಿಸಲಾಗುವುದು.

Read More

ಸೋಮವಾರಪೇಟೆ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸೋಮವಾರಪೇಟೆ ಕ.ಸ.ಬಾ. ಹೋಬಳಿ ಘಟಕ ಕನ್ನಡ ಸಾಹಿತ್ಯ ಪರಿಷತ್ತು ಐಗೂರು ಕೇಂದ್ರದ ವತಿಯಿಂದ ಸೋಮವಾರಪೇಟೆ ಕ.ಸ.ಬಾ. ಹೋಬಳಿ ಘಟಕದ ನೂತನ ಕಚೇರಿಯು ದಿನಾಂಕ 9 ಅಕ್ಟೋಬರ್ 2024ರಂದು ಐಗೂರು ಗ್ರಾಮದಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೂತನ ಕಚೇರಿಯನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ “ಕನ್ನಡ ಸಾಹಿತ್ಯ ಬೆಳವಣಿಗೆಗಾಗಿ ಪಕ್ಷಾತೀತ, ಜಾತ್ಯಾತೀತವಾಗಿ ಹಾಗೂ ಸರ್ವ ಭಾಷಿಕರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಕೊಡಗು ಜಿಲ್ಲೆಯಲ್ಲಿ ಕೇವಲ 53 ಸದಸ್ಯರಿದ್ದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಂದು 3500 ಸದಸ್ಯರಿದ್ದಾರೆ. ಹತ್ತು ಸಾವಿರ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ. ಸದಸ್ಯತ್ವ ಆಂದೋಲನಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಸ್ತ್ರೀ ಶಕ್ತಿ ಮತ್ತು ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಸದಸ್ಯತ್ವ ಆಂದೋಲನ ಮಾಡಬೇಕು” ಎಂದು ಕರೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡಗು ಜಿಲ್ಲಾ…

Read More

ಮಂಗಳೂರು : ಅಸ್ತಿತ್ವ (ರಿ) ಮಂಗಳೂರು ಇದರ ವತಿಯಿಂದ ಹಾಗೂ ರಂಗ ಅಧ್ಯಯನ ಕೇಂದ್ರ ಮತ್ತು ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಇವರ ಜಂಟಿ ಸಹಭಾಗಿತ್ವದಲ್ಲಿ ‘ರಂಗಭೂಮಿ ಕಾರ್ಯಗಾರ’ವನ್ನು ನವೆಂಬರ್ ತಿಂಗಳಿನಲ್ಲಿ ಆಯೋಜಿಸುತ್ತಿದೆ • 15 ವರ್ಷ ಮೇಲ್ಪಟ್ಟ ಯಾರೂ ಈ ಶಿಬಿರದಲ್ಲಿ ಭಾಗವಹಿಸಬಹುದು. • ನವೆಂಬರ್ ತಿಂಗಳಿನಿಂದ ತರಬೇತಿ ಪ್ರಾರಂಭಗೊಳ್ಳುತ್ತದೆ. • ಶಿಬಿರವು ಸಂಜೆಯ ವೇಳೆಯಲ್ಲಿ, ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ದ ಆವರಣದಲ್ಲಿ ನಡೆಯುತ್ತದೆ. • ನಾಡಿನ ಹೆಸರಾಂತ ನಿರ್ದೇಶಕರಿಂದ ಒಂದು ನಾಟಕದ ತಯಾರಿ ಈ ಶಿಬಿರದಲ್ಲಿ ನಡೆಯುತ್ತದೆ. • 6 ತಿಂಗಳ ತರಬೇತಿಯ ಬಳಿಕ, ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ದ ವತಿಯಿಂದ Diploma in Theatre Art ಪದವಿ ದೊರೆಯುತ್ತದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಕ್ರಿಸ್ಟಿ – 9113236234 ಮತ್ತು ಶಂಕರ್ – 9148192739

Read More

ಪುತ್ತೂರು : ನೃತ್ಯೋಪಾಸನಾ ಕಲಾ ಅಕಾಡೆಮಿ ಪುತ್ತೂರಿನ ಪ್ರಧಾನ ಶಾಖೆಯ ವತಿಯಿಂದ ವಿಜಯದಶಮಿ ಮತ್ತು ಕಿಂಕಿಣಿ (ಗೆಜ್ಜೆ) ಪೂಜಾ ಕಾರ್ಯಕ್ರಮವು ದಿನಾಂಕ 12 ಅಕ್ಟೋಬರ್ 2024ರಂದು ಬರೆಕರೆ ವೆಂಕಟ್ರಮಣ ಸಭಾಭವನದಲ್ಲಿ ನೆರವೇರಿತು. ಕಲಾ ಅಕಾಡೆಮಿ ಸಂಸ್ಥಾಪಕಿ, ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಅವರು ವಿಜಯದಶಮಿ ಮತ್ತು ಕಿಂಕಿಣಿ ಪೂಜೆ ನೆರವೇರಿಸಿದರು. ಅಲಂಕೃತ ಶ್ರೀ ನಟರಾಜ ಮೂರ್ತಿ ಎದುರು ಪ್ರಾರ್ಥಿಸಿ, ಪೂಜಿಸಿ, ಆರತಿ ಬೆಳಗಿದರು. ಬಳಿಕ ಕಲಾ ಅಕಾಡೆಮಿಯ ವಿದ್ಯಾರ್ಥಿಗಳು ಫಲಪುಷ್ಪ ಅಕ್ಕಿ, ತೆಂಗಿನಕಾಯಿ ಕಾಣಿಕೆಯನ್ನು ಸಮರ್ಪಿಸಿದರು. ನಂತರ ಗುರುಗಳಿಂದ ಆಶೀರ್ವಾದ ಪೂರ್ವಕ ಪಡೆದ ಗೆಜ್ಜೆಯನ್ನು ಕಟ್ಟಿ ನೃತ್ಯದ ಅಧಿದೇವತೆ ನಟರಾಜನಿಗೆ ನಮಿಸಿ ನೃತ್ಯಾರ್ಚನೆ ನೆರವೇರಿಸಿದರು. ಈ ಸಂದರ್ಭ ಕಲಾ ಕೇಂದ್ರಕ್ಕೆ ಹೊಸ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಲಾಯಿತು. ವಿಜಯದಶಮಿ ಮತ್ತು ಕಿಂಕಿಣಿ ಪೂಜೆ ಕಾರ್ಯಕ್ರಮದಲ್ಲಿ ಪುತ್ತೂರು, ವಿಟ್ಲ ಮಂಗಳೂರು ಶಾಖೆಗಳ ಎಲ್ಲ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.

Read More