Subscribe to Updates
Get the latest creative news from FooBar about art, design and business.
Author: roovari
ಬೆಳ್ತಂಗಡಿ : ಹಿರಿಯ ಯಕ್ಷಗಾನ ಅರ್ಥಧಾರಿ ಮೂಡಂಬೈಲು ಸಿ.ಗೋಪಾಲಕೃಷ್ಣ ಶಾಸ್ತ್ರಿ ಇವರನ್ನು ಬೆಳ್ತಂಗಡಿ ತಾಲೂಕಿನ ಪಡಂಗಡಿಯ ಶ್ರೀನಿಲಯದಲ್ಲಿ ದಿನಾಂಕ 27-05-2024 ರಂದು ಗೌರವಿಸಲಾಯಿತು. ಪುತ್ತೂರು ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದ ಅಧ್ಯಕ್ಷರಾದ ಭಾಸ್ಕರ ಬಾರ್ಯ, ಶ್ರೀಮತಿ ಸ್ವರ್ಣಲತಾ ಭಾಸ್ಕರ, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಉಪಸ್ಥಿತರಿದ್ದರು. 88 ವರ್ಷದ ಹಿರಿಯ ವಿದ್ವಾಂಸರಾದ ಶಾಸ್ತ್ರಿಯವರು ‘ಮಹಾಭಾರತ ಕೋಶ’, ‘ರಾಮಾಯಣ ಕೋಶ’, ‘ಭಾಗವತ ಕೋಶ’, ‘ಪುರಾಣ ಕಥಾ ಚಿಂತಾ ರತ್ನ’ ಮುಂತಾದ ಅಪೂರ್ವ ಕೃತಿಗಳನ್ನು ರಚಿಸಿದ್ದು, ಯಕ್ಷಗಾನಾಸಕ್ತರಿಗೆ ಬಹಳ ಉಪಯುಕ್ತವಾಗಿದೆ. ಕಳೆದ ಮೂರು ವರ್ಷಗಳಿಂದ ಅರ್ಥಧಾರಿಯಾಗಿ ಭಾಗವಹಿಸದೆ ಇದ್ದರೂ ಆರೋಗ್ಯವಾಗಿದ್ದು ತನ್ನ ಜ್ಞಾನ ಹಾಗೂ ಅನುಭವಗಳನ್ನು ಕಲಾಸಕ್ತರ ಜೊತೆ ಹಂಚಿಕೊಳ್ಳುತ್ತ ಸಕ್ರಿಯವಾಗಿದ್ದಾರೆ.
ಮಂಗಳೂರು : ಅರೆಹೊಳೆ ಪ್ರತಿಷ್ಠಾನವು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ, ಕಲಾಭಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಕಾರದಿಂದ ಆಯೋಜಿಸಿದ್ದ ರಂಗಾಯಣ ಮೈಸೂರಿನ ‘ನಾಂದಿ’ ನಾಟಕೋತ್ಸವವು ದಿನಾಂಕ 24-05-2024 ರಿಂದ 26-05-2024ರ ವರೆಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಆಡಿಟೋರಿಯಂನಲ್ಲಿ ನಡೆಯಿತು. ನಾಟಕೋತ್ಸವದ ಎರಡನೇ ದಿನ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರು ರಂಗಾಯಣದ ಪ್ರಿನ್ಸಿಪಾಲ್ ಎಸ್. ರಾಮನಾಥ “ರಂಗಭೂಮಿಯ ಕೋರ್ಸ್ ಗಳ ಮೂಲಕ ನಾಟಕಗಳನ್ನು ಕಟ್ಟುವುದು ಅಥವಾ ಅಭಿನಯಿಸುವುದಕ್ಕಿಂತಲೂ ಮಿಗಿಲಾಗಿ ಅದು ಬದುಕಲು ಕಲಿಸುತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಯುವ ಜನತೆ ರಂಗಶಿಕ್ಷಣದಲ್ಲಿ ತೊಡಗಿಕೊಳ್ಳಬೇಕು.” ಎಂದು ಕರೆ ನೀಡಿದರು. ದಿನಾಂಕ 31-05-2024ರಂದು ಸೇವಾ ನಿವೃತ್ತಿ ಹೊಂದಲಿರುವ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರು ರಂಗಾಸಕ್ತರ ಪರವಾಗಿ ಅಭಿನಂದಿಸಲಾಯಿತು. ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್, ಜಾದೂಗಾರ ಕುದ್ರೋಳಿ ಗಣೇಶ್, ಸಂತ ಅಲೋಶಿಯಸ್ ಕಾಲೇಜಿನ ಕ್ರಿಸ್ಟೋಫರ್ ನೀನಾಸಂ, ಡಾ. ದಿನೇಶ್ ನಾಯ್ಕ್, ನಂದಗೋಕುಲ ನಿರ್ದೇಶಕಿ ಶ್ವೇತಾ ಅರೆಹೊಳೆ, ಕಲಾಭಿಯ ಉಜ್ವಲ್…
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ, ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡ್ಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇವರ ಆಶ್ರಯದಲ್ಲಿ ಸಾಹಿತಿ ದಿ. ಮೇಟಿ ಮುದಿಯಪ್ಪ ನೆನಪಿನ ಯುವ ಕಥಾ ಸ್ಪರ್ಧೆಯ ವಿಜೇತರರಿಗೆ ಬಹುಮಾನ ವಿತರಣೆ ಹಾಗೂ ಅವರ ಬದುಕು ಬರಹದ ಕುರಿತು ಉಪನ್ಯಾಸ ಕಾರ್ಯಕ್ರಮವು ಉಡುಪಿಯ ಯಕ್ಷಗಾನ ಕಲಾರಂಗದ ಐ. ವೈ. ಸಿ. ಸಭಾಂಗಣದಲ್ಲಿ ದಿನಾಂಕ 26-05-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮೇಟಿ ಅವರೊಂದಿಗಿನ ನಾಲ್ಕು ದಶಕಗಳ ಒಡನಾಟದ ನೆನಪುಗಳನ್ನು ಮೆಲುಕು ಹಾಕಿದ ನಾಡಿನ ಖ್ಯಾತ ವಿಮರ್ಶಕ ಹಾಗೂ ಲೇಖಕರಾದ ಜಿ. ಪಿ. ಪ್ರಭಾಕರ್ ತುಮರಿ “ಸಾಹಿತಿ ದಿ. ಮೇಟಿ ಮುದಿಯಪ್ಪನವರು ಮಾನವೀಯತೆ ಪ್ರಧಾನವಾದ ಬಹುಮುಖ ವ್ಯಕ್ತಿತ್ವ ಹೊಂದಿದವರು. ವಿವಿಧ ಸಂಘ- ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದುದು ಮಾತ್ರವಲ್ಲದೆ, ರಂಗ ನಟರಾಗಿ ಪ್ರತಿಭೆ ತೋರಿದ್ದಾರೆ. ಅವರದ್ದು ಸಾಮಾನ್ಯರಲ್ಲಿ ಸಾಮಾನ್ಯನಾಗುವ ಗುಣ. ಯಾವುದೇ ಅಹಂಕಾರ ಇಲ್ಲದ, ಎಲ್ಲರೊಂದಿಗೆ ಬೆರೆಯುವ ಅವರ…
ಪುತ್ತೂರು : ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ) ಪುತ್ತೂರು ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ಆಯೋಜಿಸಿದ ‘ನಾಯಕಾ-ನಾಯಿಕಾ ಭಾವ’ ಒಂದು ದಿನದ ಕಾರ್ಯಗಾರವು ದಿನಾಂಕ 26-05-2024 ರಂದು ಪುತ್ತೂರಿನ ಬರೆಕರೆ ವೆಂಕಟರಮಣ ಸಭಾಭವನದಲ್ಲಿ ನಡೆಯಿತು. ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹುಬ್ಬಳ್ಳಿಯ ವಿದುಷಿ ಡಾ.ಸಹನಾ ಪ್ರದೀಪ್ ಭಟ್ ಭಾಗವಹಿಸಿದ್ದರು. ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಎಲ್ಲರನ್ನು ಸ್ವಾಗತಿಸಿ, ನಿರೂಪಿಸಿ, ಶ್ರೀದೇವಿ ಕೋಟೆ ಪ್ರಾರ್ಥಿಸಿದರು. ಕಾರ್ಯಾಗಾರದಲ್ಲಿ ಪುತ್ತೂರು ಸಹಿತ ವಿವಿಧ ಕಡೆಗಳ ವಿದ್ಯಾರ್ಥಿಗಳು ಪಾಲ್ಗೊಂಡರು. ದಿನಪೂರ್ತಿ ನಡೆದ ಕಾರ್ಯಗಾರದಲ್ಲಿ ಡಾ. ಸಹನಾ ಪ್ರದೀಪ್ ಭಟ್ ಅವರು ‘ನಾಯಕಾ-ನಾಯಿಕಾ ಭಾವ’ ಕುರಿತು ಅಭಿನಯ, ಸಂವಾದ, ಪ್ರಶೋತ್ತರ ನಡೆಸಿಕೊಟ್ಟರು.
ಕದ್ರಿ : ಮಂಗಳೂರಿನ ಕೋಡಿಕಲ್ಲಿನ ಸರಯೂ ಮಕ್ಕಳ ಮೇಳದ ‘ಸರಯೂ ಸಪ್ತಾಹ-2024’ ಸಾಧಕ ಸನ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳ ಮದ್ದಳೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 25-05-2024 ರಂದು ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ಯಾರತ್ನ ಸಂಸ್ಥೆಗಳ ಅಧ್ಯಕ್ಷರಾದ ಉಳಿದೊಟ್ಟು ಶ್ರೀ ರವೀಂದ್ರ ಶೆಟ್ಟಿ ಮಾತನಾಡಿ “ಯಕ್ಷ ಶಿಕ್ಷಣ ಇಂದಿನ ಮಕ್ಕಳಲ್ಲಿ ವಿಶೇಷ ಶಕ್ತಿಯನ್ನು ನೀಡಿ ಸಮಾಜಮುಖೀ ಕಾರ್ಯಗಳನ್ನು ಮಾಡಲು ಅವರನ್ನು ಸಶಕ್ತಗೊಳಿಸುತ್ತದೆ. ಅಲ್ಲದೇ, ಅಲೆವೂರಾಯರಂತಹ ಯಕ್ಷಗುರುಗಳು ಶಾಲೆ ಹಾಗೂ ಕಾಲೇಜುಗಳಲ್ಲಿ ನಾಟ್ಯ ತರಗತಿಗಳನ್ನು ನಡೆಸಿ ಹವ್ಯಾಸಿಗಳನ್ನೂ ವ್ಯವಸಾಯಿಗಳ ಹಂತಕ್ಕೆ ತಲುಪಿಸುತ್ತಿದ್ದಾರೆ. ನಮ್ಮ ವಿದ್ಯಾರತ್ನ ಸಂಸ್ಥೆಗಳಲ್ಲೂ ಪಠ್ಯದ ಜೊತೆಗೆ ಯಕ್ಷಗಾನವನ್ನೂ ಕಲಿಸುತ್ತೇವೆ. ಅವರು ಪಠ್ಯ ಹಾಗೂ ಪಠ್ಯೇತರ ವಿಷಯಗಳಲ್ಲೂ ಮುಂದಿರುತ್ತಾರೆ. ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗೆ ಶುಭ ಹಾರೈಸುತ್ತೇನೆ.” ಎಂದುರು. ಸಂಸ್ಥೆಯ ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ ಪ್ರಸ್ತಾವನೆಗೈದು ಅತಿಥಿಗಳನ್ನು ಸ್ವಾಗತಿಸಿದರು. ಸುಧಾಕರ ರಾವ್ ಪೇಜಾವರ ಇವರು ಚೇತನಾ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರಿನ ಇದರ ‘ಪತ್ತನಾಜೆ’ ಕೂಟವು ದಿನಾಂಕ 24- 5-2024 ರಂದು ಪುತ್ತೂರಿನ ಓ೦ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ’ಜಾಂಬವತಿ ಕಲ್ಯಾಣ’ ಪ್ರಸಂಗದೊಂದಿಗೆ ಸಂಪನ್ನಗೊಂಡಿತು. ಹಿಮ್ಮೇಳದಲ್ಲಿ ಯಲ್. ಯನ್. ಭಟ್ , ಸತೀಶ್ ಇರ್ದೆ , ಆನಂದ ಸವಣೂರು , ನಿತೀಶ್ ಎಂಕಣ್ಣಮೂಲೆ , ಪ್ರೊ. ದಂಬೆ ಈಶ್ವರ ಶಾಸ್ತ್ರೀ , ಮುರಳೀಧರ ಕಲ್ಲೂರಾಯ, ಪರೀಕ್ಷಿತ್ ಪುತ್ತೂರು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣನಾಗಿ ಭಾಸ್ಕರ್ ಬಾರ್ಯ ಮತ್ತು ಭಾಸ್ಕರ್ ಶೆಟ್ಟಿ ಸಾಲ್ಮರ, ಜಾಂಬವಂತನಾಗಿ ಪೂಕಳ ಲಕ್ಷ್ಮೀನಾರಾಯಣ ಭಟ, ಬಲರಾಮನಾಗಿ ಮಾಂಬಾಡಿ ವೇಣುಗೋಪಾಲ ಭಟ್, ನಾರದನಾಗಿ ಚಂದ್ರಶೇಖರ್ ಭಟ್ ಬಡೆಕ್ಕಿಲ ಹಾಗೂ ಜಾಂಬವತಿಯಾಗಿ ಪ್ರೇಮಲತಾ ಟಿ. ರಾವ್ ಪಾತ್ರ ನಿರ್ವಹಿಸಿದರು. ಟಿ. ರಂಗನಾಥ ರಾವ್ ಸ್ವಾಗತಿಸಿ ಹರೀಣಾಕ್ಷಿ ಜೆ. ಶೆಟ್ಟಿ ವಂದಿಸಿದರು.
ಮಂಗಳೂರು : ಮಂಗಳೂರು ಬಲ್ಯಾಯ ಯಾನೆ ಕಣಿಶನ್ ಮಹಾಜನ ಸಂಘ ಆಯೋಜಿಸಿದ 4 ದಿನಗಳ ಮಕ್ಕಳ ಬೇಸಿಗೆ ಶಿಬಿರ ‘ಸುನಾದ- 2024’ ಇದರ ಸಮಾರೋಪ ಸಮಾರಂಭವು ದಿನಾಂಕ 23-05-2024 ರಂದು ಮಂಗಳೂರಿನ ಗರೋಡಿಯ ಸರ್ವಮಂಗಳ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷೆ ಉಮಾಲಕ್ಷ್ಮೀ ಕುಡುಪು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಚಂದ್ರಶೇಖರ ಪಾತೂರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಖ್ಯಾತ ನಟ ಹಾಗೂ ಹಾಡುಗಾರರಾದ ಮೈಮ್ ರಾಮ್ ದಾಸ್ ಶಿಬಿರಕ್ಕೆ ಚಾಲನೆ ನೀಡಿದರು. ವಿದುಷಿ ವಿದ್ಯಾ ಮನೋಜ್, ಶಿಕ್ಷಕ ಪ್ರೇಮ್ ನಾಥ್ ಮರ್ಣೆ, ಗರೋಡಿ ಕ್ಷೇತ್ರದ ಪ್ರಬಂಧಕ ಕಿಶೋರ್ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಅರುಣ್ ಕುಮಾರ್ ಪಿ. ವಿ., ಮಹಿಳಾ ವೇದಿಕೆಯ ಮಮತಾ ಗಣೇಶ್, ಯುವ ವೇದಿಕೆಯ ಅರವಿಂದ್ ಪಂಡಿತ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಕಾಸರಗೋಡು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಲ್ಲಿಕಾ ಭಾನುಪ್ರಕಾಶ್ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ಜಯಪ್ರಕಾಶ್ ಪಂಡಿತ್ ಬಬ್ಬುಕಟ್ಟೆ…
ಮಂಗಳೂರು : ಚಿಣ್ಣರ ಚಾವಡಿ ವಾಮಂಜೂರು ಇದರ ಆಶ್ರಯದಲ್ಲಿ ‘ಜೋಕುಲಾಟಿಕೆ’ ಚಿಣ್ಣರ ಸಂತಸ ಕಲಿಕಾ ಶಿಬಿರವು ದಿನಾಂಕ 25-05-2024ರಂದು ಜೈ ಶಂಕರ್ ಮಿತ್ರ ಮಂಡಳಿ ತಿರುವೈಲ್ ವಾಮಂಜೂರು ಇಲ್ಲಿ ಆರಂಭಗೊಂಡಿತು. ಶಿಬಿರವನ್ನು ಉದ್ಘಾಟಿಸಿದ ಜೈ ಶಂಕರ್ ಮಿತ್ರ ಮಂಡಳಿ ತಿರುವೈಲ್ ವಾಮಂಜೂರು ಇದರ ಗೌರವಾಧ್ಯಕ್ಷ ಮತ್ತು ರೈತ ಮುಖಂಡರಾಗಿರುವ ಲಿಂಗಪ್ಪ ಸಾಲಿಯನ್ ಮಾತನಾಡಿ “ಮಕ್ಕಳು ಈ ಸಮಾಜದ ಆಸ್ತಿಗಳು ಸಮಾಜದ ಭವಿಷ್ಯ ಮಕ್ಕಳಲ್ಲಿ ಅಡಗಿದೆ. ಅಂತಹ ಮಕ್ಕಳು ತಮ್ಮ ಪ್ರತಿಭೆಯನ್ನು ಬೆಳಗಿಸಿದರೆ ಮಾತ್ರ ಭವಿಷ್ಯದಲ್ಲಿ ಸಾಮಾಜಿಕ ಪ್ರಗತಿ ಸಾಧ್ಯ. ಇಂತಹ ಶಿಬಿರಗಳು ಮಕ್ಕಳ ಪ್ರತಿಭೆಯನ್ನು ಬೆಳಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇಂಥ ಶಿಬಿರಗಳ ಮಹತ್ವವನ್ನು ಮಕ್ಕಳ ಹೆತ್ತವರು ಅರಿತುಕೊಳ್ಳುವುದರೊಂದಿಗೆ ತಮ್ಮ ಮಕ್ಕಳೊಳಗೆ ಇರುವ ಪ್ರತಿಭೆಯನ್ನು ಬೆಳೆಸುವುದರಲ್ಲಿ ಹೆತ್ತವರು ಮುಂದಾಗಬೇಕು.” ಎಂದರು. ಜೈ ಶಂಕರ್ ಮಿತ್ರ ಮಂಡಳಿಯ ಮಾಜಿ ಅಧ್ಯಕ್ಷರಾದ ರಘು ಸಾಲಿಯನ್ ಮಾತನಾಡಿ “ಮಕ್ಕಳು ಪರಿಸರದ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಸಾಮಾನ್ಯ ಜ್ಞಾನವನ್ನು ತಮ್ಮೊಳಗೆ ಹೆಚ್ಚಿಸಿಕೊಳ್ಳಬೇಕು. ಇದರೊಂದಿಗೆ ಮಕ್ಕಳು ಪರಿಸರದ ಜೊತೆ ಬೆರೆತು…
ಕುಂದಾಪುರ : ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಬೈಂದೂರಿನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸಂಸ್ಥೆ ಸುರಭಿ (ರಿ.) ಬೈಂದೂರು. ಈ ಸಂಸ್ಥೆಯ ಮೂಲಕ ಬೆಂಗಳೂರಿನಲ್ಲಿ ಪ್ರಥಮ ಭಾರಿಗೆ ದಿನಾಂಕ 09-06-2024 ಮತ್ತು 10-06-2024ರಂದು ಸಂಜೆ 7-30ಕ್ಕೆ ಕುಂದಾಪ್ರ ಕನ್ನಡ ಭಾಷೆಯ ನಾಟಕ ‘ಮಕ್ಕಳ ರಾಮಾಯಣ’ ಪ್ರದರ್ಶನಗೊಳ್ಳಲಿದೆ. ಬಿ.ಆರ್. ವೆಂಕಟರಮಣ ಐತಾಳ್ ಅವರು ರಚಿಸಿರುವ ನಾಟಕವನ್ನು, ಗಣೇಶ್ ಮಂದರ್ತಿ ಕುಂದಾಪುರ ಕನ್ನಡಕ್ಕೆ ಅನುವಾದಿಸಿ ನಿರ್ದೇಶನ ಮಾಡಿದ್ದಾರೆ. ಸುರಭಿ ಬೈಂದೂರು ಸಂಸ್ಥೆಯ ಬಾಲ ಕಲಾವಿದರು ನಾಟಕದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಹಲವು ಪ್ರದರ್ಶನಗಳನ್ನು ಕಂಡಿರುವ ಕುಂದಾಪುರ ಕನ್ನಡದ ಈ ನಾಟಕ ರಂಗಾಸಕ್ತರ ಮೆಚ್ಚುಗೆಗೂ ಪಾತ್ರವಾಗಿದೆ. ರಂಗಾಸ್ಥೆ (ರಿ.) ಬೆಂಗಳೂರು ನೇತೃತ್ವದಲ್ಲಿ ನಾಗರಬಾವಿಯ ಕಲಾಗ್ರಾಮದಲ್ಲಿ ಈ ನಾಟಕ ಪ್ರದರ್ಶನ ನಡೆಯಲಿದ್ದು, ಟಿಕೆಟ್ ದರ ರೂ.200 ನಿಗದಿಪಡಿಲಾಗಿದೆ. ‘ಬುಕ್ ಮೈ ಶೋ’ ಮೂಲಕ ಆನ್ ಲೈನ್ ನಲ್ಲಿ ಅಥವಾ ಸಂಘಟಕರನ್ನು ಸಂಪರ್ಕಿಸಿ ಟಿಕೆಟ್ ಬುಕ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 8310775855 ಸಂಪರ್ಕಿಸಬಹುದಾಗಿದೆ. ಸುರಭಿ ಸಂಸ್ಥೆಯು ಸಂಗೀತ,…
ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಅತ್ಯಂತ ಪ್ರಾಚೀನ, ಸಾಂಪ್ರದಾಯಿಕ ಹಾಗೂ ಮಂಗಳಕರ ವಾದ್ಯವೆಂದು ಖ್ಯಾತಿ ಪಡೆದ ನಾದಸ್ವರ ವಾದ್ಯವು ಹಲವಾರು ಕಾರಣಗಳಿಂದ ಕೇವಲ ಕೆಲವೇ ಕೆಲವು ದೇವಾಲಯಗಳ ಧಾರ್ಮಿಕ ಕಾರ್ಯಾಚರಣೆಯಲ್ಲಿ ಮಾತ್ರ ಕಂಡು ಬರುತ್ತಿರುವುದು ಅತ್ಯಂತ ಬೇಸರದ ಸಂಗತಿ. ಹಲವಾರು ಭರವಸೆ ಮೂಡಿಸುವ ಉತ್ತಮ ಕಲಾವಿದರು ನಾದಸ್ವರ ವಾದನದಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಇಂತಹವರು ಕಲಾ ರಸಿಕರ ಸಮ್ಮುಖದಲ್ಲಿ ಕಾರ್ಯಕ್ರಮ ನೀಡುವಲ್ಲಿ ಅವಕಾಶಗಳಿಂದ ವಂಚಿತರಾಗಿರುವುದು ನಮಗೆಲ್ಲ ತಿಳಿದ ವಿಷಯವೇ ಆಗಿದೆ. ಶ್ರೀ ನರಸಿಂಹ ಉತ್ಸವದ ಸಂದರ್ಭ ಶ್ರೀ ಸುಬ್ರಮಣ್ಯ ಮಠದ ಯತಿಗಳಾದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರು ಸಭಾ ಕಛೇರಿ ರೀತಿಯಲ್ಲೇ ವಿದ್ವಾನ್ ನಾಗೇಶ್ ಎ. ಬಪ್ಪನಾಡು ಇವರ ನಾದಸ್ವರ ವಾದನ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಿದುದು ಅತ್ಯಂತ ಶ್ಲಾಘನೀಯ ವಿಷಯ. ಸಾಂಪ್ರದಾಯಿಕವಾಗಿ ಗುರುಕುಲ ಮಾದರಿಯಲ್ಲಿ ಸಂಗೀತಭ್ಯಾಸ ಮಾಡಿದ ನಾಗೇಶ್ ಎ. ಬಪ್ಪನಾಡು ಅವರದ್ದು ಪಂಡಿತ-ಪಾಮರರೆಲ್ಲರನ್ನು ಆಕರ್ಷಿಸುವ ಸುಂದರ ಶೈಲಿ. ರಾಗಗಳ ಗಾಂಭೀರ್ಯಕ್ಕೆ ಒಂದಿನಿತೂ ತೊಂದರೆಯಾಗದಂತೆ ನುಡಿಸುವುದು ಇವರ ಪ್ರಸ್ತುತಿಯ ವಿಶೇಷತೆ. ಸಭಾ ಕಛೇರಿಗಳಿಗೆ ನಾದಸ್ವರವನ್ನು…