Author: roovari

ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸುವ 18ನೇ ವರ್ಷದ ‘ಕನ್ನಡ ಕಾವ್ಯ ಸಂಸ್ಕೃತಿ’ ಕಮ್ಮಟವು ದಿನಾಂಕ 29-06- 2024 ಹಾಗೂ 30-06-2024 ರಂದು ನಡೆಯಲಿದೆ. ಎರಡು ದಿನಗಳ ಕಾಲ ಬೆಳಿಗ್ಗೆ ಘಂಟೆ 10.00ರಿಂದ ಸಂಜೆ ಘಂಟೆ 5:00ರವರೆಗೆ ಬೆಂಗಳೂರಿನ ವಿದ್ಯಾಪೀಠ ಸರ್ಕಲ್ ಮತ್ತು ಶ್ರೀನಿವಾಸನಗರದ ಸಮೀಪದಲ್ಲಿರುವ ವಿನಾಯಕ ವಿದ್ಯಾಸಂಸ್ಥೆಯ ಕೃಷ್ಣ ಅಯ್ಯರ್ ಪಿಯು ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಈ ಕಮ್ಮಟದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅಭಿಮಾನ ಹಾಗೂ ಆಸಕ್ತಿಯುಳ್ಳ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ವಲಯದ ಯುವ ಬರಹಗಾರರು ಭಾಗವಹಿಸಬಹುದು. ಓದು, ಗ್ರಹಿಕೆ, ಬರಹದ ಹಿನ್ನೆಲೆಯಲ್ಲಿ ಆಯೋಜಿಸುವ ಈ ಕಾವ್ಯ ಸಂಸ್ಕೃತಿ ಕಮ್ಮಟದಲ್ಲಿ ಹಿರಿಯ ಸಾಹಿತಿಗಳು, ಸಂಸ್ಕೃತಿ ಚಿಂತಕರಿಂದ‌ ಉಪನ್ಯಾಸ, ಸಂವಾದದ ಮೂಲಕ ಕನ್ನಡದ ಅನೇಕ ವಿಷಯ ವಿಚಾರಗಳ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸಲಾಗುವುದು. ಆಸಕ್ತರು ಕಾರ್ಯಕ್ರಮ ಸಂಚಾಲಕರಾದ ಡಾ. ರಾಮಲಿಂಗೇಶ್ವರ (ಸಿಸಿರಾ).ಮೊ : 9448880985 ಹಾಗೂ ಶ್ರೀಮತಿ ಸುಮನಚಿನ್ಮಯಿ. ಮೊ…

Read More

ಉಡುಪಿ : ಸುಹಾಸಂ ವತಿಯಿಂದ ದಿನೇಶ್ ಉಪ್ಪೂರ ಇವರ ‘ಪ್ರವಾಸ ಕಥನ’ ಪ್ರವಾಸಾನುಭವಗಳ ಪುಸ್ತಕದ ಲೋಕಾರ್ಪಣೆ ಸಮಾರಂಭ ನಗರದ ಕಿದಿಯೂರು ಹೋಟೆಲ್‌ನ ಅನಂತಶಯನ ಸಭಾಂಗಣದಲ್ಲಿ ದಿನಾಂಕ 08-06-2024ರಂದು ನಡೆಯಿತು. ನಿವೃತ್ತ ಉಪನ್ಯಾಸಕ ಶ್ರೀಕಾಂತ ರಾವ್ ಸಿದ್ದಾಪುರ ಇವರು ಕೃತಿ ಬಿಡುಗಡೆಗೊಳಿಸಿ ಮಾತನಾಡಿ, “ನಮ್ಮ ಮನಸ್ಸಿನ ಮಾತುಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಹೇಳಿದರು. ಹೊನ್ನಾವರದ ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್ ಉಪನ್ಯಾಸ ನೀಡಿದರು. ಸುಹಾಸಂ ಅಧ್ಯಕ್ಷ ಎಚ್. ಶಾಂತರಾಜ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಲೇಖಕ ದಿನೇಶ್ ಉಪ್ಪೂರ ಉಪಸ್ಥಿತರಿದ್ದರು. ಸುಹಾಸಂ ಕಾರ್ಯದರ್ಶಿ ಎಚ್. ಗೋಪಾಲ ಭಟ್ ಸ್ವಾಗತಿಸಿ, ಸಂಧ್ಯಾ ಶೆಣೈ ನಿರೂಪಿಸಿ, ಸಹ ಕಾರ್ಯದರ್ಶಿ ಶ್ರೀನಿವಾಸ ಉಪಾಧ್ಯ ವಂದಿಸಿದರು.

Read More

ಕರಾವಳಿಯ ಪ್ರಸಿದ್ಧ ಸ್ಥಾನವನ್ನು ಪಡೆದ ಕಲೆ ಯಕ್ಷಗಾನ. ಕರ್ನಾಟಕದ ಗಂಡು ಕಲೆಯಾಗಿರುವ ಯಕ್ಷಗಾನ ಪಾರ್ತಿಸುಬ್ಬರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸುತ್ತಿದೆ. ಇಂತಹ ಕಲೆಯಲ್ಲಿ ರಾರಾಜಿಸುತ್ತಿರುವ ಕಲಾವಿದ ಜಾಗನಳ್ಳಿ ನಿರಂಜನ. ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಜಾಗನಳ್ಳಿಯ ಶ್ರೀಯುತ ವೆಂಕಟ್ರಮಣ ಹೆಗಡೆ ಹಾಗೂ ಶ್ರೀಮತಿ ಸರಸ್ವತಿ ಹೆಗಡೆ ಇವರ ಮಗನಾಗಿ 23.03.1989ರಂದು ಜನನ. ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ (E&C) ಇವರ ವಿದ್ಯಾಭ್ಯಾಸ. ಭಾಗವತರು – ಅರ್ಥಧಾರಿಗಳು – ತಾಳಮದ್ದಲೆ ಕೂಟವೇ ಇದ್ದ ಜಾಗನಳ್ಳಿ ಕುಟುಂಬದಲ್ಲಿ ಜನನ.. ಯಕ್ಷಗಾನ ರಕ್ತಗತವಾಗಿ ಬಂದ ಕಲೆಯಾದುದರಿಂದ ಮತ್ತು ಬಾಲ್ಯದಲ್ಲಿಯೇ ಯಕ್ಷಗಾನದ ಮೇಲಿದ್ದ ಆಸಕ್ತಿ ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು. ಶ್ರೀಯುತ ಪರಮೇಶ್ವರ ಹೆಗಡೆ ಐನಬೈಲು ಇವರ ಯಕ್ಷಗಾನ ಗುರುಗಳು. ಪ್ರಸಂಗದ ಕಾಲ, ಪಾತ್ರದ ಸ್ವಭಾವವನ್ನು ಕಲ್ಪನೆಯಲ್ಲಿರಿಸಿಕೊಂಡು ಅದಕ್ಕೆ ಬೇಕಾದ ವಿಷಯ ಸಾಹಿತ್ಯ ಸಂಗ್ರಹ. ತಕ್ಷಣಕ್ಕಾದರೆ ಪದ್ಯದ ಭಾವಕ್ಕನುಸಾರವಾಗಿ ಅರ್ಥವಿಸ್ತಾರ. ಪ್ರಸಂಗದ ಉದ್ದೇಶಕ್ಕನುಗುಣವಾಗಿ ಹಾಗೂ ಎದುರಿನ ಪಾತ್ರಗಳ ಪದ್ಯಗಳಿಗೆ ಒದಗಬೇಕಾದ ಸಂಭಾಷಣೆ, ಪ್ರಸಂಗದ ಸಮಾರೋಪದ ವಿಷಯ ಹಾಗೂ…

Read More

ಸುಳ್ಯ : ಎಳೆಯ ಮನಸ್ಸುಗಳಲ್ಲಿ ಕಲೆ, ಸಾಂಸ್ಕೃತಿಕ ಲೋಕದ ಅರಿವು ತುಂಬಿ, ತರಬೇತಿ ನೀಡಿ ಸುಳ್ಯದ ಕಲಾ, ಸಾಂಸ್ಕೃತಿಕ ಜಗತ್ತನ್ನು ಸಂಪನ್ನಗೊಳಿಸುತ್ತಿರುವ ‘ರಂಗ ಮಯೂರಿ’ ಕಲಾ ಶಾಲೆಗೆ ಆರರ ಸಂಭ್ರಮ. ಕಳೆದ ಐದು ವರ್ಷಗಳಲ್ಲಿ ನೂರಾರು ಕಲಾ ಪ್ರತಿಭೆಗಳನ್ನು ಕಲಾ ಸಾಂಸ್ಕೃತಿಕ ರಂಗಕ್ಕೆ ನೀಡಿದ ಕೀರ್ತಿ ರಂಗಮಯೂರಿ ಕಲಾಶಾಲೆಗಿದೆ. ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಗಳಿಗೆ ಪ್ರತಿಭೆಗಳನ್ನು ಅಣಿಗೊಳಿಸಿದೆ. ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿ ಕಳೆದ ಆರು ವರ್ಷಗಳಿಂದ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪದಕ ವಿಜೇತ ಸಾಂಸ್ಕೃತಿಕ ಸಂಸ್ಥೆ ರಂಗ ಮಯೂರಿ ಕಲಾಶಾಲೆಯಲ್ಲಿ ಕಲಾ ತರಗತಿಗಳು ಪುನರಾರಂಭಗೊಂಡಿದ್ದು ಸಾಂಸ್ಕೃತಿಕ ಸಂಭ್ರಮದ ಧೀಂ ತಕಿಟ ತೋಂ..ಕಲರವ ಶುರುವಿಟ್ಟಿದೆ. ರಾಜ್ಯದ ಹೆಸರಾಂತ ಕಲಾಶಿಕ್ಷಕರಿಂದ ತರಬೇತಿ ಮತ್ತು ಮಾರ್ಗದರ್ಶನ ಹೊಂದಿರುವ ಕಲಾಶಾಲೆಯಲ್ಲಿ ವೆಸ್ಟರ್ನ್ ಡ್ಯಾನ್ಸ್, ಸೆಮಿಕ್ಲಾಸಿಕಲ್‌ ಡ್ಯಾನ್ಸ್, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಡ್ರಾಯಿಂಗ್, ಕೀಬೋರ್ಡ್, ಹಾಗೂ ಅಭಿನಯ ತರಗತಿಗಳು ಆರಂಭಗೊಂಡಿವೆ. ಐದು ವರ್ಷ ನಂತರದ ಎಲ್ಲಾ ವಯೋಮಾನದವರು ಕಲಾ…

Read More

ಬ್ರಹ್ಮಾವರ : ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ದಶಾವತಾರ ಐದು ಮೇಳಗಳ ತಿರುಗಾಟದ ಕೊನೆಯ ಸೇವೆ ಆಟ ಶ್ರೀ ಕ್ಷೇತ್ರದಲ್ಲಿ ದಿನಾಂಕ 29-05-2024ರಂದು ಜರಗಿತು. ಖ್ಯಾತ ಬಣ್ಣದ ವೇಷಧಾರಿ ಪೇತ್ರಿ ಮಾಧವ ನಾಯ್ಕ ಇವರಿಗೆ ಪ್ರತಿಷ್ಠಿತ ‘ಹಾರಾಡಿ ರಾಮ ಗಾಣಿಗ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು. ಕೇಮಾರು ಸಾಂದೀಪನಿ ಮಠದ ಶ್ರೀ ಈಶವಿಟ್ಠಲದಾಸ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿ, ಆಶೀರ್ವಚನ ನೀಡಿದರು. ಅನುವಂಶಿಕ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶೇಡಿಕೊಡ್ಲು ವಿಠಲಶೆಟ್ಟಿ ಯಕ್ಷಗಾನ ವಿಮರ್ಶಕ ಪ್ರೊ. ಎಸ್.ವಿ. ಉದಯ ಕುಮಾರ್ ಶೆಟ್ಟಿ, ಬಾರಕೂರು ಶ್ರೀ ವೇಣುಗೋಪಾಲಕೃಷ್ಣ, ದೇವಸ್ಥಾನದ ಸೂರ್ಯನಾರಾಯಣ ಗಾಣಿಗ ಮಟಪಾಡಿ, ದೇವಸ್ಥಾನದ ಕಾರ್ಯ ನಿರ್ವಹಣಾಕಾರಿ ಗೋವಿಂದರಾಜು ಎಸ್., ಆನುವಂಶಿಕ ಮೊಕ್ತೇಸರಾದ ಎಚ್. ಪ್ರಭಾಕರ ಶೆಟ್ಟಿ, ಎಚ್. ಶಂಭು ಶೆಟ್ಟಿ, ಆರ್. ಶ್ರೀನಿವಾಸ ಶೆಟ್ಟಿ, ಹೆಗ್ಗುಂಜೆ ನಾಲ್ಕು ಮನೆಯವರು, ಅರ್ಚಕರು, ಸಿಬಂದಿ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಿರಂತರ 30 ವರ್ಷ ಮಂದಾರ್ತಿ ಮೇಳದಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ…

Read More

ತೇರದಾಳ : ಸುನೀತಾ ಪುಸ್ತಕ ಪ್ರತಿಷ್ಠಾನ ವತಿಯಿಂದ ಪ್ರಥಮ ವರ್ಷದಿಂದ ಕೊಡಲಾಗುವ ಸಾಹಿತ್ಯ ಪುರಸ್ಕಾರಕ್ಕೆ ಕಥೆ, ಕವನ, ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಪ್ರವಾಸ ಕಥನ, ಕಥನವಚನ, ಮಕ್ಕಳ ಕಥೆ, ಚುಟುಕು, ಹೈಕು, ಗಜಲ್ ಮುಂತಾದ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಲೇಖಕರು 2022ರಿಂದ 2024ರ ಒಳಗಾಗಿ ಪ್ರಕಟಗೊಂಡಿರುವ ಕೃತಿಗಳ ಎರಡು ಪ್ರತಿಗಳನ್ನು ದಿನಾಂಕ 31-08-2024ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸತಕ್ಕದ್ದು. ಪದ್ಮಸಾಗರ ರಾಮಪ್ಪ, ನಾಗನೂರ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಎದುರಿಗೆ, ಅಲ್ಲಮಪ್ರಭು ನಗರ, ತೇರದಾಳ -587315, ಜಮಖಂಡಿ ತಾಲೂಕು, ಬಾಗಲಕೋಟ ಜಿಲ್ಲೆ. ಹೆಚ್ಚಿನ ಮಾಹಿತಿಗಾಗಿ 7892541482, 7899513108 ಸಂಪರ್ಕಿಸಲು ಕೋರಲಾಗಿದೆ.

Read More

ವಿಟ್ಲ : ಬಂಟ್ವಾಳ ತಾಲೂಕಿನ ವಿಟ್ಲದ ಚಂದಳಿಕೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಹಿರಿಯ ಕವಿ ಭಾಸ್ಕರ ಆಡ್ವಳ ಇವರ ‘ಜೀವಸತ್ವ’ ವಿನೂತನ ‘ಜ್ಞಾನದ ಕೆಕೆ’ (ಹೃದಯವಂತಿಕೆ, ಬುದ್ಧಿವಂತಿಕೆ) ಒಗಟಿನ ಸಂಕಲನವು ದಿನಾಂಕ 08-06-2024ರಂದು ಲೋಕಾರ್ಪಣೆಗೊಂಡಿತು. ಈ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡಿದ ವ್ಯಂಗ್ಯಚಿತ್ರಕಾರ ವಿರಾಜ್ ಅಡೂರು ಇವರು ಮಾತನಾಡಿ “ಒಗಟುಗಳು ಬುದ್ಧಿಯನ್ನು ಮಸೆಯುತ್ತವೆ. ಒಗಟಿಗೆ ಉತ್ತರ ಶೋಧಿಸುವ ಕಾರಣ ಏಕಾಗ್ರತೆಯೂ ಬಲವಾಗುತ್ತದೆ. ಮಾತಿನ ಕಟ್ಟೆಗಳಲ್ಲಿ ನಮ್ಮ ಹಿರಿಯರು ಮನರಂಜನೆಗಳಿಗಾಗಿ ಒಗಟುಗಳನ್ನು ರಚಿಸಿ, ಸ್ಪರ್ಧಾತ್ಮಕ ಮನೋಭಾವದಲ್ಲಿ ಉತ್ತರ ಕಂಡುಕೊಳ್ಳುತ್ತಿದ್ದರು. ಒಗಟುಗಳು ಬುದ್ಧಿವಂತಿಕೆಯ ಜೀವಸತ್ವ” ಎಂದು ಹೇಳಿದರು. ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ತಿನ ಮಕ್ಕಳ ಕಲಾಲೋಕ ಅಧ್ಯಕ್ಷ ರಮೇಶ ಎಂ. ಬಾಯಾರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರರಾದ ಭಾಸ್ಕರ ಆಡ್ವಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ವಿಶ್ವನಾಥ ಗೌಡ ಕುಳಾಲು ಸ್ವಾಗತಿಸಿ, ಶಿಕ್ಷಕ ವೆಂಕಟೇಶ್ವರ ಭಟ್ ವಂದಿಸಿ, ಶಿಕ್ಷಕಿ ರೇಶ್ಮಾ ಲೂಯಿಸ್ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ನಡೆದ ಒಗಟಿಗೆ ಉತ್ತರ ನೀಡುವ…

Read More

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಮತ್ತು ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಇವುಗಳ ಆಶ್ರಯದಲ್ಲಿ ಮೈಸೂರಿನ ರಂಗಾಯಣ ಅಭಿನಯಿಸುವ ಸಿ. ಬಸವ ಲಿಂಗಯ್ಯ ಇವರ ಪರಿಕಲ್ಪನೆ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಗೋರ್ ಮಾಟಿ’ (ನನ್ನ ಜನ) ವಿಶೇಷ ಕನ್ನಡ ನಾಟಕದ ಎರಡು ಪ್ರದರ್ಶನಗಳನ್ನು ದಿನಾಂಕ 12-06-2024 ಮತ್ತು 13-06-2024ರಂದು ಮೂಡುಬಿದಿರೆಯ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಇದು ಬರಿ ನಾಟಕವಲ್ಲ ಬಂಜಾರ ಜನಾಂಗದ ಕಲೆ, ಸಂಸ್ಕೃತಿ, ಬದುಕು ಬವಣೆಗಳ ಸಂಕಥನ. ಕಾಲಚಕ್ರದಲ್ಲಿ ಸಿಲುಕಿ ನುಜ್ಜುಗುಜ್ಜಾದ ಅನೇಕ ಜನ ಸಮುದಾಯಗಳಲ್ಲಿ ಬಂಜಾರ ಜನಾ೦ಗವೂ ಒಂದು. ‘ಗೋರ್‌ಮಾಟಿ’ ಅ೦ದರೆ ನಮ್ಮವರು ಎಂಬರ್ಥದಲ್ಲಿ ಬಳಸಲಾಗಿದ್ದು ಭಾರತದ ಮೂಲ ನಿವಾಸಿಗಳಲ್ಲಿ ವರ್ಣರಂಜಿತ ಸ೦ಸ್ಕೃತಿಯನ್ನು ಹೊಂದಿರುವ ಒ೦ದು ಜನ ಸಮುದಾಯ. ಇಡೀ ದೇಶದ ಅನೇಕ ರಾಜ್ಯಗಳಲ್ಲಿ ವಿವಿಧ ಜಾತಿ ಸ್ವರೂಪದಲ್ಲಿ ಹರಿದು ಹಂಚಿಹೋಗಿರುವ ಬಂಜಾರರ ಜೀವನದ ಕತೆಯೇ ಈ ‘ಗೋರ್‌ಮಾಟಿ’. ವೃತ್ತಿಪರ ಕಲಾವಿದರ ಪರಿಪಕ್ವ ಅಭಿನಯ, ಹಾಡು, ಕುಣಿತ, ವಿಶೇಷ ವಸ್ತ್ರವಿನ್ಯಾಸ, ರಂಗ ಪರಿಕರಗಳಿಂದ…

Read More

ತೆಕ್ಕಟ್ಟೆ: ಕೊಮೆ-ಕೊರವಡಿ ವಿವಿಧೋದ್ದೇಶ ಸಹಕಾರಿ ಸಂಘದ ತೆಕ್ಕಟ್ಟೆಯ ಶಾಖೆಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಯಶಸ್ವೀ ಕಲಾವೃಂದ ಕೊಮೆಯ ‘ಸಿನ್ಸ್ 1999 ಶ್ವೇತಯಾನ – 33’ ಕಾರ್ಯಕ್ರಮದಡಿಯಲ್ಲಿ ‘ಯಕ್ಷ ಗಾನ ವೈಭವ’ ಕಾರ್ಯಕ್ರಮವು ದಿನಾಂಕ 07-06-2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ “ಅವಕಾಶಗಳಿಗಾಗಿ ಕಾಯವುದು ತರವಲ್ಲ. ಅವಕಾಶಗಳನ್ನು ನಾವು ಕಂಡುಕೊಳ್ಳಬೇಕು. ತೆಕ್ಕಟ್ಟೆ ಯಕ್ಷಗಾನ ಕೇಂದ್ರವು ಇತ್ತೀಚೆಗೆ ಅನೇಕ ಕಲಾವಿದರನ್ನು ಹುಟ್ಟು ಹಾಕುತ್ತಿರುವ ಸಂಸ್ಥೆ. ಮಕ್ಕಳಲ್ಲಿ ಕಲಾಭಿರುಚಿ ಮೂಡಿಸಿ, ಸಾಂಸ್ಕೃತಿಕ ಲೋಕಕ್ಕೆ ಕೊಡುಗೆಯಾಗುವ ಭವಿಷ್ಯದ ಕುಡಿಗೆ ಸಂಸ್ಕಾರ ನೀಡುವ ಕಾರ್ಯವನ್ನು ನಿರಂತರ ಮಾಡುತ್ತಿರುವ ಯಶಸ್ವಿ ಸಂಸ್ಥೆಯನ್ನು ಶ್ಲಾಘಿಸಲೇಬೇಕು.” ಎಂದು ನುಡಿದರು. ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಶೇಖರ ಕಾಂಚನ್ ಮಾತನಾಡಿ “ದೇಶದಾದ್ಯಂತ ಹೆಸರಾಗಿರುವ ನಮ್ಮೂರ ಸಂಸ್ಥೆಯನ್ನು ಸ್ಥಳೀಯ ಸಂಸ್ಥೆಗಳು ಗುರುತಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. ಸಾಂಸ್ಕೃತಿಕ ವಲಯಕ್ಕೆ ಅಪಾರ ಕೊಡುಗೆ ನೀಡುತ್ತಾ ಜನಾನುರಾಗಿಯಾಗಿ ಬೆಳೆದು, ಇಪ್ಪತ್ತೈದರ ವರ್ಷಾಚರಣೆ ನಡೆಸಿಕೊಳ್ಳುತ್ತಿರುವಾಗ ಕಲಾಭಿಮಾನಿಗಳು ಪ್ರೋತ್ಸಾಹಿಸಬೇಕು. ಸಂಸ್ಥೆಯನ್ನು ಪ್ರೋತ್ಸಾಹಿಸಿದರೆ ನಮ್ಮೂರ…

Read More

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪೇತ್ರಿಯ ದಿ. ವೆಂಕಟೇಶ್ ಮರಕಾಲ ಹಾಗೂ ಗಿರಿಜಾ ದಂಪತಿಗಳ ಮಗನಾಗಿ 14.03.1991ರಂದು ರಾಘವೇಂದ್ರ ಪೇತ್ರಿ ಅವರ ಜನನ. 10ನೇ ತರಗತಿವರೆಗೆ ಇವರ ವಿದ್ಯಾಭ್ಯಾಸ. ಯಕ್ಷಗಾನದ ಪ್ರಾಥಮಿಕ ಶಿಕ್ಷಣವನ್ನು ಮಂಜುನಾಥ ಪ್ರಭು, ರಾಧಾಕೃಷ್ಣ ನಾಯ್ಕ್ ಬಳಿ ಕಲಿತು ನಂತರ ಮಂದಾರ್ತಿ ಕೇಂದ್ರದಲ್ಲಿ ಗುರುಗಳಾದ ಹಾರಾಡಿ ರಮೇಶ್ ಗಾಣಿಗ ಇವರಲ್ಲಿ ಹೆಚ್ಚಿನ ವಿದ್ಯೆ ಹೆಜ್ಜೆ ಕಲಿತರು. ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಅಂತ ಯಾರಿಲ್ಲ. ಶಾಲಾ ದಿನಗಳಲ್ಲಿ ಒಂದೆರಡು ವೇಷ ಮಾಡಿದ ಇವರು, ಮೇಳಗಳ ಆಟ ನೋಡಿ ನಾನು ಕಲಾವಿದ ಆಗಬೇಕೆಂದು 10ನೇ ತರಗತಿ ನಂತರ ಮಂದಾರ್ತಿ ಕೇಂದ್ರ ಸೇರಿ ಯಕ್ಷಗಾನವನ್ನು ಕಲಿತರು. ನೆಚ್ಚಿನ ಪ್ರಸಂಗಗಳು:- ದೇವಿ ಮಹಾತ್ಮೆ, ಹಿರಣ್ಯಾಕ್ಷ ಕಾಳಗ, ರಾವಣ ವಧೆ, ವಾಲಿ ಸುಗ್ರೀವ, ಭೀಷ್ಮ ವಿಜಯ, ಕಾರ್ತವೀರ್ಯ, ಗದಾಯುದ್ಧ, ಕನಕಾಂಗಿ ಕಲ್ಯಾಣ, ರತಿ ಕಲ್ಯಾಣ,  ಸೀತಾ ಪರಿತ್ಯಾಗ ಇತ್ಯಾದಿ. ನೆಚ್ಚಿನ ವೇಷಗಳು:- ಮಹಿಷ, ವೀರಭದ್ರ, ಹಿರಣ್ಯಾಕ್ಷ, ದುಶ್ಯಾಸನ, ವಾಲಿ, ಸುಗ್ರೀವ, ಸಾಲ್ವ, ಕೌಂಡ್ಲಿಕ, ರಕ್ತಚಂಗ,…

Read More