Author: roovari

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 109ನೆಯ ಸಂಸ್ಥಾಪನಾ ದಿನಾಚರಣೆಯನ್ನು ದಿನಾಂಕ 05-05-2023ನೆಯ ಶುಕ್ರವಾರದಂದು ಎಲ್ಲೆಲ್ಲೂ ಸಂಭ್ರಮದಿಂದ ಅಚರಿಸಲಾಗುತ್ತಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು, ಮಂಗಳೂರು ಇಲ್ಲಿ ಪೂರ್ವಾಹ್ನ ಗಂಟೆ 10-30ಕ್ಕೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಇವರ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಇಂದಾಜೆ ಶ್ರೀ ಶ್ರೀನಿವಾಸ ನಾಯಕ್ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಇತಿಹಾಸ ಸಂಶೋಧಕರಾದ ಡಾ. ಪುಂಡಿಕಾಯಿ ಗಣಪಯ್ಯ ಭಟ್ ‘ಕನ್ನಡದ ಅಸ್ಮಿತೆ – ಕನ್ನಡ ಸಾಹಿತ್ಯ ಪರಿಷತ್ತು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಾರೆ. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮೀ ಬಿ. ಶೆಟ್ಟಿ ಮುಖ್ಯ ಅತಿಥಿಯಾಗಿದ್ದು, ಕ.ಸಾ.ಪ. ಬೆಂಗಳೂರು ಇದರ ಕಾರ್ಯಕಾರಿ ಸಮಿತಿಯ ಸದಸ್ಯ ಡಾ. ಮಾಧವ ಎಂ.ಕೆ. ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಕ.ಸಾ.ಪ. ಮಂಗಳೂರು ತಾಲೂಕು ಘಟಕದ ಅಧ್ಯಕ್ಷರು ಶ್ರೀ ಮಂಜುನಾಥ ಎಸ್. ರೇವಣಕರ್…

Read More

ಯಕ್ಷಗಾನವಂತೂ ಗಂಡುಕಲೆಯೆಂದೇ ಪ್ರಸಿದ್ಧವಾಗಿದೆ. ವೃತ್ತಿ ಕಲಾವಿದರು, ಹವ್ಯಾಸೀ ಕಲಾವಿದರು ರಂಗವೇರಿ ಮಿಂಚುತ್ತಿದ್ದಾರೆ. ಇಂತಹ ಶ್ರೀಮಂತ ಕಲೆಯಾದ ಯಕ್ಷಗಾನದಲ್ಲಿ ಕಲಾ ಸೇವೆಯನ್ನು ಮಾಡುತ್ತಿರುವ ಯುವ ಕಲಾವಿದೆ ಚೈತ್ರ ಹೆಚ್. 03.11.1998ರಂದು ಹೆಚ್ ಜಿತೇಂದ್ರಿಯ ರಾವ್ ಹಾಗೂ ವೀಣಾ ಜೆ.ಹೆಚ್ ಇವರ ಮಗಳಾಗಿ ಜನನ. Mcom ಇವರ ವಿದ್ಯಾಭ್ಯಾಸ. ಚಿಕ್ಕ ವಯಸ್ಸಿನಿಂದ ಯಕ್ಷಗಾನವನ್ನು ಟಿವಿಯಲ್ಲಿ ಹಾಗೂ ರಂಗದಲ್ಲಿ ಕಲಾವಿದರು ಕುಣಿವುದನ್ನು ನೋಡಿ ನಾನು ಕೂಡ ಯಕ್ಷಗಾನ ಕಲಿಯಬೇಕು ಎಂದು ಆಸೆ ಹುಟ್ಟಿತು. ೬ನೇ ತರಗತಿಯಲ್ಲಿ ಶಾಲಾ ವಾರ್ಷಿಕೋತ್ಸವದಲ್ಲಿ ಯಕ್ಷಗಾನ ಮಾಡುವ ಎಂದು ಶಾಲೆಯಲ್ಲಿ ಹೇಳಿದರು, ಆಸಕ್ತಿ ಇರುವವರು ಬನ್ನಿ ಎಂದರು. ಹಾಗೆ ಯಕ್ಷಗಾನದ ರಂಗದ ಪಯಣ ಶುರುವಾಯಿತು ಹಾಗೂ ಮನೆಯಲ್ಲಿ ತಂದೆ ಹಾಗೂ ತಾಯಿಯ ಹತ್ತಿರ ಏನಾದರೂ ಕಲಿಯಬೇಕು ಎಂದು ಹೇಳಿದರೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ಇದು ನಾನು ಯಕ್ಷಗಾನ ರಂಗದಲ್ಲಿ ಸಾಧನೆ ಮಾಡಲು ತುಂಬಾ ಪ್ರೇರಣೆ ಎಂದು ಹೇಳುತ್ತಾರೆ ಚೈತ್ರ. ರಮೇಶ್ ಶೆಟ್ಟಿ ಬಾಯಾರು ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ…

Read More

ಕಾಸರಗೋಡು : ರಂಗ ಚಿನ್ನಾರಿ ಕಾಸರಗೋಡು ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ರಂಗ ಚಿನ್ನಾರಿಯ ಮಹಿಳಾ ಘಟಕ ನಾರಿ ಚಿನ್ನಾರಿಯ ನಾಲ್ಕನೇ ಸರಣಿ ಕಾರ್ಯಕ್ರಮ ‘ರಂಗ ವಸಂತ’ವನ್ನು ದೀಪ ಬೆಳಗಿ ಉದ್ಘಾಟಿಸಿದ ನಟಿ ಪ್ರತಿಮಾ ನಾಯಕ್‌ ಕುಂದಾಪುರ ಇವರು ಮಾತನಾಡುತ್ತಾ “ಮಹಿಳೆಯರ ಮತ್ತು ಮಕ್ಕಳ ಸುಪ್ತ ಪ್ರತಿಭೆಯ ಅನಾವರಣಕ್ಕಾಗಿ ನಾರಿ ಚಿನ್ನಾರಿ ವೇದಿಕೆಯನ್ನು ಸೃಷ್ಟಿಸಿದ ರಂಗ ಚಿನ್ನಾರಿಯನ್ನು ಶ್ಲಾಘಿಸಬೇಕಾಗಿದೆ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಮಹಿಳೆಯರು ಇಂದು ಸಾಕಷ್ಟು ಸಾಧನೆ ಮಾಡಿದ್ದು, ಮಹಿಳೆಯರು ಇನ್ನಷ್ಟು ಸಬಲೀಕರಣಗೊಳ್ಳಬೇಕಾಗಿದೆ. ತಮ್ಮ ಕಠಿಣ ಪರಿಶ್ರಮದ ಮೂಲಕ ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಸಾಗುತ್ತಿರುವ ಮಹಿಳೆಯರು ದೇಶದ ಸಮಗ್ರ ಅಭಿವೃದ್ಧಿಯಲ್ಲಿ ತಮ್ಮ ಕೊಡುಗೆ ನೀಡಬೇಕಾಗಿದೆ.” ಎಂದು ಹೇಳಿದರು. ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಿ ಚಿನ್ನಾರಿ ಗೌರವಾಧ್ಯಕ್ಷೆ ಶ್ರೀಮತಿ ತಾರಾ ಜಗದೀಶ್‌ ವಹಿಸಿದ್ದರು. ಗಮಕಿ ಹಾಗೂ ವಾಗ್ಮಿ ಶ್ರೀಮತಿ ಜಯಲಕ್ಷ್ಮೀ ಕಾರಂತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ‘ಮಕ್ಕಳ ಪೋಷಣೆಯಲ್ಲಿ…

Read More

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ ಮತ್ತು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಭಾಷಾ ವಿಭಾಗ, ಉಡುಪಿ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆ ಮತ್ತು ಯಕ್ಷ ಪ್ರೇಮಿ ಶ್ರೀ ನಾರಾಯಣ ಸ್ಮರಣಾರ್ಥ ದತ್ತಿ ಪುರಸ್ಕಾರ ಕಾರ್ಯಕ್ರಮವು ಪೂರ್ಣಪ್ರಜ್ಞ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಮೇ 5ರಂದು ಸಂಜೆ 5:30 ರಿಂದ 6:30ವರೆಗೆ ನಡೆಯಲಿದೆ. ಕಾರ್ಯಕ್ರಮವನ್ನು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಕನ್ಯಾ ಮೇರಿ ಜೆ. ಉದ್ಘಾಟಿಸಲಿದ್ದು, ಸಭಾಧ್ಯಕ್ಷತೆಯನ್ನು ಕ.ಸಾ.ಪ. ಉಡುಪಿ ತಾಲೂಕು ಘಟಕದ ಅಧ್ಯಕ್ಷ ಶ್ರೀ ರವಿರಾಜ್ ಎಚ್.ಪಿ. ವಹಿಸಲಿದ್ದು. ವಿಶೇಷ ಉಪನ್ಯಾಸವನ್ನು ಸಾಹಿತಿ ಶ್ರೀ ನಾರಾಯಣ ಮಡಿ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ನಿವೃತ್ತ ವಿಜಯ ಬ್ಯಾಂಕ್ ಅಧಿಕಾರಿ ಶ್ರೀ ಭುವನ ಪ್ರಸಾದ್ ಹೆಗ್ಡೆ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಇದರ ಸ್ಥಾಪಕರಾದ ಉಡುಪಿ ಶ್ರೀ ವಿಶ್ವನಾಥ…

Read More

ಎಡನೀರು: ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ.) ಎಡನೀರು ಸಂಸ್ಥೆಯ ನೇತೃತ್ವದಲ್ಲಿ ಎಡನೀರಿನಲ್ಲಿ ಐದು ದಿನಗಳ ಕನ್ನಡ ಸಂಸ್ಕೃತಿ ಶಿಬಿರವು ದಿನಾಂಕ 02-05-2023 ಮಂಗಳವಾರ ಉದ್ಘಾಟನೆಗೊಂಡಿದೆ. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಅನುಪಮಾ ರಾಘವೇಂದ್ರ ಸ್ವಾಗತಿಸಿದರು. ನಿವೃತ್ತ ಶಿಕ್ಷಕರಾದ ಶ್ರೀಯುತ ಮಾಧವ ಹೇರಳ ಇವರು ದೀಪ ಬೆಳಗಿಸಿ ಮಕ್ಕಳಿಗೆ ಹಿತನುಡಿದರು. ಮೊದಲ ದಿನದ ಶಿಬಿರದ ಸಂಪನ್ಮೂಲ ವ್ಯಕ್ತಿ ನಿರ್ಮಲ್ ಕುಮಾರ್ ಜೀವನ ಮೌಲ್ಯ, ಜೀವನ ಪಾಠ, ಮಕ್ಕಳು ಬದುಕಬೇಕಾದ ರೀತಿ, ಒಬ್ಬ ಅಧ್ಯಾಪಕನ ಹೊಣೆಗಾರಿಕೆ, ತಂದೆ ತಾಯಿಗಳ ಕರ್ತವ್ಯ ಹೀಗೆ ಹತ್ತು ಹಲವು ವಿಷಯಗಳನ್ನು ಬಹು ಸರಳವಾಗಿ ಪುಟ್ಟಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟರು. ಒಂದಷ್ಟು ಆಟ, ಒಂದಷ್ಟು ಮಾತು, ಇನ್ನೊಂದಷ್ಟು ಚಿಂತಾನಾರ್ಹ ವಿಡಿಯೋ ತುಣುಕುಗಳು, ಮತ್ತೊಂದಷ್ಟು ಹಾಡು, ಕತೆ ಎಲ್ಲವನ್ನು ಸುಂದರವಾಗಿ ಪೋಣಿಸಿ ಮಕ್ಕಳ ಮುಂದೆ ತೆರೆದಿಟ್ಟರು.

Read More

ಬೆಂಗಳೂರು : ಕನ್ನಡದ ಬಹು ಮುಖ್ಯ ರಂಗತಂಡಗಳಲ್ಲಿ ಒಂದಾದ ಧಾರವಾಡದ ‘ಆಟ-ಮಾಟ’ವು ರಾಘವೇಂದ್ರ ಪಾಟೀಲ್ ರಚನೆಯ ಮಹಾದೇವ ಹಡಪದ ಪರಿಕಲ್ಪನೆಯ ‘ಮತ್ತೊಬ್ಬ ಮಾಯಿ’ ನಾಟಕ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಜಂಗಮ ಕಲೆಕ್ಟಿವ್ ನಲ್ಲಿ ಮೇ 6ನೇ ತಾರೀಖು ಸಂಜೆ 7ಕ್ಕೆ ಪ್ರದರ್ಶನಗೊಳ್ಳಲಿದೆ. ಮತ್ತೊಬ್ಬ ಮಾಯಿ: ಸಾಹಿತ್ಯ ತತ್ವ ಮತ್ತು ಜೀವನ ಹೊಂದಿರುವ ಇಬ್ಬರು ವ್ಯಕ್ತಿಗಳು ಕಾಲೇಜಿನ ಸ್ಟಾಫ್ ರೂಮಿನಲ್ಲಿ ಕುಳಿತು ಒಬ್ಬರನ್ನೊಬ್ಬರು ಕೆಣಕುತ್ತ, ಗೇಲಿ ಮಾಡಿಕೊಳ್ಳುತ್ತ, ಟೀಕಿಸುತ್ತಾರೆ ಹಾಗೂ ಪ್ರೀತಿಸುತ್ತಾ ಹಂಚಿಕೊಳ್ಳುವ ಕತೆ ರಂಗದ ಮೇಲೆ ಗಾಢವಾದ ಅನುಭವವನ್ನು ಕಟ್ಟಿಕೊಡುತ್ತದೆ. ಇಂಗ್ಲೀಷ್ ಅಧ್ಯಾಪಕನೂ ಕತೆಗಾರನೂ ಆದ ಮೂರ್ತಿ ಒಬ್ಬನಾದರೆ, ಕನ್ನಡ ಅಧ್ಯಾಪಕನೂ ತಾನು ಹೇಳಿಕೊಳ್ಳುತ್ತಿರುವುದು ಕತೆಯಲ್ಲ; ಜೀವನ ಎಂದು ವಾದಿಸುವವನೂ ಆದ ಪಾಂಡುರಂಗ ಡಿಗಸ್ಕರ್ ಇನ್ನೊಬ್ಬ. ಕುಣಕಾಲ ಹುಡುಗಿಯ ಜೀವಂತ ಸಂಗತಿಯನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸುವ ಡಿಗಸ್ಕರ್ ಭಾಷೆ ಜವಾರಿಯದ್ದಾಗಿದೆ. ಹಿಂದುಸ್ಥಾನಿ ಭಾಷೆಯಲ್ಲಿ ದಾಸ್ತಾಂಗೋಯಿ ಎಂಬ ಕತೆ ಹೇಳುವ ಪರಂಪರೆಯೊಂದಿದೆ ಆ ಮಾದರಿಯಲ್ಲಿ ಇಲ್ಲಿನ ಎರಡು ಪಾತ್ರಗಳು ನಿರೂಪಣಾ ಸರಣಿಯನ್ನು…

Read More

ಕುಂದಾಪುರ : ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿಯಾಗಿದ್ದ ಸ್ವಪ್ನಶಿಲ್ಪಿ ಡಾ. ಎಚ್. ಶಾಂತಾರಾಮ್ ಅವರ ಹೆಸರಿನಲ್ಲಿ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ದತ್ತಿನಿಧಿ ಸ್ಥಾಪಿಸಿ ಪ್ರತಿವರ್ಷ ಕನ್ನಡದ ಅತ್ಯುತ್ತಮ ಸೃಜನಶೀಲ ಕೃತಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ವರ್ಷ ಕಾದಂಬರಿಗಳನ್ನು ಪರಿಗಣಿಸಲಿದ್ದು, 2021ರಿಂದ 2022ರ ಅವಧಿಯಲ್ಲಿ ಮೊದಲ ಆವೃತ್ತಿಯಾಗಿ ಪ್ರಕಟಗೊಂಡ ಕಾದಂಬರಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಪ್ರಕಾಶಕರು ಅಥವಾ ಲೇಖಕರು ಕಾದಂಬರಿಗಳ ನಾಲ್ಕು ಪ್ರತಿಗಳನ್ನು ಮೇ 20ರೊಳಗೆ ಡಾ. ಎಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿ, ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ -576201 ಈ ವಿಳಾಸಕ್ಕೆ ಕಳುಹಿಸಿಕೊಡುವಂತೆ ಕೋರಲಾಗಿದೆ. ಈಗಾಗಲೇ ಪ್ರಶಸ್ತಿ ಪಡೆದವರಿಗೆ ಅವಕಾಶವಿರುವುದಿಲ್ಲ. ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ ತಿಂಗಳಿನಲ್ಲಿ ನಡೆಯಲಿದ್ದು, 15,000 ರೂ.ಗಳೊಂದಿಗೆ ಬೆಳ್ಳಿ ಫಲಕ ನೀಡಲಾಗುವುದೆಂದು ಪ್ರಶಸ್ತಿ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

Read More

ಮಂಗಳೂರು : ವಿದ್ಯಾ ಪ್ರಕಾಶನ ಮಂಗಳೂರು ಹಾಗೂ ‘ಥಂಡರ್ ಕಿಡ್ಸ್’ ಮಂಗಳೂರು ಜಂಟಿಯಾಗಿ ಆಯೋಜಿಸಿದ್ದ ‘ಗುಬ್ಬಿದ ಗೂಡು’ ಎಂಬ ಹೆಸರಿನ ಪುಟಾಣಿ ಮಕ್ಕಳ ವಾದ್ಯ ಗೋಷ್ಠಿ ಹಾಗೂ ಗಾಯನ ತಂಡದ ಉದ್ಘಾಟನೆಯು ತಾ.01-05-2023ರಂದು ಮಂಗಳೂರು ಕೊಡಿಯಾಲ್ ಬೈಲಿನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ನೆರವೇರಿತು. ಮಂಗಳೂರಿನ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಶ್ರೀ ಎಂ. ರಂಗನಾಥ ಭಟ್ ಇವರು ‘ಗುಬ್ಬಿದ ಗೂಡು’ ಮತ್ತು ಶ್ರೀ ರಘು ಇಡ್ಕಿದು ಇವರ ಕನ್ನಡ-ತುಳು ಭಾವಗೀತೆಗಳನ್ನು ಬಿಡುಗಡೆ ಮಾಡಿದರು. ಈ ಭಾವಗೀತೆಗಳನ್ನು ಶ್ರೀಮತಿ ಮಾಲಿನಿ ಕೇಶವ ಪ್ರಸಾದ್ ಇವರು ಮಧುರವಾಗಿ ಹಾಡಿದರು. ವಿನಮ್ರ ಇಡ್ಕಿದು ಹಾಡಿರುವ ಭಾವಗೀತೆಗಳ ಬಿಡುಗಡೆಯನ್ನು ಮಂಗಳೂರಿನ ಕೆನರಾ ಹೈಸ್ಕೂಲ್ ಸಿ.ಬಿ.ಎಸ್.ಇ. ಯ ಪ್ರಾಂಶುಪಾಲರಾದ ಶ್ರೀಮತಿ ಸುರೇಖಾ ಆರ್ ಭಟ್ ನೆರವೇರಿಸಿದರು. ‘ಗುಬ್ಬಿದ ಗೂಡು’ ಮತ್ತು ಭಾವಗೀತೆಗಳ ಬಿಡುಗಡೆ ಮಾಡಿದ ಶ್ರೀ ರಂಗನಾಥ್ ಭಟ್ ಮಾತನಾಡುತ್ತಾ “ಸಂಗೀತ ಸಂಯೋಜನೆ ಮಾಡಿ ಮಕ್ಕಳಿಗೆ ಪ್ರಾಸ ಪದ್ಯಗಳು ಹೊಸ ರೀತಿಯಲ್ಲಿ ಮನಮುಟ್ಟುವಂತೆ ಮಾಡುವ ‘ಗುಬ್ಬಿದ ಗೂಡು’…

Read More

ನಮ್ಮ ಹೆಮ್ಮೆಯ ಕರ್ನಾಟಕದ ಜನಪದ ಸಂಸ್ಕೃತಿಗಳಾದ ಕಲೆ, ಸಾಹಿತ್ಯ, ನೃತ್ಯ, ನಾಟಕ ಮುಂತಾದವುಗಳು ಮಾನವನಷ್ಟೇ ಪ್ರಾಚೀನ ಮತ್ತು ಅತ್ಯಂತ ಶ್ರೀಮಂತ. ಮೇಲಾಗಿ ನಮ್ಮ ರಾಷ್ಟ್ರದ ಜೀವಾಳ. ಅದರಲ್ಲಿಯೂ ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳು. ಕರ್ನಾಟಕದ ಧಾರ್ಮಿಕ ನೃತ್ಯಗಳನ್ನು ‘ಕುಣಿತ’ ಎನ್ನಲಾಗುತ್ತದೆ. ಅವುಗಳೇ ಡೊಳ್ಳು ಕುಣಿತ, ಸೋಮನ ಕುಣಿತ, ಪೂಜಾ ಕುಣಿತ, ಕಂಗೀಲು, ಕರಡಿ ಮಜಲು, ಕಂಸಾಳೆ, ಜಡೆ ಕೋಲಾಟ, ಗೊರವ ನೃತ್ಯ, ನಂದಿ ಧ್ವಜ ಮುಂತಾದವುಗಳು. ಇವುಗಳಲ್ಲಿ ಗೊರವ ಕುಣಿತ ಒಂದು ವಿಶೇಷ ಪ್ರಕಾರ. ಕರ್ನಾಟಕದ ವಿಶಿಷ್ಟ ಜನಪದ ಕಲೆಗಳಲ್ಲಿ ಒಂದು. ಗೊರವರ ಕುಣಿತವು ಮೈಲಾರ ಲಿಂಗನ ಪ್ರಾತಿನಿಧಿಕ ರೂಪವಾಗಿದ್ದು, ಪ್ರದರ್ಶನ ಕಲೆಗೆ ಪ್ರಸಿದ್ಧವಾದುದು. ಇವರು ಮೈಲಾರ ಲಿಂಗನ ಶಿಷ್ಯರೆಂದೂ ಮುಡುಕು ತೊರೆಯ ಮೈಲಾರ ಸ್ವಾಮಿಯ ಒಕ್ಕಲಿಗರೆಂದು ಗುರುತಿಸಿಕೊಂಡವರು. ಇದೊಂದು ಕುರುಬ ಗೌಡ ಸಮುದಾಯದ ಸಾಂಪ್ರದಾಯಿಕ ನೃತ್ಯವೂ ಹೌದು. ಇದರಿಂದಾಗಿ ಇವರನ್ನು ಮೈಲಾರ ಲಿಂಗ ಕಥಾ ಪರಂಪರೆಯ ಹಾಡುಗಾರಿಕಾ ವೃತ್ತಿ ಗಾಯಕರು ಎನ್ನಲಾಗಿದೆ. ಕಥೆ ಹೇಳುವ…

Read More

ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ‘ಸಂಕಲ್ಪ ಕನ್ನಡ ಸಂಘ’ ಕನ್ನಡ ವಿಭಾಗ ಇದರ ಆಶ್ರಯದಲ್ಲಿ ‘ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಹಾಗೂ ಕೃತಿ ಬಿಡುಗಡೆ’ ಕಾರ್ಯಕ್ರಮವು ದಿನಾಂಕ 05-05-2023ನೇ ಶುಕ್ರವಾರ ಅಪರಾಹ್ನ ಗಂಟೆ 02:00ಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲು ಸುಳ್ಯ ಇಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲು ವಹಿಸಲಿದ್ದು, ಸ.ಪ್ರ.ದ.ಕಾಲೇಜು ಸುಳ್ಯ ಇದರ ಪ್ರಾಂಶುಪಾಲರಾದ ಶ್ರೀ ಸತೀಶ್ ಕೆ. ಆರ್. ಉದ್ಘಾಟನೆ ಮಾಡಲಿದ್ದಾರೆ. ಖ್ಯಾತ ಸಾಹಿತಿ ಡಾ.ಬಿ. ಪ್ರಭಾಕರ ಶಿಶಿಲ ಇವರು ‘ಕನ್ನಡದ ಅಸ್ಮಿತೆ – ಕನ್ನಡ ಸಾಹಿತ್ಯ ಪರಿಷತ್ತು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಅದೇ ದಿನ ಕ.ಸಾ.ಪ. ಜಿಲ್ಲಾ ಪ್ರತಿನಿಧಿಯಾದ ಶ್ರೀ ರಾಮಚಂದ್ರ ಪಲ್ಲತಡ್ಕರವರ ಉಪಸ್ಥಿತಿಯಲ್ಲಿ ಡಾ.ಬಿ. ಪ್ರಭಾಕರ ಶಿಶಿಲರ ನಾಟಕ ಕೃತಿ…

Read More