ಸುಳ್ಯ: ರಂಗಮಯೂರಿ ಕಲಾಶಾಲೆ (ರಿ.) ಸುಳ್ಯ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ 78ನೇ ಸ್ವಾತಂತ್ರ್ಯ ಸಂಭ್ರಮ ಹಾಗೂ ಸಂಗೀತ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇನ್ನರ್ ವೀಲ್ ಕ್ಲಬ್ ಸುಳ್ಯ ಇದರ ಅಧ್ಯಕ್ಷರಾದ ಶ್ರೀಮತಿ ಚಿಂತನ ಸುಬ್ರಮಣ್ಯ ಇವರು ಸ್ವಾತಂತ್ರ್ಯದ ಮಹತ್ವದ ಬಗ್ಗೆ ಮಾತನಾಡಿ ಇವತ್ತಿನ ಕಾಲಮಾನಕ್ಕೆ ಮಕ್ಕಳಿಗೆ ಕಲೆ ಮತ್ತು ಸಾಹಿತ್ಯದ ಅಗತ್ಯತೆಯ ಬಗ್ಗೆ ಹೇಳಿದರು.
ಕಾರ್ಯಕ್ರಮದಲ್ಲಿ ಪುತ್ತೂರಿನ ಸುಪ್ರಜಾ ರಾವ್ ಇವರಿಂದ ವಯೊಲಿನ್ ವಾದನ, ರಂಗಮಯೂರಿ ಕಲಾಶಾಲೆಯ ಸುಗಮ ಸಂಗೀತ ವಿದ್ಯಾರ್ಥಿಗಳಿಂದ ಸಂಗೀತ ವೈಭವ, ಪುತ್ತೂರಿನ ಶಿಕ್ಷಕಿ ಸುಮನಾ ರಾವ್ ಇವರ ತರಬೇತಿ ಹಾಗೂ ನಿರ್ದೇಶನದಲ್ಲಿ ಮೂಡಿ ಬಂತು. ಹಿಮ್ಮೇಳನದಲ್ಲಿ ಶುಭಕರ್ ಬೆಟ್ಟಂಪಾಡಿ ಹಾಗೂ ಬಾಲಕೃಷ್ಣ ಮೇನಾಲ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಉತ್ತಮ ಕನ್ನಡ ಸಾಧಕ ಪ್ರಶಸ್ತಿ ಪುರಸ್ಕೃತರು, ಸುಳ್ಯದ ಕೆ.ವಿ.ಜಿ. ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲಿನ ಕನ್ನಡ ಶಿಕ್ಷಕಿ ಭವ್ಯ ಎ., ಸುಳ್ಯ ಸೈಂಟ್ ಜೋಸೆಫ್ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಮೇರಿ ಸ್ಟೆಲ್ಲಾ, ಸುಳ್ಯ ರೋಟರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ರೋಹಿಣಿ ಅಂಬೆಕಲ್ಲು, ರಂಗಮಯೂರಿ ಕಲಾಶಾಲೆಯ ಪೋಷಕರಾದ ಭವಾನಿಶಂಕರ ಅಡ್ತಲೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಂಗಮಯೂರಿ ಕಲಾಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ಪ್ರಸ್ತಾವಿಸಿ, ರಂಗಮಯೂರಿ ಕಲಾಶಾಲೆಯ ಪೋಷಕರು ಸುನಂದಾ ಶೆಟ್ಟಿ ಸ್ವಾಗತಿಸಿ, ವಿದ್ಯಾರ್ಥಿ ದೃತಿ ದೀಟಿಗೆ ವಂದಿಸಿದರು. ಕಾರ್ಯಕ್ರಮವನ್ನು ಮೇಘ ಕೃಷ್ಣ ಕಾಯರ್ತೋಡಿ ಹಾಗೂ ಶಶಿಕಾಂತ್ ಮಿತ್ತೂರು ನಿರ್ವಹಿಸಿದರು.