Subscribe to Updates
Get the latest creative news from FooBar about art, design and business.
Author: roovari
ವಸ್ತ್ರವಿನ್ಯಾಸದ ಮೆರುಗು, ಕುಣಿತದ ಶ್ರೀಮಂತಿಕೆ, ಮಾತುಗಾರಿಕೆಯ ಅಬ್ಬರದಲ್ಲಿ ಪ್ರೇಕ್ಷಕರನ್ನು ರಂಜಿಸುವ ಕಲೆಯ ಮತ್ತೊಂದು ಹೆಸರೇ ಯಕ್ಷಗಾನ. ಬಡಗುತಿಟ್ಟು ಯಕ್ಷಗಾನ ರಂಗದ ಅನುಭವೀ ವೇಷಧಾರಿ ಶ್ರೀ ದಿನಕರ್ ಕುಂದರ್ ನಡೂರು ಅವರು ತಿರುಗಾಟದ ರಜತ ಸಂಭ್ರಮದಲ್ಲಿದ್ದಾರೆ. ವೃತ್ತಿ ಕಲಾವಿದನಾಗಿ ಕಳೆದ ಇಪ್ಪತ್ತೈದು ವರ್ಷಗಳಿಂದ ಯಕ್ಷಗಾನ ಕಲಾ ವ್ಯವಸಾಯವನ್ನು ಮಾಡುತ್ತಿದ್ದಾರೆ. 2022-23ನೇ ಸಾಲು ಇವರ ಇಪ್ಪತ್ತೈದನೇ ವರ್ಷದ ತಿರುಗಾಟ. ಯಕ್ಷಗಾನವನ್ನೇ ವೃತ್ತಿಯಾಗಿಸಿಕೊಂಡು ತಮ್ಮದೇ ವಿಶೇಷ ಶೈಲಿಯ ಮೂಲಕ ಜನಪ್ರಿಯತೆ ಗಳಿಸಿದ ಕಲಾವಿದ ದಿನಕರ್ ಕುಂದರ್ ನಡೂರು ರಂಗದಲ್ಲಿ ಸದಾ ಹೊಸತನ್ನು ನೀಡುವ ಅವರ ಅರ್ಥಗಾರಿಕೆ, ಕುಣಿತ ನೋಡಲು ಬಹಳ ಸುಂದರ. ೨೮.೦೪.೧೯೮೦ ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ನಡೂರು, ಅಜ್ಜಿಮನೆಯ ಮಾಧವ ರಾವ್ (ದಿ.ಶಿರಿಯಾರ ಮಂಜು ನಾಯಕರ ತಮ್ಮ) ಹಾಗೂ ತುಂಗ ಮರಕಾಲ್ತಿ ಇವರ ಮಗನಾಗಿ ಜನನ. ೭ ನೇ ತರಗತಿವರೆಗೆ ವಿದ್ಯಾಭ್ಯಾಸ. ಹಿರಿಯಣ್ಣ ಶೆಟ್ಟಿಗಾರ್, ತಂತ್ರಾಡಿ ಇವರು ಯಕ್ಷಗಾನದ ಪ್ರಥಮ ಗುರು. ಯಕ್ಷಗಾನ ಕಲಾಕೇಂದ್ರ ಉಡುಪಿಯಲ್ಲಿ ಒಂದು ವರುಷದ ಅಭ್ಯಾಸ. ನೀಲಾವರ…
ಉಡುಪಿ: ಉಡುಪಿಯಲ್ಲಿ 1965ರಲ್ಲಿ ಹುಟ್ಟಿಕೊಂಡ, ಇಂದು ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಪ್ರಸಿದ್ಧ ನಾಟಕ ಸಂಸ್ಥೆ “ರಂಗಭೂಮಿ”ಯ ಆರಂಭದ ದಿನಗಳಲ್ಲಿ ಬಹು ಹಾಸ್ಯ ಪ್ರಜ್ಞೆಯ, ಆಕರ್ಷಕ ನಗುಮೊಗದ, ಪಾದರಸದಂತೆ ಸದಾ ಚಟುವಟಿಕೆಯ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರಿಯ ಹಾಸ್ಯ ಕಲಾವಿದರಾಗಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದವರು ಹೆಸರಾಂತ ಹಿರಿಯ ರಂಗ ಕಲಾವಿದ ಉಡುಪಿ ಮಹಮ್ಮದ್ ಅಸ್ಲಾಂ (ಯು.ಎಂ. ಅಸ್ಲಾಂ) (86)ರವರು ಇಂದು ವಯೋಸಹಜ ಅಸೌಖ್ಯದಿಂದ ತಮ್ಮ ಸ್ವಗೃಹದಲ್ಲಿ ದಿನಾಂಕ 02-05-2023ರಂದು ದೈವಾಧೀನರಾದರು. ಮಡದಿ ಮತ್ತು 4 ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 04-12-1937ರಂದು ಹುಟ್ಟಿದ ಅಸ್ಲಾಂರು, ಶ್ರೀ ಅಬ್ದುಲ್ ಆಲಿ ಸಾಹೇಬ್ ಹಾಗೂ ಹಫೀಝಬಿ ದಂಪತಿಗಳ 13 ಮಕ್ಕಳಲ್ಲಿ ಅಸ್ಲಾಂರು ಹಿರಿಯರು. ಅಸ್ಲಾಂ ಶಾಲಾ ದಿನಗಳಲ್ಲಿಯೇ ನಟನೆಯ ಕಡೆಗೆ ಒಲವನ್ನು ತೋರಿದವರು. ಕಾಲೇಜಿನ ಬಿ.ಎ.- ಎ.ಎಫ್.ಐ.ಐ. ಶಿಕ್ಷಣ ಪೂರೈಸುತ್ತಲೇ ಭಾರತೀಯ ಜೀವ ವಿಮಾ ನಿಗಮದಲ್ಲಿಯೇ 1967ರಲ್ಲಿ ಉದ್ಯೋಗ ದೊರಕಿಸಿಕೊಂಡರು. 20 ವರ್ಷಗಳ ಕಾಲ ಎಲ್.ಐ.ಸಿ.ಯ ವಿವಿಧ ಹುದ್ದೆಗಳಲ್ಲಿ…
ಮಂಗಳೂರು : ಹಿರಿಯ ಯಕ್ಷಗಾನ ಕಲಾವಿದ ಬಿ.ಕೆ.ಚೆನ್ನಪ್ಪ ಗೌಡರ ನಿವಾಸದಲ್ಲಿ ದಿನಾಂಕ 28.04.2023 ರಂದು ಜರಗಿದ ದಿ. ಅಳಿಕೆ ರಾಮಯ್ಯ ರೈ ಸ್ಮೃತಿ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಹಿರಿಯ ಅರ್ಥಧಾರಿ, ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಅವರು ಸಂಸ್ಮರಣಾ ಭಾಷಣ ಮಾಡಿದರು. ‘ಒಂದು ಕಾಲಘಟ್ಟದಲ್ಲಿ ತನ್ನ ನಟನಾ ಕೌಶಲ್ಯ ಮತ್ತು ವಿಶಿಷ್ಟ ಹೆಜ್ಜೆಗಾರಿಕೆಯಿಂದ ತೆಂಕುತಿಟ್ಟು ಯಕ್ಷರಂಗವನ್ನು ಆಳಿದ ಅಳಿಕೆ ರಾಮಯ್ಯ ರೈ ಭವಿಷ್ಯದ ಕಲಾವಿದರಿಗೆ ಮಾದರಿಯಾಗಿದ್ದರು. ಅವರ ಹೆಸರಿನಲ್ಲಿ ಪ್ರತಿ ವರ್ಷ ನಿವೃತ್ತ ಯಕ್ಷಗಾನ ಕಲಾವಿದರ ಮನೆಗೆ ತೆರಳಿ ನೀಡುವ ಸಹಾಯ ನಿಧಿಯು ಒಂದು ಸಾರ್ಥಕ ಸ್ಮೃತಿ ಗೌರವವಾಗಿದೆ’ ಎಂದು ಹೇಳಿದ್ದಾರೆ. ಬೆಂಗಳೂರಿನ ದಿ. ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ನೀಡಲಾಗುವ ರೂ.20,000/- ಯಕ್ಷ ಸಹಾಯ ನಿಧಿಯನ್ನು 2022- 23ನೇ ಸಾಲಿಗೆ ಇರಾ ಗ್ರಾಮದ ಕೆಂಜಿಲ ಪದವಿನಲ್ಲಿರುವ ಬಿ.ಕೆ.ಚೆನ್ನಪ್ಪ ಗೌಡರಿಗೆ ಗೃಹ ಸಂಮಾನದೊಂದಿಗೆ ಸಮರ್ಪಿಸಲಾಯಿತು. ಮುಂಬಯಿ ಉದ್ಯಮಿ, ಲೇಖಕ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ…
ಪುತ್ತೂರು : ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಪಾಕ್ಷಿಕ ತಾಳಮದ್ದಳೆ “ಸುಧನ್ವ ಮೋಕ್ಷ” ಶ್ರೀ ಆಂಜನೇಯ ಮಂತ್ರಾಲಯದಲ್ಲಿ ದಿನಾಂಕ 29-04-2023ರಂದು ಸಂಜೆ ನಡೆಯಿತು. ಹಿಮ್ಮೇಳದಲ್ಲಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಸುಧನ್ವ (ಭಾಸ್ಕರ್ ಬಾರ್ಯ ಮತ್ತು ಗುಂಡ್ಯಡ್ಕ ಈಶ್ವರ ಭಟ್), ಅರ್ಜುನ (ಗುಡ್ಡಪ್ಪ ಬಲ್ಯ), ಕೃಷ್ಣ (ತಾರಾನಾಥ ಸವಣೂರು), ಹಂಸ ಧ್ವಜ (ಬಡೆಕ್ಕಿಲ ಚಂದ್ರಶೇಖರ ಭಟ್) ಮತ್ತು ಪ್ರಭಾವತಿ (ಕು೦ಬ್ಳೆ ಶ್ರೀಧರ್ ರಾವ್) ಸಹಕರಿಸಿದರು. ಬನ್ನೂರು ರಾಜಗೋಪಾಲ್ ಭಟ್ ಪ್ರಾಯೋಜಿಸಿದ್ದರು. ಟಿ. ರಂಗನಾಥ ರಾವ್ ಸಹಕರಿಸಿದರು.
ಮಂಗಳೂರು : ಶ್ರೀ ಗೋಕರ್ಣನಾಥೇಶ್ವರ ಪದವಿ ಕಾಲೇಜು, ಗಾಂಧಿನಗರ, ಮಂಗಳೂರು ಇದರ ಸಭಾಂಗಣದಲ್ಲಿ 2023 ಏಪ್ರಿಲ್ 27ರಂದು ‘ಸಾಹಿತ್ಯದಲ್ಲಿ ಹಾಸ್ಯ’ ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮವು ಜರುಗಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಇದರ ನಿವೃತ್ತ ಹಿರಿಯ ಅಧಿಕಾರಿಯಾದ ಶ್ರೀ ಯು. ರಾಮರಾವ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, “ಜೀವನದಲ್ಲಿ ಹಾಸ್ಯ ಮತ್ತು ಚಪ್ಪಾಳೆ ತಟ್ಟುವುದರಿಂದ ನಮ್ಮ ಆರೋಗ್ಯದ ಸಮಸ್ಯೆ ನಿವಾರಣೆಯಾಗುತ್ತದೆ. ಡಿ.ವಿ.ಜಿ, ದಿನಕರ ದೇಸಾಯಿ ಮುಂತಾದ ಹಾಸ್ಯ ಬರಹಗಾರರ ಸಾಹಿತ್ಯ ಕೃತಿಗಳನ್ನು ವಿದ್ಯಾರ್ಥಿಗಳು ಓದಬೇಕು. ನಾವು ಹಾಸ್ಯ ಮಾಡಬೇಕು, ಆದರೆ ಇನ್ನೊಬ್ಬರಿಗೆ ಅಪಹಾಸ್ಯ ಮಾಡಬಾರದು. ಹಾಸ್ಯವಿರುವುದು ಮನಸ್ಸಿನ ಒತ್ತಡ ನಿವಾರಣೆಗಾಗಿ” ಎಂದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಆಶಾಲತಾ ಸುವರ್ಣ ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿ “ನಾವಿಂದು ಧಾವಂತದ ಯುಗದಲ್ಲಿ ಬದುಕುತ್ತಿದ್ದೇವೆ. ಹಾಸ್ಯವು ವ್ಯಕ್ತಿಯ ಅನುಭವದಿಂದ ಬರುತ್ತದೆ. ನಮಗೆ ಜ್ಞಾನ ದಾಹ ಇರಬೇಕು. ಪ್ರಸ್ತುತ ನಾವಿರುವ ಸಮಾಜವನ್ನು ಅರ್ಥ ಮಾಡಿಕೊಳ್ಳಬೇಕು” ಎಂದರು. ಕಾಲೇಜಿನ ಡೀನ್ ಡಾ. ಉಮ್ಮಪ್ಪ ಪೂಜಾರಿ…
ಪುತ್ತೂರು : ಪುತ್ತೂರು ಸಮೀಪದ ಮುರದಲ್ಲಿರುವ “ಶ್ರೀ ಮಾ”, ಪ್ರೊ.ವೇದವ್ಯಾಸ ರಾಮಕುಂಜರ ಮನೆಯಲ್ಲಿ ನಡೆದ ಮಧುಸೂದನ ಪೂಜಾ “ಅಕ್ಷಯ ತೃತೀಯ” ಬಾಬ್ತು ಯಕ್ಷಗಾನ ಅರ್ಥದಾರಿ ಮತ್ತು ಸಂಘಟಕ ನೆಲೆಯಲ್ಲಿ ಭಾಸ್ಕರ ಬಾರ್ಯರಿಗೆ ಕೊಡಮಾಡಿದ ‘ಅಕ್ಷಯ ತೃತೀಯ ಗೌರವ ಪ್ರಶಸ್ತಿ’ ದಿನಾಂಕ 22-04-2023ರಂದು ನಡೆಯಿತು. ವೇದಿಕೆಯಲ್ಲಿ ಬಾರ್ಯರ ಪತ್ನಿ ಶ್ರೀಮತಿ ಸ್ವರ್ಣಲತಾ ಭಾಸ್ಕರ್, ಡಾ. ತಾಳಾಜೆ ವಸಂತ ಕುಮಾರ್, ಪ್ರೊ. ವೇದವ್ಯಾಸ ದಂಪತಿಗಳು, ಪುತ್ರಿ ಡಾ.ನಿವೇದಿತಾ ಮತ್ತು ಗಿರಿಧರ ರಾಮಕುಂಜ ದಂಪತಿಗಳು ಉಪಸ್ಥಿತರಿದ್ದರು.
ಪುತ್ತೂರು : ಅಕ್ಷತಾರಾಜ್ ಪೆರ್ಲರವರು ಬರೆದ ‘ಅವಲಕ್ಕಿ ಪವಲಕ್ಕಿ’ ಲೇಖನಗಳ ಸಂಗ್ರಹ ಅತ್ಯದ್ಭುತವಾಗಿ ಮೂಡಿಬಂದಿದೆ. ಇದು ಬರಿಯ ಲೇಖನವಷ್ಟೇ ಅಲ್ಲ .. ! ವಾಸ್ತವಿಕತೆಯ ಬೊಟ್ಟು ಮಾಡಿ ಬದಲಾವಣೆಗೆ ಮುನ್ನುಡಿ ಬರೆವ ಟಾನಿಕ್ ನಂತಿದೆ. ಇದರಲ್ಲಿರುವ ಸುಮಾರು 55 ಲೇಖನಗಳೂ ಕೂಡಾ ಒಂದಿಲ್ಲೊಂದು ಹೊಸತನದೊಂದಿಗೆ ಓದುಗರ ಮನ ತಲುಪಲು ಪ್ರಯತ್ನಿಸಿದೆ. ಇಲ್ಲಿ ಲೇಖಕಿ ಅಕ್ಷತರಾಜ್ ಪೆರ್ಲ ಅವರ ಆಂತರ್ಯದ ದನಿಯೊಂದು ಸದ್ದಿಲ್ಲದೆ ಸಹೃದಯದೊಂದಿಗೆ ಮಾತನಾಡುತ್ತಾ ಹೋಗುತ್ತದೆ. ಪ್ರತೀ ಲೇಖನಗಳೂ ತೀರಾ ಸಾಮಾನ್ಯವಾಗಿ ಆರಂಭಗೊಂಡು ಕೊನೆಯ ಒಂದು ಭಾಗದಲ್ಲಂತೂ ಒಮ್ಮೆ ನಮ್ಮೊಳಗೆ ‘ಇದು ಹೌದಲ್ಲವೇ ?’ ಎಂದು ಯೋಚಿಸುವಂತೆ ಮಾಡುವಲ್ಲಿ ಯಶಸ್ಸು ಕಂಡಿದೆ. ಇಲ್ಲಿ ಅಂಗಳದಲ್ಲಿ ಆಡುವ ಪುಟ್ಟ ಮಗುವಿನಿಂದ ಹಿಡಿದು, ಮನೆಯೊಳಗೆ ಕುಳಿತು ಹಳೆಯ ನೆನಪುಗಳನ್ನು ಮೆಲುಕು ಹಾಕುವ ಅಜ್ಜಿ, ಮನೆಯ ಅಡುಗೆ ಕೋಣೆ, ಹೆಂಡತಿಯ ಸತ್ಕಾರ, ಗಂಡನ ಆರ್ಡರ್ ಭಾವ, ಸಾಫ್ಟ್ ವೇರ್ ಬದುಕು, ಅಂಶದ ಬದುಕಿನಲ್ಲಿ ಸುಖ ಕಾಣುವ ಲೇಟೆಸ್ಟ್ ಅಪ್ಪ–ಅಮ್ಮ .. ಹೀಗೆ ಇನ್ನೂ ಹಲವು ಗಂಭೀರವಾಗಿ…
ವಿಜಯಪುರ : ನಗರದ ಕುಮಾರವ್ಯಾಸ ಭಾರತ ಭವನದಲ್ಲಿ ಶ್ರೀ ಕುಮಾರವ್ಯಾಸ ಭಾರತ ವೇದಿಕೆಯಿಂದ ಯೋಗೀಂದ್ರ ಕವಿ ಕುಮಾರವ್ಯಾಸರ ಜಯಂತಿಯನ್ನು ದಿನಾಂಕ 27-04-2023 ಗುರುವಾರದಂದು ಸಂಭ್ರಮ-ಸಡಗರದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಮಾರಂಭವು ‘ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ’ ನಾಡಗೀತೆಯೊಂದಿಗೆ ಆರಂಭವಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಪ್ರಿಯಾ ಪ್ರಾಣೇಶ್ ಹರಿದಾಸ್ ಇವರುಗಳು ದೀಪ ಬೆಳಗಿ ‘ಕುಮಾರವ್ಯಾಸ ಜಯಂತಿ’ಯನ್ನು ಉದ್ಘಾಟಿಸಿದರು. ಆರಂಭದಲ್ಲಿ ವೇದಿಕೆಯ ಸಂಚಾಲಕರಾದ ಕಲ್ಯಾಣರಾವ್ ದೇಶಪಾಂಡೆಯವರು ಸಂಘದ ಕಾರ್ಯಚಟುವಟಕೆಗಳನ್ನು ವಿವರಿಸಿದರು. ನಂತರ ಹಿರಿಯ ಗಮಕಿಗಳಾದ ಶ್ರೀಮತಿ ಶಾಂತಾ ಕೌತಾಳ ಇವರು ‘ಶ್ರೀವನಿತೆಯರಸನೆ ವಿಮಲ ರಾಜೀವ ಪೀಠನ ಪಿತನೆ’ ಎಂಬ ಮಂಗಳಾಚರಣ ಸ್ತುತಿಯೊಂದಿಗೆ ಗಮಕ ಕಾರ್ಯಕ್ರಮವನ್ನು ಆರಂಭಿಸಿದರು. ಅಂದು ಗಮಕಕ್ಕಾಗಿ ಆಯ್ದುಕೊಂಡ ಭಾಗ, ಗದುಗಿನ ಭಾರತದ ವಿರಾಟ ಪರ್ವದ ‘ಉತ್ತರಾಭಿಮನ್ಯು ಕಲ್ಯಾಣ’ ಎಂಬ ಪ್ರಸಂಗ. ಗಮಕ ವಾಚನದಲ್ಲಿ ಬರುವ ಕೃಷ್ಣನ ಪಾತ್ರ ಹಾಗೂ ಬಂಧು-ಬಳಗದವರ ಸ್ನೇಹ, ಪ್ರೀತಿ, ಮದುವೆಯ ಗಳಿಗೆ ಬಟ್ಟಲು, ಪುಣ್ಯಾಹವಾಚನ, ಅಕ್ಷತೆ ಮುಂತಾದವುಗಳು ಕೇಳುಗರ ಗಮನ…
ಶಿವಮೊಗ್ಗ : ರಾಜ್ಯ ಸರಕಾರವು ಗಮಕ ಕಲಾವಿದರಿಗೆ ನೀಡುವ 2020-21ನೇ ಸಾಲಿಗೆ ‘ಕುಮಾರವ್ಯಾಸ ಪ್ರಶಸ್ತಿ’ಯನ್ನು ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಗ್ರಾಮದ ಶ್ರೀ ರಾಜಾರಾಮ ಮೂರ್ತಿ ಅವರಿಗೆ ಘೋಷಿಸಿದೆ. ಕಳೆದ 50 ವರ್ಷಗಳಿಂದ ಗಮಕ ವ್ಯಾಖ್ಯಾನ ಕ್ಷೇತ್ರದಲ್ಲಿ ಕೆಲಸ ಮಾಡಿರುವ ರಾಜಾರಾಮ ಮೂರ್ತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಲ್ಲದೆ ಹೊರ ರಾಜ್ಯಗಳಲ್ಲೂ ಗಮಕ ವ್ಯಾಖ್ಯಾನ ಕಾರ್ಯಕ್ರಮಗಳನ್ನು ನೀಡಿ ಗಮಕ ಕಲೆಯನ್ನು ಜನಪ್ರಿಯಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಕನ್ನಡದ ಪ್ರಖ್ಯಾತ ಕಾವ್ಯಗಳಾದ ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ಪಂಪ ಭಾರತ, ತೊರವೆ ರಾಮಾಯಣ, ನಳಚರಿತ್ರೆ, ರನ್ನ ಕವಿಯ ಗದಾಯುದ್ಧ, ರಾಷ್ಟ್ರಕವಿ ಕುವೆಂಪು ಅವರ ರಾಮಾಯಣ ದರ್ಶನಂ, ಕನ್ನಡ ಭಾಗವತ ಮೊದಲಾದ 20ಕ್ಕೂ ಹೆಚ್ಚು ಕಾವ್ಯಗಳನ್ನು ವ್ಯಾಖ್ಯಾನದಲ್ಲಿ ಅಳವಡಿಸಿದ್ದಾರೆ. ರಾಜ್ಯದ 70ಕ್ಕೂ ಹೆಚ್ಚು ಖ್ಯಾತ ಗಮಕಿಗಳೊಡನೆ ವ್ಯಾಖ್ಯಾನ ನಡೆಸಿಕೊಟ್ಟಿದ್ದಾರೆ. ಕರ್ನಾಟಕಕ್ಕೆ ವಿಶಿಷ್ಟವಾದ ಗಮಕ ಕಲೆಗೆ ಪ್ರಶಸ್ತ್ಯ ನೀಡುವ ಏಕೈಕ ಮಾಸಪತ್ರಿಕೆ ‘ಗಮಕ ಸಂಪದ’ ಹದಿನಾರು ವರ್ಷಗಳಿಂದ ನಿಯತವಾಗಿ ಹೊರ ಬರುತ್ತಿರುವ ಈ ಪತ್ರಿಕೆಯ ಸಂಪಾದಕ ಹಾಗೂ ‘ಸಂಕೇತಿ…
ಮಂಗಳೂರು : ಮೇರಿಹಿಲ್ ಗುರುನಗರದ ನೃತ್ಯ ಸುಧಾ ಕೇಂದ್ರದ ವಾರ್ಷಿಕೋತ್ಸವದ ಅಂಗವಾಗಿ ‘ನೃತ್ಯೋತ್ಕರ್ಷ -2023’ ಭರತನಾಟ್ಯ ಕಾರ್ಯಕ್ರಮ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ನಡೆಯಿತು. ಶ್ರೀಮತಿ ಚಂದ್ರಮತಿ ಅಗಳಿ, ಶ್ರೀ ಎಸ್.ಪಿ. ರಮೇಶ್ ರಾವ್ ಹಾಗೂ ಇವರ ಜೊತೆ ವಿದ್ವಾನ್ ಕೃಷ್ಣಾಚಾರ್ ಇವರುಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕೃಷ್ಣ ರಾವ್ ಅಗಳಿ ನೆರವೇರಿಸಿದರು. ನೃತ್ಯ ಸುಧಾ ಕೇಂದ್ರ ಹುಟ್ಟಿ ಬೆಳೆದು ಬಂದ ದಾರಿಯ ಅವಲೋಕನ ಮಾಡಿ ಈಗ ಅಭಿವೃದ್ಧಿ ಪಥದಲ್ಲಿ ಮುಂದುವರಿಯುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಏಪ್ರಿಲ್ 21ರಂದು ಮಗಳು ವಿದುಷಿ ಸೌಮ್ಯಾ ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬವನ್ನು ಆಡಂಬರ, ದುಂದುವೆಚ್ಚವಿಲ್ಲದೆ ಸಂಭ್ರಮಿಸುವುದು ಸೌಮ್ಯಾ ಅವರ ಉದ್ದೇಶವಾಗಿತ್ತು. ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ವಿದ್ವತ್ ಮುಗಿಸಿದವರಿಗೆ, ಏಕವ್ಯಕ್ತಿ ನೃತ್ಯ ಪ್ರದರ್ಶನ, ಕಿರಿಯರ ವಿಭಾಗ, ಹಿರಿಯರ ವಿಭಾಗ ಮತ್ತು ವಿದ್ವತ್ ಪೂರ್ವ ವಿದ್ಯಾರ್ಥಿಗಳಿಗೆ ಸಮೂಹ ನೃತ್ಯಗಳನ್ನು ಮಾಡುವ ವ್ಯವಸ್ಥೆ ಮಾಡಿದ್ದು, ಒಟ್ಟು 28 ಮಂದಿ ಇದರಲ್ಲಿ ಭಾಗವಹಿಸುವವರಿದ್ದರು. ಅದಕ್ಕೆ ಬೇಕಾಗುವ ಖರ್ಚನ್ನು ಸಂಸ್ಥೆಯ ವತಿಯಿಂದ…