Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ಎಂ.ವಿ. ಸೂರಪ್ಪ ಸ್ಮರಣಾರ್ಥ ದತ್ತಿ ಉಪನ್ಯಾಸ | ಮೇ 16

    May 13, 2026

    ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಬಸವ ಜಯಂತಿ ಹಾಗೂ ಕಾರ್ಮಿಕ ದಿನಾಚರಣೆ

    May 13, 2026

    ನೃತ್ಯ ವಿಮರ್ಶೆ | ದೈವೀಕ ಸಾಕ್ಷಾತ್ಕಾರದ ಗೌರಿ ಕೃಷ್ಣಳ ಸಾತ್ವಿಕಾಭಿನಯ

    May 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕುಂದಾಪುರದ ಕಲಾಕ್ಷೇತ್ರದಲ್ಲಿ ‘ಕೃಷ್ಣಾರ್ಜುನರ ಕಾಳಗ’ ಚಿಣ್ಣರ ತಾಳಮದ್ದಳೆ
    Yakshagana

    ಕುಂದಾಪುರದ ಕಲಾಕ್ಷೇತ್ರದಲ್ಲಿ ‘ಕೃಷ್ಣಾರ್ಜುನರ ಕಾಳಗ’ ಚಿಣ್ಣರ ತಾಳಮದ್ದಳೆ

    August 19, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕುಂದಾಪುರ: ಕುಂದಾಪುರ ಕಲಾಕ್ಷೇತ್ರದ ಆಶ್ರಯದಲ್ಲಿ ‘ಸಿನ್ಸ್ 1999  ಶ್ವೇತಯಾನ-52’ ಕಾರ್ಯಕ್ರಮದ ಅಂಗವಾಗಿ ತೆಕ್ಕಟ್ಟೆ ಕೊಮೆಯ ಯಶಸ್ವಿ ಕಲಾವೃಂದದ ಚಿಣ್ಣರ ತಾಳಮದ್ದಳೆ ಕಾರ್ಯಕ್ರಮವು 18 ಆಗಸ್ಟ್ 2024ರಂದು ಕುಂದಾಪುರದ ಕಲಾಕ್ಷೇತ್ರದಲ್ಲಿ ನಡೆಯಿತು.

    ಕಾರ್ಯಕ್ರಮದಲ್ಲಿ ಮಾನ್ಯ ಎ. ಎಸ್. ಎನ್. ಹೆಬ್ಬಾರ್‌ ಇವರನ್ನು ಅಭಿನಂದಿಸಿ ಮಾತನ್ನಾಡಿದ ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್ “ಕಲೆಯಲ್ಲಿ ಸಾತ್ವಿಕವಾದ ಹುಚ್ಚು ಇದ್ದರೆ ಸಂಸ್ಕಾರಯುತ ಸಮಾಜವಾಗಿ ಬೆಳೆಯುವುದಕ್ಕೆ ಸಾಧ್ಯ. ಕಲೆಯನ್ನು ನಾವು ನಮ್ಮೊಳಗೆ ರೂಢಿಸಿಕೊಳ್ಳಬೇಕು. ಮಕ್ಕಳು ಕಲೆಯಲ್ಲಿ ಆಸಕ್ತಿಯನ್ನು ಹೊಂದಲೇ ಬೇಕು. ಆಗ ಮಾತ್ರ ಮಕ್ಕಳು ನಮ್ಮೊಂದಿಗೆ ಸಂಸ್ಕಾರವಂತರಾಗಿ ಉಳಿಯುವುದಕ್ಕೆ ಸಾಧ್ಯ. ಮಾತೇ ಆಡದ ಮಕ್ಕಳೂ ಕಲೆಯಲ್ಲಿ ತೊಡಗಿಸಿಕೊಂಡರೆ ರಂಗವೇರಿ ನಿರರ್ಗಳವಾಗಿ ಮಾತಾಡುವುದು ಸಾಧ್ಯವಾಗುತ್ತದೆ. ಪೋಷಕರು ಈ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೋತ್ಸಾಹವನ್ನು ಕೊಡಬೇಕು. ಆಗ ಸುಂದರವಾದ ಸಮಾಜ ನಿರ್ಮಾಣವಾಗುವುದಕ್ಕೆ ಸಾಧ್ಯ.” ಎಂದರು.

    ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎ. ಎಸ್. ಎನ್ ಹೆಬ್ಬಾರ್ “ಯಶಸ್ವೀ ಕಲಾವೃಂದದ ಬೆಳ್ಳಿ ಹಬ್ಬದಲ್ಲಿ 84ರ ಪ್ರಾಯದಲ್ಲಿ ವೇಷ ತೊಟ್ಟು ರಂಗವೇರಿ ಕುಣಿಯುವ ಅವಕಾಶ ಲಭ್ಯವಾದದ್ದು ಅವಿಸ್ಮರಣೀಯ. ಯಕ್ಷಗಾನ ಕಲೆ ರಾಷ್ಟ್ರೀಯ ಕಲೆಯಾಗಿ ಬಿಂಬಿತವಾಗಬೇಕು. ಅತ್ಯದ್ಭುತ ಕಲೆಯಾದ ಯಕ್ಷಗಾನವು ವಿಶ್ವ ಮಾನ್ಯ. ಸರಕಾರದಲ್ಲಿನ ಅಧಿಕಾರಿಗಳಿಗೆ ಯಕ್ಷಗಾನ ಕಲೆಯ ಬಗೆಗಿನ ವಿಶೇಷತೆ ಅರ್ಥವಾಗಬೇಕು. ಯಕ್ಷಗಾನ ಕಲೆಯು ಭಾಷಾ ಶುದ್ಧಿಯೊಂದಿಗೆ ಬದುಕಿನ ಮೌಲ್ಯವನ್ನು ತಿಳಿಸುವ ಅದ್ಭುತ ಕಲೆ. ಅದು ಚಿಣ್ಣರ ಮೂಲಕ ಮುಂದೆ ಸಾಗಬೇಕು.” ಎಂದರು.

    ಉದ್ಯಮಿಗಳಾದ ರಾಜೇಶ್ ಕಾವೇರಿ, ಸನತ್ ರೈ, ದಾಮೋದರ ಪೈ ಉಪಸ್ಥಿತರಿದ್ದರು. ಬಳಿಕ ‘ಕೃಷ್ಣಾರ್ಜುನರ ಕಾಳಗ’ ಚಿಣ್ಣರ ತಾಳಮದ್ದಳೆ ರಂಗದಲ್ಲಿ ಪ್ರಸ್ತುತಿಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Article‘ಕೊಡವ ಕಥೆ ಜೊಪ್ಪೆ’ಗೆ ಕಥೆಗಳ ಆಹ್ವಾನ | 20 ಸೆಪ್ಟೆಂಬರ್
    Next Article ಬೆಂಗಳೂರಿನ ಸಮುಚ್ಚಯ ಭವನದಲ್ಲಿ ‘ತಿಂಗಳ ನಾಟಕ ಸಂಭ್ರಮ’ | ಆಗಸ್ಟ್ 22
    roovari

    Comments are closed.

    Related Posts

    ಮುಂಬಯಿ ಯಕ್ಷಗಾನ ಸಮ್ಮೇಳನ 2026 ಇವರ ಸಮ್ಮೇಳನಾಧ್ಯಕ್ಷರಾಗಿ ಡಾ. ಟಿ. ಶ್ಯಾಮ ಭಟ್ ಆಯ್ಕೆ

    May 12, 2026

    ಉಡುಪಿಯಲ್ಲಿ ‘ಮುಖವರ್ಣಿಕೆ – ವೇಷಭೂಷಣ ಶಿಬಿರ’ ಉದ್ಘಾಟನೆ

    May 12, 2026

    ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಪಾಕ್ಷಿಕ ತಾಳಮದ್ದಳೆ

    May 11, 2026

    ಬೆಂಗಳೂರಿನಲ್ಲಿ ಸಪ್ತ ದಿನಗಳ ‘ತಿತ್ತಿತೈ ಯಕ್ಷಗಾನ ಶಿಬಿರ’ | ಮೇ 13ರಿಂದ

    May 8, 2026

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.