Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಅರೆಹೊಳೆ ಪ್ರತಿಷ್ಠಾನದ ವತಿಯಿಂದ ನಂದ ಗೋಕುಲ, ಕಲಾಭಿ ಮತ್ತು ಕೆನರಾ ಕಲ್ಚರಲ್ ಅಕಾಡೆಮಿ ಸಹಯೋಗದೊಂದಿಗೆ ರಾಜ್ಯ ಮಟ್ಟದ ಒಂಭತ್ತನೆ ‘ಅರೆಹೊಳೆ ನಾಟಕೋತ್ಸವ’ವು ದಿನಾಂಕ 04-01-2024ರಿಂದ 07-04-2024ರವರೆಗೆ ಮಂಗಳೂರಿನ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ದಿನಾಂಕ 04-01-2024ರಂದು ಡಾ. ಶ್ರೀಪಾದ್ ಭಟ್ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೈಸೂರಿನ ‘ನಟನ’ ತಂಡದ ಮೇಘ ಸಮೀರ ಮತ್ತು ದಿಶಾ ರಮೇಶ್ ಅಭಿನಯಿಸುವ ‘ಕಣಿವೆಯ ಹಾಡು’, ದಿನಾಂಕ 05-01-2024ರಂದು ರಾಜೇಂದ್ರ ಕಾರಂತ್ ರಚನೆ ಮತ್ತು ನಿರ್ದೇಶನದಲ್ಲಿ ಬೈಂದೂರಿನ ಲಾವಣ್ಯ ತಂಡದವರು ಪ್ರಸ್ತುತ ಪಡಿಸುವ ‘ನಾಯಿ ಕಳೆದಿದೆ’, ದಿನಾಂಕ 06-01-2024ರಂದು ರೋಹಿತ್ ಎಸ್. ಬೈಕಾಡಿ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮಣಿಪಾಲದ ಸಂಗಮ ಕಲಾವಿದೆರ್ ಅಭಿನಯಿಸುವ ‘ಮೃತ್ಯುಂಜಯ’ ಮತ್ತು ದಿನಾಂಕ 07-01-2024ರಂದು ರಾಜ್ ಗುರು ಹೊಸ ಕೋಟೆ ರಚನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಬೆಂಗಳೂರಿನ ರಂಗಪಯಣ ಪ್ರಸ್ತುತ ಪಡಿಸುವ ‘ನವರಾತ್ರಿಯ ಕೊನೆ ದಿನ’ ನಾಟಕ ಪ್ರದರ್ಶನಗಳು ನಡೆಯಲಿದೆ. ಕಣಿವೆಯ ಹಾಡು ನಾಟಕದ ಕುರಿತು : ಮೂಲತಃ…
ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಾಸುದೇವ ಭೂಪಾಳಂ ಅವರ ಕವನಗಳ ಗಾಯನ, ವಾಚನ ಸ್ಪರ್ಧೆ ಕಾರ್ಯಕ್ರಮವು ದಿನಾಂಕ 31-03-2024ರಂದು ಶಿವಮೊಗ್ಗದ ನಿವೃತ್ತಿ ನೌಕರರ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ. ಸಾ. ಪ. ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ “ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟ, ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರವನ್ನು ಸದಾಜಾಗೃತವಾಗಿಡುವಲ್ಲಿ ವಾಸುದೇವ ಭೂಪಾಳಂ ಅವರ ಪಾತ್ರ ಪ್ರಮುಖವಾಗಿತ್ತು. ವಸುದೇವ ಭೂಪಾಳಂ ಅವರು ಹದಿನೆಂಟಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಕವನ, ಮಕ್ಕಳ ಸಾಹಿತ್ಯ, ಪ್ರವಾಸ ಕಥನ, ಕಥೆ, ವೈಚಾರಿಕತೆಯ ಕೃತಿಗಳು ಆ ಕಾಲದಲ್ಲಿ ಮೆಚ್ಚುಗೆ ಪಡೆದಿದ್ದವು. ಅವರು ಬರೆದ ‘ದೇವರು ಸತ್ತ’ ಕೃತಿ ಸದ್ದುಮಾಡಿತ್ತು.” ಎಂದು ವಿವರಿಸಿದರು. ನಿವೃತ್ತ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಡಿ. ಎಂ. ಚಂದ್ರಶೇಖರ ಅವರು ಭೂಪಾಳಂ ಅವರ ಕವನ ವಾಚಿಸುವ ಮೂಲಕಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲ್ಲೂಕು ಅಧ್ಯಕ್ಷರಾದ ಮಹಾದೇವಿ, ಜಿಲ್ಲಾ ಕೋಶಾಧ್ಯಕ್ಷರಾದ ಎಂ. ನವೀನ್ ಕುಮಾರ್ ಉಪಸ್ಥಿತರಿದ್ದರು. ಗಾಯಕಿ ಲಕ್ಷ್ಮೀ ಮಹೇಶ್…
ಕಾರ್ಕಳ : ರಂಗಸಂಸ್ಕೃತಿಯ ದಶಮಾನೋತ್ಸವದ ಪ್ರಯುಕ್ತ ಹಮ್ಮಿಕೊಂಡ ರಾಜ್ಯಮಟ್ಟದ ನಾಟಕೋತ್ಸವ ‘ದಶರಂಗ ಸಂಭ್ರಮ’ದ ಎರಡನೆಯ ದಿನದ ಕಾರ್ಯಕ್ರಮವು ದಿನಾಂಕ 22-03-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ್ ಕೋಟ್ಯಾನ್ ಇವರು “ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ನಾಟಕ ಪರಂಪರೆಯು ನಮ್ಮ ಹಿರಿದಾದ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಪರಿಣಾಮಕಾರಿ ಮಾಧ್ಯಮವಾಗಿದೆ. ಆಧುನಿಕ ಕನ್ನಡ ನಾಟಕ ಪರಂಪರೆಯು ಶ್ರೇಷ್ಠ ಕಾವ್ಯಗಳನ್ನು ನಾಟಕವನ್ನಾಗಿಸುವ ವಿಶೇಷವಾದ ಪರಿಕಲ್ಪನೆಯನ್ನು ಹೊಂದಿದೆ. ನಾಡಿನ ಕಲಾ ರಸಿಕರಿಗೆ ಸದಭಿರುಚಿಯ ರಸಾಸ್ವಾದನೆಯ ಗುಣದಿಂದ ಆರಂಭ ಕಾಲದಿಂದ ತೊಡಗಿ ಇಂದಿನವರೆಗೆ ಕೂಡ ನಾಟಕವು ವಿಶೇಷವಾದ ಒಂದು ಪ್ರೇಕ್ಷಕ ವರ್ಗವನ್ನು ಹೊಂದಿದೆ. ನಾಟಕವು ಎಲ್ಲಾ ಆಯಾಮಗಳಿಂದ ಸಹೃದಯರ ಮನವನ್ನು ಗೆದ್ದಿದೆ ಹಾಗೆಯೇ ನಾಟಕವನ್ನು ನೋಡುವಂತಹ ಸಹೃದಯಿಯನ್ನು ನಾಟಕದೊಳಗೆಯೇ ತಾನು ಕೂಡ ಒಬ್ಬ ಪಾತ್ರಧಾರಿಯಾಗಿ ಗುರುತಿಸಿಕೊಳ್ಳುವಂತಹ ತೊಡಗಿಸಿಕೊಳ್ಳುವಿಕೆಯು ಪ್ರೇಕ್ಷಕರಿಗೆ ಇದೆ. ಇಂತಹ ಒಳ್ಳೆಯ ಕಲಾರಸಿಕತೆಯನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ರಂಗಸಂಸ್ಕೃತಿಯು ಕಾರ್ಕಳದ ಪರಿಸರದಲ್ಲಿ ಕಳೆದ ಹತ್ತು ವರುಷಗಳಿಂದ ನಿರಂತರವಾಗಿ…
ಉಡುಪಿ : ರಂಗಭೂಮಿ ಉಡುಪಿ ವತಿಯಿಂದ ಎಂ. ಜಿ. ಎಂ. ಕಾಲೇಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ‘ವಿಶ್ವ ರಂಗಭೂಮಿ ದಿನಾಚರಣೆ’ಯು ದಿನಾಂಕ 27-03-2024ರಂದು ನಡೆಯಿತು. ರಂಗಭೂಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಕಡಿಯಾಳಿ ಕಮಲಾಬಾಯಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸುದರ್ಶನ್ ನಾಯಕ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಾಹಿತಿ, ನಿವೃತ್ತ ಪ್ರಾಂಶುಪಾಲೆ ಡಾ. ಮಾಧವಿ ಎಸ್. ಭಂಡಾರಿ ಅವರನ್ನು ಸಮ್ಮಾನಿಸಲಾಯಿತು. ಕಟಪಾಡಿ ರಂಜನ ಕಲಾವಿದರು ಸಂಸ್ಥೆಯ ರಾಘವೇಂದ್ರ ರಾವ್ ಮಾತನಾಡಿ, “ರಂಗದಲ್ಲಿ ನಟನೆ ಮಾಡುವರಿಗೆ ಮಾತ್ರ ವಿಶ್ವರಂಗಭೂಮಿ ದಿನದ ಆಚರಣೆ ಸೀಮಿತವಲ್ಲ. ರಂಗ ಕಲಾವಿದರು ಸಹಿತ ಈ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಎಲ್ಲರೂ ಮತ್ತು ಪ್ರೇಕ್ಷಕರು ಒಳಗೊಂಡು ಈ ದಿನವನ್ನು ಸಂಭ್ರಮಿಸಬೇಕು” ಎಂದರು. ರಂಗಭೂಮಿ ಉಪಾಧ್ಯಕ್ಷ ರಾಜಗೋಪಾಲ್ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು. ರಂಗಭೂಮಿ ಸಂದೇಶವನ್ನು ವಿವೇಕಾನಂದ ಎನ್. ವಾಚಿಸಿದರು. ಅಮಿತಾಂಜಲಿ ಕಿರಣ್ ಸಮ್ಮಾನಿತರನ್ನು ಪರಿಚಯಸಿ, ರಂಗಭೂಮಿ ಉಪಾಧ್ಯಕ್ಷ ಭಾಸ್ಕರ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆ ‘ಅಂಗದ ಸಂಧಾನ’ ಪ್ರಸಂಗವು ದಿನಾಂಕ 30-03-2024ರಂದು ಶ್ರೀ ಆಂಜನೇಯ ಮಂತ್ರಾಯಲದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಮಾಸ್ಟರ್ ಪರೀಕ್ಷಿತ್ ಮತ್ತು ಮಾಸ್ಟರ್ ಅದ್ವೈತ ಕೃಷ್ಣ ಮೂಡೋಡಿ ಸಹಕರಿಸಿದರು. ಮುಮ್ಮೇಳದಲ್ಲಿ ಕು೦ಬ್ಳೆ ಶ್ರೀಧರ್ ರಾವ್ (ಶ್ರೀ ರಾಮ), ಭಾಸ್ಕರ್ ಬಾರ್ಯ (ಅಂಗದ), ಗುಡ್ಡಪ್ಪ ಬಲ್ಯ (ಪ್ರಹಸ್ತ) ಮತ್ತು ದುಗ್ಗಪ್ಪ ನಡುಗಲ್ಲು (ರಾವಣ) ಸಹಕರಿಸಿದರು.
ಮಂಗಳೂರು : ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಭಾಗಿತ್ವದಲ್ಲಿ ‘ಭರತಮುನಿ ಜಯಂತಿ’ ಕಾರ್ಯಕ್ರಮವು ದಿನಾಂಕ 29-03-2024ರಂದು ಕದ್ರಿ ಮಲ್ಲಿಕಟ್ಟೆಯ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಜಾನಪದ – ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ “ಪ್ರಪಂಚಕ್ಕೆ ನಾಟ್ಯ ಶಾಸ್ತ್ರವನ್ನು ಕೊಡುಗೆಯಾಗಿ ನೀಡಿದ ಭರತಮುನಿ ಸಮಸ್ತ ಮನುಕುಲವು ವೇದ ಶಾಸ್ತ್ರಗಳನ್ನು ಸುಲಭವಾಗಿ ಗ್ರಹಿಸುವಂತೆ ಮಾಡಿದ ಮಹಾ ದಾರ್ಶನಿಕ. ಚತುರ್ವೇದಗಳಿಂದ ಪಠ್ಯ, ಅಭಿನಯ, ಸಂಗೀತ ಮತ್ತು ರಸಗಳನ್ನು ಆಯ್ದು ನೃತ್ಯ ಎನ್ನುವ ಮೋಹಕ ಕಲೆಯನ್ನು ಜಗತ್ತಿಗೆ ಆತ ನಾಟ್ಯ ವೇದದ ರೂಪದಲ್ಲಿ ಪರಿಚಯಿಸಿದ್ದಾನೆ. ವೇದವನ್ನು ಓದದೇ ಇದ್ದರೂ ಭರತ ನೃತ್ಯವನ್ನು ಕಲಿತು, ಕಲಿಸಿ, ಅನುಭವಿಸುವುದರ ಮೂಲಕ ಮಾನವ ಸಮಾಜವು ವೇದದ ಸಾರವನ್ನು ತಿಳಿಯಲು ಸಾಧ್ಯವಾಗಿದೆ. ಸಂಘಟನೆ ಎಲ್ಲಾ ಕ್ಷೇತ್ರದಲ್ಲೂ ಇಂದು ಅವಶ್ಯಕ. ಬೇರೆ ಬೇರೆ ನೃತ್ಯ ಗುರುಗಳು ತಮ್ಮದೇ…
ಶ್ರೀರಂಗಪಟ್ಟಣ : ‘ಗಮ್ಯ’ದ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದಾದ ಮಕ್ಕಳ ಬೇಸಿಗೆ ಶಿಬಿರ. ಕಳೆದ ಎರಡು ವರ್ಷಗಳಿಂದ ಶ್ರೀರಂಗಪಟ್ಟಣದ ಮಕ್ಕಳನ್ನು ಪ್ರೀತಿಯಿಂದ ಅಪ್ಪಿಕೊಂಡು, ಜೊತೆಜೊತೆಗೇ ಕಲೆ, ಜನಪದ, ರಂಗಭೂಮಿ, ಸೃಜನಶೀಲತೆ ಮತ್ತು ಕ್ರಿಯಾಶೀಲತೆಯನ್ನು ಉಳಿಸಿಕೊಂಡು ಬಂದಿರುವ ನಮ್ಮ ಹೆಮ್ಮೆಯ ಶಿಬಿರವು ದಿನಾಂಕ 14-04-2024ರಿಂದ 01-05-2024ರವರೆಗೆ ಶ್ರೀರಂಗಪಟ್ಟಣದ ಬಸ್ ಸ್ಟಾಂಡ್ ಎದುರುಗಡೆಯಿರುವ ಶಿಕ್ಷಕರ ಭವನ ಆವರಣದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಕೂಡಲೇ ಸಂಪರ್ಕಿಸಿ: 9480733729, 9380967529, 8184056768
ಧಾರವಾಡ : ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯ ಮೂಲಕ ‘ಸಾಹಿತ್ಯ ಗಂಗಾ ಕಾದಂಬರಿ ಪ್ರಶಸ್ತಿ’ ನೀಡಲು ನಿರ್ಧರಿಸಲಾಗಿದ್ದು, ಈ ಪ್ರಶಸ್ತಿಯು ರೂ.5,000/- ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. 2023ರಲ್ಲಿ ಪ್ರಕಟವಾದ ಕಾದಂಬರಿಗಳನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುವುದು. ನಿಯಮಗಳು: * 01-01-2023ರಿಂದ 31-12-2023ರೊಳಗೆ ಪ್ರಕಟವಾದ ಕನ್ನಡ ಕಾದಂಬರಿಗಳನ್ನು ಮಾತ್ರ ಕಳುಹಿಸಬಹುದು. * ಸ್ವತಂತ್ರ ಕಾದಂಬರಿಗಳಿಗೆ ಮಾತ್ರ ಅವಕಾಶವಿದ್ದು, ಅನುವಾದ, ಅನುಸೃಷ್ಟಿ ಮತ್ತು ರೂಪಾಂತರ ಮಾಡಿದ ಕಾದಂಬರಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ. * ಈ ಪ್ರಶಸ್ತಿಗಾಗಿ ಕಾದಂಬರಿಗಳನ್ನು ಕಳುಹಿಸಲು ಪ್ರವೇಶ ಶುಲ್ಕವಿರುವುದಿಲ್ಲ. * ಲೇಖಕ/ಲೇಖಕಿಯರು ಕಾದಂಬರಿಯ ಮೂರು ಪ್ರತಿಗಳು, ಪರಿಚಯ ಪತ್ರ ಮತ್ತು ಒಂದು ಭಾವಚಿತ್ರವನ್ನು ಅಂಚೆ/ಕೊರಿಯರ್ ಮೂಲಕ ಕಳುಹಿಸಬಹುದು. * ಕಾದಂಬರಿಗಳನ್ನು ಕಳುಹಿಸಲು ಕೊನೆಯ ದಿನಾಂಕ 05-05-2024. * ದಿನಾಂಕ 10-07-2024ರಂದು ಫಲಿತಾಂಶವನ್ನು ಪ್ರಕಟಿಸಲಾಗುವುದು. ಪ್ರತಿಗಳನ್ನು ಕಳುಹಿಸಬೇಕಾದ ವಿಳಾಸ : ವಿಕಾಸ ಹೊಸಮನಿ, 2ನೇ ಕ್ರಾಸ್, 2ನೇ ಮೇನ್, ದಾನೇಶ್ವರಿ ನಗರ, ಹಾವೇರಿ -581110 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ವಿಕಾಸ…
ಉಡುಪಿ : ಭಾವನಾ ಪ್ರತಿಷ್ಠಾನ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೊ ಆಯೋಜಿಸಿದ್ದ ‘ಪುರಾತತ್ವದೊಂದಿಗಿನ ಸಂಬಂಧ’ (ಏನ್ಸಸ್ಟ್ರಲ್ ಅಫೇರ್ಸ್) ಸರಣಿ ಕಾರ್ಯಕ್ರಮವು ದಿನಾಂಕ 24-03-2024ರಂದು ಉಡುಪಿ ಜಿಲ್ಲೆಯ ಪ್ರಾಗಿತಿಹಾಸಿಕ ನೆಲೆಗಳಾದ ಬುದ್ಧನಜಡ್ಡು ಹಾಗೂ ಅವಲಕ್ಕಿಪಾರೆಗಳಲ್ಲಿ ನಡೆಯಿತು. ನಮ್ಮ ನಡುವಿನ ಇತಿಹಾಸ, ಕಲೆ ಹಾಗೂ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವ ಈ ಸರಣಿ ಕಾರ್ಯಕ್ರಮದಲ್ಲಿ ಪುರಾತನ ಇತಿಹಾಸ ಕಾಲದ ನೆಲೆಗಳಲ್ಲಿನ ಗೀರು ರೇಖಾಚಿತ್ರಗಳು, ಸಂಬಂಧಿಸಿದ ಐತಿಹ್ಯಗಳ ಜೊತೆಗೆ ಐತಿಹಾಸಿಕ ಸ್ಥಳ ಹಾಗೂ ವಸ್ತುಗಳ ಅಧ್ಯಯನ ಮತ್ತು ದಾಖಲಾತಿಗಳನ್ನೊಳಗೊಂಡಿತ್ತು. ಸುಮಾರು ಕ್ರಿಸ್ತ ಪೂರ್ವ 6000 ವರ್ಷಗಳಿಂದ 3500 ವರ್ಷಗಳಷ್ಟು ಪುರಾತನವೆನಿಸಿರುವ ಈ ಗೀರು ಚಿತ್ರಗಳ ಬಗೆಗಿನ ಕಥೆಗಳು ಹಾಗೂ ಅದರ ಸುತ್ತಲಿನ ನಂಬಿಕೆಗಳೇ ಮುಂತಾಗಿ ಮಾಹಿತಿಯನ್ನು ಸ್ಥಳೀಯರಾದ ಇಂಜಿನಿಯರ್ ಮುರುಳೀಧರ ಹೆಗ್ಡೆಯವರು ವಿವರಿಸಿದರು. ನಮ್ಮ ಕರಾವಳಿ ಭಾಗದ ಬಹು ಅಪರೂಪದ್ದೆನಿಸುವ ಈ ಚಿತ್ರಗಳ ಬಗೆಗೆ ಈ ಹಿಂದೆ ಶಿರ್ವ ಕಾಲೇಜಿನ ಪುರಾತತ್ವ ತಂಡವು ಅಧ್ಯಯನ ನಡೆಸಿತ್ತಲ್ಲದೇ ಜಾಗೃತಿ ಕಾರ್ಯಕ್ರಮ ಹಾಗೂ ಸೆಮಿನಾರ್ ನಡೆಸಿದ್ದ ಬಗೆಗೆ…
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 01-04-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಕುಮಾರಿ ಪ್ರಕೃತಿ ಮರೂರು ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಮೂಡುಬಿದಿರೆಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಇಂಜಿನಿಯರಿಂಗ್‌ನಲ್ಲಿ 1ನೇ ವರ್ಷದ ಬಿ.ಇ ವಿದ್ಯಾರ್ಥಿನಿಯಾದ ಪ್ರಕೃತಿ ಮರೂರು ಇವರು ಪ್ರಶಾಂತ್ ಜಿ.ಎನ್. ಮತ್ತು ಶ್ರೀಮತಿ ಕೀರ್ತಿ ಪಿ. ದಂಪತಿಗಳ ಸುಪುತ್ರಿ. ಕಳೆದ 12 ವರ್ಷಗಳಿಂದ ಮೂಡುಬಿದಿರೆಯ ಆರಾಧನಾ ನೃತ್ಯ ಕೇಂದ್ರದ ನಿರ್ದೇಶಕಿಯಾದ ವಿದುಷಿ ಶ್ರೀಮತಿ ಸುಖದಾ ಬರ್ವೆಯವರ ಬಳಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದು, ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯನ್ನು ಅತ್ಯುತ್ತಮ ಶ್ರೇಣಿಯಲ್ಲಿ ಪೂರ್ಣಗೊಳಿಸಿ ಇದೀಗ ವಿದ್ವತ್ ಪೂರ್ವ ಪರೀಕ್ಷೆಯ ತಯಾರಿಯಲ್ಲಿದ್ದಾರೆ. ಗುರು ಶ್ರೀ ಶಿವಕುಮಾರ್ ಮೂಡುಬಿದಿರೆ ಅವರ ಬಳಿ…