Subscribe to Updates
Get the latest creative news from FooBar about art, design and business.
Author: roovari
9 ಮಾರ್ಚ್ 2023, ಮಂಗಳೂರು: ಸಂತ ಆಲೋಶಿಯಶ್ ಕಾಲೇಜು (ಸ್ವಾಯತ್ತ) ಮಂಗಳೂರು, ಯುಜಿಸಿ ಸ್ಟ್ರೈಡ್ ಯೋಜನೆ, ಸಂತ ಆಲೋಶಿಯಶ್ ರಂಗ ಅಧ್ಯಯನ ಕೇಂದ್ರ, ಸಂತ ಆಲೋಶಿಯಶ್ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಸಹಯೋಗದಲ್ಲಿ ಪ್ರೊ. ಅಮೃತ ಸೋಮೇಶ್ವರ ವಿರಚಿತ, ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ, ಜರ್ನಿ ಥೇಟರ್ ಗ್ರೂಪ್ (ರಿ.) ಮಂಗಳೂರು ಅಭಿನಯಿಸುವ “ಗೋಂದೊಳು” ತುಳು ಭಾಷಾ ಸೊಗಡಿನ ಜಾನಪದ ನಾಟಕ ದಿನಾಂಕ :10-03-2023ರಂದು ಸಂತ ಆಲೋಶಿಯಶ್ ಕಾಲೇಜ್ ನ ಎಲ್.ಸಿ.ಆರ್.ಐ. ಸಭಾಭವನದಲ್ಲಿ ಮಧ್ಯಾಹ್ನ ಗಂಟೆ 3-15 (ವಿದ್ಯಾರ್ಥಿಗಳಿಗೆ) ಸಂಜೆ ಗಂಟೆ 6-15 (ಸಾರ್ವಜನಿಕರಿಗೆ) ಹೀಗೆ ಎರಡು ಪ್ರದರ್ಶನಗಳು ನಡೆಯಲಿವೆ. ನಾಟಕದ ಕುರಿತು : ತುಳುನಾಡಿನ ಸತ್ಯ-ಸತ್ವಗಳೆರಡನ್ನೂ ಚಿತ್ರಿಸುವ ಗೋಂದೊಳು ನಾಟಕ ತುಳುವಿನ ಜಾನಪದ ಕಥೆಯನ್ನು ವಸ್ತುವನ್ನಾಗಿಸಿಕೊಂಡಿದೆ. ದೇಬೆ ಎನ್ನುವ ಸಾಮಾನ್ಯ ಹೆಣ್ಣೊಬ್ಬಳು ಊರಿನ ಪ್ರಮುಖ ಗುರಿಕಾರನಿಂದ ಅನ್ಯಾಯಕ್ಕೆ ಒಳಗಾಗಿ ಪ್ರತಿಭಟಿಸುವ, ಕಡೆಗೆ ಮಾಸ್ತಿಯಮ್ಮನಾಗಿ ದೈವತ್ವಕ್ಕೇರುವ ಕಥೆಯೇ ಗೋಂದೊಳು ನಾಟಕ. ತುಳುಮಣ್ಣಿನ ಸೊಬಗನ್ನು ಭಾಷೆಯ ಸೌಂದರ್ಯವನ್ನು ದೈವ ದೇವರ ಇತಿಹಾಸದೊಳಗೆ ಮಣ್ಣಾದ ಅನ್ಯಾಯದ…
9 ಮಾರ್ಚ್ 2023 ಮಂಗಳೂರು: ತುಳುನಾಡಿನ ಸಾಂಸ್ಕೃತಿಕ ಪರಂಪರೆ ಅನನ್ಯವಾದುದು: ಪ್ರೊ.ಪಿ.ಎಸ್. ಯಡಪಡಿತ್ತಾಯ ಮುಡಿಪು: ತುಳುನಾಡಿನ ದೈವಾರಾಧನೆ, ಕಂಬಳ, ಧಾರ್ಮಿಕ ಆಚರಣೆಗಳು, ಸಂಪ್ರದಾಯಗಳು ಬಹಳ ವಿಶೇಷವಾದುದು ಮತ್ತು ತುಳುನಾಡಿನ ಸಾಂಸ್ಕೃತಿಕ ಪರಂಪರೆ ಅನನ್ಯವಾದುದು. ಯುವ ಸಮುದಾಯ ಇದರ ಮಹತ್ವವನ್ನು ಅರಿತುಕೊಂಡು ಮುನ್ನಡೆಯಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ “ಸಂಸ್ಕೃತಿ ಸಿರಿ-2023” ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತ ಕಾರ್ಯಕ್ರಮವನ್ನು ದಿನಾಂಕ 07-03-2023 ಮಂಗಳವಾರದಂದು ಉದ್ಘಾಟಿಸಿ ಮಾತನಾಡಿದರು. ತುಳುನಾಡಿನ ಕಂಬಳ ಅಥವಾ ಇತರ ಜಾನಪದ ಕ್ರೀಡೆಗಳು ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಅದರಲ್ಲಿರುವ ಧಾರ್ಮಿಕತೆ ಮತ್ತು ನೈಜ ಸತ್ಯವನ್ನು ಅರಿಯಬೇಕಿದೆ. ಕರಾವಳಿಯ ಜನರ ಆಚರಣೆಗಳು, ಮೂಲನಂಬಿಕೆಗಳು ಇಲ್ಲಿಯ ಜೀವನದೊಂದಿಗೆ ಬೆಸೆದುಕೊಂಡಿದೆ. ಇಂದಿನ ವೈಜ್ಞಾನಿಕ ಯುಗದಲ್ಲೂ ಕೆಲವೊಂದು ರೋಗಗಳಿಗೆ ತುಳುನಾಡಿನ ನಾಟಿವೈದ್ಯರೇ ಆಗಬೇಕಿದೆ. ತುಳುನಾಡಿನ ಸತ್ವ ಸತ್ಯಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಿಂದ ಸಂಸ್ಕೃತಿಯ ಅರಿವು, ಜಾಗೃತಿಯಾಗುತ್ತದೆ ಎಂದರು. ಬಿ.ಸಿ.ರೋಡ್ ರಾಣಿ…
9 ಮಾರ್ಚ್ 2023 ಮಂಗಳೂರು: ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸ ದಿ. ಮುಳಿಯ ತಿಮ್ಮಪ್ಪಯ್ಯ ಇವರ ಸ್ಮರಣಾರ್ಥ ಮುಳಿಯ “ತಿಮ್ಮಪ್ಪಯ್ಯ ಪ್ರಶಸ್ತಿ” ನೀಡಲಾಗುತ್ತಿದೆ. ಖ್ಯಾತ ವಿದ್ವಾಂಸ ಡಾ| ಬಿ.ಎ. ವಿವೇಕ ರೈಯವವರು ಅಧ್ಯಕ್ಷರಾಗಿರುವ ಈ ಆಯ್ಕೆ ಸಮಿತಿಯು ಈ ಪ್ರಶಸ್ತಿಗೆ ಹಿರಿಯ ಲೇಖಕಿ ಚಿಂತಕಿ ಹಾಗೂ ಸಂಶೋಧಕಿ ಬಿ.ಎಂ. ರೋಹಿಣಿಯವರು ಆಯ್ಕೆ ಮಾಡಿದೆ. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ಪ್ರದಾನ ಮಾಡುವ ಈ ಪ್ರಶಸ್ತಿಯ ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಮಾರ್ಚ್ 25ರಂದು ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
08-03-2023, ಧರ್ಮಸ್ಥಳ: ‘ಸಾಹಿತ್ಯವನ್ನು ಪೋಷಿಸುವುದರಲ್ಲಿ ಸ್ಥಳೀಯ ದಿನಪತ್ರಿಕೆಗಳ ಪಾಲೂ ಬಹುಮುಖ್ಯ’- ಡಾ.ಹೇಮಾವತಿ.ವೀ.ಹೆಗ್ಗಡೆ ‘ಬರೆಹಗಾರರನ್ನು ಪ್ರೋತ್ಸಾಹಿಸುವುದರಲ್ಲಿ ಸ್ಥಳೀಯ ದಿನಪತ್ರಿಕೆಗಳೂ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಅಂತರ್ಜಾಲ ಲಭ್ಯವಾಗದ ಗ್ರಾಮೀಣ ಭಾಗಗಳಲ್ಲಿ ಓದಿಗೆ ಲಭ್ಯವಾಗುವ ಸ್ಥಳೀಯ ಪತ್ರಿಕೆಗಳು ಸುತ್ತಮುತ್ತಲಿನ ಘಟನೆಗಳ ಬಗ್ಗೆ ಮಾಹಿತಿಗಳನ್ನು ಕೊಡುವುದಲ್ಲದೆ ಜನರನ್ನು ಮತ್ತಷ್ಟು ಆತ್ಮೀಯರಾಗಲು ಸಹಕಾರಿಯಾಗುತ್ತದೆ. ಆದುದರಿಂದ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗುವ ಅಂಕಣಗಳು ಓದುಗರನ್ನು ಹೆಚ್ಚು ತಟ್ಟಬಲ್ಲದು. ಸ್ತ್ರೀಪರ ಚಿಂತನೆಗಳು ಅಂಕಣಗಳು ಸ್ಥಳೀಯ ಪತ್ರಿಕೆಗಳಲ್ಲಿ ಹೆಚ್ಚು ಪ್ರಕಟವಾಗಬೇಕಿದೆ’ ಎಂದು ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಲೇಖಕಿ ಶ್ರೀಮತಿ ಅಕ್ಷತಾ ರಾಜ್ ಪೆರ್ಲ ಅವರು ಬರೆದ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಚಂದ್ರಭಾಗಿ ರೈ ದತ್ತಿನಿಧಿ ಪುರಸ್ಕೃತ ಲೇಖನ ಸಂಕಲನ ‘ಅವಲಕ್ಕಿ ಪವಲಕ್ಕಿ’ ಬಿಡುಗಡೆ ಹಾಗೂ ಸಾಹಿತ್ಯ ಪ್ರಕಾಶನದ ಲಾಂಛನ ಅನಾವರಣಗೊಳಿಸಿ ನುಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಬೀಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಅಕ್ಷತಾರಾಜ್ ಪೆರ್ಲ, ಪತ್ರಕರ್ತ ರಾಜೇಶ್ ಶೆಟ್ಟಿ ದೋಟ, ರೇಡಿಯೋ ನಿನಾದ ಸಮುದಾಯ ಬಾನುಲಿಯ ಕಾರ್ಯಕ್ರಮ ಸಂಯೋಜಕರಾದ ವಿ.ಕೆ ಕಡಬ,…
ವೀಣಾ ಶ್ರೀನಿವಾಸ್ ಅವರು ಮಂಗಳೂರಿನ ಪ್ರಖ್ಯಾತ ಚಿತ್ರ ಕಲಾವಿದೆಯಾಗಿದ್ದು, ಭಾರತದ ಕೊಂಕಣ ಕರಾವಳಿಯ ದೇವಾಲಯಗಳ ಒಳ ಮತ್ತು ಹೊರ ಗೋಡೆಯ ಮೇಲಿನ ಚಿತ್ರಕಲೆಯಾದ ಕಾವಿ ಮ್ಯೂರಲ್ ಪೇಂಟಿಂಗ್‌ಗಳಲ್ಲಿ ಆಸಕ್ತಿಯ ನವೀಕರಣವನ್ನು ಮಾಡುವ ಮತ್ತು ರಚಿಸುವ ಪ್ರಯತ್ನಗಳಿಗೆ ಹೆಸರುವಾಸಿಯಾಗಿದ್ದಾರೆ. ವೀಣಾ ಸ್ವತಃ ವಿವಿಧ ಕಲಾ ಪ್ರಕಾರಗಳಿಗೆ ಅಪರಿಚಿತರಲ್ಲದ ಕುಟುಂಬದಲ್ಲಿ ಜನಿಸಿದರು, ಅವರ ಅಜ್ಜ ದಿವಂಗತ ವೆಂಕಟರಾಯ ಕಾಮತ್, ಸಮರ್ಪಿತ ಶಿಕ್ಷಕರೂ ಹಾಗೂ ಮುಂಬೈನ ಪ್ರತಿಷ್ಠಿತ ಜೆಜೆ ಸ್ಕೂಲ್ ಆಫ್ ಆರ್ಟ್ಸ್‌ನ ವಿದ್ಯಾರ್ಥಿಯೂ ಆಗಿದ್ದರು.ವೀಣಾ ಶ್ರೀನಿವಾಸ ಅವರು ಹಿರಿಯ ಕಲಾವಿದರಾದ ಶ್ರೀ ಮಾಧವ ರಾವ್ ಪಾವಂಜೆ ಅವರಿಂದ ಲಲಿತಕಲೆಗಳ ತರಬೇತಿಯನ್ನು ಪಡೆದರು. ಹದಿನಾರನೇ ಶತಮಾನದಲ್ಲಿ ಗೋವಾದ ಅನೇಕ ಹಿಂದೂ ದೇವಾಲಯಗಳಲ್ಲಿ ಪ್ರವರ್ಧಮಾನಕ್ಕೆ ಬಂದ ಜಾನಪದ ಕಲೆಯ ಒಂದು ರೂಪವಾದ ಕಾವಿ ಮ್ಯೂರಲ್ ಪೇಂಟಿಂಗ್‌ಗಳಲ್ಲಿ ವೀಣಾರವರು ತನ್ನ ಸ್ಥಾನವನ್ನು ಕಂಡುಕೊಂಡರು. ಅವರು ಈ ರೀತಿಯ ಕಲೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ವ್ಯಾಪಕವಾಗಿ ಪ್ರಯಾಣಿಸಿದರು ಮತ್ತು ತೀವ್ರ ಸಂಶೋಧನೆಯೊಂದಿಗೆ ಅದನ್ನು ಅನುಸರಿಸಿದರು. ಈ ಪ್ರಕಾರದ ಕಲೆಗೆ ನಿರಂತರ…
“ಅಮಣೀ …. ಎಷ್ಟು ಹೊತ್ತು ಬೇಗ ತಯಾರಾಗು ಮಾಸ್ಟ್ರು ಬರ್ತಾರೆ” “ಆ … ಅಪ್ಪಯ್ಯ ಬಂದೆ ಬಂದೆ” “ಅಮಣೀ ಗಂಜಿಗೆ ತುಪ್ಪ ಹಾಕಿದ್ದೇನೆ ಆರಿ ತಣ್ಣಗಾಗ್ತದೆ” “ಈಗ ಹಸಿವಿಲ್ಲ, ಸ್ವಲ್ಪ ಮತ್ತೆ ಊಟ ಮಾಡ್ತೇನಮ್ಮಾ” ಈ ಸಂಭಾಷಣೆಗಳು ಈಗಲೂ ನನ್ನ ಕಿವಿಯಲ್ಲಿ ಗುಂಯ್ ಗುಡುತ್ತಿವೆ. 1976ರಲ್ಲಿ ನಾನು ಉಡುಪಿಯಿಂದ ಮಂಗಳೂರಿಗೆ ವಿದ್ಯಾಭ್ಯಾಸಕ್ಕಾಗಿ ಬಂದು ಲಾಲ್ ಬಾಗ್ ನ ವಿದ್ಯಾರ್ಥಿನಿ ನಿಲಯದಲ್ಲಿ ಇದ್ದೆ. ನನ್ನ ಪತಿ ಬೈಕಾಡಿ ಜನಾರ್ದನ ಆಚಾರ್ ಸಂಗೀತದಲ್ಲಿ ನನಗಿದ್ದ ಆಸಕ್ತಿ ಕಂಡು ನನ್ನನ್ನು ಬಲ್ಲಾಳ್ ಬಾಗ್ ನಲ್ಲಿರುವ ಶಾರದಾಮಣಿಯ ಮನೆಗೆ ಕರೆತಂದು ಅವಳ ತಂದೆ ಎನ್.ಕೆ. ಸುಂದರಾಚಾರ್ ರನ್ನು ಪರಿಚಯಿಸಿದರು. ಮುಂದೆ ಇವರ ಸಂಸಾರದ ಸದಸ್ಯರಲ್ಲಿ ನಾನೂ ಒಬ್ಬಳಾದೆ. ಶ್ರೀ ಎನ್.ಕೆ. ಸುಂದರಾಚಾರ್ ಹಾಗೂ ಶ್ರೀಮತಿ ವಸಂತಿ ಎಸ್. ಅಚಾರ್ ಇವರ ಸುಪುತ್ರಿ ಶ್ರೀಮತಿ ಶಾರದಾಮಣಿ. ಒಬ್ಬ ಅಣ್ಣ ಮೂರು ಜನ ತಮ್ಮಂದಿರ ಮಧ್ಯೆ ಜನಿಸಿದ ತಂದೆ-ತಾಯಿಯ ಪ್ರೀತಿಯ ಮಗಳು. ಬಾಲ್ಯದಿಂದಲೇ ನಿಧಾನದ ಮಾತು, ಯಾರ ಮನಸ್ಸನ್ನೂ ನೋಯಿಸುವ…
08 ಮಾರ್ಚ್ 2023, ಮಂಗಳೂರು: ಕಾಡು ಹಕ್ಕಿಯ ಪಾಡು …… ಈ ಹುಡುಗಿಗೆ ಏನೆಲ್ಲಾ ಗೊತ್ತು ? ಬಹುಶಃ 12 ವರ್ಷಗಳ ಮೊದಲು ನಾನು ಕೊಪ್ಪದಲ್ಲಿ ಮಕ್ಕಳ ಶಿಬಿರದ ಆಯೋಜನೆಯ ಯೋಚನೆಯಲ್ಲಿದ್ದೆ. ಆಗ ನೆನಪಾದವಳು ಅಕ್ಷತಾ. ಆ ಕಾಲಕ್ಕೆ ನೆನಪಿನ ಶಕ್ತಿಯ ಕಾರಣಕ್ಕೆ “ವಂಡರ್ ಕಿಡ್” ಎಂದೇ ಸುದ್ಧಿಯಲ್ಲಿದ್ದ ಅಕ್ಷತಾಳನ್ನು “ನಮ್ಮೂರಲ್ಲಿ ಮಕ್ಕಳಿಗೊಂದು ಕ್ಯಾಂಪ್ ಮಾಡ್ಲಿಕ್ಕಿದೆ, ಸಂಪನ್ಮೂಲ ವ್ಯಕ್ತಿಯಾಗಿ ಬರಬೇಕು” ಎಂದು ಕೇಳಿದ್ದೆ. ಕ್ಯಾಂಪ್ ಚಂದ ಮಾಡುವ ಸರ್ ಎಂದು ಬಂದವಳು ಇಡೀ ಕ್ಯಾಂಪ್ ನ ಜವಾಬ್ದಾರಿ ವಹಿಸಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಳು. ಹಾಡು, ನೃತ್ಯ, ನಾಟಕ, ಮೆಮೊರಿ, ಯಕ್ಷಗಾನ ಅಬ್ಬಾ ಎಂಥ ಪ್ರತಿಭೆ ! ಎಂದು ಕಣ್ಣರಳಿಸಿ ನೋಡಿದ್ದೆ. ಅಲ್ಲಿಂದ ಇಲ್ಲಿಯವರೆಗೆ ಆಕೆಯನ್ನು ಗಮನಿದ್ದೇನೆ. ಸದಾ ಏನಾದರೊಂದು ಹುಡುಕಾಟಗಳಲ್ಲಿ ವ್ಯಸ್ತಳಾಗಿರುವ ಅಕ್ಷತಾ ಉತ್ಸಾಹದ ಚಿಲುಮೆ. ತನ್ನ ಸುತ್ತಲಿನವರೊಡನೆ ಮಾತಾಡ್ತಾ, ಆ ಪರಿಸರದಲ್ಲೊಂದು ಜೀವಕಳೆಯನ್ನು ಸೃಷ್ಟಿಸುವ ಕಲೆ ಆಕೆಗೆ ಅನಾಯಸವಾಗಿ ಸಿದ್ದಿಸಿದೆ. ಕೈಯಲ್ಲೊಂದು ಟಮ್ಕಿ ಹಿಡಿದು ಹಾಡಿಗೆ ನಿಂತರೆ ಕಂಚಿನ ಕಂಠಕ್ಕೆ ಮನ…
08 ಮಾರ್ಚ್ 2023, ಮಂಗಳೂರು: ಆಡು ಮುಟ್ಟದ ಸೊಪ್ಪಿಲ್ಲ, ಸರೋಜಿನಿ ಶೆಟ್ಟಿಯವರು ಕೈಯಾಡಿಸದ ರಂಗವಿಲ್ಲ ಅನ್ನೋ ಮಾತು ಸರೋಜಿನಿ ಶೆಟ್ಟಿಯವರಿಗೆ ನಿಜವಾಗಿಯೂ ಹೊಂದಿಕೊಳ್ಳುತ್ತದೆ. ರಂಗಭೂಮಿಯನ್ನು ಅನೇಕ ಕಲಾವಿದರು ತಮ್ಮ ಅಭಿನಯದಿಂದ ಶ್ರೀಮಂತ ಗೊಳಿಸಿದ್ದಾರೆ. ಇಂತವರ ಸಾಲಿನಲ್ಲಿ ಮಿನುಗುತ್ತಿರುವ ತಾರೆ ಸರೋಜಿನಿ ಶೆಟ್ಟಿಯವರು, ಬಹುಭಾಷಾ ಅಭಿನೇತ್ರಿ, ಪ್ರಶಸ್ತಿಗಳ ಮೇಲೆ ಪ್ರಶಸ್ತಿಗಳು, ಸನ್ಮಾನಗಳು, ದಕ್ಷಿಣೋತ್ತರ ಮೇರು ಕಲಾವಿದರೊಂದಿಗೆ ಅಭಿನಯಿಸಿದ ಕೀರ್ತಿ, ಒಂದರ್ಥದಲ್ಲಿ ರಂಗವನ್ನಾಳಿದ ನಟಿಯಾದರೂ ಗತ್ತಿಲ್ಲ, ಅಹಂಕಾರವಿಲ್ಲ, ಸೊಡುಕಿನ ಮಾತಿಲ್ಲ, ಸಾಧನೆಯ ಶಿಖರವೇರಿದ್ದರೂ ಇನ್ನೂ ತಳದಲ್ಲೇ ಇದ್ದೇನೆಂಬ ವಿನೀತ ಭಾವನೆ, ವಿಧೇಯತೆ, ಮೃದುವಾದ ಮಾತು. ಇದು ಸರೋಜಿನಿ ಶೆಟ್ಟಿಯವರು. ಅಪರೂಪದಲ್ಲಿ ಅಪರೂಪ ಅನ್ನಬಹುದಾದ ಮೃಣ್ಮಯ ಮೂರ್ತಿ ಪೊಳಲಿಯ ಶ್ರೀ ರಾಜ ರಾಜೇಶ್ವರಿ ತಾಯಿಯ ಸನಿಹದ ಬೊಳ್ಳೂರು ಎಂಬಲ್ಲಿ ತಿಮ್ಮಪ್ಪ ಶೆಟ್ಟಿ ಮತ್ತು ಕಲ್ಯಾಣಿ ದಂಪತಿಗಳಿಗೆ ಅಕ್ಕರೆಯ ಮಗಳಾಗಿ ಜನಿಸಿದ ಸರೋಜಿನಿ ಶೆಟ್ಟಿಯವರು ತಮ್ಮ ಬಾಲ್ಯದ ಪ್ರಾಥಮಿಕ ಶಿಕ್ಷಣವನ್ನು ಶ್ರೀ ರಾಮಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದು, ಮುಂದೆ ಪದವಿಪೂರ್ವ ಶಿಕ್ಷಣವನ್ನು ಕೆನರಾ ಹೈಸ್ಕೂಲಿನಲ್ಲಿ ಪೂರೈಸಿದರು.…
08 ಮಾರ್ಚ್ 2023, ಮಂಗಳೂರು: ಇತ್ತೀಚಿಗೆ ಎರಡು ಕೈಗಳಲ್ಲಿ ಏಕಕಾಲದಲ್ಲಿ ಬರೆಯುವ ಮೂಲಕ ಮಂಗಳೂರಿನ ಒಬ್ಬಳು ಹುಡುಗಿ ಸುದ್ದಿಯಾಗಿದ್ದಳು. ಆಕೆ ಎರಡು ಕೈಗಳಲ್ಲಿ ಏಕಕಾಲದಲ್ಲಿ ಬರೆಯುವುದಷ್ಟೇ ಅಲ್ಲ ಸುಂದರವಾಗಿ ಬರೆಯಬಲ್ಲಳು ಕೂಡ. ಎರಡು ಕೈಗಳಲ್ಲಿ ಏಕಕಾಲದಲ್ಲಿ ಅತ್ಯಂತ ವೇಗವಾಗಿ ಬರೆಯುವ ಮೂಲಕ ಆಕೆ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಿದಳು. ಆಶ್ಚರ್ಯವೆಂದರೆ ಇವೆಲ್ಲವನ್ನೂ ಈಕೆ ಸಾಧಿಸಿದ್ದು ಯಾವುದೇ ಮೆಂಟರ್ ಮೂಲಕ ಅಲ್ಲ, ಕರೋನ ಕಾಲದಲ್ಲಿ ಸ್ವ ಪ್ರಯತ್ನದ ಮೂಲಕ. ಮಂಗಳೂರು ನಗರದ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್, ಸುಮಾಡ್ಕರ್ ದಂಪತಿಯ ಸುಪುತ್ರಿ ಆದಿ ಸ್ವರೂಪಳೇ ಆ ಹುಡುಗಿ. ಇದಕ್ಕಿಂತಲೂ ಮೊದಲು ಗುಂಪಿನಲ್ಲಿ ರುಬಿಕ್ ಕ್ಯೂಬ್ ಮೊಸೈಕ್ ನಲ್ಲಿ ಗಿನ್ನಿಸ್ ದಾಖಲೆ ಮಾಡಿದ್ದಾಳೆ . ಆಬಳಿಕ ವರ್ಷಕ್ಕೊಂದರಂತೆ ವಿಶ್ವ ದಾಖಲೆಗಳನ್ನು ಮಾಡುತ್ತಾ ಬಂದಿದ್ದಾಳೆ. ಸತತ ಛಲ ಮತ್ತು ಪರಿಶ್ರಮದಿಂದ ಬರೆಯುವುದರಲ್ಲಿ ಸವ್ಯಸಾಚಿambidextrous ಎನಿಸಿಕೊಂಡ ಈಕೆ ಈಗ 20 ವಿವಿಧ ಶೈಲಿಗಳಲ್ಲಿ ಆರಕ್ಕಿಂತ ಹೆಚ್ಚು ಭಾಷೆಗಳಲ್ಲಿ ಬರೆಯಬಲ್ಲಳು. ಇನ್ನು ಅನೇಕ ಅಚ್ಚರಿಗಳು ಇವಳ ಜೀವನದ…
08 ಮಾರ್ಚ್ 2023, ಮಂಗಳೂರು: “ಸಾಧನೆಗೆ ಯಾವುದೇ ನ್ಯೂನತೆಯು ಅಡ್ಡಿಯಲ್ಲ” ಎಂಬಂತೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇಲ್ಲಿಯ ಚಿತ್ರಕಲಾ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿನಿಯಾದ ಕು. ಸುಧಾರತ್ನ ಕೆ.ಎಸ್. ಇವರು ತಮ್ಮ ದೈಹಿಕ ಅಸಾಮರ್ಥ್ಯ (ಕೈ ಕಾಲುಗಳ ನ್ಯೂನತೆ, ನರಗಳ ದೌರ್ಬಲ್ಯ)ದ ನಡುವೆಯೂ ಜೇನ್ ಪರಿಶ್ರಮ. ಆತ್ಮ ವಿಶ್ವಾಸ, ಸಹೃದಯಿಗಳ ಪ್ರೋತ್ಸಾಹದಿಂದ ಪ್ರಬುದ್ಧ ಕಲಾವಿದೆಯಾಗಿ ರಾಜ್ಯ ಸರಕಾರದ ಪುರಸ್ಕರಕ್ಕೆ ಭಾಜನರಾಗಿದ್ದಾರೆ. ಮಂಗಳೂರಿನ ನೆಕ್ಕಿಲ ಗುಡ್ಡೆಯ ಶ್ರೀ ಶಂಕರ ನಾರಾಯಣ ಭಟ್ ಕೆ. ಹಾಗೂ ಶ್ರೀಮತಿ ಶಂಕರಿ ಈ ದಂಪತಿಗಳ ಸುಪುತ್ರಿಯಾಗಿರುವ ಈಕೆ ಹೆತ್ತವರ ನಿರಂತರ ಪ್ರೋತ್ಸಾಹ ಹಾಗೂ ಶ್ರೀಮತಿ ಶಾಲಿನಿ (ಚಿತ್ರಕಲಾ ಶಿಕ್ಷಕಿ) ಇವರ ಸಹನಾ ತರಬೇತಿ, ಅಣ್ಣನಾದ ರವಿಚಂದ್ರ ಕೆ. ಹಾಗೂ ಮನೆ, ಶಾಲೆಯವರೆಲ್ಲಾ ಸಹಾಯ ಸಹಕಾರ ಪ್ರೋತ್ಸಾಹದಿಂದ ಚಿತ್ರಕಲೆ ಅದರಲ್ಲಿಯೂ ಮುಖ್ಯವಾಗಿ ಜಲವರ್ಣದಲ್ಲಿ ಹೆಚ್ಚು ಪರಿಣತಿಯನ್ನು ಪಡೆದಿದ್ದಾರೆ. ಪೆನ್ಸಿಲ್ ಶೇಡಿಂಗ್, ತೈಲವರ್ಣ, ಫ್ಯಾಬ್ರಿಕ್ ಪೈಂಟಿಂಗ್, ಗ್ಲಾಸ್ ಪೈಂಟಿಂಗ್ ಮುಂತಾದ ಪ್ರಕಾರಗಳಲ್ಲಿಯೂ ಹೆಚ್ಚಿನ ಪರಿಣತಿಯನ್ನು…