Subscribe to Updates
Get the latest creative news from FooBar about art, design and business.
Author: roovari
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಪರಿಷತ್, ಮಯೂರಿ ಫೌಂಡೇಶನ್ ಜಂಟಿಯಾಗಿ ಆಯೋಜಿಸಿದ್ದ 5ನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮವು ದಿನಾಂಕ 22 ಸೆಪ್ಟೆಂಬರ್ 2025 ರಂದು ಮಂಗಳೂರಿನ ತುಳುಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬಹುಭಾಷಾ ಕವಿ ವಿಲ್ಸನ್ ಕಟೀಲು ಮಾತನಾಡಿ “ಕವಿಗಳಿಗೆ ಬರವಣಿಗೆಗೆ ವಿಪುಲ ಅವಕಾಶಗಳು ಇವೆ. ಆದರೆ, ಬರಹಗಾರನು ಸಾಮಾಜಿಕ ಜವಾಬ್ದಾರಿಯ ಧ್ವನಿಯಾಗಿ, ಶೋಷಣೆಯ ವಿರುದ್ಧ ಬರೆದಾಗ ಒಳ್ಳೆಯ ಕವಿತೆ ಸೃಷ್ಟಿಯಾಗಲು ಸಾಧ್ಯ” ಎಂದು ಹೇಳಿದರು. ಸಾಹಿತಿ ಮಲಾರ್ ಜಯರಾಮ್ ರೈ ಅಧ್ಯಕ್ಷತೆ ವಹಿಸಿದ್ದರು. ಮಯೂರಿ ಫೌಂಡೇಶನ್ ಇದರ ಅಧ್ಯಕ್ಷರಾದ ಜಯ ಕೆ. ಶೆಟ್ಟಿ ಮುಂಬೈ, ತುಳು ಪರಿಷತ್ ಇದರ ಅಧ್ಯಕ್ಷರಾದ ಶುಭೋದಯ ಆಳ್ವ, ಮಂಗಳೂರು ತಾಲ್ಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆಯಾದ ಚಂಚಲಾ ತೇಜೊಮಯ ಹಾಗೂ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷರಾದ ಎ. ಸಿ. ಭಂಡಾರಿ ಉಪಸ್ಥಿತರಿದ್ದರು. ಕವಿಗಳು ಕವಿತೆ ವಾಚಿಸಿದರು. ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ, ಅಕ್ಷಯ ಆರ್ .ಶೆಟ್ಟಿ ಕಾರ್ಯಕ್ರಮ…
ಮೈಸೂರು : ಸಾಹಿತಿ, ಕವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗೀಶ್ ಕಾಂಚನ್ ಇವರು ಮೈಸೂರಿನಲ್ಲಿ ದಿನಾಂಕ 27 ಸೆಪ್ಟೆಂಬರ್ 2025ರಂದು ನಡೆಯಲಿರುವ ಈ ಬಾರಿಯ ದಸರಾ ಹಬ್ಬದ ಪ್ರಧಾನ ಕನ್ನಡ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ತುಳು ಕವಿಗೋಷ್ಠಿಗೆ ಆಯ್ಕೆಯಾಗುವ ಮೂಲಕ ಗೌರವ ಪಡೆದಿದ್ದರು.
ಸುಳ್ಯ: ದೇಲಂಪಾಡಿ ಬನಾರಿಯ ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರ ಮತ್ತು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ವತಿಯಿಂದ ಕವಿ, ಅರ್ಥದಾರಿ, ಯಕ್ಷಗಾನ ಗುರುಕುಲದ ರೂವಾರಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಹೆಸರಿನಲ್ಲಿ ಪ್ರತಿವರ್ಷವೂ ನೀಡಲಾಗುತ್ತಿರುವ ಪ್ರತಿಷ್ಠಿತ ‘ಕೀರಿಕ್ಕಾಡು ಪ್ರಶಸ್ತಿ’ಯನ್ನು ಶಿಕ್ಷಣ ಕ್ಷೇತ್ರದ ಮಹಾನ್ ಸಾಧಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳ ನೇತಾರ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರಿಗೆ ನೀಡಲಾಗುವುದು. ದಿನಾಂಕ 25 ಅಕ್ಟೋಬರ್ 2025ರಂದು ಬನಾರಿ ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ನಡೆಯಲಿರುವ ದೇಲಂಪಾಡಿಯ ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಸಂಘದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ದೇಲಂಪಾಡಿ ಬನಾರಿ ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರ ಮತ್ತು ಬನಾರಿ ಯಕ್ಷಗಾನ ಕಲಾಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ ತಿಳಿಸಿದ್ದಾರೆ.
ಬೆಂಗಳೂರು : ದಸರಾ ಹಬ್ಬದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2025ನೇ ಸಾಲಿನ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಗೆ ಪಂಡಿತ್ ವೆಂಕಟೇಶ್ ಕುಮಾರ್ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಡಿದೆ ದಿನಾಂಕ 22 ಸೆಪ್ಟೆಂಬರ್ 2025ರಂದು ಮೈಸೂರಿನ ಅರಮನೆಯ ಮುಂಭಾಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ. ವೈ. ಕೆ. ಮುದ್ದುಕೃಷ್ಣ ಅವರ ಆಯ್ಕೆ ಸಲಹಾ ಸಮಿತಿ ಪಂ. ವೆಂಕಟೇಶ್ ಕುಮಾರ್ ಅವರನ್ನು ಆಯ್ಕೆ ಮಾಡಿದೆ. ಅವರ ಆಯ್ಕೆ ಅತ್ಯಂತ ಸಂತೋಷ ತಂದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಮೂಡುಬಿದಿರೆ : ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ‘ವಿಶೇಷ ಉಪನ್ಯಾಸ ಮತ್ತು ಕವಿಯೊಂದಿಗೆ ಸಂವಾದ’ ಕಾರ್ಯಕ್ರಮವು ಡಾ. ವಿ.ಎ. ಆಚಾರ್ಯ ಸಭಾಂಗಣದಲ್ಲಿ ದಿನಾಂಕ 19 ಸೆಪ್ಟೆಂಬರ್ 2025ರಂದು ಜರುಗಿತು. ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಕವಿ ಹಾಗೂ ವಿಮರ್ಶಕರಾದ ಕೆ.ಆರ್. ಪುರಂ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಟಿ. ಯಲ್ಲಪ್ಪ ಇವರು ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅವರು ತಮ್ಮ ಬದುಕಿನ ಹಿನ್ನಲೆಯಲ್ಲಿ ಎದುರಿಸಿದ ಸಂಕಷ್ಟಗಳನ್ನು ಹಂಚಿಕೊಂಡರು. “ವಿದ್ಯಾಭ್ಯಾಸಕ್ಕೆ ಅನುಕೂಲವಿಲ್ಲದ ಮಲಹೋರುವ ಕುಟುಂಬದಲ್ಲಿ ಕಡುಬಡತನದಲ್ಲಿ ಜನಿಸಿದ್ದ ನಾನು, ಕನ್ನಡ ಸಾಹಿತ್ಯದ ಅಭ್ಯಾಸ ಮಾಡದೆ, ಭಾಷೆಯನ್ನು ಪ್ರೀತಿಸದೆ ಇದ್ದಿದ್ದರೆ ಇವತ್ತು ಸಹ ಅದೇ ಪರಿಸ್ಥಿತಿಯಲ್ಲಿ ಮುಂದುವರಿಯಬೇಕಾಗಿತ್ತು. ಆದರೆ ಬದುಕಿನ ಆಯ್ಕೆ ನನ್ನ ಕೈಯಲ್ಲಿತ್ತು. ಕಲಾ ವಿಭಾಗವನ್ನು ಆರಿಸಿಕೊಂಡು, ಬದುಕಿನ ಪಥ ಬದಲಿಸಿದೆ ಎಂದು ತಮ್ಮ ಬದುಕಿನ ಹೋರಾಟವನ್ನು ವಿವರಿಸಿದರು. ಡಾ. ಯಲ್ಲಪ್ಪರು ವೈದ್ಯರಾಗಬೇಕೆಂಬ ಕನಸನ್ನು ಹೊತ್ತು ವಿಜ್ಞಾನ ವಿಭಾಗಕ್ಕೆ ಸೇರಿದ ನೆನಪು ಹಂಚಿಕೊಂಡರು. “ನನ್ನ…
ನನ್ನ ಕಣ್ಣುಗಳು ಅವನ ನಡೆ, ನುಡಿಗಳನ್ನು ಹಿಂಬಾಲಿಸಿದವು. ಅವನ ನಡಿಗೆಯಲ್ಲೇ ಒಂದು ವಿಚಿತ್ರ ಲಯವಿತ್ತು. ಆ ಲಯ, ನನ್ನ ನಾಟಕದ ಮುಖ್ಯ ಪಾತ್ರದಂತೆಯೇ ಕಂಡಿತು. ‘ಯಾರವನು?’ ಎಂದು ನನ್ನ ಸಹೋದ್ಯೋಗಿಯನ್ನು ಕೇಳಿದೆ. ‘ಅವನು ಪ್ರಸಾದರಾವ್. ಒಂದು ರೀತಿಯಲ್ಲಿ ಹುಚ್ಚ. ಅವನ ವಿಷಯದಲ್ಲಿ ಯಾರೂ ತಲೆ ಹಾಕುವುದಿಲ್ಲ’ ಎಂದು ನಕ್ಕ. ಆದರೂ ನನ್ನ ಮನಸ್ಸು ಆತನನ್ನೇ ಹಿಂಬಾಲಿಸಿತು. ಆತ ಇನ್ನೊಬ್ಬರೊಂದಿಗೆ ನಗುತ್ತಾ, ಹರಟುತ್ತಿದ್ದ. ಆ ನಗು, ಆ ಹರಟೆಗಳಲ್ಲಿ ಪಾತ್ರದ ತುಡಿತ ಕಾಣಿಸಿತು. ‘ನನ್ನ ನಾಟಕಕ್ಕೆ ಇವನೇ ತಕ್ಕವನು’ ಎಂದು ಮನಸ್ಸಿನಲ್ಲಿ ನಿರ್ಧರಿಸಿದೆ. ಅವನನ್ನು ಪರಿಚಯಿಸುವಂತೆ ಸಹೋದ್ಯೋಗಿಯನ್ನು ಕೋರಿಕೊಂಡೆ. ಅವನು ವ್ಯಂಗ್ಯವಾಗಿ ನಗುತ್ತಾ, ‘ನಿನ್ನ ಇಷ್ಟ. ಕೋತಿ ಜೊತೆ ಜಗಳವಾಡಬೇಕೆಂದರೆ ನಾನೇನು ಮಾಡಲಿ?’ ಎಂದು ಹೇಳಿದರೂ, ಪ್ರಸಾದರಾವ್‌ನನ್ನು ಕರೆದ. ಪ್ರಸಾದ್ ನಗುತ್ತಾ ನಮ್ಮತ್ತ ಬಂದ. ಕೈಕುಲುಕಿ ಪರಿಚಯವಾದಾಗ, ಯಾವುದೇ ಪೀಠಿಕೆಯಿಲ್ಲದೆ ನೇರವಾಗಿ ವಿಷಯಕ್ಕೆ ಬಂದೆ. ‘ನಾನು ಒಂದು ನಾಟಕ ಬರೆದಿದ್ದೇನೆ. ನಿಮ್ಮ ನಡಿಗೆ, ಭಂಗಿಗಳಿಂದ ನೀವೇ ಆ ಪಾತ್ರಕ್ಕೆ ಸೂಕ್ತರೆಂದು ಅನಿಸಿತು. ನನ್ನ…
ಮಂಗಳೂರು : ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮತ್ತು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಇವರ ಸಹಯೋಗದಲ್ಲಿ ಮಂಗಳೂರು ದಸರಾ ಪ್ರಯುಕ್ತ ‘ಮಂಗಳೂರು ದಸರಾ ಕವಿಗೋಷ್ಠಿ’ಯನ್ನು ದಿನಾಂಕ 23 ಸೆಪ್ಟೆಂಬರ್ 2025ರಂದು ಸಂಜೆ 4-00 ಗಂಟೆಗೆ ಕುದ್ರೋಳಿ ಸಂತೋಷಿ ಕಲಾ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರ ಅಧ್ಯಕ್ಷತೆಯಲ್ಲಿ ‘ಬಹುಭಾಷಾ ಕವಿಗೋಷ್ಠಿ’ ಮತ್ತು ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ಕೆ. ಚಿನ್ನಪ್ಪ ಗೌಡ ಇವರ ಅಧ್ಯಕ್ಷತೆಯಲ್ಲಿ ‘ತುಳು ಕವಿಗೋಷ್ಠಿ’ ನಡೆಯಲಿದೆ.
ಮಂಗಳೂರು : ಬ್ಯಾರಿ ಎಲ್ತ್ ಕಾರ್ – ಕಲಾವಿದಮಾರೊ ಕೂಟ (ಮೇಲ್ತೆನೆ) ದೇರಳಕಟ್ಟೆ ಇದರ ದಶಮಾನೋತ್ಸವ ಪ್ರಯುಕ್ತ ನೀಡಲಾಗುವ ‘ಮೇಲ್ತೆನೆ’ ಪ್ರಶಸ್ತಿಗೆ ಹಿರಿಯ ಗಾಯಕ, ಕಲಾವಿದ ರಹೀಂ ಬಿ.ಸಿ.ರೋಡ್ ಆಯ್ಕೆಯಾಗಿದ್ದಾರೆ. ದಿನಾಂಕ 30 ಸೆಪ್ಟೆಂಬರ್ 2025ರಂದು ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್‌ನಲ್ಲಿ ನಡೆಯುವ ‘ಮೇಲ್ತೆನೆ ಪತ್ತನೆ ವರ್ಸತ್ತೆ ಜಲ್ಸ್-ಲೇಸ್ 2025’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು ಎಂದು ‘ಮೇಲ್ತೆನೆ’ಯ ಅಧ್ಯಕ್ಷರಾದ ವಿ. ಇಬ್ರಾಹಿಂ ನಡುಪದವು ತಿಳಿಸಿದ್ದಾರೆ.
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸಿಂಗಾರ ಸುರತ್ಕಲ್ ಮತ್ತು ಚೇಳ್ಯಾರು ಸರಕಾರಿ ಪದವಿ ಪೂರ್ವ ಕಾಲೇಜು ಇವುಗಳ ಸಹಭಾಗಿತ್ವದಲ್ಲಿ ‘ನಲ್ಮೆ ಬಲ್ಮೆ’ ವಿದ್ಯಾರ್ಥಿಗಳಿಗೆ ಮೂರು ದಿನಗಳ ರಂಗ ಕಾರ್ಯಾಗಾರವನ್ನು ದಿನಾಂಕ 24 ಸೆಪ್ಟೆಂಬರ್ 2025ರಿಂದ 26 ಸೆಪ್ಟೆಂಬರ್ 2025ರ ತನಕ ನಡೆಯಲಿದೆ. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿಯವರ ಅಧ್ಯಕ್ಷತೆಯಲ್ಲಿ ಹಿರಿಯ ರಂಗ ನಟಿ ಗೀತಾ ಸುರತ್ಕಲ್ ಇವರು ಈ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಚೇಳ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೆಂಕಟೇಶ್ ಶೆಟ್ಟಿ, ಸಮಿತಿಯ ಸದಸ್ಯ ಪುಷ್ಪರಾಜ್ ಶೆಟ್ಟಿ, ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪುತ್ತೂರು: ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ, ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿ ಸಂಸ್ಕೃತ ವಿಭಾಗ, ಸಂಸ್ಕೃತ ಸಂಘ, ವಿವೇಕಾನಂದ ಸಂಶೋಧನಾ ಕೇಂದ್ರ, ಸೌರಭ ಪ್ರಸಾರಾಂಗ ಹಾಗೂ ಐಕ್ಯೂಎಸಿಯ ಸಹಯೋಗದಲ್ಲಿ ನಡೆದ ಭಾರತೀಯ ಜೀವನ ದರ್ಶನ ಪ್ರವಚನ ಮಾಲಿಕೆಯ ಮೂರನೆಯ ಹಾಗೂ ನಾಲ್ಕನೆಯ ಸರಣಿ ಕಾರ್ಯಕ್ರಮ ದಿನಾಂಕ 19 ಸೆಪ್ಟೆಂಬರ್ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವೇದಾಂತ ವಿಭಾಗದ ಸಹ ಪ್ರಾಧ್ಯಾಪಕ ಡಾ. ವಿಶ್ವನಾಥ ಹೆಗಡೆ ಸುಂಕಸಾಳ ಮಾತನಾಡಿ “ಭಾರತೀಯ ಎಲ್ಲಾ ಶಾಸ್ತ ಗ್ರಂಥಗಳಲ್ಲೂ ಮನಸ್ಸಿನ ಬಗ್ಗೆ ವಿಸ್ತಾರವಾದ ವಿಚಾರಗಳಿವೆ. ಈ ಶಾಸ್ತ್ರಗಳೆಲ್ಲವೂ ನಮ್ಮನ್ನು ನಾವು ತಿಳಿದುಕೊಳ್ಳುವುದಕ್ಕಾಗಿ ಇರುವುದಾಗಿದೆ. ಅಂದಿನ ಋಷಿಮುನಿಗಳು ಹಾಗೂ ವಿಜ್ಞಾನಿಗಳು ಒಂದೊಂದು ಅಧ್ಯಯನ ವಿಭಾಗವನ್ನು ಬೇರೆಬೇರೆಯಾಗಿ ಕಾಣದೇ ಒಂದಾಗಿ ಕಾಣುತ್ತಿದ್ದರು. ಹಾಗೆ ಇಂದಿನ ಆಧುನಿಕ ಸಿದ್ಧಾಂತಗಳಲ್ಲಿರುವ ವಿಷಯವನ್ನೂ ಒಳಗೊಂಡಂತೆ ಅದಕ್ಕೂ ಹೆಚ್ಚಿನ ವಿಷಯಗಳು ನಮ್ಮ ಕೃತಿಗಳಲ್ಲಿವೆ. ವಿದೇಶೀಯರೂ ನಮ್ಮಲ್ಲಿನ ಜ್ಞಾನವನ್ನು ಅವರು ಬಳಸುತ್ತಿರಬೇಕಾದರೆ ಭಾರತೀಯರಾದ ನಾವು ಈ ಶಾಸ್ತ್ರಗ್ರಂಥಗಳು, ಜ್ಞಾನ ಪರಂಪರೆ ಇತ್ಯಾದಿಗಳನ್ನು…