Author: roovari

ಪುತ್ತೂರು : ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ, ಬಾಲವನ ಅಭಿವೃದ್ಧಿ ಸಮಿತಿ ಪುತ್ತೂರು ಸಹಯೋಗದಲ್ಲಿ ಗಣರಾಜ್ಯೋತ್ಸವದ ಕುರಿತು ಪ್ರಬಂಧ, ಚಿತ್ರಕಲೆ, ಭಾಷಣ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಇದರ ವೆಬ್‌ಸೈಟ್‌ನ ಮೊಬೈಲ್ ಆವೃತ್ತಿ ಅನಾವರಣ ಕಾರ್ಯಕ್ರಮವು ದಿನಾಂಕ 14-02-2024ರಂದು ಪರ್ಲಡ್ಕ ಡಾ. ಶಿವರಾಮ ಕಾರಂತ ಬಾಲವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್‌ಸೈಟ್ ಮೊಬೈಲ್ ಆವೃತ್ತಿ ಅನಾವರಣಗೊಳಿಸಿದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಮಾತನಾಡಿ, “ಬಾಲವನದಲ್ಲಿ ತೆರೆದ ರಂಗ ಮಂದಿರವಿದೆ. ಇಲ್ಲಿ ಮಕ್ಕಳಲ್ಲಿರುವ ಪ್ರತಿಭೆಗಳ ಬೆಳವಣಿಗೆಗೆ ಮತ್ತು ಅನಾವರಣಕ್ಕೆ ಅವಕಾಶ ಕಲ್ಪಿಸಬಹುದು. ಇದಕ್ಕಾಗಿ ಯೋಜನೆ ರೂಪಿಸಲಾಗುವುದು. ಬಾಲವನದ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಹೀಗಾಗಿ ಮಕ್ಕಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಬಾಲವನದ ತೆರೆದ ರಂಗ ಮಂದಿರವನ್ನು ಆದ್ಯತೆಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ನಂತರ ವಾರಾಂತ್ಯಕ್ಕೆ ವಿವಿಧ…

Read More

ಪಾರ್ವತಿ ಜಿ. ಐತಾಳ್ ಅವರ ‘ಮಹಾಬೆಳಗು ಮತ್ತು ಇತರ ನಾಟಕಗಳು ‘ಎಂಬ ಕೃತಿಯನ್ನು ಶ್ರೀನಿವಾಸ ಪುಸ್ತಕ ಪ್ರಕಾಶನವು ಇತ್ತೀಚೆಗೆ ಪ್ರಕಟಿಸಿದೆ. ಇದರಲ್ಲಿ ‘ಮಹಾಬೆಳಗು’ ಎಂಬ ಪೂರ್ಣ ಪ್ರಮಾಣದ ನಾಟಕದ ಜೊತೆಗೆ ಐದು ಏಕಾಂಕ ನಾಟಕಗಳಿವೆ. ಎಲ್ಲವೂ ಮಾನವೀಯತೆಯ ಬೆಳಕಿನ ಸಂದೇಶವನ್ನು ಸಾರುವ ನಾಟಕಗಳು. ಜಾತಿ-ಧರ್ಮಗಳ ಹೆಸರಿನಲ್ಲಿ ಛಿದ್ರಗೊಳ್ಳುತ್ತಿರುವ ನಮ್ಮ ಸಮಾಜಕ್ಕೆ ಮನುಷ್ಯ ಧರ್ಮಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ ಎಂಬ ಸಂದೇಶವನ್ನು ಈ ನಾಟಕಗಳು ಸಾರುತ್ತವೆ. ಒಂದು ಗ್ರಾಮೀಣ ಪ್ರದೇಶದಲ್ಲಿ ಶ್ರೀಮಂತರು ಮತ್ತು ಬಲಾಢ್ಯರು ತಮ್ಮ ಪ್ರತಿಷ್ಠೆಗೋಸ್ಕರ ಜಾತಿ-ಧರ್ಮಗಳನ್ನು ಬಳಸಿಕೊಂಡು ಮುಗ್ಧ ಜನರನ್ನು ಹೇಗೆ ವಂಚಿಸುತ್ತಾರೆ ಎಂಬುದನ್ನು ‘ಮಹಾಬೆಳಗು’ ನಾಟಕವು ಮನಮುಟ್ಟುವಂತೆ ಚಿತ್ರಿಸುತ್ತದೆ. ಸ್ವಾರ್ಥಿಗಳಿಂದಾಗಿ ಊರಿನಲ್ಲಿ ಹಿಂದೂ-ಮುಸ್ಲಿಂ ಬಣಗಳು ಹುಟ್ಟಿಕೊಳ್ಳುತ್ತವೆ. ಅವುಗಳ ನಡುವೆ ಸಂಘರ್ಷಗಳು ನಡೆಯುತ್ತವೆ. ಆದರೆ ಸೂಕ್ಷ್ಮಮತಿಯಾದ ಅಂದೂಕಾಕನಿಗೆ ಇದರ ಹಿಂದಿನ ಸಂಚು ಅರ್ಥವಾಗುತ್ತದೆ. ಅವನ ಮೂಲಕ ಕಥಾನಾಯಕ ಸೂರ್ಯನಿಗೆ ಸತ್ಯದ ಅರಿವಾಗುತ್ತದೆ. ಅವನು ಮನುಷ್ಯನಾಗಲು ನಿರ್ಧರಿಸುತ್ತಾನೆ. ಕಾಸರಗೋಡಿನ ಆಡು ಭಾಷೆ, ಮಾಪಿಳ್ಳೆಗಳ ಮಲೆಯಾಳ ಮಿಶ್ರಿತ ಕನ್ನಡದ ಸಂಭಾಷಣೆಗಳು, ನಡುನಡುವೆ ಹಾಡುಗಳು…

Read More

ಮಂಗಳೂರು : ದಿನಾಂಕ 19-02-2024 ರಂದು ನಿಧನರಾದ ಖ್ಯಾತ ಕಾದಂಬರಿಕಾರ ಕೆ ಟಿ ಗಟ್ಟಿಯವರಿಗೆ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ  ಪರಿಷತ್ತು  ಮಂಗಳೂರು ತಾಲೂಕು ಘಟಕದಿಂದ ಶ್ರದ್ಧಾಂಜಲಿ ಸಭೆಯು ದಿನಾಂಕ 19-02-2024 ರಂದು ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿದ ಡಾ. ಮೀನಾಕ್ಷಿ ರಾಮಚಂದ್ರ ಮಾತನಾಡಿ “ಪ್ರಚಾರ ಬಯಸದ ಸಹೃದಯಿ ಕೆ. ಟಿ. ಗಟ್ಟಿಯವರು, ಮೌನವಾಗಿಯೇ ನಿರಂತರ ಸಾಧನೆಯಿಂದ ಸಾಹಿತ್ಯ ಲೋಕದ ತಾರೆಯಾದರು.” ಎಂದರು. ಘಟಕದ ಅಧ್ಯಕ್ಷ ಡಾ. ಮಂಜುನಾಥ ರೇವಣ್ಕರ್, ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ , ರಘು ಇಡ್ಕಿದು, ಬೆನೆಟ್ ಜಿ ಅಮ್ಮನ್ನ, ನುಡಿ ನಮನ ಸಲ್ಲಿಸಿದರು. ಕೇಂದ್ರ ಪರಿಷತ್ತು ಮಾರ್ಗದರ್ಶಿ ಸಮಿತಿಯ ಡಾ. ಮುರಲೀಮೋಹನ್ ಚೂಂತಾರು ಗೌರವ ನಮನ ಸಲ್ಲಿಸಿದರು. ಕೋಶಾಧಿಕಾರಿ  ಎನ್. ಸುಬ್ರಾಯ ಭಟ್, ಸಮಿತಿ ಸದಸ್ಯರಾದ ಬಿ. ಕೃಷ್ಣಪ್ಪ ನಾಯ್ಕ್ , ಶ್ರೀಕೃಷ್ಣ ಭಟ್ ಸುಣ್ಣಂಗುಳಿ , ರತ್ನಾವತಿ ಜೆ. ಬೈಕಾಡಿ , ನಿಜಗುಣ ದೊಡ್ಡಮನಿ ಹಾಗೂ…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಪುತ್ತೂರು ಇದರ ವತಿಯಿಂದ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಪಾರ್ತಿಸುಬ್ಬ ವಿರಚಿತ “ವಾಲಿ ಮೋಕ್ಷ “(ಮುಂದುವರಿದ ಭಾಗ)ಎಂಬ ತಾಳಮದ್ದಳೆ ದಿನಾಂಕ 17- 02- 2024ರಂದು ಶ್ರೀಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಶ್ರೀ ಸತೀಶ್ ಇರ್ದೆ, ಶ್ರೀ ನಿತೀಶ್ ಎಂಕಣ್ಣಮೂಲೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಶ್ರೀ ಪದ್ಯಾಣ ಶಂಕರನಾರಾಯಣ ಭಟ್, ಶ್ರೀ ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಗುಡ್ಡಪ್ಪ ಬಲ್ಯ ( ಶ್ರೀ ರಾಮ), ಪಕಳಕುಂಜ ಶ್ರೀ ಶ್ಯಾಂ ಭಟ್ (ವಾಲಿ) ಶ್ರೀ ಭಾಸ್ಕರ ಬಾರ್ಯ, ಶ್ರೀಮತಿ ಹರಿಣಾಕ್ಷಿ.ಜೆ.ಶೆಟ್ಟಿ ಹಾಗೂ ಶ್ರೀ ದುಗ್ಗಪ್ಪ ನಡುಗಲ್ಲು (ಸುಗ್ರೀವ), ಶ್ರೀ ಕುಂಬ್ಳೆ ಶ್ರೀಧರ್ ರಾವ್ (ತಾರೆ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು .

Read More

ಮಂಗಳೂರು : ಹಿರಿಯ ಸಾಹಿತಿ, ಖ್ಯಾತ ಕಾದಂಬರಿಕಾರ ಕೆ.ಟಿ.ಗಟ್ಟಿ (ಕೂಡ್ಲು ತಿಮ್ಮಪ್ಪ ಗಟ್ಟಿ) ದಿನಾಂಕ 19-02-2024ರ ಸೋಮವಾರ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೂಲತಃ ಕಾಸರಗೋಡು ಜಿಲ್ಲೆಯ ಕೂಡ್ಲು ನಿವಾಸಿಯಾಗಿರುವ ಅವರು, ಇತ್ತೀಚೆಗೆ ಮಂಗಳೂರಿನಲ್ಲಿ ನೆಲೆಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಕೆ. ಟಿ. ಗಟ್ಟಿ ಅವರು, ಪತ್ರಿಕಾ ಕಾದಂಬರಿಗಳ ಮೂಲಕ ಹೆಸರುವಾಸಿಯಾಗಿದ್ದರು. ಉಡುಪಿಯ ಟಿ. ಎಂ. ಎ. ಪೈ. ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಗಟ್ಟಿಯವರು, ಭಾರತ ಸರಕಾರದಿಂದ ಪ್ರಾಧ್ಯಾಪಕರಾಗಿ ಇಥಿಯೋಪಿಯಕ್ಕೆ ಪ್ರಯಾಣ ಬೆಳೆಸಿದ್ದರು. ಇಥಿಯೋಪಿಯಾಯದಿಂದ ಹಿಂತಿರುಗಿದ ನಂತರ ಉಜಿರೆಯಲ್ಲಿ ನೆಲೆಸಿದ್ದ ಇವರು ಕೃಷಿಯಲ್ಲಿ ತೊಡಗಿದ್ದರು. ಕಲಿಕೆಯಲ್ಲಿ ನಿರಂತರ ಆಸಕ್ತಿ ಹೊಂದಿದ್ದ ಕೆ. ಟಿ. ಗಟ್ಟಿ ಯವರು ಇಂಗ್ಲೆಂಡಿನ ಟ್ರಿನಿಟಿ ಮತ್ತು ಆಕ್ಸಫರ್ಡ್ ಕಾಲೇಜುಗಳಿಂದ ಇಂಗ್ಲಿಷ್ ಕಲಿಕೆಯಲ್ಲಿ ಡಿಪ್ಲೋಮ ಪದವಿ ಗಳಿಸಿದ್ದರು. ದಿನಾಂಕ 19-02-2024ರ ಸೋಮವಾರ ಮಧ್ಯಾಹ್ನ ಘಂಟೆ 1.00 ರಿಂದ ಸಂಜೆ 3.00ರವರೆಗೆ ಅವರ ಪಾರ್ಥಿವ ಶರೀರವನ್ನು ಬಿಜೈನ ಕೆ.…

Read More

ಧಾರವಾಡ : ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯ ಮೂಲಕ ಯುವ ವಿಮರ್ಶಕ ಶ್ರೀ ವಿಕಾಸ ಹೊಸಮನಿ ಅವರ ಸಂಪಾದಕತ್ವದಲ್ಲಿ ಇತ್ತೀಚೆಗೆ ಬರೆಯುತ್ತಿರುವ ಉದಯೋನ್ಮುಖ ಲೇಖಕ/ಕಿಯರ ಕಥೆಗಳನ್ನೊಳಗೊಂಡ ಪ್ರಾತಿನಿಧಿಕ ಕಥಾಸಂಕಲನವೊಂದನ್ನು ತರಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಲೇಖಕ/ಕಿಯರು ಕಥೆಗಳನ್ನು ಕಳಿಸಬಹುದು. ನಿಯಮಗಳು * ಲೇಖಕ/ಕಿಯರಿಗೆ ಮುಕ್ತ ಪ್ರವೇಶವಿದ್ದು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. * ಈ ಪ್ರಾತಿನಿಧಿಕ ಸಂಕಲನಕ್ಕೆ 20 ಕಥೆಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. * ಕಥೆಗಳ ಗುಣಮಟ್ಟವೇ ಆಯ್ಕೆಯ ಮಾನದಂಡ. * ಕಥಾ ವಸ್ತು, ತಂತ್ರ, ಭಾಷೆ, ಶೈಲಿ ಸೇರಿದಂತೆ ಹೊಸ ಪ್ರಯೋಗಗಳಿಗೆ ಆದ್ಯತೆಯನ್ನು ನೀಡಲಾಗುವುದು. * ಸ್ವತಂತ್ರ ಮತ್ತು ಪುಸ್ತಕ ರೂಪದಲ್ಲಿ ಪ್ರಕಟವಾಗದ ಕಥೆಗಳನ್ನು ಮಾತ್ರ ಕಳುಹಿಸಬಹುದು. * ಅನುವಾದಿತ, ರೂಪಾಂತರಿತ ಮತ್ತು ಪ್ರೇರಿತ ಕಥೆಗಳಿಗೆ ಅವಕಾಶವಿಲ್ಲ. * ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು. * ಕಥೆಗಳು 5000 ಪದಗಳಿಗೆ ಮೀರದಂತಿರಬೇಕು. * ಕಥೆಯ ಸಾಫ್ಟ್ ಕಾಪಿಯ ಜೊತೆಗೆ ಕಥೆಗಾರರ ಪರಿಚಯ ಮತ್ತು ಭಾವಚಿತ್ರ ಕಳುಹಿಸುವುದು ಕಡ್ಡಾಯ. *…

Read More

ಅಂಕೋಲಾ : ವಯೋಸಹಜ ಖಾಯಿಕೆಯಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ವಿಷ್ಣು ನಾಯ್ಕ (81) ದಿನಾಂಕ 17-02-2024ರ ಶನಿವಾರ ರಾತ್ರಿ ನಿಧನರಾದರು. ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಬ್ಬರು ಪುತ್ರಿಯರು ಹಾಗೂ ಅಪಾರ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ. ಅಂಕೋಲಾ ತಾಲೂಕಿನ ಅಂಬಾರಕೊಡ್ಲದಲ್ಲಿ 07-07-1944ರಂದು ಜನಿಸಿದ ವಿಷ್ಣು ನಾಯ್ಕ ಪ್ರಾಚಾರ್ಯರಾಗಿದ್ದರು. ಯಕ್ಷಗಾನ ಕಲಾವಿದರಾಗಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಅಪಾರ ಕೊಡುಗೆ ನೀಡಿದ್ದಾರೆ. 1973ರಲ್ಲಿ ರಾಘವೇಂದ್ರ ಪ್ರಕಾಶನ ಪ್ರಾರಂಭಿಸಿ 180ಕ್ಕೂ ಅಧಿಕ ಗ್ರಂಥ ಪ್ರಕಟಿಸಿರುವುದು ವಿಶೇಷ. 60ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದ ಇವರು, ವಾರಪತ್ರಿಕೆಯೊಂದನ್ನು ಪ್ರಕಟಿಸುತ್ತಿದ್ದರು. ಭಾವಗೀತೆಗಳ ‘ಸ್ವಂತಿಕೆ’ ಧ್ವನಿಸುರುಳಿ ಹೊರತಂದಿದ್ದ ವಿಷ್ಣು ನಾಯ್ಕ ಸಾಹಿತಿ ಡಾ. ದಿನಕರ ದೇಸಾಯಿ ಅವರೊಂದಿಗೆ ರೈತ ಜನಾಂದೋಲನದಲ್ಲೂ ಪಾಲ್ಗೊಂಡಿದ್ದರು.

Read More

ಉಳ್ಳಾಲ :  2023- 2024ನೇ ಸಾಲಿನ ವೀರರಾಣಿ ಅಬ್ಬಕ್ಕ ಪ್ರಶಸ್ತಿಗೆ ಪ್ರಮೀಳಾ ಮಾಧವ್ (ಸಾಹಿತ್ಯ ಕ್ಷೇತ್ರ) ಹಾಗೂ ಮಾಲತಿ ಹೊಳ್ಳ (ಕ್ರೀಡಾ ಕ್ಷೇತ್ರ) ಇವರನ್ನು ಆಯ್ಕೆ ಮಾಡಲಾಗಿದೆ. ದಿನಾಂಕ 24-02-2024ರಂದು ಉಳ್ಳಾಲದ ಮಹಾತ್ಮ ಗಾಂಧಿ ರಂಗಮಂದಿರದಲ್ಲಿ ನಡೆಯುವ ‘ಅಬ್ಬಕ್ಕ ಉತ್ಸವ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಿತಿಯ ಅಧ್ಯಕ್ಷರಾದ ದಿನಕರ ಉಳ್ಳಾಲ್ ತಿಳಿಸಿದರು. ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸ್ವಾಗತಾಧ್ಯಕ್ಷರಾದ ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ “ಇಬ್ಬರಿಗೂ ಒಂದೇ ಹೆಸರಿನ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ಮೊತ್ತ ತಲಾ ರೂಪಾಯಿ 25 ಸಾವಿರ ಆಗಿದ್ದು, ಎರಡೂ ರೀತಿಯ ಗೌರವವನ್ನು ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ ಎಂದೇ ಗುರುತಿಸಲಾಗುತ್ತದೆ. ಡಾ. ಕೆ.ಚಿನ್ನಪ್ಪ ಗೌಡ, ಪ್ರೊ. ಎ. ವಿ. ನಾವಡ, ಡಾ. ಗಣೇಶ್ ಅಮೀನ್ ಸಂಕಮಾರ್, ಡಾ. ನಾ. ದಾಮೋದರ ಶೆಟ್ಟಿ, ಬಿ. ಎಂ. ರೋಹಿಣಿ ಆಯ್ಕೆ ಸಮಿತಿಯು ಈ ಆಯ್ಕೆ ಮಾಡಿದೆ.” ಎಂದರು. ಮಾಲತಿ ಹೊಳ್ಳ : ಮೂಲತಃ ಉಡುಪಿಯ ಕೋಟದ ಮಾಲತಿ ಹೊಳ್ಳ…

Read More

ಮಂಗಳೂರು : ಶ್ರೀ ಗೋಕರ್ಣನಾಥೇಶ್ವರ ಪದವಿ ಕಾಲೇಜು ಮಣ್ಣಗುಡ್ಡ ಮತ್ತು ಜರ್ನಿ ಥೇಟರ್ ಗ್ರೂಪ್ (ರಿ.) ಮಂಗಳೂರು ಇದರ ಸಹಯೋಗದಲ್ಲಿ ‘ರಂಗತರಬೇತಿ ಕಾರ್ಯಾಗಾರ ಮತ್ತು ನಾಟಕ ನಿರ್ಮಾಣ ಪ್ರಕ್ರಿಯೆ’ಯು ದಿನಾಂಕ 11-02-2024ರಂದು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಸಭಾಂಗಣದಲ್ಲಿ ಉದ್ದಾಟನೆಗೊಂಡಿತು. ಈ ಕಾರ್ಯಾಗಾರವನ್ನು ಕಾಲೇಜಿನ ಸಂಚಾಲಕರಾದ ಶ್ರೀ ವಸಂತ್ ಕಾರಂದೂರು ಉದ್ಘಾಟಿಸಿ “ಇದೊಂದು ಸರಳ ಮತ್ತು ಅಪೂರ್ವವಾದ ಸಮಾರಂಭ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಒಳ್ಳೆಯ ರೀತಿಯ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು. ಇಂದು ನಾಟಕ ಕಲೆ ನಶಿಸಿ ಹೋಗುತ್ತಿದೆ. ಭೂಮಿಯಲ್ಲಿ ನಾವು ಬದುಕಿ ಇರುವಷ್ಟು ಕಾಲ ಈ ನಾಟಕವು ಶಾಶ್ವತವಾಗಿ ಬೆಳವಣಿಗೆಯನ್ನು ಹೊಂದಬೇಕು. ಇದು ನಮ್ಮ ಕಾಲೇಜಿನ ಹೊಸ ಹಾಗೂ ಒಳ್ಳೆಯ ಪ್ರಯತ್ನ. ಇದರಲ್ಲಿ ನಾವು ಯಶಸ್ವಿಯಾಗಿ ಸಮಾಜಕ್ಕೆ ಒಳ್ಳೆಯ ನಟರು ನಿರ್ದೇಶಕರನ್ನು ನೀಡುವ ಸುವರ್ಣ ಅವಕಾಶ ಬಂದಿದೆ” ಎಂದು ಹೇಳಿದರು. ಜರ್ನಿ ಥಿಯೇಟರ್ ಇದರ ಸಾಂಸ್ಕೃತಿಕ ರಾಯಭಾರಿಯಾದ ಶ್ರೀ ಸುನೀಲ್ ಪಲ್ಲಮಜಲು ಇವರು “ಅನುಭವ ಸವಿಯಲ್ಲ ಅದರ ನೆನಪೇ ಸವಿ. ಅದು ಮತ್ತೆ ಮರುಕಳಿಸಿದೆ.…

Read More

ಉಡುಪಿ : ಶ್ರೀ ಮಹತೋಭಾರ ಶ್ರೀ ಶಂಕರ ನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯ ನಿಕೇತನ ಕೊಡವೂರು ಇದರ ಜಂಟಿ ಆಶ್ರಯದಲ್ಲಿ ಆರಂಭಗೊಂಡ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 19-02-2024ರ ಸೋಮವಾರ ಸಂಜೆ ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಶಿವಮೊಗ್ಗದ ವಿದುಷಿ ಕವನ ಪಿ. ಕುಮಾರ್ ಪ್ರದರ್ಶನ ನೀಡಲಿದ್ದು, ಈ ಕಾರ್ಯಕ್ರಮವು ಸಂಜೆ ಗಂಟೆ 6.25 ರಿಂದ ನಡೆಯಲಿದೆ. ಕವನ ಪಿ. ಶಿವಮೊಗ್ಗ : ಪ್ರೇಮ್ ಕುಮಾರ್ ಮತ್ತು ಶ್ರೀಮತಿ ಗೀತಾ ದಂಪತಿಗಳ ಸುಪುತ್ರಿಯಾಗಿರುವ ವಿದುಷಿ ಕುಮಾರಿ ಕವನ ಪಿ. ಕುಮಾರ್ ತನ್ನ ಆರನೇ ವಯಸ್ಸಿನಿಂದ ಭರತನಾಟ್ಯದ ಅಭ್ಯಾಸವನ್ನು ಶಿವಮೊಗ್ಗದ ಖ್ಯಾತ ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಪುಷ್ಪ ಕೃಷ್ಣಮೂರ್ತಿ ಇವರ ಮಾರ್ಗದರ್ಶನದಲ್ಲಿ ನಡೆಸಿದ್ದು, ತನ್ನ ವಿದ್ವತ್ತನ್ನೂ ಪೂರ್ಣಗೊಳಿಸಿದ್ದಾರೆ. ಗುರುಗಳ ತಂಡದೊಂದಿಗೆ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿರುವ ಇವರು ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ. ಕರ್ನಾಟಕ ಸಂಗೀತ ನೃತ್ಯ…

Read More