ಮಣಿಪಾಲ : ಕಲಾಸ್ಪಂದನ ಕಲಾ ಶಾಲೆಯು ಮೂವತ್ತನೆಯ ವರ್ಷಕ್ಕೆ ಕಾಲಿಡುವ ಪ್ರಯುಕ್ತ ವರ್ಷದುದ್ದಕ್ಕೂ ಆಯೋಜಿಸುವ ಸರಣಿ ಕಾರ್ಯಕ್ರಮದಲ್ಲಿ ಡಾಕ್ಟರ್ ಪಳ್ಳತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ (ರಿ) ಸಂಸ್ಥೆಯು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ‘ವೀಣಾ ಸಂಧ್ಯಾ’ ಎನ್ನುವ ಪಂಚ ವೀಣಾ ವಾದನ ಕಾರ್ಯಕ್ರಮವನ್ನು ದಿನಾಂಕ 20-06-2024ರಂದು ಗ್ರೀನ್ ವ್ಯಾಲಿ ಪ್ಯಾರಿಡೈಸ್ ರಿಟೈರ್ಮೆಂಟ್ ಹೋಂ ಮಂಚಿ ಮಣಿಪಾಲ ಇಲ್ಲಿ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀಮತಿ ಎಸ್.ಎನ್. ಕಮಲಾರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಲಾ ಸ್ಪಂದನ, ಮಣಿಪಾಲದ ನಿರ್ದೇಶಕಿ ವಿದುಷಿ ಪವನ ಬಿ. ಆಚಾರ್ ಇವರ ಬಳಗದಿಂದ ರಿಟೈರ್ಮೆಂಟ್ ಹೋಂನಲ್ಲಿರುವವರಿಗೆ ಆಕ್ಟಿವಿಟಿ ನಡೆಸಲಾಯಿತು. ನಂತರ ವಿಪಂಚಿ ತಂಡ ವೀಣಾ ವಾದನವನ್ನು ನಡೆಸಿದರು. ಕಾರ್ಯಕ್ರಮವು ರಿಟೈರ್ಮೆಂಟ್ ಹೋಂ ಇವರ ನಿವಾಸಿಗಳಿಂದ ತುಂಬಾ ಮೆಚ್ಚುಗೆ ಗಳಿಸಿತು. ಡಾಕ್ಟರ್ ಪಳ್ಳತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟಿನ ಸದಸ್ಯರಾದ ಡಾ. ಬಾಲಚಂದ್ರ ಆಚಾರ್, ಡಾ. ಇಂದಿರಾ ಶಾನುಭೋಗ ಹಾಗೂ ಗ್ರೀನ್ ವ್ಯಾಲಿ ಪ್ಯಾರಿಡೈಸ್ ರಿಟೈರ್ಮೆಂಟ್ ಹೋಂನ ಟ್ರಸ್ಟಿಗಳಾದ ಡಾ. ತಾರಾ ಶಾನುಭೋಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.