Author: roovari

ಸಿ. ಕೆ. ನಾಗರಾಜ್ ಒಬ್ಬ ಭಾರತೀಯ ಬರಹಗಾರ. ಮಾತ್ರವಲ್ಲದೆ ನಾಟಕ ರಚನಾಕಾರ, ರಂಗ ಕಲಾವಿದ, ನಿರ್ದೇಶಕ, ಪತ್ರಕರ್ತ ಮತ್ತು ಕನ್ನಡದ ಹಾಗೂ ಸಾಮಾಜಿಕ ಮಹಾನ್ ಕಾರ್ಯಕರ್ತರಾಗಿ ಹಲವು ಆಯಾಮಗಳಲ್ಲಿ ದುಡಿದವರು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ 1915ರ ಜೂನ್ 12 ರಂದು ಜನಿಸಿದ ಸಿ. ಕೆ. ನಾಗರಾಜ ರಾವ್ ಇವರು ಕೃಷ್ಣಮೂರ್ತಿ ರಾವ್ ಮತ್ತು ಪುಟ್ಟಮ್ಮ ದಂಪತಿಗಳ ಸುಪುತ್ರ.  ತಂದೆ ಕೃಷ್ಣಮೂರ್ತಿ ರಾವ್ ಉದ್ಯೋಗ ನಿಮಿತ್ತ ಆಗಾಗ ವರ್ಗಾವಣೆಗೊಂಡು ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದ ಕಾರಣ ಇವರ ವಿದ್ಯಾಭ್ಯಾಸವು ಬೇರೆ ಬೇರೆ ಊರುಗಳಲ್ಲಿ ನಡೆಯಿತು. ಪ್ರಾರಂಭಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ನಡೆದರೂ ಚನ್ನಪಟ್ಟಣ ಚಿತ್ರದುರ್ಗ ಮತ್ತು ಬೆಂಗಳೂರುಗಳಲ್ಲಿಯೂ ವಿದ್ಯಾಭ್ಯಾಸ ಮಾಡಬೇಕಾಯಿತು. ಇಂಟರ್ಮಿಡಿಯಟ್ ನಲ್ಲಿ ತೇರ್ಗಡೆ ಹೊಂದಿದರೂ ಬದುಕಿನ ಆರ್ಥಿಕ ಮಿತಿಯಿಂದಾಗಿ ವಿದ್ಯಾಭ್ಯಾಸ ಮುಂದುವರಿಸಲಾಗದೆ ‘ಮೈಸೂರು ಪ್ರೀಮಿಯರ್ ಮೆಟಲ್ ಕಾರ್ಖಾನೆ’ಯಲ್ಲಿ ಸಿಬ್ಬಂದಿ ನಿಯಂತ್ರಕರಾಗಿ ಕೆಲಸ ಮಾಡಿ ಮುಂದೆ ಇವರ ಸೋದರ ಮಾವ ನಿಟ್ಟೂರು ಶ್ರೀನಿವಾಸರಾಯರು ನಡೆಸುತ್ತಿದ್ದ ‘ಸತ್ಯ ಶೋಧನ ಪ್ರಕಟಣಾ ಮಂದಿರ’ದಲ್ಲಿ ಐದು ವರ್ಷ ವ್ಯವಸ್ಥಾಪಕರಾಗಿ…

Read More

ತೆಕ್ಕಟ್ಟೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿಯ ಪ್ರಾಯೋಜಕತ್ವದಲ್ಲಿ ಧಮನಿ ಟ್ರಸ್ಟ್ ಆಯೋಜಿಸಿಕೊಂಡ ಎರಡು ದಿನಗಳ ನಾಟಕೋತ್ಸವ ಉದ್ಘಾಟನಾ ಸಮಾರಂಭ ದಿನಾಂಕ 31 ಮೇ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಖ್ಯಾತ ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ ಇವರನ್ನು ಅಭಿನಂದಿಸಿದ ಡಾ. ಕೋಟ ಶಿವರಾಮ ಕಾರಂತ ಟ್ರಸ್ಟ್ ಸಾಲಿಗ್ರಾಮ ಇದರ ಅಧ್ಯಕ್ಷರಾದ ಬಿ. ಎಂ. ಗುರುರಾಜ್ ರಾವ್ ಮಾತನಾಡಿ “ಭವಿಷ್ಯದ ಕುಡಿಗಳಲ್ಲಿ ಅಧ್ಯಯನ ಬಹಳಷ್ಟಿದೆ. ರಂಗಭೂಮಿಯ ಮೂಲಕದ ಚಟುವಟಿಕೆಗಳಿಂದ ಮಕ್ಕಳ ಮನಸ್ಸು ಅರಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಧಮನಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಮಕ್ಕಳೊಂದಿಗಿನ ಬದುಕು ಕ್ಲಿಷ್ಟಕರವೆನಿಸಿದರೂ ಮನೋಲ್ಲಾಸದ ಕ್ಷಣವಾಗಿ ಉಳಿಯುವುದು” ಎಂದು ಅಭಿಪ್ರಾಯಪಟ್ಟರು. ಕೋಟ ಶಿವರಾಮ ಕಾರಂತ ಟ್ರಸ್ಟ್ ಇದರ ಕಾರ್ಯದರ್ಶಿ ಕೆ. ನಾರಾಯಣ, ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷರಾದ ಹೆರಿಯ ಮಾಸ್ಟರ್, ಶ್ರೀಷ ತೆಕ್ಕಟ್ಟೆ, ಶ್ರೀಮತಿ ಸುಲೋಚನಾ ಉಪಸ್ಥಿತರಿದ್ದರು. ಪಂಚಮಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಬಳಿಕ ರೋಹಿತ್ ಎಸ್. ಬೈಕಾಡಿ…

Read More

ಕನ್ನಡ, ಸಂಸ್ಕೃತ, ಹಿಂದಿ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದ ಸಾಹಿತಿ ಹಾಗೂ ಹಿರಿಯ ವಿದ್ವಾಂಸರಾದ ಹೀ. ಚಿ. ಚಿಶಾಂತವೀರಯ್ಯನವರು ಸಾಹಿತ್ಯ ಲೋಕಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಇವರ ತಂದೆ ಚಿಕ್ಕಯ್ಯ, ತಾಯಿ ಚಿಕ್ಕಮ್ಮ. ತಿಪಟೂರು ತಾಲೂಕಿನ ಹೀಚನೂರಿನ ದೇವರಹಟ್ಟಿ ಮನೆತನದಲ್ಲಿ 1934 ಜೂನ್ 11ರಂದು ಇವರ ಜನನವಾಯಿತು. ಹೀಚನೂರು ಮತ್ತು ತಿಪಟೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ನಂತರ ದಾವಣಗೆರೆ ಮೈಸೂರು ಮತ್ತು ಬೆಂಗಳೂರಿನಲ್ಲಿ ಕಾಲೇಜು ವಿದ್ಯಾಭ್ಯಾಸವನ್ನು ಮುಗಿಸಿದರು. ಬಿ. ಎ. (ಆನರ್ಸ್) ಎಂ. ಎ. ಮತ್ತು ಬಿ. ಎಡ್. ಪದವಿ ಪಡೆದು, ತಿಪಟೂರು ಚಿಕ್ಕನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಸಾಹಿತ್ಯ ಲೋಕಕ್ಕೆ ಅನನ್ಯ ಸೇವೆ ಸಲ್ಲಿಸಿದ ಇವರು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ “ಕನ್ನಡ ನಿಘಂಟು” ರಚನಾ ಕಾರ್ಯದಲ್ಲಿ ಸಹಾಯಕ ಸಂಪಾದಕರಾಗಿ, ಉಪಸಂಪಾದಕರಾಗಿ ಕೊನೆಯಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದುದು ವಿಷೇಶ. ಆ ಕಾಲದಲ್ಲಿದ್ದ ಬಹಳಷ್ಟು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಇವರ ನೂರಾರು ಲೇಖನಗಳು ಪ್ರಕಟಗೊಂಡಿವೆ. ಕನ್ನಡ ನಾಡು…

Read More

ಮಂಗಳೂರು : ಇತ್ತೀಚೆಗೆ ನಿಧನರಾದ ಎಂ. ಲಕ್ಷ್ಮೀನಾರಾಯಣ ಭಟ್ ಅವರಿಗೆ ಹರಿಕಥಾ ಪರಿಷತ್ ಮಂಗಳೂರು ವತಿಯಿಂದ ಆಯೋಜಿಸಲಾದ ನುಡಿನಮನ ಕಾರ್ಯಕ್ರಮ ದಿನಾಂಕ 07 ಜೂನ್ 2025ರಂದು ಮಂಗಳೂರಿನ ಹೊಟೇಲ್ ವುಡ್ಲ್ಯಾಂಡ್ಸ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ವಕೀಲ, ಹರಿದಾಸ ಹಾಗೂ ಹರಿಕಥಾ ಪರಿಷತ್ ಮಂಗಳೂರು ಇದರ ಅಧ್ಯಕ್ಷರಾದ ಕೆ. ಮಹಾಬಲ ಶೆಟ್ಟಿ ಮಾತನಾಡಿ “ಸಂತ ಭದ್ರಗಿರಿ ಅಚ್ಯುತದಾಸರಿಗೆ ಮೂರು ದಶಕಗಳ ಕಾಲ ತಬ್ಲಾ ಸಾಥಿಯಾಗಿ, ಆಪ್ತ ಸಹಾಯಕನಾಗಿ, ಮುಂದೆ ಹರಿಕಥಾ ಪರಿಷತ್, ಮಂಗಳೂರು ಇದರ ಪ್ರಾರಂಭದ ದಿನಗಳಲ್ಲಿ ಗೌರವ ಸಲಹೆಗಾರರಾಗಿ, ಉಪಾಧ್ಯಕ್ಷರಾಗಿ ಅಮೂಲ್ಯ ಸೇವೆ ಸಲದಲಿಸಿದ, ಕೊಡಿಯಾಲ್ ಬೈಲ್ ಲಕ್ಷ್ಮೀನಾರಾಯಣಿ ದೇವಸ್ಥಾನದ ಪ್ರಧಾನ ಅರ್ಚಕರೂ ಆದ ಎಂ. ಲಕ್ಷ್ಮೀನಾಯಣ ಭಟ್ ಅವರು ಹರಿಕಥಾ ರಂಗಕ್ಕೆ ಹಾಗೂ ಒಟ್ಟಾರೆಯಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ರಂಗಕ್ಕೆ ಸಲ್ಲಿಸಿದ ಸೇವೆ ಅಪಾರವಾದುದು” ಎಂದರು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿ, ಮಂಗಳೂರು ವಿಭಾಗದ ಸಂಚಾಲಕ ಸುಧಾಕರ ರಾವ್ ಪೇಜಾವರ,…

Read More

ಕೋಟ: ಕಾರ್ಕಡ ತಾರಾನಾಥ ಹೊಳ್ಳರ ಮನೆಯಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಸಂಸ್ಥೆಯ ಚಿಣ್ಣರ ಶುಭಾಶಯ ‘ಗಾನ ಸುಧೆ’ ಕಾರ್ಯಕ್ರಮವು ದಿನಾಂಕ 06 ಜೂನ್ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮಕ್ಕಳನ್ನು ಅಭಿನಂದಿಸಿದ ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷರಾದ ತಾರಾನಾಥ ಹೊಳ್ಳ ಮಾತನಾಡಿ “ಗುರುಮುಖೇನವಾದ ನಿರಂತರ ಅಭ್ಯಾಸದಿಂದ ಶಿಷ್ಯರನ್ನನೇಕರಿಂದ ಎತ್ತರಕ್ಕೇರಿದ ಸಂಸ್ಥೆ ಯಶಸ್ವಿ ಕಲಾವೃಂದ. ಹಲವಾರು ಮಕ್ಕಳು ತೆಕ್ಕಟ್ಟೆ ಕೇಂದ್ರದಲ್ಲಿ ಕಲಿತು ರಂಗಕ್ಕಾಗಿ ಅವಕಾಶಕ್ಕೆ ಎದುರು ನೋಡುತ್ತಿರುವುದನ್ನು ಗಮನಿಸಿದ್ದೇನೆ. ಆಯ್ದ ಮಕ್ಕಳಿಗೆ ಅವಕಾಶ ಕೊಟ್ಟರೆ ಭವಿಷ್ಯಕ್ಕೆ ಕಲಾವಿದರನ್ನು ಪ್ರೋತ್ಸಾಹಿಸಿದ ಹಿರಿಮೆ ನಮ್ಮದಾಗುತ್ತದೆ. ಅದ್ಭುತ ಪ್ರದರ್ಶನದ ಮೂಲಕ ಜನ ಮೆಚ್ಚುಗೆಗೆ ಪಾತ್ರವಾದ ಚಿಣ್ಣರ ‘ಗಾನ ಸುಧೆ’ ನೆರೆದ ಪ್ರೇಕ್ಷಕರನ್ನು ಮೂಕ ಪ್ರೇಕ್ಷಕರಾಗುವಂತೆ ಮಾಡಿತು” ಎಂದರು. ಶ್ರೀಮತಿ ಭೂಮಿಕಾ, ಅನೂಪ್ ಜಿ. ರಾವ್, ಶ್ರೀಮತಿ ತಾರಾನಾಥ ಹೊಳ್ಳ, ಕಾರ್ಯದರ್ಶಿ ವೆಂಕಟೇಶ ವೈದ್ಯ, ರಾಘವೇಂದ್ರ ಹೆಗಡೆ ಯಲ್ಲಾಪುರ, ರಾಹುಲ್ ಕುಂದರ್ ಕೋಡಿ, ಪೂಜಾ ಆಚಾರ್, ಪಂಚಮಿ ವೈದ್ಯ, ಪವನ್ ಆಚಾರ್, ಹರ್ಷಿತಾ ಅಮೀನ್ ಉಪಸ್ಥಿತರಿದ್ದರು.

Read More

ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿಯಿಂದ ಆಸಕ್ತರಿಂದ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ನಾಟಕ ಅಕಾಡೆಮಿಯು ರಂಗಭೂಮಿಗೆ ಸಂಬಂಧಿಸಿದಂತೆ ಪ್ರಕಟವಾಗಿರುವ ರಂಗಭೂಮಿಯ ಆಕರ ಗ್ರಂಥಗಳಿಗೆ ಬಹುಮಾನ ನೀಡಲು ತೀರ್ಮಾನಿಸಿದೆ. ಕನ್ನಡ ರಂಗಭೂಮಿಯ ಬೆಳವಣಿಗೆ, ವೈವಿದ್ಯತೆ ಹಾಗೂ ರಂಗಭೂಮಿಯ ಇತಿಹಾಸವನ್ನು ತಿಳಿಸುವಂತಹ ವಿಮರ್ಶಾತ್ಮಕ ಕೃತಿಗಳಿಗೆ 2024-25ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಲಾಗಿದೆ. ಪ್ರತಿ ಸಾಲಿಗೆ ತಲಾ ಒಂದು ಪುಸ್ತಕ ಬಹುಮಾನವನ್ನು ನೀಡಲಾಗುವುದು. ಬಹುಮಾನವು ರೂ.25,000/- ನಗದು ನೀಡಲಾಗುವುದು. ಕೃತಿಯನ್ನು ಲೇಖಕರೇ ನೇರವಾಗಿ ಅಕಾಡೆಮಿಗೆ ಕಳುಹಿಸಿಕೊಡುವುದು. ಕೃತಿಗಳು ಜನವರಿ 2024ರಿಂದ ಡಿಸೆಂಬರ್ 2024ರೊಳಗೆ ಮುದ್ರಣವಾಗಿ ಪ್ರಕಟಣೆಯಾಗಿರಬೇಕು. ಅನುವಾದಿತ ಕೃತಿಗಳಿಗೆ ಅವಕಾಶವಿರುವುದಿಲ್ಲ. ಪುಸ್ತಕಗಳು ಯಾವುದೇ ಪದವಿಗಾಗಿ, ಪಿ.ಎಚ್.ಡಿ. ಮತ್ತು ಪಠ್ಯ ಪುಸ್ತಕಕ್ಕೆ ಸಿದ್ದಪಡಿಸಲಾದ ವಿಷಯವಾಗಿರಬಾರದು. ಬಹುಮಾನಕ್ಕಾಗಿ ಕಳುಹಿಸಲ್ಪಡುವ ಕೃತಿಗಳು ನಾಟಕವಾಗಿರಬಾರದು. ರಂಗಸಂಬಂಧಿ ವಸ್ತುವುಳ್ಳದ್ದಾಗಿರಬೇಕು. ಕೃತಿಯ ತಾಂತ್ರಿಕ ಪುಟದಲ್ಲಿ ಮುದ್ರಣ ವರ್ಷವನ್ನು ನಮೂದಿಸಿರಬೇಕು. ಮರು ಮುದ್ರಣ ಪುಸ್ತಕವಾಗಿರಬಾರದು. ಅಕಾಡೆಮಿಯ ಸದಸ್ಯರು ರಚಿಸಿರುವ ಕೃತಿಗಳಾಗಿರಬಾರದು ಹಾಗೂ ಸಂಪಾದಿತ ಕೃತಿಗಳು ಸಹ ಆಗಿರಬಾರದು. ಕೃತಿಯು ಕನಿಷ್ಠ 60…

Read More

ಕಾಂತಾವರ : ಕಳೆದ ನಲುವತ್ತೇಳು ವರುಷಗಳಿಂದ ಮುದ್ದಣ ಕಾವ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿರುವ ಕಾಂತಾವರ ಕನ್ನಡ ಸಂಘವು 2025ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿಗೆ ಮುದ್ರಣಕ್ಕೆ ಸಿದ್ಧವಾಗಿರುವ ಕವನ ಸಂಗ್ರಹದ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ. ಪ್ರಶಸ್ತಿಯು ರೂಪಾಯಿ 10,000 ನಗದು, ಪ್ರಶಸ್ತಿ ಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ. ಆಸಕ್ತರು ಹೆಚ್ಚಿನ ಮಾಹಿತಿಯನ್ನು ಕನ್ನಡ ಸಂಘ [email protected] ಎನ್ನುವ ಮೈಲ್ ಐಡಿ ಮೂಲಕ ಪಡೆದುಕೊಳ್ಳಬಹುದು. ಇಲ್ಲವೇ ಅಧ್ಯಕ್ಷರನ್ನು (9900701666) ಅಥವಾ ಪ್ರಧಾನ ಕಾರ್ಯದರ್ಶಿ ಅವರನ್ನು (9008978366) ಮೇಲಿನ ದೂರವಾಣಿಯಲ್ಲಿ ಸಂಪರ್ಕಿಸಬಹುದು. ಹಸ್ತಪ್ರತಿಗಳ ಸ್ವೀಕಾರಕ್ಕೆ ಕೊನೆಯ ದಿನಾಂಕ 15 ಸಪ್ಟಂಬರ 2025. ಪ್ರಶಸ್ತಿ ಘೋಷಣೆ 01 ನವಂಬರ 2025 ಎಂದು ಕನ್ನಡ ಸಂಘದ ಪ್ರಕಟಣೆ ತಿಳಿಸಿದೆ.

Read More

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ‘ಪಂಕಜಶ್ರೀ ಪ್ರಶಸ್ತಿ’ಗೆ ಮುಂಬೈನ ಕಥೆಗಾರ್ತಿ ಮಿತ್ರಾ ವೆಂಕಟ್ರಾಜು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. ಕನ್ನಡದ ಪ್ರಮುಖ ಲೇಖಕಿಯಾಗಿದ್ದ ಎ.ಪಂಕಜ ‘ಅನುರಾಗ ಬಂಧನ’, ‘ನಾದಭಂಗ’’, ಸುಖಸ್ವಪ್ನ’ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದವರು. ‘ಊರ್ಮಿಳಾ’ ಇವರ ಪ್ರಸಿದ್ಧ ನಾಟಕ. ಇವರ ‘ಕಾಗದದ ದೋಣಿ’ ಕಾದಂಬರಿ ಕೇಂದ್ರ ಸಾಹಿತ್ಯ ಅಕಾಡಮಿ ಅನುವಾದ ಪುರಸ್ಕಾರವನ್ನು ಪಡೆದಿತ್ತು. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಗೌರವದಿಂದ ದತ್ತಿ ನಿಧಿಯನ್ನು ಸ್ಥಾಪಿಸಿದ್ದು ಲೇಖಕಿಯರಿಗೆ ಪ್ರತಿ ವರ್ಷ ಪುರಸ್ಕಾರ ನೀಡುವಂತೆ ನಿಯಮವನ್ನು ರೂಪಿಸಿದ್ದಾರೆ. 2025ನೆಯ ಸಾಲಿನ ಈ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಮಿತ್ರಾ ವೆಂಕಟ್ರಾಜ್ ಕುಂದಾಪುರ ಮೂಲದವರು. ವಿವಾಹವಾಗಿ ಮುಂಬೈನಲ್ಲಿ ನೆಲೆಸಿದ ನಂತರವೇ ಅವರ ಸಾಹಿತ್ಯ ಸೇವೆ ತೀವ್ರತೆಯನ್ನು ಪಡೆದು ಕೊಂಡಿತು. ಕನ್ನಡದ ಮಹತ್ವದ ಕಥೆಗಾರ್ತಿಯರಲ್ಲಿ ಒಬ್ಬರು ಎನ್ನಿಸಿ ಕೊಂಡಿರುವ ಇವರು ‘ರುಕುಮಾಯಿ’, ‘ಹಕ್ಕಿ ಮತ್ತು ಅವಳು’, ‘ಮಾಯಕದ ಸತ್ಯ’ ಮತ್ತು ‘ನನ್ನಕ್ಕ ನಿಲೂಫರ್’ ನಾಲ್ಕು ಕಥಾ ಸಂಕಲನಗಳನ್ನು…

Read More

ಮುಂಬೈ : ಸುರ್ ಬಹಾರ್ ಸಂಗೀತ್ ಸಭಾ ಪ್ರಸ್ತುತ ಪಡಿಸುವ ಮುಂಬೈ ಸಂಗೀತ ಕಛೇರಿಯು ದಿನಾಂಕ 14 ಜೂನ್ 2025ರಂದು ಸಂಜೆ 5-30 ಗಂಟೆಗೆ ಮುಂಬೈಯ ಮುಲುಂದ್ ವೆಸ್ಟ್ ನಲ್ಲಿ ನಡೆಯಲಿದೆ. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಪುಣೆಯ ವಿದುಷಿ ಪೌರ್ಣಿಮ ಧೂಮಲೆ ಇವರ ಹಾಡುಗಾರಿಕೆಗೆ ಪ್ರವೀಣ್ ಕರ್ಕರೆ ತಬಲಾದಲ್ಲಿ ಹಾಗೂ ಸುಧಾಂಶು ಘರ್ಪುರೆ ಹಾರ್ಮೋನಿಯಂನಲ್ಲಿ ಸಾಥ್ ನೀಡಲಿದ್ದಾರೆ.

Read More

ಬೆಂಗಳೂರು : ಮಂಗಳೂರಿನ ಆಯನ ನಾಟಕದ ಮನೆ ಪ್ರಸ್ತುತ ಪಡಿಸುವ ರಂಗಾಸಕ್ತರ ಗಮನ ಸೆಳೆದ ಈ ವರ್ಷದ ಒಂದು ಪ್ರಮುಖ ಕನ್ನಡ ನಾಟಕ ‘ಅಶ್ವತ್ಥಾಮ’ NOT OUT ದಿನಾಂಕ 13 ಜೂನ್ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ. ರಂಗದಲ್ಲಿ ಚಂದ್ರಹಾಸ್ ಉಳ್ಳಾಲ್, ಪ್ರಭಾಕರ್ ಕಾಪಿಕಾಡ್ ಮತ್ತು ಡಾ. ದಿನೇಶ್ ನಾಯಕ್ ಇವರು ನಟಿಸಲಿದ್ದು, ಮೋಹನಚಂದ್ರ ಇವರು ನಿರ್ದೇಶನ ಮಾಡಲಿದ್ದಾರೆ. ನಾಟಕದ ಬಗ್ಗೆ : ಮಹಾಭಾರತದ ಹಲವಾರು ದುರಂತ ಪಾತ್ರಗಳಲ್ಲಿ ಅಶ್ವತ್ಥಾಮನ ಪಾತ್ರವೂ ಒಂದು. ಕುರುಕ್ಷೇತ್ರ ಯುದ್ಧದ ಬಳಿಕ ಉಪಪಾಂಡವರ ಹತ್ಯೆಯ ಕಾರಣದಿಂದಾಗಿ ಸಾವಿಲ್ಲದೆ ಸದಾ ಮರಣಕ್ಕಾಗಿ ಹಪಹಪಿಸುವ ಶಾಪಗ್ರಸ್ತ. ನಾಟಕ ಸುತ್ತುವುದೇ ಸಾವಿಲ್ಲದ ಬದುಕು ಒಂದು ಶಾಪ ಎಂದು ಗ್ರಹಿಸಿದ (ಕೃಷ್ಣನ) ಚಿಂತನೆ ; ಸತ್ತಿದ್ದರೂ ಇನ್ನೂ ಅಜರಾಮರ ಎಂದು ಬದುಕುವ (ಅಶ್ವತ್ಥಾಮನ) ಮನ:ಸ್ಥಿತಿ. ಇವೆರಡರ ನಡುವೆ ತನ್ನವರ ಕೊಲೆಯ ಪ್ರತೀಕಾರದಿಂದ ನಿರ್ಮಾಣಗೊಂಡ ಯುದ್ಧದ ಕಾರಣಗಳ ಹಿಂದಿರುವ (ಶಕುನಿಯ) ಮರ್ಮ.. ಈ ಮೇಲಿನ ಮೂರೂ ಪಾತ್ರಗಳು ನಾವೇ…

Read More