Subscribe to Updates
Get the latest creative news from FooBar about art, design and business.
Author: roovari
ಕಾಸರಗೋಡು : ಕಾಸರಗೋಡಿನ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಇದರ ಸಂಗೀತ ಘಟಕ ‘ಸ್ವರ ಚಿನ್ನಾರಿ’, ಮಹಿಳಾ ಘಟಕ ‘ನಾರಿ ಚಿನ್ನಾರಿ’ಯು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಯೋಗದೊಂದಿಗೆ ಏರ್ಪಡಿಸುವ ಸಂತವಾಣಿ ಕಾರ್ಯಕ್ರಮ ‘ಕಾಯೋ ಕರುಣಾಕರಾ…’ ದಿನಾಂಕ 17-03-2024ನೇ ಆದಿತ್ಯವಾರ ಕಾಸರಗೋಡಿನ ಕರಂದಕಾಡಿನಲ್ಲಿರುವ ಪದ್ಮಗಿರಿ ಕಲಾ ಕುಟೀರದಲ್ಲಿ ನಡೆಯಲಿದೆ. ಖ್ಯಾತ ನೇತ್ರ ತಜ್ಞರಾದ ಡಾ. ಅನಂತ ಕಾಮತ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಖ್ಯಾತ ವೈದ್ಯರಾದ ಡಾ. ಕೆ. ಕೆ. ಶ್ಯಾನ ಭೋಗ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಆಡಳಿತ ಮುಕ್ತೇಸರರಾದ ಕೆ. ಜಗದೀಶ್ ಕಾಮತ್ ಭಾಗವಹಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಅಂತರಾಷ್ಟ್ರೀಯ ಖ್ಯಾತಿಯ ಗಾಯಕ ಹಾಗೂ ಪ್ರಸಾರ ಭಾರತೀ ಹಿಂದೂಸ್ಥಾನೀ ಸಂಗೀತ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ‘ಯುವ ಕಲಾಮಣಿ’ ಪ್ರಶಸ್ತಿ ವಿಜೇತ ಬಾಲಚಂದ್ರ ಪ್ರಭು ಕಾರ್ಯಕ್ರಮ ನಡೆಸಿಕೊಡಲಿದ್ದು, ಇವರಿಗೆ ತಬ್ಲಾದಲ್ಲಿ ರಾಜೇಶ್ ಭಾಗವತ್ ಹಾಗೂ ಹಾರ್ಮೋನಿಯಮ್ ನಲ್ಲಿ ಹೇಮಂತ್ ಭಾಗವತ್ ಸಾಥ್…
ಕೋಟಾ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬ್ರಹ್ಮಾವರ ತಾಲೂಕು ಘಟಕದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಕಥೆ ಕವನ ರಚನೆ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಸಾಹಿತ್ಯ ಪ್ರೇರಣೆ ಎಂಬ ವಿನೂತನ ಕಾರ್ಯಕ್ರಮವು ದಿನಾಂಕ 02-03-2024ರ ಶನಿವಾರದಂದು ಸಾಲಿಗ್ರಾಮದ ಕಾರ್ಕಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ.ಉಪೇಂದ್ರ ಸೋಮಯಾಜಿ ಚಿತ್ರಪಾಡಿ, ಕಸಾಪ ಉಡುಪಿ ಜಿಲ್ಲಾ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಕಸಾಪ ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ಗುಂಡ್ಮಿ ರಾಮಚಂದ್ರ ಐತಾಳ, ಕಸಾಪ ಕೋಟ ಹೋಬಳಿ ಅಧ್ಯಕ್ಷರಾದ ಅಚ್ಯುತ ಪೂಜಾರಿ ಹಾಗೂ ಕಾವಯತ್ರಿಯಾದ ಸವಿತಾ ಶಾಸ್ತ್ರಿ ಪಾಲ್ಗೊಂಡರು. ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ ಪಿ. ಸ್ವಾಗತಿಸಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅರುಣ್ ಅಡಿಗ ಉಪಸ್ಥಿತರಿದ್ದರು.
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 11-03-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಮಂಗಳೂರಿನ ಕುಮಾರಿ ಶ್ರೀಕರೀ ಮಂಗಳೂರು ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಶ್ರೀಕರೀಯು ಹೊಸಬೆಟ್ಟು ರಾಮದಾಸ್ ಹೆಚ್. ಮತ್ತು ಶ್ರೀಲತಾ ಅವರ ಜೇಷ್ಠ ಪುತ್ರಿ. ಮಂಗಳೂರಿನ ಸನಾತನ ನಾಟ್ಯಾಲಯದಲ್ಲಿ ನೃತ್ಯಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ಶ್ರೀಲತಾ ನಾಗರಾಜ್ ಅವರಲ್ಲಿ 13 ವರ್ಷಗಳಿಂದ ಭರತನಾಟ್ಯವನ್ನು ಕಲಿಯುತ್ತಿದ್ದಾಳೆ. ಪ್ರಸ್ತುತ ಪೂರ್ವ ವಿದ್ವತ್ ಅಭ್ಯಾಸ ಮಾಡುತ್ತಿದ್ದಾಳೆ. ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದಿರುವ ಇವರು ಕೆನರಾ ಪಿ.ಯು. ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿ. ಕರ್ನಾಟಕ ಶಾಸ್ತ್ರೀಯ ಸಂಗೀತ ಸೀನಿಯರ್ ಪದವೀದರೆ, ಕೀ ಬೋರ್ಡ್ ಮತ್ತು ಪಿಟೀಲು ಕಲಿಯುತ್ತಿದ್ದಾರೆ.…
ತೆಕ್ಕಟ್ಟೆ : ಕೈಲಾಸ ಕಲಾ ಕ್ಷೇತ್ರ ಟ್ರಸ್ಟ್ ಮತ್ತು ಯಶಸ್ವೀ ಕಲಾ ವೃಂದ (ರಿ.) ಕೊಮೆ ಇದರ ವತಿಯಿಂದ ‘ರಜಾ ರಂಗು 2024’ ಬೇಸಿಗೆ ಶಿಬಿರವನ್ನು ದಿನಾಂಕ 11-04-2024ರಿಂದ 05-05-2024ರವರೆಗೆ ಬೆಳಿಗ್ಗೆ 9ರಿಂದ ಸಂಜೆ 5ರ ತನಕ ತೆಕ್ಕಟ್ಟೆಯ ಜ್ಞಾನ ವಸಂತ ಪ್ರಕೃತಿ ಪಾಠ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಮಕ್ಕಳ ಬೇಸಿಗೆ ಶಿಬಿರವು ರೋಹಿತ್ ಎಸ್. ಬೈಕಾಡಿ ಮತ್ತು ಶ್ರೀಶ ಭಟ್ ಚುಕ್ಕಾಣಿಯಲ್ಲಿ ನಡೆಯಲಿದ್ದು, 8ರಿಂದ 15 ವರ್ಷದ ಮಕ್ಕಳು ಇದರಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ವೆಂಕಟೇಶ ವೈದ್ಯ 9945947771 ಮತ್ತು ಶ್ರೀಶ ತೆಕ್ಕಟ್ಟೆ 8073998079 ಇವರನ್ನು ಸಂಪರ್ಕಿಸಬಹುದು. ವಿಶೇಷತೆಯನ್ನೇ ಸಾಧಿಸುತ್ತಾ ಬಂದ ಸಂಸ್ಥೆ ಬೇಸಿಗೆ ಶಿಬಿರದಿಂದ ಮಕ್ಕಳಿಗೆ ಏನೆಲ್ಲಾ ಕಲಿಸಲು ಸಾಧ್ಯ. ಹೆಚ್ಚು ಹೆಚ್ಚು ಕಲಿಸಬೇಕು. ಮಕ್ಕಳು ಸಂಭ್ರಮಿಸಬೇಕು. ಸಂಪೂರ್ಣ ಬಾಲ್ಯ ದೊರಕಬೇಕು. ಆಡುತ್ತ, ನಲಿಯುತ್ತಾ ಕಲಿಯಬೇಕು. ಮುಂದೊಂದು ಸಂದರ್ಭದಲ್ಲಿ ಇದನ್ನೆಲ್ಲಾ ನೆನಪಿಸಿ ಸಂತಸ ಪಡುವ ಶಿಬಿರ ನಮ್ಮದಾಗಬೇಕೆಂಬ ಹುಡುಕಾಟದಲ್ಲಿದ್ದೇವೆ. ನಿಮ್ಮ ನಿಮ್ಮವರ ಮಕ್ಕಳನ್ನು ಶಿಬಿರಕ್ಕೆ ಸೇರಿಸುವ ಮೂಲಕವೂ ನೀವು…
ಬೈಂದೂರು : ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ಸ್ಥಳೀಯ ಕಲಾಸಂಸ್ಥೆ ‘ಲಾವಣ್ಯ’ದ 47ನೇ ವಾರ್ಷಿಕೋತ್ಸವ ಹಾಗೂ ರಂಗಪಂಚಮಿ-2024 ಐದು ದಿನಗಳ ನಾಟಕೋತ್ಸವದ ಮೂರನೇ ದಿನದ ಕಾರ್ಯಕ್ರಮವು ದಿನಾಂಕ 04-03-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಶುಭಾಶಂಸನೆಗೈದ ಹಿರಿಯ ಪತ್ರಕರ್ತ ಕೆ.ಸಿ. ರಾಜೇಶ “ಸಮಾಜದಲ್ಲಿರುವಂತಹ ಅಸಮಾನತೆ, ಅಸ್ಪಶ್ಯತೆ ಸೇರಿದಂತೆ ಓರೆಕೋರೆಗಳನ್ನು ರಂಗದ ಮೂಲಕ ತಿದ್ದಬಹುದು ಎಂದು ಹೇಳಿಕೊಟ್ಟಿದ್ದು ರಂಗಭೂಮಿ. ಅಧುನಿಕತೆ ಯುಗದಲ್ಲಿ ರಂಗಭೂಮಿಯನ್ನು ನೋಡುವಂತವರ ಆಸಕ್ತಿ ಕುಂದುತ್ತಿರುವಂತಹ ಇಂದಿನ ದಿನಗಳಲ್ಲಿಯೂ ಕೂಡ ‘ಲಾವಣ್ಯ’ವು ರಂಗಾಸಕ್ತರನ್ನು ಉಳಿಸಿಕೊಳ್ಳುವಂತಹ ಒಂದು ಶೇಷ್ಠತೆಯನ್ನು ಉಳಿಸಿಕೊಂಡಿದೆ. ಪ್ರಸ್ತುತ ಕಾಲಘಟ್ಟದಲ್ಲಿಯೂ ರಂಗಭೂಮಿಯ ಸತ್ವ ಹಾಗೂ ಚಿಂತನೆಗಳನ್ನು ಲಾವಣ್ಯವು ಉಳಿಸಿಕೊಂಡು ಬೆಳೆಯುತ್ತಿರುವುದು ಸಂತೋಷದಾಯಕ. ರಂಗಭೂಮಿ ಮೂಲಕ ಸಾಹಿತ್ಯ, ಶೈಕ್ಷಣಿಕ, ಮಾಧ್ಯಮ ಮತ್ತು ಸಾಮಾಜಿಕ ಜಗತ್ತಿಗೆ ಒಂದಷ್ಟು ಶಕ್ತಿಯನ್ನು ಲಾವಣ್ಯ ಸಂಸ್ಥೆ ತುಂಬಿದೆ” ಎಂದು ಅಭಿಪ್ರಾಯಪಟ್ಟರು. ಕನಕ ಗ್ರೂಪ್ಸ್ ಇದರ ಆಡಳಿತ ನಿರ್ದೇಶಕ ಜಗದೀಶ ಶೆಟ್ಟಿ ಕುದ್ರುಕೋಡು ಅಧ್ಯಕ್ಷತೆ ವಹಿಸಿ ಮಾತನಾಡಿ “ಇಂದಿನ ಶಿಕ್ಷಣ ಪದ್ಧತಿಯಲ್ಲಿ ಹೃದಯ ಸಂಸ್ಕಾರ ನೀಡುವ ಶಿಕ್ಷಣಕ್ಕೆ ಪ್ರಾಮುಖ್ಯತೆ ಸಿಗುತ್ತಿಲ್ಲ.…
ಮಂಗಳೂರು : ‘ನಿರ್ದಿಗಂತ’ವು ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಕಾಲೇಜಿನ ಆವರಣದಲ್ಲಿ ದಿನಾಂಕ 20-03-2024ರಿಂದ 25-03-2024ರ ತನಕ ‘ನೇಹದ ನೆಯ್ಗೆ’ ಎಂಬ ಆರು ದಿನಗಳ ರಂಗೋತ್ಸವವನ್ನು ನಡೆಸಲಿದೆ. ನಾಟಕಗಳು, ವಿಚಾರ ಸಂಕಿರಣಗಳು, ಕವನ, ಸಂಗೀತ, ಚಿತ್ರ, ಚಲನಚಿತ್ರ ಮೊದಲಾದ ಹಲವು ಬಗೆಯ ಸೌಂದರ್ಯ ವಿಜ್ಞಾನ ಶಾಖೆಗಳ ಸಂವಾದಗಳು ಇಲ್ಲಿ ನಡೆಯಲಿವೆ. ಈ ಆರು ದಿನಗಳೂ ನಮ್ಮೊಡನಿದ್ದು ಉತ್ಸವದಲ್ಲಿ ಕ್ರಿಯಾತ್ಮಕವಾಗಿ ತೊಡಗಿಕೊಳ್ಳಲಿಚ್ಚಿಸುವ ರಂಗಭೂಮಿಯ ಆಸಕ್ತ 50 ಪ್ರತಿನಿಧಿಗಳಿಗೆ ನಿರ್ದಿಗಂತವು ಆಹಾರ ಹಾಗೂ ವಸತಿಯ ವ್ಯವಸ್ಥೆಯನ್ನು ಕಲ್ಪಿಸಲಿದೆ. ಈ ಆರೂ ದಿನಗಳ ಕಾಲ ಉತ್ಸವದಲ್ಲಿ ಪೂರ್ಣಾವಧಿ ತೊಡಗಿಕೊಳ್ಳಲಿಚ್ಛಿಸುವ ರಂಗಾಸಕ್ತರು ತಮ್ಮ ಪರಿಚಯ ಪತ್ರದೊಂದಿಗೆ ಈ ಕೆಳಕಂಡ ವಿಳಾಸದಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಆಹ್ವಾನಿಸುತ್ತಿದೆ. ಸಂಪರ್ಕ ವಿಳಾಸ : ಕ್ರಿಸ್ಟೋಫರ್ ಡಿ’ಸೋಜ, ರಂಗ ಅಧ್ಯಯನ ಕೇಂದ್ರದ ನಿರ್ದೇಶಕರು ಸಂತ ಅಲೋಶಿಯಸ್ ಕಾಲೇಜು, ಸಂತ ಅಲೋಶಿಯಸ್ ಕಾಲೇಜ್ ರಸ್ತೆ, ಕೊಡಿಯಾಲ್ ಬೈಲ್ ಪಿ.ಬಿ. ನಂ.720, ಮಂಗಳೂರು -575003, ಕರ್ನಾಟಕ ಮೊ. ನಂ. 9113226234 ಇ-ಮೇಲ್ [email protected]
ಬೆಂಗಳೂರು : ವಿಜಯನಗರ ಸಂಗೀತಸಭಾ ಟ್ರಸ್ಟ್ (ರಿ.) ಇದರ ವತಿಯಿಂದ 33ನೇ ವರ್ಷದ ‘ದಾಸವರೇಣ್ಯರ ಮತ್ತು ತ್ಯಾಗರಾಜರ ಆರಾಧನಾ ಮಹೋತ್ಸವ 2024’ವು ದಿನಾಂಕ 10-03-2024ರಂದು ವಿಜಯನಗರದ ಬಿ.ಬಿ.ಎಂ.ಪಿ. ಪಾಲಿಕೆ ಭವನದಲ್ಲಿ ನಡೆಯಲಿದೆ. ಬೆಳಿಗ್ಗೆ ಗಂಟೆ 9.30ಕ್ಕೆ ವೀಣಾ ವಾದಕರು, ಪರಿಸರವಾದಿ ಹಾಗೂ ಭೂ ವಿನ್ಯಾಸಗಾರರಾದ ಶ್ರೀಮತಿ ರೇವತಿ ಕಾಮತ್ ಇವರಿಂದ ಈ ಮಹೋತ್ಸವವು ಉದ್ಘಾಟನೆಗೊಳ್ಳಲಿದೆ. ಗಾನಕಲಾಭೂಷಣ ವಿದುಷಿ ಡಾ. ಸುಮಾ ಸುಧೀಂದ್ರ ಇವರ ವೀಣಾ ವಾದನಕ್ಕೆ ವಿದ್ವಾನ್ ಮತ್ತೂರು ಶ್ರೀನಿಧಿ ಪಿಟೀಲಿನಲ್ಲಿ, ವಿದುಷಿ ಸುಕನ್ಯಾ ರಾಮ್ ಗೋಪಾಲ್ ಘಟಂನಲ್ಲಿ ಮತ್ತು ಗಾನಕಲಾಭೂಷಣ ವಿಜಯಸಂಗೀತಶ್ರೀ ವಿದ್ವಾನ್ ಸಿ. ಚಲುವರಾಜ್ ಇವರು ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಗಾನಕಲಾಭೂಷಣ ವಿದುಷಿ ಸುಮಾ ಸುಧೀಂದ್ರ ಇವರನ್ನು ಸನ್ಮಾನಿಸಲಾಗುವುದು ಮತ್ತು ಹಿರಿಯ ಸಂಸ್ಥಾಪಕ ಸದಸ್ಯರಾದ ವಿದುಷಿ ಮಾಲತಿ ನರಸಿಂಹಮೂರ್ತಿ ಇವರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಮಧ್ಯಾಹ್ನ ಗಂಟೆ 12.15ಕ್ಕೆ ಗಾನಕಲಾಭೂಷಣ ವಿಜಯಸಂಗೀತಶ್ರೀ ಡಾ. ಆರ್.ಕೆ. ಪದ್ಮನಾಭ ಇವರ ನೇತೃತ್ವದಲ್ಲಿ ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ…
ಮಂಗಳೂರು : ದ. ಕ. ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರ ಶ್ರದ್ಧಾಂಜಲಿ ಸಭೆಯು ದಿನಾಂಕ 02-03-2024ರಂದು ಮಂಗಳೂರಿನ ಎಸ್. ಡಿ. ಎಂ. ಕಾನೂನು ಕಾಲೇಜು ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ದ.ಕ. ಜಿಲ್ಲಾಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ “ಕರಾವಳಿಯ ಉದ್ದಕ್ಕೂ ಇರುವ ಎಲ್ಲಾ ಭಾಷೆಯ, ಸಂಸ್ಕೃತಿಯ ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲ ಸಮರ್ಥ ಪತ್ರಕರ್ತ, ನಿರೂಪಕ, ಸಾಹಿತಿ ಮನೋಹರ ಪ್ರಸಾದ್ ಅವರಿಗೆ ಪರ್ಯಾಯ ಹೆಸರಿಲ್ಲ.” ಎಂದರು. ಪ್ರಮುಖರಾದ ಎಚ್. ವಿನಯ ಆಚಾರ್ಯ, ರಾಜೇಶ್ವರಿ ಎಂ., ಪ್ರೊ. ಪುಷ್ಪರಾಜ್ ಕೆ., ಚಂದ್ರಶೇಖರ ನಾವಡ, ವರ್ಕಾಡಿ ರವಿ ಅಲೆವೂರಾಯ, ದಯಾನಂದ ರಾವ್ ಕಾವೂರು, ಪಿ. ಮಹಮ್ಮದ್, ತೋನ್ಸೆ ಪುಷ್ಕಳ್ ಕುಮಾರ್, ಅರುಣಾ ನಾಗರಾಜ್, ರತ್ನಾವತಿ ಜೆ. ಬೈಕಾಡಿ, ಡಾ. ಮೀನಾಕ್ಷಿ ರಾಮಚಂದ್ರ, ರೇಮಂಡ್ ಡಿಕೂನಾ ತಾಕೊಡೆ, ಚಂದ್ರಹಾಸ ಶೆಟ್ಟಿ, ಪೂವಪ್ಪ ನೇರಳಕಟ್ಟೆ, ಡಾ ಸುರೇಶ ನೆಗಳಗುಳಿ, ಜಗದೀಶ್ ಯಡಪಡಿತ್ತಾಯ, ಮಾಧವ ಎಂ. ಕೆ.,…
ವರ್ತಮಾನದ ಸಾಮಾಜಿಕ ತಲ್ಲಣಗಳನ್ನು ಒಳಹೊಕ್ಕು ನೋಡುವ ಮೂಲಕ ಅಲ್ಲಿ ಅವಿತಿರಬಹುದಾದ ನೆಲಮೂಲದ ಸಾಂಸ್ಕೃತಿಕ ಬೇರುಗಳನ್ನು ಶೋಧಿಸುವ ಹಾದಿಯಲ್ಲಿ ರಂಗಭೂಮಿ ತನ್ನದೇ ಆದ ವಿಶಿಷ್ಟ ಮಾರ್ಗಗಳನ್ನು ಅನುಸರಿಸುತ್ತಾ ಬಂದಿದೆ. ಮಾನವ ಚರಿತ್ರೆಯ ಆದಿಮ ಕಾಲದಿಂದ ಇವತ್ತಿನ ಡಿಜಿಟಲ್ ಯುಗದವರೆಗೂ ವಿಸ್ತರಿಸುವ ಮನುಜ ಸಮಾಜದ ಹೆಜ್ಜೆಗಳು ಪ್ರತಿಯೊಂದು ಕಾಲಘಟ್ಟದಲ್ಲೂ ತನ್ನದೇ ಆದ ವಿಶಿಷ್ಟ ಗುರುತುಗಳನ್ನು ಮೂಡಿಸುವುದನ್ನು ಇತಿಹಾಸದುದ್ದಕ್ಕೂ ಗಮನಿಸಬಹುದು. ಪುರಾಣ, ಐತಿಹ್ಯ, ದಾಖಲಿತ ಚರಿತ್ರೆ, ಮೌಖಿಕ-ಜನಪದ ಪರಂಪರೆ ಈ ಹಲವು ಆಯಾಮಗಳಲ್ಲಿ ಆಧುನಿಕ ಜಗತ್ತಿಗೆ ಮುಖಾಮುಖಿಯಾಗುವ ಪ್ರಾಚೀನ ಅಥವಾ ಮಧ್ಯಕಾಲೀನ ಸಮಾಜ ನಮ್ಮ ನಡುವೆ ಜಿಜ್ಞಾಸೆಗಳನ್ನು ಸೃಷ್ಟಿಸುವಂತೆಯೇ ಹಲವು ಜಟಿಲ ಸವಾಲುಗಳನ್ನೂ ತಂದಿರಿಸುತ್ತದೆ. ಮಾನವ ಸಮಾಜ ಮುನ್ನಡೆಯ ಹಾದಿಯಲ್ಲಿ ಹಿಂತಿರುಗಿ ನೋಡುವಾಗಲೆಲ್ಲಾ ಈ ಸವಾಲುಗಳೊಡನೆ ಅನುಸಂಧಾನ ಮಾಡುತ್ತಾ ತನ್ನ ಮೂಲ ಸಾಂಸ್ಕೃತಿಕ ಬೇರುಗಳನ್ನು ಮರುಶೋಧ ಮಾಡುತ್ತಾ ಸಾಗುತ್ತದೆ. ಈ ಮರುಶೋಧದ ಪ್ರಕ್ರಿಯೆಗೆ ಒಂದು ವಿಶಿಷ್ಟ, ವಿಭಿನ್ನ ಆಯಾಮವನ್ನು ನೀಡುವ ಕ್ಷಮತೆ ಹಾಗೂ ಬೌದ್ಧಿಕ ಸ್ವಾಯತ್ತತೆ ರಂಗಭೂಮಿಗೆ ಇರುವುದರಿಂದಲೇ ಈ ಸಾಂಸ್ಕೃತಿಕ ಪ್ರಕಾರವು ಅತ್ಯಾಧುನಿಕ ತಂತ್ರಜ್ಞಾನಗಳ…
ಶ್ರೇಷ್ಠ ಕವಿ ಕಲಾವಿದರಿಗೆ ಪ್ರಕೃತಿ ಸೃಷ್ಟಿಯೇ ಪ್ರೇರಣೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಪ್ರಕೃತಿಯಲ್ಲಿ ಯಾವುದೇ ವಸ್ತು ನಗಣ್ಯವಲ್ಲ. ಅದರದೇ ಆದ ಸೃಷ್ಟಿ ವಿಶೇಷತೆಯನ್ನು ಹೊಂದಿರುತ್ತದೆ. ನಮ್ಮ ಸುತ್ತಮುತ್ತ ಅದೆಷ್ಟೋ ಪುಷ್ಪ-ಪತ್ರೆಗಳು ಅರಳಿ, ಒಣಗಿ ಬಿದ್ದು ಭೂ ಮಡಿಲಲ್ಲಿ ಜೀರ್ಣವಾಗಿ ಹೋಗುವುದು ಪ್ರಕೃತಿ ಕ್ರಿಯೆ, ನಿಯಮ. ಇವೆಲ್ಲ ಸಾಮಾನ್ಯ ಕಸವಾಗಿ, ಅನುಪಯುಕ್ತ ವಸ್ತುವಾಗಿ ಕಂಡರೂ, ಚಿತ್ರ ಕಲಾವಿದನ ದೃಷ್ಟಿ, ಚಿಂತನೆ ಬೇರೆಯೇ ಇರುವುದು. ಅವುಗಳನ್ನೆ ಆಯ್ದು, ಹೆಕ್ಕಿ, ಉಪಯೋಗಿಸಿಕೊಂಡು ಒಂದೊಂದಾಗಿ ಸಂಯೋಜಿಸಿ, ಕಲಾವಿದನ ಅದ್ಭುತ ಕೈಚಳಕದಿಂದ ಸೃಷ್ಟಿಸಲ್ಪಡುವ ಕೃತಿಗಳು ಜನ ಸಾಮಾನ್ಯರ ಊಹೆಗೂ ನಿಲುಕದ್ದು ; ಇಂತಹ ವಸ್ತುಗಳನ್ನು ಉಪಯೋಗಿಸಿಕೊಂಡು ಸೃಷ್ಟಿಸಿದ ಚಿತ್ರಕಲಾ ಕೃತಿಗಳಿಗೂ ಹೊಸ ರೂಪ, ಜೀವಂತಿಕೆ ಕೊಡಬಹುದೆಂಬುದನ್ನು ಕಂಡು ಅರೆ ಘಳಿಗೆ ಮೂಕ ವಿಸ್ಮಿತರಾಗುವುದು ಸಹಜವೇ. ಇಂತಹ ವಿಶಿಷ್ಟ ಪುಷ್ಪ-ಚಿತ್ರ ಕಲಾವಿದೆ ತಮ್ಮ ಅಪೂರ್ವ ಚಿತ್ರಕಲಾ ಸಾಧನೆಯಿಂದಲೇ ಕಳೆದ ಐದು ವರ್ಷಗಳಲ್ಲಿ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆದವರು ನಮ್ಮ ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಪಡುಬಿದ್ರೆ ಶ್ರೀಮತಿ…