Author: roovari

ಮಂಗಳೂರು: ಮಂಗಳೂರು ವಿವಿ ಪ್ರಸಾರಾಂಗ ಪ್ರಕಟಿಸಿದ ಮೂರನೇ ಚತುರ್ಮಾಸದ ಏಳು ಕನ್ನಡ ಭಾಷಾ ಪಠ್ಯಪುಸ್ತಕಗಳನ್ನು ದಿನಾಂಕ 21-06-2023ರಂದು ಸಿಂಡಿಕೇಟ್ ಸಭಾಂಗಣದಲ್ಲಿ ಅನಾವರಣಗೊಳಿಸಲಾಯಿತು. ಮಂಗಳ ಪಠ್ಯಪುಸ್ತಕ ಮಾಲಿಕೆಯಡಿ ಪ್ರಕಟಿಸಲಾದ ಕಲಾಮಂಗಳ, ವಾಣಿಜ್ಯ ಮಂಗಳ, ಮುಕ್ತ ಮಂಗಳ, ನಿರ್ವಹಣಾ ಮಂಗಳ, ಗಣಕ ಮಂಗಳ, ಸೌಂದರ್ಯ ಮಂಗಳ, ವಿಜ್ಞಾನ ಮಂಗಳ ಎಂಬ ಕೃತಿಗಳನ್ನು ಮಂಗಳೂರು ವಿವಿಯ ಕುಲಪತಿ ಪ್ರೊ. ಜಯರಾಜ್ ಅಮೀನ್ ಬಿಡುಗಡೆಗೊಳಿಸಿ ಮಾತನಾಡುತ್ತಾ “ಶೈಕ್ಷಣಿಕ ವ್ಯವಸ್ಥೆಯಲ್ಲಿ ಪಠ್ಯ ಪುಸ್ತಕಗಳಿಗೆ ಅತೀ ಹೆಚ್ಚು ಮಹತ್ವವಿದ್ದು ಅದು ತಲೆಮಾರುಗಳ ಆಲೋಚನೆಯನ್ನು ರೂಪಿಸುತ್ತದೆ. ಅಂತಹ ಪಠ್ಯರಚನೆಯಲ್ಲಿ ಪೂರ್ವಾಗ್ರಹಗಳು, ಜ್ಞಾನಕಿಂತ ಹೊರತಾದ ಹಿತಾಸಕ್ತಿ ಇರಬಾರದು. ಮಂಗಳೂರು ವಿವಿಯ ಕನ್ನಡ ಪಠ್ಯಗಳನ್ನು ಎಲ್ಲರ ಸಹಭಾಗಿತ್ವದಲ್ಲಿ ಸಕಾಲದಲ್ಲಿ ಸಂಪಾದಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತಿರುವ ಅಧ್ಯಯನ ಮಂಡಳಿ ಮತ್ತು ಪ್ರಸಾರಾಂಗದ ಕಾರ್ಯ ಶ್ಲಾಘನೀಯ” ಎಂದರು. ಮಂಗಳೂರು ವಿವಿ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ.ಕೆ. ಮಾತನಾಡಿ “ಮಂಗಳೂರು ವಿವಿಯ ಕನ್ನಡ ಪಠ್ಯ ಕರಾವಳಿಯ ಅಸ್ಮಿತೆ ಮತ್ತು ಮುದ್ರಣದ ಗುಣಮಟ್ಟದಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಎನ್.ಇ.ಪಿ. ಪೂರಕವಾಗುವಂತೆ…

Read More

ಮಂಗಳೂರು: ಮಂಗಳೂರಿನ ದಾಸಸಾಹಿತ್ಯ ಸೇವಾ ಪ್ರತಿಷ್ಠಾನವು ರಾಮಕೃಷ್ಣ ಮಠದ ಸಹಯೋಗದೊಂದಿಗೆ ಮಂಗಳೂರಿನ ರಾಮಕೃಷ್ಣ ಮಠದಲ್ಲಿನ ವಿವೇಕಾನಂದ ಸಭಾಂಗಣದಲ್ಲಿ ರಾಜ್ಯದ ಹೆಸರಾಂತ ಗಾಯಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುತ್ತೂರು ನರಸಿಂಹ ನಾಯಕ್‌ ಅವರಿಂದ ಹರಿದಾಸ ಕೃತಿ ಕೀರ್ತನೆಗಳ ಗಾಯನ ‘ದಾಸ ಗಾನಾಮೃತ’ ಕಾರ್ಯಕ್ರಮವು ದಿನಾಂಕ : 16-06-2023ರಂದು ಸಂಜೆ ನಡೆಯಿತು. ಕಾರ್ಯಕ್ರಮವನ್ನು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಉದ್ಘಾಟಿಸಿದರು. ದಾಸಸಾಹಿತ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್‌. ಗುರುರಾಜ್ ಅವರು ಸ್ವಾಗತಿಸಿದರು. ಕೊಂಚಾಡಿ ಗುರುದತ್‌ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪುತ್ತೂರು ನರಸಿಂಹ ನಾಯಕ್‌ ಅವರು ಕೀರ್ತನೆ ಹಾಡುವ ಮುನ್ನ ಕೃತಿ ರಚನೆಗಾರರ ಹಾಗೂ ಕೃತಿಯ ಸಾಹಿತ್ಯದ ಬಗ್ಗೆ ಮಾಹಿತಿ ನೀಡಿದರು. ತಬಲಾದಲ್ಲಿ ರಾಜೇಶ್ ಭಾಗವತ್ ಹಾಗೂ ಹಾರ್ಮೋನಿಯಂನಲ್ಲಿ ಹೇಮಂತ್ ಭಾಗವತ್ ಮತ್ತು ತಾಳದಲ್ಲಿ ವಿಶ್ವಾಸ್ ಪ್ರಭು ಸಾತ್ ನೀಡಿ ಸಹಕರಿಸಿದರು. ವಿದ್ಯಾರಾವ್ ಅವರು ನಿರೂಪಿಸಿ, ಸಂಜನಾ ಮೂರ್ತಿ ವಂದಿಸಿದರು.

Read More

ಕಾಸರಗೋಡು : ಗಡಿನಾಡ ಭೀಮಕವಿ, ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ ಹೆಸರಿನಲ್ಲಿ ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯು ಕೊಡಮಾಡುವ ಎರಡನೆಯ ವರ್ಷದ ಪ್ರತಿಷ್ಠಿತ ನಾಡೋಜ ಕಯ್ಯಾರ ಕಿಞಣ್ಣ ರೈ ಪ್ರಶಸ್ತಿಯು ನಿವೃತ್ತ ಕನ್ನಡ ಪ್ರಾಧ್ಯಾಪಿಕೆ, ಹಿರಿಯ ಲೇಖಕಿ, ಬಹುಶ್ರುತ ವಿದ್ವಾoಸೆ, ಸಂಶೋಧಕಿ ಡಾ. ಪ್ರಮೀಳಾ ಮಾಧವ್ ಅವರಿಗೆ ದೊರಕಿದೆ. ಕರ್ನಾಟಕ ಸರಕಾರದ ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಹಾಗೂ ಮಂಗಳೂರಿನ ಮಂಜುನಾಥ ಎಜುಕೇಷನ್ ಟ್ರಸ್ಟ್ ಇವುಗಳ ಸಹಕಾರದೊಂದಿಗೆ ನಾಡೋಜ ಕವಿ ಕಯ್ಯಾರರ 108ನೇ ಜನ್ಮದಿನದ ಅಂಗವಾಗಿ ಅವರ ಹುಟ್ಟೂರಾದ ಕಾಸರಗೋಡಿನ ಕಯ್ಯಾರಿನಲ್ಲಿರುವ ಶ್ರೀ ರಾಮಕೃಷ್ಣ ಕಿ.ಪ್ರಾ. ಶಾಲೆ ಆವರಣದಲ್ಲಿ 08-06-2023 ರಂದು ಕಯ್ಯಾರ ಜನ್ಮದಿನಾಚರಣೆ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭ ಜರಗಿತು. ಸಮಾರಂಭದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶ್ವನಾಥ ಹಿರೇಮಠ್ ಅವರು ಪ್ರಶಸ್ತಿ ವಿತರಿಸಿ. ಬಳಿಕ ಮಾತನಾಡಿದ ಅವರು ಹಿರಿಯ ಚೇತನ…

Read More

ಮಂಗಳೂರು : ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಆಶ್ರಯದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಜರಗುವ ತುಳುವರ ಮೋಜು – ಮಸ್ತಿಯ ಕಾರ್ಯಕ್ರಮ ‘ಮರಿಯಲದ ಮಿನದನ’ವನ್ನು ಈ ಬಾರಿ ಜುಲೈ 9ರಂದು ಭಾನುವಾರ ಮರವೂರು ನದಿ ಕಿನಾರೆಯ ಗ್ರಾಂಡ್ ಬೇ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ಹೇಳಿದ್ದಾರೆ. ನಗರದ ಬಲ್ಮಠ ಕುಡ್ಲ ಪೆವಿಲಿನ್ ನ ಸದಾಶಯ ಕಚೇರಿಯಲ್ಲಿ ಜರಗಿದ ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಪೂರ್ವಭಾವಿ ಸಭೆಯಲ್ಲಿ ಅವರು ಈ ವಿಷಯವನ್ನು ಪ್ರಕಟಿಸಿದರು. ತುಳುನಾಡಿನಲ್ಲಿ ಎಲ್ಲ ಋತುಗಳಲ್ಲೂ ವಿಶೇಷವಾದ – ಹಬ್ಬ ಆಚರಣೆಗಳು ನಡೆಯುತ್ತವೆ. ಸಂಸ್ಕೃತಿ – ಸಂಪ್ರದಾಯ, ಆಚಾರ – ವಿಚಾರ, ಆಟ – ಕೂಟ ಮತ್ತು ತಿಂಡಿ – ತಿನಿಸುಗಳಲ್ಲಿ ತುಳು ಜನರ ಪ್ರಾದೇಶಿಕ ಅನನ್ಯತೆ ಕಂಡುಬರುತ್ತದೆ. ಅವುಗಳನ್ನು ಯುವ ಸಮುದಾಯಕ್ಕೆ ಪರಿಚಯಿಸುವ ಸಲುವಾಗಿ ಕಾಲಕಾಲಕ್ಕೆ ಇಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ’ ಎಂದವರು ತಿಳಿಸಿದರು. ಕಾರ್ಯಕ್ರಮ ವೈವಿಧ್ಯ: ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮಿ ಬಿ. ಶೆಟ್ಟಿ ಮಾತನಾಡಿ…

Read More

ಕಾಸರಗೋಡು : ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯು ಕಾಸರಗೋಡು ಜಿಲ್ಲೆಯ ಬರಹಗಾರರನ್ನು ಪ್ರೋತ್ಸಾಹಿಸಲು ನಡೆಸಿದ ಕಾಸರಗೋಡು ಜಿಲ್ಲಾ ಮಟ್ಟದ ಕವನ ಸ್ಪರ್ಧೆಯ ಫಲಿತಾಂಶವನ್ನು ದಿನಾಂಕ : 11-06-2023ರಂದು ಪ್ರಕಟಿಸಲಾಯಿತು. ಶ್ರೀಮತಿ ಸೌಮ್ಯ ಪ್ರವೀಣ್ ಮಂಗಳೂರು – ಪ್ರಥಮ, ಶ್ರೀಮತಿ ಲಕ್ಷ್ಮೀ ಕೆ. ಕಾಸರಗೋಡು – ದ್ವಿತೀಯ ಹಾಗೂ ಶ್ರೀಮತಿ ಶ್ರೀವಿದ್ಯಾ ಪಡ್ರೆ ಬೆಂಗಳೂರು – ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ. ಕಾಸರಗೋಡು ಜಿಲ್ಲಾ ಮಟ್ಟದ ಕವನ ಸ್ಪರ್ಧೆಯಲ್ಲಿ 30ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. ಕಾಸರಗೋಡು ಜಿಲ್ಲಾಮಟ್ಟದ ಕವನ ಸ್ಪರ್ಧೆಯಲ್ಲಿ ಬಹುಮಾನಿತರಾದವರು ಮತ್ತು ಸಕ್ರಿಯವಾಗಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳು ಹಾಗೂ ಈ ಸ್ಪರ್ಧೆ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಕಾಸರಗೋಡಿನ ಎಲ್ಲ ಸಾಹಿತ್ಯಪ್ರಿಯರಿಗೂ ಸಾಹಿತ್ಯ ಗಂಗಾ ಮುಖ್ಯಸ್ಥ ವಿಕಾಸ ಹೊಸಮನಿ ಮತ್ತು ಸಂಚಾಲಕ ಡಾ. ಸುಭಾಷ್ ಪಟ್ಟಾಜೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಈ ಬಾರಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಮಹಿಳೆಯರೇ ಪಡೆದಿರುವುದು ವಿಶೇಷ. ಈ ಮೂವರು ಮಹಿಳೆಯರು ಮುಂದೆ ಇನ್ನೂ ಚೆನ್ನಾಗಿ ಕವಿತೆ ಬರೆಯಬಲ್ಲ…

Read More

ಬೆಂಗಳೂರು : ಕಾಜಾಣ ಅರ್ಪಿಸುವ ಪದ್ಮಶ್ರೀ ಡಾ. ಮಾತಾ ಬಿ. ಮಂಜಮ್ಮ ಜೋಗತಿ ಅವರ ಜೀವನಾಧಾರಿತ ನಾಟಕ ‘ಮಾತಾ’ ದಿನಾಂಕ 06-07-2023ರಂದು ಬೆಂಗಳೂರು ಜೆ.ಸಿ. ರಸ್ತೆ, ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ. ಅರುಣ್ ಕುಮಾರ್ ಅಭಿನಯಿಸುವ ಈ ನಾಟಕಕ್ಕೆ ರಂಗಪಠ್ಯ, ವಿನ್ಯಾಸ, ನಿರ್ದೇಶನ ಡಾ. ಬೇಲೂರು ರಘುನಂದನ್ ಅವರದ್ದು. ಶ್ರೀಮತಿ ಸವಿತಕ್ಕ ಈ ನಾಟಕಕ್ಕೆ ಸಂಗೀತ ಸಂಯೋಜನೆ ಮತ್ತು ಗಾಯನ ಮಾಡಿದ್ದು, ಬೆಳಕು ಮತ್ತು ಪ್ರಸಾದನ ರವಿ ಶಂಕರ್ ನಿರ್ವಹಿಸಲಿದ್ದಾರೆ. ಸಂಗೀತ ನಿರ್ವಹಣೆ ಮತ್ತು ರಂಗಸಜ್ಜಿಕೆಯಲ್ಲಿ ಶ್ರೀನಿ ಸಂಪತ್ ಲಕ್ಷ್ಮೀ ಸಹಕರಿಸಲಿದ್ದು, ಸಹ ನಿರ್ವಹಣೆ ಸುಬ್ರಮಣಿ ಬಯ್ಯಣ್ಣ ಅವರದ್ದು, ರಂಗಸಜ್ಜಿಕೆಯಲ್ಲಿ ಸಿಹಿಮೊಗೆ ಪವನ್ ಹಾಗೂ ಭಾಸ್ಕರಪುಷ್ಪ ಪುನೀತ್ ಸಹಕರಿಸಲಿದ್ದಾರೆ, ತಮಟೆ ಹರ್ಷ, ರಮೇಶ್, ಕಲ್ಯಾಣ್ ಕುಮಾರ್, ಬಾಲಾಜಿ, ಜಾನು, ಮಾಧುರಿ ಹಬೀಬ್, ಗೋಕುಲ ಸಹೃದಯ ತಂಡದಲ್ಲಿದ್ದಾರೆ. ‘ಮಾತಾ’ ನಾಟಕದ ಬಗ್ಗೆ : ಕನ್ನಡ ರಂಗಭೂಮಿಯ ಚರಿತ್ರೆಯಲ್ಲಿ ಲೈಂಗಿಕ ಅಲ್ಪ ಸಂಖ್ಯಾತ ಮಹಿಳೆಯರ ಕುರಿತಾದ ನಾಟಕಗಳು ಬೆರಳೆಣಿಕೆಯಷ್ಟು ಮಾತ್ರ. ಅದರಲ್ಲೂ, ಜೋಗತಿ ಸಂಪ್ರದಾಯ ಮತ್ತು…

Read More

ಕಾರ್ಕಳ : ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಮಕ್ಕಳ ಸಾಹಿತ್ಯ ಸಂಗಮ ಹಾಗೂ ಕಾರ್ಕಳದ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ ಇದರ ಜಂಟಿ ಆಶ್ರಯದಲ್ಲಿ ದಿನಾಂಕ : 29-06-2023ರಂದು ಶ್ರೀಮತಿ ಸಾವಿತ್ರಿ ಮನೋಹರ್ ಇವರ ನಾಟಕ ಕೃತಿ ‘ನಮ್ಮ ಸಂಸಾರ’ದ ಬಿಡುಗಡೆ ಹಾಗೂ ಮಕ್ಕಳ ಕವಿ ಗೋಷ್ಠಿಯು ಕಾರ್ಕಳದ ಹೋಟೆಲ್ ಪ್ರಕಾಶ್ ನ ಸಂಭ್ರಮ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿಯ ಟಿ.ಎಂ.ಎ. ಪೈ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರಾದ ಡಾ. ಮಹಾಬಲೇಶ್ವರ ರಾವ್‌ ವಹಿಸಲಿದ್ದು. ಅತಿಥಿಗಳಾಗಿ ಲೇಖಕಿ ಶ್ರೀಮತಿ ಸಾವಿತ್ರಿ ಮನೋಹರ್ ಹಾಗೂ ಶ್ರೀ ತುಕರಾಮ ನಾಯಕ್‌ ಭಾಗವಹಿಸಲಿರುವರು. ಜಾಗೃತಿ ಕಾರ್ಕಳದ ಅಧ್ಯಕ್ಷರಾದ ಶ್ರೀಮತಿ ಮಿತ್ರಪ್ರಭಾ ಹೆಗ್ಡೆ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಭಟ್ ಬೆಳಾಲು ಪುಸ್ತಕ ಪರಿಚಯ ಮಾಡಲಿರುವರು. ಖ್ಯಾತ ಲೇಖಕಿ ಹಾಗೂ ಆತ್ರಾಡಿಯ ಸಂದೀಪ ಸಾಹಿತ್ಯ ಪ್ರಕಾಶಕಿ ಶ್ರೀಮತಿ ಇಂದಿರಾ ಹಾಲಂಬಿ ಪುಸ್ತಕ ಬಿಡುಗಡೆಗೊಳಿಸಲಿದ್ದು, ಉಡುಪಿಯ ಖ್ಯಾತ…

Read More

ಮಂಗಳೂರು : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮಂಗಳೂರು ಇದರ ಹದಿನೈದನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಎರಡು ದಿನಗಳ ನಾಟಕೋತ್ಸವವು ಜೂನ್ 29 ಮತ್ತು 30ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಉರ್ವದ ಶ್ರೀ ಗುರುಲೀಲಾ ಮೋಟರ್ ಡ್ರೈವಿಂಗ್ ಸ್ಕೂಲ್ ಸಹಕಾರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ದಿನಾಂಕ 29-06-2023ರಂದು ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಹಾಗೂ ಕಲಾಪೋಷಕರಾದ ಡಾ. ಹರಿಕೃಷ್ಣ ಪುನರೂರು, ಹಿರಿಯ ರಂಗ ನಿರ್ದೇಶಕರುಗಳಾದ ಶ್ರೀ ಕಾಸರಗೋಡು ಚಿನ್ನಾ ಮತ್ತು ಶ್ರೀ ಮೋಹನಚಂದ್ರ ಯು., ಹಿರಿಯ ನಾಟಕಕಾರರಾದ ಶ್ರೀ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಚಲನಚಿತ್ರ ನಿರ್ಮಾಪಕರಾದ ಶ್ರೀ ಪ್ರಕಾಶ್ ಪಾಂಡೇಶ್ವರ, ಚಲನಚಿತ್ರ ನಟ ಶ್ರೀ ಅರವಿಂದ ಬೋಳಾರ್, ಉರ್ವದ ಕೊರಗಜ್ಜ ಕ್ಷೇತ್ರದ ಅಧ್ಯಕ್ಷರಾದ ಶ್ರೀ ರಾಜೇಶ್ ಉರ್ವ ಹಾಗೂ ಆರ್.ಟಿ.ಒ. ಉಡುಪಿಯ ಶ್ರೀ ರವಿಶಂಕರ್ ಬಿ. ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಂಗ ಸಾಧಕರಾದ ಕು. ಶಾಂತಾ ಕೆ., ಶ್ರೀ ಜಗನ್ನಾಥ ಕಲ್ಲಾಪು, ಶ್ರೀ ಲೋಕಯ್ಯ ಶೆಟ್ಟಿಗಾರ್…

Read More

ಬಾಳಿಲ: ಬಾಳಿಲದ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ವಜ್ರ ಮಹೋತ್ಸವ ವರ್ಷದ ಅಂಗವಾಗಿ ಸುವಿಚಾರ ಸಾಹಿತ್ಯ ಸಂಘದ ಸಹಯೋಗದೊಂದಿಗೆ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ಹಾಗೂ ರಂಗತರಬೇತಿ ತರಗತಿಗಳನ್ನು ದಿನಾಂಕ 17-06-2023 ಶನಿವಾರದಂದು ಆರಂಭಿಸಲಾಯಿತು. ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿಯ ಸ್ಥಾಪಕ ಸದಸ್ಯರಾದ ಗಣಪಯ್ಯ ಕಾಯಾರ ದೀಪ ಬೆಳಗಿಸಿ ತರಗತಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಂಗತರಬೇತಿ ಈ ಶಾಲೆಯಲ್ಲಿ ಹಿಂದೆ ಬಹಳಷ್ಟು ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆದಿರುವುದನ್ನು ಮೆಲುಕು ಹಾಕುತ್ತಾ ಅವರು ಶುಭ ಹಾರೈಸಿದರು. ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಎನ್. ವೆಂಕಟ್ರಮಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಎಜುಕೇಶನಲ್ ಸೊಸೈಟಿಯ ಕೋಶಾಧಿಕಾರಿ ರಾಧಾಕೃಷ್ಣ ರಾವ್ ಮಾತನಾಡುತ್ತಾ, ಎಲ್ಲ ವಿದ್ಯಾರ್ಥಿಗಳು ಈ ಸದುಪಯೋಗವನ್ನು ಬಳಸಿಕೊಂಡು, ಮುಂದಿನ ದಿನಗಳಲ್ಲಿ ಸರ್ವತೋಮುಖ ಏಳಿಗೆಯನ್ನು ಕಾಣವಂತಾಗಲಿ ಎಂದು ಹಾರೈಸಿದರು. ಸಂಚಾಲಕ ಪಿ.ಜಿ.ಎಸ್.ಎನ್. ಪ್ರಸಾದ್ ಮಾತನಾಡುತ್ತಾ “ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಅವರ ಸರ್ವಾಂಗೀಣ ಯಶಸ್ಸಿಗಾಗಿ ಈ ತರಗತಿಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲೆಯ 60ನೇ ವರ್ಷದ…

Read More

ಕಾಸರಗೋಡು : ರಂಗ ಚಿನ್ನಾರಿ ಕಾಸರಗೋಡು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಕಾಸರಗೋಡು ಕನ್ನಡ ಹಬ್ಬದ ಪ್ರಯುಕ್ತ ‘ಭರತನಾಟ್ಯ ಕಾರ್ಯಕ್ರಮ’ವು ದಿನಾಂಕ : 27-06-2023ರಂದು ಪೆರ್ಲದ ನಾಲಂದಾ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಬೈಕಾಡಿ ಪ್ರತಿಷ್ಠಾನದ ಅಂಗವಾದ ರತ್ನಕಲಾಲಯದ ನಿರ್ದೇಶಕಿ ಅಕ್ಷತಾ ಬೈಕಾಡಿಯವರೊಂದಿಗೆ ರಶ್ಮಿ ಉಡುಪ ಹಾಗೂ ರಶ್ಮಿ ಭಟ್ ಇವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ರಂಗ ಚಿನ್ನಾರಿಯ ಸಂಚಾಲಕರಾದ ಕಾಸರಗೋಡು ಚಿನ್ನಾ ಸರ್ವರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.

Read More