Author: roovari

ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಆಯೋಜನೆಯಲ್ಲಿ ಸಂಸ್ಕೃತಿ ಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಪ್ರಾಯೋಜಕತ್ವದಲ್ಲಿ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಳದ ಆಶ್ರಯದಲ್ಲಿ ಕವಿ ದಿ. ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ ಪ್ರದಾನ 2024, ಮಹಿಳಾ ಕಾವ್ಯ ಸಂವಾದ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವು ದಿನಾಂಕ 24-08-2024ರಂದು ಅಂಬಲಪಾಡಿಯ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಿತು. ಕವಿಗಳಾದ ವಿಜಯಪುರದ ಸುಮಿತ್ ಮೇತ್ರಿ ಹಾಗೂ ಮಂಗಳೂರಿನ ಜಯಶ್ರೀ ಬಿ. ಕದ್ರಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಾರಂಭದಲ್ಲಿ ಮಹಿಳಾ ಕಾವ್ಯ ಸಂವಾದದಲ್ಲಿ ಉಡುಪಿ ಜಿಲ್ಲೆಯ ಮಹಿಳಾ ಕವಯತ್ರಿಯರಾದ ಡಾ. ಮಾಧವಿ ಭಂಡಾರಿ, ಡಾ. ನಿಕೇತನ, ಸುಕನ್ಯಾ ಕಳಸ, ಸುಧಾ ಅಡುಕಳ, ಪೂರ್ಣಿಮಾ ಸುರೇಶ್ ಭಾಗವಹಿಸಿ ಇಂದಿನ ಮಹಿಳಾ ಬರಹಗಾರರಿಗೆ ಇರುವ ಸಮಸ್ಯೆಗಳನ್ನು ಸಂವಾದದಲ್ಲಿ ಚರ್ಚಿಸಲಾಯಿತು. ಸಂವಾದ ಕಾರ್ಯಕ್ರಮವನ್ನು ಉಪಾಧ್ಯಕ್ಷೆ ಸಂಧ್ಯಾ ಶೆಣೈ ನಿರ್ವಹಿಸಿದರು. ಕಾವ್ಯ ಗಾಯನವನ್ನು ವಿದುಷಿ ಉಮಾಶಂಕರಿ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ…

Read More

ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ನರಿಮೊಗರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಸಹಕಾರದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ, ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುದಾಬಿಯವರ ಪೋಷಕತ್ವದಲ್ಲಿ, ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದಂಗವಾಗಿ ಸ. ಉ. ಹಿ. ಪ್ರಾ. ಶಾಲೆ ನರಿಮೊಗರು ಇಲ್ಲಿನ ಶತ ಸಂಭ್ರಮ ವೇದಿಕೆಯಲ್ಲಿ ನಡೆದ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ -16 ದಿನಾಂಕ 24 ಆಗಸ್ಟ್ 2024ರಂದು ಅತ್ಯಂತ ಯಶಸ್ವಿಯಾಗಿ ನಡೆಯಿತು. ನರಿಮೊಗರು ಹಾಗೂ ಶಾಂತಿಗೋಡು ಗ್ರಾಮದ ಎಂಟು ಶಾಲೆಯ ಆಯ್ದ ಸಾಹಿತ್ಯಾಸಕ್ತ ವಿದ್ಯಾರ್ಥಿಗಳು ಪುರುಷರ ಕಟ್ಟೆಯಿಂದ ಕನ್ನಡ ಭುವನೇಶ್ವರಿಯ ಭಾವಚಿತ್ರದೊಂದಿಗೆ ಸಾಹಿತ್ಯ ಸಂಭ್ರಮದ ಸರ್ವಾಧ್ಯಕ್ಷತೆ ವಹಿಸಿದ ಪುಟಾಣಿ ಕುಮಾರಿ ಪೂಜಾಶ್ರೀ ಹಾಗೂ ಸಮಾರೋಪ ಭಾಷಣಗಾರ ಪುಟಾಣಿ ಧವನ್ ಕುಮಾರ್ ಇವರನ್ನು ಕನ್ನಡ ಶಾಲು ಹಾಗೂ ಕನ್ನಡ ಪೇಟವನ್ನು ತೊಡಿಸಿ ಭವ್ಯ ಮೆರವಣಿಗೆ ಮೂಲಕ ಸಭಾಂಗಣಕ್ಕೆ ಬರಮಾಡಿಕೊಳ್ಳಲಾಯಿತು. ಸಭಾಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ…

Read More

ಧಾರವಾಡ : ಆಲೂರು ವೆಂಕಟರಾವ್ ಸಭಾಭವನದಲ್ಲಿ ದಿನಾಂಕ 24 ಆಗಸ್ಟ್ 2024ರಂದು ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳ ಸಹಯೋಗದಲ್ಲಿ ಧಾರವಾಡದ ಸಂಗೀತದ ಪರಿಚಾರಕ ಅನಂತ ಹರಿಹರ ಅವರ ಸಂಸ್ಮರಣೆಯಲ್ಲಿ ನಡೆಯುತ್ತಿರುವ ಎರಡನೇ ದಿನದ ಸಂಗೀತೋತ್ಸವದಲ್ಲಿ ಗಾಯನ-ವಾದನಗಳ ನಿನಾದ ಹರಿದುಬಂತು. ಆರಂಭದಲ್ಲಿ ಉ. ಫಯ್ಯಾಜ್ ಖಾನರ ಶಿಷ್ಯ-ಪುತ್ರ ಸರಫರಾಜ್ ಖಾನರಿಂದ ಸಾರಂಗಿ ತಂತುಗಳ ವಾದನದಿಂದ ಮನಮೋಹಕ ಸ್ವರ ತರಂಗಗಳು ಝೇಂಕರಿಸಿದವು. ಅವರು ರಾಗ ಜನಸಮ್ಮೋಹಿನಿಯಲ್ಲಿ ಆಲಾಪ ಜೋಡ್ ಗಳನ್ನು ಸುಂದರವಾಗಿ ನುಡಿಸಿದರು. ಇವರಿಗೆ ಉ. ನಿಸಾರ್ ಅಹಮದ್ ತಬಲಾ ಸಾಥ್ ನೀಡುವ ಮೂಲಕ ಸಂಗೀತ ಆಸಕ್ತರ ಗಮನ ಸೆಳೆದರು. ನಂತರ ವೀರೇಶ್ವರ ಪುಣ್ಯಾಶ್ರಮದ ಪರಂಪರೆಯ ಯುವ ಪ್ರತಿಭೆ ಅಯ್ಯಪ್ಪಯ್ಯ ಹಲಗಲಿಮಠ ಅವರು ಸಾಯಂಕಾಲೀನ ಸಂಧಿಪ್ರಕಾಶ ರಾಗ, ಪೂರ್ವಿ ಥಾಟನ್ ಶ್ರೀ ಪ್ರಸ್ತುತಪಡಿಸಿದರು. ವಿಲಂಬಿತ್ ಏಕತಾಲ್ ನಲ್ಲಿ “ಮೋರಾ ಆಸರಾ…”, ಧೃತ್ ತೀನತಾಲ್ ನಲ್ಲಿ “ಬಾಜೆ ಮುರಲಿಯಾ ಮೋಹನ…” ಬಂದಿಶಗಳನ್ನು ಹಾಗೂ ಮನಮೋಹಕ ಮೀಂಡ್, ತಾನುಗಳೊಂದಿಗೆ ಪ್ರಬುದ್ಧ…

Read More

ಹಾವಂಜೆ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಮತ್ತು ಭಾವನಾ ಫೌಂಡೇಷನ್ (ರಿ.) ಹಾವಂಜೆ ಇವರ ಸಂಯುಕ್ತ ಆಶ್ರಯದಲ್ಲಿ ‘ಮನೆಯೇ ಗ್ರಂಥಾಲಯ’ ಅಭಿಯಾನದಲ್ಲಿ 99ನೇ ಗ್ರಂಥಾಲಯದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 30 ಆಗಸ್ಟ್ 2024ರಂದು ಸಂಜೆ 4-30 ಗಂಟೆಗೆ ಯಕ್ಷಗುರು ಹಾವಂಜೆ ಮಂಜುನಾಥಯ್ಯನವರ ಮನೆಯಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಶ್ರೀ ಕೃಷ್ಣ ಸಂಧಾನ’ ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಳ್ಳಲಿದೆ.

Read More

ಮಡಿಕೇರಿ : ಕೊಡಗು ಜಿಲ್ಲೆಯ ಸಾಹಿತಿಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರೂ ಆದ ಶ್ರೀಮತಿ ಹಂಚೇಟಿರ ಫ್ಯಾನ್ಸಿ ಮುತ್ತಣ್ಣ ಇವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಮ್ಮ ಮಾವ ಮತ್ತು ಅತ್ತೆಯವರಾದ ದಿ. ಹಂಚೇಟಿರ ಕುಟ್ಟಪ್ಪ ಮತ್ತು ಕಾಮವ್ವ ದಂಪತಿಗಳ ಜ್ಞಾಪಕಾರ್ಥ ರೂ.50,000/-ಗಳ ದತ್ತಿನಿಧಿಯನ್ನು ದಿನಾಂಕ 24 ಆಗಸ್ಟ್ 2024ರಂದು ಸ್ಥಾಪಿಸಿರುತ್ತಾರೆ. ದತ್ತಿಯ ಆಶಯವು – 1. ಕೊಡಗಿನ ಜಾನಪದ ಪ್ರಕಾರಗಳ ಹಿನ್ನೆಲೆ, ಹಾಡು, ಕುಣಿತಗಳ ಕುರಿತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸುವುದು. 2. ಕೊಡಗಿನ ಒಂದು ಪದವಿ ಕಾಲೇಜಿನಿಂದ ಒರ್ವ ವಿದ್ಯಾರ್ಥಿಗೆ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ. 3. ಕೊಡಗಿನ ಜಾನಪದ ಕುರಿತು ಉಪನ್ಯಾಸ ಏರ್ಪಡಿಸುವುದು. ದತ್ತಿಯ ಮೊತ್ತದ ಚೆಕ್ ಅನ್ನು ಜಿಲ್ಲಾ ಕ.ಸಾ.ಪ.ದ ಮಾಜಿ ಅಧ್ಯಕ್ಷರಾದ ಟಿ.ಪಿ. ರಮೇಶ್ ಇವರು ಮೂರ್ನಾಡು ಹೋಬಳಿ ಕ.ಸಾ.ಪ.ದ ಅಧ್ಯಕ್ಷರಾದ ಶ್ರೀಮತಿ ಈರಮಂಡ ಹರಿಣಿ ವಿಜಯ್, ಸದಸ್ಯರಾದ ಬೊಳ್ಳಜೀರ ಅಯ್ಯಪ್ಪ ಮತ್ತಿತರ ಸಮ್ಮುಖದಲ್ಲಿ ಸ್ವೀಕರಿಸಿದ್ದಾರೆ…

Read More

ಉದ್ಯಾವರ : 2017 ಸಾಲಿನ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ‘ಉದ್ಯಾವರ ಫ್ರೆಂಡ್ಸ್ ಸರ್ಕಲ್’ ಆಶ್ರಯದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ, ಸಾಮಾಜಿಕ ಕಾರ್ಯಕರ್ತರಾದ ಮಂಜುನಾಥ್ ಉದ್ಯಾವರ ಇವರ ಹನ್ನೆರಡನೇ ವರ್ಷದ ಸಂಸ್ಮರಣಾ ಕಾರ್ಯಕ್ರಮವನ್ನು ದಿನಾಂಕ 29 ಆಗಸ್ಟ್ 2024 ಗುರುವಾರ ಸಂಜೆ 5-00 ಗಂಟೆಗೆ ಉದ್ಯಾವರದ ಶ್ರೀ ವಿಠೋಬ ರುಖುಮಾಯಿ ನಾರಾಯಣ ಗುರು ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಬಿ. ಭುಜಂಗ ಶೆಟ್ಟಿ ಇವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಂಗಳೂರು ನಗರಪಾಲಿಕೆಯ ಸದಸ್ಯರಾದ ಶ್ರೀ ನವೀನ್ ಡಿಸೋಜ, ಉಡುಪಿ ಜಿಲ್ಲಾ ಕೆ.ಡಿ.ಪಿ. ಸದಸ್ಯರಾದ ಶ್ರೀ ಪ್ರಸನ್ನ ಕುಮಾರ್ ಶೆಟ್ಟಿ, ಉದ್ಯಾವರ ಬಿಲ್ಲವ ಮಹಾಜನ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕೋಟ್ಯಾನ್ ಇವರುಗಳು ಭಾಗವಹಿಸದಲಿರುವರು. ಸಭಾ ಕಾರ್ಯಕ್ರಮದ ಬಳಿಕ ಕಲಾಭಿ ಥಿಯೇಟರ್ ಮಂಗಳೂರು ಇವರಿಂದ ಜಪಾನಿನ ಬುನ್ರಾಕು ಬೊಂಬೆಯಾಟ ‘ಪುರ್ಸನ ಪುಗ್ಗೆ’ ಶ್ರವಣ್ ಹೆಗ್ಗೋಡು ಇವರ…

Read More

ಅಂಕೋಲಾ : ಭಾರತದ 78 ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ನಿಮಿತ್ತ ಕನ್ನಡ ಸಾಹಿತ್ಯ ಪರಿಷತ್ ಅಂಕೋಲಾ ಘಟಕ ಹಾಗೂ ಸಾಹಿತಿಗಳ ಒಕ್ಕೂಟವಾದ ಮಿತ್ರ ಸಂಗಮ ಇದರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆ ಹಾಗೂ ಅಂಕೋಲದ ಹಿರಿಯ ಸಾಹಿತಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ 23 ಆಗಸ್ಟ್ 2024ರಂದು ನಡೆಯಿತು. ಅಂಕೋಲ ಇಲ್ಲಿನ  ಗ್ರಾಮೀಣ ಭಾಗದ ಬೇಳಾಬಂದರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಹಾಗೂ ಉಪಯುಕ್ತ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಸಾಹಿತಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಪ್ರೊ. ಮೋಹನ ಹಬ್ಬು, ರಾಮಕೃಷ್ಣ ಗುಂದಿ, ನಾಗೇಂದ್ರ ತೊರ್ಕೆ, ಗೋಪಾಲಕೃಷ್ಣ ನಾಯಕ ಹಾಗೂ ಮಹಾಂತೇಶ ರೇವಡಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿ ರಂಜಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಕೋಲಾ ಕ. ಸಾ. ಪ ಘಟಕದ ಅಧ್ಯಕ್ಷರಾದ ಗೋಪಾಲಕೃಷ್ಣ ನಾಯಕ ಮಾತನಾಡಿ “ನಾಡು ನುಡಿಯ ಬಗ್ಗೆ ವಿದ್ಯಾರ್ಥಿಗಳು ಶ್ರದ್ಧೆ ಹಾಗೂ ಗೌರವ ಹೊಂದಿರಬೇಕು.…

Read More

ಪುತ್ತೂರು: ಪುತ್ತೂರಿನ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ. ಬಿ. ಎಸ್‌. ಇ. ಸಂಸ್ಥೆಯಲ್ಲಿ ವಿಶ್ವ ಸಂಸ್ಕೃತ ದಿನಾಚರಣೆ ಮತ್ತು ರಕ್ಷಾ ಬಂಧನ ಕಾರ್ಯಕ್ರಮವು 19 ಆಗಸ್ಟ್ 2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಬಪ್ಪಳಿಗೆ ಅಂಬಿಕಾ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥೆ ಶಶಿಕಲಾ ವರ್ಕಾಡಿ ಮಾತನಾಡಿ “ಸಂಸ್ಕೃತ ಕೇವಲ ಭಾಷೆಯಲ್ಲ ಅದು ಭಾರತಾಂಬೆಯ ಆತ್ಮದ ಧ್ವನಿ. ಹಿಂದೆ ಭಾರತದ ಸಾಧನೆ ಹೇಗಿತ್ತು ಎಂಬುದನ್ನು ಸಂಸ್ಕೃತ ತೋರಿಸಿ ಕೊಡುತ್ತದೆ. ಈ ಭಾಷೆ ದೇಹದ ನರನಾಡಿಗಳ ಆರೋಗ್ಯ ವೃದ್ಧಿಗೂ ಕಾರಣೀಭೂತವಾಗಿದೆ. ನ್ಯಾಯಾಲಯ, ವಾಯು ಸೇನೆ, ನೌಕಾ ಸೇನೆ, ಭೂ ಸೇನೆ ಇತ್ಯಾದಿ ಎಲ್ಲಾ ಸ್ಥಳಗಳಲ್ಲಿ ಸಂಸ್ಕೃತದ ಧ್ಯೇಯವಾಕ್ಯಗಳನ್ನು ನಾವು ಕಾಣಬಹುದು.” ಎಂದು ಹೇಳಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ “ರಕ್ಷೆಯಲ್ಲಿನ ಎಲ್ಲಾ ದಾರಗಳ ಒಗ್ಗೂಡುವಿಕೆಯು ಹೇಗೆ ಏಕತೆ ಸೂಚಿಸುತ್ತದೆಯೋ ಅದರಂತೆ ನಾವೆಲ್ಲರೂ ಒಗ್ಗಟ್ಟಿನಿಂದ ದೇಶದ ರಕ್ಷಣೆ ಮಾಡಬೇಕು.” ಎಂದರು. ಅಂಬಿಕಾ ವಿದ್ಯಾಲಯ ಸಿ. ಬಿ.…

Read More

ಮಂಗಳೂರು : ಕೇದಿಗೆ ಪ್ರತಿಷ್ಠಾನ ಮಂಗಳೂರು ಹಾಗೂ ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಮಂಗಳೂರು ಲೀಜನ್ ಸಹಯೋಗದೊಂದಿಗೆ ‘ಲಕ್ಷ್ಮೀ ಭಾಸ್ಕರ ಪ್ರಶಸ್ತಿ’ ಪ್ರದಾನ ಸಮಾರಂಭವು ನಗರದ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಲ್ಲಿ ದಿನಾಂಕ 17 ಆಗಸ್ಟ್ 2024ರಂದು ನಡೆಯಿತು. ಕೇದಿಗೆ ಪ್ರತಿಷ್ಠಾನ ಮಂಗಳೂರು ವತಿಯಿಂದ ನಿವೃತ್ತ ಸೇನಾನಿ ವಿಕ್ರಂ ದತ್ತಾ ಅವರಿಗೆ ರಾಷ್ಟ್ರ ಸೇವಾ ನಿಷ್ಠ, ಸಂಘಟಕ ಸುಧಾಕರ ರಾವ್ ಪೇಜಾವರ ಅವರಿಗೆ ಸಮಾಜ ಸೇವಾ ನಿಷ್ಠ, ಕಲಾವಿದ ಸೂರ್ಯ ಆಚಾರ್ ವಿಟ್ಲ ಅವರಿಗೆ ಚಿತ್ರಕಲಾ ನಿಷ್ಠ, ಕೃಷಿಕ ದಯಾಪ್ರಸಾದ್ ಚೀಮುಳ್ಳು ಅವರಿಗೆ ಕೃಷಿ ಕ್ಷೇತ್ರ ನಿಷ್ಠ, ಕಲಾವಿದ ಎಲ್ಲೂರು ರಾಮಚಂದ್ರ ಭಟ್ ಅವರಿಗೆ ಯಕ್ಷಗಾನ ಕಲಾನಿಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಸೇನಾನಿ ರಾಮ ಶೇಷ ಶೆಟ್ಟಿ, ಚಂದ್ರಹಾಸ ಕೊಂಚಾಡಿ, ದೇವಿಪ್ರಸಾದ್ ಕೊಂಚಾಡಿ, ಸುನಿಲ್ ಕೊಂಚಾಡಿಗೆ ಇವರೆಲ್ಲಾರಿಗೂ ವಿಶೇಷ ಸನ್ಮಾನ ನೀಡಲಾಯಿತು. ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಸಾಧಕರನ್ನು ಸನ್ಮಾನಿಸಿ ಮಾತನಾಡಿ, “ಡಾ. ಕೇದಿಗೆ ಅರವಿಂದ…

Read More

ಕಾಸರಗೋಡು: ಹಿರಿಯ ಯಕ್ಷಗಾನ ಭಾಗವತ ಹಾಗೂ ಕೃಷಿಕರಾದ ಮಡ್ವ ಶಂಕರನಾರಾಯಣ ಭಟ್ 22 ಆಗಸ್ಟ್ 2024ರ ಗುರುವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಕಾರಣದಿಂದ ಕಳೆದ ಎರಡು ತಿಂಗಳುಗಳಿಂದ ಬಳಲುತ್ತಿದ್ದ ಶ್ರೀಯುತರು, ದೇಲಂಪಾಡಿ ಪರಿಸರದಲ್ಲಿ ಭಾಗವತರೆಂದೇ ಖ್ಯಾತರಾಗಿದ್ದರು. ಮಾಂಬಾಡಿ ಸುಬ್ರಹ್ಮಣ್ಯ ಭಟ್‌ ಇವರ ಶಿಷ್ಯರಾಗಿದ್ದ ಶಂಕರನಾರಾಯಣ ಭಟ್, ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಹಿರಿಯ ಸದಸ್ಯರಾಗಿದ್ದದ್ದು ಮಾತ್ರವಲ್ಲದೆ. ಯಕ್ಷಗಾನ ಭಾಗವತಿಕೆಯನ್ನು ಕಲಿಸುವ ಗುರುವಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Read More