Author: roovari

ಬೆಂಗಳೂರು : ನಾಗರಾಜ್ ಶೆಟ್ಟಿ ನೈಕಾಂಬ್ಳಿ ಸಂಯೋಜನೆಯಲ್ಲಿ ಆಯೋಜಿಸುವ ಹತ್ತು ಮೇಳಗಳ ಕಲಾವಿದರು ಮತ್ತು ಅತಿಥಿ ಕಲಾವಿದರ ಸಮಾಗಮದಲ್ಲಿ ‘ಯಕ್ಷ ಸಂಕ್ರಾಂತಿ’ ಕಾರ್ಯಕ್ರಮವು 21 ಸೆಪ್ಟೆಂಬರ್ 2024ರ ಶನಿವಾರದಂದು ರಾತ್ರಿ ಘಂಟೆ 9.00 ರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ನಾಡಿನ ಪ್ರಬುದ್ಧ ಕಲಾವಿದರ ಕೂಡುವಿಕೆಯಲ್ಲಿ ಕವಿ ದೇವಿದಾಸ ವಿರಚಿತ ‘ಕೃಷ್ಣ ಸಂದಾನ’, ಕವಿ ಮೂಲಿಕೆ ರಾಮಕೃಷ್ಣ ವಿರಚಿತ ‘ಸುಧನ್ವ’, ಕವಿ ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಧರ್ಮಾಂಗದ’ ಹಾಗೂ ಕವಿ ರತ್ನಾಪುರದ ರಾಮ ವಿರಚಿತ ‘ತಾಮ್ರ ಧ್ವಜ’ ಪ್ರಸಂಗಳು ಪ್ರದರ್ಶನಗೊಳ್ಳಲಿದ್ದು, ಹಿಮ್ಮೇಳದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯ, ಚಂದ್ರಕಾಂತ ರಾವ್ ಮೂಡುಬೆಳ್ಳೆ, ಉದಯ್ ಕುಮಾರ್ ಹೊಸಾಳ್‌, ಸೃಜನ್ ಗಣೇಶ ಹೆಗಡೆ, ಶ್ರೀನಿವಾಸ ಪ್ರಭು, ಅಕ್ಷಯ್ ಆಚಾರ್ಯ, ಶಶಾಂಕ್ ಆಚಾರ್ಯ ಹಾಗೂ ಪ್ರಜ್ವಲ್ ಮುಂಡಾಡಿ ಸಹಕರಿಸಲಿದ್ದಾರೆ. ‘ಕೃಷ್ಣ ಸಂದಾನ’ ಪ್ರಸಂಗದಲ್ಲಿ ಕೌರವನಾಗಿ ಕೃಷ್ಣ ಯಾಜಿ ಬಳ್ಕೂರು, ಕೃಷ್ಣನಾಗಿ ರಾಮಚಂದ್ರ ಹೆಗಡೆ ಕೊಂಡದಕುಳಿ, ವಿದುರನಾಗಿ ರಮೇಶ್‌ ಭಂಡಾರಿ, ದೂತನಾಗಿ ದ್ವಿತೇಶ್ ಕಾಮತ್, ಕರ್ಣನಾಗಿ…

Read More

ಮಂಗಳೂರು : ರತ್ನ ಕಲಾಲಯ ಮಂಗಳೂರು ಇದರ 3ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ ‘ಅನುಪದಮ್ – 2024’ ಇದರಲ್ಲಿ ರತ್ನ ಕಲಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ತಾಳ ಪ್ರವೀಣ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರಿಂದ ವಿದ್ಯಾರ್ಥಿಗಳು ಹಾಗೂ ಹೆತ್ತವರಿಗಾಗಿ ನೃತ್ಯದ ಬಗ್ಗೆ ಪ್ರೇರಣೆ ನೀಡುವ ಕಾರ್ಯಾಗಾರ ದಿನಾಂಕ 14 ಸೆಪ್ಟೆಂಬರ್ 2024ರಂದು ಮಂಗಳೂರಿನ ಉರ್ವಸ್ಟೋರ್ ನಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯಿತು. ನಾಟರಾಜನ ಮೂರ್ತಿಗೆ ಮಂಗಳ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ‘ಕರ್ನಾಟಕ ರಾಜ್ಯೋತ್ಸವ’ ಹಾಗೂ ‘ನಾಟ್ಯರಾಣಿ ಶಾಂತಲಾ’ ಪ್ರಶಸ್ತಿ ಪುರಸ್ಕೃತ ನೃತ್ಯಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ಇವರನ್ನು ಚಂಡೆ ವಾದನಗಳ ಮೂಲಕ ಬರಮಾಡಿಕೊಳ್ಳಲಾಯಿತು ಹಾಗೂ ವಿದ್ಯಾರ್ಥಿಗಳಿಂದ ಭಕ್ತಿ – ಗೌರವಪೂರ್ಣವಾದ ಪಾದ ಪೂಜೆ ನಡೆಯಿತು. ಕಲಾಸಕ್ತರನ್ನು ಉದ್ದೇಶಿಸಿ ಮಾತನಾಡಿದ ನಾಟ್ಯಗುರು “ಶಾಸ್ತ್ರೀಯತೆಯನ್ನು ಉಳಿಸಿಕೊಂಡು ಏನೂ ತೊಂದರೆಯಾಗದಂತೆ ಸನಾತನ ಕಲೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲಾ ನೃತ್ಯಗುರುಗಳಿಗೂ ಇದೆ” ಎನ್ನುತ್ತಾ ರತ್ನ ಕಲಾಲಯದ ಉತ್ತಮ…

Read More

ಬೆಂಗಳೂರು : ಮೂಡ್ನಾಕೂಡು ಚಿನ್ನಸ್ವಾಮಿ ಅಭಿನಂದನಾ ಸಮಿತಿ ವತಿಯಿಂದ ಮೂಡ್ನಾಕೂಡು ಚಿನ್ನಸ್ವಾಮಿ ಜನ್ಮದಿನಾಚರಣೆ ಮತ್ತು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವು ದಿನಾಂಕ 22 ಸೆಪ್ಟೆಂಬರ್ 2024ರಂದು ಸಂಜೆ 4-30 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತು, ಅಕ್ಕ ಮಹಾದೇವಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಹಿರಿಯ ಸಾಹಿತಿಗಳಾದ ಡಾ. ಎಲ್. ಹನುಮಂತಯ್ಯ ಇವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಸುಪ್ರಸಿದ್ಧ ಸಾಹಿತಿಗಳಾದ ಶ್ರೀ ಅಗ್ರಹಾರ ಕೃಷ್ಣಮೂರ್ತಿ ಇವರು ಈ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಲಿರುವರು. ಬಿಡುಗಡೆಯಾಗಲಿರುವ ಪುಸ್ತಕಗಳಾದ ‘ಆ ಮಹಾ ಮುಗುಳು ನಗೆ’ – ಕಾವ್ಯ ಇದರ ಬಗ್ಗೆ ಲೇಖಕರು ಮತ್ತು ಪತ್ರಕರ್ತರಾದ ಶ್ರೀ ಚ.ಹ. ರಘುನಾಥ, ‘ಧಮ್ಮಯಾನ – ಬೌದ್ಧತತ್ವ ಮೀಮಾಂಸೆ ಇದರ ಬಗ್ಗೆ ಬೆಂಗಳೂರಿನ ಸುಪ್ರಸಿದ್ಧ ಸಾಹಿತಿಗಳಾದ ಶ್ರೀ ಅಗ್ರಹಾರ ಕೃಷ್ಣಮೂರ್ತಿ, ‘ಉರಿವ ಕಿಚ್ಚಿಗೆ ಮೈಯೆಲ್ಲ ಬಾಯಿ-ಮೂ.ಚಿ. ಸಾಹಿತ್ಯ ವಿಮರ್ಶೆ’ ಇದರ ಬಗ್ಗೆ ಬೆಂಗಳೂರಿನ ಅಕ್ಕ ಐ.ಎ.ಎಸ್. ಅಕಾಡೆಮಿ ಇದರ ನಿರ್ದೇಶಕರಾದ ಡಾ. ಶಿವಕುಮಾರ ಇವರುಗಳು ಮಾತನಾಡಲಿರುವರು. ಇದೇ ಸಂದರ್ಭದಲ್ಲಿ ಪ್ರಖ್ಯಾತ ಜಂಬೆ ಕಲಾವಿದರಾದ…

Read More

ಬೆಂಗಳೂರು : ಸಂಚಾರಿ ಥಿಯೇಟರ್ ಇದರ ವತಿಯಿಂದ 20 ವರ್ಷದ ರಂಗ ಸಂಭ್ರಮದ ಪ್ರಯುಕ್ತ ಆರು ತಿಂಗಳ ವಾರಾಂತ್ಯ ‘ಅಭಿನಯ ತರಗತಿಗಳು’ ದಿನಾಂಕ 19 ಅಕ್ಟೋಬರ್ 2024ರಿಂದ ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಸಂಚಾರಿ ಥಿಯೇಟರ್ ಎಂಟಿಸ್ಪೇಸಿನಲ್ಲಿ ಪ್ರಾರಂಭವಾಗಲಿವೆ. ಹೆಚ್ಚಿನ ಮಾಹಿತಿಗಾಗಿ 8884345569, 8971186882, 9844115903 ಮತ್ತು 9611234993 ಸಂಪರ್ಕಿಸಿರಿ. ಸಂಚಾರಿ ಥಿಯೇಟರ್ : 2004ರಲ್ಲಿ ಅಸ್ತಿತ್ವಕ್ಕೆ ಬಂದ ಸಂಚಾರಿ ಥಿಯೇಟರ್, ಬೆಂಗಳೂರಿನ ಪ್ರಮುಖ ರಂಗ ಸಂಸ್ಥೆಗಳಲ್ಲಿ ಒಂದು. ನಾಟಕಗಳು, ಅಭಿನಯ ಕಾರ್ಯಾಗಾರಗಳು, ನೇಪಥ್ಯ ಹಾಗೂ ರಂಗ ಸಂಗೀತ ಕುರಿತ ಶಿಬಿರಗಳನ್ನು ಪ್ರತಿವರ್ಷ ನಡೆಸುತ್ತಾ ಬಂದಿರುವ ಸಂಚಾರಿ ಥಿಯೇಟರ್ ಮಕ್ಕಳ ರಂಗಭೂಮಿ ಕುರಿತಂತೆ ನಿರಂತರವಾಗಿ ರಂಗ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಸಾಹಿತ್ಯಿಕ ಚಟುವಟಿಕೆಗಳು ಮತ್ತು ರಂಗಭೂಮಿಯಲ್ಲಿ ಹೊಸ ಸಾಧ್ಯತೆಗಳನ್ನು ಹುಡುಕುವ ರಂಗ ಪ್ರಯೋಗಗಳೊಂದಿಗೆ ಯುವಕರನ್ನು ರಂಗಭೂಮಿಗೆ ಕರೆತರುವ ನಿಟ್ಟಿನಲ್ಲಿ “ಪೂರ್ವರಂಗ” ಅಭಿನಯ ಕಾರ್ಯಾಗಾರವನ್ನು ಪ್ರತಿವರ್ಷ ನಡೆಸುತ್ತಾ ಬಂದಿದೆ. ಸಾಮಾಜಿಕ ಕಳಕಳಿ ಹಾಗೂ ಬದ್ಧತೆ ಇರುವ ಉತ್ಸಾಹಿ, ಪ್ರತಿಭಾವಂತ ಯುವಕರ ತಂಡವನ್ನು ಹೊಂದಿರುವ ಸಂಚಾರಿ…

Read More

ಮಂಗಳೂರು : ಸೋಮೇಶ್ವರ ಕೊಲ್ಯದಲ್ಲಿರುವ ನಾಟ್ಯನಿಕೇತನ (ರಿ.) ಅರ್ಪಿಸುವ ‘ಕರ್ನಾಟಕ ರಾಜ್ಯೋತ್ಸವ’, ‘ಶಾಂತಲಾ ನಾಟ್ಯ’ ಪ್ರಶಸ್ತಿ’ ಪುರಸ್ಕೃತ ನೃತ್ಯ ಗುರು ನಾಟ್ಯಾಚಾರ್ಯ ಶ್ರೀ ಉಳ್ಳಾಲ್ ಮೋಹನ್ ಕುಮಾರ್ ಇವರ 90ನೇ ವರ್ಷಾಚರಣೆಯ ಪ್ರಯುಕ್ತ ನೃತ್ಯ ಸರಣಿ-ಮಾಲಿಕೆ 9 ‘ನಾಟ್ಯ ಮೋಹನ ನವತ್ಯುತ್ಸಹ’ ಕಾರ್ಯಕ್ರಮವನ್ನು ದಿನಾಂಕ 21 ಸೆಪ್ಟೆಂಬರ್ 2024ರಂದು ಸಂಜೆ 6-00 ಗಂಟೆಗೆ ಕೊಲ್ಯದ ನಾಟ್ಯನಿಕೇತನ ನೃತ್ಯಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಕಲಾತಿಲಕ, ನಾಟ್ಯಾಚಾರ್ಯ ಉಳ್ಳಾಲ್ ಮೋಹನ್ ಕುಮಾರ್ ಇವರಿಂದ ದೇವತಾ ಜ್ಯೋತಿ ಪ್ರಜ್ವಲನೆಯೊಂದಿಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಮಂಗಳ ಗಂಗೋತ್ರಿ ಮಂಗಳೂರು ವಿಶ್ವವಿದ್ಯಾನಿಲಯ ರಸಾಯನ ಶಾಸ್ತ್ರ ವಿಭಾಗದ ಸಂಶೋಧಕಿ ನೃತ್ಯ ವಿದುಷಿ ಶ್ರೀಮತಿ ಅದಿತಿ ನಾಯಕ್ ಇವರು ನೃತ್ಯ ಪ್ರಸ್ತುತಿ ನೀಡಲಿದ್ದಾರೆ.

Read More

ಕಲ್ಮಂಜ : ಯಕ್ಷಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕ ಇದರ ವತಿಯಿಂದ ಸರಕಾರಿ ಪ್ರೌಢಶಾಲೆ ಕಲ್ಮಂಜದಲ್ಲಿ ಯಕ್ಷಧ್ರುವ-ಯಕ್ಷ ಶಿಕ್ಷಣ ನಾಟ್ಯ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ 17 ಸೆಪ್ಟೆಂಬರ್ 2024ರಂದು ನಡೆಯಿತು. ಉದ್ಘಾಟನೆಯನ್ನು ಯಕ್ಷಧ್ರುವ ಪಟ್ಲ ಪೌಂಡೇಶನ್ ಬೆಳ್ತಂಗಡಿ ಘಟಕದ ಗೌರವ ಸಲಹೆಗಾರರಾದ ರಘುರಾಮ ಶೆಟ್ಟಿ ಇವರು ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಮಂಜುನಾಥ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಸುರೇಶ್‌ ಶೆಟ್ಟಿ ಲಾಯಿಲ, ಯಕ್ಷ ಗುರುಗಳಾದ ಈಶ್ವರ್ ಪ್ರಸಾದ್‌ ಧರ್ಮಸ್ಥಳ ಹಾಗೂ ಘಟಕದ ಪದಾಧಿಕಾರಿಗಳಾದ ವಸಂತ ಶೆಟ್ಟಿ, ಶ್ರದ್ಧಾ ವೆಂಕಟರಮಣ ಶೆಟ್ಟಿ ಉಜಿರೆ, ದೇವರಾಜ್ ಉಜಿರೆ ಇವರುಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಪೂರ್ಣಿಮಾ ಸ್ವಾಗತಿಸಿ, ಶಿಕ್ಷಕ ಸುಧೀಂದ್ರ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಸವಿತಾ ಧನ್ಯವಾದವಿತ್ತರು. ಶಾಲೆಯ ಎಲ್ಲಾ ಶಿಕ್ಷಕರು ಕಾರ್ಯಕ್ರಮಕ್ಕೆ ಸಹಕರಿಸಿದರು.

Read More

ಶಿವಮೊಗ್ಗ : ರಂಗಾಯಣ ಶಿವಮೊಗ್ಗ ಇದರ ವತಿಯಿಂದ ರಂಗಭೀಷ್ಮ ಬಿ.ವಿ. ಕಾರಂತರ ಜನ್ಮದಿನದ ನೆನಪಿನಲ್ಲಿ ಮೂರು ದಿನದ ‘ನಾಟಕೋತ್ಸವ 2024’ವನ್ನು 21 ಸೆಪ್ಟೆಂಬರ್ 2024ರಿಂದ 23 ಸೆಪ್ಟೆಂಬರ್ 2024ರವರೆಗೆ ಪ್ರತಿ ದಿನ ಸಂಜೆ 6-30 ಗಂಟೆಗೆ ಶಿವಮೊಗ್ಗದ ಅಶೋಕ ನಗರ, ಸುವರ್ಣ ಸಂಸ್ಕೃತಿ ಭವನದಲ್ಲಿ ಆಯೋಜಿಸಿದೆ. ದಿನಾಂಕ 21 ಸೆಪ್ಟೆಂಬರ್ 2024ರಂದು ಜೋಸೆಫ್ ಜಾನ್ ಇವರ ನಿರ್ದೇಶನದಲ್ಲಿ ಬೆಂಗಳೂರಿನ ಸುಸ್ಥಿರ ಪ್ರತಿಷ್ಠಾನ ತಂಡ ದವರಿಂದ ‘ಸರಸ ವಿರಸ ಸಮರಸ’ ನಾಟಕ, ದಿನಾಂಕ 22 ಸೆಪ್ಟೆಂಬರ್ 2024ರಂದು ಧಾರವಾಡದ ಆಟಮಾಟ (ರಿ) ಸಾಂಸ್ಕೃತಿಕ ಪಥ ತಂಡದವರು ಮಹಾದೇವ ಹಡಪದ ಇವರ ರಂಗರೂಪ, ಪರಿಕಲ್ಪನೆಯ ‘ನಾ ರಾಜಗುರು’ ಎಂಬ ನಾಟಕವನ್ನು ವಿಶ್ವರಾಜ ರಾಜಗುರು ಅಭಿನಯಿಸಲಿರುವರು. ದಿನಾಂಕ 23 ಸೆಪ್ಟೆಂಬರ್ 2024ರಂದು ಒಡ್ಡೋಲಗ ರಂಗಪರ್ಯಟನ ಹಿತ್ಲಕೈ ಇವರು ವಿವೇಕ್ ಶಾನ್ ಭಾಗ್ ರಚಿಸಿರುವ ಗಣಪತಿ ಬಿ. ಹಿತ್ಲಕೈ ಇವರ ನಿರ್ದೇಶನದಲ್ಲಿ ‘ಬಹುಮುಖಿ’ ನಾಟಕ ಪ್ರದರ್ಶನ ನೀಡಲಿದ್ದಾರೆ.

Read More

ಮಂಗಳೂರು : ನಮ್ಮನೆ ಕುಡ್ಲ, ನ್ಯೂಸ್ ಕರ್ನಾಟಕ ಮತ್ತು ಪಾತ್ ವೇ ಎಂಟರ್ಪ್ರೈಸ್ಸ್ ಇದರ ವತಿಯಿಂದ ಹಾಗೂ ಜೆ.ಸಿ.ಐ. ಇವರ ಸಹಯೋಗದೊಂದಿಗೆ ‘ಚಿತ್ರಕಲಾ ಸ್ಪರ್ಧೆ’ಯನ್ನು ದಿನಾಂಕ 21 ಸೆಪ್ಟೆಂಬರ್ 2024ರಂದು ರಾಜಾಜಿ ಪಾರ್ಕ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ‘ನಮ್ಮನೆ ಕುಡ್ಲ’ ಎಂಬ ವಿಷಯ ಬಗ್ಗೆ ಮೂರು ವಿಭಾಗಗಳಲ್ಲಿ ಈ ಸ್ಪರ್ಧೆಯು ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 7676218092 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಬಸ್ರೂರು: ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಸಂಯೋಜನೆಯೊಂದಿಗೆ ‘ಸಿನ್ಸ್ 1999 ಶ್ವೇತಯಾನ-62’ ಕಾರ್ಯಕ್ರಮದಡಿಯಲ್ಲಿ ಆಯೋಜನೆಗೊಂಡ ‘ಸ್ಕೂಲ್ಸ್ ಇನ್ ಒಡ್ಡೋಲಗ’ ಕಾರ್ಯಕ್ರಮದ ಸಮಾರೋಪ ಸಮಾರಂಭ 18 ಸೆಪ್ಟೆಂಬರ್ 2024ರಂದು ಸರಕಾರಿ ಪ್ರೌಢ ಶಾಲೆ ಬಸ್ರೂರಿನಲ್ಲಿ ನಡೆಯಿತು. ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಕಾಂತ್ ಮಾತನಾಡಿ “ಯಕ್ಷಗಾನ ಕಲೆಯನ್ನು ಉಳಿಸಬೇಕು, ಬೆಳೆಸಬೇಕು ಎನ್ನುವ ದೃಷ್ಟಿಯಿಂದ ಮಕ್ಕಳಿಂದ ಮಕ್ಕಳಿಗಾಗಿ ಯಕ್ಷಗಾನ ಒಡ್ಡೋಲಗ ಕಾರ್ಯಕ್ರಮ ಹೆಚ್ಚು ಪ್ರಸ್ತುತ. ಕಲೆಯಲ್ಲಿ ಪರಂಪರೆಯ ನಡೆಗಳು ಉಳಿಯುವುದಕ್ಕೆ ಸರ್ವರೂ ಶ್ರಮಿಸಬೇಕು. ಪೂರ್ವರಂಗವು ಯಕ್ಷಗಾನದ ಕಥೆಗಳ ಆಸ್ವಾದನೆಗೆ ಒಳ್ಳೆಯ ವಾತಾವರಣ ಕಲ್ಪಿಸಿಕೊಡುತ್ತದೆ. ಆದರೆ ಇತ್ತೀಚೆಗೆ ರಂಗದಲ್ಲಿ ಚೌಕಿ ಪೂಜೆಯ ಬಳಿಕ ಗಣಪತಿ ಸ್ತುತಿ ಮಾಡಿ ನೇರವಾಗಿ ಪ್ರಸಂಗ ಪ್ರದರ್ಶನ ಕಾಣುತ್ತೇವೆ. ಆದರೆ ಪ್ರಸಂಗದ ಪ್ರಸ್ತುತಿಗೆ ಮೊದಲು ಪೂರ್ವರಂಗದ ಹೂರಣವಿದ್ದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಇದನ್ನು ಅಲ್ಲಲ್ಲಿ ಶಾಲೆಗಳಲ್ಲಿ ನೆನಪಿಸುವುದಕ್ಕೆ ಹೊರಟ ಸಂಸ್ಥೆಗೆ ಯಶಸ್ಸಾಗಲಿ.” ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಬಸ್ರೂರು ಮಾತನಾಡಿ “ತೆಕ್ಕಟ್ಟೆ ಭಾಗದಲ್ಲಿ…

Read More

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದಿವಂಗತ ಸಣ್ಣಯ್ಯ ಮತ್ತು ಗಿರಿಜಾ ದಂಪತಿಗಳಿಗೆ ದಿನಾಂಕ 07-07-1977ರಂದು ಜನಿಸಿದ ಸುಪುತ್ರಿ ಪ್ರೇಮ ಕಿಶೋರ್. ದಿವಾಣ ಶಿವಶಂಕರ್ ಭಟ್ ತೆಂಕಿನ ಗುರುಗಳು ಹಾಗೂ ಗುರುನಂದನ್ ಹೊಸೂರು ಬಡಗಿನ ಗುರುಗಳು. ಬಾಲ್ಯದಲ್ಲಿ ಯಕ್ಷಗಾನದ ಮೇಲೆ ತುಂಬಾ ಆಸಕ್ತಿ ಇತ್ತು. ಆದ್ರೆ ಅದಕ್ಕೆ ಅವಕಾಶ ಇರಲಿಲ್ಲ. ಮದುವೆ ಆದ ನಂತರ ನನ್ನ ಅತ್ತೆ ಯಕ್ಷಗಾನ ಮಾಡ್ತಾ ಇದ್ರು. ಅವರು ಬಡಗಿನ ವೇಷ ಮಾಡುತ್ತಿದ್ದರು. ಅವರೇ ನನಗೆ ಪ್ರೇರಣೆ ಎಂದು ಹೇಳುತ್ತಾರೆ ಪ್ರೇಮ ಕಿಶೋರ್. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಪದ್ಯಗಳನ್ನು ಓದುತ್ತೇನೆ. ನನ್ನ ಜೊತೆ ಪಾತ್ರದ ಬಗ್ಗೆ ತಿಳಿದುಕೊಳ್ಳುತ್ತೇನೆ. ಸಂವಾದ ಹೇಗೆ ಸೃಷ್ಟಿ ಆಗ್ತದೆ ಅಂತ ನೋಡಿಕೊಳ್ಳುತ್ತೇನೆ. ಹಿರಿಯ ಕಲಾವಿದರ ಅರ್ಥಗಾರಿಕೆಯನ್ನು ಕೇಳುತ್ತೇನೆ. ನನಗೆ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ಚೊಕ್ಕವಾಗಿ ತಪ್ಪಾಗದ ರೀತಿಯಲ್ಲಿ ನಿಭಾಯಿಸಬೇಕು ಎನ್ನುವ ಬದ್ಧತೆ ನಿಲ್ಲಿಸಿಕೊಳ್ಳುತ್ತೇನೆ. ಪಾತ್ರದ ಮೂಲ ಆಶಯಕ್ಕೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಎಚ್ಚರವಹಿಸುತ್ತೇನೆ. ಮೇಳದ ಆಟಗಳನ್ನು ನೋಡುವುದಕ್ಕೆ ಹೋಗುತ್ತೇನೆ. ಯಾವೆಲ್ಲಾ ಪಾತ್ರಗಳನ್ನು…

Read More