Author: roovari

ಉಡುಪಿ : ಪ್ರತಿ ವರ್ಷದಂತೆ ಮಕರ ಸಂಕ್ರಾಂತಿಯ ಪುಣ್ಯ ದಿನ ದಿನಾಂಕ 14-01-2024ರಂದು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವತಿಯಿಂದ ನಡೆಯುತ್ತಿರುವ ಸಮುದ್ರ ಮಧ್ಯದಲ್ಲಿರುವ ಮಲ್ತಿ ದ್ವೀಪದಲ್ಲಿನ ಶೀ ಆದಿಪರಾಶಕ್ತಿ ಸನ್ನಿಧಾನದಲ್ಲಿ ಮಕರ ಸಂಕ್ರಾಂತಿ ಪೂಜೆಯ ನಂತರ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ) ಪೆರ್ಡೂರು ಹಾಗೂ ಮಲ್ಪೆಯ ಮತ್ಸ್ಯರಾಜ್ ಗ್ರೂಪ್ ವತಿಯಿಂದ ಶಿವರಾತ್ರಿ ಸಂದರ್ಭದಲ್ಲಿ ದಿನಾಂಕ 10-03-2024ರಂದು ಉಡುಪಿ ಬನ್ನಂಜೆ ನಾರಾಯಣಗುರು ಆಡಿಟೋರಿಯಂನಲ್ಲಿ ಹಮ್ಮಿಕೊಂಡಿರುವ ಅವಿಭಜಿತ ಉಡುಪಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಭಜನಾ ಸ್ಪರ್ಧೆ ಭಿತ್ತಿ ಪತ್ರ ಅನಾವರಣಗೊಳಿಸುವ ಕಾರ್ಯಕ್ರಮ ನೆರವೇರಿಸಲಾಯಿತು. ಸಮಿತಿ ಅಧ್ಯಕ್ಷರು ಸತೀಶ್ ಕೋಟ್ಯಾನ್ ಮಲ್ಪೆ, ಕೊಡವೂರು ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸಾಧು ಸಾಲಿಯಾನ್ ಮತ್ತು ಸದಸ್ಯರು, ಮತ್ಸ್ಯರಾಜ್ ಗ್ರೂಪ್ ಮಲ್ಪೆ ಇದರ ಪಾಲುದಾರರು, ಹಿರಿಯ ಪತ್ರಕರ್ತ ನಟರಾಜ್ ಮಲ್ಪೆ, ಹಿರಿಯ ಕಲಾವಿದ ಸುಧೀರ್ ರಾವ್ ಹಾಗೂ ಭೈರವನಾಥೇಶ್ವರ ಸೇವಾ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರ ಸಹಯೋಗದೊಂದಿಗೆ ನೂರಾರು ಭಕ್ತರ…

Read More

ಸುರತ್ಕಲ್ : ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲು ಉಡುಪಿ ಜಿಲ್ಲೆ, ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ ಮತ್ತು ಕೇರಳ, ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ) ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಹಾಗೂ ಗೋವಿಂದ ದಾಸ ಕಾಲೇಜು ಸುರತ್ಕಲ್‌ ಇದರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ‘ಬುಡಕಟ್ಟು ಯುವ ಬರಹಗಾರರ ಕಮ್ಮಟ’ವು ದಿನಾಂಕ 13-01-2024ರಂದು ಉದ್ಘಾಟಣೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪುಣೆಯ ಸಿಂಬಿಯೋಸಿಸ್ ಅಂತರಾಷ್ಟ್ರೀಯ ಡೀಮ್ಡ್ ಕಾನೂನು ವಿಶ್ವವಿದ್ಯಾನಿಲಯದ ನಿರ್ದೇಶಕರಾದ ಡಾ. ಶಶಿಕಲಾ ಗುರುಪುರ ಮಾತನಾಡಿ “ಸಾಹಿತ್ಯವು ಸಮಾಜವನ್ನು ಕಟ್ಟುವ ಮೂಲಕ ಅಂಕುಡೊಂಕುಗಳನ್ನು ತಿದ್ದುವುದರೊಂದಿಗೆ ಬರಹಗಾರನ ಶಕ್ತಿಯಾಗಿಯೂ ಹೊರಹೊಮ್ಮುತ್ತದೆ. ಕಣ್ಣೀರಿನ ಕಥೆಗಳು ಗೋಳಿನ ಕಥೆಗಳಾಗದೆ, ಶಕ್ತಿಯಾಗಬೇಕಾದ ಅವಶ್ಯಕತೆ ಇದೆ. ಹೆಣ್ಣು ಅನುಭವಿಸುವ ಸಂಕೀರ್ಣತೆಗಳು ಬರಹದ ಮೂಲವಾಗಬೇಕು.” ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ ಹಾಗೂ ಕೇರಳದ ಅಧ್ಯಕ್ಷೆ ಸುಶೀಲ ನಾಡ ಮಾತನಾಡಿ “ಚಳುವಳಿಗಳೊಂದಿಗೆ ಅನುಭವದ ಬರಹಗಳು ಮುಖ್ಯ.” ಎಂದರು. ನಮ್ಮ ನ್ಯಾಯ…

Read More

ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ‘ಅಯೋಧ್ಯೆಯಲ್ಲಿ ರಾಮಮಂದಿರ-ಮನೆಮನಗಳಲ್ಲಿ ಶ್ರೀರಾಮ ಚಂದಿರ’ ವಿಷಯದ ಬಗ್ಗೆ ದ.ಕ. ಜಿಲ್ಲಾ ಮಟ್ಟದ ಕವನ ಸ್ಪರ್ಧೆ ಏರ್ಪಡಿಸಲಾಗಿದೆ. ಕನಿಷ್ಠ 60 ಪದಗಳು, ಗರಿಷ್ಠ 100 ಪದಗಳು. ವಯೋಮಿತಿ ಇಲ್ಲ. ಸ್ಪಧೆಯಲ್ಲಿ ಆಯ್ಕೆಯಾದ ಮೊದಲ ಮೂರು ಕವಿತೆಗಳಿಗೆ ನಗದು ಸಹಿತ ಪ್ರಮಾಣಪತ್ರ ನೀಡಲಾಗುವುದು. ವಿಜೇತರಿಗೆ ಹಾಗೂ ಆಯ್ದ ಕವಿಗಳಿಗೆ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಕವನ ವಾಚನಕ್ಕೆ ಅವಕಾಶ ಕಲ್ಪಿಸಲಾಗುವುದು. ಕವನಗಳನ್ನು ಪ್ರಧಾನ ಕಾರ್ಯದರ್ಶಿ, ಅ.ಭಾ.ಸಾ.ಪ., ದ.ಕ. ಜಿಲ್ಲಾ ಸಮಿತಿ, 2ನೇ ಮಹಡಿ, ರಘು ಬಿಲ್ಡಿಂಗ್, ಕವಿತಾ ರೆಸಿಡೆನ್ಸಿ ಮುಂಭಾಗ, ಉರ್ವಸ್ಟೋರ್, ಅಂಚೆ: ಅಶೋಕನಗರ, ಮಂಗಳೂರು-6 ಈ ವಿಳಾಸಕ್ಕೆ ದಿನಾಂಕ 22-01-2024ರೊಳಗೆ ಕಳುಹಿಸಬೇಕು. ಕವನ ಕಳುಹಿಸುವವರು ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು.

Read More

ಮಂಗಳೂರು : ಭರತನಾಟ್ಯ ಕಲೆಯನ್ನು ಅಕಾಡೆಮಿಕ್ ಆಗಿ ಬೋಧಿಸುತ್ತಿರುವ ಕಲಾ ಸಂಸ್ಥೆಗಳಲ್ಲಿ ಉರ್ವದ ನಾಟ್ಯಾರಾಧನಾ ಕಲಾ ಕೇಂದ್ರ (ರಿ.) ಸಂಸ್ಥೆಯು ಪ್ರಮುಖವಾದದ್ದು. ಸಂಸ್ಥೆಯು 1994 ಸೆಪ್ಟೆಂಬರ್‌ 8ರಂದು ಸುರತ್ಕಲ್ ಕೆ.ಆರ್.ಇ.ಸಿ.ಯಲ್ಲಿ ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ ಅವರ ಕನಸಿನ ಕೂಸಾಗಿ ಆರಂಭವಾಗಿದ್ದು, ಇದೀಗ ನಾಟ್ಯಾರಾಧನಾಕ್ಕೆ 30ನೇ ವರ್ಷಾಚರಣೆಯ ಸಂಭ್ರಮದ ಹೊನಲು. ಈ ಹಿನ್ನೆಲೆಯಲ್ಲಿ ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿಯ ಬೆಂಬಲದೊಂದಿಗೆ ದಿನಾಂಕ 18-01-2024 ಗುರುವಾರದಂದು ಸಂಜೆ 4.45ಕ್ಕೆ ಮಂಗಳೂರು ಪುರಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ‘ನಾಟ್ಯಾರಾಧನಾ ತ್ರಿಂಶೋತ್ಸವ’ ಸಂಭ್ರಮದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ. ಶ್ರೀ ಎಡನೀರು ಮಠದ ಜಗದ್ಗುರು ಶ್ರೀಶಂಕರಾಚಾರ್ಯ ಸಂಸ್ಥಾನ ಇದರ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಭರತನಾಟ್ಯ ಗುರುಗಳೂ ವಿದ್ವಾಂಸರೂ ಆದ ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್, ವಿ. ಚಂದ್ರಶೇಖರ ನಾವಡ ಸುರತ್ಕಲ್, ವಿ. ಶ್ರೀಮತಿ ಶಾರದಾಮಣಿ ಶೇಖರ್, ವಿ. ಗೀತಾ ಸರಳಾಯ ಕದ್ರಿ, ವಿ. ಕಾವ್ಯ…

Read More

ಲಕ್ಕೋ : ಖ್ಯಾತ ಉರ್ದು ಕವಿ ಮುನಾವ್ವರ್ ರಾಣಾ ಅವರು ಹೃದಯಾಘಾತದಿಂದ ದಿನಾಂಕ 14-01-2024ರ ಭಾನುವಾರದ ರಾತ್ರಿ ಉತ್ತರ ಪ್ರದೇಶದ ಲಕ್ಕೋದಲ್ಲಿ ನಿಧನ ಹೊಂದಿದರು. ಅವರಿಗೆ (71) ವರ್ಷ ವಯಸ್ಸಾಗಿತ್ತು. ಮೂತ್ರಪಿಂಡ ಮತ್ತು ಉಸಿರಾಟ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ರಾಣಾರನ್ನು ಲಕ್ಕೋದ ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆ ಯುಸಿರೆಳೆದಿದ್ದಾರೆ. ಶ್ರೀಯುತರು ಪತ್ನಿ, ನಾಲ್ವರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ. ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ 26-11-1952ರಂದು ಜನಸಿದ ರಾಣಾ ಅವರು, ಉರ್ದು ಘಜಲ್ ಗಳಿಂದ ಖ್ಯಾತರಾಗಿದ್ದರು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅಮೀರ್ ಖುಸ್ರೋ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. ಅವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

Read More

ಮಂಗಳೂರು: ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರರ ಸ್ಮರಣಾರ್ಥ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನವು ಆಯೋಜಿಸಿದ ‘ಅಮೃತ ನಮನ’ ಕಾರ್ಯಕ್ರಮವು ದಿನಾಂಕ 15-01-2024ರಂದು ಕುತ್ತಾರಿನ ವೆಜಿನೇಷನ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿ ಮಾತನಾಡಿದ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ “ಬದುಕಿನುದ್ದಕ್ಕೂ ಪ್ರೀತಿಯನ್ನೇ ಹಂಚಿ ಸರ್ವ ಸಮಾಜದ ಒಲುಮೆ ಗಳಿಸಿದ ಅಮೃತ ಸೋಮೇಶ್ವರರು ಶ್ರೇಷ್ಠ ಮಾನವತಾವಾದಿ. ಕನ್ನಡ, ತುಳು, ಮಲೆಯಾಳ ಭಾಷೆಗಳ ಅಂತಸ್ಸತ್ವವನ್ನರಿತು ಸಾಹಿತ್ಯದ ಎಲ್ಲಾ ವಿಭಾಗಗಳಲ್ಲೂ ಕೈಯಾಡಿಸಿದ ಅವರು ಸಾರಸ್ವತ ಲೋಕದ ಹಿರಿಯಣ್ಣನಂತೆ ಬದುಕಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಅವರ ಜೀವಮಾನ ಸಾಧನೆಗಾಗಿ ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ನಡೆಸಿದ ‘ನಮ್ಮ ಅಬ್ಬಕ್ಕ ಅಮೃತ ಸ್ವಾತಂತ್ರ್ಯ ಸಂಭ್ರಮ – 2022’ ಕಾರ್ಯಕ್ರಮದಲ್ಲಿ ‘ಅಮೃತ ಸ್ವಾತಂತ್ರ್ಯ ಸಾಧನಾ ಪ್ರಶಸ್ತಿ’ ನೀಡಿದ ಧನ್ಯತೆ ಪ್ರತಿಷ್ಠಾನಕ್ಕಿದೆ. ನಾಡಿನ ಹಲವು ಬಗೆಯ ಮಾನ – ಸಮ್ಮಾನಗಳಿಗೆ ಪಾತ್ರರಾದ ಅಮೃತರಿಗೆ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ…

Read More

ಮಂಗಳೂರು : ಕಾಸರಗೋಡಿನ ಸಾಂಸ್ಕೃತಿಕ ಸಂಸ್ಥೆಯಾದ ‘ರಂಗ ಚಿನ್ನಾರಿ’ಯು ಮಂಗಳೂರಿನ ‘ರಂಗಸಂಗಾತಿ’ ಸಹಕಾರದಲ್ಲಿ ಆಯೋಜಿಸಿದ ಪ್ರೊ. ಬಿ.ಎ. ವಿವೇಕ ರೈ ಅವರೊಡನೆ ‘ಸರಳ ವಿರಳ ಸಲ್ಲಾಪ’ ಕಾರ್ಯಕ್ರಮವು ದಿನಾಂಕ 13-01-2024ರ ಶನಿವಾರದ ಸಂಜೆ ನಡೆಯಿತು. ಪ್ರೊ. ವಿವೇಕ ರೈಯವರ ಮನೆ ‘ಸುಯಿಲ್’ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರೈಯವರಿಗೆ ತೀರಾ ಆಪ್ತರಾದ ಸುಮಾರು 25 ಸಮಾನ ಮನಸ್ಕರೊಡನೆ ಎರಡು ಗಂಟೆಗಳ ಕಾಲ ನಡೆದ ಅನೌಪಚಾರಿಕ ಮಾತು ಸಂವಾದ ಇದಾಗಿತ್ತು. ಆರಂಭದಲ್ಲಿ ಕಾಸರಗೋಡು ಚಿನ್ನಾ ಕಾರ್ಯಕ್ರಮ ಆಯೋಜಿಸಲು ಕಾರಣ ಹಾಗೂ ಅದರ ರೂಪುರೇಷೆಗಳನ್ನು ತಿಳಿಸಿದರು. ಡಾ. ನಾ.ದಾ.ಶೆಟ್ಟಿ ಬಂದ ಎಲ್ಲರನ್ನೂ ಸಭೆಗೆ ಪರಿಚಯಿಸಿದರು. ವಿವೇಕ ರೈಯವರು ಬೇರೆ ಬೇರೆ ಕಾಲಘಟ್ಟದಲ್ಲಿ ಬರೆದ ನಾಲ್ಕು ಕವನಗಳನ್ನು ಡಾ. ಧನಂಜಯ ಕುಂಬ್ಳೆ, ಡಾ. ಮೀನಾಕ್ಷಿ ರಾಮಚಂದ್ರ, ಡಾ. ಅಕ್ಷಯ ಶೆಟ್ಟಿ ಹಾಗೂ ಡಾ. ನಾ.ದಾ. ಶೆಟ್ಟಿ ವಾಚನ ಮಾಡಿದರು. ಪ್ರತಿಯೊಂದು ಕವನ ರಚನೆಯ ಸಂದರ್ಭದ ವಿಶೇಷತೆಗಳನ್ನು ಪ್ರೊಫೆಸರ್ ವಿವೇಕ ರೈ ವಿವರಿಸಿದರು. ಪ್ರೊಫೆಸರ್ ಅವರ ಬಗ್ಗೆ…

Read More

ಚೆಟ್ಟೋಳಿರ ಶರತ್ ಸೋಮಣ್ಣ ಇವರು ಮಡಿಕೇರಿಯ ಕಗ್ಗೋಡ್ಲು ಗ್ರಾಮದ ಚೆಟ್ಟೋಳಿರ ಗಣಪತಿ ಮತ್ತು ಸ್ವಾತಿ ದಂಪತಿಯ ಪುತ್ರ. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಡಿಕೇರಿಯ ಸಂತ ಮೈಕಲರ ಪ್ರಾಥಮಿಕ ಶಾಲೆ ಮತ್ತು ಕೊಡ್ಲಿಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯಲ್ಲಿ ಮುಗಿಸಿದ್ದಾರೆ. ನಂತರ ಹಾಸನದ ಕೃಷ್ಣ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆಯುವ ಯತ್ನ ಮಾಡಿದ್ದಾರೆ. ಪ್ರವೃತ್ತಿಯಿಂದ ಸಮಾಜ ಸೇವೆ, ಲೇಖಕ, ಸಂಘಟಕರೆಂದು ಗುರುತಿಸಿಕೊಂಡಿರುವ ಇವರು ವೃತ್ತಿಯಿಂದ ವ್ಯವಸಾಯ ಮತ್ತು ವ್ಯವಹಾರವನ್ನು ಅಪ್ಪಿಕೊಂಡಿದ್ದಾರೆ. ಸಾರಸ್ವತ ಲೋಕಕ್ಕೆ ಇವರು ಕೊಡವ ಭಾಷೆಯಲ್ಲಿ ಒಡಂಗತೆರ ಒಡ್ಡ್ ಎಂಬ ಒಗಟುಗಳನ್ನು ಸಂಗ್ರಹಿಸಿರುವ ಕೃತಿಯನ್ನು ಕೊಡವಾಮೆರ ಕೊಂಡಾಟ ಕೂಟದ ಸಹಾಯದೊಂದಿಗೆ ಲೋಕಾರ್ಪಣೆ ಮಾಡಿದ್ದಾರೆ. ಕೊಡವ ಹಾಗೂ ಕನ್ನಡ ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇವರ ಅನೇಕ ಕಥೆ, ಕವನಗಳು, ಚುಟುಕು, ಹಾಡುಗಳು ಪ್ರಕಟಗೊಂಡಿವೆ. ಕೊಡವ ಕೂಟಾಳಿಯಡ ಕೂಟ ಸಂಘಟನೆಯಲ್ಲಿ ಎರಡನೇ ಅವಧಿಗೆ 5 ಕಾರ್ಯದರ್ಶಿಯಾಗಿ, ಜೂನಿಯರ್ ಚೇಂಬರ್ ಆಫ್ ಇಂಟರ್ನ್ಯಾಶನಲ್ ಇಂಡಿಯಾದ ಪೊನ್ನಂಪೇಟೆ ನಿಸರ್ಗ ಘಟಕದಲ್ಲಿ ಸತತ ಮೂರನೇ ಅವಧಿಗೆ ಕಾರ್ಯದರ್ಶಿಯಾಗಿ, ಕೊಡಗು…

Read More

ಬದಿಯಡ್ಕ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ಬಳ್ಳಂಬೆಟ್ಟು ಶ್ರೀ ಪರಿವಾರ ಸಹಿತ ಶಾಸ್ತಾರ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ಶುಭ ಸಂದರ್ಭ ದಿನಾಂಕ 14-01-2024ನೇ ರವಿವಾರ ಶ್ರೀ ದೇವಳದಲ್ಲಿ ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ವೀರಮಣಿ ಕಾಳಗ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ತಲ್ಪನಾಜೆ ವೆಂಕಟರಮಣ ಭಟ್ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪುಂಡಿಕಾಯಿ ರಾಜೇಂದ್ರ ಪ್ರಸಾದ್ ಮತ್ತು ಲಕ್ಷ್ಮೀಶ ಬೇಂದ್ರೋಡಿ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ.ಸಿ. ಅಡಿಗ (ಹನೂಮಂತ), ಶುಭಾ ಗಣೇಶ್ (ಶತ್ರುಘ್ನ), ಕಿಶೋರಿ ದುಗ್ಗಪ್ಪ ನಡುಗಲ್ಲು (ಈಶ್ವರ), ಹರಿಣಾಕ್ಷಿ ಜೆ. ಶೆಟ್ಟಿ (ವೀರಮಣಿ) ಮತ್ತು ಶಾರದಾ ಅರಸ್ (ಶ್ರೀ ರಾಮ) ಸಹಕರಿಸಿದರು. ಉದ್ಯಮಿ ಬದಿಯಡ್ಕ ಗಿರಿಧರ್ ಪೈ ಪ್ರಾಯೋಜಿಸಿ, ಕುಂಬ್ಳೆ ಶ್ರೀಧರ್ ರಾವ್ ಸಂಯೋಜಸಿದ ಕಾರ್ಯಕ್ರಮಕ್ಕೆ ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ದೇವಳದ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳು ಸಹಕರಿಸಿದರು.

Read More

ಪುತ್ತೂರು : ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ನಿಟ್ಟಿನಲ್ಲಿ ಪುತ್ತೂರಿನ ರೋಟರಿ ಬ್ಲಡ್ ಬ್ಯಾಂಕಿನ ಬಳಿ ಇರುವ ಅನುರಾಗ ವಠಾರದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ನುಡಿನಮನ ಕಾರ್ಯಕ್ರಮವು ದಿನಾಂಕ 13-01-2024ರಂದು ನಡೆಯಿತು. “ಅಮೃತ ಸೋಮೇಶ್ವರ ಅವರು ಬಹುಭಾಷಾ ಪಂಡಿತರು, ಅವರು ಮಲಯಾಳಂ, ಕನ್ನಡ, ತುಳು ಭಾಷೆಯಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯ, ಯಕ್ಷಗಾನ, ನಾಟಕ ರಂಗಗಳಲ್ಲಿ ಇವರ ಕೊಡುಗೆ ಅಪಾರ, ಎಳ್ಳಷ್ಟು ಕೋಪವಿಲ್ಲದ, ಸಾಧು ಧರ್ಮವನ್ನು ಅಳವಡಿಸಿಕೊಂಡ ಮಹಾನ್ ಚೇತನ ಅಮೃತ ಸೋಮೇಶ್ವರ ಅವರು” ಎಂದು ಹಿರಿಯ ಸಾಹಿತಿಗಳಾದ ಪ್ರೊ. ವಿ.ಬಿ. ಅರ್ತಿಕಜೆ ಅವರು ಅಮೃತ ಸೋಮೇಶ್ವರ ಅವರ ಜೊತೆಗಿನ ಒಡನಾಟವನ್ನು ಸ್ಮರಿಸುತ್ತಾ ಶ್ರದ್ಧಾಂಜಲಿ ಅರ್ಪಿಸಿದರು. ಹಿರಿಯ ಸಾಹಿತಿಗಳಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಜಯಾನಂದ ಪೆರಾಜೆ, ನಲ್ಕ ಗೋಪಾಲಕೃಷ್ಣ ಆಚಾರ್, ಭಾಸ್ಕರ್ ಬಾರ್ಯ, ಹರಿನಾರಾಯಣ ಮಾಡವು, ಡಾ.ಹೆಚ್.ಜಿ. ಶ್ರೀಧರ್, ಅಬೂಬಕ್ಕರ್ ಆರ್ಲಪದವು, ಪುತ್ತೂರು ಉಮೇಶ್ ನಾಯಕ್ ಮುಂತಾದವರು ಅಮೃತ…

Read More