Subscribe to Updates
Get the latest creative news from FooBar about art, design and business.
Author: roovari
ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿ ಎಪ್ರಿಲ್ 16 ಮತ್ತು 17ರಂದು ನಡೆದ ಎರಡು ದಿವಸಗಳ 13ನೇ ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆದು ಕಲಾಸಕ್ತರ ಮನ ಸೂರೆಗೊಂಡಿತು. ಅಖಿಲ ಕರ್ನಾಟಕ ಗಮಕ ಕಲಾ ಪರಿಷತ್ತು ರಾಜ್ಯ ಮತ್ತು ಬೆಳಗಾವಿ ಜಿಲ್ಲಾ ಘಟಕ ಹಾಗೂ ಶ್ರೀ ವಾಗ್ದೇವಿ ಗಮಕ ಸಂಸ್ಥೆಗಳ ಮೂಲಕ ನಡೆದ ಈ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಹಿರಿಯ ಗಮಕ ವಿದ್ವಾನ್ ಗಮಕ ಕಲಾಶ್ರೀ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಅವರು ವಹಿಸಿದ್ದರು. ದಿನಾಂಕ 16ರಂದು ರವಿವಾರ ಬೆಳಿಗ್ಗೆ 9.30ಕ್ಕೆ ಅಲಂಕೃತ ರಥದಲ್ಲಿ ಸರ್ವಾಧ್ಯಕ್ಷರನ್ನು ಕಾವ್ಯಗ್ರಂಥ ಮತ್ತು ಸರಸ್ವತಿ ವಿಗ್ರಹದೊಂದಿಗೆ ಬ್ಯಾಂಡ್ ವಾದನದಲ್ಲಿ ಮೆರವಣಿಗೆಯ ಮೂಲಕ ಸಂತಮೀರಾ ಆಂಗ್ಲ ಮಾಧ್ಯಮ ಶಾಲೆಯ ಆವರಣದವರೆಗೆ ಕರೆತರಲಾಯಿತು. ಸಭಾ ಕಾರ್ಯಕ್ರಮಕ್ಕೆ ಶ್ರೀಮತಿ ಪ್ರಸನ್ನ ಮತ್ತು ಶ್ರೀಮತಿ ಶಾಂತ ಇವರ ಪ್ರಾರ್ಥನೆ, ವಾಗ್ದೇವಿ ವಿದ್ಯಾರ್ಥಿನಿಯರಿಂದ ನಾಡಗೀತೆ ಮತ್ತು ಎಲ್.ಎಸ್. ಶಾಸ್ತ್ರಿ ಅವರು ಬರೆದ ಸ್ವಾಗತಗೀತೆಯೊಂದಿಗೆ ಚಾಲನೆ ನೀಡಲಾಯಿತು. ಸಮ್ಮೇಳನದ ಸಂಚಾಲಕರಾದ ಶ್ರೀಮತಿ ಭಾರತಿ ಭಟ್ಟ…
‘ಜೀವ ಮತ್ತು ಸದಾಶಿವರಲ್ಲಿ ಬೇಧವಿಲ್ಲ, ಭಾವವಿದೆ’ – ಪರಮಪೂಜ್ಯ ಎಡನೀರು ಶ್ರೀ ಪುತ್ತೂರು : ಪುತ್ತೂರು ಪರ್ಲಡ್ಕದ ‘ಅಗಸ್ತ್ಯ’ ನಿವಾಸದಲ್ಲಿ ಜರುಗಿದ ದಿ. ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯ ಪ್ರತಿಷ್ಠಾನದ ವಾರ್ಷಿಕ ಗೌರವ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಾ ಎಡನೀರು ಶ್ರೀ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಗಳವರು “ದೇಹವೇ ದೇವಾಲಯ. ಜೀವ ಮತ್ತು ಸದಾಶಿವರಲ್ಲಿ ಬೇಧವಿಲ್ಲ, ಭಾವವಿದೆ ಎಂಬ ಕಲ್ಪನೆಯನ್ನು ಹೊಂದಿ ನಮ್ಮ ಧರ್ಮವಿದೆ. ಇಂತಹ ಧಾರ್ಮಿಕ ಸಂದರ್ಭದಲ್ಲಿ ಸಾಧಕರನ್ನು ಗೌರವಿಸುವುದು ಮತ್ತು ಅವರ ಆಶೀರ್ವಾದ ಪಡೆಯುವುದು ಇವೆಲ್ಲಾ ಸನಾತನ ಧರ್ಮದ ಮುಖಗಳು. ಅವುಗಳ ಆಚರಣೆಯಲ್ಲಿದೆ ಬದುಕಿನ ಸುಭಗತೆ” ಎಂದರು. ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಅನುಪಮ ಸಾಧನೆಗೈದು ಆ ಕ್ಷೇತ್ರಕ್ಕೆ ಗೌರವ ತಂದ ಕರಾಯ ಲಕ್ಷ್ಮಣ ಶೆಟ್ಟಿಯವರಿಗೆ ದಿ. ವಿಷ್ಣುಮೂರ್ತಿ ನೂರಿತ್ತಾಯ ನೆನಪಿನ ಗೌರವವನ್ನು ಪ್ರದಾನ ಮಾಡಲಾಯಿತು. ಕಲಾಪೋಷಕ, ಆಯುರ್ವೇದ ವೈದ್ಯ ಡಾ. ಹರಿಕೃಷ್ಣ ಪಾಣಾಜೆಯವರು ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, “ಹಿರಿಯರ ಸ್ಮರಣೆಗಳಿಂದ ಬಾಂಧವ್ಯ ವೃದ್ಧಿಸುತ್ತದೆ. ಬದುಕಿಗದು…
ಉಡುಪಿ : ಭಾವನಾ ಪೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಯೋಜಿಸುವ ‘ಜನಪದ’ ದೇಶೀಯ ಕಲೆಗಳ ಸರಣಿ ಕಾರ್ಯಾಗಾರವು ಉಡುಪಿಯ ವೆಂಟನಾ ಪೌಂಡೇಶನ್ನ ಸಹಯೋಗದಲ್ಲಿ ದಿನಾಂಕ 27-04-2023 ಗುರುವಾರದಂದು ಪೌಂಡೇಶನ್ನ ಟ್ರಸ್ಟಿಗಳಾದ ಶಿಲ್ಪಾ ಭಟ್ರವರಿಂದ ಉದ್ಘಾಟನೆಗೊಂಡಿತು. “ವೆಂಟನಾ ಸಂಸ್ಥೆಯು ಹಲವಾರು ಜನೋಪಯೋಗೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತ ನಮ್ಮಲ್ಲಿನ ಕಲೆ, ಸಂಸ್ಕೃತಿ ಮತ್ತು ದೇಶೀಯ ಕಲಾಪ್ರಕಾರಗಳ ಪ್ರೋತ್ಸಾಹಕ್ಕೆ ಯಾವತ್ತೂ ಸಹಕಾರಿಯಾಗಲಿದೆ” ಎಂಬುದಾಗಿ ಹೇಳಿದರು. ಮುಖ್ಯ ಅತಿಥಿಗಳಾಗಿ ಬಹುಶ್ರುತ ವಿದ್ವಾಂಸರಾದ ನಾಡೋಜ ಕೆ.ಪಿ.ರಾವ್ರವರು “ಪಾರಂಪರಿಕ ಸೊಗಡನ್ನು ಜನಪದ ಕಲೆಗಳು ಕಳೆದುಕೊಳ್ಳುತ್ತ ಮಾರುಕಟ್ಟೆಯಲ್ಲಿನ ಸಿಂಥೆಟಿಕ್ ವರ್ಣಗಳ ಬಳಕೆ ಇತ್ಯಾದಿಯಾಗಿ ಕಲೆಯ ಜೀವಾಳವಾಗಿರುವ ಸಪಾಟಾದ ಮೇಲ್ಮೈಯ ಗುಣವನ್ನು ತೋರಿಸುವುದರ ಬದಲು ದುಂಡನೆಯದಾಗಿಸುವ ವಿಕೃತಿ ಮೆರೆಯುತ್ತಿರುವುದು ನಿಜಕ್ಕೂ ಶೋಚನೀಯ. ಆ ನಿಟ್ಟಿನಲ್ಲಿ ಈ ತೆರನಾದ ತರಬೇತಿ ಕಾರ್ಯಾಗಾರಗಳು ನಿಜ ಬಣ್ಣವನ್ನು ತೋರ್ಪಡಿಸುವುದರ ಜೊತೆಗೆ ಯಶಸ್ವಿಯಾಗಲಿ” ಎಂಬುದಾಗಿ ಅಭಿಪ್ರಾಯವಿತ್ತರು. ಉದ್ಯಮಿಗಳಾದ ಸುಗುಣ ಶಂಕರ್ ಸುವರ್ಣ, ಭಾವನಾ ಪ್ರತಿಷ್ಠಾನದ ನಿರ್ದೇಶಕರಾದ ಹಾವಂಜೆ ಮಂಜುನಾಥರಾವ್ರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾರ್ಯಾಗಾರದ ಸಂಯೋಜಕರಾದ…
ಮಂಗಳೂರು : ತನ್ನಿಸ್ತಾ ಬಾಗ್ಚಿ ಮತ್ತು ಸಾಂಸ್ಕೃತಿಕ ಸಂಘಟನೆ ಒಕ್ವೇವ್ ತಂಡದ ನೇತೃತ್ವದಲ್ಲಿ ‘ಬೆಂಗಾಲಿ ಕ್ರಿಯೇಟಿವ್ ಡ್ಯಾನ್ಸ್ ಕಾರ್ಯಾಗಾರ’ವು ಬೋಳೂರಿನಲ್ಲಿರುವ ಅಮೃತ ವಿದ್ಯಾಲಯದಲ್ಲಿ ಮೇ 3ರಿ೦ದ 12ರ ತನಕ ನಡೆಯಲಿದೆ. ಕಾರ್ಯಾಗಾರವು ಸಂಜೆ 5.30ರಿಂದ 7.30ರ ತನಕ ನಡೆಯಲಿದ್ದು, 9 ವರ್ಷ ಮೇಲ್ಪಟ್ಟ ಯಾರೂ ಕೂಡಾ ಈ ಡಾನ್ಸ್ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬಹುದೆಂದು ನೃತ್ಯ ನಿರ್ದೇಶಕಿ ತನ್ನಿಸ್ತಾ ಬಾಗ್ಚಿ ತಿಳಿಸಿದರು. ಈ ಕಾರ್ಯಾಗಾರವು ನೃತ್ಯ ಮತ್ತು ಹಾಡಿನ ಮೂಲಕ ಬಂಗಾಳದ ರೋಮಾಂಚಕ ಸಂಸ್ಕೃತಿಯ ಅನುಭವ ನೀಡಲಿದೆ. ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ “ಸ್ಟೈಲ್ ಆಫ್ ಉದಯ್ ಶಂಕರ್” ಅನ್ನು ಕೇಂದ್ರೀಕರಿಸಿ ಸೃಜನಶೀಲ ನೃತ್ಯದ ವಿವಿಧ ವ್ಯಾಯಾಮಗಳು ಮತ್ತು ತಂತ್ರಗಳನ್ನು ಕಲಿಯಲು ಅನನ್ಯ ಅವಕಾಶವಿದೆ. ಉದಯ್ ಶಂಕರ್ ಒಬ್ಬ ಭಾರತೀಯ ನರ್ತಕ ಮತ್ತು ನೃತ್ಯ ಸಂಯೋಜಕರಾಗಿದ್ದರು. ಅವರು ಭಾರತೀಯ ಶಾಸ್ತ್ರೀಯ ನೃತ್ಯಗಳನ್ನು ಸಂಯೋಜಿಸುವ ಭಾರತೀಯ ನೃತ್ಯದ ಹೊಸ ಶೈಲಿಯನ್ನು ಸೃಷ್ಟಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಕ್ರಿಯೇಟಿವ್ ಡ್ಯಾನ್ಸ್ ಕಾರ್ಯಾಗಾರದ ನೋಂದಣಿ ಸ್ಥಳದಲ್ಲಿ ಲಭ್ಯವಿದ್ದು, ಈ ಹತ್ತು ದಿನದ ಕಾರ್ಯಾಗಾರದ…
ಬೆಂಗಳೂರು : ಪೂರ್ಣಪ್ರಮತಿ ಪರಿಪೂರ್ಣ ಕಲಿಕಾ ತಾಣದ ಆಯೋಜನೆಯಲ್ಲಿ ಸಂಸ್ಕೃತ, ಸದಾಚಾರ ಹಾಗೂ ಇತಿಹಾಸ ಪುರಾಣ ವಿಷಯವನ್ನೊಳಗೊಂಡ 5 ದಿವಸಗಳ ‘ಸಂಸ್ಕೃತ – ಸಂಸ್ಕೃತಿ ಶಿಬಿರ’ವು ಬೆಂಗಳೂರಿನ ಜೆ.ಪಿ. ನಗರ, ಪೂರ್ಣಪ್ರಮತಿಯಲ್ಲಿ ದಿನಾಂಕ 28-04-2023ರಿಂದ 02-05-2023ರವರೆಗೆ ನಡೆಯಲಿದೆ. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲರಾದ ಶ್ರೀ ಸತ್ಯನಾರಾಯಣ ಆಚಾರ್ಯರು ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿರುವರು. ಶಿಬಿರದ ವಿವಿಧ ದಿನಗಳಲ್ಲಿ ಶಿಬಿರಾರ್ಥಿ ಹಾಗೂ ಪೋಷಕರ ಜತೆ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಜಯನಗರದ ಶ್ರೀ ರಾಘವೇಂದ್ರ ಮಠದ ವ್ಯವಸ್ಥಾಪಕರಾದ ಶ್ರೀ ವಾದೀಂದ್ರಚಾರ್ಯ, ಪೂರ್ಣಪ್ರಮತಿಯ ಹಿರಿಯ ವಿದ್ವಾಂಸರಾದ ಶ್ರೀ ಧನಂಜಯಾಚಾರ್ಯ, ಜಯನಗರದ ರಾಗಿಗುಡ್ಡ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಶ್ರೀ ರಾಮರಾಜು ಹಾಗೂ ಲೇಖಕರು, ಖ್ಯಾತ ಪ್ರೇರಕ ಭಾಷಣಕಾರರಾದ ಶ್ರೀ ಋತುಪರ್ಣ ಶರ್ಮ ಭಾಗವಹಿಸಲಿರುವರು. ಶಿಬಿರವು ಸಂಪೂರ್ಣ ಉಚಿತವಾಗಿದ್ದು, ಪ್ರಾತಃ ಕಲಾ 10ರಿಂದ 12-30ರವರೆಗೆ ನಡೆಯಲಿದೆ. ಹೆಚ್ಚಿನ ವಿವರಣೆಗಾಗಿ : 7259040609, 8749031942
ಬೆಂಗಳೂರು : ‘ಈ ಹೊತ್ತಿಗೆ ಟ್ರಸ್ಟ್’ ಇದರ ದಶಮಾನೋತ್ಸವ ಸಂಭ್ರಮದ ಅಂಗವಾಗಿ ‘ಕಪ್ಪಣ್ಣ ಅಂಗಳ’ ಇವರ ಸಹಯೋಗದೊಂದಿಗೆ ರವೀಂದ್ರನಾಥ್ ಟ್ಯಾಗೋರರ ಕೆಲವು ಕತೆಗಳನ್ನಾಧರಿಸಿದ ರೂಪಕ “ಅವಳ ಕಾಗದ’ದ ಪ್ರದರ್ಶನವು ದಿನಾಂಕ 01-05-2023 ಸೋಮವಾರದಂದು ಬೆಂಗಳೂರಿನ ಜೆ.ಪಿ. ನಗರದ, ಕಪ್ಪಣ್ಣ ಅಂಗಳದಲ್ಲಿ ಸಂಜೆ 4ಕ್ಕೆ ಮತ್ತು ಇಳಿ ಸಂಜೆ 6-30ಕ್ಕೆ ನಡೆಯಲಿದೆ. ಲೇಖಕಿ, ಅಂಕಣಕಾರ್ತಿ ಸುಧಾ ಆಡುಕಳ ಬರೆದ ಈ ರೂಪಕವನ್ನು ಶ್ವೇತಾ ಹಾಸನ ವಿನ್ಯಾಸ ಮಾಡಿದ್ದು, ಬೆಳಕಿನ ವಿನ್ಯಾಸವನ್ನು ಶ್ರೀನಿವಾಸ್ ಜಿ. ಕಪ್ಪಣ್ಣ ಮಾಡಲಿದ್ದಾರೆ. ಡಾ. ಶ್ರೀಪಾದ ಭಟ್ ಇವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಮೂಡಿ ಬರುವ ಈ ರೂಪಕವನ್ನು ಅಹಲ್ಯಾ ಬಲ್ಲಾಳ್ ಪ್ರಸ್ತುತಪಡಿಸಲಿದ್ದಾರೆ. ‘ಅವಳ ಕಾಗದ’ ವಿವಾಹಿತ ಮಹಿಳೆಯೊಬ್ಬಳು ಯಾತ್ರೆಗೆಂದು ಹೋಗಿ ಅಲ್ಲಿಂದಲೇ ತನ್ನ ಪತಿಗೆ ಬರೆಯುವ ಪತ್ರರೂಪದ ಕತೆಯ ಮೂಲಕ ಟಾಗೋರರು ಇಂದಿಗೆ ನೂರು ವರ್ಷಗಳ ಹಿಂದೆಯೇ ಸ್ತ್ರೀಯರ ಒಳಲೋಕಕ್ಕೆ ಅನಾಧಾರಣವಾದ ಪ್ರವೇಶ ನೀಡುತ್ತಾರೆ. ಶ್ರೀಮಂತರ ಮನೆಯ ಎರಡನೆಯ ಸೊಸೆಯಾಗಿ ಅವಳ ಜೀವನ ಪಯಣ ಯಾವ ದಾರಿಯಲ್ಲಿ ಸಾಗಿತು?…
ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕದಿಂದ ನೀಡುವ ‘ಯಕ್ಷಪ್ರೇಮಿ ಶ್ರೀ ನಾರಾಯಣ ಸ್ಮರಣಾರ್ಥ ದತ್ತಿ ಪುರಸ್ಕಾರ’ವನ್ನು ಈ ಬಾರಿ ಉಡುಪಿಯ ಹಿರಿಯ ಯಕ್ಷಗಾನ ಕಲಾವಿದರಾದ ದೇವದಾಸ್ ರಾವ್ ಕೂಡ್ಲಿ ಅವರಿಗೆ ನೀಡಲಾಗುವುದು. ದೇವದಾಸ್ ಅವರು ಯಕ್ಷಗಾನ ಕೇಂದ್ರ ಉಡುಪಿಯ ಗುರುಗಳಾಗಿ ಸೇವೆ ಸಲ್ಲಿಸಿದ್ದು, ದೇಶ ವಿದೇಶಗಳಲ್ಲಿ ಹಲವು ಯಕ್ಷಗಾನ ಕಾರ್ಯಕ್ರಮಗಳಲ್ಲಿ ಮದ್ದಲೆ ವಾದಕರಾಗಿ, ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೇ 5ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನ ದಿನಾಚರಣೆಯ ಸಂದರ್ಭದಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಮಿನಿ ಅಡಿಟೋರಿಯಂನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು.
ಕರಾವಳಿಯ ಪ್ರಸಿದ್ಧ ಸ್ಥಾನವನ್ನು ಪಡೆದ ಕಲೆ “ಯಕ್ಷಗಾನ”. ಕರ್ನಾಟಕದ ಗಂಡು ಕಲೆಯಾಗಿರುವ ಯಕ್ಷಗಾನ ಪಾರ್ತಿಸುಬ್ಬರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸುತ್ತಿದೆ. ಇಂತಹ ಕಲೆಯಲ್ಲಿ ರಾರಾಜಿಸುತ್ತಿರುವ ಕಲಾವಿದ ಪಡುಕರೆ ಮಂಜುನಾಥ ಭಂಡಾರಿ. ಎಪ್ರಿಲ್ 27, 1986ರಂದು ಕೆ.ಸಂಜೀವ ಭಂಡಾರಿ ಹಾಗೂ ನಾಗವೇಣಿ ದಂಪತಿಗಳ ಮಗನಾಗಿ ಜನನ. ಪಿ.ಯು.ಸಿ ವರೆಗೆ ವಿದ್ಯಾಭ್ಯಾಸ. ಚಿಕ್ಕಪ್ಪ ಮಹಾಬಲ ಭಂಡಾರಿ ಕೋಡಿ ಅವರಿಂದ ಪ್ರೇರಣೆಗೊಂಡು ಮಂಜುನಾಥ ಅವರು ಯಕ್ಷಗಾನ ರಂಗಕ್ಕೆ ಬಂದರು. ಎಂ.ಎಚ್ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರ ಯಕ್ಷಗಾನದ ಗುರುಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:- ಪದ್ಯಗಳ ಕಂಠಪಾಠ, ಅರ್ಥಗಾರಿಕೆ ಹಾಗೂ ಪ್ರಸಂಗದ ಚೌಕಟ್ಟು ಏನು, ಎಷ್ಟು ಎಂದು ತಿಳಿದು ಪಾತ್ರವನ್ನು ರಂಗದ ಮೇಲೆ ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಭಂಡಾರಿಯವರು. ವೀರಮಣಿ ಕಾಳಗ, ಭೀಷ್ಮೋತ್ಪತ್ತಿ, ಕಂಸವಧೆ, ತಾಮ್ರಧ್ವಜ ಕಾಳಗ ಇವರ ನೆಚ್ಚಿನ ಪ್ರಸಂಗಗಳು. ಹನುಮಂತ, ಕಂಸ, ಶಂತನು, ಮಯೂರಧ್ವಜ ಇವರ ನೆಚ್ಚಿನ ವೇಷಗಳು. ಮೀನಾಕ್ಷಿ ಕಲ್ಯಾಣದ ಈಶ್ವರ,…
ಬೆಂಗಳೂರು: ಕರ್ನಾಟಕ ಪ್ರಕಾಶಕರ ಸಂಘ ದಿನಾಂಕ 23-04-2023 ಭಾನುವಾರ ನಗರದ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆ ಹಾಗೂ ಪುಸ್ತಕ ಪರಿಚಾರಕ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ “ಆಂಗ್ಲ ಭಾಷೆ ಕಲಿತರಷ್ಟೇ ಮಕ್ಕಳು ಉದ್ಧಾರ ಆಗುತ್ತಾರೆಂಬ ಮನಸ್ಥಿತಿಯಿಂದ ಪಾಲಕರು ಹೊರಬರದಿದ್ದರೆ ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಯಾವುದೇ ಸಮಾಜ ತನ್ನ ಸಾಂಸ್ಕೃತಿಕ ನೆಲೆಗಟ್ಟಿನ ಮುಖಾಂತರ ವಿಕಸನ ಕಾಣುತ್ತದೆಯೇ ಹೊರತು ತಾನೇ ತಾನಾಗಿ ಅಭಿವೃದ್ಧಿಯಾಗುವುದಿಲ್ಲ. ಸಾಹಿತ್ಯ, ಪುಸ್ತಕ, ರಂಗಭೂಮಿಗೆ ಎಲ್ಲಿ ಜಾಗವಿಲ್ಲವೋ ಅಲ್ಲಿ ಸಂಸ್ಕೃತಿಯ ಒಟ್ಟು ರೂಪ ನಗಣ್ಯವಾಗಲಿದೆ. ಓದುಗ ಹಾಗೂ ಪ್ರಕಾಶಕರಿಂದ ಮಾತ್ರ ಅಕ್ಷರ ಸಂಸ್ಕೃತಿ ಬೆಳೆಸಲು ಸಾಧ್ಯವಿಲ್ಲ. ಇನ್ನುಳಿದ ವ್ಯವಸ್ಥೆಗಳ ಮೇಲೂ ಜವಾಬ್ದಾರಿ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸರ್ಕಾರವೇ ಸಹಾಯ ಮಾಡಬಹುದಾದ ಹಲವು ಆಯಾಮಗಳಿದ್ದರೂ ಸಮರ್ಪಕ ರೀತಿಯಲ್ಲಿ ಅನುಷ್ಠಾನವಾಗುತ್ತಿಲ್ಲ” ಎಂದರು. ಸಾಗರದ ‘ರವೀಂದ್ರ ಪುಸ್ತಕಾಲಯ’ದ ಪ್ರಕಾಶಕ ವೈ.ಎ. ದಂತಿ ಅವರಿಗೆ ‘ಎಂ.ಗೋಪಾಲಕೃಷ್ಣ ಅಡಿಗ ಪುಸ್ತಕ…
ಮಂಗಳೂರು: ಭರತಾಂಜಲಿ ಕೊಟ್ಟಾರ ಮಂಗಳೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶ್ರೀ ಕ್ಷೇತ್ರ ಗಣೇಶಪುರ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭ ಹಮ್ಮಿಕೊಂಡ, ‘ನೃತ್ಯಾರ್ಪಣಂ’ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಧಾರ್ಮಿಕ ಚಿಂತಕ ಶ್ರೀ ಸುಧಾಕರ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಭರತನಾಟ್ಯವು ಭಾರತದ ಅತ್ಯಂತ ಪುರಾತನ ಶಾಸ್ತ್ರೀಯ ಪ್ರಕಾರ. ಅನೇಕ ಇತರ ಶಾಸ್ತ್ರೀಯ ನೃತ್ಯ ಪ್ರಕಾರಗಳ ತಾಯಿ ಎಂದು ಪರಿಗಣಿಸಲಾಗಿದೆ. ನಾಟ್ಯಕಲೆಯ ಸತತ ಅಭ್ಯಾಸದಿಂದ ಮನುಷ್ಯನ ಚಿತ್ತ ಶುದ್ದಿಯಾಗಿ ದೇಹ ಸೌಂದರ್ಯ ರೂಪಗೊಳ್ಳುವುದು ಇಂತಹ ಶ್ರೇಷ್ಠವಾದ ನಾಟ್ಯಕಲೆಯನ್ನು ಆರಾಧನಾ ಭಾವದಿಂದ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಮಹತ್ತರ ಕೆಲಸ ನಮ್ಮಿಂದಾಗಬೇಕು” ಎಂದರು. ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀ ಧರ್ಮೇಂದ್ರ ಗಣೇಶಪುರ “ಭರತನಾಟ್ಯ ಕಲೆಯು ಮನುಷ್ಯನಿಗೆ ಉತ್ತಮ ಮಾರ್ಗ ತೋರಿಸಲು ಸಹಾಯವಾಗುತ್ತದೆ” ಎಂದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀ ಸುಕುಮಾರ್ ಭಂಡಾರಿ, ಶ್ರೀ ವಾದಿರಾಜ ರಾವ್, ಭರತಾಂಜಲಿಯ ನೃತ್ಯಗುರು ವಿದುಷಿ ಪ್ರತಿಮಾ ಶ್ರೀಧರ್ ಮತ್ತು ಶ್ರೀಯುತ ಮಂಜುನಾಥ…