Author: roovari

13-03-2023, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 2021 ನೇ ಸಾಲಿನ ವಿವಿಧ ಕೃತಿಗಳಿಗೆ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು. 49 ವಿಭಾಗಗಳಿಗೆ ಆಯ್ಕೆಯಾದ 53 ಕೃತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಳ್ಯದ ಹಿರಿಯ ಸಾಹಿತಿ ಡಾ. ಚಂದ್ರಶೇಖರ್ ದಾಮ್ಲೆ, ಸಾಹಿತಿ ಡಾ. ದೀಪಾ ಫಡ್ಕೆ, ಲೇಖಕಿ ಸ್ಮಿತಾ ಅಮೃತರಾಜ್, ಡಾ. ಮುರಳಿಮೋಹನ್ ಚೂಂತಾರು, ಬಿ. ಸತ್ಯವತಿ ಎಸ್.ಭಟ್ ಕೊಳಚಪ್ಪು, ರಾಜಶ್ರೀ ರೈ ಪೆರ್ಲ, ಡಾ. ಎಚ್. ಜೆ. ಶ್ರೀಧರ್ ಆ.ಬ್ರ.ಸಂತೋಷ ಕುಮಾರ್, ಶಾಂತಿನಾಥ ಕೆ.ಹೋತಪೇತಿ ಇವರ ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿವೆ. ಮಾರ್ಚ್ 12 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಶ್ರೀ ಕೃಷ್ಣ ರಾಜ ಪರಿಷತ್ತಿನ ಮಂದಿರದಲ್ಲಿ ಸಮಾರಂಭವು ನಡೆಯಿತು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ್ ಜೋಶಿ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮವನ್ನು  ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ನಿರಂಜನ ವಾನಳ್ಳಿ ಉದ್ಘಾಟಿಸಿದರು.ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಯರಾಂ ರಾಯಪುರ ಇವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ…

Read More

13-03-2023,ಮಂಗಳೂರು: ಜನಪದರು ಸಾಂಸ್ಕೃತಿಕ ವೇದಿಕೆ ಪ್ರಸ್ತುತ ಪಡಿಸುವ,ಮುದೇನೂರು ಸಂಗಣ್ಣ ರಚನೆಯ ‘ಸೂಳೆ ಸಂಕವ್ವ’ನಾಟಕವು ಇದೇ ಬರುವ 14-03-2023 ರಂದು ಬೆಂಗಳೂರಿನ ರಂಗಶಂಕರದಲ್ಲಿ ಪ್ರದೇಶನ ಗೊಳ್ಳಲಿದೆ ನಾಟಕದ ಬಗ್ಗೆ ಮುದೇನೂರು, ಸಂಘಣ್ಣನವರ ಅಪರೂಪದ ನಾಟಕ ಸೂಳೆ ಸಂಕಪ್ಪ 12 ನೇ ಶತಮಾನದ ಬಸವ ಕ್ರಾಂತಿಯ ಸಮಸಮಾಜ , ಅಂಗತಾರತಮ್ಯ ,ಮೇಲು ಕೀಳುಗಳ ವಿರುದ್ಧ ದನಿ ಎತ್ತುವ ಅಂಶವುಳ್ಳ ಕಲ್ಯಾಣ ನಗರಿಯ ವೇಶ್ಯೆ ಒಬ್ಬಳು ಆನುಭವ ಮಂಟಪದ ಅರಿವಿನಿಂದ ಹಂಗುಗಿತ್ತಿಯ ಬದುಕನ್ನು ದಿಕ್ಕರಿಸಿ ಮುಖ್ಯ ವಾಹಿನಿಗೆ ಬಂದು ಗೌರವಯುತ ಜೀವನ ನಡೆಸುವ ಪುರಷ ಸಮಾಜದ ದೌರ್ಜನ್ಯಗಳನ್ನು ವಿರೋಧಿಸುವ ಶರಣೆಯಕಥೆ ನಿರ್ದೇಶಕ ರಾಮಕೃಷ್ಣ ಬೆಳತ್ತೂರು ರಾಮಕೃಷ್ಣ ಬೆಳತ್ತೂರು ಕನ್ನಡ ರಂಗ ಭೂಮಿಯ ಯುವ ಉತ್ಸಾಹಿ , ರಂಗಕರ್ಮಿಗಳು, ಕಲೆಯೇ ಜೀವನ ಕಾಯಕವಾಗಿಸಿಕೊಂಡವರು ಔಪಚಾರಿಕ ರಂಗ ಶಿಕ್ಷಣ ಪಡೆದರೂ ಅನುಭವದ ಮೂಲಕವೇ ಶ್ರೇಷ್ಟತೆ ಸಾಧಿಸಿದ್ದಾರೆ, ಕಾಡುಗೋಡಿ ಬೆಳತ್ತೂರಿನ ಇವರು ಎರಡು ದಶಕಗಳಿಗಿಂತ ಹೆಚ್ಚುಕಾಲ ರಂಗ ಭೂಮಿಯಲ್ಲಿ ತೊಡಗಿದ್ದಾರೆ.ಖ್ಯಾತ ರಂಗಕರ್ಮಿ ಮೇಕಪ್ ನಾಣಿ. ಅವರ ಮೆಚ್ಚಿನ ಶಿಷ್ಯರೂ ಹೌದು…

Read More

ಲಾಡ್ಜ್ ಪ್ರೊಫೆಷನಲ್ ಗ್ರೂಪ್ ಇವರ ವತಿಯಿಂದ ಫೆ.19ರಂದು ಜೆ.ಪಿ. ನಗರ 7ನೇ ಹಂತದಲ್ಲಿ ಭಕ್ತಿ ಗಂಧರ್ವ ವಿದ್ವಾನ್ ಎಂ.ಎಸ್. ದೀಪಕ್ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಯನ್ನು ನಡೆಸಲಾಯಿತು. ಪಕ್ಕ ವಾದ್ಯದಲ್ಲಿ ಪಿಟೀಲು ವಿದ್ವಾನ್ ಶಂಕರ್ ರಾಜನ್ ಹಾಗು ಮೃದಂಗ ವಿದ್ವಾನ್ ಫಣೀಂದ್ರ ಭಾಸ್ಕರ್ ಇವರು ವಾದ್ಯ ಸಹಕಾರ ನೀಡಿದರು. ಈ ಕಚೇರಿಯನ್ನು ಬಹಳ ವಿಭಿನ್ನವಾಗಿ ಆಯೋಜಿಸಲಾಗಿತ್ತು. ಹಾಡುಗಾರಿಕೆಯೊಂದಿಗೆ ಸಂವಾದ ಹಾಗೂ ಪ್ರಶ್ನೋತ್ತರಗಳಿಂದ ಕೂಡಿದ ಕಾರಣ ಸಭಿಕರಿಗೆ ಗಾನ ರಸದೌತಣದ ಜೊತೆಗೆ ಸಂಗೀತದ ಜ್ಞಾನಾರ್ಜನೆಯು ನಡೆಯಿತು. ವಿದ್ವಾನ್ ದೀಪಕ್ ರವರು ಬಹಳ ಸೊಗಸಾಗಿ ಯುಗ ಯುಗಗಳಿಂದಲೂ ಸಂಗೀತಕ್ಕೆ ಇರುವ ಮಹತ್ವ ಹಾಗೂ ಅದು ಮೂಡಿಸಿದ ಛಾಪಿನ ಬಗ್ಗೆ ಮಾಹಿತಿ ನೀಡಿ ಓಂಕಾರವೇ ಸಂಗೀತದ ಮೂಲ ಎಂದು ವಿವರಿಸುತ್ತಾ, ಭರತನ ನಾಟ್ಯ ಶಾಸ್ತ್ರ ಈಗಲೂ ಹೇಗೆ ಪ್ರಸ್ತುತ ಎಂಬದನ್ನು ತಿಳಿಸಿದರು. ಮಾತೇ ಸರಸ್ವತಿಯಿಂದ ಆದಿಯಾಗಿ, ಸತ್ಯ ಯುಗದಲ್ಲಿ ನಾರದರು-ಗಂಧರ್ವ-ಕಿನ್ನರರು ಸಂಗೀತದ ಜ್ಞಾನ ಪಸರಿಸಿದರೆ, ತ್ರೇತಾಯುಗದಲ್ಲಿ ರಾಮ ಲಕ್ಷ್ಮಣ ಹನುಮರ ಮೈತ್ರಿಗೆ ಕಾರಣವೇ ಸಂಗೀತ.…

Read More

13 ಮಾರ್ಚ್ 2023, ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ರಾಣಿ ಅಬ್ಬಕ್ಕ ಅಧ್ಯಯನ ಪೀಠ ಹಮ್ಮಿಕೊಂಡ ಸರಣಿ ಉಪನ್ಯಾಸ ಕಾರ್ಯಕ್ರಮವು ಸುರತ್ಕಲ್ ನ ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ಬಾಲಚಂದ್ರ ಕೆ. ಇವರ ಅಧ್ಯಕ್ಷತೆಯಲ್ಲಿ ದಿನಾಂಕ 11-03-2023ರಂದು ನಡೆಯಿತು. “ಮಹಿಳೆಯರಿಗಿಂತ ಮಿಗಿಲಾದ ಶಕ್ತಿ ಇನ್ನೊಂದಿಲ್ಲ. ಪುರುಷನಿಗೆ ಪ್ರತಿಯೊಂದು ಸಂದರ್ಭ ಆಧಾರವಾಗಿ ನಿಂತವರು ಮಹಿಳೆಯರು, ಮಾತೆಯರು ಜಗತ್ತಿನ ಸರ್ವಶಕ್ತಿಯಾಗಿದ್ದಾರೆ. ರಾಣಿ ಅಬ್ಬಕ್ಷ ಸ್ವಾಭಿಮಾನಕ್ಕೆ ಹೆಸರಾದ ಮಹಿಳೆ, ಪ್ರಥಮ ಸ್ವಾತಂತ್ರ ಹೋರಾಟಗಾರ್ತಿಯಾಗಿ ತುಳುನಾಡಿನ ಮಣ್ಣಿಗೆ ಕೀರ್ತಿ ತಂದವರು” ಎಂದು ಬಾಲಚಂದ್ರ ಕೆ. ಅಭಿಪ್ರಾಯಪಟ್ಟರು. “ಸ್ವಾಭಿಮಾನದ ಸಂಕೇತ ರಾಣಿ ಅಬ್ಬಕ್ಕ” ವಿಷಯದ ಕುರಿತು ಮಾತನಾಡಿದ ಗೋವಿಂದದಾಸ ಕಾಲೇಜಿನ ಉಪನ್ಯಾಸಕಿ ಅಕ್ಷತಾ ನವೀನ್ ಶೆಟ್ಟಿ, ಮಾತೃ ಮೂಲ (ಅಳಿಯಕಟ್ಟು) ಕುಟುಂಬ ಪದ್ಧತಿಯ ತುಳುನಾಡಿನ ಬದುಕಿನಲ್ಲಿ ಪುರುಷ ಪಧಾನ ವ್ಯವಸ್ಥೆಯನ್ನು ಮೆಟ್ಟಿನಿಂತು ವಿದೇಶಿಯರೊಂದಿಗೆ ಹೋರಾಡಿದ ವೀರ ವನಿತೆ ಅಬ್ಬಕ್ಕ ಎಂದರು. ಶ್ರೀ ಬಾಲಚಂದ್ರ ಕೆ., ಉಪನ್ಯಾಸಕಿ ಶ್ರೀಮತಿ ಅಕ್ಷತಾ ನವೀನ್ ಶೆಟ್ಟಿ, ಗೋವಿಂದದಾಸ ಪದವಿಪೂರ್ವ ಕಾಲೇಜಿನ ಆಂಗ್ಲ ಉಪನ್ಯಾಸಕಿ ಶ್ರೀಮತಿ…

Read More

13-03-2023,ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಉಡುಪಿ ತಾಲೂಕು ಘಟಕ ದಿಂದ ಅಮೇರಿಕಾ ಕನ್ನಡ ಸಾಹಿತ್ಯ ರಂಗ ಸಂಸ್ಥೆಯ ಶಶಿಕಲಾ ಚಂದ್ರಶೇಖರ್ ಅವರೊಂದಿಗೆ ಮಾತುಕತೆ ಕಾರ್ಯಕ್ರಮವು ಉಡುಪಿಯ ಕೊಡವೂರಿನ ಭಾಮ ಆರ್ಟ್ ಗ್ಯಾಲರಿಯಲ್ಲಿ ನಡೆಯಿತು . ಶಶಿಕಲಾ ಚಂದ್ರಶೇಖರ್ ಮಾತನಾಡಿ ಕಲೆ, ಸಂಸ್ಕೃತಿ ಮತ್ತು ಕನ್ನಡ ಸಾಹಿತ್ಯದ ಕುರಿತಾದ ಹಲವು ಕಾರ್ಯಕ್ರಮಗಳು ನಿರಂತರವಾಗಿ ಅಮೆರಿಕದಲ್ಲಿ ನಡೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಕನ್ನಡ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ ಎಂದರು. ಪ್ರಸಿದ್ಧ ಸಾಹಿತಿ ವೈದೇಹಿಯವರು ತಾವು ಅಮೆರಿಕಕ್ಕೆ ಹೋದ ಸಂದರ್ಭದಲ್ಲಿ ಸಾಹಿತ್ಯ ಕಾರ್ಯಕ್ರಮದ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮವನ್ನು ಕವಯಿತ್ರಿ ಜ್ಯೋತಿ ಮಹದೇವ್ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಾಹಿತಿ ಶಶಿಕಲಾ ಚಂದ್ರಶೇಖರ್ ರವರನ್ನು ಕಸಾಪ ವತಿಯಿಂದ ಗೌರವಿಸಿ, ಅಭಿನಂದಿಸಲಾಯಿತು

Read More

13 ಮಾರ್ಚ್ 2023, ಮಂಗಳೂರು: ನ್ಯಾಯವಾದಿ, ಕವಯತ್ರಿ, ಮಕ್ಕಳ ಸಾಹಿತಿ ಪರಿಮಳ ರಾವ್ ಕೆ. ಸಾರಥ್ಯದ “ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ”ದ ಉದ್ಘಾಟನೆಯ ಅಂಗವಾಗಿ “ಕಥಾಲಾಪ – ಚಿಣ್ಣರ ಚಿಲಿಪಿಲಿ” ಕಾರ್ಯಕ್ರಮ ಮಂಗಳೂರಿನ ಕದ್ರಿ ಬಾಲಭವನದಲ್ಲಿ ದಿನಾಂಕ 12-03-2023ರಂದು ಅತ್ಯಂತ ಸರಳವಾಗಿ ನೆರವೇರಿತು. ಕಾರ್ಯಕ್ರಮ ಉದ್ಘಾಟಿಸಿದ ಎನ್.ಎಸ್.ಸಿ.ಡಿ.ಎಫ್. ಅಧ್ಯಕ್ಷ ಗಂಗಾಧರ್ ಗಾಂಧಿ ಮಾತನಾಡಿ “ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಇಂದು ಅಧಿಕೃತವಾಗಿ ಅನಾವರಣಗೊಂಡಿದೆ. ದೇಶದಲ್ಲಿ ಲಕ್ಷಾಂತರ ಸ್ವಯಂ ಸೇವಾ ಸಂಸ್ಥೆಗಳು ಕರ್ತವ್ಯ ನಿರ್ವಹಿಸುತ್ತಿವೆ, ಆದರೆ ಸರಕಾರ ತಲುಪಲು ಸಾಧ್ಯವಾಗದ ಪ್ರದೇಶದಲ್ಲಿಯೂ ತನ್ನ ಕಾರ್ಯಚಟುವಟಿಕೆ ಮುಂದುವರಿಸುತ್ತಿದೆ. ಈ ಕಾರಣದಿಂದಾಗಿ ಭಾರತದ ಅನೇಕ ಹಳ್ಳಿಗಳು ಅಭಿವೃದ್ಧಿಗೊಂಡಿವೆ. ಇದು ಸ್ವಯಂ ಸೇವಾ ಸಂಸ್ಥೆಯ ಕಾರ್ಯವೈಖರಿ, ಸಮಾಜದ ಎಲ್ಲಾ ಸಮುದಾಯದ ಆಶಯಗಳಿಗೆ ಪ್ರತಿಷ್ಠಾನ ಸ್ಪಂದಿಸುವಂತಾಗಬೇಕು. ಆಗಲೇ “ಅನಾವರಣ”ದ ಸಮಾಜಮುಖಿ ಉದ್ದೇಶಗಳು ಈಡೇರಲು ಸಾಧ್ಯ” ಎಂದು ಮಾರ್ಮಿಕವಾಗಿ ಹೇಳಿದರು. ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಸ್ಥಾನ ಅಧ್ಯೆಕ್ಷೆ, ನ್ಯಾಯವಾದಿ ಪರಿಮಳ ರಾವ್ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.…

Read More

13-03-2023, ಉಡುಪಿ: ಅಂದು ಆ ಪುಟ್ಟ ಬಾಲೆ ತನ್ನ ಅಪ್ಪ ಅಮ್ಮ ರಂಗ ವೇದಿಕೆಯಲ್ಲಿ ಹೆಜ್ಜೆ ಹಾಕುತ್ತಿರಲು ಪರದೆಯ ಬದಿಯಲ್ಲಿ ನಿಂತು ತನ್ನ ಕಾಲ್ಗೆಜ್ಜೆ ಸದ್ದು ಮಾಡುತ್ತ ಎಲ್ಲರ ಗಮನ ಸೆಳೆಯುತ್ತಿದ್ದರೆ ಇಂದು ಅದೇ ಬಾಲೆ ಯುವ ಪೀಳಿಗೆಯ ಸಮೂಹವನ್ನೇ ರಂಗ ಭೂಮಿಯತ್ತ ಸೆಳೆದು ನಿಲ್ಲಿಸಲು ಕೈಗೊಂಡ ಧೃಡತೆಯ ಹೆಜ್ಜೆಯ ಸದ್ದು ಅಪಾರ ರಂಗಾಸಕ್ತರ ಹೃದಯ ಕದ್ದಿದೆ ಮನ ಮುಟ್ಟಿದೆ. ಎ.ಎಸ್ ಮೂರ್ತಿ ಕಮಲಾ ಮೂರ್ತಿಯವರ ಮುದ್ದಿನ ಮಗಳು ಶೋಭಾ ನಾಲ್ಕನೇ ತರಗತಿಯಲ್ಲಿ ಕುರ್ತುಕೋಟಿಯವರ “ಆ ಮನಿ ” ಮಕ್ಕಳ ನಾಟಕದ ಮೂಲಕ ನಾಟಕರಂಗ ಪಯಣಕ್ಕೆ ನಾಂದಿ ಹಾಡಿದರೆ ತಂದೆಯವರ ಚಿತ್ರಾ ನಾಟಕ ತಂಡ ಅಭಿನಯದಲ್ಲಿ ಪ್ರಬುದ್ಧತೆಯನ್ನು ತಂದುಕೊಟ್ಟಿತ್ತು. ಆವತ್ತು ಬೀದಿನಾಟಕಗಳು ಸಮಾಜಮುಖಿಯಾಗಿ ಬೆಳೆಯಲು ಆ ಕಂದಮ್ಮನಿಗೆ ಸಹಕರಿಸಿದ್ದರೆ ಬಾಲ್ಯದ ಆ ದಿನದಲ್ಲಿ ಕುವೆಂಪುರವರ “ಕರಿಸಿದ್ದ ” ನಾಟಕಕ್ಕೆ ಅವರ ಮನೆ ಮುಂದೆಯೇ ಹೆಜ್ಜೆ ಹಾಕಿದ ಸವಿ ಸದಾ ಮಾಸದ ನೆನಪಾಗಿ ಉಳಿದಿತ್ತು. ಹೀಗೆ ಹುಟ್ಟಿನಿಂದಲೇ ರಂಗಭೂಮಿಯನ್ನು ಒಪ್ಪಿಕೊಂಡು ಅಪ್ಪಿಕೊಂಡು ಬೆಳೆದವರು,…

Read More

13 ಮಾರ್ಚ್ 2023, ಬೆಂಗಳೂರು: ರಂಗಶಾಲಾ ಅಭಿನಯ ತರಬೇತಿ ಕೇಂದ್ರ ಪ್ರಸ್ತುತಪಡಿಸುತ್ತಿರುವ. ಮೂಲ ಫೆಡರಿಕೊ ಗಾರ್ಸಿಯ ಲೋರ್ಕ ರಚಿಸಿ, ಕೆ.ಎನ್. ವಿಜಯಲಕ್ಷ್ಮಿ ಕನ್ನಡಕ್ಕೆ ಅನುವಾದಿಸಿ, ಡಾಕ್ಟರ್ ಉದಯ್ ಸೊಸ್ಲೆ ಅವರ ನಿರ್ದೇಶನದಲ್ಲಿ ಮೂಡಿ ಬಂದ ನಾಟಕವೇ ‘ಬ್ಲಡ್ ವೆಡ್ಡಿಂಗ್’ ಈ ನಾಟಕವು ಇದೆ ಬರುವ 16-03-2023ರಂದು ಸಂಜೆ 6.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ಗೊಳ್ಳಲಿದೆ. ಫೆಡರಿಕೊ ಗಾರ್ಸಿಯ ಲೋರ್ಕ ಎನ್ನುವ ಸ್ಪೇನಿನ ನಾಟಕಕಾರನ “ಬ್ಲಡ್ ವೆಡ್ಡಿಂಗ್” ಅನ್ನೋ ನಾಟಕ, ಸರ್ವಕಾಲಕ್ಕೂ ಸಲ್ಲಬಹುದಾದ, ಮನುಷ್ಯನ ಸಹಜ ಆಯ್ಕೆಗಳನ್ನ ಅಷ್ಟೇ ನಿಷ್ಠೂರವಾಗಿ ಪ್ರಶ್ನೆಗಚ್ಚುವ ಸ್ಕ್ರಿಪ್ಟ್.. ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಅದರೊಟ್ಟಿಗೆ ಬಿಗಿತುಗೊಂಡ ಗಂಡು ಮತ್ತು ಹೆಣ್ಣಿನ ಸಹಜ ಆಕರ್ಷಣೆ, ಆಯ್ಕೆ, ದ್ವಂದ್ವ, ನಿಲುವು, ಅಸ್ಮಿತೆ, ಅಸ್ತಿತ್ವ ಇವುಗಳ ಚಂದದ ಕಟ್ಟುವಿಕೆಯೆ ಬ್ಲಡ್ ವೆಡ್ಡಿಂಗ್.. ರ೦ಗಶಾಲಾ ಅಭಿನಯ ತರಬೇತಿ ಕೇಂದ್ರ: ರಂಗಶಾಲಾ ಬೆಂಗಳೂರು ಸಂಸ್ಥೆಯು ವಿನಯ್ ನೀನಾಸಮ್ ರವರ ರಂಗಭೂಮಿ ಕನಸುಗಳಲ್ಲೊಂದು ಈ ತರಬೇತಿ ಸಂಸ್ಥೆಯು ಸಮಾಜಕ್ಕೆ ನೇರವಾಗಿ ಉಪಯುಕ್ತವಾಗಬಲ್ಲಂತಹ ಸಂವಹನ ತರಬೇತಿ,ವ್ಯಕ್ತಿತ್ವ ವಿಕಸನ ತರಬೇತಿ,…

Read More

ಯುವ ಜನತೆ ನೃತ್ಯ, ಸಂಗೀತ, ಯಕ್ಷಗಾನ ಮೊದಲಾದ ಕಲಾ ಪ್ರಕಾರಗಳಿಂದ ದೂರ ಉಳಿಯುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿರುವ ಈ ದಿನಗಳಲ್ಲಿ, ಆ ಮಾತಿಗೆ ಅಪವಾದದಂತೆ ಯಕ್ಷಗಾನವನ್ನೇ ತನ್ನ ಜೀವಾಳವನ್ನಾಗಿಸಿ ಯಕ್ಷಗಾನ ರಂಗದಲ್ಲಿನ ಹೆಚ್ಚಿನ ಎಲ್ಲಾ ವೇಷ ಪ್ರಕಾರಗಳಲ್ಲೂ ಪಳಗಿರುವ ಅದರಲ್ಲೂ ಪ್ರಮುಖವಾಗಿ ಬಣ್ಣದ ವೇಷಗಳಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿರುವ ತರುಣರೊಬ್ಬರು ನಮ್ಮ ನಿಮ್ಮೆಲ್ಲರ ಮಧ್ಯೆ ಇದ್ದಾರೆ. ಅವರೇ ಗುರುವಾಯನಕೆರೆಯ ಬೇಬಿ ಶೆಟ್ಟಿ ಹಾಗೂ ಸಂಪ ಶೆಟ್ಟಿ  ದಂಪತಿಯರ ಸುಪುತ್ರ ಪ್ರಜ್ವಲ್ ಕುಮಾರ್ ಗುರುವಾಯನಕೆರೆ 09.05.1987ರಂದು ಇವರ ಜನನ. ಬಾಲ್ಯದ ದಿನಗಳಲ್ಲಿ ಗುರುವಾಯನಕೆರೆಯ ಸುತ್ತಮುತ್ತ ಸಾಕಷ್ಟು ಟೆಂಟಿನ ಮೇಳಗಳು ಯಕ್ಷಗಾನವನ್ನು ಆಡುತ್ತಿದ್ದವು, ಆ ಬಯಲಾಟಗಳನ್ನು ತಪ್ಪದೇ ವೀಕ್ಷಿಸುತ್ತಿದ್ದ ಪ್ರಜ್ವಲ್ ತಾನೂ ಒಬ್ಬ ಯಕ್ಷಗಾನ ಕಲಾವಿದನಾಗಬೇಕೆಂಬ ಹಂಬಲದಿಂದ ಯಕ್ಷಗಾನ ರಂಗದತ್ತ ಆಕರ್ಷಿತರಾದರು. ತಾರಾನಾಥ ಬಲ್ಯಾಯ ಮತ್ತು ದಿವಾಣ ಶಿವಶಂಕರ್ ಭಟ್ ಪ್ರಜ್ವಲ್ ಅವರ ಯಕ್ಷಗಾನ ಗುರುಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ತೀರಾ :- ಹಿರಿಯ…

Read More

11 ಮಾರ್ಚ್ 2023, ಉಡುಪಿ: ಪಲಿಮಾರು ಮಠಾಧೀಶರಾದ ವಿದ್ಯಾಧೀಶತೀರ್ಥ ಶ್ರೀಪಾದರು ಕೊಡಮಾಡುವ ‘ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪುರಸ್ಕಾರ’ಕ್ಕೆ ತೆಂಕುತಿಟ್ಟಿನ ಕಲಾವಿದರಾದ ಹರಿನಾರಾಯಣ ಬೈಪಡಿತ್ತಾಯ ಹಾಗೂ ಲೀಲಾವತಿ ಬೈಪಡಿತ್ತಾಯ ದಂಪತಿಯನ್ನು ಆಯ್ಕೆ ಮಾಡಲಾಗಿದೆ. ಯಕ್ಷಗಾನ ರಂಗದಲ್ಲಿ ತಮ್ಮದೇ ಆದ ಶೈಲಿಯ ಮೂಲಕ ಛಾಪು ಮೂಡಿಸಿರುವ ಇವರು ಯಕ್ಷಗಾನ ಪರಂಪರೆಯ ಉಳಿವಿಗೆ ಶ್ರಮಿಸುತ್ತಿರುವ ದಂಪತಿಗಳು. ಯತಿಶ್ರೇಷ್ಠ ವಿದ್ಯಾಮಾನ್ಯ ತೀರ್ಥ ಸ್ವಾಮೀಜಿ ಅವರ ಹೆಸರಿನಲ್ಲಿ ಕೊಡಮಾಡುವ ಈ ಪ್ರಶಸ್ತಿಯು ರೂ.50 ಸಾವಿರ ನಗದು ಪುರಸ್ಕಾರ ಸಹಿತ ಪ್ರಶಸ್ತಿ ಪರಿಕರಗಳನ್ನು ಒಳಗೊಂಡಿರುತ್ತವೆ. ಏ.6ರಂದು ಪಲಿಮಾರಿನಲ್ಲಿರುವ ಮೂಲಮಠದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪಲಿಮಾರು ಮಠದ ಪ್ರಕಟಣೆ ತಿಳಿಸಿದೆ.

Read More