Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಆರ್ಟ್ ಕೆನರಾ ಟ್ರಸ್ಟ್ ಮಂಗಳೂರು, ಕವಿತಾ ಕುಟೀರ ಪೆರಡಾಲ ಮತ್ತು ಕಾಸರಗೋಡಿನ ಪೆರಡಾಲದ ನವಜೀವನ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಹಯೋಗದಲ್ಲಿ ಖ್ಯಾತ ಸಾಹಿತಿ, ದಿವಂಗತ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರ ಜನ್ಮ ದಿನಾಚರಣೆಯನ್ನು ದಿನಾಂಕ 08-06-2024ರಂದು ಕೊಡಿಯಾಲಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನ್ಯಾಯವಾದಿ ಕಳ್ಳಿಗೆ ತಾರಾನಾಥ ಶೆಟ್ಟಿ, ನಿಟ್ಟೆ ಡೀಮ್ಡ್ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ಮುಖ್ಯಸ್ಥೆ ಡಾ. ಸಾಯಿಗೀತಾ ಹೆಗ್ಡೆ, ಕವಿತಾ ಕುಟೀರದ ಅಧ್ಯಕ್ಷ ದುರ್ಗಾಪ್ರಸಾದ್ ರೈ, ಆರ್ಟ್ ಕೆನರಾ ಟ್ರಸ್ಟಿನ ಅಧ್ಯಕ್ಷ ಸುಭಾಸ್‌ಚಂದ್ರ ಬಸು, ನವಜೀವನ ಪ್ರೌಢಶಾಲೆಯ ದಿವಂಗತ ಕವಿಯ ಹಲವಾರು ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು. ಕವಿ ಹಾಗೂ ಮಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿ ಎನ್. ಸುಬ್ರಾಯ ಭಟ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಲಾವಿದ ಸೈಯದ್ ಆಸಿಫ್ ಅಲಿ ಅವರು ರಚಿಸಿದ ದಿವಂಗತ ಕವಿಯ ಆಯಿಲ್ ಆನ್ ಕ್ಯಾನ್ವಾಸ್ ಭಾವಚಿತ್ರವು ವೇದಿಕೆಯನ್ನು ಅಲಂಕರಿಸಿತು. ಕಯ್ಯಾರ ಕಿಞ್ಞಣ್ಣ ರೈ ಅವರ ಪುತ್ರ…
ಕಾಸರಗೋಡು : ಕಾಸರಗೋಡಿನ ಖ್ಯಾತ ಸಾಹಿತ್ಯಿಕ ಸಾಂಸ್ಕೃತಿಕ ಸಂಸ್ಥೆಯಾದ ರಂಗ ಚಿನ್ನಾರಿಯ ಮಹಿಳಾ ಘಟಕ ನಾರಿ ಚಿನ್ನಾರಿ ಏರ್ಪಡಿಸಿದ ‘ಗೆಜ್ಜೆ ತರಂಗ’ ಕಾರ್ಯಕ್ರಮವು ದಿನಾಂಕ 09-06-2024ರಂದು ಕಾಸರಗೋಡಿನ ಕರಂದಕ್ಕಾಡು ಪದ್ಮಗಿರಿ ಕಲಾ ಕುಟೀರದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಖ್ಯಾತ ನೃತ್ಯ ಗುರುಗಳಾದ ವಿದುಷಿ ವಿದ್ಯಾಲಕ್ಷ್ಮೀ ಕುಂಬಳೆ “ಶಾಸ್ತ್ರೀಯ ನೃತ್ಯವನ್ನು ಕಲಿಯುವುದರಿಂದ ಮಾನಸಿಕವಾಗಿ ದೈಹಿಕವಾಗಿ ಅದು ನಮ್ಮನ್ನು ಗಟ್ಟಿ ಗೊಳಿಸುತ್ತದೆ. ತಪಸ್ಸು ಮಾಡಿದಂತೆ ನಿರಂತರ ಅಭ್ಯಾಸದಿಂದ ಮಾತ್ರ ಅದನ್ನು ಒಲಿಸಿಕೊಳ್ಳಬಹುದು. ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆಗಳೇ ಇಲ್ಲದ ಕಾಲಘಟ್ಟದಲ್ಲಿ ರಂಗ ಚಿನ್ನಾರಿ ಏರ್ಪಡಿಸುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಇನ್ನೊಬ್ಬರಿಗೆ ಅನುಕರಣೀಯ” ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ನೃತ್ಯ ಗುರುಗಳಾದ ನಟನ ತಿಲಕಂ ಸುರೇಂದ್ರನ್ ಪಟ್ಟೇನ್ ಇವರು “ಸಾವಿರಾರು ವಿದ್ಯಾರ್ಥಿಗಳು ಶಾಸ್ತ್ರೀಯ ನೃತ್ಯವನ್ನು ಕಲಿಯುತ್ತಿದ್ದರೂ ಅದು ಕೇವಲ ಸ್ಪರ್ಧೆಗೆ ಮಾತ್ರ ಸೀಮಿತಗೊಳ್ಳಲಾರದು. ಕಲೆ ಯಾವತ್ತೂ ಕೈ ಬಿಡೋದಿಲ್ಲ” ಎಂದರು. ನಾರಿ ಚಿನ್ನಾರಿಯ ಅಧ್ಯಕ್ಷರಾದ ಶ್ರೀಮತಿ ಸವಿತಾ ಐ. ಭಟ್ ಇವರು…
ಸುರತ್ಕಲ್ : ಸುರತ್ಕಲ್ಲಿನ ನಾಟ್ಯಾಂಜಲಿ ಅಕಾಡೆಮಿ ಸಂಸ್ಥೆಯು ಹಮ್ಮಿಕೊಂಡ ‘ನೃತ್ಯ ಉಪಯುಕ್ತ ಕಾರ್ಯಾಗಾರ’ವು ದಿನಾಂಕ 08-06-2024 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಗ್ರಾಮಾಂತರ ಪ್ರದೇಶವಾದ ಚೇಳಾಯ್ರು ಖಂಡಿಗೆಯ ನಾಟ್ಯಾಂಜಲಿ ಮಂದಿರದಲ್ಲಿ ನಡೆಯಿತು. ಕರ್ನಾಟಕ ಕಲಾಶ್ರೀ ವಿದುಷಿ ರಾಜಶ್ರೀ ಉಳ್ಳಾಲ್ ಉದ್ಘಾಟಿಸಿದ ಭರತನಾಟ್ಯ ವಿದ್ವತ್ ಹಂತದ ನೃತ್ಯ ಉಪಯುಕ್ತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿದುಷಿ ಸುಮಂಗಲಾ ರತ್ನಾಕರ್ ಭಾಗವಹಿಸಿದರು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿದ್ವತ್ ಹಂತದ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಂಡರು. ಸಂಸ್ಥೆಯ ನಿರ್ದೇಶಕ ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ. ಚಂದ್ರಶೇಖರ ನಾವಡ ಸ್ವಾಗತಿಸಿ, ವಂದಿಸಿದರು.
ಉಡುಪಿ : ರಂಗಭೂಮಿ (ರಿ.) ಉಡುಪಿ ಇದರ ವತಿಯಿಂದ ದಿವಂಗತ ಕುತ್ಪಾಡಿ ಆನಂದ ಗಾಣಿಗರ ಸ್ಮರಣಾರ್ಥ ರಂಗಭೂಮಿ ‘ಆನಂದೋತ್ಸವ -2024’ ಕಲಾ ಸಾಧನೆಯ ಜೀವನಕ್ಕೆ ನಲ್ಮೆಯ ನಮನ ಕಾರ್ಯಕ್ರಮವನ್ನು ದಿನಾಂಕ 16-06-2024ರಂದು ಸಂಜೆ 5.45ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಧಾರ್ಮಿಕ, ಶೈಕ್ಷಣಿಕ, ಕಲೆ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಭೂತಪೂರ್ವ ಸೇವೆ ಸಲ್ಲಿಸಿದ ಕೋಟದ ಗೀತಾನಂದ ಪ್ರತಿಷ್ಠಾನದ ಪ್ರವರ್ತಕರಾದ ಶ್ರೀ ಆನಂದ ಸಿ. ಕುಂದರ್ ಇವರಿಗೆ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ (ರಿ.) ಪ್ರಾಯೋಜಿತ ‘ಸಂಸ್ಕೃತಿ ಸಾಧಕ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಇದರ ಪ್ರವರ್ತಕರಾದ ನಾಡೋಜ ಡಾ. ಜಿ. ಶಂಕರ್ ಇವರು ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಉದ್ಘಾಟನೆ ಮಾಡಲಿರುವರು. ಸಭಾ ಕಾರ್ಯಕ್ರಮದ ಬಳಿಕ ನಡೆಯಲಿರುವ ನಾಟಕೋತ್ಸವದಲ್ಲಿ ಶ್ರೀ ಶಶಿರಾಜ್ ಕಾವೂರು ರಚಿಸಿರುವ ಮೋಹನ್ ಚಂದ್ರ ಯು. ಇವರ ನಿರ್ದೇಶನದಲ್ಲಿ ಮಂಗಳೂರಿನ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ತಂಡದವರು “ನೆಮ್ಮದಿ…
ಬೆಂಗಳೂರು : ಜಗದೀಶ ಹೊಸಬಾಳೆ ಮತ್ತು ವಿನಾಯಕ ವಾಜಗದ್ದೆ ಇದರ ಸಂಯೋಜನೆಯಲ್ಲಿ ಕವಿ ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಅಂಬಾ ಶಪಥ’ ತಾಳಮದ್ದಳೆಯು ದಿನಾಂಕ 14-07-2024ರಂದು ಮಧ್ಯಾಹ್ನ 3-15 ಗಂಟೆಗೆ ಬೆಂಗಳೂರಿನ ಎನ್.ಆರ್. ಕಾಲೋನಿಯ ಡಾ. ಸಿ. ಅಶ್ವತ್ಥ ಕಲಾಭವನದಲ್ಲಿ ನಡೆಯಲಿದೆ. ಮುಮ್ಮೇಳದಲ್ಲಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ, ವಾಸುದೇವ ರಂಗ ಭಟ್ಟ, ಸಂಕದಗುಂಡಿ ಗಣಪತಿ ಭಟ್ಟ ಹಾಗೂ ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ, ಅನಂತ ಪದ್ಮನಾಭ ಘಾಟಕ್ ಮತ್ತು ಗಣೇಶ ಗಾಂವ್ಕರ್ ಇವರುಗಳು ಭಾಗವಹಿಸಲಿದ್ದಾರೆ.
ಕನ್ನಡದ ಮಹತ್ವದ ಲೇಖಕರಾದ ಡಾ. ನಾ. ಮೊಗಸಾಲೆಯವರ ‘ನೀರು’ ಎಂಬ ಕಾದಂಬರಿಯು ಒಂದು ದೃಷ್ಟಿಯಲ್ಲಿ ನೀಳ್ಗತೆಯಂತೆ ಇದ್ದರೂ 250 ಪುಟಗಳಷ್ಟು ಬೆಳೆದು ಕಾದಂಬರಿಯ ವ್ಯಾಪ್ತಿಯನ್ನು ಪಡೆದಿದೆ. ಕಥೆ, ಕಾದಂಬರಿ ಎಂದು ವಿಂಗಡಿಸಿ ಲಕ್ಷಣವನ್ನು ವಿಧಿಸುವವರಿಗೆ ಇದೊಂದು ಗಟ್ಟಿ ಸವಾಲಾಗಿ ಪರಿಣಮಿಸಿದೆ. ಮನುಷ್ಯ ಸಂಬಂಧದೊಳಗೆ ಸಹಜವಾದ ಅಸೂಯೆ, ಸ್ಪರ್ಧೆ, ಫಟಿಂಗತನ, ಕಾಮ ಕ್ರೋಧಾದಿಗಳ ತಳಮಟ್ಟದ ಹುಡುಕಾಟವನ್ನು ಕಾದಂಬರಿಕಾರರು ಹೊಸ ಬಗೆಯಲ್ಲಿ ನಡೆಸಿದ್ದಾರೆ. ತಮ್ಮ ಹೆಚ್ಚಿನ ಕೃತಿಗಳಂತೆ ಇಲ್ಲೂ ಮರಣ, ಕೊಲೆ, ದೊಂಬಿಗಳನ್ನು ತಂದಿಲ್ಲ. ಮನುಷ್ಯರು ಪರಸ್ಪರ ದೂರವಾಗುವುದಕ್ಕೆ ಕಾರಣವಾಗುವ ಅಂತರಂಗದ ಸ್ಥಾಯೀ ಸಂಚಾರೀ ಭಾವ ಮನಃಶಾಸ್ತ್ರೀಯವಾಗಿ ವಿಶ್ಲೇಷಣೆಗೊಳಗಾಗುವುದೇ ಈ ಕೃತಿಯ ಪ್ರತ್ಯೇಕತೆಯಾಗಿದೆ. ಪಾತ್ರ ನಿರ್ಮಾಣದ ತಂತ್ರ, ಸಂಭಾಷಣೆಯ ಸೊಗಸು, ಪರಿಸರ ಸೃಷ್ಟಿಯ ಕಲಾತ್ಮಕತೆ, ಆಧುನಿಕ ಕಾನೂನುಗಳ ವಿಶ್ಲೇಷಣೆ, ವ್ಯಕ್ತಿ ತನ್ನ ಸುತ್ತ ನಿರ್ಮಿಸಿಕೊಳ್ಳುವ ಪ್ರಭಾವಲಯ, ರಾಜಕಾರಣ ಮತ್ತು ಸಂಸ್ಕೃತಿಗಳೊಳಗಿನ ಸಂಘರ್ಷ, ಧರ್ಮ ಹಾಗೂ ಆಚಾರಗಳೊಳಗೆ ತಪ್ಪುವ ತಾಳ, ಅಮಾನವೀಯ – ಅಸಂಗತ ನಡವಳಿಕೆಯಿಂದ ತನ್ನ ಸುತ್ತ ತಾನೇ ಬೇಲಿ ಬಿಗಿದುಕೊಂಡು ಪಾಡುಪಟ್ಟು ಹೊರಬರಲಾಗದೆ…
ಮುಳ್ಳೇರಿಯ : ಹಿರಿಯ ಸಾಹಿತಿ, ಬಹುಮುಖ ವ್ಯಕ್ತಿತ್ವದ ನಾಡೋಜಾ ಡಾ. ಕಯ್ಯಾರ ಕಿಂಞಣ್ಣ ರೈ ಅವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮವು ದಿನಾಂಕ 10-06-2024ರ ಸೋಮವಾರದಂದು ಮುಳ್ಳೇರಿಯ ಸಮೀಪದ ಕುಂಟಾರಿನ ಎ. ಯು. ಪಿ. ಶಾಲೆಯಲ್ಲಿ ನಡೆಯಿತು. ಶಾಲೆಯ ವಿದ್ಯಾರ್ಥಿಗಳಾದ ಹರಿಕೃಷ್ಣ, ಕಾವ್ಯ, ದೀಕ್ಷಿತ್ ಮೊದಲಾದವರು ಕಯ್ಯಾರರ ಬದುಕು ಹಾಗೂ ಸಾಹಿತ್ಯ ಬಗ್ಗೆ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಭವಿತ್, ಫಾಸಿಲ್, ಬೇಬಿ ಲಿಖಿತಾ, ಅನ್ವಿತಾ ಹಾಗೂ ಶಿವಾನಿ ಕೆ. ಇವರು ಕಯ್ಯಾರರು ರಚಿಸಿದ ಹಾಡುಗಳನ್ನು ಹಾಡಿದರು. ಈ ಸಂದರ್ಭದಲ್ಲಿ ಶಾಲೆಯ ಹಿರಿಯ ಶಿಕ್ಷಕಿ ದಾಕ್ಷಾಯಿಣಿ ಅವರ ನೇತೃತ್ವದಲ್ಲಿ ಕಯ್ಯಾರ ಕಿಂಞಣ್ಣ ರೈ ಅವರ ಕುರಿತ ರಸಪ್ರಶ್ನೆ ಸ್ಪರ್ಧೆ ನಡೆಯಿತು. ವಿದ್ಯಾರ್ಥಿಗಳಾದ ಹರಿಕೃಷ್ಣ ಹಾಗೂ ರನಾಫ್ ಫಾತಿಮಾ ಅನುಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದರು. ಸಭಾ ಕಾರ್ಯಕ್ರಮದ ಬಳಿಕ ವ್ಯಂಗ್ಯಚಿತ್ರಕಾರ ವಿರಾಜ್ ಅಡೂರು ಇವರಿಂದ ವ್ಯಂಗ್ಯಚಿತ್ರ ರಚನಾ ತರಬೇತಿ ಶಿಬಿರ ನಡೆಯಿತು. ವ್ಯಂಗ್ಯಚಿತ್ರ ರಚನೆಯಲ್ಲಿ ಮಕ್ಕಳು ಗಮನಿಸಬೇಕಾದ ಅಂಶಗಳು, ಚಿತ್ರಗಳ ಗಾತ್ರದಲ್ಲಿನ ಬದ್ಧತೆಗಳು,…
ಕಾರ್ಕಳ : ಸಾಹಿತ್ಯ, ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಅಗಲಿದ ಪತ್ರಕರ್ತ ಡಾ. ಶೇಖರ ಅಜೆಕಾರು ಅವರ ಹೆಸರಿನಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ‘ಡಾ. ಶೇಖರ ಅಜೆಕಾರು ರಾಜ್ಯ ಪ್ರಶಸ್ತಿ’ಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅದ್ಯಕ್ಷ ಮಹಮ್ಮದ್ ಷರೀಫ್ ತಿಳಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಸಾಹಿತ್ಯ ಹಾಗೂ ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುವುದು. ಸಾಹಿತ್ಯ ಹಾಗೂ ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಕನಿಷ್ಠ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಪತ್ರಕರ್ತರು ಯಾ ಸಾಹಿತಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಪ್ರಶಸ್ತಿಯು ಹತ್ತು ಸಾವಿರ ಪ್ರಶಸ್ತಿ ನಗದು ಹಾಗೂ ರಜತ ಫಲಕ ಒಳಗೊಂಡಿರುತ್ತದೆ. ಸ್ವವಿವರ ಹಾಗೂ ಇತ್ತೀಚಿನ ಭಾವಚಿತ್ರವನ್ನೊಳಗೊಂಡ ಅರ್ಜಿಯನ್ನು ಮೊಹಮ್ಮದ್ ಶರೀಫ್ ಅಧ್ಯಕ್ಷರು, ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಂಗ್ಲೆಗುಡ್ಡೆ ಪೋಸ್ಟ್, ಕುಕ್ಕುಠದೂರು, ಕಾರ್ಕಳ ತಾಲೂಕು 576117 ಇವರಿಗೆ ದಿನಾಂಕ 21-06-2024ರೊಳಗೆ ಕಳುಹಿಸಿಕೊಡಬಹುದಾಗಿದೆ. ತದನಂತರ ಬಂದ…
ಶಿಮ್ಲಾ : ಶಿಮ್ಲಾದ ಪುರಾತನ ಗಯ್ಟೀ ರಂಗಮಂದಿರದಲ್ಲಿ ದಿನಾಂಕ 06-06-2024ರಿಂದ 09-06-2024ರವರೆಗೆ ನಡೆದ ‘ರಾಷ್ಟ್ರೀಯ ಹಿಂದಿ ನಾಟಕ ಸ್ಪರ್ಧೆ’ಯಲ್ಲಿ ಶೈಲೀಕೃತ ನಾಟಕ ವಿಭಾಗದಲ್ಲಿ ಪ್ರಥಮ ಬಹುಮಾನ ಬರುವುದರ ಜೊತೆಗೆ ವೈಯಕ್ತಿಕ ವಿಭಾಗದಲ್ಲೂ ನಿರ್ದೇಶನಕ್ಕಾಗಿ ಬಾಲಕೃಷ್ಣ ಕೊಡವೂರು ಇವರಿಗೆ ಪ್ರಥಮ ಬಹುಮಾನ ಹಾಗೂ ಅತ್ಯುತ್ತಮ ನಟಿ ವಿಭಾಗದಲ್ಲಿ ಚಂದ್ರಾವತಿ ಪಿತ್ರೋಡಿಯವರಿಗೆ ಬಹುಮಾನ ಸಿಕ್ಕಿರುವುದರ ಜೊತೆಗೆ ನಾಟಕ ವೀಕ್ಷಕರೆಲ್ಲರೂ ‘ದ್ರೌಣಿ’ಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದುದು ಇಷ್ಟು ದೂರ ತುಳುನಾಡಿನಿಂದ ಬಂದಿರುವ ಇಡೀ ನವಸುಮ ರಂಗಮಂಚ ತಂಡಕ್ಕೂ ಸಾರ್ಥಕ ಕ್ಷಣ. ನಾಟಕ : ‘ದ್ರೌಣಿ’ ಮೂಲ ರಚನೆ : ಬಾಲಕೃಷ್ಣ ಕೊಡವೂರು ಹಿಂದಿ ಅನುವಾದ : ಡಾ. ಮಾಧವಿ ಭಂಡಾರಿ ರಂಗಪಠ್ಯ : ಅಕ್ಷತಾ ರಾಜ್ ಪೆರ್ಲ ಬೆಳಕು : ಜಯಶೇಖರ ಮಡಪ್ಪಾಡಿ ಸಂಗೀತ : ರೋಹಿತ್ ಮಲ್ಪೆ ಪ್ರಸ್ತುತಿ : ನವಸುಮ ರಂಗಮಂಚ (ರಿ) ಕೊಡವೂರು.
ಮೈಸೂರು : ಮೈಸೂರಿನ ರಂಗಾಯಣ ವತಿಯಿಂದ ಭಾರತೀಯ ರಂಗ ಶಿಕ್ಷಣ ಕೇಂದ್ರದಲ್ಲಿ 2024-25ನೇ ಸಾಲಿನ ಒಂದು ವರ್ಷದ ರಂಗ ಶಿಕ್ಷಣ ತರಬೇತಿಗೆ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ದಿನಾಂಕ 20-06-2024 ಕೊನೆಯ ದಿನವಾಗಿರುತ್ತದೆ. ರಂಗ ತರಬೇತಿಗೆ ಸೇರ ಬಯಸುವ ವಿದ್ಯಾರ್ಥಿಗಳು ರಂಗಭೂಮಿಯ ಪ್ರಾಥಮಿಕ ಅನುಭವ ಹೊಂದಿರಬೇಕು. ಕನಿಷ್ಠ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು. 18 ವರ್ಷ ತುಂಬಿದ ಮತ್ತು 28 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ರಂಗಾಯಣದಿಂದ ಉಚಿತ ವಸತಿ ವ್ಯವಸ್ಥೆ ಹಾಗೂ ತಿಂಗಳಿಗೆ ರೂ.5,000 ವಿದ್ಯಾರ್ಥಿವೇತನ ಪಾವತಿಸಲಾಗುವುದು. ಹೆಚ್ಚಿನ ಮಾಹಿತಿಗೆ 0821-2512639, 9148827720 ಈ ಸಂಖ್ಯೆ ಸಂಪರ್ಕಿಸಬಹುದು ಎಂದು ರಂಗಾಯಣದ ಉಪನಿರ್ದೇಶಕರು ತಿಳಿಸಿದ್ದಾರೆ.