Subscribe to Updates
Get the latest creative news from FooBar about art, design and business.
Author: roovari
ಮೈಸೂರು : ರಂಗಾಂತರಂಗ ಮೈಸೂರು (ರಿ.) ಮಕ್ಕಳ ಅಭಿನಯ ರಂಗಶಾಲೆ ಇವರ ವತಿಯಿಂದ ‘ಕಲರವ’ ಮಕ್ಕಳ ಬೇಸಿಗೆ ಶಿಬಿರವನ್ನು ದಿನಾಂಕ 10 ಏಪ್ರಿಲ್ 2025ರಿಂದ 10 ಮೇ 2025ರವರೆಗೆ ಬೆಳ್ಳಿಗೆ 10-00 ಗಂಟೆಯಿಂದ ಸಂಜೆ 4-00 ಗಂಟೆ ತನಕ ಆಯೋಜಿಸಲಾಗಿದೆ. ನಾಟಕ, ಮೈಮ್, ಜನಪದ ಗೀತೆಗಳು, ಯೋಗ ಮತ್ತು ಧ್ಯಾನ, ನೃತ್ಯ, ಚಿತ್ರಕಲೆ, ದೇಶಿ ಆಟಗಳು, ನಿರೂಪಣ ಕೌಶಲ್ಯ, ಧ್ವನಿ ಮತ್ತು ಮಾತು, ಭಾಷಾ ಕೌಶಲ್ಯ, ಪರಿಸರ ಮತ್ತು ಪ್ರಾಣಿಗಳ ಮಾಹಿತಿ, ಮಕ್ಕಳಿಗಾಗಿ ಸಿನಿಮಾ ವೀಕ್ಷಣೆ, ಪೌರಾಣಿಕ ಮತ್ತು ಸಾಮಾಜಿಕ ಐತಿಹಾಸಿಕ ಕಥೆಗಳ ಮಾಹಿತಿ ಈ ಶಿಬಿರದ ಚಟುವಟಿಕೆಗಳಗಿದ್ದು, ಅಭಿನಯ ತರಬೇತಿ, ಭರತನಾಟ್ಯ, ಸಂಗೀತ ಮತ್ತು ನೃತ್ಯ ವಾರಾಂತ್ಯ ತರಗತಿಗಳನ್ನು ಈ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9739919004 ಸಂಖ್ಯೆಯನ್ನು ಸಂಪರ್ಕಿಸಿರಿ.
ಶಿವಮೊಗ್ಗ : ವಸುಧಾ ಕರಣಿಕ್ – ವೈಶಾಲಿ ಭಟ್ ಇವರ ಜನ್ಮದಿನೋತ್ಸವ ನಿಮಿತ್ತ ಸನ್ಮಾನ ಸಮಾರಂಭ ಮತ್ತು ಭರತನಾಟ್ಯ ಪ್ರಸ್ತುತಿಯು ದಿನಾಂಕ 02 ಮಾರ್ಚ್ 2025ರಂದು ಸಂಜೆ 5-00 ಗಂಟೆಗೆ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಡೆಯಲಿದೆ. ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತ್ರಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಡಾ. ವಿದುಷಿ ವಸುಂಧರಾ ದೊರೆಸ್ವಾಮಿಯವರ ಶಿಷ್ಯೆ ಮಂಗಳೂರಿನ ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಚರಲ್ ಟ್ರಸ್ಟ್ ಇದರ ನಿರ್ದೇಶಕರಾದ ಡಾ. ವಿದುಷಿ ಭ್ರಮರಿ ಶಿವಪ್ರಕಾಶ್ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸನ್ಮಾನಿತರು ‘ಕುಮಾರವ್ಯಾಸ ನೃತ್ಯ ಭಾರತ’ ಶಾಸ್ತ್ರೀಯ ನೃತ್ಯ ಪ್ರಸ್ತುತಿ ನೀಡಲಿದ್ದಾರೆ.
ಸಾಹಿತ್ಯದ ಗೀಳು ಹಚ್ಚಿಕೊಳ್ಳುವುದು ಸುಲಭಸಾಧ್ಯವಾದ ಕೆಲಸವಲ್ಲ. ಭಾಷೆ, ಸಾಹಿತ್ಯದ ಹಿನ್ನೆಲೆ ಇರುವವರಿಗೆ ಅದು ಬಹಳ ಕಷ್ಟದ ಕೆಲಸವೂ ಅಲ್ಲ. ವೃತ್ತಿ ಜೀವನಕ್ಕೂ ಸಾಹಿತ್ಯಕ್ಕೂ ಹೊಂದಾಣಿಕೆ ಕಷ್ಟವಾಗಿದ್ದರೂ, ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆ ನೀಡುವ ಮೂಲಕ ಸಾಧನೆ ಮಾಡಿದ ಅನೇಕರಲ್ಲಿ ನ್ಯಾಯವಾದಿ ಕೋಣನ ವೀರಣ್ಣ ಚೆನ್ನಬಸಪ್ಪನವರೂ ಒಬ್ಬರು. ಚೆನ್ನಬಸಪ್ಪನವರು ಬಳ್ಳಾರಿ ಜಿಲ್ಲೆಯ, ಕೂಡ್ಲಿಗಿ ತಾಲೂಕಿನ, ಆಲೂರು ಮಜರಾ ಗ್ರಾಮದಲ್ಲಿ 1922 ಫೆಬ್ರವರಿ 27ರಂದು ಜನಿಸಿದರು. ತಂದೆ ಕೋಣನ ವೀರಣ್ಣ, ತಾಯಿ ಬಸಮ್ಮ. ಕೋ. ಚನ್ನಬಸಪ್ಪ ಇವರ ಹಿರಿಯರು ಕೋಣಗಳ ಮೇಲೆ ದವಸಧಾನ್ಯ, ದಿನಸಿಗಳನ್ನು ಹೇರಿಕೊಂಡು ವ್ಯಾಪಾರ ಮಾಡುತ್ತಿದ್ದುದರಿಂದ ಈ ಉಪನಾಮ ರೂಢಿಯಲ್ಲಿ ಬಂದಿದೆ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ ಬಳ್ಳಾರಿಯಲ್ಲಿ ಪ್ರೌಢಶಾಲಾ ಶಿಕ್ಷಣ, ಅನಂತಪುರದಲ್ಲಿ ಕಾಲೇಜು ಶಿಕ್ಷಣ ಪಡೆದುಕೊಂಡರು. ದೇಶದಲ್ಲಿ ಸ್ವಾತಂತ್ರ್ಯದ ಹೋರಾಟ ಬಿರುಸಾಗಿ ನಡೆಯುತ್ತಿದ್ದ ಸಂದರ್ಭವದು. ಚೆನ್ನಬಸಪ್ಪನವರು ವಿದ್ಯಾರ್ಥಿ ಮುಖಂಡರಾಗಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಬಂಧನಕ್ಕೊಳಗಾಗಿ ಸೆರೆಮನೆ ವಾಸವನ್ನೂ ಅನುಭವಿಸಿದರು. ನಂತರ ಬೆಳಗಾವಿ ಕಾಲೇಜಿನಿಂದ ಕಾನೂನು ಪದವಿ, ಚರಿತ್ರೆ…
ಬೆಳಗಾವಿ : ವಿಚಾರವಾಣಿ ಸಾಹಿತ್ಯ ಪ್ರಕಾಶನ ನೇಸರಗಿ ಹಾಗೂ ಭವಾನಿ ಪ್ರಕಾಶನ ಮಲ್ಲಮ್ಮನ ಬೆಳವಡಿ ಜಂಟಿಯಾಗಿ ಆಯೋಜಿಸುವ ಶ್ರೀ ಸಿ. ವೈ. ಮೆಣಸಿನಕಾಯಿ ರಚಿಸಿದ ‘ಭೋಜರಾಜನ ಪುನರ್ಜನ್ಮ ಇನ್ನಿತರ ಸತ್ಯಕಥೆಗಳು’ (ಅನುವಾದಿತ) ಹಾಗೂ ಶ್ರೀ ಲಕ್ಷ್ಮಣ ಕೆ. ಡೊಂಬರ ರಚಿಸಿದ ‘ಈ ಸ್ನೇಹ ಬಂಧನ’ ಎರಡು ಕೃತಿಗಳ ಲೋಕಾರ್ಪಣಾ ಸಮಾರಂಭವು ದಿನಾಂಕ 02 ಮಾರ್ಚ್ 2025ರ ರವಿವಾರದಂದು ಬೆಳಿಗ್ಗೆ ಘಂಟೆ 10.00ಕ್ಕೆ ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ. ಕ. ಸಾ.ಪ. ಬೆಳಗಾವಿ ಇದರ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬೆಳಗಾವಿಯ ಜಿಲ್ಲಾಧಿಕಾರಿಗಳಾದ ಶ್ರೀ ಮೊಹ್ಮದ್ ರೋಷನ್ (ಐ. ಎ. ಎಸ್) ಕೃತಿಗಳ ಲೋಕಾರ್ಪಣೆ ಗೊಳಿಸಲಿದ್ದಾರೆ. ಹಿರಿಯ ಭಾಷಾ ಶಿಕ್ಷಕರು ಹಾಗೂ ಸಾಹಿತಿಗಳಾದ ಡಾ. ಸುನೀಲ ಪರೀಟ ಇವರು ‘ಭೋಜರಾಜನ ಪುನರ್ಜನ ಇನ್ನಿತರ ಸತ್ಯಕಥೆಗಳು’ ಕೃತಿಯನ್ನು ಪರಿಯಿಸಲಿದ್ದು, ಕ. ಸಾ. ಪ. ಬೆಳಗಾವಿಯ ಮಾಜಿ ಜಿಲ್ಲಾಧ್ಯಕ್ಷ ಹಾಗೂ…
ಮಂಗಳೂರು : ಶ್ರೀ ಉಮಾಮಹೇಶ್ವರ ಯಕ್ಷಗಾನ ಅಧ್ಯಯನ ಕೇಂದ್ರ, ಅತ್ತಾವರ, ಇದರ 4ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 25 ಫೆಬ್ರವರಿ 2025ರಂದು ಮಂಗಳೂರಿನ ಅತ್ತಾವರದ ಶ್ರೀ ಉಮಾಮಹೇಶ್ವರ ದೇವಳದ ಆವರಣದಲ್ಲಿ ನಡೆಯಿತು. ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ‘ಯಕ್ಷ ಸಿರಿ’ ಪ್ರಶಸ್ತಿ ಪುರಸ್ಕೃತ ಯಕ್ಷಗುರುಗಳಾದ ಶ್ರೀ ರಾಮಾ ಸಾಲಿಯನ್ ಮಂಗಲ್ಪಾಡಿ ಇವರು ಯಕ್ಷರಂಗಕ್ಕೆ ಸಲ್ಲಿಸಿದ ಅನನ್ಯ ಸೇವೆಯನ್ನು ಗುರುತಿಸಿ “ಯಕ್ಷ ಮಾಣಿಕ್ಯ” ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು. ಯಕ್ಷಗುರುಗಳನ್ನು ಸನ್ಮಾನಿಸಿದ ಸಾಹಿತಿ, ನಾಟಕಕಾರ, ನಟ, ಹಾಗೂ ಖ್ಯಾತ ವಕೀಲರಾದ ಶ್ರೀ ಶಶಿರಾಜ್ ಕಾವೂರು ಮಾತಾನಾಡಿ “ಇವತ್ತು ಯುವ ಜನಾಂಗವನ್ನು ಯಕ್ಷ ರಂಗವು ಸೂಜಿಕಲ್ಲಿನಂತೆ ಸೆಳೆಯುತ್ತಿದೆ. ಮುಂದಿನ ಪರಂಪರೆಗೆ ಯಕ್ಷಗಾನ ಉಳಿಸುವ ನಿಟ್ಟಿನಲ್ಲಿ ಹಲವಾರು ಯುವಕರು, ಯವತಿಯರು, ಮಕ್ಕಳನ್ನು ತಯಾರಿಗೊಳಿಸುವ ನಿಟ್ಟಿನಲ್ಲಿ ಯಕ್ಷಗುರು ರಾಕೇಶ್ ರೈ ಹಾಗೂ ಶ್ರಿ ರಾಮ ಸಾಲಿಯನ್ ಮಂಗಲ್ಪಾಡಿ ಅಂತಹ ಶ್ರೇಷ್ಠ ಗುರುಗಳು ಇಂದು ಅವಿರತ ಶ್ರಮಿಸುತ್ತಿದ್ದಾರೆ” ಎಂದರು. ಸಭಾ ಕಾರ್ಯಕ್ರಮವನ್ನು ಶ್ರೀ ಉಮಾಮಹೇಶ್ವರ ಕ್ಷೇತ್ರ ಅತ್ತಾವರದ…
ಹೊನ್ನಾವರ: ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ.) ಇದರ 90ನೇ ವರ್ಷದ ಸಂಭ್ರಮದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಶ್ರೀ ಧರ್ಮಸ್ಥಳ ಮೇಳದ ಪ್ರಧಾನ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಇವರಿಗೆ “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-15” ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 25 ಫೆಬ್ರವರಿ 2025 ರಂದು ಹೊನ್ನಾವರದ ಗುಣವಂತೆಯಲ್ಲಿ ನಡೆಯಿತು. ಈ ವೇಳೆ ಯಕ್ಷಗಾನದ ಹಿರಿಯ ಅರ್ಥದಾರಿ ಜಬ್ಬಾರ್ ಸಮೋ ಸಂಪಾಜೆ ಹಾಗೂ ಯಕ್ಷಗಾನ ಭಾಗವತ ಹಾಗೂ ಸಂಘಟಕ ರಾದ ಡಾ. ಸುರೇಂದ್ರ ಪಣಿಯೂರು ಇವರನ್ನು ಸನ್ಮಾನಿಸಲಾಯಿತು.
ಬಳ್ಳಾರಿ : ಕಳೆದ ಎರಡು ವರ್ಷಗಳಂತೆಯೇ ಈ ವರ್ಷವೂ ‘ಸಂಗಂ ಸಾಹಿತ್ಯ ಪುರಸ್ಕಾರ’ವನ್ನು ನೀಡಲು ಬಳ್ಳಾರಿಯ ಸಂಗಂ ಸಂಸ್ಥೆ ನಿರ್ಧರಿಸಿದ್ದು, ಈ ಸಲದ ಪುರಸ್ಕಾರವು 2022-24ರ ಅವಧಿಯಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಕಾದಂಬರಿ ಪ್ರಕಾರಕ್ಕೆ ಮೀಸಲಿರಿಸಲಾಗಿದೆ. ಈ ಪ್ರಶಸ್ತಿಯು ರೂಪಾಯಿ 25 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದ್ದು, ಆಸಕ್ತ ಬರಹಗಾರರು, ಪ್ರಕಾಶಕರು ತಮ್ಮ ಕಾದಂಬರಿಗಳನ್ನು ಸ್ಪರ್ಧೆಗೆ ಕಳುಹಿಸಲು ‘ಸಂಗಂ’ ಸಂಸ್ಥೆಯ ಕಾರ್ಯದರ್ಶಿ ಡಾ. ಕೆ. ಶಿವಲಿಂಗಪ್ಪ ಹಂದಿಹಾಳು ಕೋರಿದ್ದಾರೆ. ಕಾದಂಬರಿಯು 2022-24ರ, ಅವಧಿಯಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡಿರಬೇಕು. ಕೃತಿಯನ್ನು ದಿನಾಂಕ 20 ಮಾರ್ಚ್ 2025ರ ಒಳಗಾಗಿ ತಲುಪುವಂತೆ ಕಳುಹಿಸಬೇಕು. ವಿಳಾಸ: ಅಜಯ ಬಣಕಾರ್, ‘ಹೂ ನಗೆ’ ಪ್ಲಾಟ್ ನಂ- 2, 2ನೇ ಕ್ರಾಸ್, ಬಾಲಾಜಿ ಕಾಲೋನಿ, ತಾಳೂರು ರಸ್ತೆ, ಬಳ್ಳಾರಿ- 583103.
ಶಿರಸಿ: ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಏಪ್ರಿಲ್ 12 ಮತ್ತು 13ರಂದು ಕದಂಬೋತ್ಸವ ನಡೆಯಲಿದ್ದು, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸ್ಪರ್ಧೆಗಳು ನಡೆಯಲಿವೆ ಎಂದು ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದರು. “ಏಪ್ರಿಲ್ 10ರಂದು ಗುಡ್ನಾಪುರ ರಾಣಿ ನಿವಾಸದಲ್ಲಿ ಕದಂಬ ಜ್ಯೋತಿಗೆ ಚಾಲನೆ ಸಿಗಲಿದ್ದು, ಗುಡ್ಡಾಪುರ ಉತ್ಸವ ಕೂಡ ನಡೆಯಲಿದೆ. ಎರಡು ದಿನ ವಿವಿಧೆಡೆ ಸಂಚರಿಸಿ, ಬನವಾಸಿಗೆ ಬರುವ ಕದಂಬ ಜ್ಯೋತಿಯಿಂದ ಕದಂಬೋತ್ಸವವನ್ನು ಮುಖ್ಯಮಂತ್ರಿಯವರು ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಸಾಹಿತಿ ಬಿ. ಎ. ವಿವೇಕ ರೈ ಇವರಿಗೆ ‘ಪಂಪ ಪ್ರಶಸ್ತಿ’ ಪ್ರದಾನ ಮಾಡಲಾಗುವುದು” ಎಂದು ತಿಳಿಸಿದರು. ಶಾಸಕ ಭೀಮಣ್ಣ ನಾಯ್ಕ ಮಾತನಾಡಿ “ಕದಂಬೋತ್ಸವವನ್ನು ಮನೆ ಹಬ್ಬದಂತೆ ಎಲ್ಲರೂ ಆಚರಿಸಬೇಕು” ಎಂದರು. ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ, ಉಪವಿಭಾಗಾಧಿಕಾರಿ ಕೆ. ವಿ. ಕಾವ್ಯಾರಾಣಿ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ತಪಸ್ಥಿತರಿದ್ದರು.
ಉಡುಪಿ : ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಸಂಸ್ಥೆಯು ಪ್ರಸ್ತುತ ಪಡಿಸುವ 27ನೇ ‘ಮಂಜುನಾದ’ ಸಂಗೀತ ಕಛೇರಿಯನ್ನು ದಿನಾಂಕ 03 ಮಾರ್ಚ್ 2025ರಂದು ಸಂಜೆ ಗಂಟೆ 5-30ಕ್ಕೆ ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳಾಧಾರಿತ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಯಲ್ಲಿ ಮಣಿಪಾಲದ ಯುವ ಕಲಾಮಣಿ ವಿದುಷಿ ಉಷಾ ರಾಮಕೃಷ್ಣ ಮತ್ತು ಬೆಂಗಳೂರಿನ ವಿದುಷಿ ಸ್ಮೃತಿ ಭಾಸ್ಕರ್ ಇವರ ಹಾಡುಗಾರಿಕೆಗೆ ಪುತ್ತೂರಿನ ವಿದುಷಿ ತನ್ಮಯೀ ಉಪ್ಪಂಗಳ ಇವರು ವಯಲಿನ್, ಬೆಂಗಳೂರಿನ ವಿದ್ವಾನ್ ಅನಿರುದ್ಧ ಭಟ್ ಇವರು ಮೃದಂಗ, ಬೆಂಗಳೂರಿನ ವಿದ್ವಾನ್ ಶಮಿತ್ ಗೌಡ ಇವರು ಘಟಂ ಹಾಗೂ ಪರ್ಕಳದ ಶ್ರೀಮತಿ ಸುರೇಖಾ ಭಟ್ ಮತ್ತು ಸುರತ್ಕಲ್ ಶ್ರೀಮತಿ ಸುಜಾತಾ ಎಸ್. ಭಟ್ ಇವರು ತಂಬೂರದಲ್ಲಿ ಸಾಥ್ ನೀಡಲಿದ್ದಾರೆ. ಮಣಿ ಕೃಷ್ಣಸ್ವಾಮಿ…
ಉಡುಪಿ : ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ.) ಪೆರ್ಡೂರು ಹಾಗೂ ಮತ್ಸ್ಯರಾಜ್ ಗ್ರೂಪ್ ಮಲ್ಪೆಇವರ ಸಹಯೋಗದಲ್ಲಿ ಪಡುಕರೆ ಶ್ರೀ ದೇವಿ ಭಜನಾ ಮಂದಿರ ಇದರ ಸಹಕಾರದೊಂದಿಗೆ ಮಲ್ಪೆ ಪಡುಕರೆ ಕಡಲತಡಿ ಶ್ರೀ ದೇವಿ ಭಜನಾ ಮಂದಿರದ ಆವರಣದಲ್ಲಿ ದಿನಾಂಕ 02 ಮಾರ್ಚ್ 2025ರಂದು ಬೆಳಗ್ಗೆ 9-00 ಗಂಟೆಗೆ ಉಡುಪಿ- ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಭಜನೆ ಜುಗಲ್ ಬಂದಿ ಸ್ಪರ್ಧೆ ನಡೆಯಲಿದೆ. ಬೆಳಗ್ಗೆ 9-00 ಗಂಟೆಗೆ ಉದ್ಘಾಟನಾ ಸಮಾರಂಭದಲ್ಲಿ ಪೆರ್ಡೂರು ಶ್ರೀ ಭೈರವನಾಥೇಶ್ವರ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ ಭಜನೆ ನಡೆಯಲಿದ್ದು, ಬಳಿಕ ಭಜನೆ ಸ್ಪರ್ಧೆ ಆರಂಭವಾಗಲಿದೆ. ಸಂಜೆ ಗಂಟೆ 5-30ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಉಭಯ ಜಿಲ್ಲೆಗಳ ಖ್ಯಾತ ಭಜನಾ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಭಜನ ತಂಡಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ, ಉತ್ತಮ ಹಾಡುಗಾರ, ಉತ್ತಮ ತಬಲಾ ವಾದಕ ಮತ್ತು ಉತ್ತಮ ಹಾರ್ಮೋನಿಯಂ ವಾದಕ – ವೈಯುಕ್ತಿಕ ಬಹುಮಾನಗಳಿವೆ. ಇದೇ ಸಂದರ್ಭದಲ್ಲಿ ಭಜನಾ…