Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಿತ್ರ ಮಂಡಳಿ ಕೋಟ, ಡಾ. ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಸಂಯುಕ್ತ ಆಶ್ರಯದಲ್ಲಿ ದಿನಾಂಕ 02-06-2024ರಂದು ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಂಗಕರ್ಮಿ ಗಿಳಿಯಾರು ಶ್ರೀನಿವಾಸ ಅಡಿಗರ ಇಪ್ಪತ್ತೈದು ನಾಟಕಗಳ ಬೃಹತ್ ಕೃತಿ ‘ರಂಗ ಸಂಗಮ’ವು ಲೋಕಾರ್ಪಣೆಗೊಂಡಿತು. ಈ ಕೃತಿಯನ್ನು ಲೋಕಾರ್ಪಣೆಗೊಳಿಸಿ ಶುಭ ಹಾರೈಕೆ ಮಾಡಿದ ಸಿನೇಮಾ ನಿರ್ದೇಶಕ, ರಂಗಕರ್ಮಿ, ಲೇಖಕ ಕೋಟೇಶ್ವರ ಶ್ರೀಧರ ಉಡುಪರು ಮಾತನಾಡುತ್ತಾ “ಇದೊಂದು ಅತ್ಯುತ್ತಮ ಕೃತಿಯಾಗಿದ್ದು, ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಗಳಿಸಿದೆ. ಓದಿ ಖುಷಿ ಪಟ್ಟಿದ್ದೇನೆ. ಗಿಳಿಯಾರು ಶ್ರೀನಿವಾಸ ಅಡಿಗರು ನಾಟಕ, ಜನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದವರು” ಎಂದು ಹೇಳಿದರು. ಉಡುಪಿ ಜಿಲ್ಲಾ ಕ.ಸಾ.ಪ. ನೀಲಾವರ ಸುರೇಂದ್ರ ಅಡಿಗರು ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶಕ ಗೆಳೆಯ ಸಾಧನಾ ರವಿಶಂಕರ್ ಅವರು ಭರತ್ ಪಬ್ಲಿಕೇಷನ್ ಮೂಲಕ ಸುಂದರವಾಗಿ ಪುಸ್ತಕ ಪ್ರಕಟಿಸಿದ್ದಾರೆಂದು ಶ್ಲಾಘನೆ ಮಾಡಿದ ಲೇಖಕ ಗಿಳಿಯಾರು ಶ್ರೀನಿವಾಸ ಅಡಿಗರು ನಾಟಕ ಬರೆಯುವ ಸಂದರ್ಭದಲ್ಲಿ…
ಧಾರವಾಡ : ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯು ಆಯೋಜಿಸಿದ ರಾಜ್ಯಮಟ್ಟದ ವಿದ್ಯಾರ್ಥಿ ಕಥಾಸ್ಪರ್ಧೆಯಲ್ಲಿ ಕುಮಾರಿ ಸುಪ್ರಿಯಾ ನಾಯಕ ತುಮಕೂರು ಪ್ರಥಮ, ಕುಮಾರಿ ಪ್ರತಿಭಾ ಹೆಗಡೆ ಶಿರಸಿ ದ್ವಿತೀಯ ಹಾಗೂ ಕುಮಾರಿ ದೇವಿಕಾ ಪಿ. ಕಾಸರಗೋಡು ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಸುಮಾರು ಐವತ್ತಕ್ಕೂ ಹೆಚ್ಚು ಕತೆಗಳು ಸ್ಪರ್ಧೆಗೆ ಬಂದಿದ್ದವು. ತೀರ್ಪುಗಾರರಾದ ಪ್ರಶಾಂತ್ ಮಾಡಳ್ಳಿ ಮಾತನಾಡಿ “ಸಮಕಾಲೀನ ವಸ್ತುಸ್ಥಿತಿಯನ್ನು ಆಯ್ದು ಬರೆದ ಕತೆಗಳು ತಮ್ಮ ಮಂಡನೆ, ಧಾಟಿ ಮತ್ತು ರಚನಾ ವಿನ್ಯಾಸಗಳಿಂದ ಗಮನ ಸೆಳೆಯುತ್ತದೆ. ಉತ್ತಮ ಭಾಷಾ ಪ್ರೌಢಿಮೆಯನ್ನು ಮೆರೆದ ಕತೆಗಾರರಿಗೆ ಒಳ್ಳೆಯ ಭವಿಷ್ಯವಿದೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಾಹಿತ್ಯ ಗಂಗಾ ಸಂಸ್ಥೆಯ ಮುಖ್ಯಸ್ಥ ವಿಕಾಸ ಹೊಸಮನಿ ಮತ್ತು ಸಂಚಾಲಕ ಡಾ. ಸುಭಾಷ್ ಪಟ್ಟಾಜೆಯವರು ಬಹುಮಾನಿತರಾದ ಮತ್ತು ಭಾಗವಹಿಸಿದ ಸ್ಪರ್ಧಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಭಾಷಿಕ ಸಂವಹನವು ಮನುಷ್ಯ ನಾಗರಿಕತೆಯ ದಾರಿಯಲ್ಲಿ ಕಂಡುಕೊಂಡ ಕ್ರಿಯೆ. ದಿನನಿತ್ಯದ ವ್ಯವಹಾರಗಳ ವಿವರದ ದಾಖಲೆಗಾಗಿ ಅದು ಹುಟ್ಟಿಕೊಂಡಿತು ಎನ್ನಬಹುದೇನೋ. ನಮ್ಮೊಳಗೆ ನಾವು ಇಳಿಯಲು ಸಹಾಯ ಮಾಡುವುದು ಭಾಷೆಯೆಂಬ ಸೋಪಾನ. ಅವಿರತವಾಗಿ ಅವರವರ ಇಂಗಿತವನ್ನು ಭಾಷೆಯ ಮೂಲಕವೇ ಜನ ಮನಗಳಿಗೆ ಹೇಳುವುದು ಜಗದ ನಿಯಮವಾಗಿದೆ. ಗತಕಾಲದಿಂದಲೂ ಶಿಲೆಗಳ ಮೇಲೆ, ತಾಮ್ರ ಪಟಗಳ ಮೇಲೆ, ತಾಳೆ ಗರಿಗಳ ಮೇಲೆ ಅಕ್ಷರಗಳನ್ನು ಅಚ್ಚು ಮಾಡಿದ್ದರ ಹಿಂದಿರುವ ಉದ್ದೇಶವೇನಿತ್ತು? ಇಂದಿನ ದಿನಗಳಲ್ಲಿ ಕೃತಿಗಳನ್ನು ಪ್ರಕಟಿಸುವ ಕಾರಣವೇನು? ಇವೆರಡಕ್ಕೂ ಉತ್ತರ ‘ತ್ರಿಕಾಲಪ್ರಜ್ಞೆ’ಯೇ? ನಮ್ಮ ಓದಿನ ಸಂಸ್ಕೃತಿ ಆರಂಭವಾದದ್ದು ಮಣ್ಣಿನ ಶಿಲಾಪಲಕಗಳಿಂದ. ಆ ನಂತರವೇ ಮಾನವ ರೂಪುಗೊಳ್ಳುತ್ತ ಬಂದು ಪ್ರಸ್ತುತದಲ್ಲಿ ತನ್ನದಲ್ಲದ ಲೋಕದ ಬಗೆಗೂ ತಿಳಿಯುವಂತಾಗಿದೆ. ಇವೆಲ್ಲವೂ ಓದುವ, ದಾಖಲಿಸುವ ಸಂಸ್ಕೃತಿಯಿಂದಲೇ ಹುಟ್ಟಿಕೊಂಡ ನಡವಳಿಕೆಗಳು ಎಂಬುದಾಗಿ ಹಿಂದಣ ಹೆಜ್ಜೆಗಳು ಹೇಳುತ್ತವೆ. ನಮ್ಮ ನಡೆ ಪಡೆ ಎಲ್ಲವನ್ನು ಸಂಸ್ಕಾರಗೊಳಿಸಿ ಅದನ್ನು ತಲೆಮಾರಿನಿಂದ ತಲೆಮಾರಿಗೆ ಬೆಳೆಸಿಕೊಂಡು ಹೋಗಬೇಕೆಂದರೆ ಅದಕ್ಕೆ ತಕ್ಕ ಸಿದ್ಧತೆಯನ್ನು ಮಾಡಬೇಕಾಗುವುದು. ಇಲ್ಲವಾದರೆ ಆ ಹರಿವು ಎಲ್ಲೋ ಒಂದು ಕಡೆ ಸ್ಥಗಿತವಾಗುತ್ತದೆ.…
ಉಡುಪಿ : ಸುಹಾಸಂ ಉಡುಪಿ ಇದರ ವತಿಯಿಂದ ಶ್ರೀ ದಿನೇಶ್ ಉಪ್ಪೂರ ಇವರ ‘ಪ್ರವಾಸ ಕಥನ’ ಕೃತಿ ಲೋಕಾರ್ಪಣೆ ಹಾಗೂ ಉಪನ್ಯಾಸ ಕಾರ್ಯಕ್ರಮವು ದಿನಾಂಕ 08-06-2024ರಂದು ಸಂಜೆ 4-00 ಗಂಟೆಗೆ ಉಡುಪಿಯ ಕಿದಿಯೂರು ಹೊಟೇಲ್ ಅನಂತಶಯನ ಹಾಲ್ ನಲ್ಲಿ ನಡೆಯಲಿದೆ. ಸುಹಾಸಂ ಉಡುಪಿ ಇದರ ಅಧ್ಯಕ್ಷರಾದ ಶ್ರೀ ಎಚ್. ಶಾಂತರಾಜ ಐತಾಳ ಇವರ ಅಧ್ಯಕ್ಷತೆಯಲ್ಲಿ ನಿವೃತ್ತ ಉಪನ್ಯಾಸಕರಾದ ಡಾ. ಶ್ರೀಕಾಂತ ರಾವ್ ಸಿದ್ಧಾಪುರ ಇವರು ಕೃತಿ ಲೋಕಾರ್ಪಣೆ ಹಾಗೂ ಪರಿಚಯ ಮಾಡಲಿರುವರು. ಇದೇ ಸಂದರ್ಭದಲ್ಲಿ ಹೊನ್ನಾವರದ ನಾಗರಿಕ ಪತ್ರಿಕೆಯ ಸಂಪಾದಕರಾದ ಡಾ. ಕೃಷ್ಣಮೂರ್ತಿ ಹೆಬ್ಬಾರ್ ಇವರು ಉಪನ್ಯಾಸ ನೀಡಲಿದ್ದಾರೆ.
ತೆಕ್ಕಟ್ಟೆ: ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದದ ‘ಶ್ವೇತಯಾನ-31’ರ ಕಾರ್ಯಕ್ರಮವಾಗಿ ಯಕ್ಷಗಾನ ಭಾಗವತಿಗೆ, ಚಂಡೆ, ಮದ್ದಳೆ, ಹೆಜ್ಜೆ ತರಗತಿಗಳ ಉದ್ಘಾಟನಾ ಸಮಾರಂಭವು ದಿನಾಂಕ 01-06-2024ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ತರಗತಿಗಳನ್ನು ದೀಪ ಬೆಳಗಿ ಉದ್ಘಾಟಿಸಿದ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಕಲೆಯನ್ನು ಗೌರವಿಸಿ, ಪ್ರೀತಿಸಿದರೆ ಕಲೆ ನಮ್ಮನ್ನು ಅಪ್ಪಿಕೊಳ್ಳುತ್ತದೆ. ಸಪ್ತ ಬಗೆಯ ಸುಪ್ತ ಪ್ರಕಾರಗಳಿರುವ ಕಲೆ ಯಕ್ಷಗಾನ. ಇಂತಹ ಸಹಸ್ರ ಗುಣವಿರುವ ಯಕ್ಷಗಾನ ಕಲೆಯನ್ನು ಮೀರಿಸುವ ಕಲೆ ಪ್ರಪಂಚದಲ್ಲಿ ಇನ್ನೊಂದಿಲ್ಲ. ಕಲಿಯುವಿಕೆಯಲ್ಲಿ ಆಸಕ್ತಿ ಹೊಂದಿ, ಶ್ರದ್ಧೆ ಭಕ್ತಿಗಳನ್ನು ಹೊಂದಿ ಕಲಿಯಿರಿ. ಕಲೆಯ ಮೂಲಕ ಪ್ರಪಂಚದಾದ್ಯಂತ ನಿಮಗೆ ಗೌರವ ಸಿಗುತ್ತದೆ. ವಿದ್ಯೆ ಬದುಕಿಗೆ ಬೇಕು, ಕಲೆ ಜೀವನ ಅರಳುವುದಕ್ಕೆ ಬೇಕು. ಕಲೆಗೆ ಮರಣವಿಲ್ಲ. ಇಂದು ಸಮರ್ಥ ಗುರುಗಳಿಂದ ಯಕ್ಷಗಾನ ಕಲಿತು, ನಾಳೆ ಭವಿಷ್ಯವಾಳಿ, ಮುಂದಿನ ಜನಾಂಗಕ್ಕೆ ದಾಟಿಸುವ ಕೆಲಸ ಆಗಬೇಕು.” ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯಕ್ಷಗಾನ ಕಲಾವಿದ ಹಾಗೂ ಸಂಘಟಕರಾದ ಮಹಮದ್ ಗೌಸ್ ಮಾತನಾಡಿ “ಜಾತಿ…
ಖ್ಯಾತಿಗೂ ಮೀರಿದ ಸರಳತೆ. ಮೃದು. ತಲೆಗೊಂದು ಕೆಂಪು ಮಡಿ ಸುತ್ತಿಕೊಂಡು ಬಿಳೆ ಅಂಗಿ, ಲುಂಗಿಯೊಂದಿಗೆ ಸಣ್ಣದೊಂದು ಶ್ರುತಿ ಪೆಟ್ಟಿಗೆ, ತಾಳಗಳ ಜೊತೆ ವೇದಿಕೆಗೆ ಬಂದರೆ ಪ್ರೇಕ್ಷಕರಿಂದ ಕರತಾಡನ. ಭೀಷ್ಮ ಪರ್ವದ ಶ್ರೀಮನೋಹರ ಸ್ವಾಮಿ ಫರಾಕು, ಶ್ರೀಕೃಷ್ಣ ಸಂಧಾನದ ಅನೇಕ ಪದ್ಯಗಳು, ಜಾಂಬವತಿ ಕಲ್ಯಾಣದ ರಾಮ ರಾಘವ, ರಾಮ ನಿರ್ಯಾಣದ ಲಲನೆ ಜಾನಕಿ ಮೊದಲೆ ಪೋದಳು, ಲವಕುಶ, ಬ್ರಹ್ಮ ಕಪಾಲ, ರತ್ನಾವತಿ ಕಲ್ಯಾಣ, ಕಾರ್ತ್ಯವೀರಾರ್ಜುನ, ಚಂದ್ರಹಾಸ ಚರಿತ್ರೆ, ರಾಮಾಂಜನೇಯ ಸೇರಿದಂತೆ ಅನೇಕ ಪದ್ಯಗಳಿಗೆ ಇವರು ಜನಪ್ರಿಯರು. ಶುದ್ಧ ಸಾಂಪ್ರದಾಯಿಕ ಮಟ್ಟಿನಲ್ಲಿ ಶುದ್ಧ ಭಾವದಲ್ಲಿ, ಪದ್ಯದ ಶಬ್ಧ, ಬಂಧಕ್ಕೆ ಚ್ಯುತಿ ಬರದಂತೆ ಪದ್ಯ ಹೇಳುವ ಕರುನಾಡಿನ ಶ್ರೇಷ್ಠ ಭಾಗವತರು. ಓದಿದ್ದು ಎಸ್ಸೆಸ್ಸೆಲ್ಸಿ. ಆದರೂ ಕ್ಷೇತ್ರದಲ್ಲಿ ಮಾಡಿದ ಸಾಧನೆ ಸಣ್ಣದಲ್ಲ. ತಂದೆಯವರೂ ಇಡಗುಂಜಿ ಯಕ್ಷಗಾನ ಮೇಳದಲ್ಲಿ ವೇಷಧಾರಿಯಾಗಿದ್ದರ ಪರಿಣಾಮ ಎಂಬಂತೆ ಇವರನ್ನೂ ಅತ್ತ ಸೆಳೆದಿತ್ತು. ತಂದೆಯವರು ಹಾಗೂ ಅವರ ಒಡನಾಟದ ಕಲಾವಿದರು ಇವರಿಗೆ ಪ್ರೇರಣೆ ಆದರು. ಉತ್ತರ ಕನ್ನಡದ ಸಿದ್ದಾಪುರ ಪೇಟೆ ಸಮೀಪದ ಕೊಳಗಿ ಎಂಬ…
ಮಂಜೇಶ್ವರ : ‘ಶ್ರೀ ಮಾತಾ ಕಲಾಲಯ’ ಹಾಗೂ ‘ರೂವಾರಿ’ ಸಂಸ್ಥೆಗಳು ಜಂಟಿಯಾಗಿ ಆಯೋಜಿಸುತ್ತಿರುವ ಕನ್ನಡ, ತುಳು ಭಕ್ತಿ, ಭಾವ, ಜನಪದ ಗೀತೆ, ಚಿತ್ರಕಲೆ, ಯೋಗ, ಶಾಸ್ತ್ರೀಯ ನೃತ್ಯ ಹಾಗೂ ಶಾಸ್ತ್ರೀಯ ಸಂಗೀತ ತರಗತಿಗಳ ಉದ್ಘಾಟನಾ ಸಮಾರಂಭವು ದಿನಾಂಕ 02-06-2024ರ ಆದಿತ್ಯವಾರದಂದು ಕುಂಜತ್ತೂರಿನ ಲಕ್ಷ್ಮೀ ಕಣ್ಣಪ್ಪ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ವಿಜಯಾ ಬ್ಯಾಂಕಿನ ನಿವೃತ್ತ ಎ. ಜಿ. ಎಂ. ಆದ ಶ್ರೀ ಮೋಹನ್ ಶೆಟ್ಟಿ ಹಾಗೂ ನಿವೃತ್ತ ಅಪರ ಜಿಲ್ಲಾಧಿಕಾರಿಯಾದ ಶ್ರೀ ಪ್ರಭಾಕರ ಶರ್ಮ ಭಾಗವಹಿಸಿದರು. ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ ಚಾಲನೆ ನೀಡಿ ಮಾತನಾಡಿದ ಶ್ರೀ ಪ್ರಭಾಕರ ಶರ್ಮ “ನಗರ ಪ್ರದೇಶಗಳಲ್ಲಿ ಸಾಕಷ್ಟು ನೃತ್ಯ ಹಾಗೂ ಚಿತ್ರಕಲಾ ತರಗತಿಗಳಿರುತ್ತವೆ, ಆದರೆ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ಇಲ್ಲಿ ತರಗತಿಗಳನ್ನು ಪ್ರಾರಂಭಿಸಿರುವುದು ಶ್ಲಾಘನೀಯ. ಈ ಪ್ರದೇಶದ ಜನರು ತಮ್ಮ ಮಕ್ಕಳನ್ನು ಇಲ್ಲಿ ತರಗತಿಗಳಿಗೆ ಸೇರಿಸುವ ಮೂಲಕ ಮಕ್ಕಳ ಅಭಿವೃದ್ಧಿಗೆ ಹಾಗೂ ಇಂತಹ ಗ್ರಾಮೀಣ ಪ್ರದೇಶದ ತರಗತಿಗಳಿಗೆ ಪ್ರೊತ್ಸಾಹ ನೀಡಬೇಕು.” ಎಂದು ವಿನಂತಿಸಿದರು. ಕಾರ್ಯಕ್ರಮದಲ್ಲಿ ‘ಶ್ರೀ…
ಮಂಗಳೂರು : ಮಂಗಳೂರಿನ ನಾಟ್ಯಾರಾಧನಾ ಕಲಾಕೇಂದ್ರದ ಮೂವತ್ತನೆಯ ವರ್ಷಾಚರಣೆಯ ಪ್ರಯುಕ್ತ ನಡೆಸುತ್ತಿರುವ ನೃತ್ಯಾಮೃತ ಸರಣಿ ಕಾರ್ಯಕ್ರಮಗಳ ಅಂಗವಾಗಿ ನಡೆದ ‘ನೃತ್ಯ ಚಿಗುರು’ 10 ವರುಷಗಳ ಒಳಗಿನ ಪುಟಾಣಿ ಪ್ರತಿಭೆಗಳ ಏಕವ್ಯಕ್ತಿ ನೃತ್ಯ ಪ್ರದರ್ಶನ ಕಾರ್ಯಕ್ರಮವು ದಿನಾಂಕ 30-05-2024ರಂದು ಮಂಗಳೂರಿನ ಕೆನರಾ ಸಿ.ಬಿ.ಎಸ್.ಸಿ. ಶಾಲೆಯ ಭುವನೇಂದ್ರ ಸಭಾಸದನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿ ಮಹಿಳಾ ವಿಭಾಗದ ಅಧ್ಯಕ್ಷೆ ವೀಣಾ ಕೆ. ರಾವ್ ಇವರು ಮಾತನಾಡಿ “ಭರತನಾಟ್ಯದಂತಹ ಶಾಸ್ತ್ರೀಯ ಕಲೆಗಳನ್ನು ಎಳೆವೆಯಿಂದಲೇ ಕಲಿತರೆ ಮಕ್ಕಳಿಗೆ ಪುರಾಣ ಕಥೆಗಳ ಜತೆಗೆ ಜೀವನದ ಹಲವು ಮುಖಗಳು ತಿಳಿಯುತ್ತವೆ. ದೈಹಿಕ ಕ್ಷಮತೆಯೊಂದಿಗೆ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ” ಎಂದು ನುಡಿದರು. ಸಂಸ್ಥೆಯ ನಿರ್ದೇಶಕಿ ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ ಅವರ ನೃತ್ಯ ಕಲೆಯಲ್ಲಿನ ಪರಿಶ್ರಮ ಮತ್ತು ಸಂಸ್ಥೆಯ ತ್ರಿಂಶೋತ್ಸವ ಸಂದರ್ಭದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ವಹಿಸಿದ್ದು, ನೃತ್ಯ ವಿದ್ಯಾಲಯ ಕದ್ರಿಯ ನಿರ್ದೇಶಕ ವಿದ್ವಾನ್…
ಬದಿಯಡ್ಕ : ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಯಕ್ಷಗಾನದ ನಾಟ್ಯ ಹಾಗೂ ಹಿಮ್ಮೇಳ ತರಗತಿ ಆರಂಭವಾಗಲಿದೆ. ಪ್ರತಿ ವಾರ ಬದಿಯಡ್ಕದ ನವಜೀವನ ವಿದ್ಯಾಲಯ (ಮೂಕಾಂಬಿಕ ಸರ್ವಿಸ್ ಸ್ಟೇಷನ್ ಮುಂಭಾಗ)ದಲ್ಲಿ ತರಬೇತಿ ನಡೆಯಲಿದೆ. ವಿದ್ಯಾರ್ಥಿಗಳಿಗೆ ವಯಸ್ಸಿನ ಮಿತಿ ಇಲ್ಲ. ಯಕ್ಷಗಾನದ ಜತೆಗೆ ಯೋಗ, ವ್ಯಕ್ತಿತ್ವ ವಿಕಸನ, ಕ್ರಾಫ್ಟ್ ಮೊದಲಾದ ಕಾರ್ಯಾಗಾರ ಉಚಿತವಾಗಿವೆ. ಜೂನ್ ದ್ವಿತೀಯ ವಾರದಲ್ಲಿ ನೂತನ ತಂಡದ ಉದ್ಘಾಟನೆ ನಡೆಸಲು ಉದ್ದೇಶಿಸಲಾಗಿದೆ. ತರಗತಿಗೆ ಸೇರಲಿಚ್ಛಿಸುವವರು ಶ್ರೀಶ ಕುಮಾರ ಪಂಜಿತಡ್ಕ ಅವರನ್ನು ಸಂಪರ್ಕಿಸಬಹುದು.
ಮಂಗಳೂರು : ಮಂಗಳೂರಿನ ಕೋಡಿಕಲ್ಲಿನ ಸರಯೂ ಮಕ್ಕಳ ಮೇಳದ ‘ಸರಯೂ ಸಪ್ತಾಹ-2024’ ಸಾಧಕ ಸನ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳ ಮದ್ದಳೆ ಕಾರ್ಯಕ್ರಮದ ಸಮಾರೋಪ ಸಮಾರಂಭವು ದಿನಾಂಕ 31-05-2024ರಂದು ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು “ವಿಶ್ವವ್ಯಾಪಕವಾಗಿರುವ ಹಾಗೂ ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯವನ್ನು ಸಾವಿರ ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿರುವ ಯಕ್ಷಗಾನವನ್ನು ನಮ್ಮ ಮುಂದಿನ ಪೀಳಿಗೆಗೆ ಸಕಾರಾತ್ಮಕವಾಗಿ ತಲಪಿಸೋಣ.” ಎಂದು ಶುಭ ಹಾರೈಸಿದರು. ಯಕ್ಷಗಾನ ಭಾಗವತ ಹಾಗೂ ಕಲಾವಿದರಾದ ತೋನ್ಸೆ ಪುಷ್ಕಳ ಕುಮಾರ್ ಪ್ರಸ್ತಾವಿಸಿದರು. ಕಲಾವಿದ ಡಾ. ಪೂವಪ್ಪ ಶೆಟ್ಟಿ ಅಳಿಕೆ ಹಾಗೂ ಹವ್ಯಾಸಿ ಭಾಗವತ ದೇವಿ ಪ್ರಕಾಶ್ ರಾವ್ ಕಟೀಲ್ ಇವರನ್ನು ಗೌರವಿಸಲಾಯಿತು. ಕೃಪಾ ಖಾರ್ವಿ ಹಾಗೂ ಶೋಭಾ ಪೇಜಾವರ ಸನ್ಮಾನ ಪತ್ರ ವಾಚಿಸಿದರು. ಕೇಶವ ಹೆಗ್ಡೆ, ಡಾ. ಪ್ರಖ್ಯಾತ್ ಶೆಟ್ಟಿ, ಮಾಧವ ನಾವಡ, ವೇದ ಮೂರ್ತಿ ಡಿ. ವಿ. ರಮೇಶ್…