Subscribe to Updates
Get the latest creative news from FooBar about art, design and business.
Author: roovari
ಪೈವಳಿಕೆ : ಕವಿಗಳ ಸೃಜನಶೀಲತೆಗೆ ಪ್ರೋತ್ಸಾಹ ನೀಡಲು ಮತ್ತು ಹೊಸ ತಲೆಮಾರಿನ ಬರಹಗಾರರನ್ನು ಉತ್ತೇಜಿಸಲು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕವು ಆರಂಭಿಸಿದ ವಿನೂತನ ಕಾರ್ಯಕ್ರಮ ‘ಕವಿತಾ ಕೌತುಕ’ ಸರಣಿ ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ 29 ಸೆಪ್ಟೆಂಬರ್ 2024ರಂದು ಪೊಸಡಿ ಗುಂಪೆಯ ನಿಸರ್ಗಧಾಮದಲ್ಲಿ ನಡೆಯಿತು. ನಿಸರ್ಗಧಾಮದ ಮಾಧವ ಇವರು ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಕೆ.ಎ.ಎಂ. ಅನ್ಸಾರಿ, ಥೋಮಸ್ ಡಿ’ಸೋಜಾ, ವನಜಾಕ್ಷಿ ಪಿ. ಚೆಂಬ್ರಕಾನ, ಸೌಮ್ಯಾ ಪ್ರವೀಣ್, ಹರ್ಷಿತಾ ಎಸ್. ಶಾಂತಿಮೂಲೆ, ವಿದ್ಯಾಶ್ರೀ ಜೆ. ಕವನವಾಚನ ಮಾಡಿದರು. ಜೋನ್ ಡಿ’ಸೋಜಾ, ರವಿಲೋಚನ ಸಿ.ಎಚ್., ರಾಮಚಂದ್ರಭಟ್ ಪಿ., ಇಂದಿರಾ ರವಿ ಬೆಂಗಳೂರು, ಶ್ರೀಧರ ಕುಂಜತ್ತೂರು, ಮಾಲತಿ ಕಣ್ಣನ್, ರವೀಂದ್ರನಾಥ ಪಾವಲ್ಕೋಡಿ, ಚಂದ್ರಾವತಿ ದಾಮೋದರ, ಶ್ರೀರಾಮ ಭಟ್ ಭಾಗವಹಿಸಿದ ಕವಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಪ್ರೊ.…
ಸುರತ್ಕಲ್ : ನಾಗರಿಕ ಸಲಹಾ ಸಮಿತಿ ಸುರತ್ಕಲ್ ಟ್ರಸ್ಟ್ (ರಿ.) ಇದರ ವತಿಯಿಂದ ‘ಎಂ.ಸಿ.ಎಫ್. ನಾಗರಿಕ ಸಲಹಾ ಸಮಿತಿ ಸಾಂಸ್ಕೃತಿಕ ವೇದಿಕೆ’ ಇದರ ಉದ್ಘಟನಾ ಸಮಾರಂಭವನ್ನು ದಿನಾಂಕ 03 ಅಕ್ಟೋಬರ್ 2024ರಂದು ಸುರತ್ಕಲ್ ಫ್ಲೈ ಓವರ್ ತಳಭಾಗದಲ್ಲಿ ಆಯೋಜಿಸಲಾಗಿದೆ. ಕುಳಾಯಿ ಇಸ್ಕಾನ್ ಇದರ ಅಧ್ಯಕ್ಷರಾದ ಶ್ರೀ ನಾಮ ನಿಷ್ಠ ದಾಸ್ ಇವರು ಈ ವೇದಿಕೆಯ ಉದ್ಘಾಟನೆ ಮಾಡಲಿದ್ದು, ಸಭಾ ಕಾರ್ಯಕ್ರಮದ ಬಳಿಕ ಸುರತ್ಕಲ್ಲಿನ ರೋಟರಿ ಕ್ಲಬ್ ಇವರ ಪ್ರಾಯೋಜಕತ್ವದಲ್ಲಿ ‘ಇನಿ ಧನಿ ಸವಿಗಾನ’ ಸಂಗೀತ ಕಛೇರಿಯು ಪ್ರಸ್ತುತಗೊಳ್ಳಲಿದೆ.
ಮೈಸೂರು : ನಿರಂತರ ಫೌಂಡೇಶನ್ (ರಿ.), ಪ್ರಥ್ವಿ ಟ್ರಸ್ಟ್ (ರಿ.) ಮತ್ತು ಕಲಾಸುರುಚಿ ಇವುಗಳ ಸಹಯೋಗದಲ್ಲಿ ಉಮೇಶ್ ತೆಂಕನಹಳ್ಳಿಯವರ ‘ಕಪ್ಪು ಹಲ್ಲಿನ ಕಥೆ’ ಎಂಬ ಕಾದಂಬರಿಯ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 06 ಅಕ್ಟೋಬರ್ 2024ರಂದು ಬೆಳಿಗ್ಗೆ 11-00 ಗಂಟೆಗೆ ಮೈಸೂರಿನ ಕುವೆಂಪು ನಗರ, ಚಿತ್ರಭಾನು ರಸ್ತೆ, ಸುರುಚಿ ರಂಗಮನೆಯಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕವಯಿತ್ರಿ ಪ್ರೊ. ಚ. ಸರ್ವಮಂಗಳ, ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಡಾ. ಎಚ್.ಎಲ್. ನಾಗರಾಜ್, ಮೈಸೂರಿನ ಕನ್ನಡಪ್ರಭ ಸ್ಥಾನಿಕ ಸಂಪಾದಕರಾದ ಶ್ರೀ ಅಂಶಿ ಪ್ರಸನ್ನ ಕುಮಾರ್, ಹಿರಿಯ ಕಲಾವಿದರಾದ ಶ್ರೀ ಮಂಡ್ಯ ರಮೇಶ್ ಮತ್ತು ಲೇಖಕ ಶ್ರೀ ಉಮೇಶ್ ತೆಂಕನಹಳ್ಳಿ ಇವರುಗಳು ಭಾಗವಹಿಸಲಿರುವರು.
ಶಿವಮೊಗ್ಗ : ಕ್ರಿ.ಶ. 1930ರಲ್ಲಿ ಸ್ಥಾಪನೆಗೊಂಡಿರುವ ಹಿರಿಯ ಸಂಸ್ಥೆಯಾದ ಶಿವಮೊಗ್ಗದ ಕರ್ನಾಟಕ ಸಂಘದ ಈ ಬಾರಿಯ ‘ಎಸ್.ವಿ. ಪರಮೇಶ್ವರ ಭಟ್ಟ ಪುಸ್ತಕ ಪ್ರಶಸ್ತಿ’ಗೆ ಉಡುಪಿಯ ರಾಜಾರಾಮ್ ತಲ್ಲೂರು ಇವರ ‘ಡಾಕ್ಯುಮೆಂಟ್’ ಎಂಬ ಅನುವಾದಿತ ಕೃತಿ ಹಾಗೂ ‘ಎಂ.ಕೆ. ಇಂದಿರಾ ಪುಸ್ತಕ ಪ್ರಶಸ್ತಿ’ಗೆ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಇವರ ‘ಇರವಿನ ಅರಿವು’ ವಿಮರ್ಶಾ ಕೃತಿ ಪಾತ್ರವಾಗಿದ್ದು, ದಿನಾಂಕ 28 ಸೆಪ್ಟೆಂಬರ್ 2024ರಂದು ಶಿವಮೊಗ್ಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಶರತ್ ಅನಂತಮೂರ್ತಿಯವರು ಪುಸ್ತಕ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಸಮಾರಂಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಸುಂದರರಾಜ ಹಾಗೂ ಕಾರ್ಯದರ್ಶಿ ಆಶಾಲತಾ ಇವರುಗಳು ಉಪಸ್ಥಿತರಿದ್ದರು.
ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ.) ಇದರ ವತಿಯಿಂದ ದಿನಾಂಕ 6 ಅಕ್ಟೋಬರ್ 2024ರಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಹಿರಿಯ ಸಾಹಿತಿಗಳು, ಶಿಕ್ಷಣ ತಜ್ಞರು, ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಲೀಲ ವಾಸುದೇವ್ ಇವರ ಸರ್ವಾಧ್ಯಕ್ಷತೆಯಲ್ಲಿ ಬೆಳಗ್ಗೆ ಗಂಟೆ 9-30ರಿಂದ ರಾಜ್ಯ ಮಟ್ಟದ 15ನೇ ಕನ್ನಡ ಸಾಹಿತ್ಯ ಸಂಸ್ಕೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಟ್ರಸ್ಟಿನ ಅಧ್ಯಕ್ಷರಾದ ಡಾ. ಸಿಸಿರಾ ತಿಳಿಸಿದ್ದಾರೆ. ಬೆಳಗ್ಗೆ 9-30 ಗಂಟೆಗೆ ಬೆಂಗಳೂರು ನಗರ ಜಿಲ್ಲಾ ಕ.ಸಾ.ಪ.ದ ನಿಕಟ ಪೂರ್ವ ಅಧ್ಯಕ್ಷರಾದ ಅನಿಕೇತನ ಶ್ರೀ ಮಾಯಣ್ಣ ಧ್ವಜಾರೋಹಣ ನೆರವೇರಿಸಲಿದ್ದು, ಕವಯತ್ರಿ ಶ್ರೀಮತಿ ಶಾಂತಲಾ ಸುರೇಶ್ ಇವರು ಪುಸ್ತಕ ಮಾರಾಟ ಮತ್ತು ಪ್ರದರ್ಶನ ಮಳಿಗೆಗೆ ಚಾಲನೆ ನೀಡುವರು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಹಿತಿ ಶ್ರೀಮತಿ ಅಂಬುಜಾ ಪ್ರಕಾಶ್ ಇವರು ಹಾಡಿನ ಮೂಲಕ ಪ್ರಾರಂಭಿಸಲಿದ್ದಾರೆ. ಬೆಳಗ್ಗೆ 10-30 ಗಂಟೆಗೆ ಖ್ಯಾತ ವಿಮರ್ಶಕ, ವಿದ್ವಾಂಸರಾದ ಡಾ. ಜಿ. ರಾಮಕೃಷ್ಣ ಇವರು ಈ ಸಮಾವೇಶವನ್ನು ಉದ್ಘಾಟಿಸಲಿದ್ದು, ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೇಪುರಂ…
ಕಾಸರಗೋಡು : ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಮೊದಲಿಗೆ ಸ್ಥಳ ಸಾನಿಧ್ಯ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜಾರ್ಚನೆ ಸಲ್ಲಿಸಿದ ಬಳಿಕ ಕೀರಿಕ್ಕಾಡು ಸುಬ್ರಹ್ಮಣ್ಯ ಭಟ್ ಸಂಸ್ಮರಣೆ ಹಾಗೂ ಯಕ್ಷಗಾನ ತಾಳಮದ್ದಳೆಯು ದಿನಾಂಕ 28-09-2024ನೇ ಶನಿವಾರದಂದು ನಡೆಯಿತು. ಶಾಂತಕುಮಾರಿ ದೇಲಂಪಾಡಿ, ಉಷಾಕಾವೇರಿ ಗುಡ್ಡಡ್ಕ, ಪೂರ್ಣಿಮಾ ಬನಾರಿ, ಈಶ್ವರಿ ಪೃಥ್ವಿ ಅವರು ಭಗವದ್ಗೀತಾ ಪಾರಾಯಣವನ್ನು ನಡೆಸಿಕೊಟ್ಟರು. ನಂತರ ಪೂಜಾ ಸಿ.ಎಚ್. ದೇಲಂಪಾಡಿ ಇವರ ನಿರೂಪಣೆಯೊಂದಿಗೆ ಆರಂಭಗೊಂಡ ಸಂಸ್ಮರಣೆ ಸಭೆಯಲ್ಲಿ ಶ್ರೀಮತಿ ಜಯಂತಿ ಗುಂಡ್ಯಡ್ಕ ಪ್ರಾರ್ಥನಾಗೀತೆಯನ್ನು ಹಾಡಿದರು. ಶ್ರೀಮತಿ ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಸ್ವಾಗತಿಸಿದರು. ಕಲಾ ಸಂಘದ ಅಧ್ಯಕ್ಷರಾದ ಹಿರಿಯ ಸಾಹಿತಿ ಡಾ. ರಮಾನಂದ ಬನಾರಿಯವರು ಪ್ರಾಸ್ತವಿಕ ನುಡಿಗಳೊಂದಿಗೆ ಸಂದರ್ಭೋಚಿತ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿದ್ವಾಂಸ ಅರ್ಥಧಾರಿ ವೆಂಕಟೇಶ್ ಕುಮಾರ್ ಉಳುವಾನ ಇವರು ಮಾತನಾಡುತ್ತಾ ಬನಾರಿ ಕಲಾ ಸಂಘದ ಚಟುವಟಿಕೆ ಮತ್ತು ನಿರಂತರತೆಯನ್ನು ಶ್ಲಾಘಿಸಿದರು. ಸಂಘದ ಹಿರಿಯ ಕಲಾವಿದ ಬೆಳ್ಳಿಪ್ಪಾಡಿ ಸದಾಶಿವ ರೈ…
ಮಂಗಳೂರು : ಮಂಗಳೂರಿನ ಕದ್ರಿ ದೇವಸ್ಥಾನದ ಆವರಣದಲ್ಲಿರುವ ‘ಕದಳಿ ಕಲಾ ಕೇಂದ್ರ’ ಇದರ ವತಿಯಿಂದ ‘ಕದಳಿ ದಶಾಹ’ ಮಕ್ಕಳ ಹಾಗೂ ಯುವ ತಂಡಗಳಿಂದ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 03 ಅಕ್ಟೋಬರ್ 2024ರಿಂದ 12 ಅಕ್ಟೋಬರ್ 2024ರವರೆಗೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 03 ಅಕ್ಟೋಬರ್ 2024ರಂದು ಮಾಜಿ ರಾಜ್ಯಾಧ್ಯಕ್ಷರಾದ ಶ್ರೀ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ಮೂಡಬಿದರೆಯ ಶ್ರೀಪತಿ ಭಟ್ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿರುವರು. ಸಭಾ ಕಾರ್ಯಕ್ರಮದ ಬಳಿಕ ಉಡುಪಿ ಜಿಲ್ಲೆಯ ಪುತ್ತೂರಿನ ಶ್ರೀ ಭಗವತೀ ಯಕ್ಷ ಕಲಾ ಬಳಗ (ರಿ.) ಇವರಿಂದ ‘ನರಕಾಸುರ ಮೋಕ್ಷ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ದಿನಾಂಕ 04 ಅಕ್ಟೋಬರ್ 2024ರಂದು ಉಡುಪಿ ಜಿಲ್ಲೆಯ ಎಲ್ಲೂರಿನ ಶ್ರೀ ಪಂಚಾಕ್ಷರೀ ಮಕ್ಕಳ ಮೇಳ ಇವರಿಂದ ‘ಸ್ವಯಂ ಪ್ರಭಾ ಪರಿಣಯ’, ದಿನಾಂಕ 05 ಅಕ್ಟೋಬರ್ 2024ರಂದು ಕಾರ್ಕಳ ಲಕ್ಷ್ಮೀಪುರದ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ಯಕ್ಷಗಾನ ಮಂಡಳಿಯವರಿಂದ ‘ದಕ್ಷ ಯಜ್ಞ’, ದಿನಾಂಕ…
ಮಂಗಳೂರು : ಆಕೃತಿ ಆಶಯ ಪಬ್ಲಿಕೇಶನ್ಸ್ ಮಂಗಳೂರು ಇವರು ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಸಂಘ ಆಶ್ರಯದಲ್ಲಿ ಆಯೋಜಿಸಿದ ಸಾಹಿತಿ ಚಂದ್ರಹಾಸ ಕಣಂತೂರು ವಿರಚಿತ ‘ಪಡಿಯಕ್ಕಿ’- ತುಳುನಾಡಿನ ದೈವಾರಾಧನೆಯ ಕಥೆಗಳು ಕೃತಿಯ ಲೋಕಾರ್ಪಣಾ ಸಮಾರಂಭವು ದಿನಾಂಕ 28 ಸೆಪ್ಟೆಂಬರ್ 2024ರ ಶನಿವಾರದಂದು ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ. ತುಕಾರಾಮ ಪೂಜಾರಿಯವರು ಮಾತನಾಡಿ “ಪಡಿಯಕ್ಕಿ ತುಳು ಬದುಕಿನ ವಿಶೇಷವಾದ ಪಡಿಯಚ್ಚು ಮೂಡಿಸಿದೆ. ಕನ್ನಡದ ಗಡಿಮೀರಿ ಈ ಕೃತಿ ಬೆಳೆಯಬೇಕು. ಆಂಗ್ಲ ಭಾಷೆಗೆ ತರ್ಜುಮೆಯಾಗುವ ಅಗತ್ಯವಿದೆ. ತುಳು ಭಾಷೆಯಲ್ಲಿರುವಷ್ಟು ಶ್ರೀಮಂತಿಕೆ ಜಗತ್ತಿನ ಬೇರೆ ಯಾವುದೇ ಭಾಷೆಯಲ್ಲಿ ಇರಲಾರದು. ಆದರೆ ಇಂದು ತುಳುವ ಬದುಕು ಸಂಪೂರ್ಣವಾಗಿ ಬದಲಾಗಿ ಬಿಟ್ಟಿದೆ. ಜಿಜ್ಞಾಸೆಗೆ ಅವಕಾಶ ಇರುವ ಅನೇಕ ವಸ್ತುಗಳು ಕೃತಿಯಲ್ಲಿವೆ.” ಎಂದರು. ಕವಿ ಮತ್ತು ನಿವೃತ್ತ ಉಪನ್ಯಾಸಕ ಕೆ. ಟಿ. ಆಳ್ವ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ…
ಮಂಗಳೂರು : ಕಾರ್ವಾಲ್ ಮನೆತನ ಮತ್ತು ಮಾಂಡ್ ಸೊಭಾಣ್ ಜಂಟಿಯಾಗಿ ನೀಡುವ 20ನೇ ಸಾಲಿನ ‘ಕಲಾಕಾರ್’ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸಂಗೀತ, ನಾಟಕ, ನೃತ್ಯ ಅಥವಾ ಜನಪದ ಕಲೆಯಲ್ಲಿ ಮಹತ್ವದ ಯೋಗದಾನ ಮಾಡಿದ ಕರ್ನಾಟಕ ಮೂಲದ ಓರ್ವ ಕೊಂಕಣಿ ಮಾತೃಭಾಷಿಕ ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಪುರಸ್ಕಾರವು ಸ್ಮರಣಿಕೆ, ಪ್ರಮಾಣ ಪತ್ರ ಹಾಗೂ 50,000 ರೂಪಾಯಿಗಳನ್ನು ಒಳಗೊಂಡಿರುತ್ತದೆ. ಈ ಪುರಸ್ಕಾರವನ್ನು ದಿನಾಂಕ 03 ನವಂಬರ್ 2024ರಂದು ಕಲಾಂಗಣದಲ್ಲಿ ನಡೆಯುವ 275ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಗುವುದು. ಸಾಧನೆಯ ವಿವರಗಳು ಹಾಗೂ ಇತ್ತೀಚಿನ ಭಾವಚಿತ್ರದೊಡನೆ ಸ್ವತಹ ಕಲಾವಿದರು ಅಥವಾ ಇತರರು ಹೆಸರು ಸಲ್ಲಿಸಬಹುದು. ವಿಳಾಸ : ಮಾಂಡ್ ಸೊಭಾಣ್, ಕಲಾಂಗಣ್, ಶಕ್ತಿನಗರ, ಮಂಗಳೂರು 575016 ಇಮೇಲ್:[email protected] ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23 ಅಕ್ಟೋಬರ್ 2024
ಮೈಸೂರು : ನಿರಂತರ ಫೌಂಡೇಶನ್ ಮೈಸೂರು ಆಯೋಜಿಸಿದ ‘ಸಹಜರಂಗ 2024’ ಕಾಲೇಜು ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಮತ್ತು ನಾಟಕ ಪ್ರದರ್ಶನ ದಿನಾಂಕ 29 ಸೆಪ್ಟೆಂಬರ್ 2024ರ ಭಾನುವಾರದ ಸಂಜೆ ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ನಡೆಯಿತು. ನಿರಂತರ ಫೌಂಡೇಶನ್ ಸಂಸ್ಥೆಯು ರಂಗಭೂಮಿ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಪರಿಸರ ಹಾಗೂ ಯುವ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವಾರು ಚಟುವಟಿಕೆಗಳನ್ನು ರೂಪಿಸುತ್ತಿದೆ. ಕಳೆದ ಎರಡು ದಶಕಗಳಿಂದಲೂ ಸ್ಪಷ್ಟ ಉದ್ದೇಶ ಮತ್ತು ಸಾಮಾಜಿಕ ಆಶಯದೊಂದಿಗೆ ಮುನ್ನಡೆಯುತ್ತಿರುವ ಈ ಸಂಸ್ಥೆ, ಕಾಲೇಜು ವಿದ್ಯಾರ್ಥಿಗಳಿಗಾಗಿ ಕಳೆದ 17 ವರ್ಷಗಳಿಂದ ಉಚಿತವಾಗಿ ‘ಸಹಜರಂಗ’ ರಂಗ ತರಬೇತಿ ಶಿಬಿರವನ್ನು ಆಯೋಜಿಸಿಕೊಂಡು ಬರುತ್ತಿದೆ.1 ತಿಂಗಳ ಕಾಲ ನಡೆಯುವ ಈ ಶಿಬಿರದಲ್ಲಿ ರಂಗಭೂಮಿ ಇತಿಹಾಸ, ರಂಗ ಸಂಗೀತ, ಪರಿಸರ, ನಟನೆ, ಸಮರಕಲೆ ಸೇರಿದಂತೆ ಸಾಹಿತ್ಯ, ಪ್ರಚಲಿತ ವಿದ್ಯಮಾನಗಳ ಬಗ್ಗೆ ತರಗತಿಗಳು ರೂಪುಗೊಂಡಿರುತ್ತವೆ. ನಾಡಿನ ಸಾಹಿತಿಗಳು, ವಿಷಯ ಪರಿಣಿತರು, ರಂಗ ನಿರ್ದೇಶಕರು, ಸಂಗೀತ ನಿರ್ದೇಶಕರು ಶಿಬಿರಾರ್ಥಿಗಳೊಂದಿಗೆ ಚರ್ಚೆ ಸಂವಾದಗಳಲ್ಲಿ ಪಾಲ್ಗೊಳ್ಳುತ್ತಾರೆ. ಹಾಗೆಯೇ ಪ್ರಸ್ತುತ…