Subscribe to Updates
Get the latest creative news from FooBar about art, design and business.
Author: roovari
ಧಾರವಾಡ : ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯು ಯಶಸ್ವಿಯಾಗಿ ಎರಡು ವರ್ಷ ಪೂರೈಸಿದ ನಿಮಿತ್ತ ರಾಜ್ಯ ಮಟ್ಟದ ‘ಲಲಿತ ಪ್ರಬಂಧ ಸ್ಪರ್ಧೆ’ ಏರ್ಪಡಿಸಲಾಗಿದ್ದು, ಆಸಕ್ತರು ಭಾಗವಹಿಸಬಹುದಾಗಿದೆ. ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುವುದು ಹಾಗೂ ಡಿಜಿಟಲ್ ಪ್ರಶಸ್ತಿ ಪತ್ರ ಮತ್ತು ಪುಸ್ತಕಗಳನ್ನುನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಡಿಜಿಟಲ್ ಪ್ರಮಾಣ ಪತ್ರವನ್ನು ನೀಡಲಾಗುವುದು. ಸ್ಪರ್ಧೆಯ ನಿಯಮಗಳು * ಸ್ಪರ್ಧೆಗೆ ಮುಕ್ತ ಪ್ರವೇಶವಿದ್ದು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. * ಒಬ್ಬ ಸ್ಪರ್ಧಿ ಒಂದು ಪ್ರಬಂಧವನ್ನು ಮಾತ್ರ ಕಳುಹಿಸಬಹುದು. * ಲಲಿತ ಪ್ರಬಂಧ 1000 ಪದಗಳ ಮಿತಿಯಲ್ಲಿರಬೇಕು. * ಪ್ರಬಂಧ ಈ ಮೊದಲು ಎಲ್ಲೂ ಪ್ರಕಟವಾಗಿರಬಾರದು. * ಅನುವಾದ, ಅನುಕರಣೆ ಮತ್ತು ರೂಪಾಂತರ ಮಾಡಿದ ಪ್ರಬಂಧಗಳಿಗೆ ಅವಕಾಶವಿಲ್ಲ. * ಪ್ರಬಂಧವನ್ನು ಟೈಪಿಸಿ, ಪಿ. ಡಿ. ಎಫ್. ರೂಪದಲ್ಲಿ ಮಾತ್ರ ಕಳುಹಿಸಬೇಕು. * ಸ್ಪರ್ಧಿಯ ಪರಿಚಯ, ಪೂರ್ಣ ವಿಳಾಸ ಮತ್ತು ಒಂದು ಫೋಟೋವನ್ನು ಪ್ರತ್ಯೇಕವಾಗಿ ಕಳುಹಿಸಬೇಕು. * ಪ್ರಬಂಧವನ್ನು ಕಳುಹಿಸಲು ಕೊನೆಯ ದಿನಾಂಕ 08-01-2024 *…
ಕುಂದಾಪುರ : ಕುಂದಾಪುರ ತಾಲೂಕು ಯುವ ಬಂಟರ ಸಂಘ (ರಿ.) ಇದರ ವತಿಯಿಂದ ‘ಬಂಟರ ಯಕ್ಷ ಸಂಭ್ರಮ’ ಆಯ್ದ ಬಡಗು ತಿಟ್ಟಿನ ಬಂಟ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಮತ್ತು ಬಂಟ ಯಕ್ಷ ಭೂಷಣ ಪ್ರಶಸ್ತಿ ಪ್ರದಾನವು ದಿನಾಂಕ 30-12-2023ರಂದು ಅಪರಾಹ್ನ 2 ಗಂಟೆಗೆ ಬಂಟರ ಯಾನೆ ನಾಡವರ ಸಂಕೀರ್ಣ, ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ. ‘ಮಾಯಾಪುರಿ’ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಭಾಗವತರು : ಸುದೀಪಚಂದ್ರ ಶೆಟ್ಟಿ ಮೇಗದ್ದೆ (ಮಾರಣಕಟ್ಟೆ ಮೇಳ), ಗಣೇಶ ಶೆಟ್ಟಿ ಬೆಳ್ವೆ (ಮಂದಾರ್ತಿ ಮೇಳ), ಸಂತೋಷ ಶೆಟ್ಟಿ ಎಡಮೊಗೆ (ಸೌಕೂರು ಮೇಳ), ಚಂಡೆ : ಶ್ರೀಕಾಂತ್ ಶೆಟ್ಟಿ, ಎಡಮೊಗೆ (ಮಂದಾರ್ತಿ ಮೇಳ) ಮತ್ತು ಮದ್ದಳೆ : ಶಶಾಂಕ್ ಕುಮಾರ್. ಮುಮ್ಮೇಳದಲ್ಲಿ ಶತ್ರುಘ್ನ – ಅರೆಹೊಳೆ ಸಂಜೀವ ಶೆಟ್ಟ (ಮಾರಣಕಟ್ಟೆ ಮೇಳ), ದಮನ – ಕಾನ್ಕಿ ಸುಧಾಕರ ಶೆಟ್ಟಿ (ಮಾರಣಕಟ್ಟೆ ಮೇಳ), ಬಲ – ವಿಘ್ನೇಶ್ ಶೆಟ್ಟಿ ಎಡಮೊಗೆ (ಕಮಲಶಿಲೆ ಮೇಳ) ಮತ್ತು ನಂದನ್ ಶೆಟ್ಟಿ ಅಗುಂಬೆ (ಮಂದಾರ್ತಿ ಮೇಳ), ಪುಷ್ಕಳ…
ಮಂಗಳೂರು : ಕರ್ನಾಟಕ ಜಾನಪದ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಸಹಯೋಗದಲ್ಲಿ ‘ಜಾನಪದ ಸ್ಪರ್ಧಾ ಕೂಟ’ವು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ 11-12-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಉದ್ಘಾಟಿಸಿ “ತುಳು ಜಾನಪದ ಕಲೆ ಉಳಿಸುವಲ್ಲಿ ಸ್ಪರ್ಧೆಗಳ ಪಾತ್ರ ಮಹತ್ವವಾಗಿದೆ. ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಲಾವಿದರ ಪಾತ್ರ ಮುಖ್ಯವಾದುದು. ತುಳುನಾಡಿನ ಜನತೆ ಜಾನಪದ ಸಂಸ್ಕೃತಿಯ ಉಳಿವಿಗಾಗಿ ನಿರಂತರ ಶ್ರಮಿಸುತ್ತಿದ್ದಾರೆ. ತುಳುನಾಡಿನ ವಿವಿಧ ಜಾನಪದ ಪ್ರಕಾರಗಳು ಕಲಾವಿದರಿಂದಾಗಿ ದೇಶ ವಿದೇಶದಲ್ಲಿ ಪ್ರತಿಬಿಂಬಿಸುತ್ತಿವೆ. ನಮ್ಮ ಕುಟುಂಬ ಪದ್ಧತಿಯನ್ನು ಉಳಿಸಿ ಬೆಳೆಸುವ ಪ್ರಯತ್ನವಾಗಬೇಕು. ತುಳು ಭಾಷೆಗೆ ರಾಜ್ಯದ ಎರಡನೇ ಭಾಷೆ ಎಂಬ ಮಾನ್ಯತೆ ಸಿಗಬೇಕಾಗಿದೆ” ಎಂದು ಹೇಳಿದರು. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, “ತುಳುನಾಡಿನ ಆಚಾರ ವಿಚಾರ, ಕಲೆ ಸಂಸ್ಕೃತಿ ವಿಶಿಷ್ಟವಾಗಿದೆ. ದೇಶ ವಿದೇಶಗಳಲ್ಲಿ ತುಳು ಮಾತನಾಡುವ ಜನರಿದ್ದು,…
ಮಂಗಳೂರು : ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಸಹ ಸಂಸ್ಥೆಯಾದ ಕದ್ರಿ ಸಂಗೀತ ವಿದ್ಯಾನಿಲಯವು ದಿನಾಂಕ 03-12-2023ರಂದು ತನ್ನ 30ನೇ ವಾರ್ಷಿಕೋತ್ಸವವನ್ನು ಮಂಗಳೂರಿನ ಡಾನ್ ಬಾಸ್ಕೋ ಹಾಲಿನಲ್ಲಿ ಆಯೋಜಿಸಿತು. ಅಂದು ಸಂಸ್ಥೆಯ ಸಂಗೀತ ಗುರುಗಳಾದ ವಿದುಷಿ ಉಷಾ ಪ್ರವೀಣರ ಶಿಷ್ಯ ವೃಂದದವರಿಂದ ಸುಮಾರು ಮೂರು ಗಂಟೆಗಳ ಕಾಲ ಕರ್ನಾಟಕ ಸಂಗೀತ ಕಛೇರಿಯು ನಡೆಯಿತು. ಈ ಕಛೇರಿಗೆ ಮೃದಂಗದಲ್ಲಿ ವಿದ್ವಾನ್ ಮನೋಹರ್ ರಾವ್ ಹಾಗೂ ಪಿಟೀಲಿನಲ್ಲಿ ವಿದ್ವಾನ್ ಶ್ರೀಧರಾಚಾರ್ ಪಾಡಿಗಾರ್ ಇವರು ಸಹಕರಿಸಿದರು. ನಂತರ ಅಂತರ್ರಾಷ್ಟ್ರೀಯ ಕಲಾವಿದರಾದ ಮೈಸೂರಿನ ಡಾಕ್ಟರ್ ವಿದುಷಿ ಸುಕನ್ಯ ಪ್ರಭಾಕರ್ ಇವರಿಂದ ಎರಡು ಗಂಟೆಗಳ ಕಾಲ ಕರ್ನಾಟಕ ಸಂಗೀತ ಕಛೇರಿಯು ನಡೆಯಿತು. ಇದರಲ್ಲಿ ಮಂಗಳೂರಿನ ಆಕಾಶವಾಣಿ ಕಲಾವಿದರಾದ ವಿದ್ವಾನ್ ಕೆ.ಎಚ್. ರವಿಕುಮಾರ್ ಮೃದಂಗದಲ್ಲಿಯೂ ಹಾಗೂ ವಿದ್ವಾನ್ ಗಣರಾಜ ಕಾರ್ಲೆಯವರು ಪಿಟೀಲಿನಲ್ಲಿಯೂ ಸಹಕರಿಸಿದರು. ಸಹ ಗಾಯಕರಾಗಿ ವಿದುಷಿ ನಿತ್ಯಶ್ರೀ ಆರ್. ಸಹಕರಿಸಿದರು. ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲ್ಪಟ್ಟ ವಿದುಷಿ ಸುಕನ್ಯಾ ಪ್ರಭಾಕರ್ ಅವರು, “72 ವರ್ಷಗಳ ನನ್ನನ್ನು…
ಕಾಂಬೋಡಿಯಾ : ಕರ್ನಾಟಕದ ಹಿರಿಯ ಕಲಾವಿದರಾದ ಶ್ರೀ ಗಣಪತಿ ಎಸ್. ಹೆಗಡೆ ಅವರು ‘ಗ್ಲೋಬಲ್ ಅಚೀವರ್ಸ್ ಅವಾರ್ಡ್’ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದಿನಾಂಕ 07-12-2023ರಂದು ಕಾಂಬೋಡಿಯಾದ ಸೀಮ್ ರಿಪ್ ಮಹಾನಗರದ ಅಂಕೋರ್ ಮಿರಾಕಲ್ ರೆಸಾರ್ಟ್ ಪಂಚತಾರಾ ಭವನದಲ್ಲಿ ಈ ಅಭೂತಪೂರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪದ್ಮಭೂಷಣ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ವಿಶ್ವವಾಣಿ ಪ್ರಧಾನ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಮತ್ತು ಕಾಂಬೋಡಿಯಾ ಸರ್ಕಾರದ ಅನೇಕ ಗಣ್ಯರು ಸೇರಿ ವಿದೇಶಿ ನೆಲದಲ್ಲಿ ಈ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಿ ಅಭಿನಂದಿಸಿದರು. ಕಲೆಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಗೆ ಈ ಪ್ರಶಸ್ತಿಯನ್ನು ಗಣಪತಿ ಎಸ್. ಹೆಗಡೆ ಅವರಿಗೆ ನೀಡಲಾಗಿದೆ. ಕಾಂಬೋಡಿಯಾ ಆನರರಿ ಕಾನ್ಸುಲೇಟ್ ಮತ್ತು ಕರ್ನಾಟಕದ ಅತ್ಯಂತ ಪ್ರಸಿದ್ಧ ಪತ್ರಿಕೆಯಾದ ವಿಶ್ವವಾಣಿ ಸಹಯೋಗದಲ್ಲಿ ಈ ಪ್ರಶಸ್ತಿ ಆಯೋಜನೆ ಮಾಡಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕರ್ನಾಟಕದ ಹತ್ತು ಸಾಧಕರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಕರ್ನಾಟಕ…
ಮಂಗಳೂರು : ಸನಾತನ ನಾಟ್ಯಾಲಯದ ವತಿಯಿಂದ ನಡೆದ ‘ಸನಾತನ ಸಂಗೀತ ನೃತ್ಯೋತ್ಸವ’ದಲ್ಲಿ ಮಣಿಕೃಷ್ಣ ಸ್ವಾಮಿ ಅಕಾಡೆಮಿ ವತಿಯಿಂದ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳದ ಕೃತಿಗಳನ್ನಾಧರಿಸಿದ 20ನೇ ಸಂಗೀತ ಕಛೇರಿ ‘ಮಂಜುನಾದ’ ಮತ್ತು ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ‘ಭರತನಾಟ್ಯ’ ಕಾರ್ಯಕ್ರಮವು ದಿನಾಂಕ 09-12-2023ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಾರತ್ ಸ್ಕೌಟ್ ಮತ್ತು ಗೈಡ್ ಉಡುಪಿ ಜಿಲ್ಲೆಯ ಗೈಡ್ ಕಮಿಷನ್ ಜ್ಯೋತಿ ಜೆ. ಪೈ ಕಾರ್ಕಳ ಮಾತನಾಡಿ “ಲಲಿತಕಲೆಗಳಲ್ಲಿ ಒಂದನ್ನಾದರೂ ಮಕ್ಕಳು ಕಲಿಯುತ್ತಿದ್ದರೆ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಹೆಚ್ಚಿನ ಸಾಧನೆ ಮಾಡುವ ಛಲ ಮೂಡುತ್ತದೆ. ನೃತ್ಯ ಕಲಿಕೆಯಿಂದಾಗಿ ದೊರೆಯುವ ಏಕಾಗ್ರತೆಯು ಅವರ ಜೀವನವನ್ನು ಉತ್ತಮ ಮಟ್ಟಕ್ಕೆ ಏರಿಸುತ್ತದೆ. ನೃತ್ಯ ತರಗತಿಗಳನ್ನು ಸೇರಿದ ಮಕ್ಕಳಲ್ಲಿ ಕಲಿಕೆಯ ಹುಮ್ಮಸ್ಸು ಇದ್ದಂತೆಯೇ, ಅವರ ತಾಯಂದಿರಲ್ಲಿಯೂ ಹುಮ್ಮಸ್ಸು ಇರುತ್ತದೆ. ಹಾಗಿದ್ದಾಗ ಮಾತ್ರ ಮಕ್ಕಳು ಹೆಚ್ಚಿನ ಕಲಿಕೆಗೆ ಮನಸ್ಸು ಮಾಡಬಹುದಾಗಿದೆ. ಆದ್ದರಿಂದ ಪೋಷಕರು ಮಕ್ಕಳ ಪಠ್ಯೇತರ ಚಟುವಟಿಕೆಗಳ ಆಸಕ್ತಿಯನ್ನು ನಿರ್ಲಕ್ಷ ಮಾಡಬಾರದು” ಎಂದು ಹೇಳಿದರು.…
ಮಂಗಳೂರು : ಹರಿಕಥಾ ಪರಿಷತ್ (ರಿ.) ಮಂಗಳೂರು ಇದರ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಎಂಟನೇ ತರಗತಿಯಿಂದ ಪಿಯುಸಿ ಎರಡನೇ ವರ್ಷದವರೆಗಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ ‘ಹರಿಕಥಾ ಸ್ಪರ್ಧೆ’ಯು ದಿನಾಂಕ 31-12-2023ರಂದು ಕದ್ರಿ ಮಲ್ಲಿಕಟ್ಟೆಯ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಅಪರಾಹ್ನ ಗಂಟೆ 1.30ಕ್ಕೆ ಉದ್ಘಾಟನೆಗೊಳ್ಳಲಿದೆ. ಹರಿಕಥಾ ಪರಿಷತ್ (ರಿ.) ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಕೆ. ಮಹಾಬಲ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ವಿಜಯ ಬ್ಯಾಂಕಿನ ನಿವೃತ್ತ ಸೀನಿಯರ್ ಮ್ಯಾನೇಜರ್ ಲಯನ್ ಶ್ರೀ ಸುಂದರ ಶೆಟ್ಟಿ ಬೆಟ್ಟಂಪಾಡಿಯವರು ಉದ್ಘಾಟಿಸಲಿದ್ದಾರೆ. ಅಪರಾಹ್ನ ಗಂಟೆ 2ರಿಂದ ಈ ಸ್ಪರ್ಧೆಯಲ್ಲಿ ಉದಯೋನ್ಮುಖ ಕಥಾ ಕೀರ್ತನ ಪ್ರತಿಭೆಗಳಾದ ಕಾಟುಕುಕ್ಕೆಯ ಕು. ಅಭಿಜ್ಞಾ ಭಟ್, ಬಂದ್ಯೋಡಿನ ಮಾ. ಸಾತ್ವಿಕ್ ಕೃಷ್ಣ ತುಂಗ, ಉಪ್ಪಳದ ಕು. ಪೂಜಾ ವಾಸುದೇವ ಐತಾಳ, ಪುತ್ತೂರಿನ ಕು. ದೇವಿಕಾ ಕೆ., ಮಂಗಳೂರಿನ ಕು. ಶ್ರದ್ಧಾ ಗುರುದಾಸ್, ಕಾರ್ಕಳದ ಕು. ಅನನ್ಯಾ ಘಾಟಕ್, ಪುತ್ತೂರಿನ ಕು. ಆಪ್ತ ಚಂದ್ರಮತಿ…
ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ ಸಂಸ್ಥೆ ಮತ್ತು ಮಂಗಳೂರಿನ ರಾಮಕೃಷ್ಣ ಮಠದ ಸಹಯೋಗದಲ್ಲಿ ಪ್ರಸ್ತುತ ಪಡಿಸುವ ‘ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ’ಯು ದಿನಾಂಕ 30-12-2023ರಂದು ಸಂಜೆ ಘಂಟೆ 4-30ಕ್ಕೆ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಅಡಿಟೋರಿಯಂನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಇವರು ದೀಪ ಬೆಳಗಿ ಉದ್ಘಾಟಿಸಲಿದ್ದಾರೆ. ಮುಂಬೈಯ ಅದಿತಿ ಸುದರ್ಶನ್ ಇವರ ಕೊಳಲು ವಾದನಕ್ಕೆ ಪುತ್ತೂರಿನ ತನ್ಮಯೀ ಉಪ್ಪಂಗಳ ಇವರು ವಯಲಿನ್ ಮತ್ತು ಮೈಸೂರಿನ ಪ್ರಣವ್ ಸುಬ್ರಹ್ಮಣ್ಯ ಇವರು ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ಐಯ್ಯರ್ ಸಹೋದರರಾದ ರಾಮನಾಥ್ ಐಯ್ಯರ್ ಮತ್ತು ಗೋಪಿನಾಥ್ ಐಯ್ಯರ್ ಇವರಿಂದ ದ್ವಂದ್ವ ವೀಣಾ ವಾದನ ಕಛೇರಿಗೆ ಬೆಂಗಳೂರಿನ ಅನಿರುದ್ಧ ಭಟ್ ಮೃದಂಗದಲ್ಲಿ ಹಾಗೂ ಸುರತ್ಕಲ್ಲಿನ ಸುಮುಖ ಕಾರಂತ ಖಂಜೀರದಲ್ಲಿ ಸಹಕರಿಸಲಿದ್ದಾರೆ. ಮಂಗಳೂರಿನ ಮಣಿ ಕೃಷ್ಣಸ್ವಾಮಿ ಅಕಾಡೆಮಿ ಪ್ರಸ್ತುತ ಪಡಿಸುವ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳನ್ನಾಧರಿಸಿದ 24ನೇ ‘ಮಂಜುನಾದ ಸಂಗೀತ ಕಛೇರಿ’ಯು ದಿನಾಂಕ 03-01-2024ರಂದು ಸಂಜೆ 4…
ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಮೂರು ದಿನಗಳ ‘ಭ್ರಮರ-ಇಂಚರ ನುಡಿಹಬ್ಬ’ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನವು ದಿನಾಂಕ 01-12-2023ರಂದು ಪ್ರಾರಂಭಗೊಂಡಿತು. ಈ ಸಮ್ಮೇಳನದ ಸರ್ವಾಧ್ಯಕ್ಷದಾಗಿದ್ದ ಸಾಹಿತಿ, ಚಿಂತಕ, ಕಂಪ್ಯೂಟರ್ ಕನ್ನಡ ತಂತ್ರಾಂಶದ ರೂವಾರಿ ನಾಡೋಜ ಡಾ. ಕಿನ್ನಿಕಂಬಳ ಪದ್ಮನಾಭ ರಾವ್ “ಕನ್ನಡ ಮತ್ತು ಸ್ಥಳೀಯವಾಗಿ ಸಿಕ್ಕುವ ಎಲ್ಲ ಭಾಷೆಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರಗಳು ಸಮಷ್ಠಿಯಾಗಿ ದಾಖಲೀಕರಣಗೊಳ್ಳುವುದು ಭವಿಷ್ಯದ ಹಿತದೃಷ್ಟಿಯಿಂದ ಬಹಳ ಅಗತ್ಯ. ಆ ಸಲುವಾಗಿ ಲಭ್ಯ ತಂತ್ರಜ್ಞಾನ-ತಂತ್ರಾಂಶಗಳ ಸದುಪಯೋಗ ಪಡಿಸಿಕೊಳ್ಳಬೇಕು ಮತ್ತು ಈ ದಿಸೆಯಲ್ಲಿ ಪರಿವರ್ತನೆ ಮತ್ತು ಪರಿಷ್ಕರಣೆಯ ಪ್ರಯತ್ನಗಳೂ ಆಗಬೇಕು” ಎಂದು ಹೇಳಿದರು. ನಿಕಟಪೂರ್ವ ನುಡಿಹಬ್ಬ ಸಮ್ಮೇಳನಾಧ್ಯಕ್ಷ ಡಾ. ಪಾದೆಕಲ್ಲು ವಿಷ್ಣು ಭಟ್ ಸಮ್ಮೇಳನ ಉದ್ಘಾಟಿಸಿದರು. ಆನಂದ ಸಿ. ಕುಂದರ್ ವಸ್ತು ಪ್ರದರ್ಶನ ಉದ್ಘಾಟಿಸಿದರು. ಸಮ್ಮೇಳನಾರಂಭದ ಪೂರ್ವದಲ್ಲಿ ಪದವಿ ಕಾಲೇಜಿನಿಂದ ಪದವಿ ಪೂರ್ವ ಕಾಲೇಜುವರೆಗೂ ನಡೆದ ಸಾಲಂಕೃತ ಮೆರವಣಿಗೆಯನ್ನು ವಿದ್ಯಾರ್ಥಿಗಳೇ ಸಂಯೋಜಿಸಿದ್ದು ಅತ್ಯಾಕರ್ಷಕವಾಗಿತ್ತು. ದೇಗುಲದ ಆನೆ ಮಹಾಲಕ್ಷ್ಮೀ, ಭುವನೇಶ್ವರಿ ತಾಯಿಯ…
ಮೈಸೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಕೊಟ್ಟೂರು ಬಸವೇಶ್ವರ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಸ್ವರ್ಣಭೂಮಿ ಫೌಂಡೇಷನ್ ಕರ್ನಾಟಕ ಇವರ ಸಹಕಾರದೊಂದಿಗೆ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ವಿಶ್ವಮಾನವ ದಿನಾಚರಣೆ, ವಿಶೇಷ ಉಪನ್ಯಾಸ, ಕುವೆಂಪು ವಿಶ್ವ ಮಾನವ ಕನ್ನಡ ರತ್ನ ಪ್ರಶಸ್ತಿ ಪ್ರದಾನ, ಪುಸ್ತಕ ಲೋಕಾರ್ಪಣೆ, ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವು ದಿನಾಂಕ 31-12-2023ರಂದು ಮೈಸೂರಿನ ವಿಜಯನಗರ ಮೊದಲನೇ ಹಂತ, ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ. ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಡ್ದೀಕೆರೆ ಗೋಪಾಲ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ. ಕೆ. ಚಿದಾನಂದ ಗೌಡ ಇವರು ಉದ್ಘಾಟಿಸಲಿದ್ದಾರೆ. ಖ್ಯಾತ ವಿದ್ವಾಂಸರಾದ ಡಾ. ಸಿ.ಪಿ. ಕೃಷ್ಣ ಕುಮಾರ್ ಇವರು ಶ್ರೀ ಲಿಖಿತ್ ಹೊನ್ನಾವರ ಇವರ ಕೃತಿ ‘ಭಾವಭಂಗ ಕಲ್ಪನಾತರಂಗ’ದ ಲೋಕಾರ್ಪಣೆ ಮತ್ತು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಖ್ಯಾತ ಸಾಹಿತಿ ಶ್ರೀ ಬಿ. ಸತೀಶ್…