Author: roovari

ಕೋಟ : ಕೋಟ ಹಂದಟ್ಟಿನಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಹಿತೈಷಿಗಳು ಹಮ್ಮಿಕೊಂಡ ಸೂರ್ಯನಾರಾಯಣ ಉರಾಳ ಸನ್ಮಾನ ಮತ್ತು ಯಕ್ಷಗಾನ ಕಾರ್ಯಕ್ರಮವು ದಿನಾಂಕ 01-05-2024 ರಂದು ಉರಾಳಕೇರಿ ಹಂದಟ್ಟುವಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಹಂದಟ್ಟು ಸೂರ್ಯನಾರಾಯಣ ಉರಾಳ ದಂಪತಿಗಳನ್ನು ಸನ್ಮಾನಿಸಿ ಮಾತನಾಡಿದ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ ಕುಮಾರ್ ಕಲ್ಕೂರ “ಆಧುನಿಕ ಸೌಲಭ್ಯಗಳಿಲ್ಲದ ಕಾಲದಲ್ಲಿ ಬದುಕಿನ ವೈಯಕ್ತಿಕ ಸುಖ ಸಂತೋಷವನ್ನೆಲ್ಲ ತೊರೆದು ಸಮರ್ಪಣಾ ಭಾವದಿಂದ ಸೇವೆ ಮಾಡಿದ ಕಲಾವಿದರು, ಸಂಘಟಕರು ಹಾಗೂ ಪರಿಚಾರಕರಿಂದಾಗಿ ಯಕ್ಷಗಾನ ಕಲೆ ಇಲ್ಲಿಯವರೆಗೆ ಶ್ರೀಮಂತವಾಗಿ ಉಳಿದಿದೆ. ಶ್ರೀಯುತರು ಬಡಗುತಿಟ್ಟಿನ ಹಲವು ವೃತ್ತಿ ಮೇಳಗಳಲ್ಲಿ ಮೂರು ದಶಕಗಳ ಕಾಲ ತ್ಯಾಗ ಮನೋಭಾವನೆಯಿಂದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದು ಮಾತ್ರವಲ್ಲದೆ ಕಳಕಳಿಯೊಂದಿಗೆ ಸಾಮಾಜಿಕ ಸಾರ್ಥಕ ಜೀವನವನ್ನೂ ನಡೆಸಿದ್ದಾರೆ. ಯಕ್ಷಾರಾಧಕರಾಗಿರುವ ಉರಾಳರ ಸಾಧನೆ ಅನನ್ಯವಾದುದು ಹಾಗೂ ಅವರ ವೈಯಕ್ತಿಕ ಬದುಕು, ವೃತ್ತಿ ಬದುಕು ಹಾಗೂ ಸಾಮಾಜಿಕ ಬದುಕು ಎಲ್ಲರಿಗೂ ಅನುಕರಣೀಯವಾದುದು.” ಎಂದು ಹೇಳಿದರು. ಬಂಗಾರದ ಸರ, ಉಂಗುರ, ಬೆಳ್ಳಿಯ ಹರಿವಾಣ ಮತ್ತು ರೂಪಾಯಿ…

Read More

ಬೆಂಗಳೂರು : ಭಾರತೀಯ ವಿದ್ಯಾ ಭವನದ ಪತ್ರಿಕೋದ್ಯಮ ಸ್ನಾತಕೋತ್ತರ ಡಿಪ್ಲೋಮೋ ಕೋರ್ಸಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗುತ್ತಿದೆ. ಇದು ದೇಶದ ಅತ್ಯಂತ ಹಳೆಯ ಪತ್ರಿಕೋದ್ಯಮ ಕಾಲೇಜಾಗಿದ್ದು ಅರವತ್ತು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಹೆಗ್ಗಳಿಕೆ ಇದಕ್ಕಿದೆ. ಇಲ್ಲಿ ತರಬೇತಿ ಪಡೆದ ಪತ್ರಕರ್ತರು ದೇಶಾದ್ಯಂತ ಅನೇಕ ಪತ್ರಿಕೆ, ವಾಹಿನಿಗಳ ಪ್ರಮುಖ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಒಂದು ವರ್ಷ ಅವಧಿಯ ಈ ಕೋರ್ಸಿನಲ್ಲಿ ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ, ಕಾರ್ಪೋರೇಟ್ ಮಾಧ್ಯಮ ಹೀಗೆ ಮೂರೂ ವಿಭಾಗಗಳಲ್ಲಿಯೂ ತರಬೇತಿ ನೀಡಲಾಗುವುದು. ಇಲ್ಲಿ ಆಯಾ ಕ್ಷೇತ್ರದ ಪರಿಣಿತರೇ ತರಬೇತಿ ನೀಡಲಿದ್ದು, ಪತ್ರಿಕೋದ್ಯಮದ ಇತ್ತೀಚಿನ ಬೆಳವಣಿಗೆಗಳ ಕುರಿತೂ ಪರಿಣತಿ ಮೂಡಿಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಬೆಂಗಳೂರು ಭಾರತೀಯ ವಿದ್ಯಾ ಭವನದ ಕೇಂದ್ರ ಕಚೇರಿಯಲ್ಲಿ ದಿನಾಂಕ 31-05-2024ರೊಳಗೆ ಬೆಳಗಿನ ಹತ್ತರಿಂದ ಸಂಜೆ ಆರರವರೆಗೆ ವಿವರಗಳನ್ನು ಪಡೆಯಬಹುದು. ಇಲ್ಲವೇ ಮೊಬೈಲ್ ಸಂಖ್ಯೆ 9538181140 ಇಲ್ಲಿಗೆ ಸಂಪರ್ಕಿಸಬಹುದು ಎಂದು ಭಾರತೀಯ ವಿದ್ಯಾ ಭವನದ ನಿರ್ದೇಶಕ ಎಚ್.ಎನ್. ಸುರೇಶ್ ತಿಳಿಸಿದ್ದಾರೆ.

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 06-05-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಕುಮಾರಿ ಆಂಗಿಕ ಶೆಟ್ಟಿ ಕುದ್ಕಾಡಿ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಕುಮಾರಿ ಆಂಗಿಕ ಶೆಟ್ಟಿ ಕುದ್ಕಾಡಿ ಇವರು ತುಂಬೆಗುತ್ತು ರಾಜಕುಮಾರ ಶೆಟ್ಟಿ ಮತ್ತು ವಿದುಷಿ ಸ್ವಸ್ತಿಕ ಆರ್. ಶೆಟ್ಟಿ ಇವರ ಸುಪುತ್ರಿ. ಕರ್ನಾಟಕ ಕಲಾಶ್ರೀ ವಿದ್ವಾನ್ ದಿವಂಗತ ಕುದ್ಕಾಡಿ ವಿಶ್ವನಾಥ ರೈ ಮತ್ತು ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ. ರೈಯವರ ಮೊಮ್ಮಗಳು. ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರ್ (ರಿ.) ಪುತ್ತೂರು ಇದರ ವಿದ್ಯಾರ್ಥಿನಿ. ಮನೆಯಲ್ಲಿಯೇ ನೃತ್ಯ ಶಿಕ್ಷಣದ ಆರಂಭ. ಅಜ್ಜ, ಅಜ್ಜಿ, ಅಮ್ಮ, ಚಿಕ್ಕಮ್ಮ, ಅಕ್ಕನವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸ ಮಾಡಿದ್ದು, ತದನಂತರ ಕೆಲವೊಂದು ಪ್ರತಿಷ್ಠಿತ…

Read More

ಮಂಗಳೂರು : ಜೀ ಕನ್ನಡದ ಡ್ರಾಮಾ ಜೂನಿಯರ್ಸ್‌ ಸೀಸನ್‌ 5ರ ವಿನ್ನರ್‌ ಆಗಿ ಮಂಗಳೂರಿನ ರಿಷಿಕಾ ಕುಂದೇಶ್ವರ ಇವರು ಕುಣಿಗಲ್‌ನ ವಿಷ್ಣು ಜತೆ ಜಂಟಿಯಾಗಿ ಟ್ರೋಫಿ ಗೆದ್ದುಕೊಂಡಿದ್ದಾರೆ. ಪೌರಾಣಿಕ, ವ್ಯಕ್ತಿಚಿತ್ರ, ಐತಿಹಾಸಿಕ, ಜನಪದೀಯ, ಶಾಸ್ತ್ರೀಯ ಮತ್ತು ಕಾಮಿಡಿ ವಿಭಾಗದಲ್ಲಿ ವಾಕ್ಪಟುತ್ವ ಮತ್ತು ಭಾವಾಭಿನಯದ ಮೂಲಕ ತೀರ್ಪುಗಾರರ ಮತ್ತು ಕನ್ನಡಿಗರ ಮೆಚ್ಚುಗೆ ಗಳಿಸಿ ಸೀಸನ್‌ನಲ್ಲಿ ಅತಿ ಹೆಚ್ಚು ಅವಾರ್ಡ್‌ಗಳೊಂದಿಗೆ ರಿಷಿಕಾ ಫೈನಲ್‌ಗೆ ಲಗ್ಗೆ ಹಾಕಿದ್ದರು. 31 ಜಿಲ್ಲೆಗಳಿಂದ ಸಹಸ್ರಾರು ಬಾಲ ಪ್ರತಿಭೆಗಳ ಶೋಧ ನಡೆಸಿ ಮೇಗಾ ಅಡಿಶನ್‌ ನಲ್ಲಿ 24 ಮಕ್ಕಳನ್ನು ಆಯ್ಕೆ ಮಾಡಲಾಗಿತ್ತು. 22 ವಾರದಲ್ಲಿ 24 ಮಕ್ಕಳು ಬರೋಬ್ಬರಿ 200ಕ್ಕೂ ಅಧಿಕ ಸ್ಕಿಟ್‌ಗಳನ್ನು ಮಾಡಿ ಮುಗಿಸಿದ್ದರು. ವಿಜೇತರಿಗೆ 30×40 ಸೈಟ್‌ ಬಹುಮಾನವಾಗಿ ಬಂದರೆ, ಮೊದಲ ರನ್ನರ್‌ ಅಪ್‌ ಗೆ 3 ಲಕ್ಷ ನಗದು, ಎರಡನೇ ರನ್ನರ್‌ ಅಪ್ ಗೆ 1 ಲಕ್ಷ ಬಹುಮಾನ ನೀಡಲಾಗಿದೆ. ಕಲರ್‌ಫುಲ್‌ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌, ಹಿರಿಯ ನಟಿ ಲಕ್ಷ್ಮೀ ಮತ್ತು ಡಿಂಪಲ್‌ ಕ್ವೀನ್‌ ರಚಿತಾ…

Read More

ಮಂಗಳೂರು : ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗವು ಆಯೋಜಿಸಿದ್ದ ಕವಿ ಸಮಯ ಕಾರ್ಯಕ್ರಮವು ದಿನಾಂಕ 01-05-2024ರಂದು ವಿಶ್ವವಿದ್ಯಾನಿಲಯದ ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತೆ ಸ್ಮೃತಿ ಅಮೃತರಾಜ್ “ಅನುಭವವನ್ನು ಅನುಭಾವಕ್ಕೆ ಇಳಿಸಿದಾಗ ಕವಿತೆ ಹುಟ್ಟಿಕೊಳ್ಳುತ್ತದೆ. ಏಕಾಂತದಲ್ಲಿ ಹುಟ್ಟಿದ ಕವಿತೆ ಲೋಕಾಂತಕ್ಕೆ ನೀಡಿದ ಮೇಲೆ ಅದರ ಕುರಿತು ಮಾತನಾಡುವುದು ಅನಾವಶ್ಯಕ. ಬದುಕಿನಲ್ಲಿ ಕಾಡಿದ, ಅನುಭವಕ್ಕೆ ಸಿಕ್ಕ ಭಾವನೆಗಳ ಸಣ್ಣ ಎಳೆಯೇ ಕವಿತೆಯಾಗಿ ಹೊರಹೊಮ್ಮುತ್ತದೆ.” ಎಂದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತೆ ಸಹನಾ ಕಾಂತಬೈಲು ಮಾತನಾಡಿ “ಬರಹಗಾರನಿಗೆ ಬರವಣಿಗೆಯನ್ನು ಏಕೆ ಮತ್ತು ಹೇಗೆ ಮಾಡಬೇಕು ಎಂಬುದು ಮೊದಲ ಆದ್ಯತೆಯಾಗಿರಬೇಕಾಗುತ್ತದೆ. ಬರವಣಿಗೆಯ ಹುಟ್ಟು ಎಂದಿಗೂ ಅಂತರಂಗದ ಪ್ರಕ್ರಿಯೆಯಾಗಿದೆ.” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಾಧವ್ ಎಂ. ಕೆ., ಕನ್ನಡ…

Read More

ಕುರುಡಪದವು : ಕುರಿಯ ವಿಠಲ ಶಾಸ್ತ್ರೀ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಕುರುಡಪದವು ಇದರ ವತಿಯಿಂದ ಸಂಸ್ಮರಣೆ, ಸಮ್ಮಾನ ಮತ್ತು ಯಕ್ಷಗಾನ ಬಯಲಾಟ ಪ್ರದರ್ಶನವು ದಿನಾಂಕ 10-05-2024ರಂದು ಸಂಜೆ ಗಂಟೆ 3-00ರಿಂದ ಕುರುಡಪದವು ಕುರಿಯ ವಿಠಲ ಶಾಸ್ತ್ರೀ ಸ್ಮಾರಕ ಪ್ರೌಢ ಶಾಲೆಯಲ್ಲಿ ಜರಗಲಿದೆ. ಈ ಕಾರ್ಯಕ್ರಮದಲ್ಲಿ ದಿವಂಗತ ಕುರಿಯ ವಿಠಲ ಶಾಸ್ತ್ರೀ, ದಿವಂಗತ ನೆಡ್ಲೆ ನಹಸಿಂಹ ಭಟ್ಟ ಹಾಗೂ ದಿವಂಗತ ಕರುವೋಳು ದೇರಣ್ಣ ಶೆಟ್ಟಿ ಇವರ ಸಂಸ್ಮರಣಾ ಕಾರ್ಯಕ್ರಮ ನಡೆಯಲಿದೆ. ಇದೇ ಸಮಾರಂಭದಲ್ಲಿ ಖ್ಯಾತ ಸ್ತ್ರೀ ವೇಷಧಾರಿ ಶ್ರೀ ಪುಂಡರೀಕಾಕ್ಷ ಉಪಾಧ್ಯಾಯ ಅವರಿಗೆ ‘ವಿಠಲ ಶಾಸ್ತ್ರಿ ಪ್ರಶಸ್ತಿ’, ಹಿರಿಯ ಮದ್ಲೆಗಾರ ಶ್ರೀ ಮೋಹನ ಶೆಟ್ಟಿಗಾರು ಮಿಜಾರು ಅವರಿಗೆ ‘ನೆಡ್ಲೆ ನರಸಿಂಹ ಭಟ್ಟ ಪ್ರಶಸ್ತಿ’, ಕೋಟಿ ಖ್ಯಾತಿಯ ಶ್ರೀ ಕೆ.ಎಚ್. ದಾಸಪ್ಪ ರೈ ಅವರಿಗೆ ‘ದೇರಣ್ಣ ದೇರಣ್ಣ ಶೆಟ್ಟಿ ಪ್ರಶಸ್ತಿ’ ಪ್ರದಾನ ನಡೆಯಲಿದೆ. ಯಕ್ಷಗಾನ ಸಂಘಟಕ ಪಣಂಬೂರು ಮಧುಕರ ಭಾಗವತರು ಅಧ್ಯಕ್ಷತೆ ವಹಿಸಲಿರುವರು. ಸಂಸ್ಮರಣ ಮತ್ತು ಅಭಿನಂದನ ಭಾಷಣವನ್ನು ಡಾ. ಮುರಳೀಧರ ಶೆಟ್ಟಿ ಮಾಡಲಿರುವರು.…

Read More

ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಶಿವಮೊಗ್ಗ ಇದರ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು 109ನೇ ಸಂಸ್ಥಾಪನಾ ದಿನಾಚರಣೆ ಮತ್ತು ಮತ ಹಾಕೋಣ ಬನ್ನಿ ಜಾಗೃತಿ ಕಾರ್ಯಕ್ರಮವನ್ನು ದಿನಾಂಕ 05-05-2024ರಂದು ಸಂಜೆ ಗಂಟೆ 6-30ಕ್ಕೆ ಶಿವಮೊಗ್ಗ ಗೋಪಿಶೆಟ್ಟಿಕೊಪ್ಪ ಚಾಲುಕ್ಯ ನಗರ ಸಾಹಿತ್ಯ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀ ಡಿ. ಮಂಜುನಾಥ ಇವರು ಅಧ್ಯಕ್ಷತೆ ವಹಿಸಲಿದ್ದು, ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಶ್ವರಿ ಎನ್. ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಸದಸ್ಯರಿಗೆ ಅಭಿನಂದನೆ, ಮತದಾನ ಜಾಗೃತಿ ಕವಿ ಸಮಯ ಮತ್ತು ಕನ್ನಡ ಹಾಡು ಕಾರ್ಯಕ್ರಮಗಳು ನಡೆಯಲಿದೆ.

Read More

ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಇದರ ವತಿಯಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣಮಠ ಇವುಗಳ ಸಹಯೋಗದೊಂದಿಗೆ ‘ಯುವ ಸಂಗೀತೋತ್ಸವ 2024’ವನ್ನು ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ದಿನಾಂಕ 05-05-2024ರಂದು ಹಮ್ಮಿಕೊಂಡಿರುತ್ತದೆ. ಬೆಳಗ್ಗೆ ಗಂಟೆ 10-00ರಿಂದ ಕುಮಾರಿ ಚಿನ್ಮಯಿ ವಿ. ಭಟ್ ಇವರ ಹಾಡುಗಾರಿಕೆಗೆ ಶ್ರೀ ಗೌತಮ್ ಭಟ್ ಪಿ.ಜಿ. ವಯೋಲಿನ್ ಮತ್ತು ಶ್ರೀ ಅವಿನಾಶ್ ಬೆಳ್ಳಾರೆ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಗಂಟೆ 11-30ಕ್ಕೆ ಶ್ರೀ ವೆಂಕಟ ಯಶಸ್ವಿ ಮತ್ತು ಶ್ರೀ ವಿಜೇತ ಸುಬ್ರಹ್ಮಣ್ಯ ಇವರ ಹಾಡುಗಾರಿಕೆಗೆ ಕುಮಾರಿ ಧನಶ್ರೀ ಶಬರಾಯ ವಯೋಲಿನ್ ಮತ್ತು ಶ್ರೀ ಪ್ರಣವ್ ಸುಬ್ರಹ್ಮಣ್ಯ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಗಂಟೆ 1-30ರಿಂದ ಕುಮಾರಿ ಮೇಧಾ ಉಡುಪ ಇವರ ಕೊಳಲು ವಾದನಕ್ಕೆ ಶ್ರೀ ಗೌತಮ್ ಭಟ್ ಪಿ.ಜಿ. ವಯೋಲಿನ್ ಮತ್ತು ಶ್ರೀ ಅವಿನಾಶ್ ಬೆಳ್ಳಾರೆ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ಗಂಟೆ 3-00ರಿಂದ ಕುಮಾರಿ ತನ್ಮಯೀ ಹಸನಡ್ಕ ಇವರ ಹಾಡುಗಾರಿಕೆಗೆ…

Read More

ಮಂಗಳೂರು : ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಇವರಿಂದ ‘ಮ್ಯಾಜಿಕ್ ಕೋರ್ಸ್’ 5 ದಿನಗಳ ಕಾರ್ಯಾಗಾರವು ದಿನಾಂಕ 14-05-2024ರಿಂದ 18-05-2024ರವರೆಗೆ ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ನಲಪಾಡ್ ಬಿಲ್ಡಿಂಗ್, 2ನೇ ಮಹಡಿಯಲ್ಲಿ ಸಿ.ಐ.ಎಲ್. ಲೈಫ್ ಸಿಲ್ಕ್ ಹಬ್ ಇಲ್ಲಿ ನಡೆಯಲಿದೆ. ಸೀನಿಯರ್ಸ್ – 8, 9 ಮತ್ತು 10ನೇ ತರಗತಿ ಮಕ್ಕಳಿಗೆ ಬೆಳಗ್ಗೆ 9-30ರಿಂದ 12.30ರವರೆಗೆ ಹಾಗೂ ಜೂನಿಯರ್ಸ್ – 5, 6 ಮತ್ತು 7ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ 2-00ರಿಂದ 5-00ರವರೆಗೆ ಕಾರ್ಯಾಗಾರ ನಡೆಯಲಿದ್ದು, ಕೋರ್ಸ್ ಶುಲ್ಕ ರೂ.3,000/- ಆಗಿರುತ್ತದೆ. ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗಾಗಿ 9986134542 ಸಂಪರ್ಕಿಸಿ.

Read More

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ (ರಿ.) ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ಉದಯರಾಗ – 53’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ಸುರತ್ಕಲ್ಲಿನ ಫ್ಲೈ ಓವರಿನ ಕೆಳಗಡೆ ದಿನಾಂಕ 05-05-2024 ಭಾನುವಾರ ಪೂರ್ವಾಹ್ನ ಗಂಟೆ 6-00ಕ್ಕೆ ನಡೆಯಲಿದೆ. ಶ್ರೀಮತಿ ಗೀತಾ ಸಾರಾಡ್ಕ ಇವರ ಹಾಡುಗಾರಿಕೆಗೆ ಪುತ್ತೂರಿನ ಅನನ್ಯ ಪಿ.ಎಸ್. ವಯೋಲಿನ್ ಹಾಗೂ ಹರಿಕೃಷ್ಣ ಪಾವಂಜೆ ಮೃದಂಗ ಸಾಥ್ ನೀಡಲಿದ್ದಾರೆ. ಸುರತ್ಕಲ್ಲಿನ ರೋಟರಿ ಕ್ಲಬಿನ ಶ್ರೀ ಸಂದೀಪ್ ರಾವ್ ಇಡ್ಯಾ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಮಣಿ ಕೃಷ್ಣಸ್ವಾಮಿ, ಆಕಾಡಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ ರಾವ್ ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.

Read More