Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಅಂತರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಕಲಾವಿದರಾದ ಬೆಂಗಳೂರಿನ ಪಾರ್ಶ್ವನಾಥ ಉಪಾಧ್ಯೆ, ಶೃತಿ ಗೋಪಾಲ್ ಮತ್ತು ಆದಿತ್ಯ ಪಿ.ವಿ. ಇವರಿಂದ ‘ನಾಗಮಂಡಲ’ ವಿಶೇಷ ನೃತ್ಯ ರೂಪಕ ಪ್ರಸ್ತುತಿ ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ದಿನಾಂಕ 06-08-2023ರಂದು ನಡೆಯಿತು. ಮಂಗಳೂರಿನ ಸನಾತನ ನಾಟ್ಯಾಲಯ ಮತ್ತು ನೃತ್ಯಾಂಗನ್ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಎನ್.ಎಂ.ಪಿ.ಎ.ನ ಡೆಪ್ಯುಟಿ ಚೇರ್ಮನ್ ಕೆ.ಜಿ.ನಾಥನ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಎಂ ಮಹೇಶ್ ಕುಮಾರ್, ಕಲಾ ಪೋಷಕರಾದ ಸತೀಶ್ ಚಂದ್ರ ಭಂಡಾರಿಯವರು ಉದ್ಘಾಟಿಸಿದರು. ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಶೆಟ್ಟಿ, ಗುರುಗಳಾದ ವಿದುಷಿ ಶಾರದಾಮಣಿ ಶೇಖರ್, ಶ್ರೀಲತಾ ನಾಗರಾಜ್, ನೃತ್ಯಾಂಗನ್ ಸಂಸ್ಥೆಯ ನಿರ್ದೇಶಕಿ ರಾಧಿಕಾ ಶೆಟ್ಟಿ ಉಪಸ್ಥಿತರಿದ್ದರು. ಗಿರೀಶ ಕಾರ್ನಾಡ್ ರಚಿಸಿದ ‘ನಾಗಮಂಡಲ’ ಜಾನಪದ ಕಥೆಯ ತಿರುಳಿನ ಈ ಕತೆಯನ್ನು ಪುಣ್ಯ ಡ್ಯಾನ್ಸ್ ಕಂಪೆನಿ ಕಲಾವಿದರು ಶಾಸ್ತ್ರೀಯ ನೃತ್ಯಕ್ಕೇ ಅಳವಡಿಸಿ ಪ್ರಸ್ತುತಗೊಳಿಸಿರುವುದು ವಿಭಿನ್ನವಾಗಿತ್ತು. ಇಲ್ಲಿ ಗೀಗಿ ಪದ ಹಾಡುವ ಜನಪದರೇ ನಿರೂಪಕರಾಗಿ, ಕತೆಯನ್ನು ಹೇಳುತ್ತಾ, ಹೊಸದಾಗಿ ಮದುವೆಯಾದ…
ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಪ್ರಸ್ತುತಪಡಿಸುವ ‘ರಾಮಾಯಣ ಮಾಸಾಚರಣೆ’ ಕಾರ್ಯಕ್ರಮವು ದಿನಾಂಕ 11-08-2023 ರಿಂದ 17-08-2023ರವರೆಗೆ ಕಾಸರಗೋಡಿನ ಸಿರಿಬಾಗಿಲಿನಲ್ಲಿರುವ ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ. ಅಗೋಸ್ತು ತಿಂಗಳ 11ನೇ ತಾರೀಕಿನಿಂದ 17ರವರೆಗೆ ಪ್ರತೀದಿನ ಸಂಜೆ ಘಂಟೆ 7.00ರಿಂದ ಯೋಗಾಚಾರ್ಯ ಶ್ರೀ ಪುಂಡರೀಕಾಕ್ಷ ಬೆಳ್ಳೂರು ಇವರಿಂದ ‘ರಾಮನಾಮ ಜಪಯಜ್ಞ’ ಪ್ರವಚನ ಕಾರ್ಯಕ್ರಮವು ನಡೆಯಲಿರುವುದು. ದಿನಾಂಕ 11-08-2023ರ ಶುಕ್ರವಾರ ಮಧ್ಯಾಹ್ನ ಘಂಟೆ 2.30ರಿಂದ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ‘ಪಟ್ಟಾಭಿಷೇಕ’ ನಡೆಯಲಿದ್ದು, ಸಂಜೆ ಘಂಟೆ 6.00ರಿಂದ ಬೆದ್ರಡ್ಕದ ಶ್ರೀ ಅಯ್ಯಪ್ಪ ಮಹಿಳಾ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ ನಡೆಯಲಿರುವುದು. 12-08-2023ರ ಶನಿವಾರ ಮಧ್ಯಾಹ್ನ ಘಂಟೆ 2.30ರಿಂದ ಮಂಗಳೂರಿನ ಶ್ರೀಹರಿ ಯಕ್ಷ ಬಳಗ ಇವರಿಂದ ‘ಭರತಾಗಮನ’ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಘಂಟೆ 6.00ರಿಂದ ಬೆದ್ರಡ್ಕದ ಸನಾತನ ಬಾಲಗೋಕುಲ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿರುವುದು. 13-08-2023ರ ಭಾನುವಾರ ಮಧ್ಯಾಹ್ನ ಘಂಟೆ 2.30ರಿಂದ ಮಂಗಳೂರಿನ ಸರಯೂ ಯಕ್ಷ ಬಾಲ ವೃಂದ ಕೋಡಿಕಲ್ ಇವರಿಂದ ‘ಪಂಚವಟಿ’…
ಮುಡಿಪು : ಮಂಗಳೂರು ವಿ.ವಿ.ಯ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ‘ಯಕ್ಷಗಾನ ಹಿಮ್ಮೇಳ ತರಗತಿ’ಯ ಉದ್ಘಾಟನೆಯು ದಿನಾಂಕ 03-08-2023ರಂದು ನಡೆಯಿತು. ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆಯವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ “ಯಕ್ಷಗಾನ ಜಗತ್ತಿನ ಸರ್ವಶ್ರೇಷ್ಠ ಕಲೆಯಾಗಿದೆ. ಸಂಪ್ರದಾಯಬದ್ಧವಾಗಿ ಯಕ್ಷಗಾನವನ್ನು ಕಲಿಸಿ ಬೆಳೆಸುವುದರೊಂದಿಗೆ ಯಕ್ಷಗಾನದ ಬೇರುಗಳನ್ನು ಗಟ್ಟಿಗೊಳಿಸುವ ಕಾರ್ಯ ಸಂಘ ಸಂಸ್ಥೆಗಳ ಮೂಲಕ ನಿರಂತರವಾಗಿ ನಡೆಯ ಬೇಕಿದೆ. ಯಕ್ಷಗಾನ ಸಂಗೀತ ಪರಂಪರೆಗೆ ಬಹಳ ದೊಡ್ಡ ಇತಿಹಾಸವಿರುವುದನ್ನು ಶಿವರಾಮ ಕಾರಂತರು ಗುರುತಿಸಿದ್ದಾರೆ. ಯಕ್ಷಗಾನಕ್ಕೆ ಇಂದು ಯುವ ಸಮುದಾಯವೂ ಆಕರ್ಷಿತವಾಗುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ಯಕ್ಷಗಾನಕ್ಕೆ ಸಂಬಂದಿಸಿದ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿದ್ದು, ಇದರೊಂದಿಗೆ ಯಕ್ಷಗಾನ ಹಿಮ್ಮೇಳ ತರಬೇತಿಯನ್ನು ಆರಂಭಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.” ಎಂದು ಹೇಳಿದರು. ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಶ್ರೀಪತಿ ಕಲ್ಲೂರಾಯ ಅವರು ಮಾತನಾಡಿ, “ಯಕ್ಷಗಾನವು ನಮ್ಮ ನಾಡಿನ ಹೆಮ್ಮೆಯ ಕಲೆಯಾಗಿದ್ದು, ಈ ಕಲೆಯು ಇಂದು ಸಾವಿರಾರು…
ಪಣಂಬೂರು : ಮುಂಬಯಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ದ.ಕ ಮತ್ತು ಉಡುಪಿ ಜಿಲ್ಲಾ ಶಾಖೆ ಸುರತ್ಕಲ್ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ದಿನಾಂಕ 29-07-2023ರಂದು ಸಮಾಜದ ವಿದ್ಯಾರ್ಥಿಗಳಿಗೆ ಇಂದಿನ ವೃತ್ತಿ ಜೀವನದ ಈ ಸ್ಪರ್ಧಾತ್ಮಕ ಹಾಗೂ ತಾಂತ್ರಿಕ ಯುಗದಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ವ್ಯಕ್ತಿತ್ವ ವಿಕಸನ ಶಿಬಿರವನ್ನು ಜರಗಿಸಲಾಯಿತು. ಮಂಡಳಿ ಸದಸ್ಯರಾದ ಬಾಲಕೃಷ್ಣ ಎನ್.ಸುವರ್ಣ ಅವರು ಮಾತನಾಡಿ, “ಇಂದಿನ ಬದುಕಿನಲ್ಲಿ ಯುವ ಪೀಳಿಗೆ ಕಠಿನ ಪರಿಶ್ರಮ ಹಾಗೂ ಆತ್ಮವಿಶ್ವಾಸವನ್ನು ಹೊಂದಿ ಮುನ್ನಡೆಯಬೇಕು. ಅಂತೆಯೇ ಹೆತ್ತವರನ್ನು ಮತ್ತು ಗುರುಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಬೆಳಸಿಕೊಂಡರೆ ಬದುಕಿನಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಯತೀಶ್ ಬೈಕಂಪಾಡಿಯವರು ಈ ಶಿಬಿರವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಳಿಯ ದ.ಕ ಮತ್ತು ಉಡುಪಿ ಜಿಲ್ಲಾ ಶಾಖಾ ಉಪಾಧ್ಯಕ್ಷರಾದ ಸದಾಶಿವ ಕೋಟ್ಯಾನ್ ಹೆಜಮಾಡಿಯವರು ವಹಿಸಿದ್ದರು. ಎಸ್.ಎಸ್.ಎಲ್.ಸಿ.ಹಾಗೂ ಪಿ.ಯು.ಸಿ.ಪರೀಕ್ಷೆಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ‘ಮೊಗವೀರ’ ಕನ್ನಡ ಮಾಸಿಕದ ಸಂಪಾದಕರಾದ ಅಶೋಕ್…
ಉಡುಪಿ : ಮಾಹೆ ವಿಶ್ವವಿದ್ಯಾನಿಲಯದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಸಂಯುಕ್ತ ಆಶ್ರಯದಲ್ಲಿ 2022 ನೇ ಸಾಲಿನ ಸಾಹಿತಿ ತಾಳ್ತಜೆ ಕೇಶವ ಭಟ್ಟ ಅವರ ಹೆಸರಿನಲ್ಲಿ ನೀಡುವ ‘’ಕೇಶವ ಭಟ್ಟ ಪ್ರಶಸ್ತಿ’ಯನ್ನು ಡಾ.ಹರಿಕೃಷ್ಣ ಭರಣ್ಯ ಮತ್ತು 2023ನೇ ಸಾಲಿನ ಪ್ರಶಸ್ತಿಯನ್ನು ಡಾ.ಎನ್.ಆರ್.ನಾಯಕ್ ಹಾಗೂ ಕವಿ ಕಡೆಂಗೋಡ್ಲು ಶಂಕರ ಭಟ್ಟರ ಹೆಸರಿನಲ್ಲಿ ನೀಡುವ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ಯನ್ನು ಶಂಕರ ಸಿಹಿಮೊಗ್ಗೆಯವರಿಗೆ ದಿನಾಂಕ 05-08-2023ರಂದು ಎಂ.ಜಿ.ಎಂ.ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು. ಎಂ.ಜಿ.ಎಂ.ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಡಾ.ತಾಳ್ತಜೆ ವಸಂತ ಕುಮಾರ್ ಪ್ರಸ್ತಾವನೆಗೈದರು. ಅಜ್ಜರಕಾಡು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ರವಿರಾಜ್ ಶೆಟ್ಟಿ ಅವರು ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿ ವಿಜೇತ ಕವನ ಸಂಕಲನ ‘‘ಇರುವೆ ಮತ್ತು ಗೋಡೆ’ ಕೃತಿ ಪರಿಚಯ ಮಾಡಿದರು. ಮಣಿಪಾಲ ಕೆ.ಎಂ.ಸಿ.ಡೀನ್ ಡಾ.ಪದ್ಮರಾಜ ಹೆಗ್ಡೆಯವರು ಕಡೆಂಗೋಡ್ಲು ಕವನ ಸಂಕಲನವನ್ನು…
ಬೆಂಗಳೂರು : ಸಂಸ್ಕಾರ ಭಾರತೀ ಕರ್ನಾಟಕ (ರಿ.) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ವತಿಯಿಂದ ‘ರಂಗ ಶ್ರಾವಣ’ ನಾಟಕೋತ್ಸವ 2023 ಶ್ರೀ ಶೋಭಕೃನ್ನಾಮ ಸಂವತ್ಸರ ಅಧಿಕ ಶ್ರಾವಣ ದಶಮಿ, ಏಕಾದಶಿ, ದ್ವಾದಶಿಯ ದಿನಾಂಕ 11-08-2023, 12-08-2023 ಮತ್ತು 13-08-2023ರಂದು ಬೆಂಗಳೂರಿನ ಬಸವನ ಗುಡಿಯ ಹನುಮಂತ ನಗರದ ರಾಮಾಂಜನೇಯ ಗುಡ್ಡದ ಬಳಿ ಇರುವ ಪ್ರಭಾತ್ ಕೆ.ಎಚ್. ಕಲಾಸೌಧದಲ್ಲಿ ನಡೆಯಲಿದೆ. ದಿನಾಂಕ 11-08-2023ರಂದು ಬೆಳಿಗ್ಗೆ 10.00 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, 11.00 ಗಂಟೆಗೆ ಡಾ.ಎಸ್.ಆರ್.ಲೀಲಾ ಇವರಿಂದ ‘ಭಾರತೀಯ ರಂಗ ಪರಂಪರೆಯಲ್ಲಿ ಭರತಮುನಿ ನಾಟ್ಯಶಾಸ್ತ್ರದ ಪ್ರಸ್ತುತತೆ’ ಎಂಬ ವಿಷಯದ ಬಗ್ಗೆ ಉಪನ್ಯಾಸ, ಮಧ್ಯಾಹ್ನ 12.30ರಿಂದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಥಣಿಸಂದ್ರ ಕಾಲೇಜು ವಿದ್ಯಾರ್ಥಿಗಳಿಂದ ನಾಟಕ ‘ಸ್ವದೇಶಿ’, ಘಂಟೆ 2.00ರಿಂದ ‘ವಿಷಯದ ಸುಧಾರಣೆ ಹಾಗೂ ಪ್ರಸ್ತುತಿಯಲ್ಲಿ ಅಳವಡಿಕೆ’ ವಿಷಯದ ಬಗ್ಗೆ ಶ್ರೀ ರಾಜೇಂದ್ರ ಕಾರಂತ ಇವರಿಂದ ಉಪನ್ಯಾಸ, ಘಂಟೆ 3.00ರಿಂದ ಬಸವನಗುಡಿಯ ನ್ಯಾಷನಲ್ ಕಾಲೇಜು ವಿದ್ಯಾರ್ಥಿಗಳಿಂದ ನಾಟಕ ‘ಸಾಮರಸ್ಯ’, ಘಂಟೆ 4.15ಕ್ಕೆ ‘ಭಾರತೀಯ ರಂಗ ಭೂಮಿ ಬೆಳೆದು…
ಮಂಗಳೂರು : ರೋಟರಿ ಕ್ಲಬ್ ಮಂಗಳೂರು ಸಹಯೋಗದಲ್ಲಿ ಹೋಟೆಲ್ ಮೋತಿಮಹಲ್ ಸಭಾಂಗಣದಲ್ಲಿ ದಿನಾಂಕ 03-08-2023ರಂದು ‘ಭಾರತೀಯ ಭಾಷಾ ಲಿಪಿ’ ಬಗ್ಗೆ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಷಾ ತಜ್ಞ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸಕಾರ ಡಾ. ಕೆ.ಪಿ. ರಾವ್ ಅವರು ಮಾತನಾಡುತ್ತಾ “ಪ್ರತಿಯೊಬ್ಬರೂ ತಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಿ ಅದರ ಉಳಿವಿಗೆ ಪ್ರಯತ್ನಿಸಬೇಕು. ಇಂದು ಅದೆಷ್ಟೋ ಭಾಷೆಗಳು ನಶಿಸಿ ಹೋಗುತ್ತಿರುವುದು ಖೇದಕರ. ಪ್ರತಿಯೊಂದು ಭಾಷೆಯ ಬೆಳವಣಿಗೆಗೆ ನಮ್ಮಿಂದಾದಷ್ಟು ಕೊಡುಗೆ ನೀಡಬೇಕು. ವಿದ್ಯಾರ್ಥಿಗಳು ಮಾತೃ ಭಾಷೆಯ ಕುರಿತು ಅಭಿಮಾನ ಮತ್ತು ಗೌರವ ಹೆಚ್ಚಿಸಿ, ಭಾಷಾಭಿಮಾನ ಬೆಳೆಸಿಕೊಳ್ಳಬೇಕು.” ಎಂದು ಹೇಳಿದರು. ರೋಟರಿ ಅಧ್ಯಕ್ಷ ಕಿಶನ್ ಕುಮಾರ್ ಮಾತನಾಡಿ “ಸಿಂಧೂ ಲಿಪಿಯನ್ನು ಕಂಪ್ಯೂಟರ್ ಬಳಸಿ ಮುದ್ರಿಸುವ ಪ್ರಯತ್ನದಲ್ಲಿ ಮಹತ್ವದ ಪಾತ್ರ ವಹಿಸಿದ್ದವರಲ್ಲಿ ಡಾ.ಕೆ.ಪಿ. ರಾವ್ ಅಗ್ರಗಣ್ಯರು. ಉಚ್ಛಾರಣಾತ್ಮಕ ತರ್ಕ ಬಳಸಿದ ಮೊದಲ ಕೀಬೋರ್ಡ್ ವಿನ್ಯಾಸವನ್ನು ಸೃಷ್ಟಿಸಿ ಇದೇ ತರ್ಕ ಬಳಸಿ ಕನ್ನಡದ ಕೀಬೋರ್ಡ್ ವಿನ್ಯಾಸ ತಯಾರಿಕೆ ಇವರ…
ಮಂಗಳೂರು : ಆರ್ಟ್ ಕೆನರಾ ಟ್ರಸ್ಟ್ ಮಂಗಳೂರು ಮತ್ತು ಕವಿತಾ ಕುಟೀರ ಪೆರಡಾಲ ಇವರ ಸಹಯೋಗದಲ್ಲಿ ಕಾಸರಗೋಡಿನ ಪೆರಡಾಲದ ನವಜೀವನ ಹೈಸ್ಕೂಲಿನ ಹಿರಿಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಆಯೋಜಿಸಲಾಗುವ ನೂರ ಒಂದು (101) ಕತೆಗಳ ಮತ್ತು ಕವನಗಳ ಸಂಕಲನವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವರೇ, ಅವಕಾಶ ಪಡೆಯುವುದಕ್ಕಾಗಿ ತಮ್ಮ ಬರಹಗಳನ್ನು ಸಲ್ಲಿಸಲು ಕೋರಲಾಗಿದೆ. 1) ನಾಡೋಜ ಕವಿ ಕೈಯ್ಯಾರ ಕಿಂಞಣ್ಣ ರೈ ಅವರ ಸ್ಮರಣಾರ್ಥವಾಗಿ ಪ್ರಕಟಿಸಲಾಗುವ ಈ ಕೃತಿಗೆ ನೀವು ಕಳುಹಿಸುವ ಬರಹಗಳು ಕನ್ನಡ ಭಾಷೆಯಲ್ಲಿ ಇರಬೇಕು. 2) 18ರಿಂದ 35 ವರ್ಷ ವಯೋಮಾನದವರು ಅಂದರೆ ಜನವರಿ 1988ರಿಂದ ದಶಂಬರ 2004ರ ಮಧ್ಯೆ ಜನಿಸಿದವರು ಅರ್ಹರಾಗಿರುತ್ತಾರೆ. 3) ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹುಟ್ಟಿ ಬೆಳೆದ ಹಾಗೂ ವಿದ್ಯಾರ್ಥಿಗಳಾಗಿರುವ ಎಲ್ಲರಿಗೂ ಭಾಗವಹಿಸುವ ಅವಕಾಶವಿದೆ. 4) ಬರಹಗಳ ಶಬ್ದ ಮಿತಿಯು 300 ಪದಗಳನ್ನು ಮೀರದಂತೆ ಕವನ ಮತ್ತು 500 ಪದಗಳನ್ನು ಮೀರದಂತೆ ಸಣ್ಣ ಕತೆ (micro stories) ಆಯ್ಕೆಗಾಗಿ 3ರಿಂದ 5 ಕತೆ-ಕವನಗಳು…
ಸುಳ್ಯ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಹಾಗೂ ಸರಕಾರಿ ಪ್ರೌಢ ಶಾಲೆ ಮರ್ಕಂಜ ಇದರ ಆಶ್ರಯದಲ್ಲಿ ಸಂಗೀತ ವರ್ಷಧಾರೆ ‘ಮಳೆ ಹಾಡುಗಳ ಕಲರವ’ ಕಾರ್ಯಕ್ರಮವು ದಿನಾಂಕ 10-08-2023ನೇ ಗುರುವಾರ ಸುಳ್ಯದ ಮರ್ಕಂಜದಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ಅಪರಾಹ್ನ 2.00ರಿಂದ ನಡೆಯಲಿದೆ. ಸರಕಾರಿ ಪ್ರೌಢ ಶಾಲೆ ಮರ್ಕಂಜದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಆನಂದ ಬಾಣೂರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸರಕಾರಿ ಪ್ರೌಢ ಶಾಲೆ ಮರ್ಕಂಜದ ಮುಖ್ಯಶಿಕ್ಷಕಿಯಾದ ಶ್ರೀಮತಿ ವೀಣಾ ಎಂ.ಟಿ ಉಪಸ್ಥಿತರಿರುವರು. ಸುಳ್ಯದ ಭಾವನಾ ಸುಗಮ ಸಂಗೀತ ಬಳಗ (ರಿ.) ಇದರ ಶ್ರೀ ಕೆ.ಆರ್ ಗೋಪಾಲಕೃಷ್ಣ ಮತ್ತು ಬಳಗ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದು, ಕ.ಸಾ.ಪ ಸುಳ್ಯ ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಹೈದರಾಬಾದ್ : ‘ಗದ್ದರ್’ ಎಂದೇ ಮನೆಮಾತಾಗಿದ್ದ ತೆಲಂಗಾಣದ ಖ್ಯಾತ ಜಾನಪದ ಕಲಾವಿದ ಹಾಗೂ ‘ಪ್ರಜಾ ಗಾಯಕ’ ಗುಮ್ಮಡಿ ವಿಠ್ಠಲ್ ರಾವ್ (77) ಅನಾರೋಗ್ಯದಿಂದ ದಿನಾಂಕ 06-08-2023ರಂದು ಇಹಲೋಕ ವನ್ನು ತ್ಯಜಿಸಿದ್ದಾರೆ. 1949ರಲ್ಲಿ ತೆಲಂಗಾಣದ ತುಪ್ರಾನ್ ನಲ್ಲಿ ದಲಿತ ಕುಟುಂಬದಲ್ಲಿ ಜನಿಸಿದ ಗದ್ದರ್ ನಿಜಾಮಾಬಾದಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು ಹಾಡುಗಳನ್ನು ಕಟ್ಟಿ ಹಾಡುತ್ತಿದ್ದ ಅವರು, ತೆಲುಗಿನ ಕೆಲವು ಕ್ರಾಂತಿಕಾರಿ ಸಿನಿಮಾಗಳಲ್ಲೂ ಅಭಿನಯಿಸಿದ್ದರು. ನಂತರದಲ್ಲಿ ಬ್ಯಾಂಕ್ ಉದ್ಯೋಗಕ್ಕೆ ರಾಜೀನಾಮೆ ನೀಡಿ ತಮ್ಮನ್ನು ತಾವು ಸಂಪೂರ್ಣವಾಗಿ ಸಾಮಾಜಿಕ ಹೋರಾಟಗಳಿಗೆ ಅರ್ಪಿಸಿಕೊಂಡರು. ತಮ್ಮ ಕ್ರಾಂತಿ ಗೀತೆಗಳ ಮೂಲಕ ಯುವಕರನ್ನು ಮಾವೋವಾದಿ ಚಳವಳಿ ಹಾಗೂ ಪ್ರತ್ಯೇಕ ತೆಲಂಗಾಣ ಹೋರಾಟಕ್ಕೆ ಗದ್ದರ್ ಸೆಳೆದಿದ್ದರು. 2010ರವರೆಗೂ ‘ನಕ್ಸಲ್ ಚಳವಳಿ’ಯಲ್ಲಿ ಗುರುತಿಸಿಕೊಂಡಿದ್ದ ಅವರು, ತೆಲಂಗಾಣ ಪ್ರತ್ಯೇಕ ರಾಜ್ಯವಾದ ಮೂರು ವರ್ಷದ ಬಳಿಕ ಮಾವೋವಾದಿಗಳ ಸಂಪರ್ಕವನ್ನು ಸಂಪೂರ್ಣವಾಗಿ ತ್ಯಜಿಸಿದ್ದರು.