Subscribe to Updates
Get the latest creative news from FooBar about art, design and business.
Author: roovari
ಪುತ್ತೂರು : ತುಳುಕೂಟ ಪುತ್ತೂರು, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಮತ್ತು ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ಇವುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ 29-07-2023ರಂದು ಜರಗಿದ ‘ಬರ್ಸದ ಪನಿ – ಕಬಿತೆ ಕೇನಿ’ ತುಳು ಕವಿಗೋಷ್ಠಿಯನ್ನು ಖ್ಯಾತ ಸಾಹಿತಿ ಕೆದಂಬಾಡಿ ಜತ್ತಪ್ಪ ರೈಯವರ ಕವಿತೆಯೊಂದನ್ನು ಓದುವ ಮೂಲಕ ಸಾಹಿತಿ, ಕೃಷಿಕ, ಸಹಕಾರಿ ರತ್ನ ದಂಬೆಕ್ಕಾನ ಸದಾಶಿವ ರೈ ಉದ್ಘಾಟಿಸಿ, ತುಳು ಭಾಷೆಯ ಕವಿಗೋಷ್ಠಿ ಮತ್ತು ಸಾಹಿತ್ಯಗೋಷ್ಟಿಗಳು ಹೆಚ್ಚು ಹೆಚ್ಚು ಜರಗಿ ತುಳು ಭಾಷೆ ಇನ್ನಷ್ಟು ಶ್ರೀಮಂತವಾಗಲಿ. ಎಂದು ಹಾರೈಸಿದರು. ಪಾಂಚಜನ್ಯ ರೇಡಿಯೋದ ಕಾರ್ಯದರ್ಶಿ ಪದ್ಮಾ ಕೆ.ಆರ್. ಆಚಾರ್ಯ, ತುಳುಕೂಟದ ಉಪಾಧ್ಯಕ್ಷರುಗಳಾದ ಸಂತೋಷ್ ಶೆಟ್ಟಿ ಎಸ್. ಹಾಗೂ ನ್ಯಾಯವಾದಿ ಹೀರಾ ಉದಯ್, ಮಾಜಿ ಅಧ್ಯಕ್ಷ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು, ಚಿಗುರೆಲೆ ಸಾಹಿತ್ಯ ಬಳಗದ ಅಧ್ಯಕ್ಷ ಚಂದ್ರಮೌಳಿ ಕಡಂದೇಲು ಮತ್ತು ಕಾರ್ಯಕ್ರಮ ಸಂಯೋಜಕ ನಾರಾಯಣ ಕುಂಬ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ನವೀನ್ ಕುಲಾಲ್ ಚಿಪ್ಪಾರ್ ಮತ್ತು…
ಬದಿಯಡ್ಕ : ನೀರ್ಜಾಲು ಸಮೀಪದ ಕುಂಟಿಕಾನ ಎ.ಎಸ್.ಬಿ. ಶಾಲೆಯಲ್ಲಿ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಬದಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪರ್ಯಟನೆಯ 6ನೇ ಸರಣಿ ಕಾರ್ಯಕ್ರಮ ದಿನಾಂಕ 30-07-2023ರಂದು ನಡೆಯಿತು. ಈ ಸರಣಿ ಕಾರ್ಯಕ್ರಮದಲ್ಲಿ ಶಿಕ್ಷಕ ರಾಜೇಶ್ ಎಸ್. ಉಬ್ರಂಗಳ ಇವರು ‘ಕನ್ನಡ ಭಾಷಾ ಪ್ರಜ್ಞೆ ಬೆಳೆಸುವುದು ಹೇಗೆ?” ಎಂಬ ಕುರಿತು ತಮ್ಮ ವಿಚಾರವನ್ನು ಮಂಡಿಸುತ್ತಾ “ಜಿಲ್ಲೆಯ ಮಕ್ಕಳಲ್ಲಿ ಕನ್ನಡ ಪ್ರಜ್ಞೆ ಅರಳಬೇಕಾದರೆ, ಮೊದಲು ಅದು ಮಕ್ಕಳ ಹಿರಿಯರಲ್ಲಿ ಅರಳಬೇಕು. ಕಾಸರಗೋಡಿನ ಕನ್ನಡಿಗರಿಗೆ ಕೇರಳದಲ್ಲಿ ಅನೇಕ ಸವಲತ್ತುಗಳಿವೆ. ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲೂ ಕೂಡಾ ವಿಶೇಷವಾಗಿ ಗಡಿನಾಡ ಕನ್ನಡಿಗರ ಮೀಸಲಾತಿ ಇದೆ. ಅದನ್ನು ಪಡೆದು ಗಳಿಸಿಕೊಳ್ಳಬೇಕು. ಕನ್ನಡದ ಸಂಸ್ಕೃತಿಯನ್ನು ಯಾವತ್ತೂ ಬಿಡಬಾರದು. ಕನ್ನಡಿಗರನ್ನು ಪರಸ್ಪರ ಆಧರಿಸಿಕೊಂಡು ಕನ್ನಡಿಗರೇ ರಕ್ಷಿಸಿಕೊಳ್ಳಬೇಕು. ಕನ್ನಡ ಭಾಷೆಯಲ್ಲಿ, ಬಹುಮುಖಿ ಸಾಹಿತ್ಯ ಹಾಗೂ ಸಂಸ್ಕೃತಿ ಇದೆ. ಆಧುನಿಕ ಸಾಹಿತ್ಯ ಕ್ಷೇತ್ರದಲ್ಲಿ ಡಿಜಿಟಲ್ ಸಾಹಿತ್ಯ ಇನ್ನಷ್ಟೂ ವಿಸ್ತಾರವಾಗಬೇಕು. ಕಾಸರಗೋಡಿನ…
ಮಂಗಳೂರು : ಸನಾತನ ನಾಟ್ಯಾಲಯದ ವತಿಯಿಂದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ 29-07-2023ರಂದು ‘ಸನಾತನ ನೃತ್ಯ ಪ್ರೇರಣಾ’ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ 2022ರಲ್ಲಿ ಭರತನಾಟ್ಯ ವಿದ್ವತ್ ಪೂರೈಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ‘ಸನಾತನ ನೃತ್ಯ ಪ್ರೇರಣಾ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಕ್ಷ ಧ್ರುವ ಪಟ್ಲ ಫೌಂಡೇಷನ್ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಇವರು ಮಾತನಾಡಿ “ನೃತ್ಯ ಕಲೆ ಮಾತ್ರವಲ್ಲ, ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಭಾರತೀಯ ಸಂಸ್ಕೃತಿಯನ್ನು ಪಸರಿಸುವ ಸನಾತನ ನಾಟ್ಯಾಲಯದ ಕಾರ್ಯ ವೈಖರಿಯನ್ನು ಸಮಾಜವು ಗುರುತಿಸಬೇಕು. ಕಲೆ ಎಂಬುದು ಯಾವುದಕ್ಕೂ ಅಡೆತಡೆ ಆಗುವುದಿಲ್ಲ. ಅದನ್ನು ನಂಬಿಯೇ ಜೀವನ ಮಾಡುವುದು ಸಾಧ್ಯ. ಕಲೆಯನ್ನು ಪ್ರೀತಿಸಿ ತಪಸ್ಸಾಧನೆ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ” ಎಂದು ಹೇಳಿದರು. ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಹಿರಿಯ ಶಾಖಾಧಿಕಾರಿ ಶ್ರೀ ಎಲ್.ದಿವಾಕರ್, ಮಣಿಪಾಲದ ಹೆಜ್ಜೆ ಗೆಜ್ಜೆ ಸಂಸ್ಥೆಯ ನೃತ್ಯಗುರು ವಿದುಷಿ ಯಶ ರಾಮಕೃಷ್ಣ ವಿದ್ವತ್ ಪೂರೈಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ವತ್ ಪರೀಕ್ಷೆಯಲ್ಲಿ ಪಾಸಾದ ವಿದುಷಿಯರಾದ…
ಬೆಂಗಳೂರು : ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪೂರ್ಣರಾತ್ರಿ ತಾಳಮದ್ದಳೆ ಕಾರ್ಯಕ್ರಮ ದಿನಾಂಕ 22-07-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ‘ಗುರು ಸಮ್ಮಾನ’ ಸ್ವೀಕರಿಸಿದ ಹಿರಿಯ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೋ ಇವರು ಮಾತನಾಡುತ್ತಾ “ಸಂಸ್ಕಾರ, ಸಂಸ್ಕೃತಿ ಪಸರಿಸುವ ವಿಶಿಷ್ಟ ಕಲೆ ಯಕ್ಷಗಾನ. ಇದು ಹೇಗೆ ಸರಿ, ಅದೇಕೆ ಸರಿಯಲ್ಲ ಎಂದು ತರ್ಕಿಸುವ ಬುದ್ಧಿ ನಮಗೆ ಶಾಲಾ ಪಠ್ಯದಿಂದ ದೊರೆತಿದ್ದಲ್ಲ, ಬದಲಾಗಿ ತರ್ಕಶಕ್ತಿ, ಪದ ಭಂಡಾರ, ಪೌರಾಣಿಕ ಜ್ಞಾನ ಇವೆಲ್ಲ ಯಕ್ಷಗಾನದಿಂದ ದೊರೆತಿರುವುದು” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ಅವರನ್ನು ಸನ್ಮಾನಿಸಲಾಯಿತು. ರಂಗಕರ್ಮಿ ಸೇತುರಾಂ ಎಸ್.ಎನ್., ಟಿ. ಶಿವಾನಂದ ಶೆಟ್ಟಿ, ದೀಪಕ್ ಶೆಟ್ಟಿ ಬಾರ್ಕೂರು, ಡಾ.ಬಾಬು ಗೋವಿಂದ ಪೂಜಾರಿ, ರಘುರಾಮ ಶೆಟ್ಟಿ ಎಳ್ಮುಡಿ, ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ಅಶ್ವತ್ಥ ಹೆಗ್ಡೆ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ‘ಕೃಷ್ಣ ಸಂಧಾನ’ ಹಾಗೂ ‘ಕರ್ಣಾರ್ಜುನ’ ಎಂಬ ಅಖ್ಯಾನಗಳ ಯಕ್ಷಗಾನ ತಾಳಮದ್ದಳೆ ಜರುಗಿತು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಆಗಮಿಸಿದ್ದು, ಇನ್ನೂರಕ್ಕೂ…
ಮಂಗಳೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ಘಟಕದ ಆಶ್ರಯದಲ್ಲಿ ದಿನಾಂಕ 29-07-2023ರಂದು ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆದ ವಿದ್ವಾನ್ ರಘುಪತಿ ಭಟ್ ರಚಿಸಿದ ‘ನಾನು ಮತ್ತು ನಾನು’ ಭಾವ ಸಂಕಲನ ಕೃತಿಯನ್ನು ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಡಾ. ವಸಂತ ಕುಮಾರ್ ಪೆರ್ಲ ಇವರು ಮಾತನಾಡುತ್ತಾ “ಸಾಹಿತ್ಯವು ಭಾವನೆಗಳೊಂದಿಗೆ ಹುಟ್ಟಿಕೊಳ್ಳುತ್ತದೆ ಹೊರತು ಆಧುನಿಕ ಯಂತ್ರಗಳಿಂದಲ್ಲ. ಮನುಷ್ಯನು ಭಾವಜೀವಿ ಹಾಗಾಗೀ ಮನಸ್ಸಿನಲ್ಲಿ ಉಂಟಾಗುವ ಭಾವ ಪ್ರಪಂಚದ ಕಥೆ ವ್ಯಥೆಗಳೇ ಕಾವ್ಯಕ್ಕೆ ವಸ್ತುಗಳು ಆಗುತ್ತವೆ.” ಎಂದು ಹೇಳಿದರು. ಸಾಹಿತಿ ಶಶಿರಾಜ್ ಕಾವೂರು ಮಾತನಾಡಿ, “ರಘುಪತಿ ಭಟ್ ಅವರು ‘ನಾನು ಮತ್ತು ನಾನು’ ಭಾವ ಸಂಕಲನದಲ್ಲಿ ಸಮಕಾಲೀನ ಮನುಷ್ಯ ಮತ್ತು ಆಧ್ಯಾತ್ಮಿಕ ಭಾವ ಪ್ರಪಂಚದ ವಸ್ತುಗಳನ್ನು ಕೇಂದ್ರಿಕರಿಸಿ ಕಾವ್ಯವನ್ನು ರಚಿಸಿದ್ದಾರೆ. ಕಾವ್ಯವು ಮಾನವ ಸಂಬಂಧಗಳನ್ನು ಒಟ್ಟುಗೂಡಿಸುವ ಮೂಲಕ ನಮಗೆ ಒಂದು ರೀತಿಯ ಸುಖವನ್ನು ನೀಡುತ್ತದೆ.” ಎಂದು ಹೇಳಿದರು. ಕ.ಸಾ.ಪ. ಮಂಗಳೂರು ಘಟಕದ ಅಧ್ಯಕ್ಷ ಡಾ.ಮಂಜುನಾಥ್ ರೇವಣಕರ್, ಸಾಹಿತಿ, ನ್ಯಾಯವಾದಿ ಶಶಿರಾಜ್ ಕಾವೂರು,…
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮನೆ-ಮನಗಳಲ್ಲಿ ಸಾಹಿತ್ಯ ಕಾರ್ಯಕ್ರಮದ ಅಂಗವಾಗಿ ಕನ್ನಡದ ಸಾಹಿತಿ ಶ್ರೀ ಕೇಶವ ಕುಡ್ಲ ಇವರ ಸಾಹಿತ್ಯದ ಬಗ್ಗೆ ಸಂವಾದ ಕಾರ್ಯಕ್ರಮವು ಮಂಗಳೂರಿನ ಕೋಡಿಕಲ್ಲಿನಲ್ಲಿರುವ ಕೇಶವ ಕುಡ್ಲರ “ನೆಲೆ” ನಿವಾಸದಲ್ಲಿ ದಿನಾಂಕ 30-07-2023ರಂದು ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕೇಶವ ಕುಡ್ಲ ಅವರು ತಮ್ಮ ಬದುಕು, ಸಾಹಿತ್ಯ ಮತ್ತು ಸಾಹಿತ್ಯ ಪ್ರೇರಣೆಗಳ ಬಗ್ಗೆ ಮಾತನಾಡಿದರು. ಖ್ಯಾತ ಸಾಹಿತಿ ಡಾ. ವಸಂತ ಕುಮಾರ ಪೆರ್ಲ ಇವರು ಸಂವಾದ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ, ಕೇಶವ ಕುಡ್ಲರ ಸಾಹಿತ್ಯದ ಒಳಹೊರಗಿನ ಬಗ್ಗೆ ತಿಳಿಸುತ್ತಾ, ಸಾಹಿತ್ಯದ ಅನ್ಯನ್ಯ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಮಾತ್ರವಲ್ಲದೆ ಅವೆಲ್ಲದಕ್ಕೂ ನ್ಯಾಯವನ್ನು ದೊರಕಿಸಿಕೊಟ್ಟ ಮಹತ್ವದ ಲೇಖಕ ಮಾತ್ರವಲ್ಲ ಬಹುಮುಖ ವ್ಯಕ್ತಿತ್ವದ ಪ್ರತಿಭೆ ಎಂದು ಹೇಳಿದರು. ಸಾಹಿತಿ ದೇವು ಹನೆಹಳ್ಳಿ, ಸುಭಾಶ್ ರಾವ್ ಬೋಳೂರು, ಡಾ. ಮೀನಾಕ್ಷಿ…
ಉಡುಪಿ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿಶ್ವಕರ್ಮ ಸಮಾಜದ 20ರಿಂದ 45 ವರ್ಷದೊಳಗಿನ ಬರಹಗಾರರಿಗಾಗಿ ಸ್ವರಚಿತ ಸಣ್ಣಕಥೆ ಮತ್ತು ಕವನ ಸ್ಪರ್ಧೆ ಆಯೋಜಿಸಲಾಗಿದೆ. ಕಥೆಯು ಎ4 ಅಳತೆಯ ಕಾಗದದಲ್ಲಿ 02 ಪುಟ ಮೀರದಂತೆ, ಕವಿತೆಯು 01 ಪುಟ ಮೀರದಂತೆ ಸ್ವಹಸ್ತಾಕ್ಷರದಲ್ಲಿ ಬರೆದು, ವಯಸ್ಸಿನ ದಾಖಲೆ, ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಭಾವಚಿತ್ರ ಲಗ್ತೀಕರಿಸಿ 20-08-2023ರೊಳಗೆ ಕೆ.ಮುರಳೀಧರ, ಪ್ರಧಾನ ಕಾರ್ಯದರ್ಶಿ, ವಿಶ್ವಕರ್ಮ ಒಕ್ಕೂಟ, ಶ್ರೀಕೃಷ್ಣ, ಅಮ್ಮಾ ಲೇಔಟ್, ಕನ್ನರ್ಪಾಡಿ, ಕಡೆಕಾರು ಅಂಚೆ, ಉಡುಪಿ -576103. ವಿಳಾಸಕ್ಕೆ ಕಳುಹಿಸಿಕೊಡಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9448348200 ಸಂಪರ್ಕಿಸಬಹುದು.
ಕಿನ್ನಿಗೋಳಿ : ಅನಂತ ಪ್ರಕಾಶದ ಗಾಯತ್ರೀ ಪ್ರಕಾಶನದಿಂದ ಈವರೆಗೆ 168 ಕೃತಿಗಳು ಪ್ರಕಟವಾಗಿದ್ದು 169ನೆಯದಾಗಿ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರ ಲೇಖನಗಳ ಕೃತಿ ‘ತಲ್ಲಣಿಸದಿರು ಮನವೆ’, 170ನೆಯ ಕಾದಂಬರಿ ಕೃತಿ ‘ಕೂಡುಮನೆ’,ಹಾಗೂ 171ನೆಯ ಕೃತಿ ಟಿ.ಎಂ. ರಮೇಶ್ ಅವರ ಲಲಿತಪ್ರಬಂಧಗಳ ಸಂಕಲನ ‘ನಗುಬಿಗು’ ಬಿಡುಗಡೆ ಸಮಾರಂಭ ದಿನಾಂಕ 28-07-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮೂಡಬಿದಿರೆಯ ಡಾ. ಮೋಹನ ಆಳ್ವ ಮಾತನಾಡುತ್ತಾ “ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಮತ್ತು ಸಾಹಿತ್ಯದ ಕೆಲಸಗಳು ನಡೆಯುತ್ತಲೇ ಇರುತ್ತವೆ. ಆ ಮೂಲಕ ಕನ್ನಡದ ಮನಸ್ಸುಗಳು ಸದಾ ಕ್ರಿಯಾಶೀಲವಾಗಿತ್ತದೆ.” ಎಂದು ಹೇಳಿದರು. ಡಾ. ಭಾಸ್ಕರಾನಂದ ಕುಮಾರ್ ಮಾತನಾಡಿ “ಕಿನ್ನಿಗೋಳಿಯ ಅನಂತ ಪ್ರಕಾಶ ಸಂಸ್ಥೆ ನಡೆಸಿಕೊಂಡು ಬರುತ್ತಿರುವ ಸಾಹಿತ್ಯ ಚಟುವಟಿಕೆಗಳು ಅಭಿನಂದನೀಯ. ಕಲ್ಚಾರ್ ಅವರ ಕೃತಿಯ ಓದು ಪುರಾಣದ ಜ್ಞಾನದಾಹಿಗೆ ಉತ್ತಮ ಕೃತಿ.” ಎಂದರು. ಉಡುಪಿಯ ಮುರಳಿ ಕಡೆಕಾರ್ ಮಾತನಾಡಿ, “ತಾಳಮದ್ದಳೆ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕಲ್ಚಾರ್ ಅವರ ಕಾದಂಬರಿ ‘ಕೂಡುಮನೆ’ ಸರಾಗವಾಗಿ ಓದಿಸಿಕೊಂಡು ಹೋಗುವ ಉತ್ತಮ ಕೃತಿ. ಹಿಂದಿನ ಕೂಡು…
ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ‘ಬಂಗಾರ ಪರ್ಬ’ 5ನೆಯ ಸರಣಿ ಕಾರ್ಯಕ್ರಮ’ವು ಶ್ರೀ ಕ್ಷೇತ್ರ ಶರವು ದೇವಾಲಯದ ಸಭಾಂಗಣದಲ್ಲಿ ದಿನಾಂಕ 29-07-2023ರಂದು ಜರಗಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಶ್ರೀ ಕ್ಷೇತ್ರ ಶರವು ದೇವಾಲಯದ ಶಿಲೆ ಶಿಲೆ ಮೊಕ್ತೇಸರರಾದ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮಾತನಾಡುತ್ತಾ “ತುಳು ಭಾಷೆಯನ್ನು ನಾವು ತುಳುವರೇ ಮರೆತರೆ ಭಾಷಾ ಬೆಳವಣಿಗೆ ನಡೆಯದು. ಬೇರೆ ಬೇರೆ ಭಾಷೆಗಳನ್ನು ಕಲಿತರೂ ಮಾತೃಭಾಷೆಯನ್ನು ನಮ್ಮ ಮುಂದಿನ ಪೀಳಿಗೆಗೆ ನಾವೇ ತಲಪಿಸಬೇಕು. ಹಾಗಾದಾಗ ಮಾತ್ರ ಭಾಷೆಗೊಂದು ಸ್ಥಿರತೆ ಬರುತ್ತದೆ. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ವಾಸಿಸುವಾಗಲೂ ತುಳುವನ್ನು ಪ್ರೀತಿಯಿಂದ ತೌಳವ ಮಂದಿಗಳೂ ಆಡುವಂತಾಗುತ್ತದೆ. ತುಳುಕೂಟ ಬಂಗಾರ್ ಪರ್ಬದ ಸಂಭ್ರಮಾಚರಣೆಯನ್ನು ನಡೆಸುತ್ತಿರುವಈ ಸಂದರ್ಭದಲ್ಲಿ ಅದಕ್ಕೆ ಬೇಕಾಗುವ ಜನ ಜಾಗೃತಿಯನ್ನು ಮತ್ತು ತುಳು ಕೃಷಿಯನ್ನು ಮಾಡುತ್ತಾ ಬರುತ್ತಿದೆ. ಶ್ರೀಕ್ಷೇತ್ರದಲ್ಲೂ ತುಳುವಿಗೆ ಸಂಬಂಧಪಟ್ಟಂತೆ ಅನೇಕ ಕಾರ್ಯಕ್ರಮಗಳಿಗೆ ಅವಕಾಶ ನೀಡುತ್ತಿದ್ದೇವೆ. ಎಲ್ಲರೂ ಒಟ್ಟಾಗಿ ತುಳುತೇರನ್ನು ಎಳೆಯೋಣ.” ಎ೦ದು ಹೇಳಿದರು. ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ…
ಮಂಗಳೂರು : ಬೆಂಗಳೂರು ದೂರದರ್ಶನದ ಚಂದನ ವಾಹಿನಿಯಲ್ಲಿ ಭಾಸ್ಕರ ರೈ ಕುಕ್ಕುವಳ್ಳಿಯವರು ಸಂಯೋಜಿಸಿದ ‘ತುಳುನಾಡ ಆಟಿದ ಕೂಟ’ ಪಟ್ಟಾಂಗ ಕಾರ್ಯಕ್ರಮ ಇದೇ ಜುಲೈ 29ರಂದು ಶನಿವಾರ ಬೆಳಿಗ್ಗೆ ಗಂ.9.30ರಿಂದ ಪ್ರಸಾರಗೊಳ್ಳಲಿದೆ. ಇದರಲ್ಲಿ ತುಳುನಾಡಿನ ಆಟಿ ತಿಂಗಳ ವಿಶೇಷತೆ, ಆಟಿ ಮತ್ತು ಆಷಾಢಕ್ಕಿರುವ ವ್ಯತ್ಯಾಸ, ಆಟಿಯ ಆಚರಣೆಗಳು, ತಿಂಡಿ – ತಿನಿಸು, ಪಾಲೆ ಕಷಾಯ, ಆಟಿ ಕಳೆಂಜ, ಚೆನ್ನೆಮಣೆ ಮತ್ತಿತರ ಆಟಗಳ ಕುರಿತು ಸ್ವಾರಸ್ಯಕರ ಚರ್ಚೆ ಹಾಗೂ ಪ್ರಾತ್ಯಕ್ಷಿಕೆ ನಡೆಯಲಿದೆ. ಸಂವಾದದಲ್ಲಿ ಕನ್ನಡ ಹಾಗೂ ತುಳು ಎರಡೂ ಭಾಷೆಗಳನ್ನು ಬಳಸಲಾಗಿದೆ. ಮಾತುಕತೆಯಲ್ಲಿ ಜಾನಪದ ತಜ್ಞ ಹಾಗೂ ಲೇಖಕ ಡಾ.ಗಣನಾಥ ಶೆಟ್ಟಿ ಎಕ್ಕಾರ್, ಲೇಖಕಿಯರಾದ ವಿಜಯಲಕ್ಷ್ಮೀ ಕಟೀಲ್, ಅಕ್ಷತಾ ರಾಜ್ ಪೆರ್ಲ ಹಾಗೂ ಜನಪದ ಗಾಯಕಿ ಅಕ್ಷತಾ ಕುಡ್ಲ ಭಾಗವಹಿಸಿದ್ದಾರೆ. ಮಾಧ್ಯಮ ಸಂಯೋಜಕ ಮತ್ತು ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿಯವರು ಸಂವಾದವನ್ನು ನಡೆಸಿಕೊಡುವರು. ಜುಲೈ 22ರಂದು ಬೆಂಗಳೂರು ದೂರದರ್ಶನದ ಸ್ಟುಡಿಯೋದಲ್ಲಿ ಕಾರ್ಯಕ್ರಮದ ಚಿತ್ರೀಕರಣ ನಡೆದಿದೆ. ಹಿರಿಯ ಕಾರ್ಯಕ್ರಮ ನಿರ್ಮಾಪಕಿ ಎನ್.ಪಂಕಜ ಚಂದನ ವಾಹಿನಿಯ…