Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ವೇಷ ಕಳಚುತ್ತಿರುವಾಗಲೇ ಹೃದಯಾಘಾತವಾಗಿ ಧರ್ಮಸ್ಥಳ ಯಕ್ಷಗಾನ ಮೇಳದ ಖ್ಯಾತ ಕಲಾವಿದ ಗಂಗಾಧರ ಪುತ್ತೂರು (60) ಅವರು ಇಹಲೋಕ ತ್ಯಜಿಸಿದ್ದಾರೆ. ದಿನಾಂಕ 01-05-2024ರ ಬುಧವಾರ ರಾತ್ರಿ ಕೋಟದ ಗಾಂಧಿ ಮೈದಾನದ ಬಳಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಅವರು ಕುಕ್ಕಿಂತ್ತಾಯ ದೈವದ ವೇಷವನ್ನು ನಿರ್ವಹಿಸಿದ್ದರು. ಬಳಿಕ ಚೌಕಿಗೆ ಆಗಮಿಸಿ ಕಿರೀಟ, ಯಕ್ಷಗಾನದ ಆಭರಣ ತೆಗೆದಿಟ್ಟು ಇನ್ನೇನು ಮುಖದ ಬಣ್ಣ ತೆಗೆಯುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿದೆ. ಪುತ್ತೂರಿನ ಸೇಡಿಯಾಪು ನಿವಾಸಿಯಾಗಿರುವ ಶ್ರೀಯುತರು 18ನೇ ವಯಸ್ಸಿಗೆ ಯಕ್ಷಗಾನ ತಿರುಗಾಟ ಆರಂಭಿಸಿದ್ದರು. ಯಕ್ಷಗಾನ ರಂಗದ ಸವ್ಯಸಾಚಿ ಕಲಾವಿದರಾದ ಇವರು ಸ್ತ್ರೀವೇಷದಿಂದ ಹಿಡಿದು ಪುಂಡುವೇಷ, ರಾಜವೇಷಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದರು. 30ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಗಂಗಾಧರ ಪುತ್ತೂರು ಧರ್ಮಸ್ಥಳ ಮೇಳದಲ್ಲಿಯೇ ಕಲಾವಿದರಾಗಿ ತಿರುಗಾಟ ಮಾಡಿದ್ದರು.
ಧಾರವಾಡ : ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ವತಿಯಿಂದ ರಾಜ್ಯಮಟ್ಟದ ವಿದ್ಯಾರ್ಥಿ ಕಥಾ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಸ್ಪರ್ಧೆಯಲ್ಲಿ ಆಯ್ಕೆಯಾದ ಮೂರು ಅತ್ಯುತ್ತಮ ಕಥೆಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಮತ್ತು ವಿಜೇತರಿಗೆ ಪ್ರಶಸ್ತಿ ಪತ್ರ (ಹಾರ್ಡ್ ಕಾಪಿ) ಜೊತೆಗೆ ಪುಸ್ತಕಗಳನ್ನು ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಡಿಜಿಟಲ್ ಪ್ರಮಾಣ ಪತ್ರ ನೀಡಲಾಗುವುದು. ಸ್ಪರ್ಧೆಯ ನಿಯಮಗಳು * ಹೈಸ್ಕೂಲ್, ಪಿ.ಯು.ಸಿ., ಪದವಿ, ಸ್ನಾತಕೋತ್ತರ ಪದವಿ ಓದುತ್ತಿರುವ ಅಥವಾ ಓದು ಮುಗಿಸಿರುವ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. * ಪಿ. ಎಚ್. ಡಿ. ಮಾಡುತ್ತಿರುವ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದೆ. * ಸ್ಪರ್ಧಿಗಳ ವಯಸ್ಸು 28 ಮೀರುವಂತಿಲ್ಲ. * ಒಬ್ಬ ಸ್ಪರ್ಧಿ ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು. * ಸ್ವತಂತ್ರ ಕಥೆಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುತಿದ್ದು ಅನುವಾದ, ಅನುಸೃಷ್ಟಿ ಮತ್ತು ರೂಪಾಂತರ ಮಾಡಿದ ಕಥೆಗಳಿಗೆ ಅವಕಾಶವಿಲ್ಲ. * ಕಥೆಯು 3000 ಪದಗಳ ಮಿತಿಯನ್ನು ಮೀರುವಂತಿಲ್ಲ. * ಕಥೆಯನ್ನು ಡಾಕ್ಸ್…
ಸುರತ್ಕಲ್ : ಗೋವಿಂದದಾಸ ಕಾಲೇಜಿನ ಗ್ರಂಥಾಲಯ ವಿಭಾಗವು, ಆಂತರಿಕ ಗುಣಮಟ್ಟ ಖಾತರಿಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ‘ಪುಸ್ತಕ ಪ್ರೀತಿ ಪರಿಚಯ ಸರಣಿ’ ಕಾರ್ಯಕ್ರಮವು ದಿನಾಂಕ 24-04-2024ರಂದು ನಡೆಯಿತು. ಈ ಸರಣಿಯಲ್ಲಿ ಪ್ರಥಮ ಬಿ.ಎಸ್ಸಿ. ವಿದ್ಯಾರ್ಥಿನಿ ರಕ್ಷಿತಾ ಎಂ. ಗೋಲನ್ನವರ್ ಅವರು ಚ.ನ.ಶಂಕರ ರಾವ್ ಬರೆದ ‘ಮಹಾತ್ಮರ ಮಹಾತ್ಮ ಸ್ವಾಮಿ ವಿವೇಕಾನಂದರು’ ಎಂಬ ಪುಸ್ತಕವನ್ನು ಪರಿಚಯಿಸಿ “ಈ ಕೃತಿಯಲ್ಲಿ ಸ್ವಾಮಿ ವಿವೇಕಾನಂದರ ಆದರ್ಶದಾಯಕ ಜೀವನ, ಅವರ ಜೀವನಕ್ಕೆ ಸಂಬಂಧಿಸಿದ ಅವಿಸ್ಮರಣೀಯ ಘಟನೆಗಳು. ಅವರು ನೀಡಿದ ಅಮರ ಸಂದೇಶಗಳು ಹಾಗೂ ಅವರ ಬಗ್ಗೆ ರಾಷ್ಟ್ರನಾಯಕರು ವ್ಯಕ್ತಪಡಿಸಿದ ಅಭಿಪ್ರಾಯಗಳು ಇವೆಲ್ಲವುಗಳ ಪಕ್ಷಿನೋಟ ಸುಂದರವಾಗಿ ಮೂಡಿಬಂದಿವೆ” ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ಅವರು ಸ್ಮರಣಿಕೆ ನೀಡಿದರು. ಉಪಪ್ರಾಂಶುಪಾಲ ಪ್ರೊ. ನೀಲಪ್ಪ ವಿ., ಗ್ರಂಥಪಾಲಕಿ ಡಾ. ಸುಜಾತಾ ಬಿ. ಹಾಗೂ ಗ್ರಂಥಾಲಯದ ಸಿಬಂದಿ ಉಪಸ್ಥಿತರಿದ್ದರು. ದ್ವಿತೀಯ ಬಿ.ಎ. ವಿದ್ಯಾರ್ಥಿನಿ ತನುಶ್ರೀ ಸ್ವಾಗತಿಸಿ, ವಂದಿಸಿದರು.
ಹುಬ್ಬಳ್ಳಿ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ.) ಕೇಂದ್ರ ಸಮಿತಿ ಹುಬ್ಬಳ್ಳಿ ಇದರ ವತಿಯಿಂದ ಶ್ರೀ ಕೃಷ್ಣ ಪರ್ಯಾಯ ಶ್ರೀ ಪುತ್ತಿಗೆ ಮಠ ಉಡುಪಿ ಇವರ ಸಹಕಾರದೊಂದಿಗೆ ಕರಾವಳಿ ಕರ್ನಾಟಕ ಐದನೇ ಕಚುಸಾಪ ಸಮ್ಮೇಳನವು ದಿನಾಂಕ 05-05-2024ರಂದು ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಈ ಸಮ್ಮೇಳನವನ್ನು ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀ ಪಾದರು ಇವರ ದಿವ್ಯ ಸಾನಿಧ್ಯದಲ್ಲಿ ಉದ್ಘಾಟನೆ ಮಾಡಲಾಗುವುದು. ಬೆಳಿಗ್ಗೆ ಗಂಟೆ 11-00ರಿಂದ ಕಾಸರಗೋಡಿನ ಡಾ. ವಾಣಿಶ್ರೀ ಹಾಗೂ ಗುರುರಾಜ ಇವರ ಕಲಾ ತಂಡದಿಂದ ಶ್ರೀಕೃಷ್ಣ ನೃತ್ಯ ವೈಭವ ಜರುಗಲಿದೆ. ಮಧ್ಯಾಹ್ನ ಗಂಟೆ 12-00ರಿಂದ ಮೈಸೂರಿನ ಶ್ರೀ ಎನ್.ವಿ. ರಮೇಶ್ ಇವರ ಅಧ್ಯಕ್ಷತೆಯಲ್ಲಿ ಪರ್ಯಾಯ ಪುತ್ತಿಗೆ ಮಠದ ಸಹಕಾರದಿಂದ ‘ಶ್ರೀ ಭಗವದ್ಗೀತೆ ಒಂದು ವಿಶ್ಲೇಷಣೆ’ ವಿಚಾರಗೋಷ್ಠಿ ಜರುಗಲಿದೆ. ಶತಾವಧಾನಿ ಉಡುಪಿ ರಾಮಾನಾಥ ಆಚಾರ್ಯ ದಿಕ್ಕೂಚಿ ಭಾಷಣ, ವಿದ್ವಾನ್ ರಘುಪತಿ ಭಟ್, ಡಾ. ಜಿ.ವಿ. ಹೆಗಡೆ ಹಾಗೂ ಗಣಪತಿ ಭಟ್ಟ ವರ್ಗಾಸರ ಉಪನ್ಯಾಸ ನೀಡುವರು. ಗಂಟೆ 2-30ಕ್ಕೆ…
ಕನ್ನಡ ಕಾವ್ಯದ ಸದ್ಯದ ಪರಿಸ್ಥಿತಿಯನ್ನು ನೋಡಿದಾಗ ಆತಂಕ ಮತ್ತು ಸಂತೋಷಗಳು ಒಟ್ಟಿಗೇ ಉಂಟಾಗುತ್ತವೆ. ಕನ್ನಡದಲ್ಲಿ ಈಗ ಬಹಳಷ್ಟು ಜನ ಕವಿತೆಗಳನ್ನು ಬರೆಯುತ್ತಿದ್ದಾರೆ. ಕವಿತೆ ಓದುವವರಿಗಿಂತ ಬರೆಯುವವರೇ ಹೆಚ್ಚಾಗಿದ್ದಾರೆ ಎಂಬ ಮಾತಿನಲ್ಲಿ ಉತ್ಪೇಕ್ಷೆಯಿಲ್ಲ. ಈ ರೀತಿಯಲ್ಲಿ ಬರೆಯುತ್ತಿರುವ ಕನ್ನಡದ ಕವಿ, ಕವಿಯತ್ರಿಯರ ನಡುವೆ ಶ್ರೀಮತಿ ಸೌಮ್ಯ ಪ್ರವೀಣ್ ಅವರು ತಮ್ಮ ಮೊದಲ ಕವನ ಸಂಕಲನ ‘ಹೀಗೊಂದು ಭಾವ’ದ ಮೂಲಕ ಗಮನವನ್ನು ಸೆಳೆಯುತ್ತಾರೆ. ಗೃಹಿಣಿಯಾಗಿ, ತಾಯಿಯಾಗಿ ಮನೆಯ ಜವಾಬ್ದಾರಿಗಳನ್ನು ನಿಭಾಯಿಸುವುದರೊಂದಿಗೆ, ದಿನನಿತ್ಯದ ಕೆಲಸಗಳ ನಡುವೆಯೂ ಬರವಣಿಗೆಗೆ ಸಮಯವನ್ನು ಹೊಂದಿಸಿಕೊಂಡದ್ದು ಸಣ್ಣ ಸಂಗತಿಯಲ್ಲ. ಆ ಪೈಕಿ ಆಯ್ದ ನಲುವತ್ತೆಂಟು ಕವಿತೆಗಳ ಗುಚ್ಛವನ್ನು ‘ಹೀಗೊಂದು ಭಾವ’ ಎಂಬ ಹೆಸರಿನಲ್ಲಿ ಓದುಗರಿಗೆ ನೀಡಿದ್ದಾರೆ. ಬದುಕಿನ ಮುಖ್ಯ ಆಸರೆಯಾದ ಪ್ರೀತಿಗೆ ಆದ್ಯತೆಯನ್ನು ನೀಡುವ ಸೌಮ್ಯ ಅವರ ಕವಿತೆಗಳಲ್ಲಿ ಪ್ರೀತಿಯ ವೈವಿಧ್ಯಮಯ ಮುಖಗಳಿವೆ. ತಮ್ಮ ಜೀವನಾನುಭವದ ಹಿನ್ನೆಲೆಯಲ್ಲಿ ಪ್ರೀತಿಯ ಹಲವು ಮುಖಗಳನ್ನು ಪ್ರಾಮಾಣಿಕವಾಗಿ ಅಭಿವ್ಯಕ್ತಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅನೇಕ ಕವಿತೆಗಳಲ್ಲಿ ಒಲವಿನ ಮುಖಗಳನ್ನು ಕಂಡರಿಸುವ ಹಂಬಲವು ಕಂಡು ಬರುತ್ತದೆ. ಆಳವಾದ ಪ್ರೀತಿ…
ಧಾರವಾಡ : ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ನಡೆಸಿದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಶ್ರೀ ರೇವಣ ಸಿದ್ಧಪ್ಪ ಜಿ.ಆರ್. ದಾವಣಗೆರೆ ಪ್ರಥಮ ಬಹುಮಾನ, ಶ್ರೀಮತಿ ಸೀಮಾ ಕುಲಕರ್ಣಿ ಕೌಲಾಲಂಪುರ (ಮಲೇಶಿಯಾ) ದ್ವಿತೀಯ ಬಹುಮಾನ ಮತ್ತು ಶ್ರೀಮತಿ ಸೌಮ್ಯ ಪ್ರವೀಣ್ ಮಂಗಳೂರು ತೃತೀಯ ಬಹುಮಾನವನ್ನು ಪಡೆದಿದ್ದಾರೆ. ಕುಮಾರಿ ನೀನಾ ಡಿಸೋಜಾ ಬೆಂಗಳೂರು ಮತ್ತು ಕುಮಾರಿ ಶಾಹೀನಾ ರಹಮಾನ್ ಹುಬ್ಬಳ್ಳಿ ಅವರಿಗೆ ಮೆಚ್ಚುಗೆಯ ಬಹುಮಾನವು ದೊರೆತಿದೆ. ಈ ಕವನ ಸ್ಪರ್ಧೆಗೆ ಒಟ್ಟು 105 ಕವಿತೆಗಳು ಬಂದಿದ್ದು ಅದರಲ್ಲಿ ಅತಿ ಹೆಚ್ಚು ಅಂಕ ಪಡೆದ ಮೊದಲ ಐದು ಕವಿತೆಗಳಿಗೆ ಬಹುಮಾನವನ್ನು ನೀಡಲಾಗಿದೆ. ವಸ್ತು, ಭಾಷೆ, ಶೈಲಿ ಮತ್ತು ಅಭಿವ್ಯಕ್ತಿಯ ದೃಷ್ಟಿಯಿಂದ ಉತ್ತಮ ಮತ್ತು ಪ್ರಯೋಗಾತ್ಮಕ ಪ್ರಯತ್ನಗಳೆನಿಸಿದ ಬಹುಮಾನಿತ ಕವಿತೆಗಳು ಭರವಸೆಯನ್ನು ಮೂಡಿಸುವಂತಿವೆ ಎಂದು ತೀರ್ಪುಗಾರರಾದ ಭವ್ಯ ಭಟ್ ಅಭಿಪ್ರಾಯಪಟ್ಟಿದ್ದಾರೆ. ಸಾಹಿತ್ಯ ಗಂಗಾ ಸಂಸ್ಥೆಯ ಮುಖ್ಯಸ್ಥ ವಿಕಾಸ ಹೊಸಮನಿ ಮತ್ತು ಸಂಚಾಲಕ ಡಾ. ಸುಭಾಷ್ ಪಟ್ಟಾಜೆ ಬಹುಮಾನ ವಿಜೇತರಿಗೆ ಮತ್ತು ಭಾಗವಹಿಸಿದ…
ಸುರತ್ಕಲ್ : ಗೋವಿಂದದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತಕಲಾ ಸಂಘ ಹಾಗೂ ಕಲಾಬ್ಧಿಯ ಸಹಭಾಗಿತ್ವದಲ್ಲಿ ವಿನೂತನ ಕಾರ್ಯಕ್ರಮವಾದ ‘ಕಲಿಕಾ’-ಭರತನಾಟ್ಯ ಪ್ರದರ್ಶನವು ಗೋವಿಂದ ದಾಸ ಕಾಲೇಜಿನಲ್ಲಿ ದಿನಾಂಕ 29-04-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾರದಾ ನಾಟ್ಯಾಲಯ, ಸುರತ್ಕಲ್‌ನ ಮುಖ್ಯಸ್ಥೆ ವಿದುಷಿ ಭಾರತಿ ಸುರೇಶ್ ಇವರು ಮಾತನಾಡಿ “ಭರತನಾಟ್ಯವು ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸುವ ಕಲೆಯಾಗಿದ್ದು ಸಹಸ್ರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಭರತನಾಟ್ಯದ ಅಭ್ಯಾಸಿಸುವಿಕೆಯಿಂದ ನಮ್ಮ ಸಂಸ್ಕೃತಿಯ ಅರಿವಿನ ಜೊತೆಗೆ ಮಾನಸಿಕ ಮತ್ತು ದೈಹಿಕ ದೃಢತೆಯನ್ನು ಪಡೆಯಲು ಸಾಧ್ಯ” ಎಂದು ನುಡಿದರು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಮಾತನಾಡಿ “ಶೈಕ್ಷಣಿಕ ಸಂಸ್ಥೆಗಳು ಶಾಸ್ತ್ರೀಯ ಕಲೆಗಳಿಗೆ ಹೆಚ್ಚಿನ ಬೆಂಬಲ ನೀಡಿ ಯುವ ಕಲಾವಿದರನ್ನು ಬೆಳೆಸಬೇಕಾಗಿದೆ” ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಪಿ. ಮಾತನಾಡಿ “ಗೋವಿಂದದಾಸ ಕಾಲೇಜು ಪಠ್ಯದೊಂದಿಗೆ ವಿದ್ಯಾರ್ಥಿಗಳ ಆಸಕ್ತಿಗನುಸಾರವಾಗಿ ಪಠ್ಯೇತರ ಚುವಟಿಕೆಗಳಲ್ಲೂ ಬೆಳೆಯುವಂತೆ ಪ್ರೋತ್ಸಾಹ ನೀಡುತ್ತಿದೆ. ಅನೇಕ ವಿದ್ಯಾರ್ಥಿಗಳು ಪ್ರಬುದ್ಧ ಕಲಾವಿದರಾಗಿ ರೂಪುಗೊಳ್ಳುತ್ತಿರುವುದು ಕಾಲೇಜಿಗೆ…
ಬಾಯಾರು : ಬಾಯಾರು ಶ್ರೀ ಪಂಚಲಿಂಗೇಶ್ವರ ದೇವರು ಮತ್ತು ಮಲರಾಯ ದೈವಂಗಳ ಭಂಡಾರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಿನಾಂಕ 28-04-2024ರಂದು ರಾತ್ರಿ ಗಂಟೆ 9.00ರಿಂದ ಓಂ ಶ್ರೀ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಬದಿಯಾರು ಸಂಸ್ಥೆಯ ಪ್ರಯೋಜಕತ್ವದಲ್ಲಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ವತಿಯಿಂದ ‘ಸಾಹಿತ್ಯ ಗಾನ ನೃತ್ಯ ವೈಭವ’ವು ನಡೆಯಿತು. ಸಂಸ್ಥೆಯ ಕಲಾವಿದರಾದ ಗುರುರಾಜ್ ಕಾಸರಗೋಡು, ರೆಮೊನಾ ಇವೆಟ್ ಪಿರೇರಾ, ಅವನಿ ಎಂ.ಎಸ್. ಸುಳ್ಯ, ವರ್ಷಾ ಶೆಟ್ಟಿ, ಸಾನ್ವಿ ಗುರುಪುರ, ಸಾಕ್ಷಿ ಗುರುಪುರ, ನಿತ್ಯ, ಕೃತಿ, ಸಾದ್ವಿನಿ, ಪ್ರಿಷನ್ ಶೆಟ್ಟಿ, ಜನಾರ್ದನ್, ಪೂರ್ವಿ ಶೆಟ್ಟಿ, ಧನ್ಯಶ್ರೀ, ಯುಕ್ತ, ವರ್ಷಾ ಎಂ.ಆರ್, ಭವ್ಯ ಎಸ್., ವೃಕ್ಷಾ ಎಂ.ಆರ್., ತೃಪ್ತಿ ಕೆ.ಎಸ್., ಹರ್ಷಲತಾ, ಸನುಷಾ ಸುನಿಲ್, ಅಹನಾ ಎಸ್. ರಾವ್, ಪೂಜಾಶ್ರೀ, ಜಿಯಾ ಜೆ. ಶೆಟ್ಟಿ, ಇಶಿಕಾ ಎಸ್. ಶೆಟ್ಟಿ, ಕೀರ್ತಿ ಶೆಟ್ಟಿ, ನವ್ಯ, ಶ್ರದ್ಧಾ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಸದಸ್ಯರಿಂದ ದಿನಾಂಕ 30-04-2024ರಂದು ಬನ್ನೂರು ಭಾರತೀನಗರದ ಶ್ರೀ ವಿದ್ಯಾಗಣಪತಿ ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಜಯಪ್ರಕಾಶ್ ನಾಕೂರು, ಆನಂದ ಸವಣೂರು, ಪದ್ಯಾಣ ಶಂಕರನಾರಾಯಣ ಭಟ್, ಪ್ರೊ. ದಂಬೆ ಈಶ್ವರ ಶಾಸ್ತ್ರೀ ಮತ್ತು ಮಾಸ್ಟರ್ ಪರೀಕ್ಷಿತ್ ಪುತ್ತೂರು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ (ಕು೦ಬ್ಳೆ ಶ್ರೀಧರ್ ರಾವ್ ಮತ್ತು ಭಾಸ್ಕರ್ ಬಾರ್ಯ), ರಾವಣ (ಪಕಳಕುಂಜ ಶ್ಯಾಮ್ ಭಟ್), ಅತಿಕಾಯ (ಗುಂಡ್ಯಡ್ಕ ಈಶ್ವರ ಭಟ್), ಲಕ್ಷ್ಮಣ (ಗುಡ್ಡಪ್ಪ ಬಲ್ಯ), ವಿಭೀಷಣ (ಮಾಂಬಾಡಿ ವೇಣುಗೋಪಾಲ ಭಟ್) ಮತ್ತು ರಾಕ್ಷಸ ದೂತ (ಬಡೆಕ್ಕಿಲ ಚಂದ್ರಶೇಖರ್ ಭಟ್) ಸಹಕರಿಸಿದರು. ಭಾಸ್ಕರ್ ಬಾರ್ಯ ಸ್ವಾಗತಿಸಿ, ಪುಳುಈಶ್ವರ ಭಟ್ ವಂದಿಸಿದರು. ಮಾಂಬಾಡಿ ವೇಣುಗೋಪಾಲ ಭಟ್ ಪ್ರಾಯೋಜಿಸಿದ್ದರು.
ವಿಟ್ಲ : ವಿದುಷಿ ಮಂಜುಳಾ ಸುಬ್ರಮಣ್ಯ ಅವರ ಸಾರಥ್ಯದಲ್ಲಿ ಪುತ್ತೂರಿನಲ್ಲಿ ಪ್ರವರ್ತಿತ ನಾಟ್ಯರಂಗ ನೃತ್ಯ ಕಲಾ ಶಾಲೆಯ ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ವಿಶ್ವ ನೃತ್ಯ ದಿನದ ಅಂಗವಾಗಿ ಗುರುವಂದನಾ ವಿಶಿಷ್ಟ ಕಾರ್ಯಕ್ರಮವು ದಿನಾಂಕ 29-04-2024ರಂದು ನೆರವೇರಿತು. ಹಿರಿಯ ನೃತ್ಯ ಗುರುಗಳಾದ ದೇವಸ್ಯ ಶಿವರಾಮ ಭಟ್ ಇವರ ವಿಟ್ಲದ ಸ್ವಗೃಹ ‘ವನಸಿರಿ’ಗೆ ತೆರಳಿ ಗುರುವಂದನೆ ಸಮರ್ಪಿಸಲಾಯಿತು. 74ರ ಹರೆಯದ ಶಿವರಾಮ ಭಟ್ ಇವರು ತಮ್ಮ ಆರನೇ ವಯಸ್ಸಿನಿಂದಲೇ ನೃತ್ಯವನ್ನು ಅಭ್ಯಸಿಸಿದವರು. ಗುರುಗಳಾದ ರಾಜನ್ ಅಯ್ಯರ್, ರಾಜರತ್ನಂ ಪಿಳ್ಳೆಯವರ ಬಳಿ ಪ್ರಾರಂಭದ ಹೆಜ್ಜೆಗಳನ್ನು ಕಲಿತು ಬಳಿಕ ಗುರುಗಳಾದ ಕರ್ನಾಟಕ ಕಲಾಶ್ರೀ ವಿದ್ವಾನ್ ಉಳ್ಳಾಲ ಮೋಹನ್ ಕುಮಾರ್ ಇವರಲ್ಲಿ ಸುಧೀರ್ಘವಾಗಿ ನೃತ್ಯವನ್ನು ಅಭ್ಯಸಿಸಿದರು. ಸುಮಾರು 37 ವರ್ಷಗಳ ಕಾಲ ನೃತ್ಯ ತರಗತಿಗಳನ್ನು ನಡೆಸಿದ ಶ್ರೀಯುತರು ಪ್ರಸ್ತುತ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಯೋಗ, ನೃತ್ಯ, ಚಿತ್ರಕಲೆ ಇತ್ಯಾದಿಗಳಲ್ಲಿ ಆಸಕ್ತಿಯುತವಾಗಿ ತೊಡಗಿಕೊಂಡಿದ್ದಾರೆ. ತಮ್ಮ ವಯಸ್ಸನ್ನು ಮರೆತು, ‘ಬಾಗಿಲನ್ನು ತೆರೆದು ಸೇವೆಯನ್ನು ಕೊಡು ಹರಿಯೇ’ ಸಾಲಿಗೆ ಹೆಜ್ಜೆ ಹಾಕಿದ ಇವರು…