Subscribe to Updates

    Get the latest creative news from FooBar about art, design and business.

    What's Hot

    ಅರೆಹೊಳೆ ಪ್ರತಿಷ್ಠಾನದಿಂದ ಕನ್ನಡ ಕಥಾ ಸ್ಪರ್ಧೆಗೆ ಆಹ್ವಾನ | ಕೊನೆಯ ದಿನಾಂಕ ಜನವರಿ 30

    January 12, 2026

    ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ’ದ ಸಮಾರೋಪ ಸಮಾರಂಭ

    January 12, 2026

    ನಾಟಕ ವಿಮರ್ಶೆ | ಡಾ. ಚಂದ್ರಶೇಖರ ಕಂಬಾರರ ‘ಜೋಕುಮಾರ ಸ್ವಾಮಿ’ ನಾಟಕದ ಅದ್ಬುತ ಪ್ರದರ್ಶನ

    January 12, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಅಭಿನಯ ಭಾರತಿಯ ‘ವಸಂತೋತ್ಸವ’ದಲ್ಲಿ ಮೂರು ನಾಟಕಗಳ ಪ್ರದರ್ಶನ | ಜೂನ್ 1 ಮತ್ತು 2
    Drama

    ಅಭಿನಯ ಭಾರತಿಯ ‘ವಸಂತೋತ್ಸವ’ದಲ್ಲಿ ಮೂರು ನಾಟಕಗಳ ಪ್ರದರ್ಶನ | ಜೂನ್ 1 ಮತ್ತು 2

    June 27, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಉತ್ತರ ಕರ್ನಾಟಕದ ಜನಪ್ರಿಯ ರಂಗ ಸಂಸ್ಥೆಯಾದ ಅಭಿನಯ ಭಾರತಿ ತನ್ನ 44ನೇ ವರ್ಷದ ಆರಂಭವನ್ನು ಧಾರವಾಡದ ಸೃಜನಾ ರಂಗಮಂದಿರದಲ್ಲಿ ದಿನಾಂಕ 01-07-2024 ಮತ್ತು 02-07-2024ರಂದು ಸಂಜೆ 6-00 ಗಂಟೆಗೆ ‘ವಸಂತೋತ್ಸವ’ ಕಾರ್ಯಕ್ರಮದಲ್ಲಿ ಮೂರು ನಾಟಕಗಳ ಪ್ರದರ್ಶನವನ್ನು ಹಮ್ಮಿಕೊಂಡಿದೆ.

    ಮೂರು ನಾಟಕಗಳ ವಿವರ ಹೀಗಿವೆ :
    ದಿನಾಂಕ 01-07-2024ರಂದು ಸಂಜೆ ಗಂಟೆ 6ಕ್ಕೆ ಹಾಸ್ಯ ನಾಟಕ : “ನಾ ತುಕಾರಾಂ ಅಲ್ಲ”
    ರಚನೆ : ಶ್ರೀ ಎನ್. ಸುರೇಂದ್ರನಾಥ
    ನಿರ್ದೇಶಕರು : ಶ್ರೀ ಶ್ರೀಪತಿ ಮಂಜನಬೈಲ್
    ಅವಧಿ : 100 ನಿಮಿಷ

    ದಿನಾಂಕ 02-07-2024ರಂದು ಸಂಜೆ ಗಂಟೆ 6ಕ್ಕೆ ನಾಟಕ : “ಉರಿಯ ಉಯ್ಯಾಲೆ”
    ರಚನೆ : ಡಾ. ಎಚ್.ಎಸ್. ವೆಂಕಟೇಶಮೂರ್ತಿ
    ನಿರ್ದೇಶಕರು : ಶ್ರೀಪತಿ ಮಂಜನ ಬೈಲ್
    ಅವಧಿ : 80 ನಿಮಿಷ

    ದಿನಾಂಕ 02-07-2024ರಂದು ಸಂಜೆ ಗಂಟೆ 7.30ಕ್ಕೆ ನಾಟಕ : “ಎಸಿ ವರ್ಸಸ್ ಡಿಸಿ” (ಹಾಸ್ಯ + ವಿಜ್ಞಾನ ಪ್ರಾಮುಖ್ಯತೆ ಪಡೆದ ನಾಟಕ)
    ರಚನೆ : ಡಾ. ಮೃತ್ಯುಂಜಯ ಕಪ್ಪಾಳಿ
    ನಿರ್ದೇಶಕರು : ಡಾ. ಅರವಿಂದ ಕುಲಕರ್ಣಿ
    ಅವಧಿ : 80 ನಿಮಿಷ

    ಸಹೃದಯ ಪ್ರೇಕ್ಷಕರು ಅಭಿನಯ ಭಾರತಿ ಸಂಸ್ಥೆಯ ಸದಸ್ಯರಾಗುವ ಮೂಲಕ, ಪ್ರೋತ್ಸಾಹ ನೀಡಬೇಕೆಂದು ವಿನಂತಿಸಲಾಗಿದೆ. ಅಭಿನಯ ಭಾರತಿ ತನ್ನ ಸದಸ್ಯರಿಗೆ ಕನಿಷ್ಠ ನಾಲ್ಕು ನಾಟಕ ಮತ್ತು 12 ಉಪನ್ಯಾಸಗಳನ್ನು, ರಂಗ ಪ್ರಶಸ್ತಿ ಮತ್ತಿತರ ಹಲವು ಕಾರ್ಯಕ್ರಮ ನೀಡುತ್ತಾ ಬಂದಿದೆ. ಬರಲಿರುವ ನೂರು ದಿನಗಳಲ್ಲಿ, ಹಾಸ್ಯ ನಾಟಕ ರಚನಾ ಸ್ಪರ್ಧೆ, ಉತ್ಸವ (ಮೂರು ಅಥವಾ ಐದು ನಾಟಕಗಳು), ಸಾಮಾನ್ಯ ನಾಟಕ ಸ್ಪರ್ಧೆ, ಮೂರು ರಂಗ ತರಬೇತಿ ಕಮ್ಮಟಗಳು, ಖೋ ಮಾದರಿ ನಾಟಕ ರಚನೆಯ ವಾಚನ, ಇನ್ನೂ ವಿನೂತನವಾದ ರಾಷ್ಟ್ರೀಯ ಮಟ್ಟದಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂದಿದೆ. ಈ ಎಲ್ಲಾ ನಾಟಕಗಳು ಅಭಿನಯ ಭಾರತಿ ಸದಸ್ಯರುಗಳಿಗೆ ಉಚಿತವಾಗಿವೆ. ಸದಸ್ಯತ್ವ ವಿವರ ಹೀಗಿವೆ. ವಾರ್ಷಿಕ ಸದಸ್ಯತ್ವ : 500/-  ಮತ್ತು ಐದು ವರ್ಷ ಸದಸ್ಯತ್ವ : 2,000/-. ಹೆಚ್ಚಿನ ವಿವರಗಳಿಗಾಗಿ ಪ್ರೊ. ಅರವಿಂದ ಕುಲಕರ್ಣಿ (80734 79394) ಸಂಪರ್ಕ ಮಾಡಬಹುದು.

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನಲ್ಲಿ ಸಿದ್ಧಾರ್ಥ ಮಾಧ್ಯಮಿಕಾ ಇವರಿಂದ ‘ನಟನಾ ಕಾರ್ಯಾಗಾರ’ | ಜೂನ್ 29
    Next Article ಮಧುರಧ್ವನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ಉದಯಾಸ್ತಮಾನ ಸಂಗೀತ ಸೇವೆ’
    roovari

    Add Comment Cancel Reply


    Related Posts

    ನಾಟಕ ವಿಮರ್ಶೆ | ಡಾ. ಚಂದ್ರಶೇಖರ ಕಂಬಾರರ ‘ಜೋಕುಮಾರ ಸ್ವಾಮಿ’ ನಾಟಕದ ಅದ್ಬುತ ಪ್ರದರ್ಶನ

    January 12, 2026

    ಮೈಸೂರಿನಲ್ಲಿ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ -2026’ | ಜನವರಿ 11ರಿಂದ 18

    January 9, 2026

    ಸಂಭ್ರಮದಿಂದ ಸಂಪನ್ನಗೊಂಡ ಮಂಗಳೂರು ತಾಲೂಕು ‘ಬ್ಯಾರಿ ಸಾಹಿತ್ಯ ಸಮ್ಮೇಳನ’

    January 7, 2026

    ಶಿವಮೊಗ್ಗ ಜಿಲ್ಲಾ ಇಪ್ಪತ್ತೊಂದನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ | ಜನವರಿ 08

    January 7, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.