Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಉದಯೋನ್ಮುಖ ನೃತ್ಯ ಕಲಾವಿದೆ ಕುಮಾರಿ ಆರತಿ ನಾಯರ್ 7ನೆಯ ವಯಸ್ಸಿಗೇ ರಂಗವನ್ನೇರಿ ತನ್ನ ಶಾಸ್ತ್ರೀಯ ನರ್ತನ ವೈಶಿಷ್ಟ್ಯವನ್ನು ಪ್ರಕಾಶಪಡಿಸಿದವಳು. ಅಸಾಧಾರಣ ವ್ಯಕ್ತಿತ್ವದ ಇವಳನ್ನು ‘ಬಹುಮುಖ ಪ್ರತಿಭೆ’ ಎಂದರೆ ಖಂಡಿತ ಕ್ಲೀಷೆಯಲ್ಲ. ಕೇರಳದಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ನೆಲೆಸಿ ಭಾರತಾದ್ಯಂತವಲ್ಲದೆ ವಿಶ್ವಮಟ್ಟದಲ್ಲಿ ತನ್ನ ನೃತ್ಯ ಪ್ರದರ್ಶನಗಳನ್ನು ನೀಡುತ್ತ ಕಲಾರಸಿಕರ ಮೆಚ್ಚುಗೆ ಪಡೆದ ಆರತಿ, ವೇಣುಗೋಪಾಲ್ ನಾಯರ್ ಮತ್ತು ಪ್ರೀತಾ ಇವರ ಪುತ್ರಿ. ಎಳವೆಯಿಂದಲೇ ಶಾಸ್ತ್ರೀಯ ನೃತ್ಯ ಕಲಿತು, ಕಳೆದ 20 ವರ್ಷಕ್ಕೂ ಅಧಿಕ ವರ್ಷಗಳಿಂದ ನಾಟ್ಯಾಭ್ಯಾಸ ಮಾಡುತ್ತಿರುವ ಆರತಿ, ಇಂದು ಕುಚಿಪುಡಿಯಲ್ಲಿ ಡಿಪ್ಲೊಮಾ, ಮನಶಾಸ್ತ್ರ ವಿಷಯದಲ್ಲಿ ಪದವಿ ಮತ್ತು ಪರ್ಫಾರ್ಮಿಂಗ್ ಆರ್ಟ್ಸ್ ಮತ್ತು ಸೈನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳನ್ನು ಗಳಿಸಿಕೊಂಡ ಪ್ರತಿಭಾವಂತೆ. ಅನೇಕ ಭಾಷೆಯ ಚಲನಚಿತ್ರಗಳಲ್ಲಿ ಅಭಿನಯಿಸಿರುವ ನಟಿಯೂ ಹೌದು. ಜೊತೆಗೆ ಮೋಹಿನಿಯಾಟ್ಟಂ, ಕಥಕ್, ನಟುವಾಂಗ, ಕಲರಿ ಪಯಟ್ಟು, ಏಕಪಾತ್ರಾಭಿನಯ ಮತ್ತು ಧ್ವನಿ ಏರಿಳಿತದ ಕಲೆಗಳಲ್ಲಿ ಅಭ್ಯಾಸ ಮಾಡಿರುವ ಆರತಿ ಇದಕ್ಕಾಗಿ ಅನೇಕ ಬಹುಮಾನಗಳನ್ನೂ ಗಳಿಸಿರುವುದು ಅವಳ ಅಗ್ಗಳಿಕೆ. ಖ್ಯಾತ ಕುಚಿಪುಡಿ…
ಬೆಂಗಳೂರು : ಬೆಂಗಳೂರು ವಿವಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರತಿ ವರ್ಷ ನೀಡುವ ಪ್ರತಿಷ್ಠಿತ ‘ಕನಕಶ್ರೀ ಪ್ರಶಸ್ತಿ’ಗೆ ಪ್ರಸಕ್ತ ಸಾಲಿನಲ್ಲಿ ವಿಜಯಪುರದ ಹಿರಿಯ ಸಾಹಿತಿ, ಸಂಶೋಧಕ ಚಂದ್ರಕಾಂತ ಬಿಜ್ಜರಗಿ ಇವರನ್ನು ಆಯ್ಕೆ ಮಾಡಲಾಗಿದೆ. ದರ್ಪಣ ವಾರಪತ್ರಿಕೆಯ ಸಂಪಾದಕರಾಗಿ ಕೂಡ ಕಾರ್ಯನಿರ್ವಹಿಸಿದ್ದು, ‘ಹಾಲುಮತ ಸನಾತನ ಧರ್ಮ’, ‘ಕುರುಬರ ಕುಲಪುತ್ರ ಚಂದ್ರಗುಪ್ತ ಮೌರ್ಯ’, ‘ದಾರ್ಶನಿಕ ಕವಿ ಕನಕದಾಸ’ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿರುವ ಚಂದ್ರಕಾಂತ್ ಇವರ ಅನೇಕ ಸಂಶೋಧನಾ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಡಾ. ಕೆ. ಮರುಳಸಿದ್ದಪ್ಪ ಇವರ ಅಧ್ಯಕ್ಷತೆಯ ಸಮಿತಿ ಚಂದ್ರಕಾಂತ ಬಿಜ್ಜರಗಿ ಇವರನ್ನು ಆಯ್ಕೆ ಮಾಡಿದೆ ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ 08 ನವೆಂಬರ್ 2025ರಂದು ನಡೆಯುವ ಸಂತ ಶ್ರೇಷ್ಠ ಕನಕದಾಸ ಜಯಂತಿಯಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 5 ಲಕ್ಷ ರೂ. ನಗದು, ಕನಕದಾಸರ ಪುತ್ಥಳಿ, ಪ್ರಶಸ್ತಿ…
ಮೈಸೂರು : ಹಿರಿಯ ರಂಗಕರ್ಮಿ ಎಚ್. ಜನಾರ್ದನ್ (ಜನ್ನಿ), ಸಂಸ್ಕೃತ ವಿದ್ವಾಂಸ, ಸಂಗೀತ ತಜ್ಞ ಪ್ರೊ. ಬಿ.ಆರ್ . ಶೇಷಾದ್ರಿ ಅಯ್ಯಂಗಾರ್ ಹಾಗೂ ಜಾನಪದ ಗಾಯಕ ಗೊಲ್ಲಹಳ್ಳಿ ಶಿವಪ್ರಸಾದ್ ಇವರಿಗೆ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಕಟಿಸಿದೆ. ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ದಿನಾಂಕ 08 ನವೆಂಬರ್ 2025ರಂದು ನಡೆಯುವ 10ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುವುದು. 2024-25ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ರಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ 7 ಮಂದಿಗೆ ಡಿ.ಲಿಟ್ ಪದವಿ ಪ್ರದಾನ ನಡೆಯಲಿದೆ. ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಕೇರಳದ ಕಲಾಮಂಡಲಂ ವಿವಿ ಕುಲಪತಿ ಪ್ರೊ. ವಿ. ಅನಂತ್ಕೃಷ್ಣನ್ ಪಾಲ್ಗೊಳ್ಳಲಿದ್ದಾರೆ ಎಂದು ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ತಿಳಿಸಿದ್ದಾರೆ. ಸ್ನಾತಕೋತ್ತರ ಪದವಿ (ಎಂ.ಪಿ.ಎ.)ಯಲ್ಲಿ ಶ್ರವ್ಯಾ ಎ. ಭರತನಾಟ್ಯ…
ಬೆಂಗಳೂರು : ಶ್ರೀ ಸಿದ್ಧಿವಿನಾಯಕ ದುರ್ಗಾಂಬಾ ಯಕ್ಷಗಾನ ಮಿತ್ರಮಂಡಳಿ ಹುಕ್ಲಮಕ್ಕಿ ಇದರ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಬೆಂಗಳೂರು ಆನಂದ ರಾವ್ ವೃತ್ತದ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಸಹಯೋಗದೊಂದಿಗೆ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 08 ನವೆಂಬರ್ 2025ರಂದು ಬೆಂಗಳೂರು ಆನಂದ ರಾವ್ ವೃತ್ತದ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ. ಅಜಪುರ ವಿಷ್ಣು ವಿರಚಿತ ‘ಶಬರಾರ್ಜುನ’ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಉಡುಪಿ : ಯಕ್ಷಗಾನ ಕಲಿಕೆ, ಪ್ರದರ್ಶನ, ಪ್ರಸಾರಕ್ಕೆ ಸಂಬಂಧಿಸಿದಂತೆ ವಿಶಿಷ್ಟ ರೀತಿಯಲ್ಲಿ ಕಲಾಸೇವೆಗೈಯುತ್ತಿರುವ ಕಲಾವಿದ ಕೆ. ಕೃಷ್ಣಮೂರ್ತಿ ತುಂಗರ ನಿರ್ದೇಶನದ ‘ಯಕ್ಷಕಲಾ ಅಕಾಡೆಮಿ (ರಿ.)’ ಬೆಂಗಳೂರು ಸಂಸ್ಥೆಯು ಯಕ್ಷಗಾನ ಕಲಾರಂಗ ಕೊಡಮಾಡುವ ಈ ಬಾರಿಯ ಪ್ರತಿಷ್ಠಿತ ‘ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ’ಗೆ ಆಯ್ಕೆಗೊಂಡಿದೆ. ಪ್ರಶಸ್ತಿಯು ರೂಪಾಯಿ 1,00,000/- ನಗದು ಮತ್ತು ಪ್ರಶಸ್ತಿ ಪರಿಕರಗಳನ್ನೊಳಗೊಂಡಿದ್ದು, ಪ್ರಶಸ್ತಿ ಪ್ರದಾನವು ದಿನಾಂಕ 23 ನವೆಂಬರ್ 2025ರ ಭಾನುವಾರ ಉಡುಪಿಯ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ಜರಗಲಿದೆ. ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿರುತ್ತಾರೆ.
ಸುಳ್ಯ : ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ ಸಂಭ್ರಮ- 2025 ಇದರ 5ನೇ ಕಾರ್ಯಕ್ರಮದ ಅಂಗವಾಗಿ ಸುಳ್ಯ ಪ್ರೆಸ್ ಕ್ಲಬ್ ನ ಸಹಯೋಗದೊಂದಿಗೆ ವಿಶೇಷ ಉಪನ್ಯಾಸ ಮತ್ತು ಪತ್ರಕರ್ತ ಸಾಹಿತಿಗಳ ಬೆಳದಿಂಗಳ ಕವಿಗೋಷ್ಠಿಯು ದಿನಾಂಕ 05 ನವೆಂಬರ್ 2025ರಂದು ಸುಳ್ಯ ಪ್ರೆಸ್ ಕ್ಲಬ್ ವಠಾರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕ.ಸಾ.ಪ. ಸುಳ್ಯ ಘಟಕದ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಾಹಿತಿ ಕುತ್ಯಾಳ ನಾಗಪ್ಪ ಗೌಡ (ಕಿರಣ) ನೆರವೇರಿಸಿದರು. ‘ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಕರ್ತರ ಪಾತ್ರ’ ಎಂಬ ವಿಷಯದ ಬಗ್ಗೆ ಜಾನಪದ ಸಂಶೋಧಕರು ಮತ್ತು ಶಿಕ್ಷಕರಾದ ಡಾ. ಸುಂದರ್ ಕೇನಾಜೆ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಶ್ರೀಮತಿ ಜಯಮ್ಮ ಬಿ. ಚೆಟ್ಟಿಮಾಡ, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ. ಭಾಗವಹಿಸಿ ಮಾತನಾಡಿದರು. ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕರಾದ ಹರೀಶ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ…
ಧಾರವಾಡ : ಜಿ.ಬಿ. ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿಗೆ ಬೆಂಗಳೂರಿನ ವಸು ವತ್ಸಲೆ ಇವರ ‘ಮಹಿ’ ಕಾದಂಬರಿ ಆಯ್ಕೆಯಾಗಿದೆ. ಪುರಸ್ಕಾರವು ರೂ. ಹದಿನೈದು ಸಾವಿರ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದ್ದು, ದಿನಾಂಕ 10 ನವೆಂಬರ್ 2025ರಂದು ನಿವೃತ್ತ ಹಿರಿಯ ಗ್ರಂಥಾಲಯ ಅಧಿಕಾರಿ ಜಿ.ಬಿ. ಹೊಂಬಳರವರು ಜನ್ಮದಿನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜಿ.ಬಿ. ಹೊಂಬಳ ಪ್ರಶಸ್ತಿ ಸಮಿತಿ ಕಾರ್ಯದರ್ಶಿ ಆನಂದ ಪಾಟೀಲ ತಿಳಿಸಿದ್ದಾರೆ.
ಮೈಸೂರು : ಪರಿವರ್ತನ ರಂಗ ಸಮಾಜ (ರಿ.) ಮೈಸೂರು ಆಯೋಜಿಸಿರುವ ‘ರಂಗವಿಮರ್ಶೆ ಸದ್ಯದ ಸ್ಥಿತಿ ಸಾಧ್ಯತೆ’ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮವು ದಿನಾಂಕ 08 ನವೆಂಬರ್ 2025ರಂದು ಸಂಜೆ 5-30 ಗಂಟೆಗೆ ಮೈಸೂರಿನ ಕೃಷ್ಣಮೂರ್ತಿಪುರಂ ಇಲ್ಲಿರುವ ನಮನ ಕಲಾವೇದಿಕೆಯಲ್ಲಿ ನಡೆಯಲಿದೆ. ಶಶಿಕಾಂತ ಯಡಹಳ್ಳಿ, ಎನ್. ಧನಂಜಯ, ಯತೀಶ್ ಕೊಳ್ಳೇಗಾಲ, ಸುಗುಣ ನಿರಂತರ, ರವಿ ಕುಮಾರ್ (ಕಲಾಬ್ರಹ್ಮ) ಪ್ರಸನ್ನ ಕುಮಾರ್ ಕೆರಗೋಡು, ಕುಸುಮಾ ಆಯರಹಳ್ಳಿ ಇವರುಗಳು ಸಂವಾದದಲ್ಲಿ ಭಾಗವಹಿಸಲಿದ್ದು, ಪ್ರೊ. ಎಸ್.ಆರ್. ರಮೇಶ್ ಇವರು ನಿರ್ವಹಣೆ ಮಾಡಲಿದ್ದಾರೆ. ನಾಟಕ ನೋಡುವುದೇ ಒಂದು ಚಂದ. ನೋಡಿದ ಮೇಲೆ ನಾಟಕದ ಕಥಾವಸ್ತುವನ್ನು ಅದರ ಪ್ರಸ್ತುತತೆಯನ್ನು ಅರ್ಥೈಸಿಕೊಳ್ಳುವುದು, ರಂಗಪ್ರಯೋಗದ ಸೂಕ್ಷ್ಮತೆಗಳು, ಅಂತರ್ಗತ ಅರ್ಥಗಳು ಪ್ರೇಕ್ಷಕರಿಗೆ ಸಂವಹನೆಯಾದ ಬಗೆ ಈ ಎಲ್ಲಾ ಅಂಶಗಳೊಂದಿಗೆ ನಾಟಕದೊಳಗೆ ಮರುಪ್ರವೇಶ ಮಾಡಿ, ಚಿಂತನ ಮಂಥನ ನಡೆಸಿ ಮತ್ತೆ ರಂಗಾಸಕ್ತರ ಮುಂದಿಡುವುದನ್ನು ಒಂದರ್ಥದಲ್ಲಿ ರಂಗವಿಮರ್ಶೆ ಎನ್ನಬಹುದು. ರಂಗವಿಮರ್ಶೆ ಹಿಂದೆ ಹೇಗಿತ್ತು ? ಸದ್ಯ ಹೇಗಿದೆ ?? ಸಾಧ್ಯತೆಗಳು ಏನೆಲ್ಲಾ ಇರಬಹುದು ??? ವಿಷಯ…
ಸುರತ್ಕಲ್ : ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ವತಿಯಿಂದ ‘ವಿಶುಕುಮಾರ್ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆಯಾಗಿರುವ ಟ್ರಸ್ಟಿನ ಸದಸ್ಯ ಹಾಗೂ ಹಿರಿಯ ಸಂಶೋಧಕ ಬೆನೆಟ್ ಜಿ. ಅಮ್ಮಣ್ಣ ಇವರನ್ನು ದಿನಾಂಕ 06 ನವೆಂಬರ್ 2025ರಂದು ಗೌರವಿಸಲಾಯಿತು. ಟ್ರಸ್ಟಿನ ಅಧ್ಯಕ್ಷೆ ಮತ್ತು ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಮಾತನಾಡಿ “ಸಾಹಿತ್ಯ ಮತ್ತು ಸಂಶೋಧನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಾಹಿತಿ ಬೆನೆಟ್ ಜಿ. ಅಮ್ಮಣ್ಣ ಇವರ ಸೇವೆಗೆ ಸಂದಿರುವ ಗೌರವ ಇದಾಗಿದೆ” ಎಂದರು. ಬೆನೆಟ್ ಜಿ. ಅಮ್ಮಣ್ಣ ಇವರು ಮಾತನಾಡಿ “ಗ್ರಂಥಪಾಲ ಎಂದರೆ ಕೇವಲ ಗ್ರಂಥಗಳನ್ನು ಕಾಯುವವನಾಗಿರದೆ ಜ್ಞಾನಾರ್ಜನೆಯ ಹಸಿವಿನಿಂದ ಆಗಮಿಸುವ ಓದುಗನ ಹಸಿವನ್ನು ತಣಿಸಲು ನೆರವಾಗುವ ಮಾರ್ಗದರ್ಶಕ ಎಂಬ ಸಂಶೋಧಕ ಶ್ರೀನಿವಾಸ ಹಾವನೂರು ಅವರ ಮಾತನ್ನು ನೆನಪಿಸಿ ಅದರಂತೆ ನಡೆದಿದ್ದೇನೆ” ಎಂದರು. ಟ್ರಸ್ಟಿನ ಕಾರ್ಯದರ್ಶಿ ಕೃಷ್ಣಮೂರ್ತಿ “ಪ್ರಗತಿಪರ ಚಿಂತನೆಯ ಸಾಹಿತಿಯಾಗಿದ್ದ ವಿಶುಕುಮಾರ್ ಅವರ ನೆನಪಿನ ಪ್ರಶಸ್ತಿ ಬೆನೆಟ್ ಜಿ. ಅಮ್ಮಣ್ಣ ಪಡೆಯುತ್ತಿರುವುದು ಅಭಿಮಾನದ ವಿಚಾರವಾಗಿದೆ” ಎಂದರು. ಟ್ರಸ್ಟಿನ ಕೋಶಾಧಿಕಾರಿ ಡಾ. ಜ್ಯೋತಿ ಚೇಳ್ಯಾರು ಸ್ವಾಗತಿಸಿ,…
ಧಾರವಾಡ : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ (ರಿ) ಧಾರವಾಡ ಮತ್ತು ಕ್ಷಮತಾ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಖ್ಯಾತ ರಂಗಕಲಾವಿದ ನಿರ್ದೇಶಕ ಯಶವಂತ ಸರದೇಶಪಾಂಡೆಯವರಿಗೆ ನುಡಿ ನಮನ ಕಾರ್ಯಕ್ರಮವನ್ನು ದಿನಾಂಕ 08 ನವೆಂಬರ್ 2025ರಂದು ಸಂಜೆ 6-00 ಗಂಟೆಗೆ ಧಾರವಾಡದ ರಂಗಾಯಣ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಳ್ಳಲಾಗಿದೆ. ಮಾನ್ಯ ಶಾಸಕರಾದ ಅರವಿಂದ ಬೆಲ್ಲದ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ನುಡಿ ನಮನ ಕಾರ್ಯಕ್ರಮದಲ್ಲಿ ಮೋಹನ ಸಿದ್ಧಾಂತಿ, ಅರವಿಂದ ಕುಲಕರ್ಣಿ, ಬಂಡು ಕುಲಕರ್ಣಿ, ಶ್ರೀಮತಿ ವಿಶ್ವೇಶ್ವರಿ ಹಿರೇಮಠ, ರವಿ ಕುಲಕರ್ಣಿ, ವಿಶ್ವನಾಥ ಕುಲಕರ್ಣಿ, ಶ್ರೀನಿವಾಸ ವಾಡಪ್ಪಿ, ಮಲ್ಲಿಕಾರ್ಜುನ ಸಿದ್ದಣ್ಣವರ ಇವರುಗಳು ನೆನಪು ಹಂಚಿಕೊಳ್ಳಲಿದ್ದಾರೆ.