Author: roovari

ತೆಕ್ಕಟ್ಟೆ : ತೆಕ್ಕಟ್ಟೆ ಹಯಗ್ರೀವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಘ ಸಂಸ್ಥೆಗಳಿಗೆ ಧನ ಸಹಾಯ ಯೋಜನೆಯಡಿಯಲ್ಲಿ ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಪ್ರಸ್ತುತಿಯ ಯಕ್ಷಗಾನ ಎಮ್.ಜಿ. ಭಟ್ ಬರವಣಿ ವಿರಚಿತ ‘ವಿದ್ರೂಪ ವಿಜಯ’ ಪ್ರಸಂಗವು ದಿನಾಂಕ 24-03-2034ರಂದು ಪ್ರದರ್ಶನಗೊಂಡಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯಕ್ಷಗುರು ಚಿತ್ರಪಾಡಿ ಕೃಷ್ಣಮೂರ್ತಿ ಉರಾಳ “ಯಕ್ಷ ಕವಿಗಳನೇಕರು ಹಗಲಿರುಳೂ ಯೋಚಿಸಿ ಪ್ರಸಂಗ ರಚನೆ ಮಾಡುವಲ್ಲಿ ಅತಿಯಾದ ಸಾಹಸವನ್ನೆಸಗುತ್ತಾರೆ. ಕೆಲವು ಕಾರಣಗಳಿಂದ ಒಳ್ಳೆಯ ಹಲವು ಪ್ರಸಂಗಗಳು ಪ್ರಸಿದ್ಧಿಗೆ ಬಾರದೇ ಉಳಿದಿರುತ್ತದೆ. ಒಂದಿಷ್ಟು ಕಾಲ ರಂಗದಿಂದ ಹೊರಗುಳಿದ ಪ್ರಸಂಗಗಳನ್ನು ಮತ್ತೆ ಓದದೇ ಆಡಿದ ಪ್ರಸಂಗವನ್ನೇ ಆಡುತ್ತ ಇರುವುದನ್ನು ಕಂಡಿದ್ದೇವೆ. ಆದರೆ ಇಂತಹ ಹಲವು ಸಂಘ ಸಂಸ್ಥೆಗಳು ಬಹು ಕ್ಲಿಷ್ಠವಾದ ನಡೆಯ ಪ್ರಸಂಗವನ್ನೋ ಅಥವಾ ರಂಗದಿಂದ ಮರೆಯಾದ ಪ್ರಸಂಗಗಳನ್ನೋ ಮತ್ತೆ ಕೈಗೆತ್ತಿಕೊಂಡು ರಂಗದಲ್ಲಿ ಪ್ರದರ್ಶನ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ, ‘ವಿದ್ರೂಪ ವಿಜಯ’ ಯಶಸ್ಸು ಕಂಡಿದೆ” ಎಂದು ಹೇಳಿದರು. ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಗಳ ಸಹಕಾರದಲ್ಲಿ ನಡೆದ…

Read More

ಮಂಗಳೂರು : ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿ ಮಂಗಳೂರು ಮತ್ತು ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ಸಹಭಾಗಿತ್ವದಲ್ಲಿ ತುಳುನಾಡಿನ ವೀರ ರೈತರಿಂದ ನಡೆದ ಸ್ವಾತಂತ್ರ್ಯ ಸಂಗ್ರಾಮ ತುಳುನಾಡ ಅಮರ ಸುಳ್ಯ ಸಮರ-1837 ಸಂಸ್ಮರಣೆ, ವಿಜಯ ದಿನಾಚರಣೆ ಕಾರ್ಯಕ್ರಮ ಪ್ರಯುಕ್ತ ಚಿತ್ರಕಲಾ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆಯು ಬಾವುಟಗುಡ್ಡೆಯಲ್ಲಿ ದಿನಾಂಕ 05-04-2024ರಂದು ಬೆಳಗ್ಗೆ 9ರಿಂದ ನಡೆಯಲಿದೆ. 1ರಿಂದ 4ನೇ ತರಗತಿ, 5ರಿಂದ 7, 8ರಿಂದ 10ನೇ ತರಗತಿ, ಸಾರ್ವಜನಿಕರಿಗೆ ಚಿತ್ರಕಲಾ ಸ್ಪರ್ಧೆ ಮತ್ತು ಪ್ರಥಮ ಪಿಯುಸಿಯಿಂದ ಅಂತಿಮ ಪದವಿ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ನಗದು ಬಹುಮಾನ, ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಲಾಗುವುದು. ದಿನಾಂಕ 02-04-2024 ಪ್ರವೇಶಾತಿಯ ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಒಕ್ಕಲಿಗರ ಸೇವಾ ಸಂಘ, ಎರಡನೇ ಮಹಡಿ, ಒಕ್ಕಲಿಗರ ಗೌಡರ ಭವನ, ಶ್ರೀ ಸಾಯಿಬಾಬ ಮಂದಿರದ ಎದುರುಗಡೆ, ಚಿಲಿಂಬಿ, ಲೇಡಿಹಿಲ್ ಇಲ್ಲಿ ಸಂಪರ್ಕಿಸಬಹುದು.

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಏಪ್ರಿಲ್ ತಿಂಗಳ ಸಾಪ್ತಾಹಿಕ ಸರಣಿ ಕಾರ್ಯಕ್ರಮವು ದಿನಾಂಕ 01-04-2024, 08-04-2024, 15-04-2024, 22-04-2024 ಮತ್ತು 29-04-2024ರಂದು ಪ್ರತೀ ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ದಿನಾಂಕ 01-04-2024ರಂದು ನಡೆಯಲಿರುವು ಸರಣಿ 39ರಲ್ಲಿ ಕುಮಾರಿ ಪ್ರಕೃತಿ ಮರೂರು, ದಿನಾಂಕ 08-04-2024ರಂದು ನಡೆಯಲಿರುವು ಸರಣಿ 40ರಲ್ಲಿ ಕುಮಾರಿ ಚಿನ್ಮಯಿ ಸುರತ್ಕಲ್, ದಿನಾಂಕ 15-04-2024ರಂದು ನಡೆಯಲಿರುವು ಸರಣಿ 41ರಲ್ಲಿ ಅದಿತಿ ವಿ. ರಾವ್ ಬೆಂಗಳೂರು, ದಿನಾಂಕ 22-04-2024ರಂದು ನಡೆಯಲಿರುವು ಸರಣಿ 42ರಲ್ಲಿ ಕುಮಾರಿ ಶ್ರದ್ಧಾ ಕೆ. ಭಟ್ ಉಡುಪಿ ಮತ್ತು ದಿನಾಂಕ 29-04-2024ರಂದು ನಡೆಯಲಿರುವು ಸರಣಿ 43ರಲ್ಲಿ ವಿದುಷಿ ಸ್ಮೃತಿ ಸುರೇಶ್ ಬೆಂಗಳೂರು ಇವರುಗಳು ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ.

Read More

ಶಿರ್ವ : ಮೂಲ್ಕಿ ಸುಂದರ್‌ ರಾಮ್‌ ಶೆಟ್ಟಿ ಕಾಲೇಜು ಶಿರ್ವ ಇದರ ವತಿಯಿಂದ ‘ಸರೋದ್ ವಾದನ’ವು ದಿನಾಂಕ 01-04-2024ರಂದು ಶಿರ್ವದ ಮೂಲ್ಕಿ ಸುಂದರ್‌ ರಾಮ್‌ ಶೆಟ್ಟಿ ಕಾಲೇಜಿನಲ್ಲಿ ನಡೆಯಲಿದೆ. ಪಂಡಿತ್ ರಾಜೀವ್ ತಾರನಾಥ್ ಇವರ ಶಿಷ್ಯನಾದ ಮೈಸೂರಿನ ಶ್ರೀ ಸಚಿನ್ ಹಂಪೆಮನೆ ಇವರ ಸರೋದ್ ವಾದನಕ್ಕೆ ಆಶಾಯ್ ಕಲಾವಾಂತಕರ್ ಬಾಯಾರ್ ತಬಲ ಸಾಥ್ ನೀಡಲಿದ್ದಾರೆ.

Read More

ಮಂಗಳೂರು : ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಇತಿಹಾಸದಲ್ಲಿ ಮರೆಯಲಾಗದ ಮಾಣಿಕ್ಯಗಳಲ್ಲಿ ಒಬ್ಬರಾದ ಪಂಡಿತ್ ರಾಜನ್ ಮಿಶ್ರಾ ಅವರ ಸ್ಮರಣಾರ್ಥ ಮಂಗಳೂರಿನ ಸ್ವರಾನಂದ ಪ್ರತಿಷ್ಠಾನ ವತಿಯಿಂದ ದಿನಾಂಕ 30-03-2024 ಮತ್ತು 31-03-2024ರಂದು ನಗರದ ಬಿ.ಇ.ಎಂ. ಹೈಸ್ಕೂಲ್ ಸಭಾಂಗಣದಲ್ಲಿ ಬೈಠಕ್ ಶೈಲಿಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾಜನ್ ಮಿಶ್ರಾ ಅವರ ಶಿಷ್ಯ ಪರಂಪರೆಯ ಗಾಯಕರಾದ, ಯುಗಳ ಗಾಯನ ಪ್ರಸ್ತುತಿಯಲ್ಲಿ ಜನಪ್ರಿಯರಾಗಿರುವ ಡಾ. ಪ್ರಭಾಕರ ಕಶ್ಯಪ್, ಡಾ. ದಿವಾಕರ್ ಕಶ್ಯಪ್ (ಕಶ್ಯಪ್ ಬಂಧು) ಕಛೇರಿಯನ್ನು ನಡೆಸಿಕೊಡಲಿದ್ದಾರೆ. ದಿನಾಂಕ 30-03-2024ರಂದು ಸಂಜೆ 5.30ಕ್ಕೆ ಸಂದೀಪನ್ ಮುಖರ್ಜಿ ಮತ್ತು ಸೌರಬ್ ಗುಲವಾನಿ ಅವರ ತಬಲಾವಾದನ ಕಛೇರಿ ಬಳಿಕ ನಿಶಾದ್ ವ್ಯಾಸ್ ಅವರಿಂದ ಗಾಯನ. ಬಳಿಕ ಕಶ್ಯಪ್ ಬಂಧು ಅವರಿಂದ ಗಾಯನ ಪ್ರಸ್ತುತಿ ಹೆಗ್ಡೆ ನಡೆಯಲಿದ್ದು, ಪಂಡಿತ್ ಅರವಿಂದ್ ಕುಮಾರ್ ಆಜಾದ್, ಗುರುಪ್ರಸಾದ್ ಹೆಗಡೆ, ಪ್ರಸಾದ್ ಕಾಮತ್, ಶಶಿಕಿರಣ್ ಮಣಿಪಾಲ ಅವರು ಸಾತ್ ಸಂಗತ್ ನೀಡಲಿದ್ದಾರೆ. ದಿನಾಂಕ 31-03-2024ರಂದು ಮುಂಜಾನೆ ಗಂಟೆ 6.30ರಿಂದ ಕಶ್ಯಪ್ ಬಂಧುಗಳಿಂದ ಮುಂಜಾನೆಯ ರಾಗಗಳ ಪ್ರಸ್ತುತಿಯ…

Read More

ನಾಲ್ಕೂವರೆ ದಶಕಗಳ ಪರಂಪರೆಯ ಹವ್ಯಾಸಿ ರಂಗ ತಂಡ ‘ಲಾವಣ್ಯ ಬೈಂದೂರು’ ಈ ವರ್ಷ ರಂಗೇರಿಸಿಕೊಂಡ ಕೃತಿ ರಾಜೇಂದ್ರ ಕಾರಂತರ ‘ನಾಯಿ ಕಳೆದಿದೆ’. ಅಸಲಿಗೆ ಇಲ್ಲಿ ನಾಯಿ ಸಿಕ್ಕಿದೆ. ಹೌದು ಸಕಾಲಿಕ ವಿದ್ಯಮಾನದ ವಿದ್ಯಾವಂತ ಮಕ್ಕಳು ಅವರ ವೃತ್ತಿ ಆಸೆ ವಿದೇಶಗಳ ಗೊಂದಲ ಗೊಜಲುಗಳನ್ನು ಸಹಿಸಿ ಮೂಲ ಮನೆಯಲ್ಲಿ ದಿನ ಕಳೆವ ವೃದ್ಧ ತಂದೆ ತಾಯಿಯ ಅಳಲು ಆತಂಕ ಕಾಳಜಿಯ ಬಿಂಬಿಸುವ ಸಾಂಸಾರಿಕ  ದೃಶ್ಯ ಮಾಲೆ ಇದು. ಉನ್ನತ ಶಿಕ್ಷಣದಿಂದ ಆಧುನಿಕತೆಯ ಬದುಕಿಗೆ ಒಗ್ಗಿದ ಮಕ್ಕಳು ತಮ್ಮ ಪ್ರೀತಿಯ ನಾಯಿಗೆ ನೀಡೋ ಪ್ರೇಮ ಕಾಳಜಿ ಸ್ವತಃ ಪಾಲಕರಿಗೂ ನೀಡೋ ಮನಸ್ಸಿಲ್ಲದೆ ಸಾಗುವ ಕಥೆಯಲ್ಲಿ ಪ್ರತೀ ಪಾತ್ರವೂ ಸದ್ಯದ ಸಂಸಾರ ಚಿತ್ರ ಪರಿಚಯಿಸುತ್ತಲೇ ಸಾಗುತ್ತದೆ. ಮಗ ಸೊಸೆ ತಮ್ಮ ಸ್ವಂತ ಹಿರಿಯರನ್ನು ಅವರ ವಿಶ್ವಾಸವನ್ನೂ ಅನುಮಾನಿಸಿ ಅವಮಾನಿಸಿ ಅವರೊಂದಿಗಿರುವ ಪರಿಚಿತ ಪ್ರಾಮಾಣಿಕತನವನ್ನೂ ತುಚ್ಛೀಕರಿಸಿ   ಕೊನೆಗೆ ಮಮತೆ ಮನುಷ್ಯತ್ವವೇ ಸತ್ಯ ಎಂದು ಅರಿವಾಗಲು ಈ ನಾಯಿಯ ಪಾತ್ರ ಕಲ್ಪನೆ ಅದ್ಬುತವಾಗಿದೆ. ಬಿಗ್ ಬಾಸ್, ಪ್ರಾಣಿ ದಯಾ…

Read More

ಸುರತ್ಕಲ್: ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌ನ ಕೇಂದ್ರ ಮಹಿಳಾ ಘಟಕದ ಸಪ್ತಮ ವಾರ್ಷಿಕೋತ್ಸವವು ದಿನಾಂಕ 22-03-2024 ರಂದು ಸಂಜೆ ಘಂಟೆ 6.00ರಿಂದ ಹಳೆಯಂಗಡಿ ಸಮೀಪದ ಪಾವಂಜೆ ಕ್ಷೇತ್ರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಟ್ಲ ಫೌಂಡೇಷನ್‌ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಪಟ್ಟ ಸತೀಶ್ ಶೆಟ್ಟಿ, ವಕೀಲ ನಾರಾಯಣ ಪಾಟಾಳಿ, ಕಲಾ ಪೋಷಕರಾದ ಶಕುಂತಳಾ ರಮಾನಂದ ಭಟ್, ಸಂಧ್ಯಾ ಜಯದೇವ ಐತಾಳ್, ಪಟ್ಲ ಫೌಂಡೇಷನ್‌ ಟ್ರಸ್ಟಿ ಸಹನಾ ರಾಜೇಶ್ ರೈ, ಜೆಸಿಐ ಸುರತ್ಕಲ್ ಘಟಕದ ಅಧ್ಯಕ್ಷೆ ಜ್ಯೋತಿ ಪ್ರವೀಣ್ ಶೆಟ್ಟಿ, ಪಟ್ಲ ಪೌಂಡೇಷನ್ ಕೋಶಾಧಿಕಾರಿ ಸುದೇಶ್ ಕುಮಾ‌ರ್ ರೈ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಹಳುವಳ್ಳಿಯ ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನದ ನಿರ್ದೇಶಕಿ ಜ್ಯೋತಿ ಟಿ. ಎನ್. ಕಳಸ, ಧೀಶಕ್ತಿ ಮಹಿಳಾ ಯಕ್ಷ ಬಳಗದ ನಿರ್ದೇಶಕಿ ಪದ್ಮಾ ಕೆ. ಆರ್. ಆಚಾರ್ಯ ಪುತ್ತೂರು, ತಾಳಮದ್ದಲೆ ಕಲಾವಿದೆ ರೇವತಿ ನವೀನ್ ಕುಳಾಯಿ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಕೇಂದ್ರೀಯ ಘಟಕದ ಅಧ್ಯಕ್ಷೆ ಪೂರ್ಣಿಮಾ ಶೆಟ್ಟಿ ಸ್ವಾಗತಿಸಿ, ಸಾಯಿಸುಮ ನಾವಡ ಕಾರ್ಯಕ್ರಮ…

Read More

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠ ಮತ್ತು ಮಿಲಾಗ್ರಿಸ್ ಕಾಲೇಜಿನ ಸಹಯೋಗದಲ್ಲಿ ‘ಕೊಂಕಣಿ ಜಾನಪದ ಮತ್ತು ಭವಿಷ್ಯ’ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ ದಿನಾಂಕ 26-03-2024ರ ಮಂಗಳವಾರದಂದು ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಮಿಲಾಗ್ರಿಸ್ ಕಾಲೇಜಿನ ಸಂಚಾಲಕ ಫಾ. ಬೊನವೆಂಚರ್ ನಝರತ್ “ಜಾನಪದವು ಮೌಖಿಕ ಪರಂಪರೆಯ ವಾಹಕ. ಅದು ಸಂಸ್ಕೃತಿ, ಜಾತಿ, ಧರ್ಮ, ಪಂಥಗಳನ್ನು ಬೆಸೆಯುತ್ತದೆ. ಇಂಥ ಶ್ರೀಮಂತ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಕೊಂಕಣಿ ಭಾಷೆಯು ಬಾಂಧವ್ಯ ಬೆಸೆಯುವ ಕಲೆಯನ್ನು ಹೊಂದಿದ್ದು, ಕೊಂಕಣಿ ಅಕಾಡೆಮಿಯು ಕೊಂಕಣಿ ಭಾಷಾಭಿವೃದ್ಧಿಗೆ ಶ್ರಮಿಸುತ್ತಿದೆ. ಕೊಂಕಣಿ ಭಾಷಿಗರು ತಮ್ಮ ಮಕ್ಕಳಿಗೆ ಕೊಂಕಣಿ ಭಾಷೆಯ ಬಗ್ಗೆ ಅಭಿರುಚಿ ಮೂಡಿಸಿದಾಗ ಮಾತ್ರ ಭಾಷೆ ಬೆಳೆಯಲು ಸಾಧ್ಯ” ಎಂದರು. ಕಥೋಲಿಕ್ ಬೋರ್ಡ್‌ ನಿಯೋಜಿತ ಕಾರ್ಯದರ್ಶಿ ಲಿಯೋ ಲಾಸ್ರಾದೊ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಆನ್ಸನ್ ಪಿಂಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಜಯವಂತ ನಾಯಕ್…

Read More

ಮಂಜೇಶ್ವರ : ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ವತಿಯಿಂದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರ ಜನ್ಮದಿನಾಚರಣೆಯು ಗೋವಿಂದ ಪೈ ನಿವಾಸ ಗಿಳಿವಿಂಡು ಇಲ್ಲಿ ದಿನಾಂಕ 23-03-2024ರಂದು ನಡೆಯಿತು. ಅಧ್ಯಕ್ಷತೆ ವಹಿಸಿದ ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ ಸಾಲಿಯಾನ್ ತಿಂಗಳಿಗೊಂದು ಯಕ್ಷಗಾನ ಪ್ರದರ್ಶನವನ್ನೂ ಯಕ್ಷಗಾನ ಶಿಬಿರಗಳ ಆಯೋಜನೆಯನ್ನೂ ಸಾಧ್ಯವಾಗಿಸಬೇಕು ಎಂಬ ಹಂಬಲವನ್ನು ವ್ಯಕ್ತಪಡಿಸಿ ತಿಂಗಳಿಗೊಂದು ತುಳು ಕಾರ್ಯಕ್ರಮ ನಡೆಸುವಂತೆ ಆಸಕ್ತರನ್ನು ಕೇಳಿಕೊಳ್ಳುವುದಾಗಿ ಹೇಳಿದರು. ವಿಶಾಲ ಸಭಾಭವನ ಇದೆ, ವಿದ್ಯುತ್ ವ್ಯವಸ್ಥೆಗೆ 57 ಲಕ್ಷ ಪಾಸಾಗಿದೆ. ಆ ಅನುದಾನ ಸಿಕ್ಕರೆ ವ್ಯವಸ್ಥೆ ಸಸೂತ್ರವಾಗಲಿದೆ ಎಂದು ಹೇಳಿದರು. ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರತಿಷ್ಠಿತ ‘ಗಡಿನಾಡ ಚೇತನ’ ಪ್ರಶಸ್ತಿಯನ್ನು ಸ್ವೀಕರಿಸಿದ್ದ ಡಾ. ರಾಧಾಕೃಷ್ಣ ಕೆ. ಉಳಿಯತ್ತಡ್ಕ ಗೋವಿಂದ ಪೈಗಳ ಬದುಕು ಬರಹಗಳ ಕುರಿತು ಮಾತನಾಡಿ, ಡಾ. ರಮಾನಂದ ಬನಾರಿ ಅವರ ಅನುಪಸ್ಥಿತಿಯಲ್ಲಿ ಉದ್ಘಾಟನೆಯನ್ನು ನೆರವೇರಿಸಿ ಇಲ್ಲಿ ಎಲ್ಲರೂ ಕಾರ್ಯಕ್ರಮ ನಡೆಸುವ ಅವಕಾಶವನ್ನು ತಮ್ಮದಾಗಿಸಬೇಕೆಂದು ಸಲಹೆ ಕೊಟ್ಟರು. ರವೀಂದ್ರನ್ ಪಾಡಿ ಅವರು ಪೈಗಳ ಗಿಳಿವಿಂಡು ಕವನದ ಸಾಲುಗಳನ್ನು…

Read More

ಉಡುಪಿ : ಬೆಂಗಳೂರಿನಲ್ಲಿ ಸದಾ ಚಟುವಟಿಕೆಯಿಂದಿರುವ ಹಾಗೂ ಕಳೆದ 12 ವರ್ಷದಿಂದ ಕೋಟದ ಹಂದೆ ದೇವಸ್ಥಾನದಲ್ಲಿ ಯಕ್ಷಗಾನ ಬೇಸಿಗೆ ಶಿಬಿರ ಮಾಡುತ್ತಿರುವ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ವತಿಯಿಂದ ಉಡುಪಿ ಕುಂದಾಪುರ ತಾಲೂಕಿನ ಕೊಮೆ ತೆಕ್ಕಟ್ಟೆ ಯಶಸ್ವೀ ಕಲಾವೃಂದದ ಶ್ವೇತಯಾನದ ಅಡಿಯಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇವರ ಸಹಯೋಗದಲ್ಲಿ ಉಡುಪಿಯ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ದಿನಾಂಕ 31-03-2024ರಂದು ‘ಕೃಷ್ಣಲೀಲೆ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಯಕ್ಷಗಾನವು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡೆಯಲಿದ್ದು, ಕಲಾವಿದರಾಗಿ ಹಿಮ್ಮೇಳದಲ್ಲಿ ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ ಮತ್ತು ಸುದೀಪ ಉರಾಳ ಹಾಗೂ ಮುಮ್ಮೇಳದಲ್ಲಿ ತಮ್ಮಣ್ಣ ಗಾಂವ್ಕರ್, ದಿನೇಶ್ ಕನ್ನಾರ್, ಸ್ಪೂರ್ತಿ ಭಟ್, ರಾಘವೇಂದ್ರ ತುಂಗ ಕೆ., ಸತೀಶ ಹಾಲಾಡಿ, ಪ್ರಶಾಂತ್ ಆಚಾರ್ಯ, ರಾಜು ಪೂಜಾರಿ ಮತ್ತು ಇನ್ನಿತರರು ಭಾಗವಹಿಸಲಿದ್ದಾರೆ.

Read More