ಮಂಗಳೂರು : ನಾಟ್ಯಾರಾಧನಾ ಕಲಾ ಕೇಂದ್ರ (ರಿ.), ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ನಾಟ್ಯಾರಾಧನಾ ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿ ಅರ್ಪಿಸುವ ನಾಟ್ಯಾರಾಧನಾ ತ್ರಿಂಶೋತ್ಸವದ ನೃತ್ಯಾಮೃತ -4ರಲ್ಲಿ ‘ನೃತ್ಯ ಚಿಗುರು’ ಸರಣಿ ನೃತ್ಯ ಕಾರ್ಯಕ್ರಮವು ದಿನಾಂಕ 30-05-2024ರಂದು ಸಂಜೆ ಗಂಟೆ 5-30ರಿಂದ ಮಂಗಳೂರಿನ ಕೆನರಾ ಸಿ.ಬಿ.ಎಸ್.ಸಿ. ಶಾಲೆಯ ಭುವನೇಂದ್ರ ಸಭಾಸದನದಲ್ಲಿ ನಡೆಯಲಿದೆ.
ಈ ಸರಣಿಯಲ್ಲಿ 10 ವರುಷದೊಳಗಿನ ಪುಟಾಣಿ ನೃತ್ಯ ಪ್ರತಿಭೆಗಳು ಏಕವ್ಯಕ್ತಿ ನೃತ್ಯ ಪ್ರಸ್ತುತಿ ನೀಡಲಿದ್ದಾರೆ. ಮಂಗಳೂರಿನ ಕಲಾಪೋಷಕಿಯಾದ ಶ್ರೀಮತಿ ವೀಣಾ ಕೃಷ್ಣಮೂರ್ತಿ ರಾವ್ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಸುರತ್ಕಲ್ಲಿನ ಬಂಟ್ಸ್ ಸಂಘ ಅಧ್ಯಕ್ಷರು ಹಾಗೂ ಕಲಾಪೋಷಕರಾದ ಶ್ರೀ ಸುಧಾಕರ ಎಸ್. ಪೂಂಜ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ವಿದುಷಿ ಸುಮಂಗಲಾ ರತ್ನಾಕರ ರಾವ್ ಇವರ ಶಿಷ್ಯೆ ಭಾವಿಕ ಮಯ್ಯ, ವಿದುಷಿ ಸ್ವಾತಿ ಭಟ್ ಇವರ ಶಿಷ್ಯೆ ಮನಸ್ವಿ ಉಪ್ಪಿನೆ, ವಿದುಷಿ ಶ್ರೀವಿದ್ಯಾ ಮುರಳೀಧರ್ ಇವರ ಶಿಷ್ಯೆ ತೃಪ್ತಿ ಸುವರ್ಣ, ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆ ಅದ್ವಿಕಾ ಭಟ್, ವಿದುಷಿ ಭಾರತಿ ಸುರೇಶ್ ಇವರ ಶಿಷ್ಯೆ ಸಾಕ್ಷಿ ಆಚಾರ್ಯ, ವಿದುಷಿ ಅನ್ನಪೂರ್ಣ ರಿತೇಶ್ ಇವರ ಶಿಷ್ಯೆ ರಿದ್ಧಿ ಎಚ್. ಶೆಟ್ಟಿ, ವಿದ್ವಾನ್ ಬಿ. ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ದೀಪಕ್ ಇವರ ಶಿಷ್ಯೆ ಮಾತಂಗಿ ಮತ್ತು ವಿಶೇಷ ಆಹ್ವಾನಿತ ಬಾಲಪ್ರತಿಭೆ ಗುರು ಅತುಲ್ ಬಾಲು ಚೆನ್ನೈ ಇವರ ಶಿಷ್ಯ ಮಾಸ್ಟರ್ ಶಮಂತಕ ನಂಬೂದರಿ ಧಾರವಾಡ ಇವರುಗಳು ನೃತ್ಯ ಪ್ರಸ್ತುತಿ ನೀಡಲಿದ್ದಾರೆ.