Author: roovari

ಮುಡಿಪು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ಹರೇಕಳ ನ್ಯೂಪಡ್ಪು ಸರಕಾರಿ ಪ್ರೌಢಶಾಲೆಯಲ್ಲಿ ‘ಕನ್ನಡ ಸಂಭ್ರಮ’ ಕಾರ್ಯಕ್ರಮವು ದಿನಾಂಕ 29-12-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕೈಗಾರಿಕಾ ರಸಾಯನಶಾಸ್ತ್ರ ವಿಭಾಗದ ಅಧ್ಯಕ್ಷರಾದ ಪ್ರೊ. ಬಿ.ಕೆ. ಸರೋಜಿನಿ ಇವರು “ಕನ್ನಡದಲ್ಲಿರುವ ಶಾಲಾ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ಪರಿಭಾಷೆಗಳನ್ನು ನೀಡುವಾಗ ಇಂಗ್ಲಿಷ್ ಮತ್ತು ಸಂಸ್ಕೃತ ಪದಗಳನ್ನು ಹೆಚ್ಚು ಬಳಕೆ ಮಾಡುವುದರಿಂದ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದ್ದು, ಸರಳ ಕನ್ನಡ ಪದಗಳನ್ನು ಅಳವಡಿಸುವ ಪ್ರಯತ್ನ ನಡೆಯಬೇಕಿದೆ. ಮಕ್ಕಳ ಸಾಹಿತ್ಯ ಎಳೆಯ ಮಕ್ಕಳಲ್ಲಿ ಭಾಷಾಭಿಮಾನವನ್ನೂ, ಕಲ್ಪನಾಶಕ್ತಿಯನ್ನೂ, ಮೌಲ್ಯಗಳನ್ನು ಬಿತ್ತುತ್ತವೆ. ಸರಕಾರ ಮತ್ತು ಸಂಘ ಸಂಸ್ಥೆಗಳು ಮಕ್ಕಳ ಸಾಹಿತ್ಯ ರಚನೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು” ಎಂದು ಹೇಳಿದರು. ಅತಿಥಿಗಳಾಗಿ ಭಾಗವಹಿಸಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ ಮಾತನಾಡಿ “ನಾವು ತುಳು, ಬ್ಯಾರಿ, ಕೊಂಕಣಿ ಯಾವ ಭಾಷೆಯನ್ನಾಡುವುದಾದರೂ ಕರ್ನಾಟಕದಲ್ಲಿರುವವರು ಕನ್ನಡಿಗರು ಎಂಬ ಭಾವನೆಯಿಂದ ಇರಬೇಕು. ಕನ್ನಡ ನನಗೆ ಎಲ್ಲವನ್ನೂ ನೀಡಿ…

Read More

ಕನ್ನಡದ ನಮ್ಮ ಸಂದರ್ಭದ ಬಹುಮುಖ್ಯ ಚಿಂತಕರಲ್ಲಿ ಲಕ್ಷ್ಮೀಶ ತೋಳ್ಪಾಡಿಯವರೂ ಒಬ್ಬರು. ತಮ್ಮ ವಿದ್ವತ್ಪೂರ್ಣ ಉಪನ್ಯಾಸಗಳಿಂದ, ಪ್ರಖರವಾದ ಯೋಚನೆಗಳ ಗುಚ್ಛದಂತಿರುವ ಬರವಣಿಗೆಗಳಿಂದ ನಾಡಿನಾದ್ಯಂತ ಪರಿಚಿತರಾದವರು. ಶ್ರೋತೃಗಳನ್ನು ಚಿಂತನೆಗೆ ಹಚ್ಚಿ ಮುನ್ನಡೆಸುವ ಅವರ ಮಾತಿನ ಶೈಲಿ ಅನನ್ಯವಾದುದು. ಸಾಹಿತಿ, ವಿಮರ್ಶಕ, ಚಿಂತಕ ಇಂತಹ ಉಪಾಧಿಗಳನ್ನೋ ಪ್ರಚಾರವನ್ನೋ ಯಾವತ್ತೂ ಇಷ್ಟಪಡದ ಅವರು ಸಹಜವಾಗಿ ಯೋಚಿಸುವ ಓರ್ವ ಜಿಜ್ಞಾಸು. ತಾನು ಯಾವುದೇ ವಿಷಯನ್ನು ಕುರಿತು ಮಾತನಾಡಿದರೂ ಅದರ ಬಗೆಗೆ ತೀವ್ರವಾಗಿ ಯೋಚಿಸಿ, ಹೊಸ ನೋಟಗಳನ್ನು ನೀಡಬಲ್ಲ ಸೃಜನಶೀಲ ಪ್ರತಿಭೆ ಅವರದ್ದು. ಹಾಗಾಗಿಯೇ ಸಹಜ ಕುತೂಹಲವನ್ನು ಬೆಳೆಸಿಕೊಂಡಿರುವ ಜ್ಞಾನ ಪಿಪಾಸುಗಳಿಗೆ ತೋಳ್ಪಾಡಿಯವರ ಸಂಪರ್ಕ ಹಿತವನ್ನುಂಟುಮಾಡಿದರೆ, ಪ್ರಚಾರ ಪ್ರಸಿದ್ಧಿ, ಸ್ಥಾನ-ಮಾನ ಬಯಸುವವರು ಅವರ ಹತ್ತಿರ ಸುಳಿಯುವುದಿಲ್ಲ. ಕನ್ನಡದಲ್ಲಿ ಕುರ್ತಕೋಟಿ, ಕಿ.ರಂ. ನಾಗರಾಜ ಮುಂತಾದವರನ್ನೊಳಗೊಂಡ ಮೌಖಿಕ ವಿದ್ವಾಂಸ ಪರಂಪರೆಯೊಂದನ್ನು ಗುರುತಿಸುವುದಿದೆ. ಇವರು ಬರೆದದ್ದು ಕಡಮೆ. ಆದರೆ ಉಪನ್ಯಾಸಕ್ಕೆ ನಿಂತರೆ, ಅವರ ಮೂಲಕ ಹರಿದು ಬರುವ ಜ್ಞಾನಪ್ರವಾಹವು ಎಂಥವರನ್ನೂ ವಿಸ್ಮಯಗೊಳಿಸುತ್ತದೆ. ತೋಳ್ಪಾಡಿಯವರನ್ನು ಇವರ ಸಾಲಿಗೆ ಸೇರಿಸಬಹುದು. ಅವರ ಉಪನ್ಯಾಸಗಳೆಂದರೆ ಮೊದಲೇ ಸಿದ್ಧಪಡಿಸಿಕೊಂಡ ಟಿಪ್ಪಣಿಗಳ…

Read More

ಕಾಸರಗೋಡು : ರಂಗಚಿನ್ನಾರಿ ಕಾಸರಗೋಡು (ರಿ.) ಇದರ ಸಂಗೀತ ಘಟಕ ‘ಸ್ವರಚಿನ್ನಾರಿ’ ಏರ್ಪಡಿಸುವ ಕನ್ನಡ ನಾಡಗೀತೆ – ಭಾವಗೀತೆಗಳ ಕಲಿಕಾ ಶಿಬಿರ ‘ಕನ್ನಡ ಧ್ವನಿ’ ಕಾರ್ಯಕ್ರಮವು ದಿನಾಂಕ 06-01-2024ರಂದು ಬೆಳಿಗ್ಗೆ 10 ಗಂಟೆಗೆ ಕಾಸರಗೋಡಿನ ಡಯಟ್ ಮಾಯ್ಪಾಡಿ ಇಲ್ಲಿ ನಡೆಯಲಿದೆ. ರಂಗಚಿನ್ನಾರಿಯ ನಿರ್ದೇಶಕರಾದ ಶ್ರೀ ಕೆ. ಸತೀಶ್ಚಂದ್ರ ಭಂಡಾರಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಡಯಟ್ ಮಾಯ್ಪಾಡಿಯ ಪ್ರಾಂಶುಪಾಲರಾದ ಡಾ. ಕೆ. ರಘುರಾಮ್ ಭಟ್ ಇವರು ಉದ್ಘಾಟಿಸಲಿದ್ದಾರೆ. ಖ್ಯಾತ ಗಾಯಕರಾದ ಶ್ರೀ ಕಿಶೋರ್ ಪೆರ್ಲ ಮತ್ತು ಶ್ರೀಮತಿ ಪ್ರತಿಜ್ಞಾ ರಂಜಿತ್ ಶಿಬಿರ ನಿರ್ದೇಶಕರಾಗಿ ಈ ಕನ್ನಡ ನಾಡಗೀತೆ – ಭಾವಗೀತೆಗಳ ಕಲಿಕಾ ಶಿಬಿರವನ್ನು ನಡೆಸಲಿದ್ದಾರೆ.

Read More

ಮಂಗಳೂರು : ಶ್ರೀ ಶನೈಶ್ಚರ ದೇವಸ್ಥಾನ ಬಜ್ಪೆ ಇದರ ವಾರ್ಷಿಕ ಜಾತ್ರಾ ಮಹೋತ್ಸವವು ದಿನಾಂಕ 06-01-2024ರಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇದೇ ಸಂದರ್ಭದಲ್ಲಿ ಅಪರಾಹ್ನ 2 ಗಂಟೆಯಿಂದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಬಳಗದವರಿಂದ ‘ಶ್ರೀ ಶನೈಶ್ಚರ ಮಹಾತ್ಮೆ – ವಿಕ್ರಮಾದಿತ್ಯ ಚರಿತ್ರೆ’ ಎಂಬ ತುಳು ಯಕ್ಷಗಾನ ತಾಳಮದ್ದಳೆಯನ್ನು ಏರ್ಪಡಿಸಲಾಗಿದೆ. ಹಿಮ್ಮೇಳದಲ್ಲಿ ಭಾಗವತರು ತೋನ್ಸೆ ಪುಷ್ಕಳ ಕುಮಾರ್ ಮತ್ತು ಪ್ರಶಾಂತ ರೈ ಪುತ್ತೂರು, ಮೃದಂಗದಲ್ಲಿ ರೋಹಿತ್ ಉಚ್ಚಿಲ್ ಹಾಗೂ ಚೆಂಡೆಯಲ್ಲಿ ಜಿತೇಶ್ ಕೋಳ್ಯೂರು ಸಹಕರಿಸಲಿರುವರು. ಭಾಸ್ಕರ ರೈ ಕುಕ್ಕುವಳ್ಳಿ, ವಸಂತ ದೇವಾಡಿಗ, ಪಶುಪತಿ ಶಾಸ್ತ್ರಿ ಶಿರಂಕಲ್ಲು, ರವಿ ಅಲೆವೂರಾಯ ವರ್ಕಾಡಿ, ಡಾ. ದಿನಕರ ಎಸ್.ಪಚ್ಚನಾಡಿ ಅರ್ಥಧಾರಿಗಳಾಗಿ ಭಾಗವಹಿಸಲಿರುವರು. ವಾರ್ಷಿಕ ಪೂಜಾ ವಿಧಿಗಳನ್ನು ರಾಜೇಂದ್ರ ಪ್ರಸಾದ್ ಎಕ್ಕಾರ್, ಅಭಿಜಿತ್ ಆನಂದ ಭಟ್ ಅವರ ನೇತೃತ್ವದಲ್ಲಿ ರವಿ ಶಾಂತಿ, ಶ್ರೀಧರ ಶಾಂತಿ, ಯಶೋಧರ ಶಾಂತಿ, ಜಗದೀಶ ಶಾಂತಿ ಮೊದಲಾದ ಅರ್ಚಕ ವೃಂದದವರು ನಡೆಸಿ ಕೊಡಲಿದ್ದಾರೆ.

Read More

ಬೆಂಗಳೂರು : ಸಂಚಾರಿ ಥಿಯೇಟರ್ ಪ್ರಸ್ತುತ ಪಡಿಸುವ ‘ನರಿಗಳಿಗೇಕೆ ಕೋಡಿಲ್ಲ ?’ ಎಂಬ ಮಕ್ಕಳ ನಾಟಕವು ದಿನಾಂಕ 07-01-2023ರಂದು ಬೆಂಗಳೂರಿನ ರಂಗಶಂಕರದಲ್ಲಿ ಮಧ್ಯಾಹ್ನ ಗಂಟೆ 3.30ಕ್ಕೆ ಹಾಗೂ ಸಂಜೆ ಗಂಟೆ 7.30ಕ್ಕೆ ನಡೆಯಲಿದೆ. ಐವತ್ತು ಅರವತ್ತು ವರುಷಗಳ ಹಿಂದೆ ಮಕ್ಕಳ ಪುಸ್ತಕ ಎಂಬ ಹೆಸರಿನಲ್ಲಿ ಹೊರಡುತ್ತಿದ್ದ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ, ಕುವೆಂಪು ಅವರು ರಚಿಸಿರುವ ಕಥೆ ನರಿಗಳೀಗೇಕೆ ಕೋಡಿಲ್ಲ ? ಎಲ್ಲಾ ಜೀವರಾಶಿಯನ್ನು ತನ್ನ ತೆಕ್ಕೆಯಲ್ಲಿಟ್ಟು ಲಾಲಿಸುವ, ಸಮತೋಲನದಿಂದ ಕಾಪಾಡುವ, ತನ್ನೊಳಗೆ ಕಾರುಣ್ಯ, ಕಾಠಿಣ್ಯ ಎರಡೂ ಇವೆ ಎಂಬುದನ್ನು ಮನದಟ್ಟು ಮಾಡುವ, ಕೊಲ್ಲುವುದಕ್ಕಿಂತಲೂ ಕಾಯುವುದು ಮುಖ್ಯ ಎಂದು ಪಿಸುಮಾತಿನಲ್ಲಿ ಹೇಳುವ ಕತೆ ಇದು. ನಮ್ಮ ಮೇಲೆ ಸವಾರಿ ಮಾಡುವ ಅಹಂಕಾರವನ್ನು ಮುರಿದು ಎಸೆಯಬೇಕಾದ ಬಗ್ಗೆಯೂ ಮಾತನಾಡುವ, ನಿಸರ್ಗದ ತೊಟ್ಟಿಲಲ್ಲಿ ಕ್ರೌರ್ಯ ಇರಬಹುದು. ಆದರೆ ಕುತಂತ್ರಕ್ಕೆ, ಅಹಂಕಾರಕ್ಕೆ ಜಾಗವಿಲ್ಲ ಎನ್ನುವುದನ್ನು ಮನದಟ್ಟು ಮಾಡುವ ಕತೆ ಇದು. ಇದನ್ನು ಮಂಗಳಾ ಎನ್. ಮತ್ತು ಶಾಂತಾ ನಾಗರಾಜ ರಂಗರೂಪಕ್ಕೆ ತಂದಿದ್ದಾರೆ. ಶಶಿಧರ್ ಅಡಪ ಅವರ ವಿನ್ಯಾಸವಿದೆ. ಗಜಾನನ…

Read More

ಮಂಗಳೂರು : ಉಡುಪಿ ಕಾಸರಗೋಡು ಜಿಲ್ಲೆ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳ ಸಾಹಿತ್ಯ ಸಂಗಮ (ರಿ.) ಇದರ ಆಶ್ರಯದಲ್ಲಿ ಸಂದೀಪ ಸಾಹಿತ್ಯ ಆತ್ರಾಡಿ ಮತ್ತು ಪುನ್ನಾಗ ಪ್ರಕಾಶನ ಕಾರ್ಕಳ ಇವರ ‘ಪುಸ್ತಕ ಬಿಡುಗಡೆ’ ಕಾರ್ಯಕ್ರಮವು ದಿನಾಂಕ 06-01-2024ರಂದು ಅಪರಾಹ್ನ ಗಂಟೆ 3.00ರಿಂದ ಮುಲ್ಕಿಯ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಶ್ರೀಮತಿ ಇಂದಿರಾ ಹಾಲಂಬಿ ಇವರ ಎರಡು ಪುಸ್ತಕಗಳಾದ ‘ಅಂಬಾ ಪ್ರತಿಜ್ಞೆ’ ಹಾಗೂ ‘ಗಯ ಗಂಧರ್ವ ಪರಾಜಯ’ ಮತ್ತು ಶ್ರೀಮತಿ ಸಾವಿತ್ರಿ ಮನೋಹರ್ ಇವರ ನಾಟಕ ಕೃತಿ ‘ಪಂಚ ಪ್ರಹಸನಗಳು’ ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಇವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮಕ್ಕಳ ಸಾಹಿತ್ಯ ಸಂಗಮ ಇದರ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸರ್ವರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನ ಚಿಕ್ಕಲ್ಲಸಂದ್ರದ ಸುಮುಖ ಲೇಔಟ್ ಇಲ್ಲಿರುವ ಶ್ರೀವಾಣಿ ಸೆಂಟರ್ ಫಾರ್ ಪರ್ ಫಾರ್ಮಿಂಗ್ ಆರ್ಟ್ಸ್ (ರಿ.) 25ನೇ ವಾರ್ಷಿಕೋತ್ಸವವು ದಿನಾಂಕ 05-01-2024ರಂದು ದೊಡ್ಡಕಲ್ಲಸಂದ್ರ, ಕನಕಪುರ ರಸ್ತೆಯಲ್ಲಿರುವ ಶಂಕರ ಫೌಂಡೇಷನ್ ಮತ್ತು 07-01-2024ರಂದು ಎನ್.ಆರ್. ಕಾಲೋನಿಯ ಪತ್ತಿ ಸಭಾಂಗಣದಲ್ಲಿ ನಡೆಯಲಿದೆ. ದಿನಾಂಕ 05-01-2024ರಂದು ಗಂಟೆ 5-10ಕ್ಕೆ ಕರ್ನಾಟಕ ಕಲಾಶ್ರೀ ಗುರು ಶ್ರೀ ಸತ್ಯನಾರಾಯಣ ರಾಜ್ ಇವರ ಶಿಷ್ಯೆಯರಾದ ವಿದುಷಿ ಪೃಥ್ವಿ ಪಾರ್ಥಸಾರಥಿ, ವಿದುಷಿ ಗೌರಿ ಸಾಗರ್ ಮತ್ತು ವಿದುಷಿ ತೇಜಸ್ವಿನಿ ರಾಜ್ ಇವರಿಂದ ‘ನೃತ್ಯ ವೈಭವಂ’ ಮತ್ತು ಗಂಟೆ 5-45ಕ್ಕೆ ನೃತ್ಯ ಗುರು ಶ್ರೀಮತಿ ಕೃಪಾ ಭಾಸ್ಕರನ್ ಇವರ ಶಿಷ್ಯೆಯರಾದ ಕು.ಕೃತಿ ಗೋಪಿನಾಥ್, ಕು.ಅನ್ವೇಷ ಗುರು, ಕು. ನವ್ಯ ಫ್ರಾನ್ಸಿಸ್ ನಂದಿದಾ ವರಿಯತೋಡಿ ಮತ್ತು ಮಹಾಲಕ್ಷ್ಮೀ ಶ್ರೀನಿವಾಸನ್, 7 ಗಂಟೆಗೆ ಗುರು ಶ್ರೀಮತಿ ಆಶಾ ಅಡಿಗ ಆಚಾರ್ಯ ಇವರ ಶಿಷ್ಯೆಯರಾದ ಕು. ಹರ್ಷಿತ್ ವೆಟ್ರಿವೇಲ್ ಮತ್ತು ಕು. ಅದಿತಿ ಆಚಾರ್ಯ ಮತ್ತು ಗಂಟೆ 7.45ಕ್ಕೆ ಕರ್ನಾಟಕ ಕಲಾಶ್ರೀ ಗುರು ಶ್ರೀಮತಿ…

Read More

ಮಂಗಳೂರು : ನವಸುಮ ರಂಗಮಂಚ (ರಿ.) ಪ್ರಕಾಶನದಿಂದ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಕಾರದೊಂದಿಗೆ ಅಕ್ಷತಾ ರಾಜ್ ಪೆರ್ಲ ಇವರ ‘ಮಂದಾರ ಮಲಕ’ ಮತ್ತು ಬಾಲಕೃಷ್ಣ ಕೊಡವೂರು ಇವರ ‘ಮಾಯದಪ್ಪೆ ಮಾಯಕಂದಾಲ್’ ಎಂಬ ಎರಡು ತುಳು ನಾಟಕ ಕೃತಿಗಳ ಬಿಡುಗಡೆ ಕಾರ್ಯಕ್ರಮವು ಮಂಗಳೂರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ದಿನಾಂಕ 05-01-2024ರಂದು ನಡೆಯಲಿದೆ. ರಂಗಭೂಮಿ ನಿರ್ದೇಶಕರಾದ ವಿಜಯಕುಮಾರ್ ಕೊಡಿಯಾಲ್‌ಬೈಲ್ ಇವರು ಕೃತಿ ಬಿಡುಗಡೆ ಮಾಡಲಿದ್ದು, ಕೃತಿಗಳ ಕುರಿತು ನಾಟಕಕಾರರು ಹಾಗೂ ನ್ಯಾಯವಾದಿ ಶ್ರೀ ಶಶಿರಾಜ್‌ ರಾವ್‌ ಕಾವೂರು ಮತ್ತು ಬೆಸೆಂಟ್ ಮಹಿಳಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರಾದ ಡಾ. ಮೀನಾಕ್ಷಿ ರಾಮಚಂದ್ರ ಇವರು ಕೃತಿ ಪರಿಚಯ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕೃತಿ ಲೇಖಕರು ಹಾಗೂ ಪ್ರಕಾಶಕರು ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.

Read More

ಮಂಗಳೂರು : ರಾಗತರಂಗ ಸಂಸ್ಥೆಯಿಂದ ಮಕ್ಕಳ ಸಾಂಸ್ಕೃತಿಕ ಉತ್ಸವ, ಪ್ರತಿಭಾ ಪುರಸ್ಕಾರವಾದ ‘ಬಾಲ ಪ್ರತಿಭೋತ್ಸವ’ವು ದಿನಾಂಕ 07-01-2024ರಂದು ಸಂಜೆ 4 ಗಂಟೆಗೆ ಎಸ್.ಡಿ.ಎಮ್. ಕಾನೂನು ವಿದ್ಯಾಲಯ ಸಭಾಂಗಣದಲ್ಲಿ ನಡೆಯಲಿದೆ. ಡಾ. ದೇವರಾಜ್ ಕೆ. ಮತ್ತು ಶ್ರೀ ಚೋಲ್ಪಾಡಿ ದೇವದಾಸ ಕಾಮತ್ ಇವರ ಗೌರವ ಉಪಸ್ಥಿತಿಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಗತರಂಗ ಸಂಸ್ಥೆಯ ಗೌರವಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರು ಶುಭಾಶಂಸನೆ ಗೈಯಲಿರುವರು. ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೆನರಾ ಹೈಸ್ಕೂಲಿನ ಮಕ್ಕಳ ಅಧ್ಯಕ್ಷೆಯಾದ ಕುಮಾರಿ ಪೂರ್ವೀ ಕೃಷ್ಣ ಇವರಿಂದ ‘ಭರತನಾಟ್ಯ’ ಮತ್ತು ಶಾರದಾ ವಿದ್ಯಾಲಯದ ಮಕ್ಕಳ ಉಪಾಧ್ಯಕ್ಷೆಯಾದ ಕುಮಾರಿ ಅನಘಾ ರಾವ್ ಇವರಿಂದ ‘ಸುಗಮ ಸಂಗೀತ’ ಹಾಗೂ ಬಾಲಪ್ರತಿಭಾ ನಿನಾದ ಸ್ಪರ್ಧಾ ವಿಜೇತ ಮಕ್ಕಳಿಂದ ಕರ್ನಾಟಕ ಶಾಸ್ತ್ರೀಯ ಗಾಯನ, ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ವಾದ್ಯ ಸಂಗೀತ, ಛದ್ಮ ವೇಷ, ಜಾನಪದ ನೃತ್ಯ, ಏಕಪಾತ್ರಾಭಿನಯಗಳು ನಡೆಯಲಿದೆ.

Read More

ಕಲೆಯೆಂಬುದು ಯಾವ ರೀತಿಯಲ್ಲಿ ಬೇಕಾದರೂ ಪ್ರತಿಯೊಬ್ಬರನ್ನು ಆಕರ್ಷಿಸಬಹುದು. ಅದು ಹೇಗೆ ಯಾವಾಗ ಎಂದು ಹೇಳುವುದು ಅಸಾಧ್ಯ. ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ಆಸಕ್ತಿ ಗುರಿ ಮತ್ತು ಸಾಧಿಸುವ ಛಲ. ಕೆಲವರು ಕಲೆಯನ್ನು ನೋಡಿ ಕಲಿತರೆ ಕೆಲವರಿಗೆ ಬಾಲ್ಯದಿಂದಲೇ ಅದು ಕರಗತವಾಗಿರುತ್ತದೆ. ಚಿಕ್ಕವಯಸ್ಸಿನಲ್ಲಿ ಶಾಲೆಗೆ ಹೋದಾಗ ಅಲ್ಲಿ ಬಿಳಿಯ ಹಾಳೆಯ ಮೇಲೆ ಗೀಚಿದ ಗೆರೆಗಳಿಂದ ಹಿಡಿದು ಮುಂದಿನ ದಿನಗಳಲ್ಲಿ ತಮಗರಿವಿಲ್ಲದ ವಿಭಿನ್ನವಾದ ಕಲಾಕೃತಿಗಳ ಗುಚ್ಛವನ್ನು ಕಲಾಸಕ್ತರ ಮಡಿಲಿಗೆ ನೀಡಿದಾಗ, ಅದನ್ನು ನೋಡಿ ಅಭಿನಂದನೆಗಳ ಮಹಾಪೂರ ಬಂದಾಗ ಒಂದು ಕ್ಷಣ ತಮಗೆ ತಾವೇ ಹೆಮ್ಮೆ ಪಟ್ಟುಕೊಂಡಿದ್ದು ಇದ್ದೇ ಇರುತ್ತದೆ. ಹೀಗೆ ಬಾಲ್ಯದಿಂದಲೇ ಕಲೆಯ ಬಗ್ಗೆ ಅಪಾರ ಆಸಕ್ತಿ ಕೂಡ ಮೂಡಿಸಿಕೊಂಡು ಬಂದ ಕಲಾವಿದೆ ಶ್ರೀಮತಿ ಜಯಶ್ರೀ ಶರ್ಮ. ವೃತ್ತಿಯಲ್ಲಿ ಉಪನ್ಯಾಸಕರಾದರೂ ಕೂಡ ಕಲೆಯ ಬಲೆಗೆ ಸಿಲುಕಿ ತಮ್ಮದೇ ಆದ ಕಲಾ ಜಗತ್ತನ್ನು ಸೃಷ್ಟಿಸಿಕೊಂಡವರು ಜಯಶ್ರೀ ಶರ್ಮರವರು. ತಾನು ನೋಡಿದ್ದನ್ನು ಅನುಭವಿಸಿದ್ದನ್ನು ಕುಂಚದಲ್ಲಿ ಅರಳಿಸಿ ಎಲ್ಲರೂ ಮೆಚ್ಚುವ ಕಲಾತ್ಮಕ ಚಿತ್ರಗಳನ್ನು ನೀಡಿರುವುದು ಮೆಚ್ಚುಗೆ ವಿಷಯ. ಬಾಲ್ಯದಲ್ಲಿ ಶಾಲಾ…

Read More