Author: roovari

27 ಫೆಬ್ರವರಿ 2023, ಮಂಗಳೂರು: “ಸಾಧಕರ ಸಮ್ಮಾನದಿಂದ ಯುವ ಪ್ರತಿಭೆಗಳಿಗೆ ಪ್ರೇರಣೆ” ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಾಧಕರನ್ನು ಗುರುತಿಸುವುದು ಒಂದು ಅತ್ಯುತ್ತಮ ಕಾರ್ಯ. ಇದರಿಂದ ಪ್ರೇರಣೆ ಪಡೆದ ಯುವ ಪ್ರತಿಭೆಗಳು ಮುಂದೆ ಭವಿಷ್ಯದಲ್ಲಿ ಹೆಚ್ಚು ಸಾಧನೆ ಮಾಡಲು ಸಹಾಯವಾಗುತ್ತದೆ ಎಂದು ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್. ಗಣೇಶ್ ರಾವ್ ಹೇಳಿದರು. ವಿವಿಧ ಕ್ಷೇತ್ರಗಳ ಸಾಧಕರಿಗೆ ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಉರ್ವಸ್ಟೋರ್ ನ ಅಂಬೇಡ್ಕರ್ ಭವನದಲ್ಲಿ ಫೆಬ್ರವರಿ 26ರಂದು ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರಕಾರ ಅರ್ಹರಿಗೆ ಪ್ರಶಸ್ತಿ ನೀಡುವ ಮೂಲಕ ಪದ್ಮಶ್ರೀಗೆ ಗೌರವ ಬಂದಿದೆ. ಸಾಧಕರಿಗೆ ಯಾವತ್ತೂ ನಿವೃತ್ತಿ ಎಂಬುವುದಿಲ್ಲ. ಬದುಕಿನುದ್ದಕ್ಕೂ ಅವರಿಂದ ಸಮಾಜಕ್ಕೆ ಸ್ಪೂರ್ತಿ ನೀಡುವ ಕಾರ್ಯ ನಡೆಯುತ್ತಲೇ ಇರಬೇಕು ಎಂದವರು ಹೇಳಿದರು. ಸಾಧಕರಿಗೆ ಪ್ರಶಸ್ತಿ ಪ್ರದಾನ : ಎಸ್. ದೊಡ್ಡಣ್ಣ (ಚಲನಚಿತ್ರ), ಎಂ.ಜಿ.ಆರ್. ಅರಸ್ (ಸಾಹಿತ್ಯ, ಪ್ರಕಾಶನ), ಎಂ.ಎಸ್. ಮಹಾಬಲೇಶ್ವರ (ಬ್ಯಾಂಕಿಂಗ್), ಸೀತಾರಾಮ ಕುಮಾರ್…

Read More

27, ಫೆಬ್ರವರಿ 2023 ಉಡುಪಿ: “ಪ್ರಭುತ್ವಕ್ಕೆ ಜೈಕಾರ ಹಾಕಿದರೆ ಕಲೆ ನಶಿಸುತ್ತದೆ” ಸುಮನಸಾದ ರಂಗಹಬ್ಬ ಉದ್ಘಾಟಿಸಿದ ಸಿ. ಬಸವಲಿಂಗಯ್ಯರಂಗಭೂಮಿಯಲ್ಲಿ ರಾಜಕೀಯವನ್ನು ವಸ್ತುವಾಗಿ ಇಟ್ಟುಕೊಂಡು ನಾಟಕ ಮಾಡಬೇಕು. ಆದರೆ ರಾಜಕೀಯ ಮಾಡಬಾರದು. ರಂಗಾಯಣವೂ ಸೇರಿದಂತೆ ರಂಗಭೂಮಿಯಲ್ಲಿ ಕೆಲಸ ಮಾಡುವವರು ಪ್ರಭುತ್ವಕ್ಕೆ ಜೈಕಾರ ಹಾಕಿದರೆ ಕಲೆ ನಶಿಸುತ್ತದೆ ಎಂದು ಹಿರಿಯ ರಂಗಕರ್ಮಿ ಸಿ. ಬಸವಲಿಂಗಯ್ಯ ಹೇಳಿದರು. ಸಾಂಸ್ಕೃತಿಕ ಸಂಘಟನೆ ಸುಮನಸಾ ಅಜ್ಜರಕಾಡು ಬಯಲು ರಂಗಭೂಮಿಯಲ್ಲಿ ಹಮ್ಮಿಕೊಂಡಿರುವ ರಂಗಹಬ್ಬವನ್ನು ಭಾನುವಾರ 26-2-2023ರಂದು ಉದ್ಘಾಟಿಸಿ ಅವರು ಮಾತನಾಡಿದರು. ರಂಗಭೂಮಿ ವ್ಯವಸ್ಥೆಯ ಪ್ರತಿರೋಧ. ಅದನ್ನು ಬಿಟ್ಟು ಯಾರ ಬಗ್ಗೆಯೋ ಭಜನೆ ಮಾಡಲು ಹೊರಟರೆ ರಂಗಭೂಮಿ ಉಳಿಯುವುದಿಲ್ಲ. ನೀತಿ ಬೋಧನೆ, ಧರ್ಮಬೋಧನೆ ರಂಗಭೂಮಿಯ ಕೆಲಸವಲ್ಲ. ಆ ಕೆಲಸ ಮಾಡಲು ಬೇರೆಯವರು ಇದ್ದಾರೆ. ಮನಸ್ಸುಗಳನ್ನು ಅರಳಿಸುವ ಕೆಲಸವನ್ನು ರಂಗಭೂಮಿ ಮಾಡಬೇಕು. ಮನಸ್ಸನ್ನು ಕೆಡಿಸುವ ಕೆಲಸವನ್ನು ಮಾಡಬಾರದು ಎಂದು ಸಲಹೆ ನೀಡಿದರು. ಅದ್ಭುತ ನಾಟಕಗಳು ಹುಟ್ಟುವುದೇ ದುರಿತ ಕಾಲದಲ್ಲಿ. ಸಮಾಜವು ಸಂಕಷ್ಟದಲ್ಲಿ ಇದ್ದಾಗ ಉತ್ತಮ ನಾಟಕಗಳು ಹೊರಹೊಮ್ಮುತ್ತದೆ. ಸದ್ಯದ ಕಾಲ ನೋಡಿದಾಗ ಅಂಥ…

Read More

27 ಫೆಬ್ರವರಿ 2023, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ನೀಡುವ ಪ್ರತಿಷ್ಟಿತ “ನೃಪತುಂಗ ಸಾಹಿತ್ಯ ಪ್ರಶಸ್ತಿ”ಗೆ ಲೇಖಕಿ ವೈದೇಹಿ ಅವರನ್ನು ಆಯ್ಕೆ ಮಾಡಲಾಗಿದೆ. ರೂ.7 ಲಕ್ಷ ನಗದು ಮತ್ತು ಪ್ರಮಾಣಪತ್ರವನ್ನು ಈ ಪ್ರಶಸ್ತಿ ಒಳಗೊಂಡಿದೆ. ವೈದೇಹಿ ಎಂಬ ಕಾವ್ಯನಾಮದಿಂದ ಖ್ಯಾತರಾಗಿರುವ ಜಾನಕಿ ಶ್ರೀನಿವಾಸಮೂರ್ತಿ, ಕನ್ನಡದ ಪ್ರಮುಖ ಲೇಖಕಿಯವರಲ್ಲಿ ಒಬ್ಬರು. ಸಣ್ಣಕತೆ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ – ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಅವರು ಬರೆದಿದ್ದಾರೆ. ಇವರ ಜೀವಮಾನದ ಸಾಧನೆ ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ತಿಳಿಸಿದ್ದಾರೆ. ಕರ್ನಾಟಕದಲ್ಲೇ ಅತೀ ಹೆಚ್ಚು ನಗದು ಮೊತ್ತ ಒಳಗೊಂಡ ಪ್ರಶಸ್ತಿ ಇದಾಗಿದೆ. ಈ ಪ್ರಶಸ್ತಿಗೆ ಆಯ್ಕೆಯಾದ ಎರಡನೇ ಲೇಖಕಿ ಇವರು. 2012ರಲ್ಲಿ ಲೇಖಕಿ ಸಾರಾ ಅಬೂಬಕರ್ ಆಯ್ಕೆಯಾಗಿದ್ದರು . ಮಯೂರ ವರ್ಮ ಪ್ರಶಸ್ತಿ : ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಗೆ ಗದಗ ಜಿಲ್ಲೆಯ ಗಜೇಂದ್ರಗಡದ…

Read More

27 ಫೆಬ್ರವರಿ 2023, ಮಂಗಳೂರು: “ಸಾನಿಧ್ಯ ವಸತಿಯುತ ಶಾಲೆ ರಾಜ್ಯಕ್ಕೆ ಮಾದರಿ” “ಮಂಗಳೂರಿನ ಸಾನಿಧ್ಯ ವಸತಿಯುತ ಶಾಲೆ ರಾಜ್ಯಕ್ಕೆ ಮಾದರಿ ಎನಿಸುವ ರೀತಿಯಲ್ಲಿ ಕಾರ್ಯಕ್ರಮ ನಿರ್ವಹಿಸುತ್ತಿದೆ. ಇಲ್ಲಿನ ವಿಶೇಷ ಮಕ್ಕಳು ಸಾಮಾನ್ಯ ಮಕ್ಕಳಿಗಿಂತಲೂ ಶ್ರೇಷ್ಠವಾದ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರದರ್ಶಿಸಿರುವುದು ಅಭಿನಂದನೀಯ. ಇದೇ ರೀತಿಯಲ್ಲಿ ರಾಜ್ಯದ ಎಲ್ಲಾ ವಿಶೇಷ ಶಾಲೆಗಳು ಕಾರ್ಯ ನಿರ್ವಹಿಸಬೇಕು” ಎಂದು ಖ್ಯಾತ ವೈದ್ಯರು ಹಾಗೂ ದಕ್ಷಿಣ ಕನ್ನಡ ಗ್ರಹರಕ್ಷಕ ದಳದ ಕಮಾಂಡೆಂಟ್‌ ಆಗಿರುವ ಡಾ. ಮುರಳಿ  ಮೋಹನ್‌ ಚುಂತಾರು ಹೇಳಿದರು. ಮಂಗಳೂರಿನ ಕದ್ರಿ ಉದ್ಯಾನದಲ್ಲಿ ಫೆಬ್ರವರಿ 25-26ರಂದು ಜರುಗಿದ “ಸಾನಿಧ್ಯಉತ್ಸವ” ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಮುರಳಿ ಮೋಹನ್‌ ಚುಂತಾರು ವಿಶೇಷ ಮಕ್ಕಳ ಜೊತೆ ಬಲೂನು ಹಾರಿಸುವ ಮೂಲಕ ನಡೆಸಿಕೊಟ್ಟರು. QEDHR ಕನ್ಸಲ್ಟಿಂಗ್‌ ಕಂಪೆನಿಯ ಸಂಸ್ಥಾಪಕರು ಹಾಗೂ ಮುಖ್ಯಕಾರ್ಯ ನಿರ್ವಾಹಣಾಧಿಕಾರಿಯಾಗಿರುವ ಶ್ರೀಮತಿ ಸುಚಿತ್ರ ರಾಜೇಂದ್ರರವರು ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದರು. ಟೆಥೆರ್ಫಿ ಸಂಸ್ಥೆಯ ಶ್ರೀಮತಿ ಜ್ಯೋತಿಕಾ ಆಳ್ವ, ಲಕ್ಷ್ಮಣ್ ಶೆಣೈ ಹಾಗೂ ಶ್ರೀಮತಿ ಶ್ರೀಜಾ ಇವರು ಸಾನಿಧ್ಯಕ್ಕಾಗಿ ನಿರ್ಮಿಸಿದ “ರೇ…

Read More

27 ಫೆಬ್ರವರಿ 2023, ಮಂಗಳೂರು: ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ ನಾಡೋಜ ಶ್ರೀ ಡಾ ಮಹೇಶ್ ಜೋಷಿ ಅವರು ದ ಕ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಟ್ ಮತ್ತು ವೈದ್ಯಸಾಹಿತಿ ಡಾ.ಮುರಳಲೀ ಮೋಹನ ಚೂಂತಾರ್ ಅವರ ಜತೆ ನಾಡೋಜ ಕಿಞ್ಞಣ್ಣ ರೈ ಸಾಂಸ್ಕೃತಿಕ ಕನ್ನಡ ಅಧ್ಯಯನ ಭವನದ ಉದ್ದೇಶಿತ ನಿವೇಶನವನ್ನು ವೀಕ್ಷಿಸಿದರು ಮತ್ತು ಕಯ್ಯಾರ ಕಿಞ್ಞಣ್ಣ ರೈ ಅವರ ನಿವಾಸಕ್ಕೆ ಫೆಬ್ರವರಿ 26ರಂದು ಭೇಟಿ ನೀಡಿದರು. ಕಯ್ಯಾರ ಕಿಞ್ಞಣ್ಣ ರೈ ಅವರ ಮಕ್ಕಳು ಡಾ.ಪ್ರಸನ್ನ ರೈ , ಶ್ರೀ ಕೃಷ್ಣ ಪ್ರದೀಪ ಮತ್ತು ಕುಟುಂಬದವರು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಸ್ಮಾರಕ ಭವನ ನಿರ್ಮಾಣ, ಭವಿಷ್ಯದಲ್ಲಿ ಅಲ್ಲಿ ಇರಲೇ ಬೇಕಾದ ಪುಸ್ತಕ ಸಂಗ್ರಹಾಲಯ ಮತ್ತು ನಡೆಯಬೇಕಾಗಿರುವ ಸಾಹಿತ್ಯಿಕ ಕಾರ್ಯಕ್ರಮ – ಗಡಿನಾಡಿನಲ್ಲಿ ತನ್ಮೂಲಕ ಕನ್ನಡದ ಚಲನಶೀಲತೆಯ ಅಗತ್ಯಗಳ ಕುರಿತು ತಿಳಿಸಿ ಬೆಂಬಲ ಸೂಚಿಸಿದರು.

Read More

27 ಫೆಬ್ರವರಿ 2023, ಮಂಗಳೂರು: ಸಂಸ್ಕೃತ ಸಾರ್ವತ್ರಿಕ ಭಾಷೆ – ವಿಶ್ವ ಸಂಸ್ಕೃತ ಸಮ್ಮೇಳನದ ಸಮಾರೋಪದಲ್ಲಿ ಭಕ್ತಿ ರಾಘವ ಸ್ವಾಮಿ ಮಹಾರಾಜ್ ಅಭಿಪ್ರಾಯ ಸಂಸ್ಕೃತವು ಯಾವುದೇ ಧರ್ಮಕ್ಕೆ ಸಂಬಂಧಿಸಿದ ಭಾಷೆಯಲ್ಲ, ಇದು ಸಾರ್ವತ್ರಿಕ ಭಾಷೆ. ನಾವು ಆಯ್ಕೆಯಿಂದ ಭರತವರ್ಷದಲ್ಲಿ ಹುಟ್ಟಿಲ್ಲ ಆದರೆ ವೈವಿಧ್ಯಮಯ ಸಂಸ್ಕೃತಿಯೊಂದಿಗೆ ಇಲ್ಲಿ ಹುಟ್ಟಿದ ನಾವು  ಅದೃಷ್ಟವಂತರು ಎಂದು ಕೆನಡಾ ದೇಶದ ಇಸ್ಕಾನ್ ನ ಭಕ್ತಿ ರಾಘವ ಸ್ವಾಮಿ ಮಹಾರಾಜ್ ಹೇಳಿದರು. ಫೆ.26ರಂದು  ಶ್ರೀನಿವಾಸ ವಿಶ್ವವಿದ್ಯಾಲಯದ ಮುಕ್ಕ ಕ್ಯಾಂಪಸ್‌ನಲ್ಲಿ ವಿಶ್ವ ಸಂಸ್ಕೃತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಹೈದರಾಬಾದ್ ನ ತಂತ್ರಜ್ಞ ಹಾಗೂ ಶಿಕ್ಷಣ ತಜ್ಞ ಡಾ.ವಿಠಲ ಜೋಶಿ ಮಾತನಾಡಿ, ಸಂಸ್ಕೃತ ದ ಅರಿವಿಲ್ಲದೇ ಯಾರೂ ಕೂಡ ವಿದ್ವಾಂಸನಾಗಲು‌ ಸಾಧ್ಯವಿಲ್ಲ. ಸಂಸ್ಕೃತ ಆಚರಣೆಗಳ ಭಾಷೆಯಲ್ಲ ಸನಾತನ ಭಾಷೆ ಎಂಬುದನ್ನು ನಾವು ತಿಳಿಯಬೇಕಿದೆ. ಸಂಸ್ಕೃತ ಗೊತ್ತಿದ್ದರೆ ಬೇರೆ ಭಾಷೆಗಳನ್ನು ಕಲಿಯುವುದು ಬಲು ಸುಲಭ ಎಂದರು. ಆಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಸಿಎ.ಎ‌  ರಾಘವೇಂದ್ರ ರಾವ್ ಮಾತನಾಡಿ,…

Read More

26 ಫೆಬ್ರವರಿ 2023, ಮಂಗಳೂರು: ಯಕ್ಷಗಾನ ಸಾಹಿತ್ಯವನ್ನು ಪದ್ಯ, ತಾಳ, ರಾಗ, ಲಯ ಮತ್ತು ಭಾವ ಬದ್ಧವಾಗಿ ಹಾಡಿ ಪ್ರದರ್ಶನಕ್ಕೆ ಪ್ರಧಾನ ಕಾರಣನಾಗುವವನೇ ಭಾಗವತ. ಅವನು ಭಗವಂತನ ಕತೆಗಳನ್ನು ರಂಗಕ್ಕೆ ತಂದು ತೋರಿಸುವವನೂ ಹೌದು. ಆಟ ಅಥವಾ ತಾಳ ಮದ್ದಳೆಯಲ್ಲಿ ಭಾಗವತನು ಮುಖ್ಯ ನಿರೂಪಕನೂ, ನಿರ್ದೇಶಕನೂ ಆಗಿರುತ್ತಾನೆ. ಕಲಾವಿದರ ತಂಡಕ್ಕೆ ಅವನೇ ನಾಯಕ, ಸೂತ್ರಧಾರ ಇಂತಹ ಒಬ್ಬರು ನಾಯಕ, ಸೂತ್ರಧಾರ ಪದ್ಯಾಣ ಗೋವಿಂದ ಭಟ್. ಗಣಪತಿ ಭಟ್ ಹಾಗೂ ಅದಿತಿ ಅಮ್ಮ ಇವರ ಮಗನಾಗಿ 13.12.1968ರಂದು ಜನನ. ಮಾಂಬಾಡಿ ಸುಬ್ರಮಣ್ಯ ಭಟ್ ಇವರ ಯಕ್ಷಗಾನದ ಗುರುಗಳು. ಕಳೆದ ೩೦ ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. ವೀರ ರಸ ಪ್ರಧಾನದ ಎಲ್ಲಾ ಪ್ರಸಂಗಗಳು ನೆಚ್ಚಿನವು ಹಾಗೂ ಬೆಳಗಿನ ಜಾವದ ಯಕ್ಷಗಾನದ ರಾಗಗಳು ನೆಚ್ಚಿನವು. ಕಡತೋಕ, ಪುತ್ತಿಗೆ, ಕುರಿಯ, ಪೂಂಜ ನೆಚ್ಚಿನ ಭಾಗವತರು. ನಿಡ್ಲೆ ನರಸಿಂಹ ಭಟ್, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಪದ್ಯಾಣ ಶಂಕನಾರಾಯಣ ಭಟ್, ಮಿಜಾರು ಮೋಹನ ಶೆಟ್ಟಿಗಾರ್ ಇನ್ನೂ ಅನೇಕರು…

Read More

25 ಫೆಬ್ರವರಿ 2023, ಮಂಗಳೂರು: ಶ್ರೀನಿವಾಸ ವಿಶ್ವ ವಿದ್ಯಾಲಯ ಜ್ಞಾನಸಾಗರ – ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಡಾ. ಸಿಎ. ಎ. ರಾಘವೇಂದ್ರ ರಾವ್‌ ಅಭಿಪ್ರಾಯ. ಜ್ಞಾನ ಎಂಬುದು ಆಹಾರವಿದ್ದಂತೆ. ಜ್ಞಾನವೆಂಬ ಆಹಾರವನ್ನು ಶ್ರೀನಿವಾಸ ವಿಶ್ವ ವಿದ್ಯಾಲಯ ಯಾವ ರೀತಿಯಲ್ಲಿ ಬಂದರೂ ಸ್ವೀಕರಿಸುತ್ತದೆ. ಆದ್ದರಿಂದ  ಶ್ರೀನಿವಾಸ ವಿಶ್ವ ವಿದ್ಯಾಲಯ ಒಂದು ಜ್ಞಾನಸಾಗರವಾಗಿದೆ ಎಂದು ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಿಎ. ಎ. ರಾಘವೇಂದ್ರ ರಾವ್‌ ಹೇಳಿದರು. ಶ್ರೀನಿವಾಸ ವಿಶ್ವವಿದ್ಯಾಲಯ ಆಯೋಜಿಸಿರುವ  ‘ವಿಶ್ವ ಸಂಸ್ಕೃತ ಸಮ್ಮೇಳನ’ದ ೨ನೇ ದಿನವಾದ ಫೆಬ್ರವರಿ ೨೫ ರಂದು ವಿಶ್ವ ವಿದ್ಯಾಲಯದ ಮುಕ್ಕ ಕ್ಯಾಂಪಸ್ನಲ್ಲಿ ಸಮ್ಮೇಳನದ ಸಾರಾಂಶ ಮತ್ತು ತಜ್ಞರ ಅಧಿವೇಶನದ ಅಧ್ಯಕ್ಷತೆವಹಿಸಿ ಮಾತನಾಡಿದರು. ಮಾನವೀಯತೆಗೆ ಭಾರತೀಯ ಜ್ಞಾನ  ಮತ್ತು ಸಂಸ್ಕೃತದ ಕೊಡುಗೆ ಎಂಬ ವಿಷಯದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯವು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ, ಭಾರತ ಸರ್ಕಾರದ ಹಸ್ತಪ್ರತಿಯ ರಾಷ್ಟ್ರೀಯ ಮಿಷನ್, ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್, ನವದೆಹಲಿ, ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್…

Read More

25 ಫೆಬ್ರವರಿ 2023, ಬೆಂಗಳೂರು: ದಿನಾಂಕ 26 ಭಾನುವಾರದಂದು ಇಡೀ ದಿನ ಬೆಂಗಳೂರಿನ ‘ಸಿವಗಂಗ ರಂಗಮಂದಿರ’ದಲ್ಲಿ ಕಾವ್ಯ ಸಂಭ್ರಮ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷರು ಕಪ್ಪಣ್ಣನವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಉತ್ಸವದ ಸರ್ವಾಧ್ಯಕ್ಷರಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ನಾಡಿನ ಖ್ಯಾತ ಕವಿಗಳು ಡಾ.ಚಂದ್ರಶೇಖರ ಕಂಬಾರರು ಹಾಗೂ ನಾಡಿನ ಹೆಸರಾಂತ ಕವಿಗಳು, ಕಲಾವಿದರು, ಹಾಡುಗಾರರು ಆಗಮಿಸುತ್ತಿದ್ದಾರೆ. ಈ ಕಾವ್ಯೋತ್ಸವ ಹಾಗೂ ಅಭಿನಂದನಾ ಸಂಭ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕಾಗಿ ಆಯೋಜಕರು ಕೇಳಿಕೊಂಡಿದ್ದಾರೆ. ಉದ್ಘಾಟನಾ ಸಮಾರಂಭ : ಬೆಳಿಗ್ಗೆ 09-30ರಿಂದ 10-45 ಕಾವ್ಯ ಗಾಯನ -1 ಅಧ್ಯಕ್ಷತೆ : ಡಾ. ಹೆಚ್.ಎಸ್. ವೆಂಕಟೇಶ ಮೂರ್ತಿ ಉದ್ಘಾಟನೆ : ಶ್ರೀ. ಟಿ.ಎನ್. ಸೀತಾರಾಂ ಮುಖ್ಯ ಅತಿಥಿಗಳು : ಶ್ರೀ ವಲ್ಲೀಶ ಶಾಸ್ತ್ರಿ, ಲಾಸ್ ಏಂಜಲೀಸ್, ಅಮೇರಿಕ ಶ್ರೀ ರಮೇಶ್ ಎನ್. ಉಪಸ್ಥಿತಿ : ಶ್ರೀ ಶ್ರೀನಿವಾಸ ಜಿ. ಕಪ್ಪಣ್ಣ ಪ್ರಾಸ್ತಾವಿಕ ಮಾತು : ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ ನಿರೂಪಣೆ : ಬಿ.ವಿ .…

Read More

25 ಫೆಬ್ರವರಿ 2023, ಮಂಗಳೂರು: “ಅನುಭವಕ್ಕೆ ಅಕ್ಷರ ರೂಪ ಕೊಡುವುದು ಮತ್ತು ಅಕ್ಷರಕ್ಕೆ ಅನುಭಾವ ರೂಪ ಕೊಡುವುದೇ ಸಾಹಿತ್ಯ ರಚನೆ” -ವಿವೇಕಾನಂದ ಎಚ್. ಕೆ. 25.02.2023ರಂದು ಕೊಡಿಯಾಲ್ ಬೈಲ್ ನಲ್ಲಿರುವ ವಾತ್ಸಲ್ಯ ಧಾಮದಲ್ಲಿ ಸ್ವರೂಪ ಅಭಿವೃದ್ಧಿ ಶಿಕ್ಷಣ ಯೋಜನೆ 2023 ಹಮ್ಮಿಕೊಂಡ “ಪುಸ್ತಕ ಪ್ರೀತಿ” ಎಂದೂ ಬರೆಯದವರೂ ಬರೆಯಿರಿ ಎಂಬ ಬರಹದ ಕಾರ್ಯಗಾರವನ್ನು ಉದ್ಘಾಟಿಸಿದ ಸೃಜನಶೀಲ ಚಿಂತಕ, ಕ್ರಿಯಾಶೀಲ ಹೋರಾಟಗಾರ ಶ್ರೀ ವಿವೇಕಾನಂದ ಎಚ್.ಕೆ ಹೇಳಿದರು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗುರುರಾಜ ಮಾರ್ಪಳ್ಳಿ , ಸುಮಾಡ್ಕರ್, ಗೋಪಾಡ್ಕರ್ ಮತ್ತು ಸ್ವರೂಪ ರಾಷ್ಟ್ರೀಯ ಶಿಕ್ಷಣ ಯೋಜನೆ -2023 ಇದರ ಶ್ರೀಮತಿ ಕೃಷ್ಣವೇಣಿ ಉಪಸ್ಥಿತರಿದ್ದರು.

Read More