Author: roovari

ಉಡುಪಿ : ಉಡುಪಿಯ ಪಾಡಿಗಾರಿನ ಲಕ್ಷ್ಮೀನರಸಿಂಹ ಉಪಾಧ್ಯ ದಿನಾಂಕ 08 ಮಾರ್ಚ್ 2025ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇವರಿಗೆ 75 ವರ್ಷ ವಯಸ್ಸಾಗಿತ್ತು. ಉಡುಪಿಯ ವಿದ್ಯಾದಾಯಿನಿ ಯಕ್ಷಗಾನ ಮಂಡಳಿಯಲ್ಲಿ ಸ್ತ್ರೀವೇಷಧಾರಿಯಾಗಿ ಕಲಾಸೇವೆಗೈದಿದ್ದ ಇವರು, ಖ್ಯಾತ ಕಲಾವಿದ ಪಡ್ರೆ ಚಂದು ಇವರ ಶಿಷ್ಯರಾಗಿದ್ದರು. ಮಲ್ಪೆ ಶಂಕರನಾರಾಯಣ ಮತ್ತು ಕೊಳ್ಯೂರು ರಾಮಚಂದ್ರ ರಾಯರೊಂದಿಗೆ ಸಹವೇಷಧಾರಿಯಾಗಿ ಅನೇಕ ಪಾತ್ರ ನಿರ್ವಹಿಸಿದ್ದರು. ಕುತ್ಯಾಳ ಮೇಳದ ಪ್ರಧಾನ ಸ್ತ್ರೀವೇಷಧಾರಿಯಾಗಿ ವೇಷ ಮಾಡಿದ್ದ ಇವರು, ಬಳಿಕ ವಿವಿಧ ಮೇಳಗಳಲ್ಲಿ ,ಸಂಘಗಳಲ್ಲಿ ಅತಿಥಿ ಕಲಾವಿದರಾಗಿ ಕಾರ್ಯನಿರ್ವಹಿಸಿದ್ದರು. ಕೆಮ್ತೂರು ದೊಡ್ಡಣ್ಣ ಶೆಟ್ಟಿ ನಾಟಕ ಮಂಡಳಿಯಲ್ಲಿಯೂ ಸ್ತ್ರೀವೇಷಧಾರಿಯಾಗಿ ಪಾತ್ರ ನಿರ್ವಹಿಸಿದ್ದ ಇವರು ಉಡುಪಿಯ ಗೀತಾಂಜಲಿ ಥಿಯೇಟರ್ ನಲ್ಲಿ ಸಹಾಯಕ ಪ್ರಬಂಧಕರಾಗಿ ಕಾರ್ಯನಿರ್ವಹಿಸಿದ್ದರು. ವೈದಿಕರ ಸಹಾಯಕರಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಶ್ರೀಯುತರು ಪತ್ನಿ, ಬಂಧು-ಬಳಗ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Read More

ಮುಳ್ಳೇರಿಯ: ಮುಳ್ಳೇರಿಯಾದ ‘ಕಯ್ಯಾರ ಕಿಂಞಣ್ಣ ರೈ ಸ್ಮಾರಕ ಗ್ರಂಥಾಲಯ’ ಆಯೋಜಿಸಿದ ‘ಕಯ್ಯಾರ ಕೃತಿ ಸಂಚಾರ’ ಎಂಬ ಕಾರ್ಯಕ್ರಮ ದಿನಾಂಕ 07 ಮಾರ್ಚ್ 2025 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕತೆಗಾರ ಹಾಗೂ ವಿಮರ್ಶಕರಾದ ಡಾ. ಸುಭಾಷ್ ಪಟ್ಟಾಜೆ ಮಾತನಾಡಿ “ಮುಳ್ಳೇರಿಯ ಕಯ್ಯಾರರ ಕಾವ್ಯದಲ್ಲಿ ವ್ಯಷ್ಟಿ ಪ್ರಜ್ಞೆಯು ಸಮಷ್ಟಿ ಪ್ರಜ್ಞೆಯಾಗಿ ವಿಸ್ತರಿಸಿಕೊಳ್ಳುತ್ತದೆ. ಬಡವ ಬಲ್ಲಿದರೆಲ್ಲರೂ ಒಂದೇ ಎಂಬ ಸಮಾನತೆಯ ತತ್ವವನ್ನು ಸಾರಿದ್ದಾರೆ. ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸಿದ ಅವರು ತಮ್ಮ ಕವಿತೆಗಳಲ್ಲಿ ದೇಶಭಕ್ತಿಯನ್ನು ಮುಖ್ಯವಾಗಿಟ್ಟುಕೊಂಡಂತೆ ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದಾರೆ. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರ ಗಂಭೀರ ಪರಿಸ್ಥಿತಿಯ ಬಗ್ಗೆ ಕಯ್ಯಾರರು ಹೇಳಿದ ವಿಚಾರಗಳನ್ನು ದೇಶದ ಸಮಸ್ಯೆಗಳ ಹಿನ್ನೆಯಲ್ಲೂ ಪರಿಭಾವಿಸಬಹುದು. ಅವರ ಕವಿತೆಗಳು ಅನುಭವಜನ್ಯವಾಗಿದ್ದು ಪರಿಣಾಮಕಾರಿಯಾಗಿವೆ. ಪ್ರಾದೇಶಿಕ ಸಾಂಸ್ಕೃತಿಕ ಚಿತ್ರಣವನ್ನು ಕೊಡುವುದರೊಂದಿಗೆ ಸಾರ್ವಕಾಲಿಕ ಮೌಲ್ಯಗಳ ಕಡೆಗೆ ಬೆಳಕು ಬೀರುತ್ತದೆ” ಎಂದು ಅಭಿಪ್ರಾಯಪಟ್ಟರು. ಬರಹಗಾರ ರಾಘವನ್ ಬೆಳ್ಳಿಪ್ಪಾಡಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ರಾಧಕೃಷ್ಣ ಉಳಿಯತ್ತಡ್ಕ ಉದ್ಘಾಟಿಸಿದರು. ಲೇಖಕರಾದ ಸುಂದರ ಬಾರಡ್ಕ,…

Read More

ಧಾರವಾಡ : 2024ನೇ ಸಾಲಿನ ರಾಘವೇಂದ್ರ ಪಾಟೀಲ ಕಥಾಪ್ರಶಸ್ತಿಗೆ ಶ್ರೀ ಪ್ರಕಾಶ್ ಪುಟ್ಟಪ್ಪ ಇವರ ‘ಗಾಂಧಿ ಜೋಡಿನ ಮಳಿಗೆ’ ಮತ್ತು ಶ್ರೀ ಮಂಜುನಾಥ್ ಕುಣಿಗಲ್ ಇವರ ‘ದೂರ ದೇಶದ ದೇವರು’ ಕಥಾಸಂಕಲನಗಳ ಹಸ್ತಪ್ರತಿಗಳು ಆಯ್ಕೆಯಾಗಿವೆ. ಈ ಪ್ರಶಸ್ತಿಯು ರೂಪಾಯಿ 20,000 ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನ ಒಳಗೊಂಡಿರುತ್ತದೆ. ಈ ಬಾರಿ 50ಕ್ಕೂ ಅಧಿಕ ಹಸ್ತಪ್ರತಿಗಳು ಬಂದಿದ್ದವು. ಕೊನೆಯ ಹಂತದಲ್ಲಿ ಒಟ್ಟು ಆರು ಹಸ್ತಪ್ರತಿಗಳಿದ್ದವು. ಖ್ಯಾತ ವಿಮರ್ಶಕಿ ಡಾ. ಮಹೇಶ್ವರಿ ಯು. (ಕಾಸರಗೋಡು) ಮತ್ತು ಖ್ಯಾತ ಕಥೆಗಾರ್ತಿ ಶ್ರೀಮತಿ ಮಿತ್ರಾ ವೆಂಕಟರಾಜ್ (ಮುಂಬಯಿ) ಅವರು ತೀರ್ಪುಗಾರರಾಗಿದ್ದರು. ಎಪ್ರಿಲ್ ತಿಂಗಳ ಮೂರನೆಯ ವಾರ ಧಾರವಾಡದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಕಾಶ್ ಪುಟ್ಟಪ್ಪ ತಮ್ಮ ಚೊಚ್ಚಲ ಕಥಾಸಂಕಲನ ಮತ್ತು ಮಂಜುನಾಥ್ ಕುಣಿಗಲ್ ತಮ್ಮ ಎರಡನೆಯ ಕಥಾಸಂಕಲನಕ್ಕೆ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಪಡೆದಿದ್ದಾರೆ.

Read More

ಮೈಸೂರು : ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ (ರಿ). ಮೈಸೂರು. ಆಯೋಜಿಸುವ ಜಾನಪದ ಸಂಭ್ರಮ ಮತ್ತು ನಾಟಕೋತ್ಸವದಲ್ಲಿ ಜಿ. ಪಿ. ಐ. ಇ. ಆರ್ ರಂಗ ತಂಡ ಮೈಸೂರು ಅಭಿನಯಿಸುವ ಜಾನಪದ ನಾಟಕ ‘ಮಂಟೇಸ್ವಾಮಿ ಕಥಾಪ್ರಸಂಗ’ ಪ್ರದರ್ಶನವು ದಿನಾಂಕ 09 ಮಾರ್ಚ್ 2025 ರಂದು ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗಮಂದಿರ ನಡೆಯಲಿದೆ. ಡಾ .ಹೆಚ್. ಎಸ್. ಶಿವಪ್ರಕಾಶ್ ರಚಿಸಿರುವ ಈ ನಾಟಕವನ್ನು ಮೈಮ್ ರಮೇಶ್ ರಂಗಾಯಣ ನೃತ್ಯ ಸಂಯೋಜನೆ, ವಿನ್ಯಾಸ ಮತ್ತು ನಿರ್ದೇಶಿಸಿದ್ದು, ದೇವಾನಂದ, ವರಪ್ರಸಾದ್ ಹಾಗೂ ಅರುಣ್ ಎಂ. ಸಿ.ಸಂಗೀತದಲ್ಲಿ ಸಹಕರಿಸಲಿದ್ದಾರೆ. ವಸ್ತ್ರವಿನ್ಯಾಸ ಹಾಗೂ ಪ್ರಸಾದನದಲ್ಲಿ ದಿವ್ಯಾ ಮಹೇಶ್ ಕಲ್ಲತ್ತಿ ಸಹಕರಿಸಲಿದ್ದು, ರಂಗ ಸಜ್ಜಿಕೆಯಲ್ಲಿ ಶರತ್ ಕುಮಾರ್ ಕೆ. ವಿ ಹಾಗೂ ಬೆಳಕಿನ ಸಂಯೋಜನೆಯಲ್ಲಿ ಅಚ್ಚಪ್ಪ ಸಹಕರಿಸಲಿದ್ದಾರೆ. ‘ಮಂಟೇಸ್ವಾಮಿ ಕಥಾಪ್ರಸಂಗ’ : ಕರ್ನಾಟಕದ ಮಹತ್ವದ ಮೌಖಿಕ ಮಹಾಕಾವ್ಯಗಳಲ್ಲೊಂದಾದ ಮಂಟೇಸ್ವಾಮಿ ಕಾವ್ಯವನ್ನು ದಕ್ಷಿಣ ಕರ್ನಾಟಕದ ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ ಹಾಗೂ ಬೆಂಗಳೂರು ಪ್ರದೇಶಗಳಲ್ಲಿ ಜೀವಂತವಾಗಿರಿಸಿರುವುದು ವೃತ್ತಿಪರ…

Read More

ನಾಪೋಕ್ಲು : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಿತಿ ಹಾಗೂ ಕನ್ನಡ ವಿಭಾಗದ ವತಿಯಿಂದ ಜನಪದೋತ್ಸವ ಕಾರ್ಯಕ್ರಮವು ದಿನಾಂಕ 07 ಮಾರ್ಚ್ 2025 ರಂದು ನಡೆಯಿತು. ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ಉಪನ್ಯಾಸಕರಾದ ಕೆ.ಹರಣಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜನಪದದ ಮಹತ್ವ ಮತ್ತು ಅರಿವನ್ನು ವಿದ್ಯಾರ್ಥಿಗಳಿಗೆ ಮೂಡಿಸಲಾಯಿತು. ಸಭಾಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಸಂಚಾಲಕರಾದ ಡಾ. ಸಹನಾ ದಿನೇಶ್ ಹಾಗೂ ಬೋಧಕ ಬೋಧಕೇತರ ವರ್ಗದವರಿಂದ ಆಯೋಜಿಸಿದ ವಿವಿಧ ಜಾನಪದ ನೃತ್ಯ, ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡು ಜನಪದದ ಸಗಡನ್ನು ಸವಿದರು. ಈ ಸಂದರ್ಭ ಪ್ರಾಂಶುಪಾಲರಾದ ಮನೋಜ್ ಕುಮಾರ್, ಬೋಧಕ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Read More

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು, ಮಡಿಕೇರಿ ಹಾಗೂ ಶ್ರೀಮತಿ ಸುಲೋಚನಾ ಹಾಗೂ ಡಾ. ಎಂ. ಜಿ. ನಾಗರಾಜ್ ದಂಪತಿ ದತ್ತಿ ಇವರ ಸಂಯುಕ್ತ ಆಶ್ರಯದಲ್ಲಿ  ಕೊಡಗು  ಜಿಲ್ಲೆಯ ಸಾಹಿತ್ಯ, ಕಲೆ, ಜಾನಪದ, ಪರಿಸರ ಮತ್ತು ಪುರಾತತ್ವ ಕುರಿತ ವಿಚಾರಗೋಷ್ಠಿ, ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ದಿನಾಂಕ  11 ಮಾರ್ಚ್ 2025ರ ಮಂಗಳವಾರ ಬೆಳಿಗ್ಗೆ ಘಂಟೆ 10.00ರಿಂದ ಮಡಿಕೇರಿಯ ಎಫ್. ಎಂ. ಸಿ. ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾಲಯ ಇಲ್ಲಿನ ಇತಿಹಾಸ ವಿಭಾಗದ ಮಾಜಿ ಮುಖ್ಯಸ್ಥರಾದ ಡಾ. ಕೋಡಿರ ಲೋಕೇಶ್ ಉದ್ಘಾಟಿಸಲಿದ್ದು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಮಾಜಿ ಅಧ್ಯಕ್ಷರಾದ ಟಿ.ಪಿ ರಮೇಶ್ ಪ್ರಾಸ್ತಾವಿಕ ನುಡಿಯನ್ನು ಆಡಲಿದ್ದಾರೆ. ಮುಖ್ಯ ಭಾಷಣಕಾರರಾಗಿ…

Read More

ಕಥೆಗಾರ ರಘುನಾಥ್ ಚ.ಹ. ಇವರ ಇತ್ತೀಚಿನ ಕಥಾಸಂಕಲನ ‘ಇಲ್ಲಿಂದ ಮುಂದೆಲ್ಲ ಕಥೆ’ ಕನ್ನಡ ಕಥಾಲೋಕದಲ್ಲಿ ಒಂದು ಭಿನ್ನ ದಾರಿಯನ್ನು ಹಿಡಿದು ಸಾಗುವ ಕೃತಿ. ಭಿನ್ನ ತಂತ್ರಗಳೊಂದಿಗೆ ಓದುಗನನ್ನು ಬಿಗಿ ಹಿಡಿಯುತ್ತ, ಪ್ರತಿಯೊಂದು ಕಥೆಯೂ ಕೊನೆಯಲ್ಲಿ ನೀಡುವ ಒಂದು ಅನಿರಿಕ್ಷಿತ ತಿರುವು ಕುತೂಹಲವನ್ನು ಬೆಳೆಸುತ್ತ ಹೋಗುತ್ತದೆ. ಯಾವುದೇ ಹಿಂಜರಿಕೆಯಿಲ್ಲದೆ ಮನುಷ್ಯ ಜೀವನದ ವಾಸ್ತವಗಳನ್ನು ಮುಖಕ್ಕೆ ರಾಚುವಂತೆ ಹೇಳುವ ಈ ಕಥೆಗಳು ಒಂದು ಹೊಸ ಅರಿವನ್ನೂ ಮೂಡಿಸುತ್ತವೆ. ಮೊದಲ ಕಥೆ ‘ಬಣ್ಣ’ ನಿರೂಪಕ ಮತ್ತು ಅವನ ಮನೆಗೆ ಬಣ್ಣ ಬಳಿಯುವ ಬಾಬು ಎಂಬವರ ನಡುವೆ ನಡೆಯುತ್ತದೆ. ಇದನ್ನು ಕೊರೋನಾ ಕಾಲದ ಕಥೆಗಳ ಸಾಲಿಗೂ ಸೇರಿಸಬಹುದು. ಕೊರೋನಾ ಮಾರಿ ಎಬ್ಬಿಸಿದ ಬಿರುಗಾಳಿಗೆ ತತ್ತರಿಸಿದ ನಾಲ್ಕು ವರ್ಷದ ಪುಟ್ಟ ಮಗಳನ್ನು ಕಳೆದುಕೊಂಡ ಬಾಬು ಇತರ ಮಕ್ಕಳ ಸುಖದಲ್ಲಿ ಸಮಾಧಾನ ಕಂಡುಕೊಳ್ಳುವ ವೇದಾಂತಿಯಾಗಿದ್ದಾನೆ. ಬಣ್ಣ ಬಳಿದು ಮುಗಿಸುವ ಕೊನೆಯ ದಿವಸ ನಿರೂಪಕನಿಗೆ ತನ್ನ ಮಗಳ ಫೋಟೋ ತೋರಿಸುವಷ್ಟರ ಮಟ್ಟಿಗೆ ಹತ್ತಿರವಾಗಿದ್ದಾನೆ. ನಿರೂಪಕನ ಮನಸ್ಸು ಬಾಬುವಿನ ದುಃಖದೊಂದಿಗೆ – ಅದು…

Read More

ಬೆಂಗಳೂರು : ಬೇವಿನಹಳ್ಳಿಯ ‘ಜಿಗುರು’ ತಂಡದ ‘ಚಿಗುರು ರಂಗೋತ್ಸವ’ದಲ್ಲಿ ದಿನಾಂಕ 9ನೇ ಮಾರ್ಚ್ 2025ರಂದು ಬೆಂಗಳೂರಿನ ಪ್ರೆಸ್ಟೀಜ್ ಸೆಂಟರ್ ಆಫ್ ಪರ್ಫಾಮಿಂಗ್ ಆರ್ಟ್ಸ್ ಇಲ್ಲಿ ‘ರುಮುರುಮುರುಮು’ ಪೂರ್ವಿಕರ ನಾದ ‘ಜಂಗಮ ಕಲೆಕ್ಟಿವ್’ ತಂಡ ತನ್ನ ಮೊದಲ ಪ್ರದರ್ಶನ ನೀಡುತ್ತಿದೆ. ಶಿರಾ ಸೀಮೆಯ ‘ಬೇವಿನಹಳ್ಳಿ’ಯ ಅಪ್ರತಿಮ ಅರೆ ಮತ್ತು ನಾದಸ್ವರದ ಕಲಾವಿದರು ತಮ್ಮ ಕಲೆ ಮತ್ತು ಬದುಕಿನ ಅನುಭವಗಳನ್ನು ಬೆಸದುಕೊಂಡು ಕಟ್ಟಿರುವ ವಿಶೇಷ ಪ್ರಯೋಗ. ಹೊಸ ತಲೆಮಾರಿನ ಅನನ್ಯ ನಟಿ, ಬರಹಗಾರ್ತಿ, ಸಿನಿಮಾ ನಿರ್ದೇಶಕಿ ‘ ಶ್ರದ್ದಾ ರಾಜ್’ ಇವರು ತಿಂಗಳ ಕಾಲ ಬೇವಿನಹಳ್ಳಿಯಲ್ಲಿ ಇದ್ದು ವಿಭಿನ್ನ ಪ್ರಕ್ರಿಯೆಯಲ್ಲಿ ಈ ನಾಟಕವನ್ನು ಕಟ್ಟಿದ್ದಾರೆ. ತಳ ಸಮುದಾಯಗಳ ಕಲೆ ಮತ್ತು ಕಲಾವಿದರ ಜೊತೆಗಿನ ಒಡನಾಟವನ್ನು ಒಂದು ಸಾಂಸ್ಕೃತಿಕ ಚಳುವಳಿಯೆಂದು ಭಾವಿಸಿ ಜಂಗಮ ತಂಡ ಹಿಂದೆ ‘ಕೇರಿ ಹಾಡು’ ಪ್ರಯೋಗವನ್ನು ಮಾಡಿತ್ತು. ಚಂದ್ರಶೇಕರ್ ಇವರು ದಿಂಡಗೂರಿನ ‘ಸಾವಿತ್ರಿ ಬಾಫುಲೆ ಮಹಿಳಾ ಸ್ವಸಹಾಯ ತಂಡ’ಕ್ಕೆ ಅದನ್ನು ನಿರ್ದೇಶಿಸಿದ್ದರು. ಪ್ರಸ್ತುತ ಅರೆಯ ನಾದ ಮತ್ತು ಬದುಕಿನ ‘ರುಮುರುಮುರುಮು’ ಜಂಗಮ…

Read More

ನೋಯ್ಡ : ಉತ್ತರ ಭಾರತದ ಅಮಿಟಿ ವಿಶ್ವವಿದ್ಯಾನಿಲಯ ನೋಯ್ಡದಲ್ಲಿ ದಿನಾಂಕ 03 ಮಾರ್ಚ್ 2025ರಿಂದ 07 ಮಾರ್ಚ್ 2025ರವರೆಗೆ ನಡೆದ 38ನೇ ಅಖಿಲ ಭಾರತ ವಿಶ್ವವಿದ್ಯಾನಿಲಯಗಳ ಅಂತರ್ ವಿ.ವಿ. ರಾಷ್ಟ್ರೀಯ ಸಾಂಸ್ಕೃತಿಕ ಯುವಜನೋತ್ಸವದಲ್ಲಿ ಹಿಂದು ವಿದ್ಯಾದಾಯಿನಿ ಸಂಘ (ರಿ.) ಸುರತ್ಕಲ್‌ ಇದರ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. ಮಂಗಳೂರು ವಿ.ವಿ.ಯನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿ ಪ್ರಹಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದು, ನಿರ್ಮಿಕಾ ಎನ್. ಸುವರ್ಣ, ಭರತ್, ಜಿತಿನ್‌ ಜೆ. ಶೆಟ್ಟಿ, ಚಿರಾಗ್, ಜ್ಞಾನೇಶ್‌ ಎಲ್. ಶೆಟ್ಟಿ, ವೈಭವಿ, ಹಿತಾ ಉಮೇಶ್‌ ಇವರು ಭಾಗವಹಿಸಿದ್ದರು. ಹಿಮಾಂಗಿ ಡಿ. ಉಳ್ಳಾಲ್ ತಬ್ಲಾ ಸೋಲೋ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಸಾಂಸ್ಕೃತಿಕ, ಶೈಕ್ಷಣಿಕ, ಸಾಹಿತ್ಯ ಮತ್ತು ಕ್ರೀಡಾ ಕ್ಷೇತಗಳಲ್ಲಿ ನಿರಂತರವಾಗಿ ಅಭೂತ ಪೂರ್ವ ದಾಖಲೆಗಳನ್ನು ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿಗಳು ನಿರ್ಮಿಸುತ್ತಿದ್ದು, ಅನೇಕ ಪ್ರತಿಷ್ಠಿತ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

Read More

ಬೆಂಗಳೂರು : ಕ್ರಾನಿಕಲ್ಸ್ ಆಫ್ ಇಂಡಿಯಾ ಅಭಿನಯಿಸುವ ಗಣೇಶ್ ಮಂದಾರ್ತಿ ಇವರ ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಶಿವೋಹಂ’ ನಾಟಕ ಪ್ರದರ್ಶನವನ್ನು ದಿನಾಂಕ 11 ಮಾರ್ಚ್ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರು ಜೆ.ಪಿ. ನಗರದ ರಂಗಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8867419347, 9845384528 ಮತ್ತು 9740145042 ಸಂಖ್ಯೆಯನ್ನು ಸಂಪರ್ಕಿಸಿರಿ. ನಾಟಕದ ಬಗ್ಗೆ : ಏಕ ಕಾಲಕ್ಕೆ ಇದೊಂದು ಪೌರಾಣಿಕ ಮತ್ತು ಸಾಮಾಜಿಕ ನಾಟಕ. ಇಲ್ಲಿ ಎರಡು ಕಥಾಹಂದರವಿದೆ. ಒಂದು ಶಿವನ ಪುರಾಣ ಕತೆಗಳದ್ದು ; ಇನ್ನೊಂದು – ಶಿವನ ಪಾತ್ರಧಾರಿಯ, ಊರಿನ ಕತೆ. ಶಿವ ನಮ್ಮ ನಾಡಿನ ಪುರಾತನ ಪ್ರತಿಮೆ, ಆತ ತಳಸಮುದಾಯದವರ ದೇವರು. ಶಿವನಿಗೆ ನಟಶೇಖರನೆಂಬ ಹೆಸರಿದೆ ಹಾಗೂ ಕಾಮನನ್ನೇ ಸುಡುವ ಯೋಗಿ – ಶಿವ ದಾಕ್ಷಾಯಿಣಿಯ ಹೆಣ ಹೊತ್ತು ತಿರುಗುವ ಕಡುಮೋಹಿ ಕೂಡ. ಆತ ಎರಡು extreme ( ಭವ-ಪರ )ಗಳಲ್ಲಿ ತೀವ್ರವಾಗಿ ಬದುಕುವವ. ಅವನ ಭವದ ಪರಿಪಾಟಲುಗಳ, ಪ್ರೇಮದ, ಕುಟುಂಬದ ಕತೆಗಳನ್ನಷ್ಟೇ ನಾವಿಲ್ಲಿ ಆರಿಸಿದ್ದೇವೆ. ಇಲ್ಲಿ…

Read More