Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಉಡುಪಿಯ ತುಳುಕೂಟದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ನೀಡಲಾದ ಪಣಿಯಾಡಿ ಕಾದಂಬರಿ ಪ್ರಶಸ್ತಿಯನ್ನು ದಿನಾಂಕ 28-05-2023 ಭಾನುವಾರ ಕಿದಿಯೂರು ಹೋಟೆಲ್‌ನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ 28ನೇ ದಿವಂಗತ ಎಸ್.ಯು. ಪಣಿಯಾಡಿ ಕಾದಂಬರಿ ಪ್ರಶಸ್ತಿಯನ್ನು ಕನ್ನಡ-ತುಳು ಸಾಹಿತಿ ಯಶೋದಾ ಮೋಹನ್ ಇವರ ‘ದೇರಮಾಮುನ ದೂರನೋಟೊಲು’ ಕೃತಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಾಸಕ ಯಶಪಾಲ್ ಎ. ಸುವರ್ಣ ಅವರು ಯಶೋದಾ ಮೋಹನ್ ಬರೆದಿರುವ ‘ದೇರಮಾಮುನ ದೂರನೋಟೊಲು’ ಕಾದಂಬರಿಯನ್ನು ಬಿಡುಗಡೆಗೊಳಿಸಿ, ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, “ತುಳು ಭಾಷೆಗೆ ಮಾನ್ಯತೆ ಸಿಗುವ ನಿಟ್ಟಿನಲ್ಲಿ ಸಾಕಷ್ಟು ಬೇಡಿಕೆ, ಹೋರಾಟಗಳು ನಡೆಯುತ್ತಿದ್ದು, ತುಳು ಭಾಷೆಗೆ ನ್ಯಾಯ ಸಿಗುವ ಕೆಲಸ ಮಾಡುವೆ. ತುಳುನಾಡಿನಲ್ಲಿ ಹುಟ್ಟಿ ತುಳುಕೂಟದ ಸದಸ್ಯನಾಗಿರುವ ನಾನು ನಿಮ್ಮೆಲ್ಲರ ಋಣ ತೀರಿಸುವ ಕೆಲಸ ಮಾಡುತ್ತೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ, ಆಶೀರ್ವಾದ ಬೇಕಿದೆ” ಎಂದರು. ಜಾನಪದ ವಿದ್ವಾಂಸ ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ.ಗಣನಾಥ ಎಕ್ಕಾರ್ ಕೃತಿ ಪರಿಚಯ ಮಾಡುತ್ತಾ “ತುಳುನಾಡು ಸಂಸ್ಕೃತಿ ಮತ್ತು…
ಐದು ಬತ್ತಿಯಿರಿಸಿ ಸಾಲಾಗಿ ಉರಿಸಿಟ್ಟ ತುಪ್ಪದ ದೀಪಗಳು. ಮೂಲೆಯೊಂದರಲ್ಲಿ ನಡುಗುತ್ತಾ ಕುಳಿತ ಇಟ್ಟಿಚ್ಚಿರಿ. ವಿವಾಹಾನಂತರದ ಪ್ರಸ್ತಕ್ಕೆ ಸಿದ್ಧವಾಗಿರುವ ನವವಧುವಿನ ಮಧುರವಾದ, ವರ್ಣನಾತೀತವಾದ ನಡುಕವಿರಬಹುದು. ತಳಮಳವಿರಬಹುದು. ನಡುಕ ಹೆಚ್ಚಾಯಿತು. ನೊರೆಯೂ ಜೊಲ್ಲೂ ಉಕ್ಕತೊಡಗಿತು. ನೆಲದ ಮೇಲೆ ಬಿದ್ದು ಬಿಲ್ಲಿನಂತೆ ಡೊಂಕಾದಳು. ಸೊಂಟ ಮುರಿದ ಹುಳದಂತೆ ಹೊರಳಿದಳು.ಚಡಪಡಿಸಿದಳು.ಕ್ರಮೇಣ ಬೆವರಿನಲ್ಲಿ ಮಿಂದು ಕ್ಷೀಣಿಸಿ ನಿದ್ದೆ ಹೋದಳು. ಪ್ರಸ್ತ ಅದ್ಭುತವಾಗಿತ್ತು! ಇದು ಇಟ್ಟಿಚ್ಚಿರಿಯ ಪ್ರಸ್ತ. ಮೇಲ್ನೋಟಕ್ಕೆ ಅದ್ಭುತವಾದ ಪ್ರಸ್ತದ ಒಳಾರ್ಥ ಅರಿವಾಗುವುದೇ ಅಶ್ವತ್ಥಾಮನನ್ನು ಓದುತ್ತಾ ಸಾಗಿದಾಗ. ಅಪಸ್ಮಾರ ರೋಗಿಯೊಬ್ಬಳ ಮೊದಲ ರಾತ್ರಿಯ ನೋವನ್ನು ಹೇಳಿಯೂ ಹೇಳದಂತೆ ಓದುಗನ ಮನಕ್ಕಿಳಿಸುವ ನಾ.ದಾಮೋದರ ಶೆಟ್ಟಿಯವರು ಅನುವಾದಿಸಿದ ಮಾಡಾಂಬ್ ಕುಂಞಕುಟ್ಟನ್ ಅವರ ಅಶ್ವತ್ಥಾಮನ್ ಕಾದಂಬರಿಯ ಸಾಲುಗಳು. ತಪ್ಪುಗಳೇ ಮಾಡಲಿಲ್ಲವೆಂದು ಸರಾಗವಾಗಿದ್ದುಬಿಡುವ ಕಾದಂಬರಿಯ ನಾಯಕ ಕುಂಜಿಣ್ಣಿ ಕೊನೆಗೆ ಪ್ರಾಯಶ್ಚಿತದೊಳಗೆ ಬೇಯುವನೋ ಎಂದೆನಿಸಿದಾಗಲೇ ಇಲ್ಲ ಆತ ಬದಲಾಗಿಲ್ಲ ಎಂಬಂತೆ ಅಲ್ಲಲ್ಲಿ ಹೇಳಿದರೂ ಕೊನೆಗೆ ಮಹಾಭಾರತದ ಅಶ್ವತ್ಥಾಮನಂತೆ ತಪ್ಪಿನ ವ್ರಣಗಳು ಕೀವಾಗಿ, ನೋವಾಗಿ ಕಾಡತೊಡಗಿದಾಗ ಊರನ್ನೇ ಬಿಟ್ಟು ತೊರೆಯುವ ಆತನ ತೊಳಲಾಟಗಳ ಎಳೆಯೇ ಅಶ್ವತ್ಥಾಮ. ಪ್ರತೀಕಾರಕ್ಕೋ,…
ಮಸ್ಕತ್ : ಬಿರುವ ಜವನೆರ್ ಮಸ್ಕತ್ ಇವರು ಒಮಾನ್ ಮಸ್ಕತ್ ನ ಧಾರ್ ಸೈಟ್ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಆಯೋಜಿಸಿದ ಪೂಜಾ ಸಹಿತ ‘ಶ್ರೀ ಶನೀಶ್ವರ ಮಹಾತ್ಮೆ- ವಿಕ್ರಮಾದಿತ್ಯ ವಿಜಯ’ ಯಕ್ಷಗಾನ ತಾಳಮದ್ದಳೆ ನೆರೆದ ಸಾವಿರಾರು ತುಳುವರನ್ನು ರಂಜಿಸಿತು. “ಪೂಜ್ಯ ಶಿರಡಿ ಸಾಯಿ ಬಾಬಾ, ಶ್ರೀ ನಿತ್ಯಾನಂದ ಗುರುಕೃಪೆಯಿಂದ ಬಿರುವ ಜವನೆರ್ ಮಸ್ಕತ್ ಸಂಯೋಜಿಸುವ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗುತ್ತಿವೆ” ಎಂದು ಸಂಘಟನೆಯ ಗುರುಪ್ರಸಾದ್ ರಾಮ ಅಮೀನ್ ನಾನಿಲ್ ಅವರು ದ್ವಿತೀಯ ಬಾರಿ ಮಸ್ಕತ್ ನಲ್ಲಿ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ ನಡೆಸಿಕೊಟ್ಟ ಶ್ರೀ ಶನೀಶ್ವರ ಭಕ್ತ ವೃಂದದ ಕಲಾವಿದರನ್ನು ಅಭಿನಂದಿಸಿದರು. 2018ರಲ್ಲಿಯೂ ಜನ ಮನ ರಂಜಿಸಿದ್ದ ಈ ತಂಡ ಈ ಬಾರಿ ಮಸ್ಕತ್ ನಲ್ಲಿ ಅಪೂರ್ವ ದಾಖಲೆ ಸೃಷ್ಟಿಸಿದೆ ಎಂದು ನುಡಿದರು. ಶಂಕರ್ ಉಪ್ಪೂರು, ಚಂದ್ರಕಾಂತ್ ಕೋಟ್ಯಾನ್, ಲೋಕೇಶ್ ಕುಂದರ್ ದಂಪತಿಗಳು ಸೇವಾ ಸಂಕಲ್ಪ ಮಾಡಿದರು. ವೃತ್ತಿ ಹಾಗೂ ಹವ್ಯಾಸಿ ಅನುಭವಿ ಕಲಾವಿದರ ಸಮಾಗಮದಲ್ಲಿ ನಡೆದ ಚಾರಿತ್ರಿಕ ಶನಿ ಪೂಜೆಯಲ್ಲಿ…
ಉಡುಪಿ : ದಿನಾಂಕ 13-05-2023ರಂದು ಸಂಜೆ ಮಿತ್ರಮಂಡಳಿ ಕೋಟ ವತಿಯಿಂದ ಪ್ರೊ. ಉಪೇಂದ್ರ ಸೋಮಯಾಜಿಯವರ ಮನೆಯಂಗಳದಲ್ಲಿ ಶ್ರೀಲೋಲ ಸೋಮಯಾಜಿಯವರ ಧಾರವಾಡದ ರಾಘವೇಂದ್ರ ಪಾಟೀಲ ಕಥಾಸಪ್ರಶಸ್ತಿ-2022 ವಿಜೇತ ಕೃತಿ ‘ನ ಪ್ರಮದಿತವ್ಯಮ್’ ಲೋಕಾರ್ಪಣೆಗೊಂಡಿತು. ವಿಜ್ಞಾನಿ ನಾಡೋಜ ಶ್ರೀ ಕೆ.ಪಿ.ರಾಯರು ಕೃತಿ ಬಿಡುಗಡೆ ಮಾಡಿದರು. ಡಾ. ಅನಿಲ ಕುಮಾರ್ ಶೆಟ್ಟಿಯವರು ಪುಸ್ತಕ ಪರಿಚಯ ಮಾಡುತ್ತಾ “ಬಾಲ್ಯದಲ್ಲಿ ಪರಿಸರದಿಂದ ಗಾಢವಾದ ಅನುಭವಗಳಿಗೆ ಸಮಕಾಲೀನ ಸಂದರ್ಭಗಳು ಅನುಕೂಲಕರವಾಗಿ ಮೇಳೈಸಿದಾಗ ಪರಿಣಾಮಕಾರಿಯಾದ ಕತೆಗಳು ಹುಟ್ಟುತ್ತವೆ ಎಂಬುದಕ್ಕೆ ಈ ಕೃತಿ ಸಾಕ್ಷಿ” ಎಂದರು. ಇದೇ ಸಂದರ್ಭದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಪುಸ್ತಕ ಪ್ರಕಾಶಕ ಮೈಸೂರಿನ ಸಂಸ್ಕೃತಿ ಸುಬ್ರಹ್ಮಣ್ಯರನ್ನು ಗೌರವಿಸಲಾಯಿತು. ಧಾರವಾಡದ ರಾಘವೇಂದ್ರ ಪಾಟೀಲ ಕಥಾ ಸ್ಪರ್ಧೆಯ ಪ್ರಥಮ ಬಹುಮಾನಿತ ಕೃತಿ ‘ನ ಪ್ರಮದಿತವ್ಯಮ್’ ಕಥಾಸಂಕಲನದಲ್ಲಿಯ ಸಂಗೀತ ಸಂಬಂಧಿ ಕತೆಯೊಂದು ತನ್ನ ಪದುಮನಾಭನ ಧ್ಯಾನದಲ್ಲಿಯ ಒಂದು ಪ್ರಸಂಗಕ್ಕೆ ಸಂವಾದಿಯಾಗಿದೆ ಎಂದು ಕೃತಿ ಬಿಡುಗಡೆ ಮಾಡಿದ ನಾಡೋಜ ಕೆ.ಪಿ.ರಾಯರು ಸ್ಮರಿಸಿಕೊಂಡರು. ಸಾಹಿತಿ ಚಿತ್ರಪಾಡಿ ಪ್ರೊ. ಉಪೇಂದ್ರ ಸೋಮಯಾಜಿಯವರ ಮನೆಯಂಗಳದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ…
ಪುತ್ತೂರು; ಪುತ್ತೂರು ತಾಲೂಕು ಸವಣೂರು ಸಮೀಪದ ಇಡ್ಯಾಡಿ ಶ್ರೀಮತಿ ಮತ್ತು ಶ್ರೀ ಯೋಗೀಶ್ ರವರು ನೂತನವಾಗಿ ನಿರ್ಮಿಸಿದ ‘ಮಧು ಶ್ರೀ’ ನಿಲಯದಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಇದರ ವತಿಯಿಂದ ದಿನಾಂಕ 29.05.2023ರಂದು ‘ಶರಘಾತ’ ಪ್ರಸಂಗದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಆನಂದ ಸವಣೂರು, ತಾರಾನಾಥ ಸವಣೂರು, ಬಾಲಕೃಷ್ಣ ಬೊಮ್ಮಾರು, ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ (ಕಿಶೋರಿ ದುಗ್ಗಪ್ಪ ನಡುಗಲ್ಲು), ವಾಲಿ (ಶುಭಾ ಜೆ.ಸಿ. ಅಡಿಗ) ಸುಗ್ರೀವ (ಹರಿಣಾಕ್ಷೀ ಜೆ. ಶೆಟ್ಟಿ) ಸಹಕರಿಸಿದರು. ಆನಂದ ಸವಣೂರು ಸ್ವಾಗತಿಸಿ, ಯೋಗೀಶ್ ಇಡ್ಯಾಡಿ ವಂದಿಸಿದರು.
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಮಹಿಳೆಯರ ಕನ್ನಡದ ಶ್ರೇಷ್ಠ ಕೃತಿಗಳಿಗೆ 2022 ನೇ ಸಾಲಿನ “ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ”ಕ್ಕೆ ಕೃತಿಗಳನ್ನು ಆಹ್ವಾನಿಸಲಾಗಿದೆ. ಮೂರು ಅತ್ಯುತ್ತಮ ಕೃತಿಗಳನ್ನು ಆಯ್ಕೆಮಾಡಿ, ಪ್ರತಿಯೊಂದು ಕೃತಿಗೂ ರೂ. 15,000(ಹದಿನೈದು ಸಾವಿರ)ವನ್ನು ಬಹುಮಾನ ನೀಡಿ ಗೌರವಿಸಲಾಗುವುದು. ನಿಯಮಗಳು 1. ಈ ಬಹುಮಾನಕ್ಕೆ ಮಸ್ತಕಗಳನ್ನು ಲೇಖಕಿಯರು ಮಾತ್ರ ಕಳುಹಿಸಬೇಕು. 2. ಕನ್ನಡ ಕೃತಿಗಳಿಗೆ ಮಾತ್ರ ಬಹುಮಾನ ಇರುವುದು. 3. ಅನುವಾದ ಕೃತಿಗಳಿಗೆ ಅವಕಾಶ ಇರುವುದಿಲ್ಲ. 4. ಬಹುಮಾನಕ್ಕೆ ಕಳುಹಿಸುವ ಕೃತಿಯು 01.01.2022 ರಿಂದ 31.12.2022 ರ ಒಳಗೆ ಪ್ರಕಟವಾದದ್ದಾಗಿರಬೇಕು. 5. ಪ್ರತಿಯೊಂದು ಕೃತಿಯ 9 ಪ್ರತಿಗಳನ್ನು ಕಳುಹಿಸಬೇಕು. 6. ಒಬ್ಬರು ಒಂದಕ್ಕಿಂತ ಹೆಚ್ಚು ಕೃತಿಗಳನ್ನುಕಳುಹಿಸಬಹುದಾದರೂ ಅವರ ಒಂದು ಕೃತಿಗೆ ಮಾತ್ರ ಬಹುಮಾನ ಕೊಡಲಾಗುವುದು. 7. ಲೇಖಕಿಯರು ತಮ್ಮ ಪರಿಚಯವನ್ನು ಸಂಕ್ಷಿಪ್ತವಾಗಿ ಸ್ವಹಸ್ತಾಕ್ಷರದಲ್ಲಿ ಬರೆದು, ಭಾವಚಿತ್ರದೊಂದಿಗೆ ಸಂಪರ್ಕ ಸಂಖ್ಯೆ ಸಮೇತ ಕಳುಹಿಸಬೇಕು. 8. ಪ್ರಕಾಶಕರು ಪುಸ್ತಕಗಳನ್ನು ಸಲ್ಲಿಸಿದರೂ, ಬಹುಮಾನ ಬಂದಲ್ಲಿ ಅದನ್ನು ಲೇಖಕಿಯರಿಗೇ ನೀಡಲಾಗುವುದು. 9.…
ಉಡುಪಿ: ಕೋಟೇಶ್ವರ ಎನ್.ಆರ್.ಎ.ಎಂ.ಎಚ್ ಪ್ರಕಾಶನ ಮತ್ತು ’ಸ್ಥಿತಿಗತಿ’ ತ್ರೈಮಾಸಿಕ ಪತ್ರಿಕೆ ಆಶ್ರಯದಲ್ಲಿ ದಿ.ಪಾಂಡೇಶ್ವರ ಸೂರ್ಯನಾರಾಯಣ ಚಡಗ ನೆನಪಿನಲ್ಲಿ ನೀಡುವ ಕಾದಂಬರಿ ಪ್ರಶಸ್ತಿಗೆ 2022ರಲ್ಲಿ ಪ್ರಕಟವಾದ ಕಾದಂಬರಿಗಳನ್ನು ಲೇಖಕ ಅಥವಾ ಪ್ರಕಾಶಕರಿಂದ ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಕೃತಿಯ ಮೂರು ಪ್ರತಿಗಳನ್ನು ಸ್ಪರ್ಧೆ ಸಂಚಾಲಕ ಪ್ರೊ. ಉಪೇಂದ್ರ ಸೋಮಯಾಜಿ, ‘ಶ್ರೀ’ ಚಿತ್ರಪಾಡಿ, ಅಂಚೆ: ಸಾಲಿಗ್ರಾಮ, ಉಡುಪಿ ಜಿಲ್ಲೆ-575225 (ಸಂಪರ್ಕ ಸಂಖ್ಯೆ :9740842722) ಅವರಿಗೆ ಆಗಸ್ಟ್ 30ರೊಳಗೆ ತಲುಪುವಂತೆ ಕಳಿಸಿಕೊಡಬೇಕು ನವೆಂಬರ್ ತಿಂಗಳಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಿತಿ ಅಧ್ಯಕ್ಷ ಡಾ.ಭಾಸ್ಕರ ಆಚಾರ್ಯ ತಿಳಿಸಿದ್ದಾರೆ.
ಮೈಸೂರು: ನಟನ ರಂಗಶಾಲೆಯಲ್ಲಿ ರಂಗಭೂಮಿ ‘ಡಿಪ್ಲೊಮಾ 2023-24’ ಪ್ರವೇಶ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಲಾಗಿದ್ದು ಒಂದು ವರ್ಷದ ಅಭಿನಯ ಮತ್ತು ರಂಗ ತರಬೇತಿಯ ಪ್ರವೇಶ ಪ್ರಕ್ರಿಯೆ ಮತ್ತು ಸಂದರ್ಶನ ಜೂನ್ 11 ರಂದು ನಡೆಯಲಿದೆ. ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರ ಕ್ರಿಯಾಶೀಲವಾಗಿದ್ದು ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ, ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ಸತತವಾಗಿ ಪ್ರಯತ್ನ ಶೀಲವಾಗಿದೆ. ತನ್ನ ಚಟುವಟಿಕೆಯ ಭಾಗವಾಗಿ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಮಾನ್ಯತೆಯಡಿಯಲ್ಲಿ 16ರಿಂದ 30ವರ್ಷದ ಒಳಗಿನ ಆಸಕ್ತ ಯುವಕ ಯುವತಿಯರಿಗೆ ಒಂದು ವರ್ಷದ ರಂಗಭೂಮಿ ಡಿಪ್ಲೊಮಾ ಕೋರ್ಸ್ ಅನ್ನು ನಡೆಸುತ್ತಿದ್ದು, 2023-24ನೇ ಸಾಲಿನ ಪ್ರವೇಶ ಪ್ರಕ್ರಿಯೆ ಮತ್ತು ಅಭ್ಯರ್ಥಿಗಳ ಸಂದರ್ಶನ ದಿನಾಂಕ 11-06-2023 ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಡೆಯಲಿದೆ. ಪ್ರತಿದಿನ ಸಂಜೆ 5.30ರಿಂದ 9ರ ವರೆಗೆ ತರಗತಿಗಳು ನಡೆಯಲಿದ್ದು, ಅಭಿನಯ, ರಂಗ ಸಿದ್ಧಾಂತ, ರಂಗ ಸಂಗೀತ, ಆಂಗಿಕ ಚಲನೆ,…
ಮಂಜೇಶ್ವರ: ಬಾಕುಡ ಸಮಾಜ ಕೇಂದ್ರ ಸಮಿತಿಯ ನೇತೃತ್ವದಲ್ಲಿ ರಂಗ ಚೇತನ ಕಾಸರಗೋಡು ಇದರ ಸಹಬಾಗಿತ್ವದಲ್ಲಿ GWLPS ಮಂಜೇಶ್ವರ ಶಾಲೆಯಲ್ಲಿ ಮೇ 12 ಮತ್ತು 13 ರಂದು ದ್ವಿದಿನ ಸಹವಾಸ ಶಿಬಿರ ಜರಗಿತು. ಬಾಕುಡ ಸಮುದಾಯದ ಹದಿನೆಂಟು ದೈವಸ್ಥಾನಗಳ ದೈವದ ಪಾತ್ರಿಗಳು ದೀಪ ಪ್ರಜ್ವಲನೆಯನ್ನು ಮಾಡುವುದರೊಂದಿಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಕಾರ್ಯಕ್ರಮ ದ ಉದ್ಘಾಟನೆಯನ್ನು ಹಿರಿಯ ಸಾಮಾಜಿಕ ಮುಂದಾಳು ವಿಜಯ್ LIC ಅಂಬ್ಲಮೊಗರು ಸತ್ಯದ ಬೊಲ್ಪು ಫೋಟೋವನ್ನು ಅನಾವರಣ ಗೊಳಿಸಿ ಶಿಬಿರ ನಿರ್ದೇಶಕರಾದ ಅಶೋಕ್ ಕೊಡ್ಲಮೊಗರು ರವರಿಗೆ ಹಸ್ತಾಂತರಿಸುವುದರೊಂದಿಗೆ ಶಿಬಿರಕ್ಕೆ ಚಾಲನೆ ನೀಡಿದರು. ಬಾಕುಡ ಸಮಾಜ ಕೇಂದ್ರ ಸಮಿತಿಯ ಅಧ್ಯಕ್ಷರಾದ ವಿಜಯ್ ಪಂಡಿತ್ ಮಂಗಲ್ಪಾಡಿ ಇವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೃಷ್ಣವೇಣಿ ಟೀಚರ್,ಸದಾಶಿವ ಬಾಲಮಿತ್ರ ,ದೈವದ ಪಾತ್ರಿಗಳಾದ ಬಾಸ್ಕರನ್ ಪಚ್ಲಂಪಾರೆ,ಅಡ್ವಕೇಟ್ ಭರತ್ ರಾಜ್ ಅಟ್ಟೆಗೋಳಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಏಕಾನಂದ ಮಂಗಳೂರು, ಚಂದ್ರಶೇಖರ ಅಂಗಡಿಪದವು,ವಿಠಲ ನಾರಾಯಣ ಬಂಬ್ರಾಣ ಮೊದಲಾದವರು ಉಪಸ್ಥಿತರಿದ್ದರು.ಮಹಿಳಾ ಸಮಿತಿಯ ಅಧ್ಯಕ್ಷರಾದ ಸುಮಂಗಳ ಪೊಸೋಟ್ ಮತ್ತು ಸುಮಿತ್ರಾ ಬ0ಬ್ರಾಣ…
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು, ಶ್ರೀ ಧಮಸ್ಥಳ ಮಂಜುನಾಥೇಶ್ವರ ತುಳುಪೀಠ, ಶ್ರೀ ಸಂಸ್ಥಾನ ಒಡಿಯೂರು ತುಳು ಅಧ್ಯಯನ ಕೇಂದ್ರ ಮತ್ತು ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು ಇವರ ಸಹಯೋಗದೊಂದಿಗೆ “ಗೇನದ ಗೆಜ್ಜೆ – ನೂದನೆ ಪಜ್ಜೆ’ ಹಾಗೂ ‘ತ್ರಿಂಶತಿ ತಿರುಳು’ ಮತ್ತು ‘ಅಪ್ಪೆ ಅಂಜನೆ’ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ :01-06-2023ರಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ. ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನಮ್ ಇಲ್ಲಿಯ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮವು ಮಂಗಳೂರು ವಿ.ವಿ.ಯ ಗೌರವಾನ್ವಿತ ಕುಲಪತಿಯಾದ ಪ್ರೊ. ಪಿ.ಎಸ್. ಯಡಪಡಿತ್ತಾಯ ಇವರ ಅಧ್ಯಕ್ಷತೆಯಲ್ಲಿ ಹಾಗೂ ಮಂಗಳೂರಿನ ವಿ.ವಿ. ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀದೇವಿ ಎಲ್., ವಂಡಾರಿನ ಎನ್.ವೈ.ಟಿ.ಯ ಸ್ಥಾಪಕ್ಷಾಧ್ಯಕ್ಷರಾದ ಶ್ರೀ ಗೋವಿಂದ ವಂಡಾರು, ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಇದರ ವ್ಯವಸ್ಥಾಪಕರಾದ…