Author: roovari

ಉಡುಪಿ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಹುಬ್ಬಳ್ಳಿ ಇದರ ವತಿಯಿಂದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕ ಸಾಹಿತಿಗಳ 6ನೆಯ ರಾಜ್ಯ ಸಮ್ಮೇಳನವು ದಿನಾಂಕ 05-09-2023ರಂದು ಉಡುಪಿಯ ಅಂಬಲ್ಪಾಡಿ ಶ್ರೀ ಭವಾನಿ ಸಭಾಂಗಣದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ 34ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜಯಾನಂದ ಪೆರಾಜೆಯವರಿಗೆ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಮತ್ತು ಗ್ರಾಮೀಣ ಹಿಂದುಳಿದ ಪ್ರದೇಶದ ಬಡ, ದೀನ, ದಲಿತ ಮಕ್ಕಳಿಗೆ ಶಿಕ್ಷಣ ಹಾಗೂ ತರಬೇತಿಯನ್ನು ನೀಡಿರುವ ಅಮೂಲ್ಯ ಸೇವೆಗೆ ರಾಜ್ಯ ಮಟ್ಟದ ಅಮೃತ ಸಮ್ಮಾನ ಗೌರವ ಪ್ರಶಸ್ತಿಯನ್ನು ನೀಡಿ ಸಮ್ಮಾನಿಸಲಾಯಿತು. ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ, ಸಾಹಿತಿ ನೆಂಪು ನರಸಿಂಹ ಭಟ್ಟರ ಅಧ್ಯಕ್ಷತೆಯಲ್ಲಿ ಜರಗಿದ ಈ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಅಂಬಲ್ಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಕಾರ್ಯದರ್ಶಿ ಡಾ. ವಿಜಯ ಬಲ್ಲಾಳ, ಉದ್ಯಮಿ ವಿಶ್ವನಾಥ ಶೆಣೈ, ಕ.ಚು.ಸಾ.ಪ ರಾಜ್ಯ ಸಂಚಾಲಕ ಕೃಷ್ಣಮೂರ್ತಿ…

Read More

ಬೆಂಗಳೂರು : ಹೊನ್ನಾವರದ ಜಾನಪದ ವಿಶ್ವಪ್ರತಿಷ್ಠಾನ, ಅಭಿನವ ಬಳಗ, ಪ್ರಣತಿ ದೊಡ್ಡಹೊಂಡ ಮತ್ತು ಬುಕ್ ಬ್ರಹ್ಮ ಸಹಯೋಗದಲ್ಲಿ ಏರ್ಪಡಿಸಿದ್ದ ‘ಜನಪದ ದೀಪಾರಾಧನೆ 43’ ಪ್ರಶಸ್ತಿ ಪ್ರದಾನ, ಧ್ವನಿ ಸಾಂದ್ರಿಕೆ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭವು ದಿನಾಂಕ 05-09-2023ರಂದು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿನ ಭಾರತೀಯ ವಿದ್ಯಾಭವನದ ಕೆ.ಆರ್.ಜಿ. ಹಾಲ್ ಇಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಕುವೆಂಪು ದೀಪಪ್ರಶಸ್ತಿ ಸ್ವೀಕರಿಸಿದ ಬಹುಮುಖಿ ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡುತ್ತಾ “ಜಾನಪದರಿಗೆ ಲೋಕಜ್ಞಾನ ಅರಿವಿತ್ತು ಅವರು ಯಾವತ್ತೂ ಆತ್ಮತೃಪ್ತಿ ಮತ್ತು ಸಹಬಾಳ್ವೆಗೆ ಹೆಚ್ಚು ಮಹತ್ವ ನೀಡುತ್ತಿದ್ದರು. ಮಾಸ್ತಿಯವರು ಯಾವಾಗಲೂ ಹೇಳುತ್ತಿದ್ದ ಮಾತೆಂದರೆ ಸಾತ್ವಿಕ ಶಕ್ತಿ ಸುಮ್ಮನಿದ್ದರೆ ತಾಮಸ ಶಕ್ತಿ ವಿಜೃಂಭಿಸುತ್ತದೆ. ಆಧುನಿಕ ಶಿಕ್ಷಣ ಪದ್ಧತಿ ನಮ್ಮ ಪರಿಸರವನ್ನು ಮಾತ್ರವಲ್ಲ ಅಂತರಂಗವನ್ನು ಕಲುಷಿತಗೊಳಿಸಿದೆ. ನಾವು ಮತ್ತೆ ಸ್ಥಳೀಯ ಸಂಸ್ಕೃತಿಯ ಕಡೆಗೆ ಮುಖಮಾಡಬೇಕಿದೆ ಎಂದರು. ಹೊನ್ನಾವರದಂಥ ತಾಲ್ಲೂಕು ಕೇಂದ್ರದಲ್ಲಿ ನಲವತ್ತು ವರ್ಷಗಳಿಂದ ದೀಪಾರಾಧನೆಯಂಥ ವಿಶಿಷ್ಟ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವ ಎನ್.ಆರ್.ನಾಯಕ ದಂಪತಿಯ ಕೆಲಸ ಮಾದರಿಯಾದದ್ದು. ಒಂದು ವಿಶ್ವವಿದ್ಯಾಲಯ ಮಾಡುವಷ್ಟು…

Read More

ಬೆಂಗಳೂರು : ಜಂಗಮ ಕಲೆಕ್ಟಿವ್ ಆಯೋಜನೆಯಲ್ಲಿ ‘ಪಯಣ’ ಪ್ರಸ್ತುತ ಪಡಿಸುವ ಶ್ರೀಜಿತ್ ಸುಂದರಂ ನಿರ್ದೇಶನದ ‘ತಲ್ಕಿ’ ನಾಟಕದ ಪ್ರದರ್ಶನವು ಬೆಂಗಳೂರಿನ ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ದಿನಾಂಕ 15-09-2023ರಂದು ಸಂಜೆ ಗಂಟೆ 7.30ಕ್ಕೆ ನಡೆಯಲಿದೆ. ನಾಟಕದ ಕುರಿತು : ‘ತಲ್ಕಿ’ ನಾಟಕವು ಸಮುದಾಯದವರ ಜೀವನ ಕಥೆಗಳ ಆಧಾರದ ಸತ್ಯ ಕಥೆಗಳು. ಬರವಣಿಗೆ, ಸಮಾಜಸೇವೆ, ಸಮುದಾಯ ಮುಖ್ಯಸ್ಥರು, ಅಮ್ಮಂದಿರು, ಹೀಗೆ ಸಮಾಜದ ಬೇರೆ ಬೇರೆ ಘಟಕಗಳಲ್ಲಿ ಕೆಲಸ ಮಾಡುತ್ತಿರುವ, ಐವತ್ತು ವರ್ಷ ದಾಟಿರುವ ಮಂಗಳಮುಖಿಯರು ತಮ್ಮ ಈಡೇರದ ಕನಸ್ಸುಗಳನ್ನು ನನಸು ಮಾಡಿಕೊಳ್ಳಲು ನಟನೆ ಹಾಗೂ ರಂಗ ಪ್ರಕ್ರಿಯೆಗಳ ನೆರವಿನಿಂದ ಹೋರಾಡಲು ಅವಕಾಶ ಕಲ್ಪಿಸಿಕೊಡುವ ವಿಶಿಷ್ಟ ಯತ್ನ ಈ ನಾಟಕ. ಇವರೆಲ್ಲರಿಗೂ ಇರುವ ಒಂದು ಸಾಮ್ಯತೆ ಎಂದರೆ ಸಮಯ ಹಾಗೂ ಸಮಾಜ ನೀಡಿರುವ ಗಾಯದ ಗುರುತುಗಳು. ಬೆಂಗಳೂರಿನ ಬೇರೆ ಬೇರೆ ಪ್ರದೇಶಗಳ ಜೊತೆ ಅವಿನಾಭಾವ ಸಂಬಂಧವಿರುವ ಅವರ ದೇಹದ ಮೇಲಿನ ಗುರುತುಗಳು, ಆ ಪ್ರದೇಶಗಳ ಗುರುತುಗಳಾಗಿ ಮಾರ್ಪಟ್ಟಿವೆ ಎನ್ನಬಹುದು. ಇಂತಹ ಹಿಂಸೆ, ನೋವಿನ ನಡುವೆಯೂ, ಹೋರಾಡಿ ಬದುಕುವ…

Read More

‘ಮಾಧುರ್ಯ’ ಹೆಸರಿಗೆ ಅನ್ವರ್ಥಕ ಜೀವನಯಾನ ಕು.ಮಾಧುರ್ಯಳದು. ಕಲಾರಾಧನೆ, ವಿದ್ಯಾಭ್ಯಾಸ – ಸಾಧನೆಗಳ ಕನಸಿನ ಹಾದಿಯಲ್ಲಿ ಸಾಗುತ್ತಿರುವ ಮಾಧುರ್ಯ ಆತ್ಮವಿಶ್ವಾಸದ ಪ್ರತಿಮೂರ್ತಿ. ನೃತ್ಯ, ಸಂಗೀತ ಅವಳ ಬಾಲ್ಯದ ಒಲವು. ಮಗಳ ಆಸೆ, ಪ್ರತಿಭೆಯನ್ನು ಪೋಷಿಸಿಕೊಂಡು ಬಂದವರು ಅವಳ ಹೆತ್ತವರಾದ ಶ್ರೀ ಸುರೇಂದ್ರ ಮತ್ತು ಶ್ರೀಮತಿ ಗಾಯತ್ರೀದೇವಿ. ನಾಡಿನಾದ್ಯಂತ ಹಲವಾರು ವೇದಿಕೆಗಳಲ್ಲಿ ನರ್ತಿಸಿದ ಇವಳು, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಮೇರಿಕಾದ ಕ್ಯಾಲಿಫೋರ್ನಿಯಾ ಸೇರಿದಾಗ ‘ನೃತ್ಯಲೀಲಾ ಡ್ಯಾನ್ಸ್ ಸ್ಕೂಲ್’ ನಾಟ್ಯಗುರು ವಿದುಷಿ ಪಂಚಮಿ ಫಡ್ಕೆ ಅವರಲ್ಲಿ ನೃತ್ಯ ಕಲಿಕೆ ಮುಂದುವರಿಸಿ ವಿದೇಶದಲ್ಲಿ ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿದ್ದು ವಿಶೇಷ. ಇದೀಗ ಮಾಧುರ್ಯ ವಿಧ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ದಿನಾಂಕ 10-09-2023ರ ಭಾನುವಾರದಂದು ಬೆಳಗ್ಗೆ 10 ಗಂಟೆಗೆ ಜಯನಗರದ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ನೆರವೇರಿಸಿಕೊಳ್ಳಲಿದ್ದಾಳೆ. ಅವಳ ನೃತ್ಯ ಸೊಬಗನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತ. ಬೆಂಗಳೂರಿನಲ್ಲಿ ಜನಿಸಿದ ಮಾಧುರ್ಯ ತನ್ನ ಎಂಟರ ಎಳವೆಯಲ್ಲಿ, ಪ್ರಭಾತ್ ಕಲಾವಿದರು ಅವರೊಂದಿಗೆ ನೃತ್ಯಾಭ್ಯಾಸ ಆರಂಭಿಸಿದಳು. ಮಾಧುರ್ಯಳ ಮೊದಲ ಗುರು ಶಕುಂತಲಾ ಪ್ರಭಾತ್. ಇವಳ ಪ್ರಾಥಮಿಕ…

Read More

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡಮಿ (ರಿ.) ಆಯೋಜಿಸುವ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಗಳ ಉದ್ಘಾಟನಾ ಸಮಾರಂಭವು ದಿನಾಂಕ 17-09-2023ರ ಭಾನುವಾರದಂದು ಸಂಜೆ 6.05ಕ್ಕೆ ಸುರತ್ಕಲ್ಲಿನ ಸಿಟಿ ಗಾರ್ಡನ್ ಕ್ರಾಸ್ ರಸ್ತೆಯಲ್ಲಿರುವ ಭಾಗ್ಯ ರೆಸಿಡೆನ್ಸಿಯಲ್ಲಿ ನಡೆಯಲಿದೆ. ಆಧ್ಯಾತ್ಮಿಕವಾಗಿ ಅತ್ಯಂತ ಶ್ರೀಮಂತವೆನಿಸಿಕೊಂಡಿರುವ ಭಾರತದ ರಕ್ಷಣೆ ಈ ದೇಶದ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ ಮತ್ತು ಕರ್ತವ್ಯ. ರಕ್ಷಣೆ ಅನ್ನುವಾಗ ಮೂರು ವಿಷಯಗಳನ್ನು ಉಲ್ಲೇಖಿಸಬಹುದಾಗಿದೆ. ಮೊದಲನೆಯದಾಗಿ ಭೌಗೋಳಿಕವಾದ ಭಾರತದ ಗಡಿಯ ರಕ್ಷಣೆ, ಇದನ್ನು ರಕ್ಷಿಸಿಕೊಂಡು ಬರುತ್ತಿರುವವರು ನಮ್ಮ ವೀರ ಯೋಧರು. ಎರಡನೆಯದು ನಮಗೆಲ್ಲರಿಗೂ ಹೊಟ್ಟೆಗೆ ಹಿಟ್ಟು ಇಕ್ಕುವ ನಮ್ಮ ಹೆಮ್ಮೆಯ ರೈತರು. ಮೂರನೆಯದೇ ನಾವೆಲ್ಲರೂ ಹೆಮ್ಮೆಪಡುವಂತಹ ಭಾರತೀಯ ಕಲೆಗಳು ಮತ್ತು ಈ ಕಲೆಯನ್ನು ಸಾಧನೆಯ ಮೂಲಕ ಮೈಗೂಡಿಸಿಕೊಂಡ ನಮ್ಮ ಗೌರವದ ಕಲಾವಿದರು. ಪ್ರತಿಯೊಬ್ಬನಿಗೂ ಯೋಧನಾಗುವುದು ಮತ್ತು ರೈತನಾಗುವುದು ಅಸಾಧ್ಯವಾಗಬಹುದು. ಆದರೆ ಚಿತ್ರ, ನೃತ್ಯ, ಸಂಗೀತದಂತಹ ಲಲಿತ ಕಲೆಗಳನ್ನು ಅಭ್ಯಸಿಸಿ ಉತ್ತಮ ಪ್ರಜೆಯಾಗುವುದರ ಜೊತೆಗೆ ಸ್ವಾಸ್ಥ್ಯ ಸಮಾಜವನ್ನು ಕಟ್ಟುವ ಅವಕಾಶ ಕಲಾವಿದನಿಗೆ ಮಾತ್ರ ಲಭ್ಯವಾಗಬಹುದಾದ ಸಂಪತ್ತು. ಇಂತಹ…

Read More

ಸುಳ್ಯ : ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಆಶ್ರಯದಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಜನಪದ ಸಾಂಸ್ಕೃತಿಕ ವೈಭವ ನಲಿಪು- 2023, ಜನಪದ ಪ್ರಕಾರಗಳ ಮುಕ್ತ ನೃತ್ಯ ಸ್ಪರ್ಧೆ ಕಾರ್ಯಕ್ರಮವು ದಿನಾಂಕ 02-09-2023ರ ಶನಿವಾರ ಜರಗಿತು. ಈ ಕಾರ್ಯಕ್ರಮವನ್ನು ಮಾಜಿ ಸಚಿವ ಎಸ್. ಅಂಗಾರ ಉದ್ಘಾಟಿಸಿ ಮಾತನಾಡುತ್ತಾ “ಜನಪದ ಸಾಹಿತ್ಯ, ಕಲೆ, ಸಂಸ್ಕೃತಿ ಜೀವಂತವಾಗಿ ಉಳಿಯಬೇಕಾದರೆ ಸರಕಾರವು ಯುವಜನ ಸಂಯುಕ್ತ ಮಂಡಳಿಗಳಿಗೆ ಪ್ರೋತ್ಸಾಹ ನೀಡಬೇಕು. ಸುಳ್ಯದಲ್ಲಿ ರಾಜ್ಯ ಮಟ್ಟದ ಯುವಜನ ಮೇಳವನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಸುಬ್ರಾಯ ಚೊಕ್ಕಾಡಿಯವರಂತಹ ಓರ್ವ ಖ್ಯಾತ ಕವಿಯನ್ನು ಸಾರಸ್ವತ ಕ್ಷೇತ್ರಕ್ಕೆ ಕೊಡುಗೆ ನೀಡಿರುವುದು ಚೊಕ್ಕಾಡಿ ಎಂಬ ಗ್ರಾಮೀಣ ಪ್ರದೇಶ” ಎಂದು ಅವರು ಉಲ್ಲೇಖಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಮರಮುಡ್ನೂರು ಪಂಚಾಯತ್ ಅಧ್ಯಕ್ಷೆ ಜಾನಕಿ ಕಂದಡ್ಕ, ಬೆಳ್ಳಾರೆ ಕಾಮಧೇನು ಗ್ರೂಪ್ಸ್ ಮಾಲಕ ಮಾಧವ ಗೌಡ ಬೆಳ್ಳಾರೆ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ, ರಾಜ್ಯ ಯುವಜನ ಒಕ್ಕೂಟದ…

Read More

ಮಂಜೇಶ್ವರ : ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪ್ರತಿಷ್ಠಾ ವರ್ಧಂತಿ ಹಾಗೂ ಓಣಂ ಹಬ್ಬದ ಆಚರಣೆಯ ಪ್ರಯುಕ್ತ ದಿನಾಂಕ 29-8-2023 ನೇ ಮಂಗಳವಾರದಂದು ವಿದುಷಿ ಡಾ.ಸುಚಿತ್ರಾ ಹೊಳ್ಳ ಹಾಗೂ ಶಿಷ್ಯವೃಂದದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗೋಷ್ಠಿ ಗಾಯನ ಜರಗಿತು. ಕಾರ್ಯಕ್ರಮವನ್ನು ವೇದಮೂರ್ತಿ ಹರಿನಾರಾಯಣ ಮಯ್ಯ ಕುಂಬಳೆ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ವಿದುಷಿ ಡಾ.ಸುಚಿತ್ರಾ ಹೊಳ್ಳ ಇವರ ಜೊತೆ ಅವರ ಶಿಷ್ಯೆಯರಾದ ದಿವ್ಯಾಕಾರಂತ, ರಾಧಾಮಣಿರಾವ್, ಮೈತ್ರಿ ರಾವ್, ಸುಮನರಾವ್, ಗೀತಾರಾಜೇಶ್, ಸುಪ್ರಜಾರಾವ್ ಹಾಡುಗಾರಿಕೆಯಲ್ಲಿ ಭಾಗಿಯಾದರು. ಹಿಮ್ಮೇಳ ವಾದಕರಾಗಿ ಮೃದಂಗದಲ್ಲಿ ವಿದ್ವಾನ್ ವಸಂತ ಕೃಷ್ಣ ಕಾಂಚನ ಮತ್ತು ವಯಲಿನ್ ವಾದನದಲ್ಲಿ ಶ್ರೀ ಜಗದೀಶ್ ಕೊರೆಕಾನ ಇವರು ಸಹಕರಿಸಿದರು.

Read More

ಉಡುಪಿ : ಉಡುಪಿ ಮತ್ತು ಶಾರದಾ ಪ್ರತಿಷ್ಠಾನ ಮಾಗಡಿ ಇವರ ಸಂಯುಕ್ತ ಆಶ್ರಯದಲ್ಲಿ  ಕೃತಿ ಬಿಡುಗಡೆ ಸಮಾರಂಭವು ದಿನಾಂಕ 03-09-2023ರಂದು ಉಡುಪಿಯ ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಿತು. ಡಾ.ಬೇಲೂರು ರಘುನಂದನ್ ಇವರ ‘ರಕ್ತವರ್ಣೆ’ ಕನ್ನಡ ನಾಟಕವನ್ನು ಕೊಂಕಣಿಯ ಕವಿ ಸಾಹಿತಿ ವೆಂಕಟೇಶ ನಾಯಕ್ ಇವರು ಕೊಂಕಣಿಗೆ ಅನುವಾದಿಸಿದ ‘ರಕ್ತವರ್ಣೆ’ ಮತ್ತು  ಹಿರಿಯ ಸಾಹಿತಿ ಡಾ.ನಾ.ಮೊಗಸಾಲೆ ಇವರ ‘ಧರ್ಮಯುದ್ಧ’ ಕಾದಂಬರಿಯನ್ನು ಲೇಖಕ ಅಂಶುಮಾಲಿ ನಾಟಕಕ್ಕೆ ರೂಪಾಂತರಗೊಳಿಸಿದ್ದು, ಈ ಕೃತಿಗಳನ್ನು ಡಾ.ನಾ.ಮೊಗಸಾಲೆ ದಂಪತಿಗಳು ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ.ಬೇಲೂರು ರಘುನಂದನ್ “ಇಂದಿನ ಯುವ ಜನತೆ ತ್ವರಿತ ಗತಿಯ ಆಕಾಂಕ್ಷೆಗಳ ಹಿಂದೆ ಬಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಿದ್ದಿ ಪಡೆಯಲು ಹಂಬಲಿಸುವುದನ್ನು ಕಾಣಬಹುದು.  ಅದು ತಪ್ಪೇನು ಅಲ್ಲ ಆದರೆ ಸಾಹಿತ್ಯ ಪರಂಪರೆಯಲ್ಲಿ ಕಾಯುವುದು ಎಂದರೆ ತಪಸ್ಸಿನಂತೆ. ತನ್ಮೂಲಕ ಕೃತಿ ಲೋಕಾರ್ಪಣೆ ಯಾಗುವುದೇ ಯಶಸ್ಸು” ಎಂದು ಹೇಳಿದರು. ಶಾರದಾ ಪ್ರತಿಷ್ಠಾನದ ಪ್ರಕಾಶಕರಾದ ಗಿರೀಶ್ ಮಾಗಡಿ ಉಪಸ್ಥಿತರಿದ್ದರು. ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ವಿಭಾಗದ ಮುಖಸ್ಥರಾಗಿರುವ…

Read More

ಬಂಟ್ವಾಳ : ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ ಹಾಗೂ ಅಭಿರುಚಿ ಜೋಡುಮಾರ್ಗ ಸಹಯೋಗದಲ್ಲಿ ಶ್ರೀ ಏರ್ಯ ಒಂದು ನೆನಪು ಹಾಗೂ ಕಾವ್ಯವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮವು ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ದಿನಾಂಕ 27-08-2023ರಂದು ನಡೆಯಿತು. ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಶ್ರೀ ಕೃಷ್ಣಕುಮಾರ ಪೂಂಜ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಸಂಶೋಧನ ಕೇಂದ್ರದ ಅಧ್ಯಕ್ಷರಾದ ಡಾ.ತುಕಾರಾಮ್ ಪೂಜಾರಿ ಅವರು ಏರ್ಯ ಅವರ ಬಗ್ಗೆ ಸಂಸ್ಮರಣಾ ಭಾಷಣಗೈದು “ಏರ್ಯರು ಸಾಹಿತ್ಯ, ಸಹಕಾರ, ಶಿಕ್ಷಣ ಹೀಗೆ ಹಲವು ರಂಗಗಳಲ್ಲಿ ಕ್ರಿಯಾಶೀಲರಾಗಿದ್ದ ಹಿರಿಯರು. ಆಯಾ ಕ್ಷೇತ್ರಗಳಲ್ಲಿ ತಮ್ಮ ಸಂಪರ್ಕಕ್ಕೆ ಬಂದ ಕಿರಿಯರು, ಯುವಕರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುವ ಅವರ ಗುಣ ಅನನ್ಯವಾದುದು” ಎಂದರು. ಬಳಿಕ ಖ್ಯಾತ ಗಮಕಿ ಮಂಜುಳಾ ಸುಬ್ರಹ್ಮಣ್ಯ ಹಾಗೂ ವಾಮದಪದವು ಸರಕಾರಿ ಪ್ರ.ದ. ಕಾಲೇಜಿನ ಉಪನ್ಯಾಸಕಿ ರೇಶ್ಮಾ ಭಟ್ ಅವರಿಂದ ಪಂಪಭಾರತದ ದ್ರೋಣ-ದ್ರುಪದ ಭಾಗದ ಕಾವ್ಯವಾಚನ ಮತ್ತು ವ್ಯಾಖ್ಯಾನ ನಡೆಯಿತು. ಕಸಾಪ ಬಂಟ್ವಾಳ ತಾಲೂಕು…

Read More

ಸುಳ್ಯ : ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ‘ಗುರುಗಳೆಡೆ ನಮ್ಮ ನಡೆ’ ಕಾರ್ಯಕ್ರಮದಡಿ ತಾಲೂಕಿನ ಹಿರಿಯ ಶಿಕ್ಷಕ ಹಾಗೂ ಸಾಹಿತಿಗಳಾದ ಶ್ರೀ ಸುಬ್ರಾಯ ಚೊಕ್ಕಾಡಿ ಮತ್ತು ಶ್ರೀ ಲಕ್ಷ್ಮೀಶ ಚೊಕ್ಕಾಡಿ ಅವರನ್ನು ದಿನಾಂಕ 05-09-2023ರಂದು ಅವರ ನಿವಾಸಕ್ಕೆ ತೆರಳಿ ಗೌರವಿಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಿರಿಯ ಸಾಹಿತಿಗಳನ್ನು ಶಿಕ್ಷಕರ ದಿನಾಚರಣೆಯಂದು ಗೌರವಿಸುವ ವಿನೂತನ ಸಂಪ್ರದಾಯವನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆರಂಭಿಸಿದ್ದು, ಚೊಕ್ಕಾಡಿಯಲ್ಲಿ ಇಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ. ಸಂಜೀವ ಕುದ್ಪಾಜೆ ಅಭಿನಂದನಾ ನುಡಿಗಳನ್ನಾಡಿದರು. ಸುಬ್ರಾಯ ಚೊಕ್ಕಾಡಿಯವರು ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ 25 ವರ್ಷಗಳಾಗಿದ್ದು, 85ರ ಹರೆಯದಲ್ಲಿ ಇಂದಿಗೂ ಸಾಹಿತ್ಯದ ಕಾಯಕ ನಡೆಸುತ್ತಿದ್ದಾರೆ. ಅವರ ಸಹೋದರ ಲಕ್ಷ್ಮೀಶ ಚೊಕ್ಕಾಡಿ, 10 ವರ್ಷಗಳ ಹಿಂದೆ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿದ್ದು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಕೂಡ ವಹಿಸಿದ್ದರು. ಇವರು…

Read More