Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ಗಣೇಶೋತ್ಸವದ ಅಂಗವಾಗಿ ಬಂಟ್ಸ್ ಹಾಸ್ಟೇಲ್ ನ ಓಂಕಾರ ನಗರದಲ್ಲಿ ಆಯೋಜಿಸಿದ್ದ ‘ಬಂಟ ಕಲಾ ಸಂಭ್ರಮ’ ಭಾರತ ದರ್ಶನ ಕಲ್ಪನೆಯ ಸ್ಪರ್ಧೆಯು ದಿನಾಂಕ 03-09-2023ರಂದು ನಡೆಯಿತು. ಶ್ರೀಮತಿ ರಾಜೇಶ್ವರಿ ಡಿ. ಶೆಟ್ಟಿ ನಿರ್ದೇಶನದಲ್ಲಿ ಸುರತ್ಕಲ್ ಬಂಟರ ಸಂಘ ಪ್ರದರ್ಶಿಸಿದ ‘ಭಾರತ ದರ್ಶನ’ ಪ್ರಹಸನವು ಪ್ರಥಮ ಸ್ಥಾನದೊಂದಿಗೆ ರೂ.1 ಲಕ್ಷ ಬಹುಮಾನ ಪಡೆದುಕೊಂಡಿತು. ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಸಿದ್ಧಿವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಅಜಿತ್ ಕುಮಾರ್ ರೈ ಪ್ರಶಸ್ತಿ ವಿತರಿಸಿದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಕಾರ್ಯದರ್ಶಿ ಲೀಲಾಧರ ಶೆಟ್ಟಿ ಮತ್ತು ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ ಹಾಗೂ ಪದಾಧಿಕಾರಿಗಳು ಪ್ರಶಸ್ತಿಯನ್ನು ಸ್ವೀಕರಿಸಿದರು. ಸಮಾರಂಭದಲ್ಲಿ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ,…
ತೆಕ್ಕಟ್ಟೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಮೆ, ತೆಕ್ಕಟ್ಟೆಯಲ್ಲಿ ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ ಇವರು ಪ್ರಸ್ತುತ ಪಡಿಸುವ ‘ಯಕ್ಷಗಾನ ಪೂರ್ವರಂಗ ಪ್ರಾತ್ಯಕ್ಷಿಕೆ’ಯನ್ನು ದಿನಾಂಕ 02-09-2023ರಂದು ಪ್ರಸಿದ್ಧ ಯಕ್ಷಗಾನ ಕಲಾವಿದ ಕೋಟ ಸುರೇಶ ಬಂಗೇರ ದೀವಟಿಕೆಗೆ ತೈಲವನ್ನು ಎರೆಯುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು “ಕರ್ನಾಟಕದ ಕರಾವಳಿಯಲ್ಲಿ ಹುಟ್ಟಿದ ಯಕ್ಷಗಾನ ಕಲೆ ದೇಶ ವಿದೇಶಗಳಲ್ಲೂ ತನ್ನ ವೈಶಿಷ್ಯತೆಯಿಂದ ಮೆರೆದಿದೆ. ತುತ್ತು ಅನ್ನಕ್ಕೂ ಗತಿ ಇಲ್ಲದ ಎಳೆವೆಯಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ನನ್ನಂತೆ ಅನೇಕರು ಕಾಲಿಟ್ಟಿದ್ದಾರೆ ಮತ್ತು ಪ್ರಸಿದ್ಧಿಯನ್ನು ಹೊಂದಿದ್ದಾರೆ. ಬದುಕಿಗಾಗಿ ರಂಗದಲ್ಲಿಯೇ ಯಕ್ಷ ಶಿಕ್ಷಣ ಪಡೆದು ಅದರಿಂದ ಬಂದ ಮೊತ್ತ ತಮ್ಮ ಜೀವನಕ್ಕೆ ಆ ಕಾಲದಲ್ಲಿ ಸಾಕಾಗದೇ ಇದ್ದರೂ ಅಂದಿನ ಶ್ರಮ ಇಂದು ಪ್ರತಿಫಲ ನೀಡಿದೆ. ಯಾಕೆಂದರೆ ದೇಶದಾದ್ಯಂತ ನಾವು ಯಕ್ಷಗಾನ ಕಲೆಯಿಂದ ಗುರುತಿಸಿಕೊಂಡಿದ್ದೇವೆ. ಯಕ್ಷಗಾನ ಕಲೆ ಪ್ರಾಥಮಿಕ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಬೇಕೇ ಬೇಕು. ಜೀವನದಲ್ಲಿ ಪುರಾಣ ಕಥೆಗಳನ್ನು ಅರಿಯುವುದಕ್ಕಾಗಿ ಮತ್ತು ಜೀವನ ಪಕ್ವತೆಯನ್ನು ಹೊಂದುವುದಕ್ಕೆ ಯಕ್ಷಗಾನ ಕಲೆ…
ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನಿಂದ ದಿನಾಂಕ 09-09-2023ರಿಂದ 17-09-2023ರವರೆಗೆ ಯುರೋಪ್ ಯಕ್ಷಗಾನ ಅಭಿಯಾನ ನಡೆಯಲಿದೆ. ಈ ಅಭಿಯಾನದಲ್ಲಿ ತೆಂಕುತಿಟ್ಟಿನ ರಾಜವೇಷ, ಬಣ್ಣದ ವೇಷ, ಪಗಡಿ ವೇಷ, ಸ್ತ್ರೀವೇಷ, ಹಾಸ್ಯ ವೇಷಗಳು ರಾರಾಜಿಸಲಿವೆ. ಯು.ಕೆ., ಜರ್ಮನಿ, ಫ್ರಾನ್ಸ್ ಹಾಗೂ ಸ್ವಿಜರ್ ಲ್ಯಾಂಡ್ಗಳಲ್ಲಿ 10 ದಿನಗಳಲ್ಲಿ 7 ಯಕ್ಷಗಾನ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ ಎಂದು ಫೌಂಡೇಶನ್ ಅಧ್ಯಕ್ಷ, ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ತಿಳಿಸಿದ್ದಾರೆ. ಸೆಪ್ಟೆಂಬರ್ 9ರಂದು ಜರ್ಮನಿಯ ಫ್ರಾಂಕ್ ಫರ್ಟ್, 11ರಂದು ಯುಕೆಯ ಮಿಲ್ಟನ್ ಕೇಯ್ಸ್ನ್, 12ರಂದು ಯುಕೆಯ ಬಾಸಿಲ್ಡನ್, 13ರಂದು ಯುಕೆಯ ಸೆಂಟ್ರಲ್ ಲಂಡನ್, 14ರಂದು ಸ್ಲೋಗ್, 16ರಂದು ಫ್ರಾನ್ಸ್ ನ ಪ್ಯಾರಿಸ್, 17ರಂದು ಸ್ವಿಜರ್ ಲ್ಯಾಂಡ್ನ ಝರಿಚ್ನಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಒಂದು ಪ್ರಸಂಗ ಪ್ರದರ್ಶನದ ಅವಧಿ ಎರಡರಿಂದ ಎರಡೂವರೆ ಗಂಟೆ ನಿಗದಿಯಾಗಿದೆ. ಹೆಚ್ಚಾಗಿ ‘ಶ್ರೀದೇವಿ ಚರಿತಾಮೃತ’ ಪ್ರಸಂಗದ ಪ್ರದರ್ಶನಕ್ಕೆ ಬೇಡಿಕೆ ಬಂದಿದೆ. ಈ ತಂಡದಲ್ಲಿ 8 ಮಂದಿ ಕಲಾವಿದರಿದ್ದಾರೆ, ಹಿಮ್ಮೇಳದಲ್ಲಿ ಪಟ್ಲ ಸತೀಶ್ ಶೆಟ್ಟಿ, ಪದ್ಮನಾಭ ಉಪಾಧ್ಯಾಯ, ಚೈತನ್ಯ…
ಬಂಟ್ವಾಳ : ಬಂಟ್ವಾಳ ತಾಲೂಕಿನ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ 2023-24ರ ಅವಧಿಯಲ್ಲಿ ಸಮಿತಿಯ ಜವಾಬ್ದಾರಿ ಘೋಷಣಾ ಕಾರ್ಯಕ್ರಮವು ಕೂಟ ಪ್ರಮುಖ್ ಅಶೋಕಕುಮಾರ ಕಲ್ಯಾಟೆಯವರ ನಿರೂಪಣೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರಿಂದ ವಿದ್ಯುಕ್ತವಾಗಿ ದಿನಾಂಕ 02-09-2023ರಂದು ಉದ್ಘಾಟಣೆಗೊಂಡಿತು. ಪ್ರಾರಂಭದಲ್ಲಿ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ವಿದ್ಯಾರ್ಥಿ ವಿದ್ಯಾರ್ಥಿನಿಯರಾದ ಕಾರ್ತಿಕ್ (ದ್ವಿತೀಯ ವಾಣಿಜ್ಯ ವಿಭಾಗ), ಸಾತ್ವಿಕ್ (ದ್ವಿತೀಯ ವಾಣಿಜ್ಯ), ಲಿಖಿತ್ ನಾಯಕ್ (ದ್ವಿತೀಯ ವಾಣಿಜ್ಯ), ಚಿನ್ಮಯ್ (ದ್ವಿತೀಯ ವಾಣಿಜ್ಯ), ಕುಮಾರಿ ಪ್ರೇರಣಾ (ಪ್ರಥಮ ವಾಣಿಜ್ಯ), ಹರ್ಷಿತ್ (ಪ್ರಥಮ ವಾಣಿಜ್ಯ), ಭರತನಾಟ್ಯದಲ್ಲಿ ದಾಕ್ಷಾಯಿಣಿ (ದ್ವಿತೀಯ ವಾಣಿಜ್ಯ), ದೀಪ್ತಿ (ದ್ವಿತೀಯ ವಾಣಿಜ್ಯ) ಇವರುಗಳ ಅಭೂತಪೂರ್ವವಾಗಿ ಸೇಕ್ಸೋಫೋನ್ ವಾದನ, ಭರತ ನಾಟ್ಯ ಮತ್ತು ಗೀತ ಗಾಯನ ಪ್ರದರ್ಶಿಸಿದರು. ಈ ಮಧ್ಯೆ ವಿದ್ಯಾರ್ಥಿನಿಯರು ಹಿರಿಯರಿಗೆ ರಕ್ಷಾ ಬಂಧನ ಮಾಡಿ ಸೋದರತೆ ಮೆರೆದರು. ಭಾರತಾಂಬೆಗೆ ಪುಷ್ಪಾರ್ಚನೆ ಸಹಿತ ಪ್ರಾರ್ಥನೆಯ ನಂತರ ದೀಪ ಬೆಳಗಿ ಸಮಿತಿಗೆ ಚಾಲನೆ ಕೊಟ್ಟ ಡಾ.ಪ್ರಭಾಕರ ಭಟ್ ಅವರು “ಸಾಹಿತ್ಯವು ಬಹಳ ಪುರಾತನವಾಗಿದ್ದು, ಭಾಷೆಗೊಂದು ಚೊಕ್ಕ ಆವರಣ ಕೊಡುವಂಥದ್ದಾಗಿದೆ.…
ಬೆಂಗಳೂರು : ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಯಕ್ಷಗಾನ ಮುಖವರ್ಣಿಕೆ ಶಿಬಿರವು ದಿನಾಂಕ 03-09-2023 ರಂದು ಬೆಂಗಳೂರಿನ ತ್ಯಾಗರಾಜ ನಗರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಮುಖವರ್ಣಿಕೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಉಡುಪಿ ಎಂ.ಜಿ.ಎಂ. ಕಾಲೇಜಿನ ಉಪನ್ಯಾಸಕ ಮತ್ತು ಯಕ್ಷಗಾನ ಕಲಾವಿದರಾದ ರಾಘವೇಂದ್ರ ತುಂಗ “ಯೋಗಾಭ್ಯಾಸದಂತೆ ದೇಹ ಮತ್ತು ಮನಸ್ಸಿನ ಸಮನ್ವಯಕ್ಕೆ ಯಕ್ಷಗಾನ ಕಲೆ ಪೂರಕ. ನಿರಂತರ ಯಕ್ಷಗಾನ ಅಭ್ಯಾಸ ಮಾಡುವುದರಿಂದ ದೇಹ ಮತ್ತು ಮನಸ್ಸುಗಳ ಕ್ಷಮತೆ ಹೆಚ್ಚಾಗಿ ದೈನಂದಿನ ಚಟುವಟಿಕೆಗಳಲ್ಲಿ ಉತ್ಸಾಹದಿಂದ ತೊಡಗಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಕಲೆಯಲ್ಲಿ ತೊಡಗಿಕೊಳ್ಳುವುದಕ್ಕೆ ವೃತ್ತಿಪರತೆಯ ಅಗತ್ಯವಿದೆ. ಯಕ್ಷಗಾನ ಕಲಾವಿದರಾದವರು ತಾವೇ ವೇಷ ಧರಿಸುವುದನ್ನು ಅಭ್ಯಾಸ ಮಾಡಕೊಳ್ಳಬೇಕು. ಅದರಲ್ಲಿಯೂ ಯಕ್ಷಗಾನ ಮುಖವರ್ಣಿಕೆಯಲ್ಲಿ ಪರಿಣಿತಿ ಇದ್ದರೆ ಹೆಚ್ಚಿನ ಸಾಧನೆ ಮಾಡಲು ಸಾಧ್ಯ. ಯಕ್ಷಾಂಗಣ ಟ್ರಸ್ಟ್ ವಿದ್ಯಾರ್ಥಿಗಳಿಗೆ ಮುಖವರ್ಣಿಕೆ ಶಿಬಿರ ಆಯೋಜಿಸಿರುವುದು ಶ್ಲಾಘನೀಯ” ಎಂದು ಹೇಳಿದರು. ಈ ಯಕ್ಷಗಾನ ಶಿಬಿರದಲ್ಲಿ ಸುಮಾರು ಮೂವತೈದರಿಂದ ನಲವತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ವೇದಿಕೆಯಲ್ಲಿ ಯಕ್ಷದೇಗುಲದ ಸುದರ್ಶನ ಉರಾಳ, ಯಕ್ಷ ಗುರು ಪ್ರಿಯಾಂಕ ಕೆ.ಮೋಹನ್…
ತೆಕ್ಕಟ್ಟೆ : ತೆಕ್ಕಟ್ಟೆ ಮಹಾಲಿಂಗೇಶ್ವರ ದೇಗುಲದಲ್ಲಿ ಸೋಣೆ ಆರತಿ ಸಂದರ್ಭ ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ ಆಯೋಜಿಸಿದ ಯಕ್ಷಗಾನ ತಾಳಮದ್ದಳೆ ಸರಣಿ ಕಾರ್ಯಕ್ರಮ ಅರ್ಥಾಂಕುರ-2 ದಿನಾಂಕ 03-09-2023ರಂದು ಉದ್ಘಾಟಣೆಗೊಂಡಿತು. ಹೊಸ ಅರ್ಥದಾರಿಗಳಿಗೆ ವೇದಿಕೆ ಕಲ್ಪಿಸಲು ಆಯೋಜಿಸುವ ಈ ಸರಣಿ ಕಾರ್ಯಕ್ರಮದ ಎರಡನೇ ಹಂತವನ್ನು ದೀಪ ಪ್ರಜ್ವಲಿಸಿ ಡಾ.ಜಗದೀಶ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಇವರು “ಹಿಂದಿನ ಕಾಲದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಅಭ್ಯಾಸ ಕೂಟಗಳು ತಾಳಮದ್ದಳೆ ಅಭ್ಯಾಸಕ್ಕಾಗಿ ಆಗುತ್ತಿದ್ದವು. ಇದರಿಂದಾಗಿ ಅನೇಕ ಕಲಾವಿದರು ಪ್ರಬುದ್ಧತೆಯನ್ನು ಸಾಧಿಸಿ ಮೆರೆದಿದ್ದಾರೆ. ಇತ್ತೀಚೆಗೆ ಅಲ್ಲಲ್ಲಿ ಇಂತಹ ಕೂಟಗಳು ನೆರವೇರುತ್ತಿರುವ ಈ ಸಂದರ್ಭದಲ್ಲಿ ಯಶಸ್ವೀ ಕಲಾವೃಂದ ‘ಅರ್ಥಾಂಕುರ’ ಎನ್ನುವ ಶಿರೋನಾಮೆಯಡಿಯಲ್ಲಿ ಹೊಸ ಆಯಾಮವನ್ನು ರೂಪಿಸುವಲ್ಲಿ ಕಾಲಿರಿಸಿದೆ. ಇದರಿಂದಾಗಿ ಯಕ್ಷವೃಕ್ಷದ ಗೆಲ್ಲುಗಳು ಕವಲೊಡೆಯುತ್ತ ಸಾಂಸ್ಕೃತಿಕ ಕ್ಷೇತ್ರ ಈ ಅಂಕುರದಿಂದಾಗಿ ಹೆಮ್ಮರವಾಗಿ ಬೆಳೆಯಲಿ” ಎಂದು ಹೇಳಿದರು. ಗೌರವ ಅತಿಥಿಯಾಗಿ ಭಾಗವಹಿಸಿದ ಪ್ರಸಿದ್ಧ ಅರ್ಥದಾರಿ ಸುನೀಲ್ ಹೊಲಾಡು ಮಾತನಾಡುತ್ತಾ “ಕಲಾವಿದರನ್ನು ರಂಗಕ್ಕೆ ತಂದು ತಾಲೀಮು ನಡೆಸುವ ಕಾರ್ಯ ಅತ್ಯಂತ ಸ್ತುತ್ಯರ್ಹ. ಹಿರಿಯ…
ಬಂಟ್ವಾಳ : ಪಂಚಾಯತ್ ರಾಜ್ ನ ರಾಷ್ಟ್ರೀಯ ತರಬೇತುದಾರ, ಹಿರಿಯ ರಂಗಕರ್ಮಿ, ರಂಗ ನಿರ್ದೇಶಕ ಮಂಜು ವಿಟ್ಲ (77) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಕುಂಟಿಕಾನದಲ್ಲಿರುವ ತಮ್ಮ ಪುತ್ರಿಯ ಮನೆಯಲ್ಲಿ ದಿನಾಂಕ 06-09-2023ರಂದು ನಿಧನರಾಗಿದ್ದಾರೆ. ಧಾರ್ಮಿಕ, ಸಾಮಾಜಿಕ, ವ್ಯಕ್ತಿತ್ವ ವಿಕಸನ, ಮಹಿಳಾ ಸಬಲೀಕರಣ, ನಾಟಕ, ರೂಪಕ, ವರ್ಣಾಲಂಕಾರ, ರಂಗ ಸಜ್ಜಿಕೆ ಸಹಿತ ಮೊದಲಾದ ಚಟುವಟಿಕೆಯಲ್ಲಿ ಮಂಜು ವಿಟ್ಲ ಅವರು ತೊಡಗಿಸಿಕೊಂಡಿದ್ದರು. ಬಿ.ಸಿ.ರೋಡು ಪರಿಸರ ಮತ್ತು ಅವರ ಆಪ್ತ ವಲಯದಲ್ಲಿ ‘ಮಂಜಣ್ಣ’ ಎಂದೇ ಚಿರಪರಿಚಿತರಾಗಿದ್ದ ಇವರು ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದರು. ಅಲ್ಲದೇ ಹಿರಿಯ ಚಿತ್ರ ಕಲಾವಿದರಾಗಿ, ಕಾರ್ಯಕ್ರಮ ನಿರೂಪಕನಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಅಪಾರ ಜನಮನ್ನಣೆ ಗಳಿಸಿದ್ದರು. ಮೂಲತಃ ಇವರು ವಿಟ್ಲದ ನಿವಾಸಿ. ಸದಾ ನಗುಮುಖದ ಸರಳ, ಸ್ನೇಹಜೀವಿಯಾಗಿದ್ದ ಇವರು ಹಲವಾರು ತುಳು, ಕನ್ನಡ, ಪೌರಾಣಿಕ ನಾಟಕಗಳ ಹಾಸ್ಯ ಪಾತ್ರದಲ್ಲಿ ಮಿಂಚಿದ್ದಲ್ಲದೆ 1000ಕ್ಕೂ ಮಿಕ್ಕಿ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅಲ್ಲದೇ ಇವರು ಅಭಿನಯಿಸಿದ್ದ ‘ಚೋಮನ ದುಡಿ’ ನಾಟಕದ ಚೋಮನ ಪಾತ್ರ ಇವರಿಗೆ ಹೆಚ್ಚು ಮನ್ನಣೆ…
ಮಂಗಳೂರು : ಮಾಂಡ್ ಸೊಭಾಣ್ ಪ್ರತಿ ತಿಂಗಳ ಮೊದಲ ಭಾನುವಾರದಂದು ನಡೆಸುತ್ತಿರುವ ಮ್ಹಯ್ನ್ಯಾಳಿ ಮಾಂಚಿ (ಮಾಸಿಕ ರಂಗಭೂಮಿ) ಸರಣಿಯ 261ನೇ ಕಾರ್ಯಕ್ರಮದ ಅಂಗವಾಗಿ ‘ಅಸ್ಮಿ ತಾಯ್’ ಚಿತ್ರದ ಹಾಡುಗಳ ಲೋಕಾರ್ಪಣೆ ಮತ್ತು ‘ನಿಮ್ಣೆಂ ಉತರ್’ ನಾಟಕ ಪ್ರದರ್ಶನ ಕಾರ್ಯಕ್ರಮವು ದಿನಾಂಕ 03-09-2023 ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು. ಗೋವಾದ ಕೊಂಕಣಿ ಮುಖಂಡ ಗೌರೀಶ್ ವೆರ್ಣೇಕರ್ ಅವರು ಘಂಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಲಾಂಗಣ್ ಪಿರ್ಜೆಂತ್ ಉದ್ಯಮಿ ರೊಯ್ ಕ್ಯಾಸ್ಟಲಿನೊ ಮತ್ತು ಕಸ್ಟಮ್ಸ್ ಅಧಿಕಾರಿ ಸ್ಟೀವನ್ ಡಯಾಸ್ ಗ್ರಾಮಾಫೋನ್ ಮುಳ್ಳನ್ನು ತಟ್ಟೆಯ ಮೇಲಿರಿಸುವ ಮೂಲಕ ಗೀತೆಗಳನ್ನು ಬಿಡುಗಡೆ ಮಾಡಿದರು. ನಂತರ ಮಾಂಡ್ ತಂಡದವರಿಂದ ವಿದ್ದು ಉಚ್ಚಿಲ್ ನಿರ್ದೇಶನದ ಕೊಂಕಣಿ ನಾಟಕ “ನಿಮ್ಣೆಂ ಉತರ್” ಪ್ರದರ್ಶನಗೊಂಡಿತು. ಮೂಲತಃ ಜಿ.ಶಂಕರ್ ಪಿಳ್ಳೆ ಅವರು ರಚಿಸಿದ ‘ಭರತ ವಾಕ್ಯಂ’ ಎಂಬ ಈ ನಾಟಕವನ್ನು ಕನ್ನಡಕ್ಕೆ ನಾ.ದಾಮೋದರ ಶೆಟ್ಟಿ ಮತ್ತು ಕೊಂಕಣಿಗೆ ವಿತೊರಿ ಕಾರ್ಕಳ್ ಮತ್ತು ರೊನಿ ಕ್ರಾಸ್ತಾ ಕೆಲರಾಯ್ ಅನುವಾದಿಸಿದ್ದಾರೆ. ಒಂದಾನೊಂದು ಕಾಲದಲ್ಲಿ ಯಶಸ್ಸಿನ…
ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ & ಕಲ್ಚರಲ್ ಹೆರಿಟೇಜ್ (ಇಂಟಾಕ್) ಇದರ ಮಂಗಳೂರು ಅಧ್ಯಾಯ, ಆರ್ಟ್ ಕೆನರಾ ಟ್ರಸ್ಟ್ ಮತ್ತು ಚಿರಂತನ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್ ಸಹಯೋಗದೊಂದಿಗೆ ‘ಎ ಮಾರ್ನಿಂಗ್ ವಿತ್ ಪಂಡಿತ್ ರವಿಕಿರಣ್ ಮಣಿಪಾಲ್’ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಗೋಷ್ಠಿಯು ದಿನಾಂಕ 03-09-2023ರ ಭಾನುವಾರ ಬೆಳಿಗ್ಗೆ ನಗರದ ಕೊಡಿಯಲ್ಗುತ್ತು ಪಶ್ಚಿಮದಲ್ಲಿರುವ ಕೊಡಿಯಲ್ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ನಡೆಯಿತು. ಪಂಡಿತ್ ರವಿಕಿರಣ್ ಮಣಿಪಾಲ್ ಅವರು ಮಂಗಳೂರು ಆಕಾಶವಾಣಿಯ ಪ್ರಥಮ ದರ್ಜೆ ಕಲಾವಿದರಾಗಿರುವರು. ಇವರು ಆಗ್ರಾ ಗ್ವಾಲಿಯರ್ ಘರಾನಾದ ಪ್ರಸಿದ್ಧ ಗುರುಗಳಾದ ಉಡುಪಿಯ ಪಂಡಿತ್ ಮಾಧವ ಭಟ್ ಅವರಲ್ಲಿ ತಮ್ಮ ಆರಂಭಿಕ ತರಬೇತಿಯನ್ನು ಪಡೆದು ನಂತರ ನಾರಾಯಣ ಪಂಡಿತ್ ಅವರಲ್ಲಿ ತಮ್ಮ ವ್ಯಾಸಂಗ ಮುಂದುವರೆಸಿದರು. ಅಖಿಲ ಭಾರತೀಯ ಗಂಧರ್ವ ಮಹಾ ವಿದ್ಯಾಲಯದಿಂದ ‘ಸಂಗೀತ ಅಲಂಕಾರ’ ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ‘ವಿದ್ವತ್’ ಪದವಿ ಪಡೆದಿರುವ ಇವರು ಭಾರತದ ಅನೇಕ ಪ್ರತಿಷ್ಠಿತ ಸಂಗೀತ ಉತ್ಸವಗಳಲ್ಲಿ ಪ್ರದರ್ಶನ ನೀಡಿರುವುದು …
ಉಡುಪಿ : ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್, ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ, ರೋಟರಿ ಉಡುಪಿ, ಸ್ವರ ಸರಸ್ವತಿ ಪ್ರತಿಷ್ಠಾನ ಇಂದ್ರಾಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ಎಂ.ಜಿ.ಎಂ. ಕಾಲೇಜಿನ ಕನ್ನಡ ವಿಭಾಗದ ಸಹಕಾರದಲ್ಲಿ ಡಾ.ಮಂಜಮ್ಮ ಜೋಗತಿ ಜೀವನಾಧಾರಿತ ಏಕವ್ಯಕ್ತಿ ನಾಟಕ ‘ಮಾತಾ’ ಪ್ರದರ್ಶನವು ದಿನಾಂಕ 03-09-2023ರಂದು ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಹಾಗೂ ರಂಗಭೂಮಿ ಉಡುಪಿ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿಯವರು ಮಾತನಾಡುತ್ತಾ “ತೃತೀಯ ಲಿಂಗಿಯಾಗಿ ನಿರಂತರ ಸಂಘರ್ಷ ಜೀವನ ನಡೆಸಿ, ತನ್ನಂತಹ ಶೋಷಿತರ ಧ್ವನಿಯಾದ ಪದ್ಮಶ್ರೀ ಪುರಸ್ಕೃತೆ ಡಾ.ಮಂಜಮ್ಮ ಜೋಗತಿ ಅವರ ಬದುಕೇ ಅವರಂತಹ ತೊಳಲಾಟದ ಮಂದಿಗೆ ಜೀವನ ಪಾಠವಾಗಿದೆ. ಸಮಾಜದಲ್ಲಿ ತೃತೀಯ ಲಿಂಗಿಗಳಿಗೆ ಸಮಾನತೆ, ಗೌರವಯುತವಾಗಿ ಜೀವನ ನಡೆಸಲು ಉದ್ಯೋಗಾವಕಾಶಗಳು ಸಿಗಬೇಕು. ಅವರದಲ್ಲದ ತಪ್ಪಿಗೆ ಅವರ ಬದುಕು ಹೊರೆಯಂತೆ ಅನಿಸಬಾರದು.…