Subscribe to Updates
Get the latest creative news from FooBar about art, design and business.
Author: roovari
ಮೈಸೂರು : ನಟನ ರಂಗಶಾಲೆಯ ವತಿಯಿಂದ ‘ಅಭಿನಯ ಮತ್ತು ರಂಗ ತರಬೇತಿ’ ತರಗತಿಯು 8ರಿಂದ 14 ವರ್ಷದ ಮಕ್ಕಳಿಗೆ ಪ್ರತಿ ಶನಿವಾರ ಮಧ್ಯಾಹ್ನ ಗಂಟೆ 3-00ರಿಂದ 5-00 ಮತ್ತು ಭಾನುವಾರ ಬೆಳಗ್ಗೆ ಗಂಟೆ 10-00ರಿಂದ 12-00ರವರೆಗೆ ಹಮ್ಮಿಕೊಳ್ಳಲಾಗಿದೆ. ಪ್ರವೇಶ ಪ್ರಕ್ರಿಯೆ ಮತ್ತು ಸಂದರ್ಶನ ದಿನಾಂಕ 08 ಜೂನ್ 2025ರಂದು ಬೆಳಗ್ಗೆ 10-00 ಗಂಟೆಗೆ ನಡೆಯಲಿದೆ. ವೆಬ್ಸೈಟ್ : www.natanamysuru.org ವಿಳಾಸ : ನಟನ ರಂಗಶಾಲೆ, ರಾಮಕೃಷ್ಣ ನಗರ ‘ಕೆ’ ಬ್ಲಾಕ್, ಮೈಸೂರು -570022 ಪ್ರವೇಶ ಶುಲ್ಕ ಮತ್ತು ಇತರ ಮಾಹಿತಿಗಳಿಗಾಗಿ ಸಂಪರ್ಕಿಸಿ : 7259537777, 9480468327
ಶಿರಸಿ : ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ (ರಿ.) ಶಿರಸಿ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಬೆಂಗಳೂರು ಇವರ ಸಹಯೋಗದೊಂದಿಗೆ 14ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಯಕ್ಷಗಾನ ಪ್ರದರ್ಶನವನ್ನು ದಿನಾಂಕ 01 ಜೂನ್ 2025ರಂದು ಸಂಜೆ 4-00 ಗಂಟೆಗೆ ಶಿರಸಿಯ ನೆಮ್ಮದಿ ಆವರಣದ ರಂಗಧಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಸಭಾ ಕಾರ್ಯಕ್ರಮವನ್ನು ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ.ಎನ್. ಹೆಗಡೆ ಹಿರೇಸರ, ಧಾರವಾಡ ಹಾಲು ಒಕ್ಕೂಟ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ನನೆ ಮತ್ತು ರಾಜದೀಪ ಟ್ರಸ್ಟ್ ಶಿರಸಿ ಅಧ್ಯಕ್ಷ ದೀಪಕ ದೊಡ್ಡರು ಇವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ಲೆಕ್ಕಪತ್ರ ಪರಿಶೋಧಕ ಉದಯ ಸ್ವಾದಿ ವಹಿಸಲಿದ್ದಾರೆ. ಯಕ್ಷಗಾನದ ಹಿರಿಯ ಭಾಗವತರಾದ ರವೀಂದ್ರ ಭಟ್ ಅಚವೆ ಇವರನ್ನು ಸನ್ಮಾನಿಸಲಾಗುವುದು ಹಾಗೂ ಕುಮಾರಿ ಅಭಿಜ್ಞಾ ಹೆಗಡೆ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ…
ಬೆಂಗಳೂರು : ಸರಸ್ವತೀ ಸಂಗೀತ ವಿದ್ಯಾಲಯ (ನೋಂ) ಇದರ ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭ ಮತ್ತು ಭಾರತೀಯ ನಾದ ಸೌರಭ ಸಂಗೀತೋತ್ಸವವನ್ನು ದಿನಾಂಕ 01 ಜೂನ್ 2025ರಂದು ಸಂಜೆ 4-30 ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಯೋಜಿಸಲಾಗಿದೆ. ಖ್ಯಾತ ಹಿರಿಯ ಸಿತಾರ್ ವಿದ್ವಾಂಸರಾದ ಗುರು ಪಂಡಿತ್ ಎನ್.ವಿ. ಗೋಪಿನಾಥ್ ಇವರಿಗೆ ಗೋವಿಂದ ಲಕ್ಷ್ಮೀ ಪುರಸ್ಕಾರ ಮತ್ತು ಖ್ಯಾತ ವಯೋಲಿನ್ ವಿದ್ವಾಂಸ ವಿದ್ವಾನ್ ಕೆ.ಸಿ. ಜಯರಾಮ್ ಇವರಿಗೆ ಶ್ಯಾಮಲಾ ಸ್ಮೃತಿ ಸಮ್ಮಾನ್ ಪುರಸ್ಕಾರ ಪ್ರದಾನ ಮಾಡಲಾಗುವುದು. ನಾದೋಪಾಸಕ ಗುರು ಪಂಡಿತ್ ವಾಗೀಶ ಭಟ್ ಇವರ ಹಿಂದೂಸ್ತಾನಿ ಗಾಯನಕ್ಕೆ ಕರ್ಣಾಟಕ ಕಲಾಶ್ರೀ ಪಂಡಿತ್ ಸತೀಶ್ ಹಂಪಿಹೊಳಿ ತಬಲಾ, ಪಂಡಿತ್ ಶಿವಕುಮಾರ್ ಮಹಂತ ಹಾರ್ಮೋನಿಯಂ ಮತ್ತು ರಾಜೇಶ್ ಕುಲಕರ್ಣಿ ಮಂಜಿರ ಸಾಥ್ ನೀಡಲಿದ್ದಾರೆ. ಕುಮಾರಿ ಸ್ಮೃತಿ ಎಸ್. ಭಟ್ ಇವರಿಂದ ಹಿಂದೂಸ್ತಾನಿ ಗಾಯನಕ್ಕೆ ಕುಮಾರ್ ಎಂ. ಪ್ರಣವ್ ಪೈ ತಬಲಾದಲ್ಲಿ ಸಹಕರಿಸಲಿದ್ದಾರೆ. ಪಂಡಿತ್ ಸತೀಶ್ ಹಂಪಿಹೊಳಿಯವರ ಶಿಷ್ಯರಾದ ಶ್ರೀರಾಮ ವಿ.…
ಡಾ. ಎಸ್. ಪಿ. ಪಾಟೀಲರು ಜೈನ ಸಾಹಿತ್ಯದ ಸಿದ್ಧಾಂತ ಚರಿತ್ರೆಗಳ ಖ್ಯಾತ ವಿದ್ವಾಂಸರು. 31 ಮೇ 1939ರಲ್ಲಿ ಮಹಾರಾಷ್ಟ್ರದ ಅಂಕಲಿ ಜಿಲ್ಲೆಯ ಸಾಂಗಲಿಯಲ್ಲಿ ಜನಿಸಿದ ಇವರು ಪೀರಗೌಡ ಧರ್ಮಗೌಡ ಪಾಟೀಲ ಮತ್ತು ಪದ್ಮಾವತಿ ದಂಪತಿಯ ಸುಪುತ್ರ. ಮಹಾರಾಷ್ಟ್ರದ ಅಂಕಲಿ ಜಿಲ್ಲೆಯ ಸಾಂಗಲಿಯ ವಿಲ್ಲಿಂಗ್ಡನ್ ಕಾಲೇಜಿನಲ್ಲಿ ಬಿ. ಎ. ಪದವಿ ಪಡೆದ ನಂತರ ಶ್ರೀಯುತ ರಂ.ಶ್ರೀ ಮುಗಳಿಯವರ ಮಾರ್ಗದರ್ಶನದಲ್ಲಿ ಎಂ.ಎ. ಪದವಿ ಪಡೆದರು. ಇವರು ಮಂಡಿಸಿದ ‘ಚಾವುಂಡರಾಯ ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ. ಎಚ್. ಡಿ. ಪದವಿ ದೊರೆಯಿತು. ಎಸ್. ಪಿ. ಪಾಟೀಲರು ಉದ್ಯೋಗಕ್ಕೆ ಪಾದಾರ್ಪಣೆ ಮಾಡಿದ್ದು ಅಧ್ಯಾಪಕರಾಗಿ ಶೇಡಬಾಳದ ಸನ್ಮತಿ ವಿದ್ಯಾಲಯದಲ್ಲಿ. ತದನಂತರ ಕಾಮರ್ಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದರು. ಹೀಗೆ ಮುಂದುವರೆದು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಸಹಾಯಕ ಸಂಶೋಧಕರಾಗಿ, ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ರೀಡರ್ ಆಗಿ, ಜೈನ ಶಾಸ್ತ್ರ ಪ್ರಾಧ್ಯಾಪಕರಾಗಿ, ಆ. ನೇ. ಉಪಾಧ್ಯೆ ಪ್ರಾಕೃತ ಮತ್ತು ಜೈನ ಶಾಸ್ತ್ರ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.…
ಬೆಂಗಳೂರು : ವಿಜಯನಗರ ಬಿಂಬ (ರಿ.) ರಂಗ ಶಿಕ್ಷಣ ಕೇಂದ್ರ ಇದರ ವತಿಯಿಂದ 8ರಿಂದ 15 ವರ್ಷದ ಮಕ್ಕಳಿಗೆ ‘ಶನಿವಾರದ ರಂಗ ಶಾಲೆ’ ಎಂಟು ತಿಂಗಳ ಕೋರ್ಸ್ ದಿನಾಂಕ 07 ಜೂನ್ 2025ರಂದು ಆರಂಭವಾಗಲಿದೆ. ಪ್ರತಿ ಶನಿವಾರ ಸಂಜೆ ಗಂಟೆ 4-30ರಿಂದ 6-30ರವರೆಗೆ ನಡೆಯುವ ಈ ತರಗತಿಯಲ್ಲಿ ಎರಡು ತಿಂಗಳಿಗೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9845265967, 9844017881, 9845734967, 9844152967 ಸಂಖ್ಯೆಯನ್ನು ಸಂಪರ್ಕಿಸಿರಿ.
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ದಶಮಾನೋತ್ಸವ ಸಮಾರಂಭದಲ್ಲಿ ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆಯನ್ನು ದಿನಾಂಕ 01 ಜೂನ್ 2025ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಏರ್ಪಡಿಸಲಾಗಿದ್ದು, ಒಡಿಯೂರು ಕ್ಷೇತ್ರದ ಸಾದ್ವಿ ಮಾತಾನಂದಮಯಿ ಕುಣಿತ ಭಜನಾ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಕುಣಿತ ಭಜನಾ ಸ್ಪರ್ಧಾ ನಿಯಮ : ಸಾಂಪ್ರದಾಯಿಕ ಕುಣಿತ ಭಜನೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪ್ರತಿಯೊಂದು ತಂಡಕ್ಕೂ 15ನಿಮಿಷಗಳ ಕಾಲಾವಕಾಶ ನೀಡಲಾಗುವುದು. ಒಂದು ತಂಡದಲ್ಲಿ ಕನಿಷ್ಠ 12 ಮಂದಿ ಮತ್ತು ಹಿಮ್ಮೇಳ ಸೇರಿ ಗರಿಷ್ಠ 16 ಮಂದಿ ಭಾಗವಹಿಸುವುದು. ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕ ವಿಭಾಗ ಇರುವುದಿಲ್ಲ. ಗಣಪತಿ ಸ್ತುತಿಯಿಂದ ಮಂಗಳದವರೆಗೆ ಒಬ್ಬ ಭಜಕ ಒಂದು ಭಜನೆಯನ್ನು ಮಾತ್ರ ಹಾಡಬಹುದು. ಮೊದಲ 20 ತಂಡಗಳಿಗೆ ಮಾತ್ರ ಅವಕಾಶ. ಸ್ಪರ್ಧೆಯ ಕ್ರಮಾಂಕವನ್ನು ಸ್ಪರ್ಧೆಯ ದಿನ, ಸ್ಥಳದಲ್ಲಿಯೇ ತೆಗೆಯಲಾಗುವುದು. ಹಾಗಾಗಿ ಜೂನ್ 1 ರಂದು ಬೆಳಿಗ್ಗೆ 8.00 ರ ಒಳಗೆ ಎಲ್ಲಾ ತಂಡಗಳು ಹಾಜರಿರುವುದು ಕಡ್ಡಾಯ.…
ಕಟೀಲು: ಮುಂಬೈ ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೇಬಲ್ ಟ್ರಸ್ಟ್ ಇದರ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮ ದಿನಾಂಕ 28 ಹಾಗೂ 29 ಮೇ 2025ರಂದು ಕಟೀಲು ಸರಸ್ವತೀ ಸದನದಲ್ಲಿ ನಡೆಯಿತು. ಸಮಾರಂಭದಲ್ಲಿ ಮುಂಬೈನಲ್ಲಿ ಮಾತ್ರವಲ್ಲದೆ ಐದಾರು ರಾಜ್ಯಗಳಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಮಂದಿಗೆ ಯಕ್ಷಗಾನ ತರಬೇತಿಯನ್ನು ನೀಡುತ್ತ ಬಂದಿರುವ ಯಕ್ಷಗುರು ಕಟೀಲು ಸದಾನಂದ ಶೆಟ್ಟಿಯವರ ನೇತೃತ್ವದಲ್ಲಿ ಅವರ ಶಿಷ್ಯರಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ಮುಂಬೈ ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಹಾಗೂ ಕಟೀಲು ಯಕ್ಷಕಲಾ ವೇದಿಕೆ ವಸಾಯಿಯ ಅರವತ್ತಕ್ಕೂ ಹೆಚ್ಚು ಬಾಲಕಲಾವಿದರಿಂದ ‘ಶ್ರೀಕೃಷ್ಣಲೀಲೆ ಕಂಸ ವಧೆ’ ಹಾಗೂ’ ಬ್ರೌಪದಿ ಪ್ರತಾಪ’ ಪ್ರಸಂಗಗಳು ಪ್ರದರ್ಶಿತವಾದವು. ಮುಂಬೈನಿಂದಲೇ ಬಂದಿದ್ದ ಇನ್ನೂರಷ್ಟು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜನಾರ್ದನ ದೇವಾಡಿಗ ಹಾಗೂ ದೇವೇಂದ್ರ ಬುನ್ನಾನ್ ಅವರಿಗೆ ‘ಯಕ್ಷಭ್ರಾಮರಿ ಪ್ರಶಸ್ತಿ’, ಮಾಸ್ಟರ್ ಶೌರ್ಯ ಶಿವಾನಂದ ಪೂಜಾರಿ, ವಂಶಿಕ್ ಸುರೇಶ್ ಪೂಜಾರಿ, ಕುಮಾರಿ ಆತ್ರಿ ಮೋಹನ್ ಶೆಟ್ಟಿ, ಶ್ರಾವಣಿ ಶೇಖರ್ ಪೂಜಾರಿ, ಶ್ಲೋಕಾ ಸತೀಶ ಶೆಟ್ಟಿ, ಮಾನ್ವಿ ಗಿರೀಶ್…
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದ ಸಕಲ ರಂಗಹೆಜ್ಜೆ ಸಂಸ್ಥೆಯು ಆಯೋಜಿಸಿದ ಒಂದು ತಿಂಗಳ ‘ವಸಂತ ಚಿಟ್ಟೆಗಳು – 2025’ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ದಿನಾಂಕ 10 ಹಾಗೂ 11 ಮೇ 2025 ರಂದು ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದಲ್ಲಿ ನಡೆಯಿತು. ಸಕಲ ರಂಗ ಹೆಜ್ಜೆ ಟ್ರಸ್ಟ್ (ರಿ) ಸಂಸ್ಥೆಯ ಖಜಾಂಚಿಯಾದ ಶ್ರೀಮತಿ ನಾಗಮಣಿ ಪಿ. ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಪ್ರಸಿದ್ದ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ, ನಗೆಮಾತಿನ ಸರದಾರ ಶ್ರೀ ರಿಚರ್ಡ್ ಲೂಯಿಸ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಿರಿಯ ರಂಗಕಮಿ೯ಗಳಾದ ಶ್ರೀ ಕಾನಾ ಶ್ರೀನಿವಾಸ್, ಕನ್ನಡ ಸಾಹಿತ್ಯ ಪರಿಷತ್ತು ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರಾದ ಶ್ರೀ ಕೋಡಿ ರಂಗಪ್ಪ, ಚಲನಚಿತ್ರ ಸಂಭಾಷಣೆ ಬರಹಗಾರರು ಹಾಗೂ ನಿರ್ದೇಶಕರಾದ ಶ್ರೀ ವರದರಾಜು, ಪ್ರೌಢಶಾಲಾ ನಿವೃತ್ತ ಶಿಕ್ಷಕರು ಹಾಗೂ ಸಾಹಿತಿಗಳಾದ ಶ್ರೀ ಪಿ. ಸರ್ಧಾರ್ಚಾಂದ್ ಪಾಷ, ಪೊಲೀಸ್ ಇನ್ಸ್ಪೆಕ್ಟರ್ ಶ್ರೀಮತಿ ನಿರ್ಮಲ .ವಿ, ಸಮಾಜ ಸೇವಕರಾದ ಶ್ರೀ ಸಿ.ಎಲ್. ಶ್ರೀನಿವಾಸ್ (ಡ್ಯಾನ್ಸ್ ಸೀನು), ಪಂಚಗಿರಿ…
ಮೈಸೂರು : ಕಲಾ ಸಂವಹನ ಟ್ರಸ್ಟ್ ಇದರ ವತಿಯಿಂದ ಸಿತಾರ್ ಮಾಧುರ್ಯ – ಸಮೂಹ ಸಿತಾರ್ ವಾದನ, ರಾಗ್ ಚಿಕಿತ್ಸಾ – ಪುಸ್ತಕ ಲೋಕಾರ್ಪಣೆ ಮತ್ತು ಸಿತಾರ್ ತರಗತಿಗಳ ಪ್ರಾರಂಭೋತ್ಸವವನ್ನು ದಿನಾಂಕ 31 ಮೇ 2025ರಂದು ಸಂಜೆ 5-30 ಗಂಟೆಗೆ ಮೈಸೂರಿನ ರಮಾ ಗೋವಿಂದ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಮೊದಲು ‘ಸಿತಾರ್ ಮಾಧುರ್ಯ’ ಡಾ. ಮೊಹಸಿನ್ ಖಾನ್ ಮತ್ತು ಶಿಷ್ಯ ವೃಂದದಿಂದ ಸಮೂಹ ಸಿತಾರ್ ವಾದನ ಪ್ರಸ್ತುತಗೊಳ್ಳಲಿದ್ದು, ಉಸ್ತಾದ್ ನಿಸಾರ್ ಅಹ್ಮದ್, ಪಂಡಿತ್ ಚಿನ್ಮಯ್ ನಾಮಣ್ಣವರ್ ಮತ್ತು ಚಾರುದತ್ ಮಹಾರಾಜ್ ಸಹಕರಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ವಿದುಷಿ ಸಂಗೀತಾ ಕಟ್ಟಿ ಕುಲಕರ್ಣಿ ಇವರಿಂದ ಗಾಯನ ಕಾರ್ಯಕ್ರಮ ನಡೆಯಲಿದ್ದು, ಶ್ರೀಧರ್ ಮಾಂಡ್ರೆ ತಬಲಾದಲ್ಲಿ ಹಾಗೂ ಸತೀಶ್ ಕೊಳ್ಳಿ ಇವರು ಹಾರ್ಮೋನಿಯಂನಲ್ಲಿ ಸಹಕರಿಸಲಿದ್ದಾರೆ.
ಉಪ್ಪಳ : ತುಲುವೆರೆ ಕಲ ಸಂಘಟನೆ ವತಿಯಿಂದ ದಿನಾಂಕ 01 ಜೂನ್ 2025ರಂದು ಬೆಳಗ್ಗೆ 9-30 ಗಂಟೆಗೆ ಉಪ್ಪಳ ಕೊಂಡೆವೂರು ಮಠದ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ‘ತುಲುವೆರೆ ಕಲ ವರ್ಸೋಚ್ಚಯ’ ನಡೆಯಲಿದೆ. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ತುಲುವೆರೆ ಕಲ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅಧ್ಯಕ್ಷತೆ ವಹಿಸುವರು. ದ.ಕ. ಜಿಲ್ಲಾ ಅ.ಭಾ.ಸಾ.ಪ. ಅಧ್ಯಕ್ಷ ಪಿ.ಬಿ. ಹರೀಶ್ ರೈ, ಮಂಗಳೂರು ಕೋಟಿ ಚೆನ್ನಯ ಸೇವಾ ಬ್ರಿಗೇಡ್ ಅಧ್ಯಕ್ಷ ಕಿರಣ್ ಕುಮಾರ್ ಕೋಡಿಕಲ್, ಸಮಾಜ ಸೇವಕ ಕಾರ್ತಿಕ್ ಶೆಟ್ಟಿ ಮಜಿಬೈಲು ಭಾಗವಹಿಸುವರು. ‘ಗೇನದ ಮಂಟಮೆ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ನಾಡು, ನುಡಿ, ಸಂಸ್ಕೃತಿಯ ಉಳಿವಿನಲ್ಲಿ ಭಾಷೆಯ ಪಾತ್ರ’ದ ಕುರಿತು ಶ್ರೀಕಾಂತ್ ಕಾರ್ಕಳ, ‘ತುಳುನಾಡಿನ ಸಾಹಿತ್ಯ ಪರಂಪರೆ’ ಕುರಿತು ಮಹಿ ಮೂಲ್ಕಿ ವಿಚಾರ ಮಂಡಿಸಲಿದ್ದಾರೆ. ಕಲತ ಬೊಳ್ಳಿ ಸನ್ಮಾನವನ್ನು ರಾಜೇಶ್ ಶೆಟ್ಟಿ ದೋಟ ಹಾಗೂ ಶ್ರೀಶಾವಾಸವಿ ತುಳುನಾಡ್ ಇವರಿಗೆ ಪ್ರದಾನಿಸಲಾಗುವುದು. ಇದೇ ಕಾರ್ಯಕ್ರಮದಲ್ಲಿ ಅಶೋಕ ಎನ್. ಕಡೇಶಿವಾಲಯ ಇವರ ‘ಬದ್ಕ್…