Author: roovari

ಮಂಗಳೂರು : ದೇರೆಬೈಲು ಕೊಂಚಾಡಿಯ ಶ್ರೀರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನಗರದ ನೃತ್ಯ ಸುಧಾ ಸಂಸ್ಥೆಯ ವಿದುಷಿ ಸೌಮ್ಯಾ ಸುಧೀಂದ್ರ ರಾವ್ ಅವರ ಶಿಷ್ಯ ವರ್ಗ ದಿನಾಂಕ :23-05-2023 ಮಂಗಳವಾರ ರಾತ್ರಿ ಪ್ರಸ್ತುತಪಡಿಸಿದ ಭರತನಾಟ್ಯ ಕಾರ್ಯಕ್ರಮ ಕಲೆ ಮತ್ತು ಭಕ್ತಿ ಮೇಳೈಸಿ ಸಂಭ್ರಮದ ವಾತಾವರಣ ಸೃಷ್ಟಿಸಿತು. ಭಾವಪೂರ್ಣ ನಾಟ್ಯಭಂಗಿ ಮತ್ತು ಮೋಹಕ ಆಂಗಿಕ ಅಭಿನಯದ ಮೂಲಕ ಕಥಾಸಾರವನ್ನು ಪ್ರಸ್ತುತಪಡಿಸಿದ ಕಲಾವಿದರು ಸಹೃದಯಿಗಳನ್ನು ರಸಸಾಗರದಲ್ಲಿ ಮುಳುಗೇಳುವಂತೆ ಮಾಡಿದರು. ಕೃಷ್ಣನ ಲೀಲೆ, ರಾಮನ ಮಹಿಮೆ ಮತ್ತು ಹನುಮನ ನಿಷ್ಠೆ ಇತ್ಯಾದಿಗಳನ್ನು ನೃತ್ಯ ರೂಪಕದ ಮೂಲಕ ಕಂಡ ಕಲಾಪ್ರೇಮಿಗಳ ಮನಸ್ಸು ಭಕ್ತಿ-ಭಾವದಲ್ಲಿ ಆರ್ದ್ರವಾಯಿತು. ಪುಷ್ಪಾಂಜಲಿಯ ನಂತರ ಗೌಳ ರಾಗದಲ್ಲಿ ಏಕದಂತ ಗಣೇಶನ ಸ್ತುತಿಯ ಮೂಲಕ ಪ್ರೇಕ್ಷಕರ ಮನೋರಂಗಕ್ಕೆ ಕಲಾವಿದರು ಪ್ರವೇಶ ಮಾಡಿದ ಬೆನ್ನಲ್ಲೇ ಚಿಕ್ಕಮಕ್ಕಳು ಪ್ರಸ್ತುತಪಡಿಸಿದ ಗಣೇಶ, ಸರಸ್ವತಿ ಮುಂತಾದವರನ್ನು ಕೊಂಡಾಡುವ ನಾಲ್ಕು ಶ್ಲೋಕಗಳ ಗುಚ್ಛವು ಮುದ ನೀಡಿತು. ಬೇಹಾಗ್ ರಾಗದಲ್ಲಿ ಡಿವಿಜಿ ಅವರ ಅಂತಃಪುರ ಗೀತೆಗಳ ‘ಏನೇ…

Read More

ಮಂಗಳೂರು : ನಗರದ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ದಿನಾಂಕ 19-05-2023 ಶುಕ್ರವಾರದಂದು ಮಂಗಳೂರು ವಿಶ್ವವಿದ್ಯಾನಿಲಯದ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಹಾಗೂ ವಿವಿ ಕಾಲೇಜಿನ ಕನ್ನಡ ವಿಭಾಗ ಮತ್ತು ಕನ್ನಡ ಸಂಘಗಳ ವತಿಯಿಂದ ಆಯೋಜಿಸಲಾಗಿದ್ದ ‘ಅಂಬಿಗರ ಚೌಡಯ್ಯ : ವಚನ ಮೀಮಾಂಸೆ’ ಎಂಬ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರಿನ ಪೊಲೀಸ್ ಆಯುಕ್ತರಾದ ಶ್ರೀ ಕುಲದೀಪ್ ಆರ್. ಜೈನ್ ಅವರು “ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ನಿಖರವಾದ ಗುರಿಯಿದ್ದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ಗುರಿ ಸ್ಪಷ್ಟವಾಗಿದ್ದರೆ ಯಾರೂ ನಮ್ಮನ್ನು ಗೊಂದಲಕ್ಕೀಡುಮಾಡುವಂತಿಲ್ಲ. ಅರ್ಹರ ಜೊತೆ ಮಾತುಕತೆ, ವಿಶ್ಲೇಷಣೆ ನಮ್ಮ ಗುರಿಯನ್ನು ನಿಖರವಾಗಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲಾಗದಿದ್ದರೆ ನಮ್ಮ ಋಣಾತ್ಮಕ ಅಂಶಗಳೆಡೆಗೆ ಗಮನಹರಿಸಬೇಕು. ಯಾವುದೇ ನೆಪವೊಡ್ಡಿದ ನಮ್ಮ ಕೊರತೆಯನ್ನು ಒಪ್ಪಿಕೊಳ್ಳಬೇಕು” ಎಂದರು. ತಮ್ಮ ಆಶಯ ನುಡಿಗಳಲ್ಲಿ ಮದರಾಸು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್‌ನ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷರು ಡಾ. ತಮಿಳ್…

Read More

ಧಾರವಾಡ: ಧಾರವಾಡದ ಅಭಿನಯ ಭಾರತಿ ಪ್ರದರ್ಶಿಸುವ, ಶ್ರೀ ಗಜಾನನ ಯುವಕ ಮಂಡಳ (ಶೇಷಗಿರಿ ಕಲಾತಂಡ ) ಪ್ರಸ್ತುತಪಡಿಸುವ ‘ಚಾವುಂಡರಾಯ’ ನಾಟಕವು ದಿನಾಂಕ 28-05-2023ರ ಸಂಜೆ ಕರ್ನಾಟಕ ಕಾಲೇಜು ಆವರಣದಲ್ಲಿರುವ ಅಣ್ಣಾಜಿರಾವ ಸಿರೂರ ರಂಗ ಮಂದಿರ ‘ಸೃಜನಾ’ ದಲ್ಲಿ ಪ್ರದರ್ಶನಗೊಳ್ಳಲಿದೆ . ಜಯರಾಮ್ ರಾಯ್‌ಪುರ ರಚಿಸಿದ ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಶ್ವೇತಾರಾಣಿ ಎಚ್. ಕೆ ಅವರದ್ದು. ಹರೀಶ ಗುರಪ್ಪನವರ ಬೆಳಕಿನ ವಿನ್ಯಾಸ ಮಾಡುವ ಈ ನಾಟಕಕ್ಕೆ ಡಾ. ಶ್ರೀಪಾದ ಭಟ್ ಸಂಗೀತ ನೀಡಿದ್ದು ಗಣೇಶ್ ಹೆಗ್ಗೋಡು ಮತ್ತು ಲಕ್ಷ್ಮಣ ರೊಟ್ಟಿ ಸಂಗೀತ ನಿರ್ವಹಿಸಲಿರುವರು.

Read More

ಮಂಗಳೂರು: ‘ಸರಯೂ ಬಾಲ ಯಕ್ಷ ವೃಂದ ಕೋಡಿಕಲ್’ ಇವರು ಕದ್ರಿ ದೇವಸ್ಥಾನ ಸಹಕಾರದೊಂದಿಗೆ ನಡೆಯುವ ಸರಯೂ ಬಾಲ ಯಕ್ಷ ವೃಂದದ 23ನೇ ವರ್ಷದ ಸಪ್ತಾಹವನ್ನು ದಿನಾಂಕ 25-05-2023ರಂದು ವೇದಮೂರ್ತಿ ನರಸಿಂಹ ತಂತ್ರಿಗಳು ಶ್ರೀ ಕ್ಷೇತ್ರ ಕದ್ರಿ ದೇವಳದ ರಾಜಾಂಗಣದಲ್ಲಿ ಉದ್ಘಾಟಿಸುತ್ತಾ “ಯಕ್ಷಗಾನವು ಸರ್ವರನ್ನೂ ತಲಪುವ ರಂಗ ಕಲೆ, ಹಿರಿಯರಿಂದಾರಂಭಿಸಿ ಕಿರಿಯರವರೆಗೂ ಅದು ಸರ್ವವ್ಯಾಪಿಯಾಗಿ ಆಕರ್ಷಿಸುತ್ತಿದೆ. ಹೊಸ ಚಿಗುರು ಚಿಣ್ಣರು ಸರಯೂ ಸಂಸ್ಥೆಯ ಮೂಲಕ ಜಗತ್ತಿಗೇ ಪರಿಚಯಿಸಲ್ಪಡುತ್ತಾರೆ. 23 ವರ್ಷಗಳಿಂದ ಅನೇಕ ವಿದ್ಯಾರ್ಥಿಗಳು ರಂಗಕ್ಕೆ ಪರಿಚಯಿಸಲ್ಪಟ್ಟಿದ್ದಾರೆ. ಮೇಳಗಳಲ್ಲೂ ಕಲಾವಿದರಾಗಿ ಕಲಾಸೇವೆ ನಡೆಸುತ್ತಿದ್ದಾರೆ. ಪತ್ತನಾಜೆಯ ಈ ದಿನದಿಂದಾರಂಭವಾಗುವ ಈ ಮಕ್ಕಳ ಮೇಳಕ್ಕೆ ಸಪ್ತಾಹಕ್ಕೆ ಶುಭ ಕೋರುತ್ತೇನೆ” ಎಂದು ಕಿಶೋರರಿಗೆ ಶುಭವನ್ನು ಕೋರಿದರು. ಸಂಸ್ಥೆಯ ಗೌರವ ಸಂಚಾಲಕರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು “ಸಂಸ್ಥೆಯ ಏಳು-ಬೀಳುಗಳನ್ನು ವಿವರಿಸುತ್ತಾ ಕಲೆಗೆ ರಾಜಾಶ್ರಯ ಬೇಕು. ಆ ಕಾರ್ಯವನ್ನು ಸಜ್ಜನ ಕಲಾಪೋಷಕರು ಮಾಡಬೇಕು. ಸರಯೂ ಸಂಸ್ಥೆಯನ್ನು ಎಲ್ಲರೂ ಸೇರಿ ಬೆಳೆಸೋಣ” ಎಂದರು. ಮುಖ್ಯ ಅತಿಥಿಗಳಾಗಿ ಎಸ್.ಸಿ ಎಸ್. ಕಾಲೇಜಿನ…

Read More

ಮೈಸೂರು : ಮೈಸೂರಿನ ‘ಸಮತಾ ಅಧ್ಯಯನ ಕೇಂದ್ರ’ವು ಸ್ಥಾಪಕ ಅಧ್ಯಕ್ಷೆ ಡಾ.ವಿಜಯಾ ದಬ್ಬೆ ಅವರ ನೆನಪಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಜ್ಯ ಮಟ್ಟದ ‘ಕವನ/ಕಥಾ ಸ್ಪರ್ಧೆ-2023’ಯ ಕವನ ವಿಭಾಗದಲ್ಲಿ ಬೆಂಗಳೂರು ವಿಜಯಾ ಟೀಚರ್ಸ್‌ ಕಾಲೇಜಿನ ಎಂ.ಸಿ.ಜಗದೀಶ ಪ್ರಥಮ, ಕಾಸರಗೋಡಿನ ಕೇರಳ ಕೇಂದ್ರೀಯ ವಿವಿಯ ಕೆ. ಸ್ವಾತಿ ದ್ವಿತೀಯ ಹಾಗೂ ಸಾಗರ ತಾಲೂಕು ಹೊಸಕೊಪ್ಪದ ಎಚ್‌.ಜಿ. ಅಭಿನಂದನ್ ತೃತೀಯ ಬಹುಮಾನ ಪಡೆದಿದ್ದಾರೆ. ಪ್ರೋತ್ಸಾಹಕರ ಬಹುಮಾನ ಪಡೆದವರು ಪಿ. ರಂಜಿತಾ (ಕೇರಳ ಕೇಂದ್ರೀಯ ವಿವಿ), ಜಿ.ಎಂ ಸಂಜಯ್ (ಉಜಿರೆ ಎಸ್‌.ಡಿ.ಎಂ. ಕಾಲೇಜು), ಚೇತನ್ (ಮೈಸೂರು ಕುವೆಂಪು ನಗರ ಪ್ರ.ದ.ಕಾಲೇಜು), ತರುಣ್‌ ವಿಶ್ವಜಿತ್ (ಚಿಕ್ಕ ಬಳ್ಳಾಪುರ, ಪ್ರ.ದ.ಕಾಲೇಜು), ಎನ್.ಲಾವಣ್ಯ (ಎಚ್.ಡಿ.ಕೋಟೆ ತಾ.ರಾಗಲಕುಪ್ಪೆ), ಲಕ್ಷ್ಮಿ ಶ್ರೀಶೈಲ ಕಾತ್ರಾಳ (ಹೊನವಾಡ, ವಿಜಯಪುರ ಜಿಲ್ಲೆ), ಆನಂದ ಕುಮಾರ್ (ಮೈಸೂರು ಸಿದ್ಧಾರ್ಥ ನಗರ ಪ್ರ.ದ.ಕಾಲೇಜು), ಬಿ.ಎಸ್‌. ಕಿಶನ್‌ ಗೌಡ (ಮೂಡುಬಿದಿರೆ ಆಳ್ವಾಸ್ ಕಾಲೇಜು), ಶಿಲ್ಪಾ ಶ್ರೀನಿವಾಸ ರಾಜು (ಸಂತ ಫ್ರಾನ್ಸಿಸ್ ಕಾಲೇಜು, ಕೋರಮಂಗಲ), ಸುಮಾ ಎಂ. (ಸುರಾನಾ ಕಾಲೇಜು, ಪೀಣ್ಯಾ ಕ್ಯಾಂಪಸ್).…

Read More

ಉಡುಪಿ : ಉಡುಪಿ ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಕೃಷ್ಣಾಪುರ ಮಠ ಇವರ ಆಶ್ರಯದಲ್ಲಿ ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್ ಕಿದಿಯೂರು, ಉಡುಪಿ ಇದರ ಪ್ರಥಮ ವಾರ್ಷಿಕೋತ್ಸವ ಸಮಾರಂಭವು ದಿನಾಂಕ :28-05-2023ನೇ ಭಾನುವಾರ ಮಧ್ಯಾಹ್ನ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿಗಳ ದಿವ್ಯ ಉಪಸ್ಥಿತಿ ಮತ್ತು ಅನುಗ್ರಹ ಸಂದೇಶದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಡಾ. ನಿ. ಬೀ. ವಿಜಯ ಬಲ್ಲಾ‌ಳ್ ಶುಭಾಶಂಸನೆಗೈಯಲಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರು ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕರಾದ ಶ್ರೀ ಡಾ.ತಲ್ಲೂರು ಶಿವರಾಮ ಶೆಟ್ಟಿ, ಕಿದಿಯೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕರಾದ ಶ್ರೀ ಉದಯ ಕುಮಾರ್ ಶೆಟ್ಟ, ತಿರುಮಲ ಜ್ಯುವೆಲ್ಲರ್ಸ್ ಶ್ರೀ ಗಂಗಾಧರ ಆಚಾರ್ಯ, ಅಂಬಲಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶ್ರೀ ಸೋಮನಾಥ್ ಬಿ.ಕೆ. ಇವರುಗಳು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಸಿದ್ಧ…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಮತ್ತು ಸೂರಜ್ ಪದವಿ ಪೂರ್ವ ಕಾಲೇಜು ಮುಡಿಪು ಸಹಯೋಗದೊಂದಿಗೆ ದಿನಾಂಕ 25-05-2023ರಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಕಾರ್ಯಕ್ರಮವು ಸೂರಜ್ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸಾಹಿತಿ ಭಾ. ಭ. ಮಜಿಬೈಲು ದತ್ತಿ ಕೊಡುಗೆ ನೀಡಿದವರು ಶ್ರೀಮತಿ ಸವಿತಾ ಭಾಸ್ಕರ ಭಂಡಾರಿ. ಪ್ರಧಾನ ಅತಿಥಿಗಳಾಗಿದ್ದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಬಿ. ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಡಾ. ಮಂಜುನಾಥ ಎಸ್.ರೇವಣ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಗೌರವ ಕೋಶಾಧಿಕಾರಿ ಶ್ರೀ ಎನ್. ಸುಬ್ರಾಯ ಭಟ್ ಇವರು ಸಾಹಿತಿ ಶ್ರೀ ಭಾಸ್ಕರ ಭಂಡಾರಿ ಮಜಿಬೈಲು ಇವರ ಬಗ್ಗೆ ಮತ್ತು ಅವರ ಸಾಹಿತ್ಯದ ಕುರಿತು ಉಪನ್ಯಾಸಗೈದರು. ಮಂಗಳೂರು ತಾಲೂಕು…

Read More

ಕಾಸರಗೋಡು : ಹೈದರಾಬಾದ್ ಮೂಲದ ಇಂಡಿಯಾ ಪಿ.ಎಸ್.ಸಿ. ಆಫ್ ಸೈಟ್ ಕಾನ್ಫರೆನ್ಸ್ – 2023 ಬೇಕಲದ ತಾಜ್ ರೆಸಾರ್ಟ್ ನಲ್ಲಿ ದಿನಾಂಕ 23-05-2023ರಂದು ಜರಗಿತು. ಈ ಸಂದರ್ಭದಲ್ಲಿ ಮಂಗಳೂರಿನ ತೋನ್ಸೆ ಯಕ್ಷ ಬಳಗದಿಂದ ಇಂಗ್ಲಿಷ್ ಭಾಷೆಯಲ್ಲಿ ‘ದಿ ವಿಕ್ಟರಿ ಆಫ್ ಸುದರ್ಶನ’ (ಸುದರ್ಶನ ವಿಜಯ) ತೆಂಕುತಿಟ್ಟು ಯಕ್ಷಗಾನವನ್ನು ಪ್ರದರ್ಶಿಸಲಾಯಿತು. ಶ್ಯಾಡ್ಸ್ ಈವೆಂಟ್ಸ್ ಅವರ ಸಂಯೋಜನೆಯಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವತರಾಗಿ ತೋನ್ಸೆ ಪುಷ್ಕಳ ಕುಮಾರ್, ಹಿಮ್ಮೇಳದಲ್ಲಿ ಶರತ್ ಕುಮಾರ್ ಕದ್ರಿ, ಸುದಾಸ್ ಕಾವೂರು ಮತ್ತು ಹರಿಶ್ಚಂದ್ರ ನಾಯಗ ಮಾಡೂರು ಪಾಲ್ಗೊಂಡರು. ಮುಮ್ಮೇಳದಲ್ಲಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ (ದೇವೇಂದ್ರ), ಡಾ. ದಿನಕರ ಎಸ್.ಪಚ್ಚನಾಡಿ (ಸುದರ್ಶನ) ಮತ್ತು ಶರತ್ ಪಣಂಬೂರು (ಶತ್ರು ಪ್ರಸೂದನ) ಪಾತ್ರ ವಹಿಸಿದರು. ತಂಡದ ಬಗ್ಗೆ ಪರಿಚಯ ನೀಡಿದ ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿ ಕರಾವಳಿಯ ಸಾಂಪ್ರದಾಯಿಕ ಯಕ್ಷಗಾನ ಕಲೆಯ ಮಹತ್ವವನ್ನು ತಿಳಿಸಿ ಆಯ್ದುಕೊಂಡ ಪ್ರಸಂಗದ ಕಥಾಸಾರವನ್ನು ಆಂಗ್ಲ ಭಾಷೆಯಲ್ಲಿ ವಿವರಿಸಿದರು. ಪಿ.ಎಸ್.ಸಿ. ಮುಖ್ಯಸ್ಥರು ಮತ್ತು ಕಂಪೆನಿಯ…

Read More

ತೆಕ್ಕಟ್ಟೆ : ಕಳೆದ ಕೆಲವು ವರ್ಷಗಳಿಂದ ಹೊಸ ಹೊಸ ಆವಿಷ್ಕಾರದೊಂದಿಗೆ ತೆಕ್ಕಟ್ಟೆಯ ಉಭಯ ಸಂಸ್ಥೆಗಳು ಚಿಣ್ಣರ ಶಾಲಾ ರಜಾದಿನಗಳನ್ನು ಸುದುಪಯೋಗಪಡಿಸಿಕೊಳ್ಳಬೇಕೆಂಬ ಉದ್ಧೇಶದಿಂದ ‘ರಜಾರಂಗು-ರಂಗ ಮಂಚ’ ಶಿಬಿರವನ್ನು ಆಯೋಜಿಸುತ್ತಾ ಬಂದಿದೆ. ಹಲವಾರು ಪ್ರಸಿದ್ಧ ಗಣ್ಯರು ಸಂಪನ್ಮೂಲ ವ್ಯಕ್ತಿಯಾಗಿ ಭಾರತದ ಹಲವಾರು ಚಟುವಟಿಕೆಗಳನ್ನು ಮಕ್ಕಳಿಗೆ ಉಣಬಡಿಸುತ್ತಾ ಶಿಬಿರ ಉನ್ನತ ಮಟ್ಟವನ್ನು ತಲುಪಿದೆ. ಕರಾವಳಿ ಭಾಗದಲ್ಲಿ ಹೊಸ ಹೊಸ ವಿಭಿನ್ನ ಚಟುವಟಿಕೆಗಳನ್ನು ವರ್ಷಪೂರ್ತಿ ಕಲಾಸಕ್ತರಿಗಾಗಿ ನಡೆಸುತ್ತ ಸಾಗಿ ಬಂದ ಸಂಸ್ಥೆ ಕಳೆದ ವರ್ಷ 150 ಮಕ್ಕಳ ಶಿಬಿರವನ್ನು 30 ದಿನಗಳೂ ಅದ್ಧೂರಿಯಾಗಿ ನಡೆಸಿದ್ದು ಈ ಭಾರಿ ಹದಿನೈದು ದಿನಗಳ ಬೇಸಿಗೆ ಶಿಬಿರವನ್ನು ಬಹಳ ಚೊಕ್ಕದಾಗಿ ಪೂರೈಸಿ ಇದೀಗ ಸಮಾರೋಪದತ್ತ ಸಾಗಿ ಬಂದಿದೆ. ಉಭಯ ಸಂಸ್ಥೆಗಳು ಬೇರೆ ಬೇರೆಯಾಗಿ ಮೇ 27 ಮತ್ತು 28ರಂದು ಸಮಾರೋಪಕ್ಕೆ ಸಜ್ಜಾಗಿದ್ದು, ಮೊದಲ ದಿನವಾಗಿ ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಸಂಸ್ಥೆಯ ಆಶ್ರಯದಲ್ಲಿ ದಿ. ಕಾಳಿಂಗ ನಾವುಡ ಸಂಸ್ಮರಣಾ ಕಾರ್ಯಕ್ರಮವಾಗಿ ಶಿಬಿರಾರ್ಥಿಗಳಿಂದ ಸೀತಾರಾಮ ಶೆಟ್ಟಿ ಕೊಯಿಕೂರು ನಿರ್ದೇಶನದಲ್ಲಿ ‘ದ್ರೌಪದಿ ಪ್ರತಾಪ’…

Read More

ಉಡುಪಿ : ಉಡುಪಿಯ ಚಿತ್ರಕಲಾಮಂದಿರ ಕಲಾ ವಿದ್ಯಾಲಯವು ಕನ್ನಡ ವಿಶ್ವವಿದ್ಯಾಲಯ, ಹಂಪಿ ಸಂಯೋಜನೆಯೊಂದಿಗೆ ‘ಚಿತ್ರಕಲೆಯಲ್ಲಿ ಪದವಿ’ ಪಡೆಯುವ ಅವಕಾಶ ಒದಗಿಸಿದೆ. ಇದಕ್ಕೆ ಅಗತ್ಯವಿರುವ ವಿದ್ಯಾರ್ಹತೆ : ‘ಬ್ಯಾಚುಲರ್ ಇನ್ ವಿಜುವಲ್ ಆರ್ಟ್’ (BVA) ಪದವಿಗೆ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿರಬೇಕು ಹಾಗೂ ‘ಕಲಾಮೂಲ’ (PUC ತತ್ಸಮಾನ)ಕ್ಕೆ ಎಸ್.ಎಸ್.ಎಲ್.ಸಿ. ತೇರ್ಗಡೆ ಹೊಂದಿರಬೇಕು. ಕಿವುಡ ಮತ್ತು ಮೂಗರಿಗೂ ಪ್ರವೇಶಕ್ಕೆ ಅವಕಾಶವಿದೆ. ಹಾಸ್ಟೆಲ್‌, ವಿದ್ಯಾರ್ಥಿ ವೇತನ, ಮಧ್ಯಾಹ್ನದ ಊಟ, 1000 ಪುಸ್ತಕಗಳ ಗ್ರಂಥಾಲಯಗಳ ಸೌಲಭ್ಯವಿದೆ. ಬೋಧನಾ ವಿಷಯಗಳು – ನಿಸರ್ಗ, ಭಾವಚಿತ್ರ, ಶಿಲ್ಪ, ಮ್ಯೂರಲ್, ಕರಕುಶಲ ಕಲೆ, ಫೋಟೋಗ್ರಾಫಿ, ಸ್ಕ್ರೀನ್ ಪ್ರಿಂಟ್ ಇತ್ಯಾದಿ. ಉದ್ಯೋಗ ಅವಕಾಶಗಳು – ಸಿನೇಮಾ, ಎನಿಮೇಶನ್, ಜಾಹೀರಾತು, ಡ್ರಾಯಿಂಗ್/ಕಾಫ್ಟ್ ಟೀಚರ್, ಗ್ರಾಫಿಕ್‌ ಡಿಸೈನ್, ಇಂಟಿರಿಯರ್ ಡೆಕೊರೇಶನ್. ಸಂಪರ್ಕ ವಿಳಾಸ : ಚಿತ್ರಕಲಾ ಮಂದಿರ ಕಲಾ ವಿದ್ಯಾಲಯ, ರಾಜ್ ಟವರ್ಸ್ ಬಲಕ್ಕೆ, ಸಿಟಿ ಬಸ್‌ ಸ್ಟಾಂಡ್, ಉಡುಪಿ -576 101. ದೂರವಾಣಿ ಸಂಖ್ಯೆ : 97392 49951, 7204144673, 8202522342 ಇಮೈಲ್ :…

Read More