Author: roovari

ವಿಜಯಪುರ : ನಗರದ ಕುಮಾರವ್ಯಾಸ ಭಾರತ ಭವನದಲ್ಲಿ ಶ್ರೀ ಕುಮಾರವ್ಯಾಸ ಭಾರತ ವೇದಿಕೆಯಿಂದ ಯೋಗೀಂದ್ರ ಕವಿ ಕುಮಾರವ್ಯಾಸರ ಜಯಂತಿಯನ್ನು ದಿನಾಂಕ 27-04-2023 ಗುರುವಾರದಂದು ಸಂಭ್ರಮ-ಸಡಗರದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಮಾರಂಭವು ‘ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ’ ನಾಡಗೀತೆಯೊಂದಿಗೆ ಆರಂಭವಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಪ್ರಿಯಾ ಪ್ರಾಣೇಶ್ ಹರಿದಾಸ್ ಇವರುಗಳು ದೀಪ ಬೆಳಗಿ ‘ಕುಮಾರವ್ಯಾಸ ಜಯಂತಿ’ಯನ್ನು ಉದ್ಘಾಟಿಸಿದರು. ಆರಂಭದಲ್ಲಿ ವೇದಿಕೆಯ ಸಂಚಾಲಕರಾದ ಕಲ್ಯಾಣರಾವ್‌ ದೇಶಪಾಂಡೆಯವರು ಸಂಘದ ಕಾರ್ಯಚಟುವಟಕೆಗಳನ್ನು ವಿವರಿಸಿದರು. ನಂತರ ಹಿರಿಯ ಗಮಕಿಗಳಾದ ಶ್ರೀಮತಿ ಶಾಂತಾ ಕೌತಾಳ ಇವರು ‘ಶ್ರೀವನಿತೆಯರಸನೆ ವಿಮಲ ರಾಜೀವ ಪೀಠನ ಪಿತನೆ’ ಎಂಬ ಮಂಗಳಾಚರಣ ಸ್ತುತಿಯೊಂದಿಗೆ ಗಮಕ ಕಾರ್ಯಕ್ರಮವನ್ನು ಆರಂಭಿಸಿದರು. ಅಂದು ಗಮಕಕ್ಕಾಗಿ ಆಯ್ದುಕೊಂಡ ಭಾಗ, ಗದುಗಿನ ಭಾರತದ ವಿರಾಟ ಪರ್ವದ ‘ಉತ್ತರಾಭಿಮನ್ಯು ಕಲ್ಯಾಣ’ ಎಂಬ ಪ್ರಸಂಗ. ಗಮಕ ವಾಚನದಲ್ಲಿ ಬರುವ ಕೃಷ್ಣನ ಪಾತ್ರ ಹಾಗೂ ಬಂಧು-ಬಳಗದವರ ಸ್ನೇಹ, ಪ್ರೀತಿ, ಮದುವೆಯ ಗಳಿಗೆ ಬಟ್ಟಲು, ಪುಣ್ಯಾಹವಾಚನ, ಅಕ್ಷತೆ ಮುಂತಾದವುಗಳು ಕೇಳುಗರ ಗಮನ…

Read More

ಶಿವಮೊಗ್ಗ : ರಾಜ್ಯ ಸರಕಾರವು ಗಮಕ ಕಲಾವಿದರಿಗೆ ನೀಡುವ 2020-21ನೇ ಸಾಲಿಗೆ ‘ಕುಮಾರವ್ಯಾಸ ಪ್ರಶಸ್ತಿ’ಯನ್ನು ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಗ್ರಾಮದ ಶ್ರೀ ರಾಜಾರಾಮ ಮೂರ್ತಿ ಅವರಿಗೆ ಘೋಷಿಸಿದೆ. ಕಳೆದ 50 ವರ್ಷಗಳಿಂದ ಗಮಕ ವ್ಯಾಖ್ಯಾನ ಕ್ಷೇತ್ರದಲ್ಲಿ ಕೆಲಸ ಮಾಡಿರುವ ರಾಜಾರಾಮ ಮೂರ್ತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಲ್ಲದೆ ಹೊರ ರಾಜ್ಯಗಳಲ್ಲೂ ಗಮಕ ವ್ಯಾಖ್ಯಾನ ಕಾರ್ಯಕ್ರಮಗಳನ್ನು ನೀಡಿ ಗಮಕ ಕಲೆಯನ್ನು ಜನಪ್ರಿಯಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಕನ್ನಡದ ಪ್ರಖ್ಯಾತ ಕಾವ್ಯಗಳಾದ ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ಪಂಪ ಭಾರತ, ತೊರವೆ ರಾಮಾಯಣ, ನಳಚರಿತ್ರೆ, ರನ್ನ ಕವಿಯ ಗದಾಯುದ್ಧ, ರಾಷ್ಟ್ರಕವಿ ಕುವೆಂಪು ಅವರ ರಾಮಾಯಣ ದರ್ಶನಂ, ಕನ್ನಡ ಭಾಗವತ ಮೊದಲಾದ 20ಕ್ಕೂ ಹೆಚ್ಚು ಕಾವ್ಯಗಳನ್ನು ವ್ಯಾಖ್ಯಾನದಲ್ಲಿ ಅಳವಡಿಸಿದ್ದಾರೆ. ರಾಜ್ಯದ 70ಕ್ಕೂ ಹೆಚ್ಚು ಖ್ಯಾತ ಗಮಕಿಗಳೊಡನೆ ವ್ಯಾಖ್ಯಾನ ನಡೆಸಿಕೊಟ್ಟಿದ್ದಾರೆ. ಕರ್ನಾಟಕಕ್ಕೆ ವಿಶಿಷ್ಟವಾದ ಗಮಕ ಕಲೆಗೆ ಪ್ರಶಸ್ತ್ಯ ನೀಡುವ ಏಕೈಕ ಮಾಸಪತ್ರಿಕೆ ‘ಗಮಕ ಸಂಪದ’ ಹದಿನಾರು ವರ್ಷಗಳಿಂದ ನಿಯತವಾಗಿ ಹೊರ ಬರುತ್ತಿರುವ ಈ ಪತ್ರಿಕೆಯ ಸಂಪಾದಕ ಹಾಗೂ ‘ಸಂಕೇತಿ…

Read More

ಮಂಗಳೂರು : ಮೇರಿಹಿಲ್ ಗುರುನಗರದ ನೃತ್ಯ ಸುಧಾ ಕೇಂದ್ರದ ವಾರ್ಷಿಕೋತ್ಸವದ ಅಂಗವಾಗಿ ‘ನೃತ್ಯೋತ್ಕರ್ಷ -2023’ ಭರತನಾಟ್ಯ ಕಾರ್ಯಕ್ರಮ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ನಡೆಯಿತು. ಶ್ರೀಮತಿ ಚಂದ್ರಮತಿ ಅಗಳಿ, ಶ್ರೀ ಎಸ್.ಪಿ. ರಮೇಶ್ ರಾವ್ ಹಾಗೂ ಇವರ ಜೊತೆ ವಿದ್ವಾನ್ ಕೃಷ್ಣಾಚಾರ್ ಇವರುಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕೃಷ್ಣ ರಾವ್ ಅಗಳಿ ನೆರವೇರಿಸಿದರು. ನೃತ್ಯ ಸುಧಾ ಕೇಂದ್ರ ಹುಟ್ಟಿ ಬೆಳೆದು ಬಂದ ದಾರಿಯ ಅವಲೋಕನ ಮಾಡಿ ಈಗ ಅಭಿವೃದ್ಧಿ ಪಥದಲ್ಲಿ ಮುಂದುವರಿಯುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಏಪ್ರಿಲ್ 21ರಂದು ಮಗಳು ವಿದುಷಿ ಸೌಮ್ಯಾ ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬವನ್ನು ಆಡಂಬರ, ದುಂದುವೆಚ್ಚವಿಲ್ಲದೆ ಸಂಭ್ರಮಿಸುವುದು ಸೌಮ್ಯಾ ಅವರ ಉದ್ದೇಶವಾಗಿತ್ತು. ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ವಿದ್ವತ್ ಮುಗಿಸಿದವರಿಗೆ, ಏಕವ್ಯಕ್ತಿ ನೃತ್ಯ ಪ್ರದರ್ಶನ, ಕಿರಿಯರ ವಿಭಾಗ, ಹಿರಿಯರ ವಿಭಾಗ ಮತ್ತು ವಿದ್ವತ್ ಪೂರ್ವ ವಿದ್ಯಾರ್ಥಿಗಳಿಗೆ ಸಮೂಹ ನೃತ್ಯಗಳನ್ನು ಮಾಡುವ ವ್ಯವಸ್ಥೆ ಮಾಡಿದ್ದು, ಒಟ್ಟು 28 ಮಂದಿ ಇದರಲ್ಲಿ ಭಾಗವಹಿಸುವವರಿದ್ದರು. ಅದಕ್ಕೆ ಬೇಕಾಗುವ ಖರ್ಚನ್ನು ಸಂಸ್ಥೆಯ ವತಿಯಿಂದ…

Read More

ಮಂಗಳೂರು : ಕರ್ನಾಟಕ ಗಮಕ ಕಲಾ ಪರಿಷತ್ತು ಮತ್ತು ಮಂಗಳೂರು ಗಮಕ ಕಲಾ ಪರಿಷತ್ತು ಜಂಟಿಯಾಗಿ ಮನೆಮನೆ ಗಮಕ ಪಲ್ಲವ -2ನೇ ಕಾರ್ಯಕ್ರಮವು ದಿನಾಂಕ 27-04-2023 ಗುರುವಾರದಂದು ಮಂಗಳೂರಿನ ಡೊಂಗರಕೇರಿ ವೆಂಕಟರಮಣ ದೇವಾಲಯದ ಕಟ್ಟೆಮಾರಿನ ಬಳಿ, ಭೋಜರಾವ್ ಲೇನ್, ಚಿತ್ರಾಹಾರ್ ಅಪಾರ್ಟೆಂಟ್ ನಲ್ಲಿ ಇರುವ ವರದಕುಮಾರಿ ಮಿಯಾಳ ಅವರ ಮನೆಯಲ್ಲಿ ಯಶಸ್ವಿಯಾಗಿ ಜರಗಿತು. ಈ ಕಾರ್ಯಕ್ರಮದಲ್ಲಿ ಡಾ. ಶ್ರೀ ಕೃಷ್ಣ ಭಟ್ ಸುಣ್ಣಗೊಳಿ ಅವರ ವಾಚನ ಮತ್ತು ಶ್ರೀಮತಿ ಯಶೋದಾ ಕುಮಾರಿ ಅವರ ವ್ಯಾಖ್ಯಾನದಲ್ಲಿ ಕವಿ ಕುಮಾರವ್ಯಾಸ ವಿರಚಿತ ಕರ್ಣಾಟ ಭಾರತ ಕಥಾಮಂಜರಿ ಕಾವ್ಯದ ‘ದ್ರೌಪದಿ ಸ್ವಯಂವರ’ ಪ್ರಸಂಗವು ಸೇರಿದ ಪ್ರೇಕ್ಷಕ ವರ್ಗದ ಮೆಚ್ಚುಗೆ ಪಡೆಯಿತು. ನಮ್ಮ ಮಂಗಳೂರು ಗಮಕ ಕಲಾ ಪರಿಷತ್ತಿನ ಅಧ್ಯಕ್ಷರು ಶ್ರೀ ಸುರೇಶ್ ರಾವ್ ಅತ್ತೂರು ಅವರು ಎಲ್ಲರನ್ನೂ ಸ್ವಾಗತಿಸಿ, ವಂದಿಸುವ ಜೊತೆಗೆ ಗಮಕದ ಕಿರು ಪರಿಚಯವನ್ನು ಮಾಡಿದರು. “ಗಮಕಂ ಗೆಲ್ಲೆ, ಗಮಕಂ ಬಾಳ್ಗೆ.”

Read More

ಕುಂದಾಪುರ : ಮಯೂರ ಸ್ಕೂಲ್ ಆಫ್ ಆರ್ಟ್ಸ್ ಪ್ರಸ್ತುತ ಪಡಿಸುವ ‘ಪಂಚತರಂಗ’ ಬೇಸಿಗೆ ಶಿಬಿರವು ಇದೇ ಬರುವ ಮೇ 3ರಿಂದ 7ರವರೆಗೆ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯ ಜೆ.ಸಿ.ಐ. ಸಭಾಭವನದಲ್ಲಿ ನಡೆಯಲಿದೆ. ಈ ಶಿಬಿರವು ಹಾಡು ಮತ್ತು ಕಥೆ, ಮಕ್ಕಳಿಗಾಗಿ ನಗೆ ಹಬ್ಬ, ಮಂಡಲ ಆರ್ಟ್, ವಿನೂತನ ರಂಗೋಲಿ ಕಲೆ ಹಾಗೂ ಪುಷ್ಪ ಮಾಲ ವಿನ್ಯಾಸ ಮುಂತಾದ ವಿಷಯಗಳನ್ನೊಳಗೊಂಡಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ರತ್ನಾವತಿ ಬೈಕಾಡಿ, ಅಕ್ಷತಾ ಬೈಕಾಡಿ ಮಂಗಳೂರು, ಪಟ್ಟಾಭಿರಾಮ ಸುಳ್ಯ, ಮಹೇಶ್ ರಾವ್, ಉಡುಪಿ, ವಿದ್ಯಾ ವಿಶ್ವೇಶ್, ವೈಷ್ಣವಿ, ಮಂಗಳೂರು, ರೂಪ ವಸುಂದರಾ, ಪಡುಬಿದ್ರೆ ಭಾಗವಹಿಸಲಿದ್ದಾರೆ. ಈ ಶಿಬಿರವು 5ರಿಂದ 15ನೇ ವಯಸ್ಸಿನ ಮಕ್ಕಳಿಗಾಗಿದ್ದು, ಮೊದಲು ನೊಂದಿಯಿಸಿದ 50 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನಿಗದಿಪಡಿಸಲಾಗಿದೆ. ಶಿಬಿರದ ಶುಲ್ಕವು 800 ರೂ. ಗಳಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9448925539 ಮತ್ತು 7483620524 ಸಂಖ್ಯೆಯನ್ನು ಸಂಪರ್ಕಿಸಬಹುದು.

Read More

ಮಂಗಳೂರು : ಕರಾವಳಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ (ರಿ.) ದಿನಾಂಕ 23-04-2023 ಭಾನುವಾರ ಸಂಜೆ ಉರ್ವಾಸ್ಟೋರಿನ ಶ್ರೀ ಜಗಜ್ಯೋತಿ ಬಸವೇಶ್ವರ ಸಮುದಾಯ ಭವನದಲ್ಲಿ ಶ್ರೀ ಷ| ಬ್ರ|| ಗಿರಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ‘ಬಸವೇಶ್ವರ ಜಯಂತಿ’ ಆಚರಿಸಲಾಯಿತು. ಕರಾವಳಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಡಾ. ಕೆ.ಎಸ್. ಜಯಪ್ಪ ಇವರ ಅಧ್ಯಕ್ಷತೆಯಲ್ಲಿ ಸಮಾಜ ಸೇವಕರಾದ ಶ್ರೀ ಸುನಿಲ್ ಆಚಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಬಸವೇಶ್ವರ ಜಯಂತಿ ಈ ಕಾಲದಲ್ಲಿ ಏಕೆ ಅಚರಿಸಬೇಕು ಎಂಬುದನ್ನು ತಿಳಿಸಿ ಹೇಳಿದರು. ಕವಯತ್ರಿ ಹಾಗೂ ಲೇಖಕರಾದ ಶ್ರೀಮತಿ ಅರುಣಾ ನಾಗರಾಜ್ ಇವರು ‘ವಚನ ಸಾಹಿತ್ಯ ಹಾಗೂ ಬಸವಣ್ಣನವರು ಮಾಡಿದ ಕ್ರಾಂತಿ’ ಎಂಬ ವಿಷಯದಲ್ಲಿ ತಮ್ಮ ಸರಳ ಹಾಗೂ ಅರ್ಥವತ್ತಾದ ಉಪನ್ಯಾಸ ನೀಡಿದರು. ಇದೇ ವೇದಿಕೆಯಲ್ಲಿ 2022ನೇ ಇಸವಿಯಲ್ಲಿ ಉತ್ತಮ ಅಂಕಗಳೊಂದಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಕುಮಾರಿ ಕೆ. ಗೌರಿ, ಕುಮಾರಿ ಮಹಾಲಕ್ಷ್ಮೀ ಭಾವಿ ಹಾಗೂ ಮಾಸ್ಟರ್ ಮನ್ವಿತ್ ಎಚ್. ಎಲ್. ಇವರನ್ನು…

Read More

ಕಲಾಭಿ ಥಿಯೇಟರ್ ಹಾಗೂ ಕೆನರಾ ಕಲ್ಚರಲ್ ಅಕಾಡೆಮಿ ಮಂಗಳೂರು ಜಂಟಿಯಾಗಿ ಬೇಸಿಗೆ ಶಿಬಿರವೊಂದನ್ನು ಡೊಂಗರಕೇರಿಯ ಕೆನರಾ ಪ್ರೈಮರಿ ಶಾಲಾ ಸಭಾಂಗಣದಲ್ಲಿ ಆಯೋಜಿಸಿತು. ‘ಅರಳು’ವ ಪ್ರತಿಭೆಗಳನ್ನು ಮತ್ತಷ್ಟು ಅರಳಿಸುವುದೇ ಶಿಬಿರದ ಉದ್ದೇಶ. ಹತ್ತು ದಿನಗಳ ಶಿಬಿರ ಮಕ್ಕಳ ಪಾಲಿಗೆ ಅಸಾಧಾರಣ ಅನುಭವ‌ ಕೊಟ್ಟಿತು. ಸುತ್ತಣ ರಂಗತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ರಂಗಭೂಮಿ ತರಬೇತಿಯ ಜೊತೆಜೊತೆಗೇ ಒಂದಲ್ಲಾ, ಎರಡಲ್ಲಾ ಮೂರು ಮಕ್ಕಳ ನಾಟಕಗಳನ್ನು ಕೈಗೆತ್ತಿಕೊಂಡು ಸಿದ್ಧಪಡಿಸಿದ್ದೊಂದು ವಿಶೇಷವೆ. ನೂರರಷ್ಟು ಶಿಬಿರಾರ್ಥಿಗಳು ಮೂರು ನಾಟಕಗಳಲ್ಲಿ ಅಭಿನಯಿಸಿದರು. ಎಪ್ರಿಲ್ 26ರಂದು ಕೆನರಾ ಜ್ಯೂನಿಯರ್ ಕಾಲೇಜಿನ ಬಯಲು ರಂಗಮಂದಿರದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಆ ಮೂರೂ ಮಕ್ಕಳ ನಾಟಕಗಳು ಪ್ರದರ್ಶಿಸಲ್ಪಟ್ಟವು. ‘ದ ಜಂಗಲ್ ಬುಕ್’ನ ರಂಗರೂಪ ‘ಮೊಗ್ಲಿ’ಯನ್ನು ಭುವನ್ ಮಣಿಪಾಲ ನಿರ್ದೇಶಿಸಿದರೆ, ಶಂಕ್ರಯ್ಯ ಘಂಟಿ ರಚಿಸಿದ ‘ರಾಜನ ಸವಾಲ್, ಮಕ್ಕಳ ಕಮಾಲ್’ ನಾಟಕವನ್ನು ಬಿಂದು ರಕ್ಷಿದಿ ನಿರ್ದೇಶಿಸಿದ್ದರು. ಗಜಾನನ ಶರ್ಮ ರಚಿಸಿದ ‘ಮೃಗ ಮತ್ತು ಸುಂದರಿ’ಯನ್ನು ನವೀನ್ ಸಾಣೇಹಳ್ಳಿ ವೇದಿಕೆಯೇರಿಸಿದರು. ವೇದಿಕೆಯ ಕೆಳಗಡೆ ಮಕ್ಕಳ ಹೆತ್ತವರೂ ಪ್ರೇಕ್ಷಕರಾದರು! ವರ್ಣರಂಜಿತವಾದ ಮಕ್ಕಳ…

Read More

ಮಂಗಳೂರು: ಶ್ರೀ ಕಟೀಲು ಮೇಳದಲ್ಲಿ ಕಳೆದ 42 ವರ್ಷಗಳಿಂದ ನಿರಂತರ ಯಕ್ಷಗಾನ ಕಲಾ ಸೇವೆ ಮಾಡುತ್ತಿರುವ ಅನುಭವಿ ಕಲಾವಿದ, ಮೇಳದ ಪ್ರಬಂಧಕ ಶ್ರೀ ಶ್ರೀಧರ ಪಂಜಾಜೆ ಅವರಿಗೆ ಮೇ 13, ಶನಿವಾರ ಕದ್ರಿ ಕಂಬಳ ಗುತ್ತುನಲ್ಲಿ, ಡಾ.ಬಿ.ನಿಶಾಕಾಂತ ಶೆಟ್ಟಿ ಅವರ ಕಟೀಲು ಮೇಳದ ಸೇವೆ ಆಟದ ಸಂದರ್ಭದಲ್ಲಿ, ‘ಕದ್ರಿ ಕಂಬಳಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿ’ ನೀಡಲಾಗುವುದು ಎಂದು ಸಂಯೋಜಕ ಕದ್ರಿ ನವನೀತ ಶೆಟ್ಟಿ ತಿಳಿಸಿದ್ದಾರೆ. ಪುಂಡು ವೇಷಧಾರಿಯಾಗಿ ಪೌರಾಣಿಕ ಪಾತ್ರಗಳ ನಿರ್ವಹಣೆಯಲ್ಲಿ ಸಿದ್ಧಿ ಪ್ರಸಿದ್ಧಿ ಪಡೆದ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಶ್ರೀಧರ್ ಅವರು ಕಲ್ಲಾಡಿ ವಿಠ್ಠಲ ಶೆಟ್ಟಿ ಅವರ ಪ್ರೇರಣೆ, ಮಾರ್ಗದರ್ಶನದಲ್ಲಿ ಯಕ್ಷಗಾನ ಕಲಿತು, ಮೇಳ ಸೇರಿದವರು. 15 ವರ್ಷಗಳಿಂದ ಕಟೀಲು ಮೇಳದ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕದ್ರಿ ಶ್ರೀ ಮಂಜುನಾಥ ಯಕ್ಷಗಾನ ಸಂಘದಲ್ಲಿ ತಾಳಮದ್ದಳೆ ಅರ್ಥಧಾರಿಯಾಗಿ, ಸಂಘಟಕನಾಗಿ, ಮಂಗಳೂರು ನಗರದ ಹವ್ಯಾಸಿ ವಲಯದ ಹಿರಿಯ ಅರ್ಥಧಾರಿಗಳಾಗಿದ್ದ ಕೀರ್ತಿಶೇಷ ಕದ್ರಿ ಕಂಬಳ ಗುತ್ತು ಶ್ರೀ ಬಾಲಕೃಷ್ಣ ಶೆಟ್ಟಿ ಅವರ ಸ್ಮರಣಾರ್ಥ…

Read More

ಬಂಟ್ವಾಳ : ಪರಾರಿಗುತ್ತು ಮನೆ ವಠಾರದಲ್ಲಿ ದಿನಾಂಕ 28-04-2023ರಂದು ಜರಗಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಬಯಲಾಟ ಸಂದರ್ಭ ಏರ್ಪಡಿಸಲಾದ ‘ಪರಾರಿಗುತ್ತು ಬಾಲಕೃಷ್ಣ ಶೆಟ್ಟಿ ಸಂಸ್ಮರಣೆ ಮತ್ತು ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಹಾಗೂ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ “ಕಲೆಯಿಂದಾಗಿ ಕಲಾವಿದನಿಗೆ ಬದುಕು; ಕಲಾವಿದನಿಂದ ಕಲೆಗೆ ಬೆಳಕು. ಆದ್ದರಿಂದ ಕಲೆ ಮತ್ತು ಕಲಾವಿದರ ನಡುವೆ ಅವಿನಾಭಾವ ಸಂಬಂಧವಿದೆ. ಹಿರಿಯರನ್ನು ಗೌರವಿಸುವುದು ಮತ್ತು ಕಲೆಯನ್ನು ಆರಾಧಿಸುವುದು ಇವೆರಡೂ ಪವಿತ್ರ ಕಾರ್ಯಗಳು.” ಎಂದವರು ಬಯಲಾಟದ ಸೇವಾದಾರರನ್ನು ಅಭಿನಂದಿಸಿದರು. ಪೊಳಲಿ ಶ್ರೀ ರಾಮಕೃಷ್ಣ ತಪೋವನ ಆಶ್ರಮದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ರತ್ನಾಕರ ಶೆಟ್ಟಿ ಮುಂಡಡ್ಕಗುತ್ತು ಮತ್ತು ರಾಮಕೃಷ್ಣ ಆಳ್ವ ಪೊನ್ನೋಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಸ್ಮರಣೆ – ಪ್ರಶಸ್ತಿ ಪ್ರದಾನ: ಮಂಗಳೂರು ಕೆನರಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಜಿ.ಶಂಕರ…

Read More

ಯಕ್ಷಗಾನ ಅರ್ಥಧಾರಿಗಳು, ಆಮ್ನಾಯಃ ಭಾರತೀಯ ದಿನದರ್ಶಿಕೆ ಗಾಳಿಮನೆ ಗನ್ಧವಹಸದನಮ್ ನ ಸ್ಥಾಪಕರು ಪ್ರವರ್ತಕರು, ಸಂಸ್ಕೃತ ಪ್ರಾಧ್ಯಾಪಕರು, ಕಾಲಗಣನ ತಜ್ಞರು, ವೈದಿಕರು, ಶಿಕ್ಷಣ ತಜ್ಞರು, ಧಾರ್ಮಿಕ ಚಿಂತಕರು, ಲೇಖಕರು ಮತ್ತು ಪ್ರವಚನಕಾರರು ಡಾ.ವಿನಾಯಕ ಭಟ್ಟ ಗಾಳಿಮನೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮುಟ್ಠಳ್ಳಿ ಗ್ರಾಮದ  ಗಾಳಿಮನೆಯ ವಿದ್ವಾನ್ ಚಂದ್ರಶೇಖರ ಭಟ್ಟ ಹಾಗೂ ಶ್ರೀಮತಿ ಸವಿತಾ ಭಟ್ಟ ಇವರ ಮಗನಾಗಿ ವೈಶಾಖ ಶುದ್ಧ ನವಮೀ ಕರ್ಕರಾಶಿ, ಆಶ್ಲೇಷಾ ನಕ್ಷತ್ರದಲ್ಲಿ  (23.04.1980) ವಿನಾಯಕ ಭಟ್ಟ ಗಾಳಿಮನೆ ಜನನ. MA Sanskrit,  ಭಗವದ್ಗೀತೆಯಲ್ಲಿ Ph.D., ಕನ್ನಡಭಾಷೆಯಲ್ಲಿ B.Ed., ಸಂಸ್ಕೃತದಲ್ಲಿ ತರ್ಕಶಾಸ್ತ್ರದಲ್ಲಿ ವಿದ್ವತ್ , ಹಿಂದಿಯಲ್ಲಿ ರಾಜಭಾಷಾ ವಿದ್ವಾನ್ ಹೀಗೆ ಕನ್ನಡ ಸಂಸ್ಕೃತ ಹಿಂದಿ ಹೀಗೆ  ಮೂರೂ ಭಾಷೆಗಳಲ್ಲಿ‌  ವಿಶೇಷ ಉನ್ನತ ಅಧ್ಯಯನ.. ಇದು ಇವರ ವಿದ್ಯಾಭ್ಯಾಸ. ಇವರ ಕಾರ್ಯಕ್ಷೇತ್ರ ವ್ಯಾಪ್ತಿ ವಿಭಿನ್ನ ವಿಸ್ತೃತ. ಅದರ ಮೇಲೊಂದು ಪಕ್ಷಿನೋಟ ಯಕ್ಷಗಾನ ಅರ್ಥಧಾರಿಗಳು, ಸಂಸ್ಕೃತ ಪ್ರಾಧ್ಯಾಪಕರು, ಕಾಲಗಣನ ತಜ್ಞರು, ಪಾರಂಪರಿಕ ಪುರೋಹಿತರು ಮತ್ತು ವೈದಿಕರು, ಶಿಕ್ಷಣ ತಜ್ಞರು, ಧಾರ್ಮಿಕ…

Read More