Author: roovari

ಕುಂದಾಪುರ: ಅರೆಹೊಳೆ ಪ್ರತಿಷ್ಠಾನ, ನಂದಗೋಕುಲ-ಅರೆಹೊಳೆ ಗಣಪಯ್ಯ ಸ್ಮಾರಕ ದ್ವಿದಿನ ರಂಗ ಹಬ್ಬ ನಡೆಸುತ್ತಿದೆ. ಇದರ ಅಂಗವಾಗಿ 2023 ಏಪ್ರಿಲ್ 30 ಮತ್ತು ಮೇ 1 ತಾರೀಖಿನಂದು ಸಂಜೆ ಗಂಟೆ 6-30ಕ್ಕೆ ಡಾ. ಹಂದಟ್ಟು ಹರೀಶ್ ಹಂದೆ ರಂಗ ಮಂದಿರ, ಅರೆಹೊಳೆಯಲ್ಲಿ ಈ ರಂಗ ಹಬ್ಬ ನಡೆಯಲಿದೆ. ಆ ಪ್ರಯುಕ್ತ ದಿನಾಂಕ 30 ಏಪ್ರಿಲ್ ಭಾನುವಾರ ಬೈಂದೂರಿನ ಸುರಭಿ (ರಿ.) ಇದರ ಬಾಲಕಲಾವಿದರು ‘ಮಕ್ಕಳ ರಾಮಾಯಣ’ವನ್ನು ವೇದಿಕೆಯಲ್ಲಿ ಪ್ರಸ್ತುತ ಪಡಿಸಲಿದ್ದಾರೆ. ‘ಮಕ್ಕಳ ರಾಮಾಯಣ’ದ ಮೂಲ ರಚನೆ ಬಿ.ಆರ್. ವೆಂಕಟರಮಣ ಐತಾಳ್, ಕುಂದಾಪ್ರ ಕನ್ನಡಕ್ಕೆ ತರ್ಜುಮೆ ಮಾಡಿದವರು, ವಸ್ತ್ರ ವಿನ್ಯಾಸ ಮತ್ತು ನಿರ್ದೇಶನ ಗಣೇಶ್ ಮಂದಾರ್ತಿಯವರದ್ದು. ದಿನಾಂಕ 1 ಮೇ 2023 ಸೋಮವಾರ ಬೈಂದೂರಿನ ಲಾವಣ್ಯ (ರಿ.) ಇವರಿಂದ ಶ್ರೀ ರಾಜೇಂದ್ರ ಕಾರಂತರ ರಚನೆ ಮತ್ತು ನಿರ್ದೇಶನದ ‘ನಾಯಿ ಕಳೆದಿದೆ’ ನಾಟಕ ಅದೇ ರಂಗ ಮಂದಿರದಲ್ಲಿ ನಡೆಯಲಿದೆ. ಈ ಎರಡೂ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಿದ್ದು, ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭವಾಗುವುದರಿಂದ 10 ನಿಮಿಷ ಮುಂಚಿತವಾಗಿ…

Read More

ಮಂಗಳೂರು : ಸಂಗೀತ ಪರಿಷತ್ ಮಂಗಳೂರು, ಸಂಸ್ಥೆಯು ತನ್ನ 30 ವಸಂತಗಳನ್ನು ಕಳೆದ ಸಂತಸವನ್ನು ‘ತ್ರಿಂಶತಿ ಸಂಭ್ರಮ’ ಕಾರ್ಯಕ್ರಮವನ್ನು ವರ್ಷವಿಡೀ ಹಮ್ಮಿಕೊಳ್ಳುವ ಉದ್ದೇಶವಿಟ್ಟುಕೊಂಡಿರುತ್ತದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಕಂಪನ್ನು ಮಂಗಳೂರು, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಪಸರಿಸುವ ಮಹತ್ತರ ಕಾರ್ಯ ಪರಿಷತ್ ನಿರ್ವಹಿಸುತ್ತಿದೆ. ‘ತ್ರಿಂಶತಿ ಸಂಭ್ರಮ’ದ ಉದ್ಘಾಟನಾ ಸಮಾರಂಭದ ಅಂಗವಾಗಿ ದಿನಾಂಕ 23-04-2023ರಂದು ಮಂಗಳಾದೇವಿಯ ರಾಮಕೃಷ್ಣ ಮಠದಲ್ಲಿ ‘ಮಹತಿ ಸ್ವರಾಂಜಲಿ’ ಎಂಬ ಸಂಗೀತಮಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀ ಗೋಪಾಲ್ ಮೌದ್ಗಲ್ ರವರ ನೇತೃತ್ವದಲ್ಲಿ 30 ವೀಣಾವಾದಕರು ಏಕಕಾಲದಲ್ಲಿ ಒಂದೇ ವೇದಿಕೆಯಲ್ಲಿ ಸಂಗೀತ ಕಛೇರಿ ನಡೆಸಿಕೊಟ್ಟರು. ಪ್ರತಿಷ್ಟಿತ ಮೈಸೂರು ಶೈಲಿಯ ವೀಣಾವಾದನ ಕಾರ್ಯಕ್ರಮದಲ್ಲಿ ಅಪರೂಪದ ರಾಗಗಳಲ್ಲಿ ಕೃತಿಗಳನ್ನು ನುಡಿಸಲಾಯಿತು. ವೆಂಕಟ ಗಿರಿಯಪ್ಪನವರ ಶಾರದಾಪ್ರಿಯ ರಾಗದ ಕೃತಿ, ಸುಪೋಷಿಣಿ ರಾಗದಲ್ಲಿ ತ್ಯಾಗರಾಜರ ಕೃತಿ, ವೀಣೆ ಶೇಷಣ್ಣನವರ ಅಪರೂಪದ ಸ್ವರ ಜತಿಗಳ ಕೃತಿಗಳನ್ನು ಪ್ರಸ್ತುತ ಪಡಿಸಿದ್ದು ವಿಶೇಷವಾಗಿತ್ತು. ಶ್ರೀ ಗೋಪಾಲ್ ಮೌದ್ಗಲ್ ರವರು ರಚಿಸಿದ ಕುಮುದಪ್ರಿಯಾ ರಾಗದ ತಿಲ್ಲಾನ ಅಮೋಘವಾಗಿ ಮೂಡಿ ಬಂದಿತು. ಮೈಸೂರು ವಿನಿಕೆಯ…

Read More

ಮಂಗಳೂರು : ಕರಾವಳಿ ಲೇಖಕಿಯರ – ವಾಚಕಿಯರ ಸಂಘದಲ್ಲಿ ಲೇಖಕಿ ದೇವಿಕಾ ನಾಗೇಶ್ ಅವರ ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಏಪ್ರಿಲ್ 22ರಂದು ಅಪರಾಹ್ನ ಸಂಘದ ಕಚೇರಿ ಉರ್ವಾಸ್ಟೋರಿನ ಸಾಹಿತ್ಯ ಸದನದಲ್ಲಿ ನೆರವೇರಿತು. ‘ಮೌನ ಹೊದ್ದವಳು’ ಕವನ ಸಂಕಲನವನ್ನು ಹಿರಿಯ ಲೇಖಕಿ ಬಿ.ಎಂ. ರೋಹಿಣಿ ಹಾಗೂ ‘ಕಸ್ತೂರಿ ಚಿಕ್ಕಿ’ ಮತ್ತು ‘ಪುನುಗು ಬೆಕ್ಕು’ ಕಥಾ ಸಂಕಲನವನ್ನು ಪ್ರಜ್ಞಾ ಸಲಹಾ ಕೇಂದ್ರದ ನಿರ್ದೇಶಕರಾದ ಪ್ರೊ. ಹಿಲ್ಡಾ ರಾಯಪ್ಪನ್ ಅವರು ಅನಾವರಣಗೊಳಿಸಿದರು. ಲೇಖಕಿ ಅ.ನಾ ಪೂರ್ಣಿಮಾ ಅವರು ಕವನ ಸಂಕಲನದ ಪರಿಚಯ ಹಾಗೂ ಲೇಖಕಿ ಯಶೋದಾ ಮೋಹನ್ ಅವರು ಕಥಾಸಂಕಲನದ ಬಗೆಗಿನ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಹಿರಿಯ ಲೇಖಕಿ ಬಿ.ಎಂ. ರೋಹಿಣಿಯವರು ಮಾತನಾಡಿ “ದೇವಿಕಾ ನಾಗೇಶ್ ಅವರ ಕವನ ಸಂಕಲನ ಉತ್ತಮ ಸಂದೇಶಗಳನ್ನು ಒಳಗೊಂಡಿದ್ದು, ಕೃತಿಯು ಅದ್ಭುತವಾಗಿ ಮೂಡಿ ಬಂದಿದೆ. ಇನ್ನಷ್ಟು ಇಂತಹ ಕೃತಿಗಳು ಬರ್ಬೇಕು” ಎಂದು ಆಶಿಸಿದರು. ಕಥಾಸಂಕಲನ ಅನಾವರಣಗೊಳಿಸಿದ ಪ್ರೊ. ಹಿಲ್ಡಾ ರಾಯಪ್ಪನ್ ಮಾತನಾಡಿ, “ದೇವಿಕಾ ನಾಗೇಶ್ ಅವರ ಬಗ್ಗೆ ಬಹಳ…

Read More

ಮಂಗಳೂರು : 17-4-2023ರಂದು ಸೋಮವಾರ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರದಲ್ಲಿ ಕೇಂದ್ರ ಸರ್ಕಾರದ ‘ಆಜಾದಿ ಕಾ ಅಮೃತ್ ಮಹೋತ್ಸವ್’ದ ಅಂಗವಾಗಿ ಒಂದು ದಿನದ ಕಾರ್ಯಾಗಾರದಲ್ಲಿ ಉತ್ತರ ವಲಯದ ಶಿಕ್ಷಕರಿಂದ ರಾಷ್ಟ್ರ ಜಾಗೃತಿಯ ಯಕ್ಷಗಾನ ತಾಳಮದ್ದಳೆ ‘ಕ್ರಾಂತಿ ಕಹಳೆ’ ನಡೆಯಿತು. ಈ ಪ್ರಸಂಗದ ಪರಿಕಲ್ಪನೆ ಮತ್ತು ಕಥಾ ಸಂಯೋಜನೆ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ. ಭಾರತ ಸ್ವಾತಂತ್ರ್ಯ ಸಂಗ್ರಾಮ ಹೋರಾಟದ ಚಿತ್ರಗಳನ್ನು ಈ ಯಕ್ಷಗಾನಕ್ಕೆ ಅಳವಡಿಸಲಾಗಿದೆ. ಇದರ ನಿರ್ದೇಶನ ಮಾಡಿದವರು ಮಂಜುಳಾ ಶೆಟ್ಟಿ. ಕಥಾ ಸಂಯೋಜನೆಗೆ ಪೂರಕವಾಗಿ ಪ್ರಸಂಗದ ಪದ್ಯ ರಚನೆಯನ್ನು ಮಾಡಿದವರು ಡಾ. ದಿನಕರ ಎಸ್. ಪಚ್ಚನಾಡಿ. ಸುಮಾರು 1 ಗಂಟೆ 10 ನಿಮಿಷದ ಅವಧಿಯ ತಾಳಮದ್ದಳೆಯ ಈ ಕಾರ್ಯಕ್ರಮ ‘ಕ್ರಾಂತಿ ಕಹಳೆ’ ಚೆನ್ನಾಗಿ ಪ್ರಸ್ತುತಿಗೊಂಡಿತು. ಹಿಮ್ಮೇಳದಲ್ಲಿ – ಭಾಗವತಿಕೆ ಸೂಡ ಶ್ರೀ ಹರೀಶ್ ಶೆಟ್ಟಿ, ಮದ್ದಳೆಯಲ್ಲಿ – ಶ್ರೀ ಸ್ಕಂದ ಕೊನ್ನಾರ್, ಚೆಂಡೆಯಲ್ಲಿ – ಶ್ರೀ ಲಕ್ಷ್ಮೀನಾರಾಯಣ ಹೊಳ್ಳ. ಮುಮ್ಮೇಳದಲ್ಲಿ ಭಾಗವಹಿಸಿದ ಉತ್ತರ ವಲಯದ ಶಿಕ್ಷಕರು…

Read More

ಮಂಗಳೂರು: ಯಕ್ಷಗಾನ ರಂಗದ ಶ್ರೇಷ್ಠ ಕಲಾವಿದ, ರಾಜ್ಯ- ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮೇರು ನಟ, ದಿ. ಅಳಿಕೆ ರಾಮಯ್ಯ ರೈ ಅವರ ಸ್ಮರಣಾರ್ಥ ಬೆಂಗಳೂರಿನ ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಪ್ರತಿ ವರ್ಷ ನೀಡುವ ಅಳಿಕೆ ಯಕ್ಷ ಸಹಾಯ ನಿಧಿಗೆ 2022-23ನೇ ಸಾಲಿಗೆ ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳದ ಬಿ.ಕೆ.ಚೆನ್ನಪ್ಪ ಗೌಡ ಆಯ್ಕೆಯಾಗಿದ್ದಾರೆ. ಯಕ್ಷಗಾನ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿ, ಲೇಖಕ – ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಹಿರಿಯ ಯಕ್ಷಗಾನ ಕಲಾವಿದ ಉಮೇಶ ಶೆಟ್ಟಿ ಉಬರಡ್ಕ ಅವರನ್ನೊಳಗೊಂಡ ಸಲಹಾ ಸಮಿತಿಯ ಸೂಚನೆಯಂತೆ ಸಂಕಷ್ಟದಲ್ಲಿರುವ ಹಿರಿಯ ಕಲಾವಿದ ಚೆನ್ನಪ್ಪ ಗೌಡರಿಗೆ ಯಕ್ಷ ಸಹಾಯ ನಿಧಿ ಘೋಷಿಸಲಾಗಿದೆ ಎಂದು ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾಪ್ರಸಾದ ರೈ ತಿಳಿಸಿದ್ದಾರೆ. ನಿಧಿಯು ರೂ.20,000 ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದು, ಎ.28ರಂದು ಗೃಹ ಸಮ್ಮಾನದೊಂದಿಗೆ ನಿಧಿ ಅರ್ಪಣೆ ಮಾಡಲಾಗುತ್ತದೆ. ಬಿ.ಕೆ. ಚೆನ್ನಪ್ಪ ಗೌಡ : ತೆಂಕುತಿಟ್ಟಿನ ವಿವಿಧ…

Read More

ರಾಮ‌ ನೆಲೆಸಬೇಕಾದದ್ದು ಎಲ್ಲರ ಹೃದಯದಲ್ಲಿ ಎಂಬ ಆಶಯವನ್ನು ಆಕೃತಿಗೊಳಿಸಲು, ಇತ್ತೀಚೆಗೆ ಅನೇಕ ರಂಗ ಪ್ರಯೋಗಗಳು ರಾಮಾಯಣದ ಕತೆಗಳನ್ನೇ ಆಧರಿಸಿ ಹೆಣೆಯಲ್ಪಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಆ ನಿಟ್ಟಿನಲ್ಲಿ ನಡೆದ ಒಂದು ಅನನ್ಯ ಪ್ರಯತ್ನ, ಸುರಭಿ ಬೈಂದೂರಿನವರು, ಇತ್ತೀಚೆಗೆ ಬ್ರಹ್ಮಾವರದಲ್ಲಿ ಮಂದಾರ ಬೈಕಾಡಿಯವರ ರಂಗೋತ್ಸವದಲ್ಲಿ ಪ್ರಸ್ತುತ ಪಡಿಸಿದ ನಾಟಕ, ಮಕ್ಕಳ ರಾಮಾಯಣ. ನೀನಾಸಮ್ ರಂಗಶಾಲೆಯ ಪ್ರಾಧ್ಯಾಪಕರಾದ ಬಿ.ವೆಂಕಟರಮಣ ಐತಾಳರು ಈ ನಾಟಕದ ರಚನಾಕಾರರು. ಕುವೆಂಪು ಅವರ ರಾಮಾಯಣ ದರ್ಶನದ ಅನೇಕ ಭಾಗಗಳನ್ನು ಈಗಾಗಲೇ ರಂಗಕ್ಕೆ ತಂದು ಅತ್ಯಂತ ಜನಪ್ರಿಯಗೊಳಿಸಿದ ಯುವ ನಿರ್ದೇಶಕ ಗಣೇಶ್ ಮಂದಾರ್ತಿ ಈ ಪ್ರಯೋಗದ ನಿರ್ದೇಶಕರು. ಸಂಪೂರ್ಣವಾಗಿ ಎಲ್ಲಾ ಬಾಲ ನಟರೇ ಅಭಿನಯಿಸಿದ್ದು ಇಲ್ಲಿಯ ಒಂದು ವಿಶೇಷವಾದರೆ, ದೇಸೀ ಭಾಷೆಯಾದ ಕುಂದಾಪುರ ಕನ್ನಡದಲ್ಲಿ ನಾಟಕವಾಡಿದ್ದು ಇನ್ನೊಂದು ವಿಶೇಷ. ರಾಮಾಯಣದ ಕತೆ ಹೇಳುತ್ತಾ ನಾಟಕ ಕಟ್ಟುವ ಒಂದು ವಿಶಿಷ್ಟ ತಂತ್ರ ಇಲ್ಲಿ ಬಳಸಲಾಗಿದೆ.‌ ಹಾಗಾಗಿ ಆಯಾ ಸಂದರ್ಭದಲ್ಲಿ ಪಾತ್ರಗಳೇ ನಿರೂಪಕರೂ ಆಗಿ ಬಿಡುತ್ತಾರೆ. ಈ ನಿರೂಪಣೆಯನ್ನೂ, ಸಂಭಾಷಣೆಗಳನ್ನೂ ಎಲ್ಲ ಬಾಲ ಕಲಾವಿದರೂ ಅತ್ಯಂತ ಸ್ಪಷ್ಟವಾಗಿ,…

Read More

ಮಂಗಳೂರು: ದಿನಾಂಕ 21-04-2023ರಂದು ಶುಕ್ರವಾರ ಶಾಸ್ತ್ರೀಯ ನೃತ್ಯ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ದರ್ಜೆ ಮುಗಿಸಿದ ಕರಾವಳಿಯ ವಿಭಿನ್ನ ಪ್ರತಿಭೆ, ಪ್ರಸ್ತುತ ಹುಬ್ಬಳ್ಳಿಯಲ್ಲಿ ನೆಲೆಸಿರುವ ವಿದುಷಿ ಧನ್ಯತಾ ವಿನಯ್, ತಾವೇ ತಮ್ಮ ಇಷ್ಟದೈವ ಕಟೀಲು ದೇವಿಯ ಬಗ್ಗೆ ಸಂಯೋಜಿಸಿದ ಅವರ ‘ಭ್ರಾಮರಿ ಶಬ್ದಂ’ ಶ್ಲೋಕ ಸಹಿತವಾಗಿ ಕಟೀಲು ಜಾತ್ರೆಯ ಅಂಗವಾಗಿ ಜರುಗಿದ ಅಷ್ಟಾವಧಾನ ಸೇವೆಯಲ್ಲಿ ಲೋಕಾರ್ಪಣೆಗೊಂಡಿತು. ಗಾಯಕಿಯಾಗಿ ವಿದುಷಿ ಧನ್ಯತಾ ವಿನಯ್, ನಟುವಾಂಗದಲ್ಲಿ ಮೈಸೂರಿನ ನೃತ್ಯಗುರು ವಿದುಷಿ ಶ್ರೀ ವಿದ್ಯಾಶಶಿಧರ್ ಅವರು ಸಹಕರಿಸಿದರು. ಅಪೂರ್ವ ನೃತ್ಯ ಕಲಾವಿದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಇವರು ‘ಭ್ರಾಮರಿ ಶಬ್ದಂ’ಗೆ ನೃತ್ಯ ಸಂಯೋಜಿಸಿ ಅದ್ಭುತವಾಗಿ ನರ್ತಿಸಿದರು. ಇದು ನೆರೆದಿದ್ದ ಸಾವಿರಾರು ಮಂದಿ ಪ್ರೇಕ್ಷಕರ ಮನರಂಜಿಸಿತು.

Read More

29.07.2002ರಂದು ಮಂಜುನಾಥ್ ಹಾಗೂ ಪ್ರಮೀಳಾ ಶೆಟ್ಟಿ ಅವರ ಮಗನಾಗಿ ಅಜಿತ್ ಪುತ್ತಿಗೆ ಅವರ ಜನನ. ಪ್ರಸ್ತುತ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಸಬ್ಬಣಕೋಡಿ ರಾಮ ಭಟ್ ಇವರ ಯಕ್ಷಗಾನದ ಗುರುಗಳು. ಅಣ್ಣ ಯಕ್ಷಗಾನ ವೇಷ ಮಾಡುವುದನ್ನು ನೋಡಿ ಯಕ್ಷಗಾನದ ಮೇಲೆ ಆಸಕ್ತಿ ಹುಟ್ಟಿ ಯಕ್ಷಗಾನ ರಂಗಕ್ಕೆ ಬಂದು ಇಂದು ಒಬ್ಬ ಪ್ರಬುದ್ಧ ಕಲಾವಿದನಾಗಿ ಯಕ್ಷಗಾನ ರಂಗದಲ್ಲಿ ರೂಪುಗೊಳ್ಳುತ್ತಿದ್ದಾರೆ. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:- ಹಿರಿಯ ಕಲಾವಿದರ ಜೊತೆಗೆ ಯಕ್ಷಗಾನ ಪ್ರಸಂಗದ ಬಗ್ಗೆ ಕೇಳಿ ಹಾಗೂ ಪ್ರಸಂಗದ ನಡೆ ತಿಳಿಯಲು ಯಕ್ಷಗಾನದ ತುಣುಕುಗಳನ್ನು ಯೂಟ್ಯೂಬ್ ನಲ್ಲಿ ವಿಡಿಯೋ ನೋಡಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಅಜಿತ್ ಅವರು ಹೇಳುತ್ತಾರೆ. ದೇವಿ ಮಹಾತ್ಮೆ, ಶ್ರೀನಿವಾಸ ಕಲ್ಯಾಣ, ಶುಕ್ರನಂದನೆ, ಕೃಷ ಲೀಲೆ ಇವರ ನೆಚ್ಚಿನ ಪ್ರಸಂಗಗಳು. ಕೃಷ್ಣ, ಷಣ್ಮುಖ, ಅಭಿಮನ್ಯು ಇವರ ನೆಚ್ಚಿನ ವೇಷಗಳು. ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- ಯಕ್ಷಗಾನ ಬಹಳ ಉನ್ನತ ಮಟ್ಟದಲ್ಲಿ…

Read More

ಬೆಂಗಳೂರು: ಕನ್ನಡದ ಖ್ಯಾತ ಕತೆಗಾರ, ಕಾದಂಬರಿಕಾರ, ‘ಹಳ್ಳ ಬಂತು ಹಳ್ಳ’ ಖ್ಯಾತಿಯ ಹಿರಿಯ ಲೇಖಕ ಶ್ರೀನಿವಾಸ ವೈದ್ಯ ಅವರು ಬೆಂಗಳೂರಿನಲ್ಲಿ ದಿನಾಂಕ 21-04-2023 ಶುಕ್ರವಾರ ನಿಧನರಾದರು. ಮೃತರಿಗೆ 87 ವರ್ಷ ವಯಸ್ಸಾಗಿತ್ತು. ಪ್ರಾರಂಭಿಕ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರವರೆಗೂ ಧಾರವಾಡದಲ್ಲೇ ಶಿಕ್ಷಣ ಪೂರ್ಣಗೊಳಿಸಿದರು. ಮುಂಬೈ ಕೆನರಾ ಬ್ಯಾಂಕ್‌ ಅಧಿಕಾರಿಯಾಗಿ ಸೇರಿ 1996ರಲ್ಲಿ ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದರು. ‘ಹಳ್ಳ ಬಂತು ಹಳ್ಳ’ ಕಾದಂಬರಿ ಕನ್ನಡ ಸಾಹಿತ್ಯದ ಮಹತ್ವದ ಕೃತಿ. ನಿವೃತ್ತಿಯ ನಂತರ ಬರೆಯಲು ಕುಳಿತ ಬ್ಯಾಂಕ್ ನ ಅಧಿಕಾರಿಯೊಬ್ಬರ ಈ ಬರವಣಿಗೆಯನ್ನು ಕನ್ನಡ ಲೋಕ ಅಚ್ಚರಿಯಿಂದ ಆಹ್ವಾನಿಸಿತ್ತು. ನಾನು ‘ಹರಿವ ನೀರು’ ಎಂದು ಅವರು ತನ್ನನ್ನು ಹೇಳಿಕೊಳ್ಳುತ್ತಿದ್ದರು. ‘ಅಪರಂಜಿ’ಯ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಪ್ರವೇಶಿಸಿದ ಶ್ರೀನಿವಾಸ ವೈದ್ಯರು ಲಲಿತ ಪ್ರಬಂಧ, ಕಥೆ, ಕಾದಂಬರಿಗಳನ್ನು ಬರೆದಿದ್ದಾರೆ. ‘ಮನಸುಖರಾಯನ ಮನಸು’,’ ತಲೆಗೊಂದು ತರತರ’, ‘ರುಚಿಗೆ ಹುಳಿಯೊಗರು’, ‘ಕರ್ನಲ್ ಗೆ ಯಾರೂ ಬರೆಯುವುದಿಲ್ಲ’ ಹೀಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ…

Read More

ಮಂಗಳೂರು: ನಗರದ ಅಂಬೇಡ್ಕರ್ ಭವನದಲ್ಲಿ 22-04-2023 ಶನಿವಾರ ಜರಗಿದ ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ‘ಸಾಂಸ್ಕೃತಿಕ ವೈಭವ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ಏಕಾಂತದಿಂದ ಲೋಕಾಂತರಕೆ’ ಗ್ರಂಥ ಲೋಕಾರ್ಪಣೆಯಾಯಿತು. ಕೃತಿ ಬಿಡುಗಡೆ ಮಾಡಿದ ಮುಂಬೈ ಹೇರಂಬ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಕನ್ಯಾನ ಶ್ರೀ ಸದಾಶಿವ ಶೆಟ್ಟಿ ಮಾತನಾಡುತ್ತಾ ‘ನಮ್ಮಲ್ಲಿ ವಿವಿಧ ಜಾತಿ – ಧರ್ಮಗಳನ್ನು ಪ್ರತಿನಿಧಿಸುವ ಸಮುದಾಯಗಳಿವೆ. ಆದರೆ ಸಾಹಿತ್ಯ ಜಾತ್ಯತೀತವಾದುದು. ಸಾರ್ವಕಾಲಿಕ ಮೌಲ್ಯಗಳ ದಾಖಲಾತಿಯೊಂದಿಗೆ ಸಮಾಜದ ಕಣ್ತೆರೆಸುವ ಸಾಹಿತ್ಯ ಕೃತಿಗಳು ಬರಬೇಕು. ಆಧುನಿಕ ಯುವ ಸಮುದಾಯದಲ್ಲಿ ಸಾಹಿತ್ಯಾಭಿರುಚಿಯನ್ನು ಮೂಡಿಸುವ ಸಲುವಾಗಿ ಉತ್ತಮ ಕೃತಿಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿಕೊಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ‘ಏಕಾಂತದಿಂದ ಲೋಕಾಂತರಕೆ’ ಕೃತಿಯ ಇಂಗ್ಲಿಷ್ ರೂಪಾತರವು ಬರುವಂತಾಗಲಿ” ಎಂದು ಅವರು ಹಾರೈಸಿದರು. ಕೃತಿಕರ್ತ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ “ಹಿರಿಯ ವಿದ್ವಾಂಸ ಪ್ರೊ.ಬಿ.ಎ. ವಿವೇಕ ರೈ ಮುನ್ನುಡಿಯಲ್ಲಿ ಹೇಳಿರುವಂತೆ ಕನ್ನಡಾಂತರ್ಗತವಾದ ತುಳುನಾಡಿನ ಬಹುರೂಪೀ ಚಿತ್ರಣಗಳನ್ನು ಅನಾವರಣಗೊಳಿಸಲು ಕೃತಿಯಲ್ಲಿ ಪ್ರಯತ್ನಿಸಲಾಗಿದೆ. ಒಟ್ಟು 100…

Read More