Subscribe to Updates
Get the latest creative news from FooBar about art, design and business.
Author: roovari
ಮಂಗಳೂರು: ಕದ್ರಿ, ಮಲ್ಲಿಕಟ್ಟೆಯ ಶ್ರೀಕೃಷ್ಣ ಕಲ್ಯಾಣ ಮಂದಿರದಲ್ಲಿ ದಿನಾಂಕ 29-06-2023ರಂದು ಜರಗಿದ ಹರಿಕಥಾ ಪರಿಷತ್ತಿನ ಸದಸ್ಯರ ಸಮಾವೇಶ ಹಾಗೂ ಸಂವಾದ ಗೋಷ್ಠಿಯು ನಡೆಯಿತು. ಸಂಪನ್ಮೂಲ ಮಹನೀಯರಾಗಿ ಭಾಗವಹಿಸಿದ ಬಹುಶ್ರುತ ವಿದ್ವಾಂಸ ಮತ್ತು ವಿಮರ್ಶಕ ಡಾ. ಎಂ. ಪ್ರಭಾಕರ ಜೋಶಿ “ಆಧುನಿಕ ಯುಗದಲ್ಲಿ ಸಂಪ್ರದಾಯ ಮತ್ತು ಪರಂಪರೆಗಳ ನಡುವೆ ಸಾಂಸ್ಕೃತಿಕ ಕಲಾರಂಗಕ್ಕಿರುವ ಸವಾಲುಗಳನ್ನು ಎದುರಿಸಲು ತರ್ಕಬದ್ಧ ವಿಮರ್ಶೆ, ವಸ್ತು ವಿಶ್ಲೇಷಣೆ ಹಾಗೂ ಸಂವಾದ ಗೋಷ್ಠಿಗಳು ಸಹಕಾರಿ. ಜಿಲ್ಲೆಯ ಹರಿಕಥಾ ರಂಗದಲ್ಲಿ ಹಿಂದೆ ಭದ್ರಗಿರಿ ಸೋದರರು, ಸಾಮಗರು ಹಾಗೂ ಶೇಣಿ ಅವರಿಂದ ಅನೇಕ ಬದಲಾವಣೆಗಳು ಸಾಧ್ಯವಾಯಿತು. ಪ್ರಸಕ್ತ ವಾತಾವರಣದಲ್ಲೂ ಹರಿದಾಸರುಗಳು ತಮ್ಮ ಪ್ರತಿಭೆ ಪರಿಶ್ರಮದಿಂದ ಪುರಾಣ ಕಥೆಗಳ ಜೊತೆಗೆ ಹರಿಕಥೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಪುರಾಣೇತರ ಕಥಾವಸ್ತುಗಳನ್ನೂ ಮೌಲ್ಯಗಳ ಪ್ರಸಾರಕ್ಕೆ ಬಳಸಿಕೊಳ್ಳಬಹುದು” ಎಂದರು. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಗೋಷ್ಠಿಯನ್ನು ಉದ್ಘಾಟಿಸಿ ಶುಭ ಕೋರಿದರು. ಅಧ್ಯಕ್ಷತೆ ವಹಿಸಿದ್ದ ಹರಿಕಥಾ ಪರಿಷತ್ತಿನ ಅಧ್ಯಕ್ಷ ನ್ಯಾಯವಾದಿ ಕೆ.ಮಹಾಬಲ ಶೆಟ್ಟಿ ಕೂಡ್ಲು ಅವರು ಪರಿಷತ್ತಿನ ಮನೆ ಮನೆ…
ಬೆಂಗಳೂರು : ಗಾಯಕ ಜಗದೀಶ್ ಶಿವಪುರ ಅವರು ಸಂಗೀತ ಕ್ಷೇತ್ರದಲ್ಲಿ ಐದು ದಶಕಗಳನ್ನು ಪೂರೈಸಿದ ಹೊಸ್ತಿಲಲ್ಲಿ ಮಂಗಳೂರಿನ ‘ಮಧುರತರಂಗ’ವು ದಿನಾಂಕ : 01-07-2023ರಂದು ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ‘ಸ್ವರಕಂಠೀರವ’ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಂಗೀತದಲ್ಲಿ ಒಲವು, ಸ್ಪೂರ್ತಿ ಮತ್ತು ಆತುರ ಈ ಬಗ್ಗೆ ವಿಚಾರ ಮಂಡನೆ ಮಾಡಿದ ಪ್ರಸಿದ್ಧ ಗಾಯಕಿ ಶ್ರೀಮತಿ ಸುಮಾ ಎಲ್.ಎನ್. ಶಾಸ್ತ್ರಿ ಮಾತನಾಡುತ್ತಾ “ಸಂಗೀತ ದೊಡ್ಡ ಸಾಗರದಂತೆ, ಅಲ್ಲಿ ಕಲಿತಷ್ಟು ಹೊಸ ವಿಷಯಗಳು ಸಿಗುತ್ತವೆ. ಸಂಗೀತದಲ್ಲಿ ಎಲ್ಲರಿಗೂ ಆಸಕ್ತಿ ಇರುತ್ತದೆ. ಆದರೆ ಕಲೆ ಕೆಲವರಿಗೆ ಮಾತ್ರ ಒಲಿಯುತ್ತದೆ. ಸಿನೇಮಾ ಗೀತೆಗಳನ್ನು ಹಾಡುವುದು ಸುಲಭವಲ್ಲ. ನಿಗದಿತ ಅವಧಿಯಲ್ಲಿ ಶೃತಿ ಮತ್ತು ತಾಳ ನಿಖರವಾಗಿ ಇರುವಂತೆ ಹಾಡಬೇಕಾಗುತ್ತದೆ. ಹಾಡುಗಾರಿಕೆಯ ಕಲೆ ಮಕ್ಕಳಲ್ಲಿ ಇದ್ದರೆ ಅದನ್ನು ಹೆತ್ತವರು ಗುರುತಿಸಿ ಪ್ರೋತ್ಸಾಹಿಸಬೇಕು. ಎಂಜಿನಿಯರಿಂಗ್, ವೈದ್ಯಕೀಯ ಸೇರಿ ವಿವಿಧ ವೃತ್ತಿ ಶಿಕ್ಷಣದ ಜತೆಗೆ ಕಲೆಗೂ ಆದ್ಯತೆ ನೀಡಬೇಕು” ಎಂದು ಹೇಳಿದರು. ಉಡುಪಿ ನಗರಸಭಾ ಸದಸ್ಯೆ ಶ್ರೀಮತಿ ಮಾನಸ ಚಿದಾನಂದ ಪೈ ಅವರು ಮಾತನಾಡಿ “ಜಗದೀಶ್ ಅವರು…
ಸುಳ್ಯ: ಯಶಸ್ವಿ 4 ವರ್ಷಗಳನ್ನು ಪೂರೈಸಿ, 5 ನೇ ವರ್ಷಕ್ಕೆಪಾದಾರ್ಪಣೆ ಮಾಡುತ್ತಿರುವ ಸುಳ್ಯದ ‘ರಂಗಮಯೂರಿ’ ಕಲಾಶಾಲೆಯಲ್ಲಿ ಡ್ಯಾನ್ಸ್, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಡ್ರಾಯಿಂಗ್, ಯಕ್ಷಗಾನ, ನಾಟಕ ಕಲಿಕಾ ತರಗತಿಗಳ ಹೊಸ ಬ್ಯಾಚ್ ಗಳು ಆರಂಭಗೊಂಡಿದ್ದು ಆಸಕ್ತರು ಇದರ ಸದುಪಯೂಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ: ಮಯೂರಿ ಕಲಾಶಾಲೆ, ಶ್ರೀಹರಿ ಕಾಂಪ್ಲೆಕ್ಸ್ , ಮೂರನೇ ಮಹಡಿ, ಮುಖ್ಯ ರಸ್ತೆ ಸುಳ್ಯ 9611355496, 6363783983
ಬೆಂಗಳೂರು: 2023ರ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ನಡೆಯಲಿರುವ ʻಕನ್ನಡ ಪ್ರವೇಶ, ಕಾವ, ಜಾಣ ಹಾಗೂ ರತ್ನʼ ಪರೀಕ್ಷೆಗಳಿಗೆ ಅರ್ಜಿಯನ್ನು ಸಲ್ಲಿಸಲು 2023ರ ಆಗಸ್ಟ್ ತಿಂಗಳ 21ನೆಯ ತಾರೀಕು ಕೊನೆಯ ದಿನವಾಗಿದೆ. 2023ರ ಸೆಪ್ಟೆಂಬರ್ ತಿಂಗಳ 15ರವರೆಗೆ ದಂಡ ಶುಲ್ಕ ರೂಪಾಯಿ 50-೦೦ ಅನ್ನು ಹೆಚ್ಚುವರಿಯಾಗಿ ಪಾವತಿಸಿ ಅರ್ಜಿಸಲ್ಲಿಸಲು ಅವಕಾಶವಿರುತ್ತದೆ. ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನು 25ರೂಪಾಯಿ ಶುಲ್ಕ ಪಾವತಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿರುವ ಮಾರಾಟ ಮಳಿಗೆಯಲ್ಲಿ ದಿನಾಂಕ 01-07-2023ರಿಂದ ಪಡೆಯಬಹುದಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಹೆಸರಿಗೆ ಮೂವತ್ತು ರೂಪಾಯಿ ಮನಿಯಾರ್ಡರ್ ಮಾಡಿದರೆ ಅರ್ಜಿಯನ್ನು ತಾವು ನೀಡಿರುವ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸುವ ಸೌಲಭ್ಯವನ್ನು ಪರಿಷತ್ತು ಕಲ್ಪಿಸಿದೆ. ಅರ್ಜಿನಮೂನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ್ಜಾಲ ತಾಣ www.kasapa.in ಮೂಲಕ ಪಡೆದು ಕೊಳ್ಳಬಹುದು. ಅಂತರ್ಜಾಲದ ಮೂಲಕ ಅರ್ಜಿ ನಮೂನೆ ಪಡೆದವರು ಪರೀಕ್ಷಾ ಶುಲ್ಕದೊಂದಿಗೆ ಅರ್ಜಿ ಶುಲ್ಕ 25ರೂಪಾಯಿಗಳನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುವುದು. ಹೆಚ್ಚಿನ ವಿವರಗಳಿಗೆ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ…
ಬೈಂದೂರು : ‘ಸಮನ್ವಿತ’ ಬೆಂಗಳೂರು, ಲಾವಣ್ಯ (ರಿ.) ಬೈಂದೂರು ಹಾಗೂ ರೋಟರಿ ಕ್ಲಬ್ ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ‘ವಾಚಕ್ನವೀ’ ಮತ್ತು ‘ಜಿತ್ವರೀ – ಇದು ಕಾಶಿ’ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ : 09-07-2023ರ ಬೆಳಿಗ್ಗೆ 10 ಗಂಟೆಗೆ ಬೈಂದೂರಿನ ರೋಟರಿ ಸಮುದಾಯ ಭವನದಲ್ಲಿ ನಡೆಯಲಿದೆ. ಬೈಂದೂರಿನ ಮಾನ್ಯ ಶಾಸಕರಾದ ಸನ್ಮಾನ್ಯ ಶ್ರೀ ಗುರುರಾಜ ಗಂಟೆಹೊಳೆ ಕೃತಿ ಬಿಡುಗಡೆಗೊಳಿಸಲಿದ್ದು, ಬೈಂದೂರಿನ ಲಾವಣ್ಯ (ರಿ.) ಇದರ ಅಧ್ಯಕ್ಷರಾದ ಶ್ರೀ ನರಸಿಂಹ ಬಿ. ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯವಾದಿಯೂ ಸಂಸ್ಕೃತಿ ಚಿಂತಕರೂ ಆದ ಶ್ರೀ ಡಾ. ಜಿ.ಬಿ. ಹರೀಶ, ವಿಜ್ಞಾನ ಸಂವಹನಕಾರರಾದ ಶ್ರೀ ರೋಹಿತ್ ಚಕ್ರತೀರ್ಥ, ಬೈಂದೂರಿನ ರೋಟರಿ ಕ್ಲಬ್ ಅಧ್ಯಕ್ಷರಾದ ರೋಟೇರಿಯನ್ ಪ್ರಸಾದ್ ಪ್ರಭು ಹಾಗೂ ಕೃತಿಗಳ ಲೇಖಕರಾದ ಶ್ರೀ ಸದ್ಯೋಜಾತ ಉಪಸ್ಥತರಿರುವರು. ಈ ಕಾರ್ಯಕ್ರಮಕ್ಕೆ ಸಾಹಿತ್ಯಾಭಿಮಾನಿಗಳಾದ ತಮ್ಮೆಲ್ಲರಿಗೂ ಸಂಘಟಕರು ಆದರದ ಸ್ವಾಗತವನ್ನು ಕೋರಿದ್ದಾರೆ.
ಕಾಸರಗೋಡು: ರಂಗ ಚಿನ್ನಾರಿ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ (ರಿ) ಕಾಸರಗೋಡು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆಸುವ ಕನ್ನಡ ಹಬ್ಬವು ದಿನಾಂಕ 29-06-2023 ರಂದು ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು. ರಂಗ ಚಿನ್ನಾರಿ ನಿರ್ದೇಶಕರಲ್ಲಿ ಓರ್ವರಾದ ಸತೀಶ್ಚಂದ್ರ ಭಂಡಾರಿ ಕೋಳಾರಿ ಉಪಸ್ಥಿತರಿದ್ದು ಸಂಸ್ಥೆಯ ಆರಂಭ ಮತ್ತು ಮುಂದೆ ನಡೆಸುವ ಅನೇಕ ಕನ್ನಡಪರ ಕಾರ್ಯಕ್ರಮಗಳ ಬೆಳಕು ಚೆಲ್ಲಿ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಸವಿವರವಾಗಿ ಮಾಹಿತಿಯನ್ನು ನೀಡಿದರು. ಕೊಂಡೆಯೂರು ಮಠದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮಿಗಳು ಆಶೀರ್ವಚನ ನೀಡುತ್ತಾ ಕಾಸರಗೋಡಿನಲ್ಲಿ ಅವನತಿಯ ಅಂಚಿಗೆ ತಲುಪುವಂತಾದ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುವ ರಂಗ ಚಿನ್ನಾರಿ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಸಂಸ್ಥೆಯ ಹತ್ತು ಹಲವು ಕಾರ್ಯಗಳಲ್ಲಿ ನಾವು ಕೈ ಜೋಡಿಸಿ ಮುಂದಿನ ಪೀಳಿಗೆಗೆ ಕನ್ನಡದ ಕಂಪನ್ನು ಪಸರಿಸುವ ಕಾಯಕದಲ್ಲಿ ಜೊತೆಯಾಗೋಣ ಎಂದು ನುಡಿದರು. ಮಠದ ಭಕ್ತರಾಗಿರುವ ಮೋಹನ್ ದಾಸರು ಅತಿಥಿಯಾಗಿ…
ಯಕ್ಷಗಾನವು ನಮ್ಮ ನಾಡಿನ ಹೆಮ್ಮೆಯ ಸಂಕೇತವಾದ ಕಲೆ. ಪಂಡಿತರಿಂದ ತೊಡಗಿ ಪಾಮರರವರೆಗೆ ಪ್ರತಿಯೊಬ್ಬರನ್ನೂ ಆಕರ್ಷಿಸಿ, ಅವರೆಲ್ಲರ ಮನಸೂರೆಗೊಂಡು ರಂಜನೆಯನ್ನು ನೀಡಿದ ಕಲಾಪ್ರಕಾರವು ಯಕ್ಷಗಾನದಂತೆ ಬೇರೊಂದಿಲ್ಲ. ಕಾಸರಗೋಡು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಪ್ರತಿ ಮನೆಗಳಲ್ಲೂ ಕಲಾವಿದರೋ, ಪ್ರದರ್ಶನಗಳನ್ನು ನೋಡಿ ಆಸ್ವಾದಿಸುವ ಕಲಾಭಿಮಾನಿಗಳೋ, ಕಲಾಪೋಷಕರೋ ಇದ್ದೇ ಇರುತ್ತಾರೆ. ಜನಮಾನಸದಲ್ಲಿ ಯಕ್ಷಗಾನ ಎಂಬ ಅನುಪಮವಾದ ಕಲೆಯು ಈ ತೆರನಾಗಿ, ಭದ್ರವಾಗಿ ನೆಲೆಯೂರಿ ವಿಜೃಂಭಿಸುತ್ತಿದೆ ಎಂಬುದು ನಮಗೆಲ್ಲರಿಗೂ ಸಂತೋಷದ ವಿಚಾರ. ಇಂತಹ ಶ್ರೀಮಂತ ಕಲೆಯಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶನ ಮಾಡುತ್ತಿರುವ ಕಲಾವಿದ ನವೀನ ಎನ್ ಜೆ. 19.03.1996ರಂದು ಜಡೆ ನಾಗರಾಜ ರಾವ್ ಹಾಗೂ ವೀಣಾ ಅವರ ಮಗನಾಗಿ ಜನನ. M.Com ಇವರ ವಿದ್ಯಾಭ್ಯಾಸ. ಯಕ್ಷಗಾನ ಕ್ಷೇತ್ರಕ್ಕೆ ಬರಲು ಮೂಲ ಪ್ರೇರಣೆ ಇವರ ತಾಯಿ. ಶ್ರೀ ಗಣಪತಿ ಹೆಗಡೆ ಪುರಪ್ಪೆಮನೆ ಹಾಗೂ ಐನಬೈಲು ಪರಮೇಶ್ವರ ಹೆಗಡೆ ಇವರ ಯಕ್ಷಗಾನ ಗುರುಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ :- ಪೂರ್ಣ…
ವೇದಿಕೆ ಏರಿದರೆ ಈಕೆ ಜಿಂಕೆಯಂತೆ ಚುರುಕು. ನವಭಾವಗಳ ನವರಸಗಳ ಪ್ರದರ್ಶನಕ್ಕೆ ಪ್ರೇಕ್ಷಕರ ಕರತಾಡನವೇ ಧ್ವನಿಯಾಗುವುದು. ವೃತ್ತಿಯಲ್ಲಿ ವೈದ್ಯೆಯಾದರೂ ಜನ್ಮತಃ ಕಲಾವಿದೆ ಅಂದರೂ ತಪ್ಪಲ್ಲ. ಡಾ. ರಚನಾ ಸೈಪಂಗಲ್ಲು ಹುಟ್ಟಿ ಬೆಳೆದದ್ದು ಶಾಂತಿಯಡಿ ಎಂಬ ಹಳ್ಳಿ ಮನೆಯಲ್ಲಾದರೂ ಬಾಲ್ಯದಲ್ಲೇ ನೃತ್ಯದಲ್ಲಿ ಒಲವು ಕಂಡವಳು. ರಚನಾಳ ಆಸಕ್ತಿಗೆ ಅಪರಿಮಿತ ಪ್ರೋತ್ಸಾಹದೊಂದಿಗೆ ವೇದಿಕೆ ಕಲ್ಪಿಸಿ ಕೊಟ್ಟವರು ಅವಳ ಹೆತ್ತವರಾದ ಕಾಸರಗೋಡಿನ ಬದಿಯಡ್ಕದ ಪ್ರಸಿದ್ಧ ವ್ಯಾಪಾರಿ ಶ್ರೀನಿವಾಸ್ ರಾವ್ ಹಾಗೂ ನಿವೃತ್ತ ಅಧ್ಯಾಪಿಕೆ ಶ್ರೀಮತಿ ಪುಷ್ಪ ರಾಜೀವಿಯವರು. ಸಹೋದರ ರೋಷನ್ ಕಿರಣ್ ಸೇರಿದಂತೆ ಕುಟುಂಬದ ಎಲ್ಲರ ಪ್ರೋತ್ಸಾಹ ಈ ಕಲಾವಿದೆಗೆ ಉತ್ತಮ ವೇದಿಕೆಗಳನ್ನು ಒದಗಿಸಿ ಕೊಟ್ಟದ್ದು ಸುಳ್ಳಲ್ಲ. ಡಾ. ರಚನಾ ಸೈಪಂಗಲ್ಲು ತನ್ನ ಆರರ ವಯಸ್ಸಿನಲ್ಲೇ ಶಾಲಾ ಕಲೋತ್ಸವಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಿಟ್ಟಿಸಿಕೊಂಡವಳು. ಮುಂದೆ ನೃತ್ಯ ಶಿಕ್ಷಕ ಗೋವಿಂದ ಪೈ ಪುರಸ್ಕೃತ ನಾಟ್ಯ ನಿಲಯಂ ಶ್ರೀ ಬಾಲಕೃಷ್ಣ ಮಂಜೇಶ್ವರ ಇವರಲ್ಲಿ ನೃತ್ಯಾಭ್ಯಾಸ ಆರಂಭಿಸಿ ಅವರ ಪ್ರೋತ್ಸಾಹದಿಂದಲೇ ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾದವಳು.…
ಜನಮನಕೆ ಹತ್ತಿರವಾಗುವ ವೈದ್ಯ, ಸಾಹಿತಿ, ಸಾಧಕ – ಡಾ. ಮುರಲೀಮೋಹನ್ ಚೂಂತಾರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ‘ಚೂಂತಾರು’ ಇಲ್ಲಿ ಜನಿಸಿದ ಮುರಳಿ ಮೋಹನ ಚೂಂತಾರು ಇವರು ಶ್ರೀಮತಿ ಸರೋಜಿನಿ ಭಟ್ ಮತ್ತು ಲಕ್ಷ್ಮೀನಾರಾಯಣ ಭಟ್ ದಂಪತಿಗಳ ಸುಪುತ್ರ. ಸರಕಾರಿ ಮೆರಿಟ್ ಕೋಟಾದಲ್ಲಿ ಸರಕಾರಿ ದಂತ ವೈದ್ಯಕೀಯ ಕಾಲೇಜು ಬೆಂಗಳೂರು ಇಲ್ಲಿ ಉಚಿತ ಅರ್ಹತೆ ಪಡೆದು ಬಿ.ಡಿ.ಯಸ್. ಪದವಿ, ಯಮ್.ಡಿ.ಯಸ್. ಸೀಟನ್ನು ಕೂಡ ಸರಕಾರಿ ಕೋಟಾದಲ್ಲಿಯೇ ಪಡೆದ ಇವರು ದಂತ ವೈದ್ಯಕೀಯ ಶಾಸ್ತ್ರದಲ್ಲಿ ಡಿ.ಎನ್.ಬಿ. ಪದವಿಯನ್ನು ಪಡೆದಿದ್ದಾರೆ. ಹೊಸಂಗಡಿ – ಮಂಜೇಶ್ವರ ಹೃದಯಭಾಗದಲ್ಲಿ ‘ಸುರಕ್ಷಾ ದಂತ ಚಿಕಿತ್ಸಾಲಯ’ವನ್ನು ತೆರೆದು ತಮ್ಮ ಧರ್ಮಪತ್ನಿ ಡಾ. ರಾಜಶ್ರೀ ಮೋಹನ್ ಇವರ ಜೊತೆಗೂಡಿ ದಂತ ಸಂಬಂಧಿ ತೊಂದರೆಗಳಿಗೆ ಪರಿಹಾರ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ. ಚೂಂತಾರು ತಮ್ಮ ವಿಷಯ ತಜ್ಞತೆ ಮತ್ತು ಅನುಭವಗಳ ಮೂಲಕ ಮೌಲಿಕ ಹಾಗೂ ಜನಸಾಮಾನ್ಯರಿಗೆ ಮುಟ್ಟುವಂತೆ ಕನ್ನಡದಲ್ಲಿ ವೈದ್ಯಕೀಯ ಲೇಖನಗಳನ್ನು ಬರೆಯುವುದರ ಜೊತೆಗೆ, ವಿವಿಧ ಮಾಧ್ಯಮಗಳ ಮೂಲಕ ಎಲ್ಲರನ್ನೂ ಅತಿ…
ಕನ್ನಡ ಮತ್ತು ತುಳು ಚಿತ್ರರಂಗದ ಹಿನ್ನೆಲೆ ಗಾಯಕರು ಮತ್ತು ಸಂಗೀತ ನಿರ್ದೇಶಕರು. ರಾಘವ ಆಚಾರ್ಯ ಹಾಗೂ ಮೀರಾ ಇವರ ಪುತ್ರರಾಗಿ ಜನಿಸಿದ ಡಾಕ್ಟರ್ ನಿತಿನ್ ಆಚಾರ್ಯ ಅವರು ತಮ್ಮ ದಂತ ವೈದ್ಯಕೀಯ ಪದವಿಯನ್ನು ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಇಲ್ಲಿ ಪಡೆದು 2009ನೇ ಇಸವಿಯಿಂದ ಕೆ.ಸಿ.ರೋಡಲ್ಲಿ ತಮ್ಮದೇ ಆದ ಮೀರಾ ಡೆಂಟಲ್ ಕ್ಲಿನಿಕ್ ಅನ್ನು ನಡೆಸುತ್ತಿದ್ದಾರೆ. ಬಾಲ್ಯದಿಂದಲೇ ಸಂಗೀತದ ಬಗ್ಗೆ ಅಪಾರ ಒಲವನ್ನು ಹೊಂದಿದ್ದ ಇವರು ತಮ್ಮ ಸಂಗೀತ ಶಿಕ್ಷಣವನ್ನು ಸಾಂಪ್ರದಾಯಿಕವಾಗಿ ಪಡೆದವರಲ್ಲ. ಸಂಗೀತದ ಬಗೆಗಿನ ಅಪಾರವಾದ ಆಸಕ್ತಿ ಗುರುವಿಲ್ಲದೆ ಕಲಿಕೆಯ ಕಡೆಗೆ ಸೆಳೆಯಿತು. ಎ.ಆರ್. ರಹಮಾನ್, ಚಿತ್ರ, ಎಸ್.ಪಿ.ಬಿ.ಯವರು ಇವರ ಮಾನಸ ಗುರುಗಳು ಎಂದರೆ ತಪ್ಪಾಗದು. ಆರಂಭದಲ್ಲಿ ಇವರ ಪ್ರತಿಭೆಗೆ ಇವರೇ ಕಲ್ಪಿಸಿಕೊಂಡ ವೇದಿಕೆ ‘band aid’ ಎನ್ನುವ ಫ್ಯೂಶನ್ ಬ್ಯಾಂಡ್ ನ ಮುಖಾಂತರ ಇಡೀ ಕರ್ನಾಟಕದಾದ್ಯಂತ ಬೇರೆ ಬೇರೆ ವೇದಿಕೆಗಳಲ್ಲಿ ಸಂಗೀತಪ್ರಿಯರ ಮನಗೆದ್ದ ಇವರಿಗೆ ಕನ್ನಡಿಗರ ಜನಮಾನಸವನ್ನು ತಲುಪಲು ಸಿಕ್ಕ ಅದ್ಭುತ ಅವಕಾಶ ಟಿವಿ9…