Author: roovari

08 ಏಪ್ರಿಲ್ 2023, ಕಟೀಲು: ನಾಗಾರಾಧನೆ ಎಂದರೆ ಅದು ಪ್ರಕೃತಿಯ ಆರಾಧನೆ. ನಾಗಬನದಲ್ಲಿರುವ ಹತ್ತಾರು ಜಾತಿಯ ವೃಕ್ಷಗಳು, ಅವುಗಳಲ್ಲಿ ವಾಸಮಾಡುವ ಪಕ್ಷಿ-ಜೀವ ವೈವಿಧ್ಯಗಳು, ಇವುಗಳ ಪರಿಣಾಮ ಅಲ್ಲಿ ಉಂಟಾಗುವ ನೀರಿನ ಒಸರು ಹೀಗೆ ಸುಂದರ ಪ್ರಕೃತಿಯನ್ನು ಉಳಿಸುವ ಕಾರ್ಯೀದಲ್ಲಿ ನಾಗಾರಾಧನೆಯ ಕೊಡುಗೆ ಅನನ್ಯವಾದುದು. ಅಭಿವೃದ್ಧಿ, ಜೀರ್ಣೋದ್ಧಾರದ ನೆಪದಲ್ಲಿ ಅರ್ಥಪೂರ್ಣವಾಗಿದ್ದ ನಾಗಬನಗಳು ತನ್ನ ವೈಶಿಷ್ಟ್ಯವನ್ನು ಅಗತ್ಯತೆಯನ್ನು ಕಳೆದುಕೊಳ್ಳುತ್ತಿವೆ ಎಂದು ಜನಪದ ಸಂಶೋಧಕ, ಸಾಹಿತಿ ಕೆ.ಎಲ್. ಕುಂಡಂತಾಯ ಹೇಳಿದರು. ಅವರು ದಿನಾಂಕ 02-04-2023 ಭಾನುವಾರ ಕಟೀಲು ನಂದಿನಿ ನದಿಯ ಕುದ್ರುವಿನಲ್ಲಿ ಹುತ್ತದ ಎದುರಿನ ನಾಗಮಂಡಲ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ಘಟಕ, ಕಟೀಲು ದೇಗುಲ ಹಾಗೂ ಕಟೀಲು ಪದವಿ ಕಾಲೇಜಿನ ಎನ್‌.ಎಸ್‌.ಎಸ್. ಘಟಕಗಳ ಸಹಯೋಗದಲ್ಲಿ ಆಯೋಜಿಸಿದ ಆರಾಧನಾ ಸಾಹಿತ್ಯ ಸಂವಾದದಲ್ಲಿ ನಾಗಾರಾಧನೆ ಕುರಿತು ಮಾತನಾಡಿದರು. ಭಯ ಭಕ್ತಿಗಳ, ನಂಬಿಕೆಯ ಆರಾಧನೆ, ಕುಟುಂಬದ ಮೂಲವನ್ನು ಹುಡುಕುವ ಆಶಯ ಹೀಗೆ ಬೆಳೆದು ಬಂದ ನಾಗಾರಾಧನೆ ಪ್ರಾಣಿ ಮನುಷ್ಯನ ಸಂಬಂಧಗಳನ್ನು ಸೂಚಿಸುವಂತಹದು. ಅವೈದಿಕ ಆಚರಣೆಯ ಕೆಲವು ನಾಗಬನಗಳಲ್ಲಿ ವರುಷಕ್ಕೊಂದು…

Read More

11 ಏಪ್ರಿಲ್ 2023, ಕಾಸರಗೋಡು: ರಂಗ ಚೇತನ (ರಿ) ಕಾಸರಗೋಡು ಇದರ ನೇತೃತ್ವದಲ್ಲಿ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕೇಂದ್ರ ಸಮಿತಿಯ ಸಹಬಾಗಿತ್ವದಲ್ಲಿ 3 ದಿನಗಳ ‘ಚಿತ್ತಾರ’ ರಂಗದ ರಂಗೋಲಿ ಸಹವಾಸ ಶಿಬಿರ ದಿನಾಂಕ 10-04-2023ರಂದು ಪೆರ್ಮುದೆ ಶಾಲೆಯಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಾಲನಟಿ ಪೆನ್ಸಿಲ್ ಬಾಕ್ಸ್ ಚಲನಚಿತ್ರದಲ್ಲಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದಿರುವ ಕು. ದೀಕ್ಷಾ ರೈ ಪುತ್ತೂರು ದೀಪ ಬೆಳಗಿಸಿ, ಚೆಂಡೆ ಬಡಿಯುವುದರ ಮೂಲಕ ನೆರವೇರಿಸಿದರು. ರಂಗ ಚೇತನದ ಗೌರವಾಧ್ಯಕ್ಷರಾದ ಯತೀಶ್ ಕುಮಾರ್ ರೈ ಮುಳ್ಳೇರಿಯ ಇವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಬ್ಬಣ್ಣ ಆಳ್ವ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕೇಂದ್ರ ಸಮಿತಿಯ ಕೋಶಾಧಿಕಾರಿ ಶ್ರೀಮತಿ ಪದ್ಮಾವತಿ ಟೀಚರ್, ಪೈವಳಿಕೆ ಗ್ರಾಮ ಪಂಚಾಯತ್ ನ ವಾರ್ಡ್ ಸದಸ್ಯೆ ಇರ್ಶಾನ ಇಸ್ಮಾಯಿಲ್, ಸಾಹಿತಿ ರಂಗ ನಟ ದಿವಾಕರ ಬಲ್ಲಾಳ್ ಉಪಸ್ಥಿತರಿದ್ದರು. ರಂಗ ಚೇತನ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಸ್ವಾಗತಿಸಿ, ಸದಸ್ಯರಾದ…

Read More

10 ಏಪ್ರಿಲ್ 2023, ಕಾರ್ಕಳ: ಕನ್ನಡ ಸಂಘ, ಕಾಂತಾವರ (ರಿ.) ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಜಂಟಿಯಾಗಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ‘ಅರಿವು ತಿಳಿವು’ 16ನೇ ಕಾರ್ಯಕ್ರಮವು 15-04-2023 ಶನಿವಾರ ಸಂಜೆ 5.00ಕ್ಕೆ ‘ಸಂಭ್ರಮ’ ಹೋಟೇಲ್ ಪ್ರಕಾಶ್‌, ಕಾರ್ಕಳ ಇಲ್ಲಿ ಡಾ. ಯೋಗೀಶ್ ಕೈರೋಡಿಯವರು ‘ಹೊಸಗನ್ನಡ ಕಾವ್ಯಶಕ್ತಿ ಮತ್ತು ಸೌಂದರ್ಯ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ನಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸಲು ಕನ್ನಡ ಸಂಘ, ಕಾಂತಾವರ (ರಿ.) ಮತ್ತು ಅ.ಭಾ.ಸಾ.ಪ. ಕಾರ್ಕಳದ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತವನ್ನು ಕೋರಿದ್ದಾರೆ. ಉಪನ್ಯಾಸ ನೀಡಲಿರುವ ಡಾ. ಯೋಗೀಶ್ ಕೈರೋಡಿ ದಕ್ಷಿಣ ಕನ್ನಡ ಜಿಲ್ಲಾ ಬೆಳ್ತಂಗಡಿ ತಾಲೂಕಿನ ಸಿದ್ಧಕಟ್ಟೆ ಸಮೀಪದ ಆರಂಬೋಡಿಯವರು. ಮಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು, 2011ರಲ್ಲಿ ಮುಂಬಯ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ತಾಳ್ತಜೆ ವಸಂತ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಿಂದ ಪಿ.ಎಚ್‌.ಡಿ. ಪದವಿಯನ್ನೂ ಗಳಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ…

Read More

10 ಏಪ್ರಿಲ್ 2023, ಪುತ್ತೂರು: ಪುತ್ತೂರಿನ ದರ್ಬೆಯಲ್ಲಿರುವ ಶಶಿಶಂಕರ ಸಭಾಂಗಣದಲ್ಲಿ ದಿನಾಂಕ 05-04-2023ರಂದು ಸಂಜೆ 5-45ಕ್ಕೆ ಶ್ರೀ ಮೂಕಾಂಬಿಕಾ ಕಲ್ಚರಲ್ ಆಕಾಡೆಮಿ (ರಿ.) ಪುತ್ತೂರು ಇದರ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್ ಇವರ ಓಂಕಾರ ಹಾಗೂ ಶಂಖನಾದದೊಂದಿಗೆ ಕಾರ್ಯಕ್ರಮ “ನೃತ್ಯಾಂತರಂಗ 96” ಆರಂಭವಾಯಿತು. ಕಾರ್ಯಕ್ರಮದ ಬಗ್ಗೆ ನಿರ್ದೇಶಕರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಭ್ಯಾಗತರಾಗಿ ಬಂದ ಶ್ರೀಮತಿ ಸಂಧ್ಯಾ ಕಜೆ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದರು. ಇವರು ಖ್ಯಾತ ಆಯುರ್ವೇದಿಕ್ ವೈದ್ಯರಾದ ಶಶಿಧರ ಕಜೆಯವರ ಧರ್ಮಪತ್ನಿ. ಗೃಹಿಣಿಯಾಗಿದ್ದು ಪುತ್ತೂರಿನ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಹಳ ಮುತುವರ್ಜಿಯಿಂದ ಭಾಗವಹಿಸುವ ಇವರು ಎಲ್ಲರ ಗಮನ ಸೆಳೆಯುವಂತಹ ವ್ಯಕ್ತಿತ್ವದವರು. ರೋಟರಿ ಇನ್ನರ್ ವೀಲ್ ಗಳಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ಪ್ರಖ್ಯಾತ ಕಜೆ ಮನೆತನದ ಸೊಸೆಯಾಗಿ ಚಿರಪರಿಚಿತರಾಗಿದ್ದಾರೆ. ಮಗಳು ಕು. ಸನ್ನಿಧಿ ಕಜೆ ಎಂ.ಬಿ.ಬಿ.ಎಸ್. ಅಧ್ಯಯನ ಮಾಡುತ್ತಿದ್ದು, ಭರತನಾಟ್ಯದ ವಿದ್ಯಾರ್ಥಿಯೂ ಆಗಿದ್ದಾರೆ. ಕಲಾವಿದೆ ನವ್ಯಾ ಮೈತ್ರಿ ಕೊಂಡ ಇವರನ್ನು ಕು. ನಿನಾದ ಮತ್ತು ಸಂಧ್ಯಾ ಕಜೆಯವರನ್ನು ಕು.…

Read More

10 ಏಪ್ರಿಲ್ 2023,ಬೆಂಗಳೂರು: ಪ್ರತಿ ತಿಂಗಳು ಹೊಸಕೋಟೆಯ “ಜನಪದರು “ಸಾಂಸ್ಕೃತಿಕ ವೇದಿಕೆ ಆಯೋಜಿಸುವ ತಿಂಗಳ ಎರಡನೇ ಶನಿವಾರ ದ ನಾಟಕ ಸರಣಿ ‘ ರಂಗಮಾಲೆ ‘ ಇದರ 69 ಕಾರ್ಯಕ್ರಮವು ತಾರೀಕು 08-04-2023 ನೇ ಶನಿವಾರ ದಂದು ನಿಂಬೆಕಾಯಿಪುರದ ಜನಪದರು ರಂಗಮಂದಿರದಲ್ಲಿ ನಡೆಯಿತು. ಈ ಬಾರಿ ಬೆಂಗಳೂರಿನ ದೃಶ್ಯ ಕಾವ್ಯ ತಂಡ ‘ಡಾII ಕೆ .ವೈ.ನಾರಾಯಣಸ್ವಾಮಿ ರಚನೆಯ ” ಮಾಯಾ ಬೇಟೆ ” ನಾಟಕವನ್ನು ನಂಜುಂಡೇಗೌಡರ ನಿದೇ೯ಶನದಲ್ಲಿ ಪ್ರದರ್ಶನ ನೀಡಿತು. ಕಾರ್ಯಕ್ರಮ ಉದ್ಧಾಟನೆ ಮಾಡಿ ಮಾತನಾಡಿದ ವೇದಿಕೆ ಅಧ್ಯಕ್ಷ ಕೆ.ವಿ ವೆಂಕಟರಮಣಪ್ಪ. (ಪಾಪಣ್ಣ ಕಾಟಂನಲ್ಲೂರು) ರಂಗಭೂಮಿ ಸಮಾಜದ ಓರೆ ಕೋರೆಗಳನ್ನು ಪ್ರತಿಬಿಂಬಿಸಿ, ಪರಿಣಾಮ ಮೂಡಿಸುವಲ್ಲಿ ಪ್ರಬಲ ಮಾಧ್ಯಮ ಎಂದರು. ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ, ಸ್ತ್ರೀ ಶೋಷಣೆಯ ಒಳ ಮಜಲುಗಳ ನಾಟಕ ಪ್ರೇಕ್ಷಕರ ಅಂತರಂಗ ಕಲಕಿತು. ನಿರ್ದೇಶಕ ನಂಜುಂಡೇಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು. ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ್ ಸಿದ್ದೇಶ್ವರ ಚಲಪತಿ ಮುನಿರಾಜು ಹಾಜರಿದ್ದರು ಪ್ರತಿ ತಿಂಗಳು ಹೊಸಕೋಟೆಯ ಪ್ರತಿ ತಿಂಗಳು ಹೊಸಕೋಟೆಯ “ಜನಪದರು “ಸಾಂಸ್ಕೃತಿಕ…

Read More

10 ಏಪ್ರಿಲ್ 2023, ಸುರತ್ಕಲ್: ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣ ವೇದಿಕೆ ಮತ್ತು ಗೋವಿಂದ ದಾಸ ಕಾಲೇಜು ಸಹಯೋಗದೊಂದಿಗೆ ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರ “ಅಗರಿ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ”ವು ದಿನಾಂಕ 08-04-2023ರಂದು ಶನಿವಾರ ಸುರತ್ಕಲ್ ನ ಗೋವಿಂದ ದಾಸ ಕಾಲೇಜಿನಲ್ಲಿ ಜರಗಿತು. 2023ನೇ ಸಾಲಿನ “ಅಗರಿ ಪ್ರಶಸ್ತಿ” ಸ್ವೀಕರಿಸಿದ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, “ಅಗರಿ ಪ್ರಶಸ್ತಿ ದೊರಕಿರುವುದು ಸಂತಸ ತಂದಿದೆ. ಧರ್ಮಸ್ಥಳ ಮೇಳದ ಸಾರಥ್ಯವನ್ನು ವಹಿಸಿಕೊಂಡು ಯಕ್ಷಗಾನದ ಮೂಲ ಪರಂಪರೆ ಉಳಿಸಲು ಆದಷ್ಟು ಶ್ರಮವಹಿಸುತ್ತಿದ್ದೇನೆ. ಅಗರಿ ಭಾಗವತರ ಬಳಿಕ ಕಡತೋಕ ಶೈಲಿ, ಮಯ್ಯ ಶೈಲಿ, ಹೆಬ್ಬಾರ್ ಶೈಲಿ ಬಂದಿವೆ. ಕಾಳಿಂಗ ನಾವಡರಂಥವರು ಬಡಗು ಶೈಲಿಗೆ ಜೀವಕಳೆ ನೀಡಿದ್ದರು. ಇದು ಒಳ್ಳೆಯ ಬೆಳವಣಿಗೆ. ಆದರೆ ಸಿನಿಮಾ ಶೈಲಿ ಯಕ್ಷಗಾನಕ್ಕೆ ಬರುವುದು ಬೇಡ. ಕಲಾ ತಪಸ್ಸಿನ ಮೂಲಕ ಯಕ್ಷರಂಗಕ್ಕೆ ಬರುವ ಭಾಗವತರು, ಯಕ್ಷಗಾನ ಕಲಾವಿದರು ಪ್ರೇಕ್ಷಕರನ್ನು ತಮ್ಮ ಪ್ರತಿಭೆಯ ಮೂಲಕ ಶ್ರೇಷ್ಠಮಟ್ಟಕ್ಕೆ ಕೊಂಡೊಯ್ಯುವ ಶಕ್ತಿಗಳು. ಇಂತಹವರ ನೆನಪಿನಲ್ಲಿ ಪ್ರಶಸ್ತಿ,…

Read More

10 ಏಪ್ರಿಲ್ 2023,ಉಡುಪಿ: ದಿನಾಂಕ 9-04-20230 ರಂದು ಬೈಂದೂರಿನ ಶ್ರೀ ಸೇನೇಶ್ವರ ದೇವಳದ ಆವರಣದಲ್ಲಿ ಬೈಂದೂರಿನ ಪ್ರಸಿದ್ಧ ಸಾಂಸ್ಕೃತಿಕ ಸಂಘಟನೆ `ಸುರಭಿ ‘ಯ 23ನೇ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಂಡ `ಸುರಭಿ ಜೈಸಿರಿ ಸಾಂಸ್ಕೃತಿಕ ವರ್ಷಧಾರೆ ‘ ಮೂರು ದಿನಗಳ ಕಾರ್ಯಕ್ರಮದ ಕೊನೆಯ ದಿನದಂದು ಸಂಸ್ಥೆ ಕೊಡ ಮಾಡುವ 9ನೇ ವರ್ಷದ ಪ್ರತಿಷ್ಠಿತ `ಬಿಂದುಶ್ರೀ ‘ ಪ್ರಶಸ್ತಿಯನ್ನು ಖ್ಯಾತ ಯಕ್ಷಗಾನ ಗೊಂಬೆಯಾಟ ಕಲಾವಿದ ಭಾಸ್ಕರ ಕೊಗ್ಗ ಕಾಮತ್ ಅವರಿಗೆ ಪ್ರದಾನ ಮಾಡಲಾಯಿತು ಪ್ರಶಸ್ತಿ ಪ್ರಧಾನ ಮಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ ಪ್ರಪಂಚದಾದ್ಯಂತ ಯಕ್ಷಗಾನ ಗೊಂಬೆಯಾಟದ ಸೊಗಡನ್ನು ಪಸರಿಸಿದ ಕೊಗ್ಗ ಕಾಮತ್ ಅವರ ದಾರಿಯಲ್ಲಿಯೇ ಅವರ ಮಗ ಭಾಸ್ಕರ ಕೊಗ್ಗ ಕಾಮತ್ ಅವರು ಹೆಜ್ಜೆ ಹಾಕಿರುವುದು ಕಲೆಯ ಉಳಿವಿನ ದೃಷ್ಟಿಯಿಂದ ಶ್ಲಾಘನೀಯ. ಕಲೆ, ಕಲಾವಿದರಿಗೆ ಪ್ರೋತ್ಸಾಹ ಸಮಾಜದ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದರು. ಗೊಂಬೆಯಾಟ ಕಲೆ ಮಾತ್ರವಲ್ಲದೆ, ಅದರಲ್ಲಿ ತೊಡಗಿಸಿಕೊಂಡಿರುವ…

Read More

10 ಏಪ್ರಿಲ್ 2023, ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ ‘ನೂರಾರು ಲೇಖಕರ ನೂರಾರು ಕತೆಗಳು’ ಕಥಾ ಸಂಕಲನವನ್ನು ದಿನಾಂಕ 08-04-2023 ಶನಿವಾರದಂದು ಉಡುಪಿಯ ಪವನ್ ರೂಫ್ ಟಾಪ್ ಕಿದಿಯೂರು ಹೋಟೆಲ್ ನಲ್ಲಿ ಬಿಡುಗಡೆಗೊಂಡಿತು. ಪುಸ್ತಕ ಬಿಡುಗಡೆಗೊಳಿಸಿದ ಕನ್ನಡಪ್ರಭ ಪತ್ರಿಕೆಯ ಪುರವಣಿ ಸಂಪಾದಕ, ಸಾಹಿತಿ ಗಿರೀಶ್ ರಾವ್ ಹತ್ವಾರ್ (ಜೋಗಿ)ರವರು “ಕತೆಗಳು ಸಂಕಷ್ಟ ಕಾಲದಲ್ಲಿ ಔಷಧಿಯಂತೆ ಸಾಂತ್ವನ ನೀಡುತ್ತವೆ. ಅಹಂಕಾರದಲ್ಲಿ ಕತೆ ಹುಟ್ಟುವುದಿಲ್ಲ. ಅನುನಯದಿಂದ ಕತೆಗಳನ್ನು ಬರೆಯಬೇಕಾಗುತ್ತದೆ. ಕತೆಗಳು ಮನುಷ್ಯನ ಅಂತರಂಗದ ಮಾತನ್ನು ಹೇಳುತ್ತವೆ. ಕಟ್ಟಿದ ಕತೆಗಳಿಗಿಂತ ಅಂತರಂಗದಲ್ಲಿ ಹುಟ್ಟಿದ ಕತೆಗಳೇ ಶ್ರೇಷ್ಠ” ಎಂದು ಹೇಳಿದರು. ಪತ್ರಕರ್ತ ವಸಂತ ಗಿಳಿಯಾರ್ ಕಥಾಸಂಕಲನವನ್ನು ಪರಿಚಯಿಸಿದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಪ್ರೊ. ಶಂಕರ್ ವೇದಿಕೆಯಲ್ಲಿದ್ದರು. ಸಂಕಲನದ ಸಂಪಾದಕರಾದ ನಾಗರಾಜ್ ಹೆಬ್ಬಾರ್ ಪ್ರಸಾವಿಕ ಮಾತುಗಳನ್ನಾಡಿದರು. ರಾಜೇಶ್ ಭಟ್ ಫಣಿಯಾಡಿ ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು. 117 ಕತೆಗಳ ಸಂಕಲನ : ಪ್ರತಿಷ್ಠಾನ ಕೊರೋನಾ ಕಾಲದಲ್ಲಿ ಲೇಖಕರಿಗೆ ಕತೆಗಳನ್ನು…

Read More

10 ಏಪ್ರಿಲ್ 2023, ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ ಉಡುಪಿ ಜಂಟಿಯಾಗಿ ಏರ್ಪಡಿಸಿದ್ದ “ಕನ್ನಡ ಮಾತನಾಡು” ಕಾರ್ಯಕ್ರಮವು ದಿನಾಂಕ 09-04-2023ರಂದು ಉಡುಪಿಯ ಕೇರಳ ಕಲ್ಚರಲ್ ಅಂಡ್ ಸೋಷಿಯಲ್ ಸೆಂಟರ್ ನಲ್ಲಿ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಹಿರಿಯ ಕಥೆಗಾರರು, ವಿಮರ್ಶಕರಾದ ಬೆಳಗೋಡು ರಮೇಶ್ ಭಟ್ ಅವರು ಮಾತನಾಡುತ್ತಾ ಭಾಷೆ ಇರುವುದು ಸಂಹನಕ್ಕೆ, ಯಾವ ಭಾಷೆಯು ಇನ್ನೊಂದು ಭಾಷೆಯನ್ನು ದ್ವೇಷಿಸು ಎನ್ನುವುದಿಲ್ಲ. ಭಾಷೆ ಮತ್ತು ಮನುಷ್ಯ ಬೆಳೆಯುವುದು ಕೊಳು-ಕೊಡುವುದರಿಂದ, ಕೂಪಮಂಡೂಕರಾಗಬೇಡಿ. ಭಾಷೆಯ ವಿಷಯದಲ್ಲಿ ರಾಜಕಾರಣಿಗಳ ಭಾಷೆಯ ಅಗತ್ಯವಿಲ್ಲ ಎನ್ನುವ ಕಿವಿ ಮಾತನ್ನು ಹೇಳಿದರು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹಾಗೂ ತಾಲೂಕು ಘಟಕ ಬಹಳ ಒಳ್ಳೆಯ ಕೆಲಸಗಳನ್ನು ಸಮಾಜಕ್ಕೆ ನೀಡುತ್ತಿದೆ ಎಂದರು. “ಕನ್ನಡ ಮಾತನಾಡು” ಕಾರ್ಯಕ್ರಮದಲ್ಲಿ ಸುಮಾರು ಎರಡು ತಿಂಗಳಿಂದ 30 ತರಗತಿಗಳು ನಡೆದಿದ್ದು 25ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದು, ಪ್ರಮಾಣಪತ್ರವನ್ನು ವಿತರಿಸಲಾಯಿತು. ಸಭಾಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು…

Read More

10 ಏಪ್ರಿಲ್ 2023, ಮಂಗಳೂರು: ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲ ಮತ್ತು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಕುತ್ತಾರು ಇವರ ಸಹಯೋಗದಲ್ಲಿ ನಡೆದ ಹರಿಕಥೆ ಉಚ್ಚಯ-2023ರ ಎರಡನೇ ದಿನದ ಉದ್ಘಾಟನೆಯನ್ನು ಶ್ರೀ ವೈದ್ಯನಾಥೇಶ್ವರ ಭಜನಾ ಮಂದಿರದ ಅದ್ಯಕ್ಷರಾದ ಶ್ರೀ ಪುರುಷೋತ್ತಮ ಅಂಚನ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ವೇದಿಕೆಯಲ್ಲಿ ತುಳುವ ಸಿರಿ ಟ್ರಸ್ಟ್(ರಿ.) ಕುಡ್ಲದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಿವೇಕಾನಂದ ಸನಿಲ್, ಟ್ರಸ್ಟ್ ನ ಗೌರವ ಸಲಹೆಗಾರರಾದ ಶ್ರೀ ಕೆ.ರವೀಂದ್ರ ರೈ ಕಲ್ಲಿಮಾರ್, ತುಳುವ ಸಿರಿ ಟ್ರಸ್ಟ್ ನ ಉಪಾಧ್ಯಕ್ಷರಾದ ವಿದ್ಯಾಧರ ಶೆಟ್ಟಿ ಮತ್ತು ಸುಧಾ ಸುರೇಶ್, ಜತೆ ಕಾರ್ಯದರ್ಶಿ ರವಿಕುಮಾರ್ ಕೋಡಿ ಮತ್ತು ಸಂಚಾಲಕರಾದ ಅನಂತಕೃಷ್ಣ ಯಾದವ್ ಉಪಸ್ಥಿತರಿದ್ದರು. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಟ್ರಸ್ಟ್ ನ ಕೋಶಾಧಿಕಾರಿ ಕಲಾಸಾರಥಿ ಶ್ರೀ ತೋನ್ಸೆ ಪುಷ್ಕಳ್ ಕುಮಾರ್ ಡಾ. ಎಸ್.ಪಿ. ಗುರುದಾಸ್…

Read More