Subscribe to Updates
Get the latest creative news from FooBar about art, design and business.
Author: roovari
ಮಲ್ಪೆ : ಮಲ್ಪೆಪಡುಕರೆಯ ಶ್ರೀದೇವಿ ಭಜನಾ ಮಂದಿರ ಪರಿಸರದ ಕಡಲತಡಿಯಲ್ಲಿ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಪೆರ್ಡೂರು ಹಾಗೂ ಮತ್ಸ್ಯರಾಜ್ ಗ್ರೂಪ್ ಮಲ್ಪೆ ಇವರ ಸಹಯೋಗದಲ್ಲಿ ಶ್ರೀದೇವಿ ಭಜನಾ ಮಂದಿರದ ಸಹಕಾರದಲ್ಲಿ ನಡೆಯುತ್ತಿರುವ ಉಡುಪಿ-ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಆಯ್ದ ತಂಡಗಳ ಭಜನಾ ಜುಗಲ್ ಬಂದಿ ಸ್ಪರ್ಧೆಯು ದಿನಾಂಕ 02 ಮಾರ್ಚ್ 2025ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ಪರ್ಧೆಯನ್ನು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದ ಪೆರ್ಡೂರು ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್ “ಮನದ ಅಂತರಾತ್ಮನೊಂದಿಗೆ ಸಖ್ಯ ಬೆಳೆಸಿ ಭಕ್ತಿಯ ಪರಿಪೂರ್ಣತೆ ಬೆಳೆಸಿಕೊಂಡು ಭಗವಂತನನ್ನು ಭಜಿಸಿದಾಗ ಆತ ಖಂಡಿತವಾಗಿಯೂ ನಮ್ಮೊಂದಿಗೆ ಸಂವಹಿಸುತ್ತಾನೆ. ದೇವರನ್ನು ಒಲಿಸಿಕೊಳ್ಳಲು ಭಜನೆಯೇ ಸುಲಭದ ದಾರಿ ಎಂದು ನಮ್ಮ ಪೂರ್ವಜರು ಮನೆಮನೆಗಳಲ್ಲಿ ದೇವರ ನಾಮವನ್ನು ಭಜಿಸುತ್ತಿದ್ದರು. ವಿದ್ಯಾವಂತ ಮಕ್ಕಳಲ್ಲಿ ಈ ಸಂಸ್ಕೃತಿ ನಶಿಸುತ್ತಿರುವುದು ಖೇದದ ಸಂಗತಿ” ಎಂದು ನುಡಿದರು. ವೇದಿಕೆಯಲ್ಲಿ ಉದ್ಯಮಿಗಳಾದ ನಾಗರಾಜ ಸುವರ್ಣ, ಶೇಖರ್ ಪುತ್ರನ್, ಮತ್ಸ್ಯರಾಜ್ ಗ್ರೂಪಿನ ಅಧ್ಯಕ್ಷ…
ಕಾರ್ಕಳ : ಶಾಸ್ತ್ರೀಯ ಸಂಗೀತ ಸಭಾ (ರಿ.) ಇದರ ವತಿಯಿಂದ ಶ್ರೀ ಬಿ. ಮಂಜುನಾಥ ಪೈ ಸಾಂಸ್ಕೃತಿಕ ಪ್ರತಿಷ್ಠಾನ ಕಾರ್ಕಳ ಇದರ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ಸಂಗೀತಗುರು ವಿದ್ವಾನ್ ಬಿ. ಯೋಗೀಶ್ ಬಾಳಿಗಾ ಸ್ಮರಣಾರ್ಥ ‘ಕಲಾಸಾಧನ ಯುವ ಸಂಗೀತೋತ್ಸವ’ ಮತ್ತು 33ನೇ ‘ಕಾರ್ಕಳ ಸಂಗೀತ ಮಹೋತ್ಸವ 2025’ವನ್ನು ದಿನಾಂಕ 07ರಿಂದ 09 ಮಾರ್ಚ್ 2025ರವರೆಗೆ ಕಾರ್ಕಳದ ಶ್ರೀ ಬಿ. ಮಂಜುನಾಥ ಪೈ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 07 ಮಾರ್ಚ್ 2025ರಂದು ಸಂಜೆ 4-00 ಗಂಟೆಗೆ ಕಾರ್ಕಳದ ಮಾಸ್ಟರ್ ಶ್ರೀಕರ ನಾರಾಯಣ ಉಪಾಧ್ಯಾಯ ಇವರಿಂದ ಕೊಳಲು ವಾದನ, 5-00 ಗಂಟೆಗೆ ಬೆಂಗಳೂರಿನ ಕುಮಾರಿ ಪ್ರಜ್ಞಾ ಅಡಿಗ ಇವರಿಂದ ‘ಕರ್ನಾಟಕ ಶಾಸ್ತ್ರೀಯ ಗಾಯನ’, ಗಂಟೆ 6-30ಕ್ಕೆ ಚೆನ್ನೈಯ ವಿದ್ವಾನ್ ಸಾಯಿ ವಿಘ್ನೇಶ್ ಇವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ ನಡೆಯಲಿದೆ. ದಿನಾಂಕ 08 ಮಾರ್ಚ್ 2025ರಂದು ಸಂಜೆ 3-30 ಗಂಟೆಗೆ ಕಾರ್ಕಳ ಅನಂತಶಯನದ ಸರಸ್ವತಿ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ತಬಲಾ ವೃಂದ ವಾದನ ಮತ್ತು…
ಬೆಂಗಳೂರು : ಚೇತನ ಫೌಂಡೇಶನ್ ಕರ್ನಾಟಕ ಸೋಶಿಯಲ್ ಕ್ಲಬ್ ಆಶ್ರಯದಲ್ಲಿ ನಡೆಯುವ ಮಹಿಳಾ ಸಾಹಿತ್ಯ ಸಮ್ಮೇಳನವು ದಿನಾಂಕ 9 ಮಾರ್ಚ್ 2025ರಂದು ಬೆಂಗಳೂರಿನ ಗಾಂಧಿ ಭವನದ ಬಾಪೂ ಸಭಾಂಗಣದಲ್ಲಿ ನಡೆಯಲಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಸಾಹಿತ್ಯ ಹಾಗೂ ಸಮಾಜಸೇವೆ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಇವರಿಗೆ ‘ಅಂತರಾಷ್ಟ್ರೀಯ ವನಿತಾ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುವುದು ಎಂದು ಚೇತನ ಫೌಂಡೇಶನ್ ಕ್ಲಬ್ ಇದರ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ ತಿಳಿಸಿದ್ದಾರೆ.
ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘವು ಆಯೋಜಿಸುವ 8ನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ 22 ಮತ್ತು 23 ಮಾರ್ಚ್ 205 ರಂದು ನಡೆಯಲಿದ್ದು, ಲೇಖಕಿ ಎಚ್.ಎಸ್. ಶ್ರೀಮತಿ ಇವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ‘ಹಿಂದಣ ಹೆಜ್ಜೆ, ಮುಂದಣ ನೋಟ’ ಎಂಬ ಶೀರ್ಷಿಕೆಯಡಿ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಸಮಾರೋಪ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಭಾಗವಹಿಸಿ, ಸಮಾರೋಪ ನುಡಿಗಳನ್ನಾಡಲಿದ್ದಾರೆ. ಎರಡು ದಿನಗಳ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು, ಕವಿಗೋಷ್ಠಿಗಳು ನಡೆಯಲಿದ್ದು, ರಾಜ್ಯದ ವಿವಿಧೆಡೆ ಇರುವ ಲೇಖಕಿಯರು, ಕವಯಿತ್ರಿಯರು ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ತಿಳಿಸಿದ್ದಾರೆ.
ಕನ್ನಡದಲ್ಲಿ ಲಲಿತಪ್ರಬಂಧಗಳು ಮಂಕಾಗಿವೆ ಎನ್ನುವವರು ‘ಮಂದಹಾಸ’ ಕೃತಿಯನ್ನೊಮ್ಮೆ ಓದಬೇಕು. ಇದರಲ್ಲಿ ಇಪ್ಪತ್ತೈದು ಬರಹಗಳಿವೆ. ಲಲಿತ ಪ್ರಬಂಧಗಳನ್ನು ಓದದ, ಗಂಭೀರವಾಗಿ ನೋಡದ ಸಾಹಿತ್ಯಪ್ರಿಯರು ಮತ್ತು ಪ್ರೋತ್ಸಾಹಿಸದ ಪತ್ರಿಕೆಗಳು ಪಶ್ಚಾತ್ತಾಪ ಪಡುವಂತೆ ಪುಸ್ತಕದ ಹಾಸುಬೀಸು ಇದೆ. ವಿಕಾಸ ಹೊಸಮನಿ ಎಂಬ ತರುಣ ಲೇಖಕ ಸಂಪಾದಿಸಿದ ಈ ಕೃತಿ ಮರುಮುದ್ರಣ ಕಾಣುವ ಶಕ್ತಿಯನ್ನು ಹೊಂದಿದೆ. ಬರಹವನ್ನು ಹೇಗೆ ಹೆಣೆಯಬಹುದೆಂದು ಈ ಪುಸ್ತಕದ ಓದಿನ ಮೂಲಕ ಕಲಿಯಬಹುದು. ಇಪ್ಪತ್ತೈದು ಮಂದಿ ಪ್ರಬಂಧಕಾರರನ್ನು ಕುರಿತ ಹೆಚ್ಚಿನ ಮಾಹಿತಿ ಇಲ್ಲವೆಂಬ ಸಣ್ಣ ಲೋಪವನ್ನು ಬಿಟ್ಟರೆ ಈ ಕೃತಿ ಶ್ರೀಮಂತವಾಗಿದೆ. ಕೃತಿಯ ನೋಟ ವಿಠ್ಠಲ ಕಟ್ಟಿ ‘ನಾನೇಕೆ ಬರೆಯುತ್ತಿಲ್ಲ’ ಎಂಬ ಲಲಿತ ಪ್ರಬಂಧದಲ್ಲಿ ಈ ಮಾತಿನ ಮೂಲಕ ಗಮನ ಸೆಳೆಯುತ್ತಾರೆ. “ಮುಖ್ಯ ಕಾರಣ, ನನಗೆ ಓದುಗರ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ಜಾಸ್ತಿ. ಕೆಲವರು ಬರೆದರೇ ಕನ್ನಡ ಸಾಹಿತ್ಯಕ್ಕೆ ಉಪಕಾರ ಕೆಲವರು ಬರೆಯದಿದ್ದರೆ ಉಪಕಾರ” ಎನ್ನುತ್ತಾ ಒಳ್ಳೆಯ ಪ್ರಬಂಧವನ್ನು ಹೆಣೆದು ಬಿಡುತ್ತಾರೆ. ಉತ್ತಮ ಕಥೆಗಾರನಾಗಿದ್ದೂ ಲಲಿತ ಪ್ರಬಂಧವನ್ನು ಬರೆಯ ಹೊರಟು, ಕಥೆಯಂತೆ…
ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ಬನ್ನೂರು ಕರ್ಮಲದ ಭಾರತೀ ನಗರದ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾವರ್ಧಂತಿ ಉತ್ಸವದ ಅಂಗವಾಗಿ ದಿನಾಂಕ 04 ಮಾರ್ಚ್ 2025ರಂದು ‘ದಕ್ಷಯಾಗ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ತೆಂಕಬೈಲು ಮುರಳೀಕೃಷ್ಣ ಶಾಸ್ತ್ರೀ, ಆನಂದ ಸವಣೂರು, ಪದ್ಯಾಣ ಜಯರಾಮ ಭಟ್, ಮುರಳೀಧರ ಕಲ್ಲೂರಾಯ, ಶರಣ್ಯ ನೆತ್ರಕೆರೆ, ಮಾಸ್ಟರ್ ಅಭಯ ಕೃಷ್ಣ ಸಹಕರಿಸಿದರು. ಮುಮ್ಮೇಳದಲ್ಲಿ ಈಶ್ವರ (ಶುಭಾ ಅಡಿಗ), ದಾಕ್ಷಾಯಿಣಿ (ಕಿಶೋರಿ ದುಗ್ಗಪ್ಪ ನಡುಗಲ್ಲು), ದಕ್ಷ (ಹರಿಣಾಕ್ಷಿ ಜೆ. ಶೆಟ್ಟಿ), ವಿಪ್ರರು (ಗಾಯತ್ರೀ ಹೆಬ್ಬಾರ್), ವೀರಭದ್ರ (ಶಾರದಾ ಅರಸ್), ದೇವೇಂದ್ರ (ಭಾರತೀ ರೈ ಅರಿಯಡ್ಕ) ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ಪುಳು ಈಶ್ವರ ಭಟ್ ವಂದಿಸಿದರು. ಶ್ರೀ ದೇವಳದ ವ್ಯವಸ್ಥಾಪಕ ಸುಬ್ರಹ್ಮಣ್ಯ ಭಟ್ ಹಾಗು ಬಡೆಕ್ಕಿಲ ಚಂದ್ರಶೇಖರ್ ಭಟ್ ಸಹಕರಿಸಿದರು.
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ತುಳು ಪರಿಷತ್ ಜಂಟಿ ಆಶ್ರಯದಲ್ಲಿ ನಡೆಯುವ ವಿದ್ಯಾರ್ಥಿ ತುಳು ಸಮ್ಮೇಳನದ ಪೂರ್ವಭಾವಿ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 01 ಮಾರ್ಚ್ 2025ರಂದು ಮಂಗಳೂರಿನ ತುಳು ಭವನದಲ್ಲಿ ಜರಗಿತು. ಸುರತ್ಕಲ್ ಗೋವಿಂದದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಸುರತ್ಕಲ್ ಅವರು ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ “ತುಳು ಭಾಷೆ ಹಾಗೂ ತುಳು ಸಂಸ್ಕ್ರತಿಯ ಬಗ್ಗೆ ಎಲ್ಲರೂ ಒಲವು ಬೆಳೆಸಿಕೊಳ್ಳಬೇಕು, ಪದವಿ ಶಿಕ್ಷಣದಲ್ಲಿ ತುಳು ಪಠ್ಯ ಎಲ್ಲಾ ಕಾಲೇಜುಗಳಿಗೆ ವಿಸ್ತರಣೆಯಾಗಲು ಈ ವಿದ್ಯಾರ್ಥಿ ತುಳು ಸಮ್ಮೇಳನ ಸಹಕಾರಿಯಾಗಲಿ” ಎಂದು ಆಶಯ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷರಾದ ಜಯಶೀಲ ಅಡ್ಯಂತಾಯ ಮಾತನಾಡಿ “ತುಳು ಭಾಷೆ ನಮ್ಮೆಲ್ಲರ ಮಾತೃ ಭಾಷೆಯಾಗಿದ್ದು, ಭಾಷೆಯ ಬಗ್ಗೆ ಅಭಿಮಾನ ಮೂಡಿಸಲು ಇಂತಹ ಕಾರ್ಯಕ್ರಮ ಸಹಕಾರಿಯಾಗಲಿದೆ” ಎಂದು ಹೇಳಿದರು. ತುಳು ಪರಿಷತ್ ಗೌರವ ಅಧ್ಯಕ್ಷ ಡಾ. ಪ್ರಭಾಕರ್ ನೀರುಮಾರ್ಗ ಮಾತನಾಡಿ “ಪ್ರೌಢ ಶಾಲೆ, ಪದವಿ ಹಾಗೂ ಸ್ನಾತಕೋತ್ತರ…
ಬೆಂಗಳೂರು : ಬೇವಿನಹಳ್ಳಿಯ ‘ಜಿಗುರು’ ತಂಡದ ವತಿಯಿಂದ ‘ಚಿಗುರು ರಂಗೋತ್ಸವ’ದಲ್ಲಿ ದಿನಾಂಕ 07ರಿಂದ 09 ಮತ್ತು 14ರಿಂದ 16 ಮಾರ್ಚ್ 2025ರವೆರೆಗೆ ಬೆಂಗಳೂರಿನ ಪ್ರೆಸ್ಟೀಜ್ ಸೆಂಟರ್ ಆಫ್ ಪರ್ಫಾಮಿಂಗ್ ಆರ್ಟ್ಸ್ ಇಲ್ಲಿ ಕನ್ನಡ ನಾಟಕಗಳ ಪ್ರದರ್ಶನವನ್ನು ಪ್ರತಿದಿನ 3-00 ಮತ್ತು 7-00 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ದಿನಾಂಕ 07 ಮಾರ್ಚ್ 2025ರಂದು ಪ್ರಕಾಶ್ ಬೆಳವಾಡಿ ಇವರ ನಿರ್ದೇಶನದಲ್ಲಿ ಸೆಂಟರ್ ಫಾರ್ ಫಿಲ್ಮ್ ಅಂಡ್ ಡ್ರಾಮಾ ತಂಡದವರಿಂದ ‘ಎಡಬಿಡಂಗಿ’, ದಿನಾಂಕ 08 ಮಾರ್ಚ್ 2025ರಂದು ಚಿತ್ರಶೇಕರ್ ಎನ್.ಎಸ್. ಇವರ ನಿರ್ದೇಶನದಲ್ಲಿ ಸಂಚಯ ತಂಡದವರಿಂದ ‘ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ’, ದಿನಾಂಕ 09 ಮಾರ್ಚ್ 2025ರಂದು ಶ್ರದ್ದಾ ರಾಜ್ ಇವರ ನಿರ್ದೇಶನದಲ್ಲಿ ಜಂಗಮ ಕಲೆಕ್ಟಿವ್ ತಂಡದವರಿಂದ ‘ರುಮುರುಮುರುಮು’, ದಿನಾಂಕ 14 ಮಾರ್ಚ್ 2025ರಂದು ಮಂಗಳ ಎನ್. ಇವರ ನಿರ್ದೇಶನದಲ್ಲಿ ಸಂಚಾರಿ ಥಿಯೇಟರ್ ತಂಡದವರಿಂದ ‘ರೊಶೊಮನ್’, ದಿನಾಂಕ 15 ಮಾರ್ಚ್ 2025ರಂದು ವಿನಯ್ ಶಾಸ್ತ್ರಿ ಇವರ ನಿರ್ದೇಶನದಲ್ಲಿ ವಾಸ್ಪ್ ಥಿಯೇಟರ್ ತಂಡದವರಿಂದ ‘ಹೀಗಾದ್ರೆ ಹೇಗೆ ?’…
ಕಟೀಲು : ಕಲಾ ಸಂಗಮ ಕಲಾವಿದರು ಅಭಿನಯಿಸುವ ‘ಛತ್ರಪತಿ ಶಿವಾಜಿ’ ಅದ್ದೂರಿ ತುಳು ಚಾರಿತ್ರಿಕ ನಾಟಕದ ಪ್ರಥಮ ಪ್ರದರ್ಶನವನ್ನು ದಿನಾಂಕ 06 ಮಾರ್ಚ್ 2025ರಂದು ಸಂಜೆ 7-00 ಗಂಟೆಗೆ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ನಾಟಕಕ್ಕೆ ಶಶಿರಾಜ್ ಕಾವೂರು ಇವರ ಕಥೆ ಸಂಭಾಷಣೆ, ಎ.ಕೆ. ವಿಜಯ್ ಕೋಕಿಲ ಮತ್ತು ಕದ್ರಿ ಮಣಿಕಾಂತ್ ಇವರ ಸಂಗೀತ ಹಾಗೂ ವಿಜಯ್ ಕುಮಾರ್ ಕೊಡಿಯಾಲ್ ಬೈಲು ನಿರ್ದೇಶನ ಮಾಡಿರುತ್ತಾರೆ.
ಬೆಂಗಳೂರು : ಸದಾ ಚಟುವಟಿಕೆಯಿಂದಿರುವ ಬೆಂಗಳೂರಿನ ಯಕ್ಷದೇಗುಲದ ಯಕ್ಷ ತರಬೇತಿ ವಿದ್ಯಾರ್ಥಿಗಳ ಕಲಿಕಾ ಪ್ರದರ್ಶನ ‘ಯಕ್ಷ ಪಯಣ’ದ ಉದ್ಘಾಟನೆಯು ದಿನನಕ 02 ಮಾರ್ಚ್ 2025ರಂದು ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ ಯಕ್ಷದೇಗುಲದಲ್ಲಿ ಅನಾವರಣಗೊಂಡಿತು. ಪ್ರತಿ ತಿಂಗಳು ‘ಯಕ್ಷದೇಗುಲ’ ಅಂಗಳದಲ್ಲಿ ಕಲಿತ ಪಾಠದ ಪ್ರದರ್ಶನ ನೀಡುವುದು ಈ ಯಕ್ಷ ಪಯಣದ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಕೆ. ಮೋಹನ್ ಮಾತನಾಡಿ “ಇದೊಂದು ಒಳ್ಳೆಯ ಕಾರ್ಯಕ್ರಮ. ಮೊದಲಾಗಿ ಸಭಾಕಂಪನ ಹಾಗೆ ಪೌರಾಣಿಕ ಕಥಾನಕಗಳ ಅನುಭವ, ಕನ್ನಡ ಭಾಷೆಯ ಮೇಲೆ ಪ್ರಭುತ್ವ, ಸ್ವರ ಸಾಮರ್ಥ್ಯ, ಅಭಿನಯ, ಕುಣಿತ, ಪ್ರತಿಭೆ ಹೀಗೇ ಎಲ್ಲಾ ವಿಚಾರದ ಬಗ್ಗೆ ಪ್ರದರ್ಶನದ ಮೂಲಕ ಸರಿಪಡಿಸಿಕೊಳ್ಳಬಹುದು” ಎಂದರು. ಹಿರಿಯ ಯಕ್ಷಗಾನ ನೇಪಥ್ಯ ಕಲಾವಿದರಾದ ಕೆ. ಸುಶೀಲ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಯಕ್ಷದೇಗುಲದ ಅಧ್ಯಕ್ಷರಾದ ಬಾಲಕೃಷ್ಣ ಭಟ್, ಡಾ. ಪ್ರೀತಿ ವೈದ್ಯ, ವೀಣಾ ಮೋಹನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯಕ್ಷ ಗುರುಗಳಾದ ಪ್ರಿಯಾಂಕ ಕೆ. ಮೋಹನ್‌ರವರು ಕಾರ್ಯಕ್ರಮ ನಿರ್ವಹಿಸಿದರು.…