Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಕರ್ನಾಟಕ ಸರ್ವೋದಯ ಮಂಡಲವು ‘ಗಾಂಧೀಜಿ ಜಯಂತಿ’ ಅಂಗವಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿದೆ. ‘ಗಾಂಧಿ ನಮಗೆಷ್ಟು ಬೇಕು’, ‘ಗಾಂಧಿ ಅನಂತರದ ಭಾರತ ನಡೆದಿದ್ದು, ಎಡವಿದ್ದು, ಎಲ್ಲಿ – ಹೇಗೆ’, ‘ಗಾಂಧಿ ಇಂದಿಗೂ ಪ್ರಸ್ತುತ ಯಾಕೆ ಹೇಗೆ’, ‘ಯುವಜನರಿಗೆ ಗಾಂಧಿಯನ್ನು ತಲುಪಿಸುವುದು ಹೇಗೆ’, ‘ಸಾಮಾಜಿಕ ಮಾಧ್ಯಮದಲ್ಲಿ ಗಾಂಧಿ ನಿಂದನೆ -ಪರಿಹಾರ ಮಾರ್ಗಗಳು’, ‘ಎಲ್ಲರೂ ಸರಿ ಆದರೆ ಯಾವುದೂ ಸರಿ ಇಲ್ಲ, ಪ್ರಸ್ತುತ ಸ್ಥಿತಿಗತಿಗಳ ಸಮೀಕ್ಷೆ’ ಇವುಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು 500 ಪದಗಳ ಮಿತಿಯಲ್ಲಿ ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಬರೆದು ಕರ್ನಾಟಕ ರಾಜ್ಯ ಸರ್ವೋದಯ ಮಂಡಲ, ವಲ್ಲಭ ನಿಕೇತನ, ಕುಮಾರ ಪಾರ್ಕ್, ಪೂರ್ವ ಬೆಂಗಳೂರು 560001 ಕ್ಕೆ ಅಥವಾ [email protected] ಸೆಪ್ಟೆಂಬರ್ 15ರೊಳಗೆ ಕಳುಹಿಸಬೇಕು.
“ಗುರು ಗೋವಿಂದ ದೋವು ಖಡೆ ಕಾಕೆ ಲಾಗೂ ಪಾಯ್ ಬಲಿಹಾರಿ ಗುರು ಆಪೆನೆ ಗೋವಿಂದ ದಿಯೋ ಬತಾಯ್.” “ಗುರು ಮತ್ತು ದೇವರು ಇಬ್ಬರೂ ಜೊತೆಯಾಗಿ ಬಂದರೆ ಮೊದಲು ಗುರುವಿನ ಪಾದಕ್ಕೆ ನಮಸ್ಕರಿಸುವೆ. ಏಕೆಂದರೆ ದೇವರ ಅಸ್ತಿತ್ವದ ತಿಳುವಳಿಕೆ ನೀಡಿದವರು ಗುರು. ಭೂಮಿಯನ್ನು ಕಾಗದ ಮಾಡಿ ಏಳು ಸಮುದ್ರವನ್ನು ಶಾಯಿ ಮಾಡಿ ಬರೆದರೂ ಗುರುವಿನ ಗುಣಗಾನ ಮಾಡಲಿಕ್ಕಾಗದು” ಎಂದು ಸಂತ ಕಬೀರರು ಗುರುವಿನ ಸ್ಥಾನದ ಮಹತ್ವವನ್ನು ತಿಳಿಸಿದ್ದಾರೆ. ರಾಜಾ ಅಲೆಗ್ಸಾಂಡರ್ ತನ್ನ ಗುರು ಅರಿಸ್ಟಾಟಲ್ ನ ಬಗ್ಗೆ ಹೇಳುತ್ತಾ “ತಂದೆ ಸ್ವರ್ಗದಿಂದ ಭೂಮಿಗೆ ತಂದ, ಗುರುವು ಸ್ವರ್ಗದೆತ್ತರಕ್ಕೆ ಏರಿಸಿದ. ತಂದೆ ನಶ್ವರ ದೇಹ ಕೊಟ್ಟರೆ ಗುರುವು ಅಮರ ಸಿರಿಯನ್ನೂ ದಿವ್ಯ ಜೀವನವನ್ನೂ ನೀಡಿದ” ಎನ್ನುತ್ತಾನೆ. ಒಬ್ಬ ಅಶಕ್ತನನ್ನು ಶಕ್ತನನ್ನಾಗಿಸುವ, ಅವಿವೇಕಿಯನ್ನು ವಿವೇಕಿಯನ್ನಾಗಿಸುವ ಶಕ್ತಿ ಗುರುವಿಗಿದೆ. ಶಿಕ್ಷಣ ಸಂಸ್ಥೆಯ ಪಾಠಪಟ್ಟಿಯಲ್ಲಿರುವ ಪಾಠಗಳನ್ನು ಪೂರ್ಣಗೊಳಿಸುವುದಷ್ಟೇ ಶಿಕ್ಷಕನ ಕರ್ತವ್ಯವಾಗಿರಬಾರದು. ಪ್ರತಿಭಾವಂತ ಶಿಕ್ಷಕ ತನ್ನ ಪ್ರತಿಭೆಯ ಪ್ರಭಾವದಿಂದ ವಿದ್ಯಾರ್ಥಿಗಳನ್ನು ಪಾಠ ಕೇಳಿ ಅಂಕ ಪಡೆಯುವುದಕ್ಕೆ ತಯಾರು ಮಾಡುವುದರೊಂದಿಗೆ, ಅವನಲ್ಲಿರುವ…
ಸುಳ್ಯ : ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಇದರ ಯಕ್ಷ ಧ್ರುವ ಯಕ್ಷ ಶಿಕ್ಷಣ ಅಭಿಯಾನದ ಅಂಗವಾಗಿ ತೆಂಕುತಿಟ್ಟು ಯಕ್ಷಗಾನ ತರಗತಿಯ ಉದ್ಘಾಟನಾ ಸಮಾರಂಭ 30-08-2023ರಂದು ಎಣ್ಮೂರು ಪ್ರೌಢಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದ ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಉಮೇಶ್ ಶೆಟ್ಟಿ ಉಬರಡ್ಕ “ಯಕ್ಷಗಾನ ಕಲಿಕೆಯಿಂದ ಶಾಲಾ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಇದು ನಮ್ಮಲ್ಲಿ ಏಕಾಗ್ರತೆ ವೃದ್ಧಿಸಿ ಕಲಿಕೆಯನ್ನು ದೃಢೀಕರಿಸುತ್ತದೆ” ಎಂದು ಹೇಳಿದರು. ಹಿರಿಯ ಯಕ್ಷಗಾನ ಅರ್ಥಧಾರಿ ಹಾಗೂ ವಿಶ್ರಾಂತ ಪ್ರಾಂಶುಪಾಲರಾದ ಶ್ರೀ ಎಂ.ಎಲ್ ಸಾಮಗ ಇವರು ಮಾತನಾಡಿ “ಯಕ್ಷಗಾನ ಕಲಿಕೆಯಿಂದ ಪುರಾಣ ಜ್ಞಾನ, ಭಾಷಾ ಶುದ್ಧಿ ಹಾಗೂ ಉತ್ತಮ ಸಂವಹನ ಕೌಶಲ ಬೆಳೆಯುತ್ತದೆ. ಇದು ಬೌದ್ಧಿಕ ಮತ್ತು ಶಾರೀರಿಕ ಬೆಳವಣಿಗೆಗೆ ಪೂರಕ” ಎಂದರು. ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವನಿತಾ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮುರುಳ್ಯ ಗ್ರಾಮ ಪಂಚಾಯತ್ತಿನ ನಿಕಟಪೂರ್ವ ಅಧ್ಯಕ್ಷರಾದ ಕುಮಾರಿ ಜಾನಕಿ ಎಸ್,…
ಶಿಕ್ಷಣ ಹಾಗೂ ಕಲೆಯ ಮೂಲಕ ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯಗಳನ್ನು ಅರಳಿಸುವ ಪ್ರಭಾವೀ ಕುಟುಂಬ ‘ಹಂದಟ್ಟು ಪಟೇಲರ ಮನೆ’. ಉಡುಪಿ ಜಿಲ್ಲೆ ಕೋಟ ಪರಿಸರದ ಈ ಕುಟುಂಬದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕರಿದ್ದಾರೆ. ಅಂತರಾಷ್ಟ್ರೀಯ ಮನ್ನಣೆ ಪಡೆದ ಕಲಾವಿದರಿದ್ದಾರೆ. ಈ ಕುಟುಂಬ ಸೃಜನಶೀಲತೆಗೆ ಒಂದು ಮಾದರಿ ಕುಟುಂಬ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀ ಶ್ರೀಧರ ಹಂದೆ ಹಾಗೂ ಶ್ರೀಮತಿ ವಸುಮತಿ ಹಂದೆ ದಂಪತಿಯ ಸುಪುತ್ರನಾಗಿರುವ ಶ್ರೀ ಸುಜಯೀಂದ್ರ ಹಂದೆಯವರು ‘ಪಟೇಲರ ಮನೆ’ಯ ಕಲಾ ಪರಂಪರೆಗೆ ದಿವ್ಯ ಮೆರುಗು ನೀಡುತ್ತಿರುವ ಪ್ರಬುದ್ಧ ಕಲಾವಿದ, ಶ್ರೇಷ್ಟ ಉಪನ್ಯಾಸಕ. ತಾ.22-07-1974ರಲ್ಲಿ ಜನಿಸಿದ ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೋಟ ಶಾಲೆ ಹಾಗೂ ಗಿಳಿಯಾರು ಶಾಲೆಗಳಲ್ಲಿ ಮುಗಿಸಿ ಹೈಸ್ಕೂಲು ಹಾಗೂ ಪದವಿ ಪೂರ್ವ ಶಿಕ್ಷಣವನ್ನು ವಿವೇಕ ವಿದ್ಯಾ ಸಂಸ್ಥೆಗಳಲ್ಲಿ ಪೂರೈಸಿದರು. ತಮ್ಮ ಪದವಿಯನ್ನು ಭಂಡಾರ್ಕರ್ಸ್ ಕಾಲೇಜಿನಲ್ಲಿ ಮುಗಿಸಿ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಎಂ.ಎ. ಪದವಿಯನ್ನು ಪಡೆದರು. ತಮ್ಮ ಐದನೆಯ ವಯಸ್ಸಿನಲ್ಲಿಯೇ ಯಕ್ಷಗಾನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಇವರು ಯಕ್ಷರಂಗದ…
ಮಂಗಳಗಂಗೋತ್ರಿ : ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು ಹಾಗೂ ಕರಾವಳಿ ಲೇಖಕಿಯರ ವಾಚಕಿಯರ ಸಂಘ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಲೇಖಕಿಯರ ಬದುಕು ಮತ್ತು ಬರಹ ಕುರಿತ ಕಾರ್ಯಕ್ರಮ ‘ಲೇಖ ಲೋಕ – 9 ಎರಡು ದಿನಗಳ ಕಾರ್ಯಕ್ರಮದ ಸಮಾರೋಪ ಸಮಾರಂಭ ದಿನಾಂಕ 30-08-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ಇದರ ಅಧ್ಯಕ್ಷೆ ಕವಯಿತ್ರಿ ಡಾ. ಎಚ್.ಎಲ್. ಪುಷ್ಪರವರು ಮಾತನಾಡುತ್ತಾ “ಪುರುಷರು ತಮ್ಮ ಖಾಸಗಿ ಬದುಕಿನ ವಿವರಗಳನ್ನು, ವೈಯಕ್ತಿಕ ಸಾಧನೆಗಳನ್ನು ದಿಟ್ಟವಾಗಿ ಹೇಳಿಕೊಂಡಾಗ ಸ್ವೀಕರಿಸುವ ಸಮಾಜ ಹೆಣ್ಣೊಬ್ಬಳು ಬರೆದುಕೊಂಡಾಗ ಅನುಮಾನದಿಂದ ಕುತ್ಸಿತ ಮನೋಭಾವದಿಂದ ನೋಡುವುದು ಯಾಕೆ? ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಲಿಂಗತಾರತಮ್ಯದ ಭಾವನೆ ಕಡಿಮೆಯಾಗಿಲ್ಲ. ಹೆಣ್ಣಿನ ಬದುಕಿಗೂ ಒಂದು ಘನತೆಯಿದೆ ಎಂಬುದನ್ನು ಅರ್ಥಮಾಡಿಕೊಂಡು ಗೌರವಿಸುವ ಸಮಾಜ ರೂಪುಗೊಳ್ಳಬೇಕು” ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಸೋಮಣ್ಣ ಮಾತನಾಡಿ “ಮಹಿಳೆಯರ ಆತ್ಮನಿರೂಪಣೆಗಳು…
ಬಜಪೆ : ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ನಡೆಯುವ ಯಕ್ಷ ಶಿಕ್ಷಣ ಕಾರ್ಯಕ್ರಮದ ಉದ್ಘಾಟನೆಯು ಎಕ್ಕಾರು ಪ್ರೌಢಶಾಲೆಯಲ್ಲಿ ದಿನಾಂಕ 01-09-2023ರಂದು ನಡೆಯಿತು. ಪಟ್ಲ ಫೌಂಡೇಶನ್ ಇದರ ಯಕ್ಷ ಶಿಕ್ಷಣದ ಪ್ರಧಾನ ಸಂಚಾಲಕ ಶ್ರೀ ವಾಸುದೇವ ಐತಾಳ್, ಶಿಕ್ಷಣ ಇಲಾಖೆಯ ಶ್ರೀ ಪಿತಾಂಬರ ಕೆ., ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸುದೀಪ್ ಅಮೀನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಶ್ರೀ ಸತೀಶ್ ಶೆಟ್ಟಿ ಎಕ್ಕಾರು, ಯಕ್ಷ ಶಿಕ್ಷಕ ಶ್ರೀ ರಾಮ್ ಪ್ರಕಾಶ್ ಕಲ್ಲೂರಾಯ, ಶ್ರೀಮತಿ ಮೀನಾಕ್ಷಿ ಐತಾಳ್ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪದ್ಯಾಯನಿ ಶ್ರೀಮತಿ ಇಂದಿರಾ ಎನ್.ರಾವ್ ಧನ್ಯವಾದ ಸಮರ್ಪಿಸಿ, ಡಾ.ಅನೀತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಐವತ್ತು-ಅರುವತ್ತು ವರ್ಷಗಳ ಹಿಂದೆ ಕರಾವಳಿ-ಮಲೆನಾಡಿನ ಪ್ರತಿಯೊಂದು ಮನೆ ಕೂಡಾ ಒಂದು ಪುಟ್ಟ ಮ್ಯೂಸಿಯಮ್. ಜಗಲಿ, ಚಾವಡಿ, ಮೊಗಸಾಲೆಗಳಿಗೆ ಒಂದು ಸುತ್ತು ಬಂದರೆ ಸಾಕು; ಮಾಡು, ಕಿಟಕಿ, ಛಾವಣಿ, ಏಣಿ, ಅಟ್ಟ, ಹಜಾರ-ಎಲ್ಲವೂ ಕಟ್ಟಿಗೆ, ಬಿದಿರು, ಲೋಹ, ಮಣ್ಣು, ಬೆತ್ತ, ಕಾಡುಬಿಳಲು – ಹೀಗೆ ಒಂದಲ್ಲ ಒಂದು ಬಗೆಯ ನೆಲಮೂಲದ ಸಹಜ ಕೌಶಲಪೂರ್ಣ ವಸ್ತುಗಳು, ಅಟ್ಟದ ಮೇಲಿನ ಅಕ್ಕಿಮುಡಿ, ತಲೆಗಿಡುವ ಮುಟ್ಟಾಳೆ, ಎತ್ತಿನ ಹೆಗಲಿಗೇರಿಸುವ ನೊಗ, ಅಂಕದ ಕೋಳಿ ಕಟ್ಟುವ ಹಗ್ಗ, ಭತ್ತ ಕುಟ್ಟುವ ಒನಕೆ, ರಾಗಿ ಬೀಸುವ ಕಲ್ಲು, ಅನ್ನ ಬೇಯಿಸುವ ಮಡಕೆ, ಶೇಂದಿ ಕುಡಿಯುವ ಕುದ್ದು, ಮೀನು ಹಿಡಿಯುವ ಕೂರಿ – ಎಲ್ಲವೂ ನಮ್ಮ ಹಿರಿಯರ ಜಾಣ್ಮೆ, ಕೌಶಲಗಳಿಗೆ ಕನ್ನಡಿ, ನಾಲ್ಕೈದು ತಲೆಮಾರು ಬಾಳುವ ಉಳಿಯುವ ಗಟ್ಟಿತನ, ಪ್ರಕೃತಿಯ ಒಳಸುರಿಗಳನ್ನೇ ಬಳಸಿ ಮಾಡುವ ನೈಜ ಹೆಣಿಗೆಯ ಸಹಜ ಸಾಮಗ್ರಿಗಳಿವು. ಇಂದಿನದು ಕೊಳ್ಳುಬಾಕ ಸರಕು ಸಂಸ್ಕೃತಿ. ಬೇಡ ಬೇಡವೆಂದರೂ ಹಳೆಯದರ ಜಾಗದಲ್ಲಿ ಹೊಸತು ಬಂದು ಕೂರುತ್ತದೆ. ಇಂದಿನ ಹೊಸತು ನಾಳೆಗೇ ಹಳತು.…
ಸುಳ್ಯ : ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ( ರಿ.), ಮಂಗಳೂರು ಇದರ ಯಕ್ಷ ಧ್ರುವ ಯಕ್ಷ ಶಿಕ್ಷಣ ಅಭಿಯಾನದ ಅಂಗವಾಗಿ ತೆಂಕುತಿಟ್ಟು ಯಕ್ಷಗಾನ ತರಗತಿಯ ಉದ್ಘಾಟನಾ ಸಮಾರಂಭ ದಿನಾಂಕ 30-08-2023 ರಂದು ಸ.ಪ.ಪೂ ಕಾ. ಸುಳ್ಯದಲ್ಲಿ ನಡೆಯಿತು. ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪ್ರೊ.ಎಮ್.ಎಲ್.ಸಾಮಗ ಆರತಿ ಬೆಳಗಿ ತರಗತಿಯನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ರಾಜೇಶ್ವರಿ ಕಾಡುತೋಟ ವಹಿಸಿದ್ದರು. ತರಬೇತಿ ಸಂಚಾಲಕರಾದ ವಾಸುದೇವ ಐತಾಳ್, ಪಟ್ಲ ಪೌಂಡೇಶನ್ ಇದರ ಸುಳ್ಯ ಘಟಕದ ಅಧ್ಯಕ್ಷರಾದ ಶ್ರೀನಾಥ್ ರೈ ಹಾಗು ಕಾರ್ಯದರ್ಶಿಗಳಾದ ಪ್ರೀತಂ ರೈ, ಯಕ್ಷಗಾನ ಗುರುಗಳಾದ ಉಬರಡ್ಕ ಉಮೇಶ ಶೆಟ್ಟಿ, ಪ್ರಸಾದ್ ಸವಣೂರು, ಎಸ್.ಡಿ.ಎಮ್.ಸಿ ಸದಸ್ಯರಾದ ರೇಖಾ ಉಪಸ್ಥಿತರಿದ್ದರು. ಉಪಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ ಸ್ವಾಗತಿಸಿ, ಹಿರಿಯ ಶಿಕ್ಷಕರಾದ ಕಲಾವಿದ ಸುಂದರ ಕೇನಾಜೆ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನು ಕನ್ನಡ ಶಿಕ್ಷಕರಾದ ಮಮತಾ ಎಂ.ಜೆ. ನಿರ್ವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ರಚನಾ ಚಿದ್ಗಲ್, ಶ್ರೀ ವತ್ಸ ಭಾರದ್ವಾಜ್, ಪ್ರಥಮ ಮೂಡಿತ್ತಾಯ,…
01.02.2000ರಂದು ಸದಾನಂದ ರೈ ಹಾಗೂ ಚಂದ್ರಕಲಾ ರೈ ಇವರ ಮಗಳಾಗಿ ಪ್ರತಿಷ್ಠ ಎಸ್ ರೈ ಅವರ ಜನನ. Msc in Big Data Analytics ಇವರ ವಿದ್ಯಾಭ್ಯಾಸ. ಪೂರ್ಣಿಮಾ ಯತೀಶ್ ರೈ ಇವರ ಯಕ್ಷಗಾನ ಗುರುಗಳು. ಅಮ್ಮನಿಗೆ ಯಕ್ಷಗಾನ ಅಂದ್ರೆ ಬಹಳ ಇಷ್ಟ, ಹಾಗಾಗಿ ನನ್ನನ್ನು ಹಾಗೂ ತಮ್ಮನನ್ನು ಪೂರ್ಣಿಮಾ ಯತೀಶ್ ರೈ ಅವರ ಹತ್ತಿರ ಯಕ್ಷಗಾನ ಕಲಿಯಲು ಸೇರಿಸಿದರು. ನಾನು ತುಂಬಾ ಚಿಕ್ಕ ಇದ್ದೆ ಹಾಗೂ ಯಕ್ಷಗಾನ ನೋಡಿ ಮಾತ್ರ ಗೊತ್ತಿತ್ತು, ಹಾಗಾಗಿ ನಾನು ಯಕ್ಷಗಾನ ರಂಗಕ್ಕೆ ಬರಲು ಮೂಲ ಪ್ರೇರಣೆ ಹೆತ್ತವರು ಎಂದು ಹೇಳುತ್ತಾರೆ ರೈಯವರು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:- ನನಗೆ ಒಂದು ದೊಡ್ಡ ಸಮಸ್ಯೆ ಅಂದ್ರೆ ಕನ್ನಡ. ನಾನು ಕಲಿತ ಶಾಲೆಯಲ್ಲಿ ಕನ್ನಡ ಇರಲಿಲ್ಲ, ಹಾಗೆಯೇ ನಮ್ಮ ಮನೆಯಲ್ಲಿ ನಾವು ತುಳು ಮಾತನಾಡುವುದು. ಹಾಗಾಗಿ ರಂಗಕ್ಕೆ ಹೋಗುವಾಗ ತಕ್ಷಣ ಸಂಭಾಷಣೆ ಹೇಳಲು ಕಷ್ಟ, ಅದಕ್ಕೆ ನಾನು ಅರ್ಥವನ್ನು ಕಂಠ…
ಮಂಗಳೂರು : ಕುಂದೇಶ್ವರ ಪ್ರತಿಷ್ಠಾನ ಮಂಗಳೂರು ಘಟಕ ವತಿಯಿಂದ ದಿನಾಂಕ 04-09-2023ರ ಸೋಮವಾರ ಸಂಜೆ 6 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಶ್ರೀಪ್ರಾಪ್ತಿ ಕಲಾವಿದೆರ್ ಕುಡ್ಲ’ ತಂಡ ಅಭಿನಯಿಸುವ ಕಲಾಸವ್ಯಸಾಚಿ ಪ್ರಶಾಂತ ಸಿ.ಕೆ. ವಿರಚಿತ ‘ಮಣೆ ಮ೦ಚೊದ ಮಂತ್ರಮೂರ್ತಿ’ ನಾಟಕದ ಉದ್ಘಾಟನಾ ಪ್ರದರ್ಶನ ನಡೆಯಲಿದೆ. ಇದೇ ಸಂದರ್ಭದಲ್ಲಿ ತುಳು, ಕೊಂಕಣಿ, ಕನ್ನಡ, ತೆಲುಗು ಸಿನಿಮಾ ಮತ್ತು ರಂಗಭೂಮಿ ದಿಗ್ಗಜ ಕಲಾವಿದ ಗೋಪಿನಾಥ್ ಭಟ್ ಅವರಿಗೆ ‘ಕುಂದೇಶ್ವರ ಕಲಾಭೂಷಣ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಗೋಪಿನಾಥ್ ಭಟ್ ಅವರು ರಂಗಭೂಮಿಯಲ್ಲಿ 100ಕ್ಕೂ ಹೆಚ್ಚು ಪಾತ್ರ ನಿರ್ವಹಿಸಿ 750ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ವೀರಮದಕರಿ ಸಹಿತ 45ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ದಟ್ಸ್ ಆಲ್ ಯುವರ್ ಆನರ್ ನಾಟಕಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಗೆದ್ದುಕೊಂಡಿರುವ ಭಟ್ ಅವರು ಕೊಂಕಣಿ ಅಕಾಡೆಮಿ ಗೌರವ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಡಿ.ವೇದವ್ಯಾಸ ಕಾಮತ್, ನಿವೃತ್ತ ಸೇನಾಧಿಕಾರಿ ಕ್ಯಾ. ಬ್ರಿಜೇಶ್ ಚೌಟ, ತೆಲಿಕೆದ ಬೊಳ್ಳಿ ದೇವದಾಸ್…